Tag: Yelahanka

  • ರಾಜ್ಯದ ಪ್ರತಿಷ್ಠಿತ ಮಠದಲ್ಲಿ ಸ್ವಾಮೀಜಿಯ ರಾಸಲೀಲೆ -ಪೀಠಾಧಿಪತಿ ಪುತ್ರನ ಕಾಮಕಾಂಡ ಬಯಲು

    ರಾಜ್ಯದ ಪ್ರತಿಷ್ಠಿತ ಮಠದಲ್ಲಿ ಸ್ವಾಮೀಜಿಯ ರಾಸಲೀಲೆ -ಪೀಠಾಧಿಪತಿ ಪುತ್ರನ ಕಾಮಕಾಂಡ ಬಯಲು

    ಬೆಂಗಳೂರು: ಮೇಲ್ನೋಟಕ್ಕೆ ಖಾವಿ ತೊಟ್ಟು ಸಮಾಜವನ್ನ ಉದ್ಧಾರ ಮಾಡೋದಾಗಿ ಪೋಸ್ ಕೊಡುತ್ತಿದ್ದ ರಾಜ್ಯದ ಪ್ರತಿಷ್ಠಿತ ಮಠಗಳಲ್ಲಿ ಒಂದಾದ ಹುಣಸಮಾರನಹಳ್ಳಿಯ ಜಂಗಮ ಮಠದ ಪೀಠಾಧ್ಯಕ್ಷನಾಗಲು ಮುಂದಾಗಿದ್ದ ಸ್ವಾಮಿಜಿಯೊಬ್ಬ ಮಹಿಳೆಯ ಜೊತೆ ರಾಸಲೀಲೆಯಲ್ಲಿ ತೋಡಗಿರೋ ದೃಶ್ಯವಿಂದು ಜಗತ್ ಜಾಹಿರಾಗಿದೆ.

    ಬೆಂಗಳೂರು ಉತ್ತರ ತಾಲೂಕು ಯಲಹಂಕ ಬಳಿಯ ಪುರಾತನ ಕಾಲದ ಮದ್ದೇವಣಾಪುರ ದೇವ ಸಿಂಹಾಸನ ಮಹಾ ಸಂಸ್ಥಾನ ಮಠದ 13ನೇ ಪೀಠಾಧ್ಯಕ್ಷರಾದ ಶ್ರೀ ಪಟ್ಟದ ಪರ್ವತರಾಜ ಶಿವಾಚಾರ್ಯ ಸ್ವಾಮೀಜಿಯ ಪುತ್ರ ದಯಾನಂದ್ ರಾಸಲೀಲೆಯಲ್ಲಿ ಸಿಕ್ಕಿಬಿದ್ದಿರೋ ಸ್ವಾಮೀಜಿ.

    ಖಾವಿ ತೊಟ್ಟು ಜನ ಸಾಮಾನ್ಯರನ್ನ ಉದ್ಧಾರ ಮಾಡಿ ಸಮಾಜಸೇವೆಗೆ ದುಡಿಯೋದಾಗಿ ರಂಭಾಪುರ ಸ್ವಾಮಿಜಿಗಳ ಜೊತೆಯಲ್ಲಿ ಓಡಾಡುತ್ತಿದ್ದ ಕಳ್ಳ ಸ್ವಾಮೀಜಿ ಬೆಡ್ ರೂಮ್ ಒಳಗೆ ಮಹಿಳೆಯ ಜೊತೆ ಕಾಮದಾಟವಾಡುತ್ತಿರೋ ಹಸಿಬಿಸಿ ದೃಶ್ಯ ಲಭ್ಯವಾಗಿದೆ.

    ಪರ್ವತರಾಜ ಶಿವಾಚಾರ್ಯ ಸ್ವಾಮೀಜಿ ತನ್ನ ಮಗನಾದ ದಯಾನಂದ್ ಗೆ 2011 ರಲ್ಲಿ ಮಠಕ್ಕೆ ನೂತನ ಪೀಠಾಧ್ಯಕ್ಷರಾಗಿ ಮಾಡಲು ಮುಂದಾಗಿದ್ದರು. ಈ ವೇಳೆ ದಯಾನಂದ್‍ಗೆ ಸ್ವಾಮಿಜಿಯಾಗಲು ಅರ್ಹತೆಯಿಲ್ಲ ಅಂತ ಜನ ಸತತ ಹೋರಾಟದ ಮುಖಾಂತರ ದಯಾನಂದ್ ಪೀಠಾಧ್ಯಕ್ಷನಾಗಲು ಅಡ್ಡಿಪಡಿಸಿದ್ರು.

    ಆದ್ರೂ ಸುಮ್ಮನಿರದ ದಯಾನಂದ್ ಹೇಗಾದ್ರು ಪೀಠಾಧ್ಯಕ್ಷನಾಗಿ ಅಂದು ಮೈಸೂರು ಮಹಾರಾಜರು ಮಠಕ್ಕೆ ನೀಡಿದ್ದ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಜಮೀನನ್ನ ಕಬಳಿಸೂ ಹುನ್ನಾರ ನಡೆಸುತ್ತಿದ್ದ ಎನ್ನಲಾಗಿದೆ. ಇದೀಗ ಈ ಕಳ್ಳ ಸ್ವಾಮಿಯ ರಾಸಲೀಲೆ ಬಹಿರಂಗವಾಗಿದೆ.

    ಯಾವುದೇ ಕಾರಣಕ್ಕೂ ಇಂತಹ ಕಳ್ಳ ಸ್ವಾಮಿಗಳಿಗೆ ಪೀಠಾಧ್ಯಕ್ಷರ ಸ್ಥಾನ ನೀಡಬಾರದು ಅಂತ ಟ್ರಸ್ಟ್ ನ ಸದಸ್ಯರು ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

  • ಮೊಹರಂಗಾಗಿ ಉಚಿತ ರೇಷನ್ ಕೂಪನ್ ವಿತರಣೆ- ನೂಕುಗ್ಗಲಾಗಿ ಇಬ್ಬರ ಸಾವು

    ಮೊಹರಂಗಾಗಿ ಉಚಿತ ರೇಷನ್ ಕೂಪನ್ ವಿತರಣೆ- ನೂಕುಗ್ಗಲಾಗಿ ಇಬ್ಬರ ಸಾವು

    ಚಿಕ್ಕಬಳ್ಳಾಪುರ: ನಗರದಲ್ಲಿ ಮೊಹರಂ ಹಬ್ಬದ ಪ್ರಯುಕ್ತ ಉಚಿತ ರೇಷನ್ ಕೂಪನ್ ವಿತರಣೆ ಮಾಡಲಾಗುತ್ತಿದ್ದು, ಈ ಸಂದರ್ಭದಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದ ಜನರ ಮಧ್ಯೆ ನೂಕುನುಗ್ಗಲು ಉಂಟಾಗಿ ಇಬ್ಬರು ಸಾವನ್ನಪಿರುವ ಘಟನೆ ಯಲಹಂಕ ಬಳಿ ನಡೆದಿದೆ.

    ಉಚಿತ ರೇಷನ್ ಕೂಪನ್ ಪಡೆಯಲು ಮುಂದಾಗಿದ್ದ ರೆಹಮತ್(70), ಅನ್ವರ್(60) ಸಾವನ್ನಪ್ಪಿದ ದುದೈವಿಗಳು. ಯಲಹಂಕ ಬಳಿಯ ಮಿಟ್ಟಗಾನಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದೆ.

    ಶಿವಾಜಿನಗರದ ಆಸಿಫ್ ಎಂಬವರು ಮುಸ್ಮಿಮರಿಗೆ ಉಚಿತ ಕೂಪನ್ ವಿತರಣೆ ಮಾಡುತ್ತಿದ್ದರು. ಬೆಳ್ಳಗೆಯಿಂದಲೇ ಕೂಪನ್‍ಗಾಗಿ ಸಾವಿರಾರು ಮಂದಿ ಸಾಲುಗಟ್ಟಿ ನಿಂತಿದ್ದರು. ಉಚಿತ ಕೂಪನ್ ವಿತರಣೆ ಕುರಿತು ಸಾಮಾಜಿಕ ಜಾಲತಾಣ ವಾಟ್ಸಾಪ್‍ನಲ್ಲಿ ಮಾಹಿತಿ ಪ್ರಚಾರ ಮಾಡಲಾಗಿತ್ತು.

    ಪ್ರಸ್ತುತ ಬಾಗಲೂರು ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಆಸಿಫ್‍ರನ್ನು ವಶಕ್ಕೆ ಪಡೆದಿದ್ದಾರೆ. ಉಚಿತ ಕೂಪನ್ ಪಡೆಯಲು ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ಜನರು ಆಗಮಿಸಿದ್ದರು.

  • ಮೊಟ್ಟೆ ತಿನ್ನೋ ಬೆಂಗಳೂರಿಗರೇ ಎಚ್ಚರವಾಗಿರಿ!

    ಮೊಟ್ಟೆ ತಿನ್ನೋ ಬೆಂಗಳೂರಿಗರೇ ಎಚ್ಚರವಾಗಿರಿ!

    – ರಾಜಧಾನಿಯಲ್ಲಿ ವ್ಯಾಪಕವಾಗಿದೆ ಪ್ಲಾಸ್ಟಿಕ್ ಮೊಟ್ಟೆ

    ಬೆಂಗಳೂರು: ಇತ್ತೀಚಿಗೆ ಕೊಪ್ಪಳದಲ್ಲಿ ಕೆಟ್ಟ ಮೊಟ್ಟೆಗಳನ್ನು ಬೇಕರಿ ಉತ್ಪನ್ನಗಳಲ್ಲಿ ಬಳಸುವುದನ್ನು ಕೇಳಿದ್ದಿರಿ. ಆದರೆ ನಗರದಲ್ಲಿ ಪ್ಲಾಸ್ಟಿಕ್ ಮೊಟ್ಟೆಗಳ ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಇನ್ನ್ಮುಂದೆ ಮೊಟ್ಟೆ ತಿನ್ನು ಎಚ್ಚರದಿಂದ ಇರಬೇಕಾಗಿದೆ.

    ನಗರದ ಯಲಹಂಕದ ದ್ವಾರಕಾನಗರದಲ್ಲಿ ಪ್ಲಾಸ್ಟಿಕ್ ಮೊಟ್ಟೆಗಳು ಪತ್ತೆಯಾಗಿವೆ. ದ್ವಾರಕಾನಗರದ ದಿ ಬಿಗ್ ಮಾರ್ಕೆಟ್ ನಲ್ಲಿ ಪ್ಲಾಸ್ಟಿಕ್ ಮೊಟ್ಟೆಗಳು ಸಿಕ್ಕಿವೆ. ಇಂದು ವಿಶ್ವನಾಥ್ ಎಂಬವರು ಮೊಟ್ಟೆ ಖರೀದಿಮಾಡಿದ್ದಾರೆ. ಮೊಟ್ಟೆ ಸೇವಿಸಿದ ನಂತರ ಮನೆಯ ಸದಸ್ಯರಿಗೆ ವಾಂತಿಯಾಗಿದೆ.

    ನಂತರ ದಿ ಬಿಗ್ ಮಾರ್ಕೆಟ್ ಬಂದು ಮೊಟ್ಟೆಗಳನ್ನು ಪರೀಕ್ಷೆ ಮಾಡಿದಾಗ ಅವುಗಳು ಪ್ಲಾಸ್ಟಿಕ್ ಮೊಟ್ಟೆ ಎಂದು ಗೊತ್ತಾಗಿದೆ. ವಿಶ್ವನಾಥ್ ಅವರು ದಿ ಬಿಗ್ ಮಾರ್ಕೆಟ್ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ಕೆಲವು ದಿನಗಳ ಹಿಂದೆ ಕಲಬುರಗಿ ನಗರದಲ್ಲಿಯೂ ಪ್ಲಾಸ್ಟಿಕ್ ಮೊಟ್ಟೆಗಳು ಪತ್ತೆಯಾಗಿದ್ದವು.

    ಇದನ್ನೂ ಓದಿ: ಪ್ರತಿದಿನ ಮೊಟ್ಟೆ ತಿಂತೀರಾ? ಹಾಗಿದ್ರೆ ನೀವು ಈ ಸುದ್ದಿ ಓದ್ಲೇಬೇಕು 

    ಇದನ್ನೂ ಓದಿ: ಬೇಕರಿ ತಿನಿಸುಗಳಲ್ಲಿ ಮಿಕ್ಸ್ ಆಗುತ್ತಿದೆ ಕೊಳೆತೆ ಮೊಟ್ಟೆ

  • ಯಲಹಂಕ ಬಿಜೆಪಿ ಶಾಸಕ ವಿಶ್ವನಾಥ್ ಬಲಗೈ ಬಂಟ ಅರೆಸ್ಟ್

    ಬೆಂಗಳೂರು: ಯಲಹಂಕ ಬಿಜೆಪಿ ಶಾಸಕ ಎಸ್‍ಆರ್ ವಿಶ್ವನಾಥ್ ಬಲಗೈ ಬಂಟನನ್ನು ಪೊಲೀಸರು ಬಂಧಿಸಿದ್ದಾರೆ.

    ಬೆಂಗಳೂರಿನ ನಾಗಶೆಟ್ಟಿಹಳ್ಳಿ ನಿವಾಸಿಯಾಗಿರುವ ಸತೀಶ್ ನನ್ನು ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಲಹಂಕ ಪೊಲೀಸರು ಬಂಧಿಸಿದ್ದಾರೆ.

    ರಸ್ತೆ ಕಾಮಗಾರಿಯೊಂದರ ವಿಚಾರವಾಗಿ 15 ದಿನದ ಹಿಂದೆ ಬೆದರಿಕೆ ಕಾಂಗ್ರೆಸ್ ಸ್ಥಳೀಯ ಮುಖಂಡರೊಬ್ಬರಿಗೆ ಸತೀಶ್ ಬೆದರಿಕೆ ಹಾಕಿದ್ದ. ಈ ಕೇಸ್ ಹಿನ್ನೆಲೆಯಲ್ಲಿ ಪೊಲೀಸರು 44 ನೇ ಎಸಿಎಂ ನ್ಯಾಯಾಲಯಕ್ಕೆ ಹಾಜರುಪಡಿಸಿ 6 ದಿನ ಕಸ್ಟಡಿಗೆ ಪಡೆದಿದ್ದಾರೆ.

  • ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್ ಸ್ಥಿತಿ ಚಿಂತಾಜನಕ

    – 15ಕ್ಕೂ ಹೆಚ್ಚು ರೌಡಿಗಳ ವಿಚಾರಣೆ ತೀವ್ರ

    ಬೆಂಗಳೂರು: ಶುಕ್ರವಾರದಂದು ಶೂಟೌಟ್‍ಗೆ ಒಳಗಾದ ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್ ಸ್ಥಿತಿ ಚಿಂತಾಜನಕವಾಗಿದೆ.

    ಶುಕ್ರವಾರದಂದು ಯಲಹಂಕದ ಕೋಗಿಲು ಕ್ರಾಸ್ ಬಳಿ ಕಡಬಗೆರೆ ಶ್ರೀನಿವಾಸ್ ಮೇಲೆ ಗುಂಡಿನ ದಾಳಿ ನಡೆದಿತ್ತು. ದಾಳಿಯಿಂದ ಶ್ರೀನಿವಾಸ್ ದೇಹಕ್ಕೆ 3 ಗುಂಡು ಹೊಕ್ಕಿತ್ತು. ಭುಜಕ್ಕೆ ಒಂದು, ಹೊಟ್ಟೆಯ ಭಾಗಕ್ಕೆ 2 ಗುಂಡು ಹೊಕ್ಕಿತ್ತು. ಹೊಟ್ಟೆಗೆ 2 ಗುಂಡು ತಗುಲಿರುವುದರಿಂದ ಲಿವರ್‍ಗೆ ಡ್ಯಾಮೇಜ್ ಆಗಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿರುವ ಕಡಬಗೆರೆ ಶ್ರೀನಿವಾಸ್, ಸದ್ಯ ಕೋಮಾ ಸ್ಥಿತಿಯಲ್ಲಿದ್ದಾರೆ.

    ಈ ಪ್ರಕರಣದ ತನಿಖೆ ತೀವ್ರಗೊಳಿಸಿದ ತನಿಖಾ ತಂಡ 15 ಕ್ಕೂ ಹೆಚ್ಚು ಅಪರಾಧ ಹಿನ್ನಲೆಯುಳ್ಳ ವ್ಯಕ್ತಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಮುಖವಾಗಿ ಮಾದನಾಯಕನಹಳ್ಳಿ, ನೆಲಮಂಗಲ ಹಾಗೂ ಬಸವೇಶ್ವರನಗರದ ಸುತ್ತ ಮುತ್ತಲಿನ ಹಳೇ ರೌಡಿಶೀಟರ್‍ಗಳನ್ನು ವಶಕ್ಕೆ ಪಡೆದು ರಾತ್ರಿಯಿಡೀ ಶಂಕಿತರ ವಿಚಾರಣೆ ನಡೆಸಿದ್ದಾರೆ. ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಶೂಟೌಟ್ ನಡೆದಿರುವ ಶಂಕೆ ವ್ಯಕ್ತವಾಗಿದೆ.

    ಕಡಬಗೆರೆ ಶ್ರೀನಿವಾಸ್‍ರೊಂದಿಗೆ ಹೆಚ್ಚು ಆತ್ಮೀಯತೆ ಹೊಂದಿದ್ದ ಹೇರೋಹಳ್ಳಿ ಮಾಜಿ ಕಾರ್ಪೊರೇಟರ್ ಹನುಮಂತೇಗೌಡರನ್ನು ಯಲಹಂಕ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಕಡಬಗೆರೆ ಶ್ರೀನಿವಾಸ್ ಅವರ ಇತ್ತೀಚಿನ ಚಟುವಟಿಕೆ ಬಗ್ಗೆ ಮಾಹಿತಿ ಸಿಗುವ ಹಿನ್ನೆಲೆಯಲ್ಲಿ ಹನುಮಂತೇಗೌಡ ಅವರ ವಿಚಾರಣೆ ನಡೆಯುತ್ತಿದೆ.