Tag: Yellapur

  • ಯಲ್ಲಾಪುರ | ಅಂಗನವಾಡಿ ಬಳಿ ಮುರಿದುಬಿದ್ದ ಆಲದಮರ – ಗರ್ಭಿಣಿ ಸಾವು, 4 ಮಕ್ಕಳು ಸೇರಿ ಐವರಿಗೆ ಗಂಭೀರ ಗಾಯ

    ಯಲ್ಲಾಪುರ | ಅಂಗನವಾಡಿ ಬಳಿ ಮುರಿದುಬಿದ್ದ ಆಲದಮರ – ಗರ್ಭಿಣಿ ಸಾವು, 4 ಮಕ್ಕಳು ಸೇರಿ ಐವರಿಗೆ ಗಂಭೀರ ಗಾಯ

    ಕಾರವಾರ: ಅಂಗನವಾಡಿ (Anganwadi) ಬಳಿ ಬೃಹತ್ ಆಲದ ಮರವೊಂದು ಮುರಿದುಬಿದ್ದಿದ್ದು, ಗರ್ಭಿಣಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಯಲ್ಲಾಪುರ (Yellapur) ತಾಲೂಕಿನ ಕಿರವತ್ತಿಯಲ್ಲಿ (Kiravatti) ನಡೆದಿದೆ.

    ಮೃತಳನ್ನು ಸಾವಿತ್ರಿ ಬಾಬು ಖರಾತ್ (28) ಎಂದು ಗುರುತಿಸಲಾಗಿದೆ. ಆಕೆ 5 ತಿಂಗಳ ಗರ್ಭಿಣಿ ಆಗಿದ್ದಳು. ಘಟನೆಯಲ್ಲಿ ಸ್ವಾತಿ ಬಾಬು ಖರಾತ್ (17), ಘಾಟು ಲಕ್ಕು ಕೊಕರೆ (5), ಶ್ರಾವಣಿ ಬಾಬು ಖರಾತ್ (2), ಶಾಂಭವಿ ಬಾಬು ಖರಾತ್ (4) ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾನ್ವಿ ಬಾಬು ಕೊಕರೆ (5), ವಿನಯ ಲಕ್ಕು ಕೊಕರೆ (5) ಮತ್ತು ಅನುಶ್ರೀ ಮಾಂಬು ಕೊಕರೆ (5) ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಬೈಕ್‌ ಅಪಘಾತ – ರಸ್ತೆಗೆ ಬಿದ್ದ ಯುವತಿ ಮೇಲೆ ಹರಿದ ಬಸ್‌; 15 ದಿನದಲ್ಲಿ ಹಸೆಮಣೆ ಏರಬೇಕಾಗಿದ್ದವಳ ದುರಂತ ಅಂತ್ಯ

    ಅಂಗನವಾಡಿಯಿಂದ ಮನೆಗೆ ಮರಳುತ್ತಿದ್ದ ವೇಳೆ ದಾರಿಯಲ್ಲಿದ್ದ ಆಲದ ಮರ ದಿಢೀರ್ ಮುರಿದುಬಿದ್ದಿದೆ. ಇದರಿಂದ ಈ ಅನಾಹುತ ನಡೆದಿದೆ.

    ಗಾಯಳುಗಳನ್ನು ಯಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಯಲ್ಲಾಪುರ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಹರಿಯಾಣ | ಎಸಿ ಸ್ಫೋಟ – ಒಂದೇ ಕುಟುಂಬದ ಮೂವರ ದುರ್ಮರಣ, ಮತ್ತೊಬ್ಬನ ಸ್ಥಿತಿ ಗಂಭೀರ

  • ಯಲ್ಲಾಪುರದ ಬೀಗಾರ ಗ್ರಾಮದಲ್ಲಿ ಭೂಕುಸಿತ

    ಯಲ್ಲಾಪುರದ ಬೀಗಾರ ಗ್ರಾಮದಲ್ಲಿ ಭೂಕುಸಿತ

    ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಮತ್ತೆ ಭೂಕುಸಿತ ಮುಂದುವರಿದಿದೆ. ಜಿಲ್ಲೆಯ ಯಲ್ಲಾಪುರದ (Yellapur) ವಜ್ರಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೀಗಾರ ಗ್ರಾಮದಲ್ಲಿ (Beegar Village) ಭೂಕುಸಿತವಾಗಿದೆ.

    ಇಲ್ಲಿನ ತಾರಗಾರ-ಬೀಗಾರ ಮತ್ತು ಬಾಗಿನ ಕಟ್ಟಾ ಗ್ರಾಮ ಸಂಪರ್ಕಿಸುವ ರಸ್ತೆ ತಳಭಾಗದಲ್ಲಿ ಭೂಮಿ ಕುಸಿತ ಕಂಡಿದೆ. ಹೆಚ್ಚಿನ ಮಳೆಯಾದರೆ ಸಂಪೂರ್ಣ ರಸ್ತೆ ಕುಸಿಯುವ ಆತಂಕ ತಂದೊಡ್ಡಿದೆ. ಇದನ್ನೂ ಓದಿ: ಬಸವಸಾಗರ ಡ್ಯಾಂನಿಂದ ಕೃಷ್ಣ ನದಿಗೆ 1.60 ಲಕ್ಷ ಕ್ಯೂಸೆಕ್ ನೀರು ರಿಲೀಸ್ – ಲಿಂಗಸೂಗುರು ಸೇತುವೆ ಮುಳುಗಡೆ

    ಈ ಭಾಗದಲ್ಲಿ ಆರು ಅಡಿಗೂ ಹೆಚ್ಚು ಭಾಗ ಮಣ್ಣು ಕುಸಿತವಾಗಿದ್ದು, ಕಾಂಕ್ರಿಟ್ ರೋಡ್ ಮಾತ್ರ ಉಳಿದುಕೊಂಡಿದೆ. ಮಳೆಯ ನೀರು ಕುಸಿತವಾದ ಜಾಗದಲ್ಲಿ ಝರಿಯಾಗಿ ಹರಿಯುತ್ತಿದ್ದು, ಮತ್ತೆ ಭೂಕುಸಿತವಾಗುವ ಆತಂಕ ತಂದೊಡ್ಡಿದೆ.

    ಮತ್ತೆ ಭೂ ಕುಸಿತವಾದಲ್ಲಿ ತಾತಗಾರ, ಬೀಗಾರ, ಬಾಗಿನ ಕಟ್ಟಾ ಗ್ರಾಮದ ಸಂಪರ್ಕ ಕಡಿತವಾಗುವ ಸಾಧ್ಯತೆ ಇದೆ. ಕುಸಿದ ಭಾಗದ ರಸ್ತೆಯ ತಳಭಾಗದಲ್ಲಿ ಮನೆಗಳು ಸಹ ಇದ್ದು, ಒಂದು ವೇಳೆ ಮತ್ತೆ ಕುಸಿತವಾದರೆ ಮನೆಗಳಿಗೆ ಹಾನಿಯಾಗುವ ಸಾಧ್ಯತೆಗಳಿವೆ. ಇದನ್ನೂ ಓದಿ: ತುಂಗಭದ್ರಾ ಜಲಾಶಯದಿಂದ 1.15 ಲಕ್ಷ ಕ್ಯೂಸೆಕ್ ನೀರು ರಿಲೀಸ್ – ಕಂಪ್ಲಿ ಸೇತುವೆ ಮುಳುಗಡೆ

    ಸದ್ಯ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಇನ್ನೂ ಒಂದು ದಿನ ರೆಡ್ ಅಲರ್ಟ್‌ ನೀಡಲಾಗಿದೆ. ಇನ್ನೆರೆಡು ದಿನದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಆದರೆ, ಮಳೆಯಿಂದಾಗಿ ಇದೀಗ ಪಶ್ಚಿಮ ಘಟ್ಟ ಭಾಗದಲ್ಲಿ ಭೂಕುಸಿತವಾಗುತ್ತಿದ್ದು, ಮತ್ತೆ ಆತಂಕ ತಂದೊಡ್ಡಿದೆ.

  • ಚಾಲಕನ ನಿಯಂತ್ರಣ ತಪ್ಪಿ KSRTC ಬಸ್ ಪಲ್ಟಿ – 17ಕ್ಕೂ ಹೆಚ್ಚು ಮಂದಿಗೆ ಗಾಯ

    ಚಾಲಕನ ನಿಯಂತ್ರಣ ತಪ್ಪಿ KSRTC ಬಸ್ ಪಲ್ಟಿ – 17ಕ್ಕೂ ಹೆಚ್ಚು ಮಂದಿಗೆ ಗಾಯ

    ಕಾರವಾರ: ಚಾಲಕನ ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ (KSRTC) ಬಸ್ ಪಲ್ಟಿಯಾದ ಪರಿಣಾಮ 17ಕ್ಕೂ ಹೆಚ್ಚು ಜನ ಪ್ರಯಾಣಿಕರಿಗೆ ಗಾಯವಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಯಲ್ಲಾಪುರ (Yellapur) ತಾಲೂಕಿನ ಕಣ್ಣಿಗೇರಿ ಬಳಿ ನಡೆದಿದೆ.

    ಶಿರಸಿಯಿಂದ ಬೆಳಗಾವಿಗೆ ಹೋಗುತಿದ್ದ ಕೆಎಸ್‌ಆರ್‌ಟಿಸಿ ಬಸ್ ಅತೀ ವೇಗದ ಚಾಲನೆಯಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾಗಿದೆ. ಗಾಯಾಳುಗಳನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇದನ್ನೂ ಓದಿ: ಮಹಿಳಾ ಅಧಿಕಾರಿ ಮೇಲೆ ಅವಾಚ್ಯ ಪದ ಬಳಕೆ – ಭದ್ರಾವತಿ ಕಾಂಗ್ರೆಸ್ ಶಾಸಕ ಪುತ್ರನ ವಿರುದ್ಧ ಆರೋಪ

    ಗಂಭೀರ ಗಾಯಗೊಂಡ ಇಬ್ಬರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಗಿದೆ. ಘಟನೆ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ. ಇದನ್ನೂ ಓದಿ: Kolar | ಮಾಲೂರು ಪೊಲೀಸರ ಕಾರ್ಯಾಚರಣೆ – ಜೂಜಾಟವಾಡುತ್ತಿದ್ದ 6 ಮಂದಿ ಅರೆಸ್ಟ್

  • ನಿಂತಿದ್ದ ಕಾರಿಗೆ ಟ್ರಕ್ ಡಿಕ್ಕಿ – ಆರು ಮಂದಿಗೆ ಗಂಭೀರ ಗಾಯ

    ನಿಂತಿದ್ದ ಕಾರಿಗೆ ಟ್ರಕ್ ಡಿಕ್ಕಿ – ಆರು ಮಂದಿಗೆ ಗಂಭೀರ ಗಾಯ

    ಕಾರವಾರ: ಟ್ರಾಫಿಕ್‍ನಲ್ಲಿ ನಿಂತಿದ್ದ ಫಾರ್ಚುನರ್ ಕಾರಿಗೆ (Car) ಹಿಂಭಾಗದಿಂದ ಡಾಂಬರ್ ಮಿಕ್ಸರ್ ಟ್ರಕ್ ಡಿಕ್ಕಿಯಾಗಿ (Accident) ಮಗು ಸೇರಿ 6 ಜನ ಗಂಭೀರವಾಗಿ ಗಾಯಗೊಂಡ ಘಟನೆ ಯಲ್ಲಾಪುರದ ಅರೆಬೈಲ್ ಘಟ್ಟದಲ್ಲಿ ನಡೆದಿದೆ.

    ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಗಾಯಗೊಂಡವರ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಕಾರು ಬೆಳಗಾವಿಯಿಂದ (Belagavi) ಧರ್ಮಸ್ಥಳಕ್ಕೆ ತೆರಳುತಿತ್ತು. ಅರೆಬೈಲ್ ಘಟ್ಟದ ಬಳಿ ಟ್ರಾಫಿಕ್‍ನಲ್ಲಿ ಕಾರು ನಿಂತಿದ್ದ ವೇಳೆ ಹಿಂದಿನಿಂದ ಅತೀ ವೇಗವಾಗಿ ಬಂದ ಟ್ರಕ್ ಕಾರಿಗೆ ಡಿಕ್ಕಿಯಾಗಿದೆ.

    ಡಿಕ್ಕಿ ಹೊಡೆಸಿದ ರಭಸಕ್ಕೆ ಮುಂಭಾಗದಲ್ಲಿ ನಿಂತಿದ್ದ ಕಂಟೈನರ್ ಲಾರಿಗೆ ಕಾರು ಅಪ್ಪಳಿಸಿದೆ. ಅಪಘಾತದಿಂದ ಯಲ್ಲಾಪುರ- ಅಂಕೋಲ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ. ಅಪಘಾತದ ಬಳಿಕ ಟ್ರಕ್‌ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.

    ಗಾಯಗೊಂಡ ಅರು ಜನರನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ.

  • ಯಲ್ಲಾಪುರ ಅಪಘಾತ| ಸಾವಿನ ಸಂಖ್ಯೆ 10ಕ್ಕೆ ಏರಿಕೆ – ಮೃತರು ಯಾರು? ವಯಸ್ಸು ಎಷ್ಟು?

    ಯಲ್ಲಾಪುರ ಅಪಘಾತ| ಸಾವಿನ ಸಂಖ್ಯೆ 10ಕ್ಕೆ ಏರಿಕೆ – ಮೃತರು ಯಾರು? ವಯಸ್ಸು ಎಷ್ಟು?

    – ಸಂತೆಗೆ ತರಕಾರಿ ಒಯ್ಯುತ್ತಿದ್ದಾಗ ದುರ್ಘಟನೆ
    – ಹುಬ್ಬಳ್ಳಿ, ಯಲ್ಲಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ
    – ಮೃತರಾದವರು ಹಾವೇರಿ ಸವಣೂರು ನಿವಾಸಿಗಳು

    ಕಾರವಾರ: ಹಣ್ಣು ತರಕಾರಿ ತುಂಬಿದ ಲಾರಿ ಪಲ್ಟಿಯಾಗಿ 10 ಜನರು ಸಾವುಕಂಡು 16 ಜನ ಗಂಭೀರ ಗಾಯವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಗುಳ್ಳಾಪುರ ಭಾಗದಲ್ಲಿ ಬೆಳಗಿನ ಜಾವ ನಡೆದಿದೆ.

    ಹಾವೇರಿ ಸವಣೂರಿನಿಂದ ಕುಮಟಾದ ಕಡೆ ಹಣ್ಣು ತರಕಾರಿ ತುಂಬಿದ್ದ ಲಾರಿ ಗುಳ್ಳಾಪುರ ಭಾಗಕ್ಕೆ ಬರುತಿದ್ದಂತೆ ಚಾಲಕನ ನಿರ್ಲಕ್ಷದಿಂದ ವಿದ್ಯತ್ ಕಂಬಕ್ಕೆ ಡಿಕ್ಕಿಯಾಗಿ ಪಲ್ಟಿಯಾಗಿದೆ. ಸ್ಥಳದಲ್ಲೇ 9 ಜನರ ಸಾವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮತ್ತೋರ್ವ ವ್ಯಕ್ತಿ ಮೃತಪಟ್ಟಿದ್ದು ಸಾವಿನ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. 16 ಜನ ಗಂಭೀರ ಗಾಯಗೊಂಡಿದ್ದಾರೆ.

    ಗಾಯಗೊಂಡವರನ್ನು ಹುಬ್ಬಳ್ಳಿ, ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಶವಗಳನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಗಾಯಗೊಂಡವರು ಹಾಗೂ ಮೃತರಾದವರು ಹಾವೇರಿಯ ಸವಣೂರು ಮೂಲದವರಾಗಿದ್ದು, ಕುಮಟಾದಲ್ಲಿ ನಡೆಯುವ ಸಂತೆಗೆ ಹಣ್ಣು ತರಕಾರಿ ಒಯ್ಯುತ್ತಿದ್ದರು. ಘಟನೆ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಲ್ಟಿಯಾದ ಲಾರಿಯಲ್ಲಿ ಒಟ್ಟು 28 ಮಂದಿ ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿ ಈಗ ಲಭ್ಯವಾಗಿದೆ. ಯಲ್ಲಾಪುರ ಆಸ್ಪತ್ರೆಗೆ ಸ್ಥಳೀಯ ಶಾಸಕ ಶಿವರಾಮ ಹೆಬ್ಬಾರ್ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಮೃತ ದೇಹಗಳನ್ನು ಆದಷ್ಟು ಶೀಘ್ರವಾಗಿ ಮೃತರ ಊರಿಗೆ ಸಾಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಮೃತಪಟ್ಟವರು:
    1. ಫಯಾಜ್ (45)
    2. ವಾಸಿಮ್ (25)
    3. ಇಜಜ್ (20)
    4. ಸಾದೀಕ್ (30)
    5. ಗುಲಾಮ್ ಹುಸೇನ್
    6. ಇಮ್‌ತಿಯಾಜ್ (40)
    7. ಅಲ್ಪಾಜ್ – (25)
    8. ಜಿಲಾನಿ (20)
    9. ಅಸ್ಲಾಂ (24)
    10. ಜಲಾಲ್ (30) -ಹುಬ್ಬಳ್ಳಿ ಕಿಮ್ಸ್‌ ಆಸ್ಪತ್ರೆಯಲ್ಲಿ ಸಾವು

    ಹುಬ್ಬಳಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು
    1. ಅಶ್ರಫ್‌ – ಡ್ರೈವರ್(18)
    2. ಖ್ವಾಜಾ (22)
    3. ಮೊಹಮ್ಮದ್ ಸಾದಿಕ್‌(25)
    4. ಖ್ವಾಜಾ ಮೈನು(24)
    5. ನಿಜಾಮ್ (30)
    6. ಮದ್ಲಾನ್ ಸಾಬ್(24) ವರ್ಷ
    7. ಜಾಫರ್ (22) ವರ್ಷ

     

    ಯಲ್ಲಾಪುರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು
    1. ಮಲ್ಲಿಕ್‌ ರೆಹಾನ್ (21)
    2. ಅಫ್ತಾಬ್(23) ವರ್ಷ
    3. ಗೌಸ್ ಮೈದ್ದೀನ್ (30)
    4. ಇರ್ಫಾನ್ (17)
    5. ನೂರ್‌ ಅಹಮ್ಮದ್ (30)
    6. ಅಫ್ಸರ್‌ ಕಾಂಜಾಡ್(34)
    7. ಸುಭಾಷ ಗೌಡರ್(17)
    8. ಖಾದ್ರಿ (26) ವರ್ಷ
    9. ಸಾಬೀರ್ ಅಹಮ್ಮದ ಬಾಬಾ ಹುಸೇನ್ ಗವಾರಿ(38)
    10. ಮರ್ದಾನ್ ಸಾಬ್(22)
    11. ರಫಾಯಿ (21)
    12. ಮೊಹಮ್ಮದ್ ಗೌಸ (22)

  • ಉತ್ತರ ಕನ್ನಡ ಜಿಲ್ಲೆಯ ಸಾತೋಡ್ಡಿ ಜಲಪಾತಕ್ಕೆ ಪ್ರವಾಸಿಗರಿಗೆ ನಿಷೇಧ

    ಉತ್ತರ ಕನ್ನಡ ಜಿಲ್ಲೆಯ ಸಾತೋಡ್ಡಿ ಜಲಪಾತಕ್ಕೆ ಪ್ರವಾಸಿಗರಿಗೆ ನಿಷೇಧ

    ಕಾರವಾರ: ಜಲಪಾತ ವೀಕ್ಷಣೆಗೆ ತೆರಳುವ ಪ್ರವಾಸಿಗರ ಮೇಲೆ ನಿರಂತರ ಜೇನು ದಾಳಿ (Bee Attack) ಮಾಡುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಕನ್ನಡ (Uttara Kannada) ಜಿಲ್ಲೆಯ ಯಲ್ಲಾಪುರದ (Yellapur) ಪ್ರಸಿದ್ಧ ಸಾತೊಡ್ಡಿ (Sathoddi Falls) ಜಲಪಾತಕ್ಕೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.

    ಕಳೆದ ಎರಡು ದಿನಗಳಲ್ಲಿ 30ಕ್ಕೂ ಅಧಿಕ ಪ್ರವಾಸಿಗರಿಗೆ ಜೇನು ದಾಳಿ ಮಾಡಿದ್ದು, ಇಂದು ಜೇನು ಕಡಿತಕ್ಕೆ ಒಳಗಾಗಿ ಗಂಭೀರ ಗಾಯಗೊಂಡಿದ್ದ ನಾಲ್ವರು ಪ್ರವಾಸಿಗರಿಗೆ ಹುಬ್ಬಳ್ಳಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಬೇಸಿಗೆ ರಜೆ ಹಿನ್ನೆಲೆಯಲ್ಲಿ ನೀರಲ್ಲಿ ಆಟವಾಡಲು ಸಾತೊಡ್ಡಿ ಫಾಲ್ಸ್‌ಗೆ ಹೆಚ್ಚು ಪ್ರವಾಸಿಗರು ಭೇಟಿ ನೀಡುತಿದ್ದು, ಜಲಪಾತದ ಬಳಿಯೇ ಪ್ರವಾಸಿಗರ ಮೇಲೆ ಜೇನುಹುಳಗಳು ನಿರಂತರ ದಾಳಿ ಮಾಡುತ್ತಿದೆ. ಇದನ್ನೂ ಓದಿ: ಕೆನಡಾದಲ್ಲಿ ಭಾರತ ಮೂಲದ ವಿದ್ಯಾರ್ಥಿಯನ್ನು ಕಾರಿನೊಳಗೆ ಗುಂಡಿಕ್ಕಿ ಹತ್ಯೆ

    ಜೇನುಹುಳುಗಳ ದಾಳಿ ಹಿನ್ನೆಲೆ ಜಲಪಾತ ವೀಕ್ಷಣೆಗೆ ಅರಣ್ಯ ಇಲಾಖೆ ನಿರ್ಬಂಧ ಹೇರಿ ಬಿಸಗೋಡ ಕ್ರಾಸ್‌ನಲ್ಲಿ ಬ್ಯಾನರ್ ಅಳವಡಿಸಿ ಪ್ರವಾಸಿಗರಿಗೆ ಸೂಚನೆ ನೀಡಲಾಗಿದೆ. ಇದನ್ನೂ ಓದಿ: ಮೈಸೂರು ಬಿಜೆಪಿ ಘಟಕದಿಂದ ಮೋದಿಗಾಗಿ ರೆಡಿಯಾಗಿದೆ ವಿಶೇಷ ಉಡುಗೊರೆ

  • ಕುಡಿದ ಮತ್ತಿನಲ್ಲಿ ಪೊಲೀಸರ ಮೇಲೆ ಹಲ್ಲೆ – ಕಾಂಗ್ರೆಸ್ ಮಾಜಿ ಶಾಸಕನ ಪುತ್ರ ಅರೆಸ್ಟ್‌

    ಕುಡಿದ ಮತ್ತಿನಲ್ಲಿ ಪೊಲೀಸರ ಮೇಲೆ ಹಲ್ಲೆ – ಕಾಂಗ್ರೆಸ್ ಮಾಜಿ ಶಾಸಕನ ಪುತ್ರ ಅರೆಸ್ಟ್‌

    ಕಾರವಾರ: ಕುಡಿದ ಮತ್ತಿನಲ್ಲಿ ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ಮತ್ತು ಹಣದ ವಂಚನೆಯ ಪ್ರಕರಣದಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ (Congress) ಮಾಜಿ ಶಾಸಕ ವಿ.ಎಸ್ ಪಾಟೀಲ್ ಅವರ ಪುತ್ರನನ್ನು ಶನಿವಾರ ರಾತ್ರಿ ಬೆಂಗಳೂರಿನಲ್ಲಿ ಮುಂಡಗೋಡು ಪೊಲೀಸರು (Mundgod Police) ಬಂಧಿಸಿದ್ದಾರೆ.

    ಬಾಪುಗೌಡ ಪಾಟೀಲ್ (Bapugouda Patil) ಬಂಧಿತ ಆರೋಪಿ. 2011ರಲ್ಲಿ ಮುಂಡಗೋಡ ಅರಣ್ಯ ಇಲಾಖೆಯ ಐಬಿಯಲ್ಲಿ ಕುಡಿದ ಮತ್ತಿನಲ್ಲಿ15 ಜನರ ಜೊತೆ ಸೇರಿ ಎಎಸ್‌ಐ ಬಾಲಕೃಷ್ಣ ಪಾಲೇಕರ್ ಮೇಲೆ ಹಲ್ಲೆ ನಡೆಸಿದ್ದರು. ಇದಲ್ಲದೇ ಎರಡು ಚೆಕ್ ಬೌನ್ಸ್ ಪ್ರಕರಣ ಸೇರಿ ಬಾಪು ಗೌಡ ಪಾಟೀಲ್ ವಿರುದ್ಧ ಸೆಕ್ಷನ್ 353, 141,143, 147, 323, 353, 504, 506,149 ಅಡಿ ಪ್ರಕರಣ ಸಹ ದಾಖಲಾಗಿತ್ತು.

    ನ್ಯಾಯಾಲಯಕ್ಕೆ ಹಾಜರಾಗದೇ ಕಳೆದ ಆರು ತಿಂಗಳಿಂದ ತಲೆಮರೆಸಿಕೊಂಡಿದ್ದ ಬಾಪುಗೌಡ ಪಾಟೀಲ್‌ನನ್ನು ಪೊಲೀಸರು ಶನಿವಾರ ಬಂಧಿಸಿ ಇಂದು ಮುಂಜಾನೆ ಮುಂಡಗೋಡಿನಲ್ಲಿ ನ್ಯಾಯಾಧೀಶರ ಮುಂದೆ ಹಾಜುರುಪಡಿಸಿದ್ದರು. ನ್ಯಾಯಾಧೀಶರು ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಆರೋಪಿಯನ್ನು ಶಿರಸಿ ಜೈಲಿಗೆ ಕಳುಹಿಸಲಾಗಿದೆ.

     

  • ಅಂಗಡಿಯಲ್ಲಿ 14 ಸಾವಿರ ರೂ. ಕದ್ದ ಆರೋಪ – ರಿಯಾಲಿಟಿ ಶೋ ಮಾಜಿ ಸ್ಪರ್ಧಿ ಅರೆಸ್ಟ್

    ಅಂಗಡಿಯಲ್ಲಿ 14 ಸಾವಿರ ರೂ. ಕದ್ದ ಆರೋಪ – ರಿಯಾಲಿಟಿ ಶೋ ಮಾಜಿ ಸ್ಪರ್ಧಿ ಅರೆಸ್ಟ್

    ಕಾರವಾರ: ಖಾಸಗಿ ಚಾನಲ್ ಒಂದರ ರಿಯಾಲಿಟಿ ಶೋನಲ್ಲಿ ಈ ಹಿಂದೆ ಭಾಗವಹಿಸಿದ್ದ ಸ್ಪರ್ಧಿಯೊಬ್ಬನನ್ನು ಕಳ್ಳತನ ಆರೋಪದ ಮೇಲೆ ಪೊಲೀಸರು (Police) ಬಂಧಿಸಿದ್ದಾರೆ.

    ಅಂಕೋಲದ (Ankola) ಬಾಳೆಗದ್ದೆ ಗ್ರಾಮದ ಯುವಕ ಭಾಸ್ಕರ್ ಸಿದ್ದಿ ಬಂಧನಕ್ಕೊಳಗಾದ ಆರೋಪಿಯಾಗಿದ್ದಾನೆ. ಈತ ಯಲ್ಲಾಪುರದ ಅಂಗಡಿ ಒಂದರಲ್ಲಿ ಹಣವನ್ನು ಕಳ್ಳತನ ಮಾಡಿದ್ದ. ಆರೋಪಿ ಹಣ ಕದಿಯುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಆತನನ್ನು ಬಂಧಿಸಲಾಗಿದೆ. ಆತ ಈ ಹಿಂದೆ ಖಾಸಗಿ ಚಾನಲ್ ಒಂದರ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದ. ಇದನ್ನೂ ಓದಿ: ರಶ್ಮಿಕಾ ಡೀಪ್‌ಫೇಕ್‌ ವೀಡಿಯೋ ಕೇಸ್‌ – ದೆಹಲಿ ಪೊಲೀಸರಿಂದ ಎಫ್‌ಐಆರ್‌ ದಾಖಲು

    ಆರೋಪಿಯಿಂದ ಕಳ್ಳತನ ಮಾಡಿದ್ದ 14,300 ರೂ. ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಯಲ್ಲಾಪುರ (Yellapur) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಭಯೋತ್ಪಾದಕರಿಗೆ 85 ಕೋಟಿ ರೂ. ಫಂಡಿಂಗ್ – ಪ್ರಕರಣಕ್ಕೆ ದುಬೈ ಲಿಂಕ್

  • ನನ್ನ ಆತ್ಮ ಸಾಕ್ಷಿ ಅನುಸಾರ ತೀರ್ಮಾನ ತೆಗೆದುಕೊಳ್ಳುತ್ತೇನೆ: ಆನಂದ್ ಸಿಂಗ್

    ನನ್ನ ಆತ್ಮ ಸಾಕ್ಷಿ ಅನುಸಾರ ತೀರ್ಮಾನ ತೆಗೆದುಕೊಳ್ಳುತ್ತೇನೆ: ಆನಂದ್ ಸಿಂಗ್

    ಕಾರವಾರ: ಪ್ರಸ್ತುತ ರಾಜಕೀಯ ಸನ್ನಿವೇಷದಲ್ಲಿ ನನ್ನ ಪಾತ್ರದ ಬಗ್ಗೆ ಅನೇಕರು ಟೀಕೆ ಮಾಡಬಹುದು. ನಾನು ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲಾರೆ. ನನ್ನ ಆತ್ಮ ಸಾಕ್ಷಿಗನುಸಾರ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಪರಿಸರ ಮತ್ತು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೇಳಿದರು.

    ಇಂದು ಯಲ್ಲಾಪುರಕ್ಕೆ ಭೇಟಿ ನೀಡಿದ ಸಚಿವ ಆನಂದ್ ಸಿಂಗ್, ನಾನು ದೆಹಲಿಗೆ ಭೇಟಿ ನೀಡುವುದಿಲ್ಲ. ಕೇಂದ್ರ ನಾಯಕರ ಮೇಲೆ ಅಸಮಧಾನ ಪಟ್ಟುಕೊಳ್ಳಲು ನಾನು ಅಷ್ಟು ದೊಡ್ಡವನಲ್ಲ. ನಾನು ಉಪಯೋಗಿಸುವ ಸರ್ಕಾರಿ ವಾಹನವನ್ನು ಸರ್ವಿಸಿಂಗ್ ಗೆ ಬಿಟ್ಟಿದ್ದೇನೆ. ಹೀಗಾಗಿ ಬಳಸುತಿಲ್ಲ ಎಂದರು.

    ಶಿರಸಿಯಲ್ಲಿ ವಿಧಾನಸಭೆ ಅಧ್ಯಕ್ಷರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಲು ಬಂದಿದ್ದೇನೆ ಎನ್ನುವುದು ಊಹಾಪೋಹದ ಸಂಗತಿ. ವಾಪಸ್ ಇಲ್ಲಿಂದಲೇ ಹೊಸಪೇಟೆಗೆ ತೆರಳುತ್ತಿದ್ದೇನೆ. ಬೇಕಾದರೆ ನನ್ನನ್ನು ಹಿಂಬಾಲಿಸಿ ಖಚಿತಪಡಿಸಿಕೊಳ್ಳಬಹುದು ಎಂದರು. 1.50 ಕೋಟಿ ರೂ. ವೆಚ್ಚದಲ್ಲಿ ರಥ ತಯಾರಿ ಮಾಡ್ತಿದ್ದೀರಿ, ಒಮ್ಮೆ ಹೋಗಿ ವೀಕ್ಷಣೆ ಮಾಡಿ ಎಂದು ಬಹಳ ದಿನದಿಂದ ಮಠಾಧೀಶರು ಹೇಳುತ್ತಿದ್ದರು. ಯಾವ ಹಂತಕ್ಕೆ ಬಂದಿದೆ ಎಂದು ವೀಕ್ಷಣೆ ಮಾಡಲು ಇಂದು ಬಂದಿದ್ದೇನೆ. ಯಾವುದೇ ರಾಜಕೀಯ ಮಾತನಾಡಲಾರೆ ಎಂದು ಹೇಳಿದರು. ಇದನ್ನೂ ಓದಿ: ನಾನು ಹಠವಾದಿ, ಅಂದುಕೊಂಡಿದ್ದನ್ನ ಸಾಧಿಸದೇ ಬಿಡಲ್ಲ: ಸಚಿವ ಆನಂದ್ ಸಿಂಗ್

     

  • ಯಲ್ಲಾಪುರ ಕ್ಷೇತ್ರದ ಜನತೆಗೆ 4 ಅಂಬುಲೆನ್ಸ್ – ಟ್ರಯಲ್ ನೋಡಿದ ಶಿವರಾಮ್ ಹೆಬ್ಬಾರ್

    ಯಲ್ಲಾಪುರ ಕ್ಷೇತ್ರದ ಜನತೆಗೆ 4 ಅಂಬುಲೆನ್ಸ್ – ಟ್ರಯಲ್ ನೋಡಿದ ಶಿವರಾಮ್ ಹೆಬ್ಬಾರ್

    ಕಾರವಾರ: ಶಾಸಕರ ಅನುದಾನದಲ್ಲಿ ಕೊರೊನಾ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರು ತಮ್ಮ ವಿಧಾನಸಭಾ ಕ್ಷೇತ್ರ ಯಲ್ಲಾಪುರಕ್ಕೆ ನಾಲ್ಕು ಅಂಬುಲೆನ್ಸ್ ಖರೀದಿಸಿದ್ದಾರೆ.

    ಖರೀದಿಸಿದ ಅಂಬುಲೆನ್ಸ್ ಗಟ್ಟಿಮುಟ್ಟಾಗಿದೆಯೇ ಎಂದು ಪರೀಕ್ಷಿಸಲು ತಾವೇ ಸ್ವತ: ಹೊಸದಾಗಿ ಬಂದ ಅಂಬುಲೆನ್ಸ್ ಏರಿ ವಾಹನ ಚಲಾಯಿಸಿ ಟ್ರಯಲ್ ನೋಡಿದರು. ಯಲ್ಲಾಪುರದ ಪ್ರವಾಸಿ ಮಂದಿರದಿಂದ ಯಲ್ಲಾಪುರ ನಗರವನ್ನು ಒಂದು ಸುತ್ತುಹಾಕಿ ನಂತರ ಅಂಬುಲೆನ್ಸ್  ಸೇವೆಗೆ ಚಾಲನೆ ನೀಡಿದರು.

    ಸಚಿವ ಶಿವರಾಮ್ ಹೆಬ್ಬಾರ್ ರವರು ತಮ್ಮ ವೃತ್ತಿಯನ್ನು ಮೊದಲು ಲಾರಿ ಚಾಲಕರಾಗಿ ಆರಂಭಿಸಿದ್ದರು. ನಂತರ ಬಿಜೆಪಿಯಲ್ಲಿ ಕಾರ್ಯಕರ್ತರಾಗಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಕೆಲವು ರಾಜಕೀಯ ಕಾರಣಕ್ಕೆ ಕಾಂಗ್ರೆಸ್ ಗೆ ಬರುವ ಮೂಲಕ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದರು. ಮತ್ತೆ ಪುನ: ಬಿಜೆಪಿಗೆ ಬರುವ ಮೂಲಕ ಇಂದು ರಾಜ್ಯ ಕಾರ್ಮಿಕ ಸಚಿವರಾಗಿದ್ದಾರೆ. ಇದನ್ನೂ ಓದಿ : ಉತ್ತರ ಕನ್ನಡ ಜಿಲ್ಲೆಯ ಕೊರೊನಾ ಸೋಂಕಿತರಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆ