Tag: Yelandur

  • ಬಿಳಿಗಿರಿರಂಗನ ಬೆಟ್ಟದ ಮೇಲಿಂದ ಜಿಗಿದು ರಿಯಲ್ ಎಸ್ಟೇಟ್ ಉದ್ಯಮಿ ಆತ್ಮಹತ್ಯೆ

    ಬಿಳಿಗಿರಿರಂಗನ ಬೆಟ್ಟದ ಮೇಲಿಂದ ಜಿಗಿದು ರಿಯಲ್ ಎಸ್ಟೇಟ್ ಉದ್ಯಮಿ ಆತ್ಮಹತ್ಯೆ

    ಚಾಮರಾಜನಗರ: ಬೆಟ್ಟದ ಮೇಲಿಂದ ಜಿಗಿದು ರಿಯಲ್ ಎಸ್ಟೇಟ್ ಉದ್ಯಮಿ (Real Estate) ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರ (Chamarajanagara) ಜಿಲ್ಲೆಯ ಯಳಂದೂರು (Yelandur) ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ (Biligirirangana Hills) ನಡೆದಿದೆ.

    ಮಹದೇವನಾಯಕ ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ. ಬೆಟ್ಟದ ಕಡಿದಾದ ಜಾಗದಲ್ಲಿ ಸಿಲುಕಿದ್ದ ಮಹದೇವನಾಯಕ ಅವರ ಶವವನ್ನು ಶನಿವಾರ ಡ್ರೋನ್ ಬಳಸಿ ಪತ್ತೆ ಮಾಡಲಾಗಿದೆ. ಮಹದೇವನಾಯಕ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕು ಕವಲಂದೆ ಕುಂಬಾರಹಳ್ಳಿಯ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದರು. ಮಹದೇವನಾಯಕ ಮೇ 5 ರಂದು ನಾಪತ್ತೆಯಾಗಿದ್ದಾರೆ ಎಂದು ಕವಲಂದೆ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದನ್ನೂ ಓದಿ: ವಿಚ್ಛೇದಿತ ಮಹಿಳೆಯೊಂದಿಗೆ ಯುವಕನ ಲವ್ವಿ ಡವ್ವಿ – ಗರ್ಭಿಣಿ ಆದ್ಮೇಲೆ ಟೀಚರ್‌ಗೆ ಕೈಕೊಟ್ಟು ಜೂಟ್‌!

    ಜೂ.6 ರಂದು ಬಿಳಿಗಿರಿರಂಗನಬೆಟ್ಟದ ಬಳಿ ಬೈಕ್ ಪತ್ತೆಯಾಗಿದೆ. ಈ ಜಾಡನ್ನು ಹಿಡಿದ ಪೊಲೀಸರು ಶನಿವಾರ ಡ್ರೋನ್ ಕ್ಯಾಮೆರಾ ಬಳಸಿ ಹುಡುಕಾಟ ನಡೆಸಿದ್ದಾರೆ. ಡ್ರೋನ್ ಕ್ಯಾಮೆರಾದಲ್ಲಿ ಕಮರಿನ ನಡುವೆ ಶವ ಸಿಲುಕಿರುವುದು ಪತ್ತೆಯಾಗಿದೆ. ಶವದ ಮೇಲಿನ ಬಟ್ಟೆಯನ್ನು ಸಂಬಂಧಿಕರು ಗುರುತಿಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಯಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಹೆಚ್‌ಡಿಕೆ, ಜೋಶಿ, ಶೋಭಾ, ಸೋಮಣ್ಣಗೆ ಮಂತ್ರಿ ಸ್ಥಾನ ಫಿಕ್ಸ್‌

  • ನಿಮಗೂ ಫ್ರೀ, ನಮಗೂ ಫ್ರೀ – ವಿದ್ಯುತ್ ಬಿಲ್ ಕಟ್ಟದೇ ಚೆಸ್ಕಾಂ ಸಿಬ್ಬಂದಿಯನ್ನು ವಾಪಸ್ ಕಳುಹಿಸಿದ ಗ್ರಾಮಸ್ಥರು

    ನಿಮಗೂ ಫ್ರೀ, ನಮಗೂ ಫ್ರೀ – ವಿದ್ಯುತ್ ಬಿಲ್ ಕಟ್ಟದೇ ಚೆಸ್ಕಾಂ ಸಿಬ್ಬಂದಿಯನ್ನು ವಾಪಸ್ ಕಳುಹಿಸಿದ ಗ್ರಾಮಸ್ಥರು

    ಚಾಮರಾಜನಗರ: ಕಾಂಗ್ರೆಸ್ (Congress) ಗ್ಯಾರಂಟಿಗಳಲ್ಲಿ ಒಂದಾದ 200 ಯುನಿಟ್ ಉಚಿತ ವಿದ್ಯುತ್ ಘೋಷಣೆ ಹಿನ್ನೆಲೆಯಲ್ಲಿ ಬಿಲ್ ಕಟ್ಟಲ್ಲ ಎಂದು ಚೆಸ್ಕಾಂ (CHESCOM) ಸಿಬ್ಬಂದಿಯನ್ನು ಗ್ರಾಮಸ್ಥರು ವಾಪಸ್ ಕಳುಹಿಸಿದ ಘಟನೆ ಚಾಮರಾಜನಗರದಲ್ಲಿ (Chamarajanagara) ನಡೆದಿದೆ.

    ಜಿಲ್ಲೆಯ ಯಳಂದೂರು (Yelandur) ತಾಲೂಕಿನ ಹೊನ್ನೂರಿನಲ್ಲಿ (Honnuru) ಈ ಘಟನೆ ನಡೆದಿದ್ದು, ಗ್ರಾಮಸ್ಥರು ವಿದ್ಯುತ್ ಶುಲ್ಕ ಪಾವತಿಸದೇ ಮೀಟರ್ ರೀಡರ್‌ಗೆ ಬಂದಿದ್ದ ವ್ಯಕ್ತಿಯನ್ನು ವಾಪಸ್ ಕಳುಹಿಸಿದ್ದಾರೆ. ವಿದ್ಯುತ್ ನಿಮಗೂ ಫ್ರೀ, ನಮಗೂ ಫ್ರೀ ಹಾಗೂ ಅಧಿಕಾರಗಳಿಗೂ ಫ್ರೀ ಎಂದು ಸಿದ್ದರಾಮಯ್ಯ (Siddaramaiah) ಹೇಳಿದ್ದರು. ಅಲ್ಲದೇ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಅನ್ನು ಸಹ ನೀಡಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಸಿಎಂ ಆಯ್ಕೆ ಇನ್ನೂ ಅಂತಿಮವಾಗಿಲ್ಲ; ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ – ಸುರ್ಜೇವಾಲ ಸ್ಪಷ್ಟನೆ

    ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಚಾಮರಾಜನಗರ ಜಿಲ್ಲೆಯಿಂದ ಮೂವರು ಕಾಂಗ್ರೆಸ್ ಶಾಸಕರನ್ನು ಆಯ್ಕೆ ಮಾಡಿದ್ದೇವೆ. ನಾವು ಯಾಕೆ ಬಿಲ್ ಕಟ್ಟಬೇಕು ಎಂದು ಬಿಲ್ ಪಡೆಯಲು ನಿರಾಕರಿಸಿ ಚೆಸ್ಕಾಂ ಸಿಬ್ಬಂದಿಯನ್ನು ವಾಪಸ್ ಕಳುಹಿಸಿದ್ದಾರೆ. ಇದನ್ನೂ ಓದಿ: ನೀವೇ ಸಿಎಂ ಆಗಿ – ಡಿಕೆಶಿ ಪಟ್ಟು, ಧರ್ಮ ಸಂಕಟದಲ್ಲಿ ಖರ್ಗೆ

  • ಪ್ರವಾಸಿಗರ ಕಾರು ಡಿಕ್ಕಿ: ಓರ್ವ ಸಾವು, ಚಾಲಕ ಪರಾರಿ

    ಪ್ರವಾಸಿಗರ ಕಾರು ಡಿಕ್ಕಿ: ಓರ್ವ ಸಾವು, ಚಾಲಕ ಪರಾರಿ

    ಚಾಮರಾಜನಗರ: ಪ್ರವಾಸಿಗರ ಕಾರು ಡಿಕ್ಕಿ ಹೊಡೆದ ಪರಿಣಾಮ ಸೋಲಿಗನೊಬ್ಬ ಮೃತಪಟ್ಟ ಘಟನೆ ಯಳಂದೂರು ತಾಲೂಕಿನ ಬಿಳಿಗಿರಂಗನಬೆಟ್ಟದಲ್ಲಿ ಶನಿವಾರ ರಾತ್ರಿ ನಡೆದಿದೆ.

    ಯರಕನಗದ್ದೆ ಪೋಡಿನ ನಿವಾಸಿ ನಂಜೇಗೌಡ (38) ಮೃತಪಟ್ಟಿರುವ ದುರ್ದೈವಿ. ಡಾ.ಸುದರ್ಶನ್ ಮಾಲೀಕತ್ವದ ಗೊರುಕನ ಹೆಸರಿನ ಪರಿಸರ ಶಿಕ್ಷಣ ಹಾಗೂ ಆಯುರ್ವೇದ ಚಿಕಿತ್ಸಾ ಕೇಂದ್ರಕ್ಕೆ ಆಗಮಿಸಿದ್ದ ಪ್ರವಾಸಿಗರ ಕಾರು ನಂಜೇಗೌಡ ಅವರಿಗೆ ಡಿಕ್ಕಿ ಹೊಡೆದಿದೆ. ತಕ್ಷಣವೇ ಸ್ಥಳದಲ್ಲಿದ್ದ ಸಾರ್ವಜನಿಕರು ನಂಜೇಗೌಡ ಅವರನ್ನು ಬಿಳಿಗಿರಂಗನ ಬೆಟ್ಟದ ವಿಜಿಕೆಕೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ್ದರು.

    ಗಂಭೀರವಾಗಿ ನಂಜೇಗೌಡ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ತಾಲೂಕು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಪಟ್ಟಣ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್‌ ರವಿಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ರಾತ್ರಿ 9 ಗಂಟೆಯವರೆಗೂ ಈ ಸಂಬಂಧ ಪ್ರಕರಣ ದಾಖಲಾಗಿರಲಿಲ್ಲ.

    ಮುತ್ತಿಗೆ ಹಾಕಿದ ಸೋಲಿಗರು:
    ನಂಜೇಗೌಡ ಅವರಿಗೆ ಡಿಕ್ಕಿ ಹೊಡೆದ ಕಾರು ವೇಗವಾಗಿ ಗೊರುಕನ ಪರಿಸರ ಶಿಕ್ಷಣ ಹಾಗೂ ಆಯುರ್ವೇದ ಚಿಕಿತ್ಸಾ ಕೇಂದ್ರ ಕಡೆಗೆ ತೆರಳಿತ್ತು. ಇದನ್ನು ಹಿಂಭಾಗಲಿಸಿದ ಸ್ಥಳೀಯರು ಗೊರುಕನಗೆ ಮುತ್ತಿಗೆ ಹಾಕಿದರು. ಸ್ಥಳದಲ್ಲಿ ಕೆಎ-04 ಎಂಎಸ್-3957 ನಂಬರ್‍ನ ಕಾರು ಇತ್ತು. ಆದರೆ ಚಾಲಕರು ಯಾರು ಇಲ್ಲದ ಕಾರಣ ಸ್ಥಳೀಯರು ಕೆಲ ಹೊತ್ತು ಗಲಾಟೆ ಮಾಡಿದರು.