Tag: Yelahanka

  • ಇಂದು ಬಿಜೆಪಿಯಿಂದ ʻಧರ್ಮಸ್ಥಳ ಚಲೋʼ – 500 ಕಾರುಗಳಲ್ಲಿ ಬೃಹತ್‌ ಯಾತ್ರೆ

    ಇಂದು ಬಿಜೆಪಿಯಿಂದ ʻಧರ್ಮಸ್ಥಳ ಚಲೋʼ – 500 ಕಾರುಗಳಲ್ಲಿ ಬೃಹತ್‌ ಯಾತ್ರೆ

    – ನಾಳೆ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದ ಶಾಸಕರ ನಿಯೋಗ ಧರ್ಮಸ್ಥಳ ಭೇಟಿ

    ಬೆಂಗಳೂರು: ಧರ್ಮಸ್ಥಳದಲ್ಲಿ ಎಸ್‌ಐಟಿ (Dharmasthala SIT) ತನಿಖೆಯಲ್ಲಿ ಕಳೇಬರ ಸಿಗದ ಬೆನ್ನಲ್ಲೆ ದೇಗುಲಕ್ಕೆ ಅಪಪ್ರಚಾರ ಎಸಗಲಾಗುತ್ತಿದೆ ಅಂತಾ ದೇಗುಲದ ಭಕ್ತರ ಆಕ್ರೋಶ ಹೆಚ್ಚಾಗಿದೆ. ಮತ್ತೊಂದು ಕಡೆ ಬಿಜೆಪಿ ಸರ್ಕಾರದ ವಿರುದ್ಧ ಮುಗಿಬಿದ್ರೆ ಇನ್ನೊಂದು ಕಡೆ ಹಿಂದೂ ಸಂಘಟನೆಗಳು ಬೆಂಗಳೂರಿನಲ್ಲಿ (Bengaluru) ಹೋರಾಟಕ್ಕೆ ಮುಹೂರ್ತ ಫಿಕ್ಸ್ ಮಾಡಿಕೊಂಡಿದೆ.

    ಈ ನಡುವೆ ಶಾಸಕ ಎಸ್.ಆರ್ ವಿಶ್ವನಾಥ್ (S.R Vishwanath) ನೇತೃತ್ವದಲ್ಲಿ ಇಂದು (ಆ.16) ಧರ್ಮಸ್ಥಳಕ್ಕೆ (Dharmasthala) 500 ಕಾರುಗಳಲ್ಲಿ ಬಿಜೆಪಿ (BJP) ಕಾರ್ಯಕರ್ತರು ಹೊರಡಲಿದ್ದಾರೆ. ಈಗಾಗಲೇ ಕಾರುಗಳು ಜಮಾವಣೆಗೊಂಡಿದ್ದು, ನೆಲಮಂಗಲ-ಕುಣಿಗಲ್ ರಸ್ತೆಯ ಕುಣಿಗಲ್ ಟೋಲ್‌ಗೇಟ್‌ನಿಂದ ಯಾತ್ರೆ ಹೊರಡಲಿವೆ. ಇದನ್ನೂ ಓದಿ: ವರ್ಷಕ್ಕೆ 5 ಸಾವಿರ ಉಳಿತಾಯ – ವಾರ್ಷಿಕ ಟೋಲ್‌ ಪಾಸ್‌ | ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

    ಯಲಹಂಕದಿಂದ (Yelahanka) ಕಾರ್ಯಕರ್ತರು ಹೊರಡಲಿದ್ದಾರೆ. ನೂರಾರು ಜನ ಭಗವಾಧ್ವಜ ಹಿಡಿದು ಕೇಸರಿ ಶಾಲು ಧರಿಸಿ, ಧರ್ಮಸ್ಥಳಕ್ಕೆ ಹೊರಡಲಿದ್ದಾರೆ. ಪ್ರಯಾಣಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಮಧ್ಯಾಹ್ನ ಸುಮಾರು 3 ಗಂಟೆಗೆ ವಿಶ್ವನಾಥ್ ತಂಡ ಧರ್ಮಸ್ಥಳ ತಲುಪಲಿದೆ. ದೇವರ ದರ್ಶನ ಪಡೆದು ಧರ್ಮಸ್ಥಳದಲ್ಲೇ ಇಂದು ರಾತ್ರಿ ವಾಸ್ತವ್ಯ ಹೂಡಲಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಹೆಸರು ಕೆಡಿಸಲು ಕಮ್ಯುನಿಸ್ಟರು, ಬುದ್ಧಿಜೀವಿಗಳು, ಕಾಂಗ್ರೆಸ್‌ನ ಕೆಲ ಹಿಂದೂ ವಿರೋಧಿಗಳಿಂದ ಷಡ್ಯಂತ್ರ: ಯತ್ನಾಳ್

    ಇನ್ನೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದ ಶಾಸಕರ ನಿಯೋಗವೂ ಭಾನುವಾರ (ಆ.17) ಧರ್ಮಸ್ಥಳಕ್ಕೆ ಭೇಟಿ ಮಾಡಲಿದೆ. ಉಡುಪಿ, ಮಂಗಳೂರು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳ ಬಿಜೆಪಿ ಶಾಸಕರು ನಿಯೋಗದಲ್ಲಿರಲಿದ್ದಾರೆ. ಬಿಜೆಪಿ ನಾಯಕರು ಧರ್ಮಾಧಿಕಾರಿಗಳನ್ನೂ ಭೇಟಿ ಮಾಡಿ ನೈತಿಕ ಬೆಂಬಲ ಸೂಚಿಸಲಿದ್ದಾರೆ ಎಂದು ಬಿಜೆಪಿ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಧರ್ಮಸ್ಥಳದ ವಿರುದ್ಧ ಷಡ್ಯಂತ್ರ – ಸಾಮೂಹಿಕ ಶಿವಪಂಚಾಕ್ಷರಿ ಮಂತ್ರ ಜಪಿಸಲು VHP ಕರೆ

  • 500 ಕಾರುಗಳಲ್ಲಿ ಧರ್ಮಸ್ಥಳಕ್ಕೆ ಹೊರಟ ಬಿಜೆಪಿ ಕಾರ್ಯಕರ್ತರು!

    500 ಕಾರುಗಳಲ್ಲಿ ಧರ್ಮಸ್ಥಳಕ್ಕೆ ಹೊರಟ ಬಿಜೆಪಿ ಕಾರ್ಯಕರ್ತರು!

    ಬೆಂಗಳೂರು: ಶಾಸಕ ಎಸ್.ಆರ್ ವಿಶ್ವನಾಥ್ (S.R Vishwanath) ನೇತೃತ್ವದಲ್ಲಿ ಆ.16ರಂದು ಧರ್ಮಸ್ಥಳಕ್ಕೆ (Dharmasthala) 500 ಕಾರುಗಳಲ್ಲಿ ಬಿಜೆಪಿ (BJP) ಕಾರ್ಯಕರ್ತರು ಹೊರಡಲು ಸಿದ್ಧತೆ ನಡೆಸಿದ್ದಾರೆ.

    ಯಲಹಂಕದಿಂದ (Yelahanka) ಶನಿವಾರ (ಆ.16) ಮುಂಜಾನೆ ಕಾರ್ಯಕರ್ತರು ಹೊರಡಲಿದ್ದಾರೆ. ನೂರಾರು ಜನ ಭಗವಾಧ್ವಜ ಹಿಡಿದು ಕೇಸರಿ ಶಾಲು ಧರಿಸಿ, ಧರ್ಮಸ್ಥಳಕ್ಕೆ ಹೊರಡಲಿದ್ದಾರೆ. ಪ್ರಯಾಣಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಮಧ್ಯಾಹ್ನ ಸುಮಾರು 3 ಗಂಟೆಗೆ ವಿಶ್ವನಾಥ್ ತಂಡ ಧರ್ಮಸ್ಥಳ ತಲುಪಲಿದೆ. ದೇವರ ದರ್ಶನ ಪಡೆದು ಧರ್ಮಸ್ಥಳದಲ್ಲೇ ಶನಿವಾರ ರಾತ್ರಿ ವಾಸ್ತವ್ಯ ಹೂಡಲಿದ್ದಾರೆ. ಇದನ್ನೂ ಓದಿ: 13 ವರ್ಷದ ಹಿಂದೆ ಧರ್ಮಸ್ಥಳಕ್ಕೆ ಬಂದಿದ್ದ ನನ್ನ ತಂಗಿ ವಾಪಸ್‌ ಬರಲೇ ಇಲ್ಲ – ಎಸ್‌ಐಟಿಗೆ ದೂರು ನೀಡಿದ ಸಹೋದರ

    ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದ ಶಾಸಕರ ನಿಯೋಗವೂ ಭಾನುವಾರ (ಆ.17) ಧರ್ಮಸ್ಥಳ ಭೇಟಿ ಮಾಡಲಿದೆ. ಉಡುಪಿ, ಮಂಗಳೂರು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳ ಬಿಜೆಪಿ ಶಾಸಕರು ನಿಯೋಗದಲ್ಲಿರಲಿದ್ದಾರೆ. ಬಿಜೆಪಿ ನಾಯಕರು ಧರ್ಮಾಧಿಕಾರಿಗಳನ್ನೂ ಭೇಟಿ ಮಾಡಿ ನೈತಿಕ ಬೆಂಬಲ ಸೂಚಿಸಲಿದ್ದಾರೆ ಎಂದು ಬಿಜೆಪಿ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಧರ್ಮಸ್ಥಳ ದೇಗುಲದ ವಠಾರದಲ್ಲಿ ಸ್ಥಳ ಮಹಜರು

  • Bengaluru | ಲೇಡಿಸ್ ಪಿಜಿಗೆ ನುಗ್ಗಿ ಎಂಜಿನಿಯರ್ ಕುತ್ತಿಗೆಗೆ ಚಾಕು ಇಟ್ಟು ಚಿನ್ನಾಭರಣ ದರೋಡೆ

    Bengaluru | ಲೇಡಿಸ್ ಪಿಜಿಗೆ ನುಗ್ಗಿ ಎಂಜಿನಿಯರ್ ಕುತ್ತಿಗೆಗೆ ಚಾಕು ಇಟ್ಟು ಚಿನ್ನಾಭರಣ ದರೋಡೆ

    ಬೆಂಗಳೂರು: ಪಿಜಿಯಲ್ಲಿದ್ದ ಬೆಸ್ಕಾಂ ಅಸಿಸ್ಟೆಂಟ್ ಎಂಜಿನಿಯರ್ (BESCOM Assistant Engineer) ಕುತ್ತಿಗೆಗೆ ಚಾಕು ಇಟ್ಟು ಚಿನ್ನಾಭರಣ ದೋಚಿದ (Gold Theft) ಘಟನೆ ಯಲಹಂಕ (Yelahanka) ಪೊಲೀಸ್ ಠಾಣಾ ವ್ಯಾಪ್ತಿಯ ಜುಡಿಷಿಯಲ್ ಲೇಔಟ್‌ನಲ್ಲಿ ನಡೆದಿದೆ.

    ಆ.11ರಂದು ಮಧ್ಯಾಹ್ನ 3ಗಂಟೆ ಸುಮಾರಿಗೆ ಲೇಡಿಸ್ ಪಿಜಿಯಲ್ಲಿ (Ladies PG) ಘಟನೆ ನಡೆದಿದೆ. ಕಳೆದ ಹದಿನೈದು ದಿನಗಳ ಹಿಂದಷ್ಟೇ ಪಿಜಿಗೆ ಸೇರಿದ್ದ ಮಹಿಳೆ ಮಧ್ಯಾಹ್ನ ಊಟಕ್ಕೆಂದು ರೂಮಿಗೆ ಬಂದಿದ್ದಾರೆ. ಪಿಜಿಯಲ್ಲಿನ ಮೂರನೇ ಮಹಡಿಯಲ್ಲಿರೋ ತನ್ನ ರೂಮಿಗೆ ಬಂದಾಗ, ಡೋರ್ ಬಡಿದ ಶಬ್ದ ಕೇಳಿ ಪಿಜಿಯವರು ಇರಬಹುದು ಎಂದು ಡೋರ್ ಓಪನ್ ಮಾಡಿದ್ದರು. ಕೂಡಲೇ ಮಹಿಳೆಯ ಕುತ್ತಿಗೆಗೆ ಚಾಕು ಇಟ್ಟು ಬೆದರಿಸಿದ್ದ ಆರೋಪಿ ಆಕೆಯ ಅಂಗಾಂಗಗಳನ್ನ ಮುಟ್ಟಿ, ಆಕೆ ಮೈಮೇಲಿದ್ದ ಚಿನ್ನಾಭರಣಗಳನ್ನ ಬಿಚ್ಚಿಸಿಕೊಂಡು ಆಕೆಯ ಬೆಡ್ ಮೇಲಿದ್ದ ಎರಡು ಮೊಬೈಲ್‌ಗಳನ್ನು ತೆಗೆದುಕೊಂಡು ಎಸ್ಕೇಪ್ ಆಗಿದ್ದಾನೆ. ಇದನ್ನೂ ಓದಿ: ಆನ್‌ಲೈನ್ ಬೆಟ್ಟಿಂಗ್ – ಇಡಿ ವಿಚಾರಣೆಗೆ ಹಾಜರಾದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ

    ಈ ಬಗ್ಗೆ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿ ಪತ್ತೆಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್; 16 ಸ್ಪಾಟ್‌ಗಳಲ್ಲಿ ಸಿಗದ ಕುರುಹು – ದೂರುದಾರನ ಮಂಪರು ಪರೀಕ್ಷೆಗೆ ಎಸ್‌ಐಟಿ ಚಿಂತನೆ

  • ಎಂಟ್ರಿ ಫ್ರೀ ಅಂತಾ ಹೇಳಿ ಸ್ಟೇಡಿಯಂ ಗೇಟ್ ಓಪನ್ ಮಾಡಿಲ್ಲ ಯಾಕೆ? – ದಿವ್ಯಾಂಶಿ ತಾಯಿ ಪ್ರಶ್ನೆ

    ಎಂಟ್ರಿ ಫ್ರೀ ಅಂತಾ ಹೇಳಿ ಸ್ಟೇಡಿಯಂ ಗೇಟ್ ಓಪನ್ ಮಾಡಿಲ್ಲ ಯಾಕೆ? – ದಿವ್ಯಾಂಶಿ ತಾಯಿ ಪ್ರಶ್ನೆ

    ಬೆಂಗಳೂರು: ಸ್ಟೇಡಿಯಂಗೆ ಎಂಟ್ರಿ ಫ್ರೀ ಅಂದ ಮೇಲೆ ಯಾಕೆ ನೀವು 4 ಗೇಟ್ ಕೂಡಾ ಓಪನ್ ಮಾಡಿಲ್ಲ. ಯಾಕೆ ಎಲ್ಲರು 1 ಗೇಟ್ ಅಲ್ಲೇ ಸಾಯ್ಬೇಕಿತ್ತು ಎಂದು ದಿವ್ಯಾಂಶಿ ತಾಯಿ ಅಶ್ವಿನಿ (Divyanshi Mother Ashwini) ಪ್ರಶ್ನಿಸಿದ್ದಾರೆ.

    ಬುಧವಾರ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ (Chinnaswamy Stadium) ಬಳಿ ಕಾಲ್ತುಳಿತ (Stampede) ಉಂಟಾದ ಬಗ್ಗೆ ಮಾತನಾಡಿದ ಅವರು, ನನ್ನ ಮಗಳಿಗೆ ವಿರಾಟ್ ಕೊಹ್ಲಿ (Virat Kohli) ಮೇಲೆ ಅಪಾರ ಅಭಿಮಾನವಿತ್ತು. ಹಾಗಾಗಿ ವಿರಾಟ್ ಕೊಹ್ಲಿಯನ್ನು ನೋಡಬೇಕು ಅಂತಾ ಹಠ ಮಾಡಿದ್ದಳು. ಅವಳಿಗೆ ಗೋಲ್ಡನ್ ಮೆಮೋರಿ ಕೋಡೋಣ ಅಂತಾ ಹೋದೆವು. ಅವಳ ಸಾವಿಗೆ ನಾನೇ ಹೊಣೆ ಬೇರೆ ಯಾರು ಅಲ್ಲ ಎಂದು ಕಣ್ಣೀರು ಹಾಕಿದರು. ಇದನ್ನೂ ಓದಿ: ಕ್ರಿಕೆಟ್ ಇತಿಹಾಸದಲ್ಲೇ ಇಂತಹ ಘಟನೆ ಆಗಿರಲಿಲ್ಲ: ಪರಮೇಶ್ವರ್

    ಚಿನ್ನಸ್ವಾಮಿ ಸ್ಟೇಡಿಯಂ ವಿಶ್ವ ವಿಖ್ಯಾತ ಕ್ರೀಡಾಂಗಣ. ದೇಶ ವಿದೇಶದಿಂದ ಆಟಗಾರರು ಬಂದು ಆಡಿದ್ದಾರೆ. ಅದು ಗಲ್ಲಿ ಕ್ರಿಕೆಟ್ ಅಲ್ಲ. ಅಲ್ಲಿನ ಜನದಟ್ಟಣೆ ಬಗ್ಗೆ ಮೊದಲೇ ಗೊತ್ತಿತ್ತು. ಆಗಲೇ ಯೋಚನೆ ಮಾಡ್ಬೇಕಿತ್ತು 1 ಗೇಟ್‌ನಲ್ಲಿ ಎಲ್ಲರೂ ಸ್ಟೇಡಿಯಂ ಒಳಗಡೆ ಹೋಗೋಕೆ ಆಗಲ್ಲ. ಅಲ್ಲಿದ್ದವರ ಕಣ್ಣ ಮುಂದೆಯೇ ಜನರು ಕೆಳಗೆ ಬಿದ್ದು ಸಾಯ್ತಿದ್ದಾರೆ ಎಂದು ಗೊತ್ತಾದರೂ ಗೇಟ್ ಓಪನ್ ಮಾಡಿಲ್ಲ. ಇದರ ಬಗ್ಗೆ ಏನು ಹೇಳಬೇಕು ಅಂತಾ ಗೊತ್ತಾಗ್ತಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಟೀಂ ಇಂಡಿಯಾದ್ದು 5 ದಿನ, ಸಿಎಸ್‌ಕೆ 3 ದಿನದ ನಂತರ ಆಚರಣೆ ಮಾಡಿದ್ರೆ ಒಂದೇ ದಿನದಲ್ಲಿ ವಿಜಯೋತ್ಸವ ಆಚರಿಸಿದ್ದು ಯಾಕೆ? – ಜೆಡಿಎಸ್‌ ಆಕ್ರೋಶ

    ಸ್ಟೇಡಿಯಂನಲ್ಲಿ 21 ಗೇಟ್ ಇದೆ. ಅದು ಓಬವ್ವನ ಕಿಂಡಿ ಅಲ್ಲ. ಅಲ್ಲಿ ಒಂದು ಗೇಟ್‌ನಲ್ಲಿ ಕೇವಲ ಅರ್ಧ ಭಾಗದ ಗೇಟ್ ಮಾತ್ರ ತೆರೆದಿದ್ದರು. ಪೂರ್ತಿಯಾಗಿ ಎರಡೂ ಗೇಟ್ ತೆರೆದಿದ್ದರೆ ಜನರು ಆರಾಮಾಗಿ ಒಳಗೆ ಹೋಗಬಹುದಿತ್ತು. ಆದರೆ ಅಲ್ಲಿ ಅವರ ಉದ್ದೇಶ ಏನಿತ್ತು ಅಂತಾ ನನಗೆ ಗೊತ್ತಾಗಿಲ್ಲ. ಚಿನ್ನಸ್ವಾಮಿಗೆ ಇದೇ ಮೊದಲ ಬಾರಿ ಅಲ್ಲ ಜನ ಬರುತ್ತಿರುವುದು. ಆರ್‌ಸಿಬಿ ಬಗ್ಗೆ ಎಷ್ಟು ಕ್ರೇಜ್ ಇದೆ ಅಂತಾ ಎಲ್ಲರಿಗೂ ಗೊತ್ತಿದೆ. ರೋಡ್ ಶೋ ಮಾಡಿದ್ದರೆ ಈ ರೀತಿಯ ದುರ್ಘಟನೆ ನಡೆಯುತ್ತಿರಲಿಲ್ಲ. ಜನ ರಸ್ತೆ ಬದಿ ನಿಂತು ನೋಡಿಕೊಂಡು ಹೋಗುತ್ತಿದ್ದರು. ಆಗ ಜನರು ಸ್ಟೇಡಿಯಂಗೆ ಹೋಗಿ ನೋಡಬೇಕು ಅಂದ್ಕೊಳ್ಳುತ್ತಿರಲಿಲ್ಲ. ವಿಜಯಯಾತ್ರೆ ರದ್ದು ಮಾಡಿದ ಮೇಲೆ ಸರ್ಕಾರ ಒಂದು ದಿನ ಸಮಯ ತಗೊಂಡು ಸರಿಯಾದ ವ್ಯವಸ್ಥೆ ಮಾಡಿ ಕಾರ್ಯಕ್ರಮ ಆಯೋಜನೆ ಮಾಡಬೇಕಿತ್ತು ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಕಾಲ್ತುಳಿತದಲ್ಲಿ 11 ಮಂದಿ ಸಾವು – ಮರಣೋತ್ತರ ಪರೀಕ್ಷೆ ವರದಿಯಲ್ಲಿ ಏನಿದೆ?

    ದಿವ್ಯಾಂಶಿ ಮಗಳಗಿಂತ ಹೆಚ್ಚಾಗಿ ಬೆಸ್ಟ್ ಫ್ರೆಂಡ್ ಆಗಿದ್ದಳು. ಅವಳಿಗೆ ಯಾವುದೇ ರೀತಿಯ ಶೋಕಿ ಇರಲಿಲ್ಲ. ಯಾವಗಲೂ ಅಮ್ಮ ನಿನ್ನಿಷ್ಟ ಅಂತಿದ್ಳು. ದಿವ್ಯಾಂಶಿ ನನಗೆ ಎರಡನೇ ತಾಯಿಯಾಗಿದ್ದಳು. ಅವಳು ಸ್ವಿಮ್ಮಿಂಗ್‌ನಲ್ಲಿ ಗೋಲ್ಡ್ ಮೆಡಲ್ ಸಹ ಪಡೆದಿದ್ದಳು. ಮಗಳು ರಾತ್ರಿ ಆರ್‌ಸಿಬಿ ಕಪ್ ಗೆದ್ದ ಖುಷಿಯಲ್ಲಿದ್ದಳು. ಬೆಳಗ್ಗೆ ಸ್ಕೂಲ್ ಹೋಗೋಕೆ ರೆಡಿಯಾಗಿದ್ದಳು. ಆ ವೇಳೆ ಆರ್‌ಸಿಬಿ (RCB) ಟೀಮ್ ಬೆಂಗಳೂರಿಗೆ ಬರುತ್ತಿದೆ ಎಂಬ ಸುದ್ದಿ ಗೊತ್ತಾಯ್ತು. ಆಗ ಅವಳು ವಿರಾಟ್ ಕೊಹ್ಲಿನ ನೋಡ್ಬೇಕು ಅಂತಾ ಹಠ ಮಾಡಿದ್ದಳು. ಅವಳಿಗೆ ಗೋಲ್ಡನ್ ಮೆಮೋರಿ ಕೊಡೋಣ ಅಂತಾ ಕರೆದುಕೊಂಡು ಹೋದೆ. ಆದರೆ ಅಲ್ಲಿ ಸರಿಯಾಗಿ ಪೊಲೀಸ್ ಫೋರ್ಸ್ ಇರಲಿಲ್ಲ. ನಾನು ಇನ್ನೊಬ್ಬರನ್ನು ಕಾಪಾಡಳು ಹೋಗಿ ನನ್ನ ಮಗಳು ಮಿಸ್ ಆದಳು ಎಂದು ಬೇಸರ ಹೊರಹಾಕಿದರು. ಇದನ್ನೂ ಓದಿ: ಪೊಲೀಸರು ಅನುಮತಿ ನೀಡದೇ ಇದ್ರೂ ಪಟ್ಟು ಹಿಡಿದು ವಿಜಯೋತ್ಸವ ಆಯೋಜನೆ!

    ನನ್ನ ಮಗಳಿಗೆ ವಿರಾಟ್ ಕೊಹ್ಲಿ ಮೇಲೆ ಅಪಾರ ಅಭಿಮಾನವಿತ್ತು. ವಿರಾಟ್ ಕೊಹ್ಲಿಯ ಎಲ್ಲಾ ಕ್ರಿಕೆಟ್ ದಾಖಲೆ ಬಗ್ಗೆಯೂ ಆಕೆಗೆ ಗೊತ್ತಿತ್ತು. ಕಪಿಲ್ ದೇವ್ ದಾಖಲೆಯ ಬಗ್ಗೆಯೂ ಅವಳಿಗೆ ತಿಳಿದಿತ್ತು. ಹಾಗಾಗಿ ಅವಳ ಖುಷಿಗಾಗಿ ಸ್ಟೇಡಿಯಂಗೆ ಕರೆದುಕೊಂಡು ಹೋದೆ. ಅಲ್ಲಿ ನನ್ನ ಮಗಳು ಕಾಣೆಯಾದಳು. ಕೆಳಗೆ ಬಿದ್ದ ನನ್ನ ಮಗಳನ್ನು ಯಾರು ಕಾಪಾಡಲಿಲ್ಲ. ಅಲ್ಲಿದ್ದ ಯಾರಿಗೂ ಆ ಸಮಯದಲ್ಲಿ ಮಾನವೀಯತೆನೇ ಇರಲಿಲ್ಲ. ಅಲ್ಲಿ ಯಾವ ಭದ್ರತಾ ವ್ಯವಸ್ಥೆ ಕೂಡಾ ಇರಲಿಲ್ಲ. ದಿವ್ಯಾಂಶಿ ಕಲಿಕೆಯಲ್ಲೂ ಮುಂದಿದ್ದಳು. ಅಲ್ಲದೇ ಆಕೆ ಪೈಲೆಟ್ ಅಥವಾ ಡಾಕ್ಟರ್ ಆಗ್ಬೇಕು ಅಂತಾ ಹೇಳುತ್ತಿದ್ದಳು ಎಂದು ನೆನೆದರು.

  • ನನ್ನ ಮೊಮ್ಮಗಳ ಸಾವಿಗೆ ಸರ್ಕಾರವೇ ನೇರ ಹೊಣೆ: ಮೃತ ದಿವ್ಯಾಂಶಿ ಅಜ್ಜ ಕಿಡಿ

    ನನ್ನ ಮೊಮ್ಮಗಳ ಸಾವಿಗೆ ಸರ್ಕಾರವೇ ನೇರ ಹೊಣೆ: ಮೃತ ದಿವ್ಯಾಂಶಿ ಅಜ್ಜ ಕಿಡಿ

    ಬೆಂಗಳೂರು: ನನ್ನ ಮೊಮ್ಮಗಳ ಸಾವಿಗೆ ಸರ್ಕಾರವೇ ನೇರ ಹೊಣೆ ಎಂದು ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತದಲ್ಲಿ (Chinnaswamy Stadium Stampede) ಮೃತಪಟ್ಟ ಯಲಹಂಕದ (Yelahanka) ದಿವ್ಯಾಂಶಿಯ ಅಜ್ಜ ಕಿಡಿಕಾರಿದ್ದಾರೆ.

    ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬುಧವಾರ 4:30ಕ್ಕೆ ಕರೆ ಮಾಡಿ ದಿವ್ಯಾಂಶಿ ಮೃತಪಟ್ಟ ಮಾಹಿತಿ ನೀಡಿದರು. ಇಂದು ಸಂಜೆ ಆಂಧ್ರದ ಅನ್ನಮಯ ಜಿಲ್ಲೆಗೆ ಮೃತದೇಹ ಶಿಫ್ಟ್ ಮಾಡುತ್ತೇವೆ. ನನ್ನ ಮೊಮ್ಮಗಳ ಸಾವಿಗೆ ಸರ್ಕಾರವೇ ನೇರ ಹೊಣೆ. ಯಾವುದೇ ಪೋಲಿಸ್ ಇರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಕಾಲ್ತುಳಿತದಲ್ಲಿ 11 ಮಂದಿ ಸಾವು – ಮರಣೋತ್ತರ ಪರೀಕ್ಷೆ ವರದಿಯಲ್ಲಿ ಏನಿದೆ?

    ಗೇಟ್ ನಂಬರ್ 15ರ ಒಳಗೆ ಹೋದಾಗ ಈ ಘಟನೆ ನಡೆದಿದೆ. ಬಿದ್ದ ಮೊಮ್ಮಗಳನ್ನು ಜೊತೆಗೆ ಇದ್ದವರೇ ಆಟೋದಲ್ಲಿ ಕರೆದುಕೊಂಡು ಹೋದರು. ಸರ್ಕಾರ ಮೊದಲೇ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ತಾಯಿ, ಚಿಕ್ಕಮ್ಮ ಜೊತೆಗೆ ಹೋಗಿದ್ದರು ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: Chinnaswamy Stampede | ಜನರ ಮಧ್ಯೆ ಸಿಲುಕಿ ನನಗೂ ಉಸಿರಾಡಲು ಕಷ್ಟ ಆಯ್ತು: ಚಂದನ್ ಶೆಟ್ಟಿ

    9ನೇ ತರಗತಿ ಓದುತ್ತಿದ್ದ ದಿವ್ಯಾಂಶಿ ಕಾಲ್ತುಳಿತದ ವೇಳೆ ಅಸ್ವಸ್ಥಗೊಂಡು ಮೃತಪಟ್ಟಿದ್ದಾಳೆ. ಸದ್ಯ ದಿವ್ಯಾಂಶಿ ಮರಣೋತ್ತರ ಪರೀಕ್ಷೆ ಮುಕ್ತಾಯಗೊಂಡಿದ್ದು, ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಲಾಗಿದೆ. ಇದನ್ನೂ ಓದಿ: ಪೊಲೀಸರು ಅನುಮತಿ ನೀಡದೇ ಇದ್ರೂ ಪಟ್ಟು ಹಿಡಿದು ವಿಜಯೋತ್ಸವ ಆಯೋಜನೆ!

    ಶಿವಕುಮಾರ್ ಹಾಗೂ ಅಶ್ವಿನಿ ದಂಪತಿಯ ಮಗಳಾದ ದಿವ್ಯಾಂಶಿ ಚಿಕ್ಕಮ್ಮ ರಚನಾ ಹಾಗೂ ಇನ್ನಿಬ್ಬರ ಜೊತೆ ಆರ್‌ಸಿಬಿ ಸಂಭ್ರಮಾಚರಣೆ ನೋಡಲು ಚಿನ್ನಸ್ವಾಮಿ ಸ್ಟೇಡಿಯಂಗೆ ತೆರಳಿದ್ದಳು. ನೂಕುನುಗ್ಗಲಿನಲ್ಲಿ ಕಾಲ್ತುಳಿತ ಉಂಟಾಗಿ ಅಸ್ವಸ್ಥಗೊಂಡು ಬಳಿಕ ಮೃತಪಟ್ಟಿದ್ದಾಳೆ. ಯಲಹಂಕದ ಚೌಡೇಶ್ವರಿ ಲೇ ಔಟ್ ಮನೆಗೆ ದಿವ್ಯಾಂಶಿ ಮೃತದೇಹ ರವಾನಿಸಲಾಗಿದೆ. ಯಲಹಂಕದಲ್ಲಿ ದಿವ್ಯಾಂಶಿ ಅಂತ್ಯಸಂಸ್ಕಾರ ನೆರವೇರಲಿದೆ. ಇದನ್ನೂ ಓದಿ: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ – ಇಂದು ಭೂಮಿಕ್ ಅಂತ್ಯಕ್ರಿಯೆ

  • ಏರ್ ಶೋ ಹೊತ್ತಲ್ಲೇ ಕೆಂಪೇಗೌಡ ಏರ್‌ಪೋರ್ಟ್‌ಗೆ ಬಾಂಬ್ ಬೆದರಿಕೆ

    ಏರ್ ಶೋ ಹೊತ್ತಲ್ಲೇ ಕೆಂಪೇಗೌಡ ಏರ್‌ಪೋರ್ಟ್‌ಗೆ ಬಾಂಬ್ ಬೆದರಿಕೆ

    ಚಿಕ್ಕಬಳ್ಳಾಪುರ: ಏರ್ ಶೋ ಹೊತ್ತಲ್ಲೇ (Air Show) ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Kempegowda International Airport) ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿರುವುದು ತಡವಾಗಿ ಬೆಳಕಿಗೆ ಬಂದಿದೆ.

    ಏರ್ ಶೋಗಾಗಿ ತಯಾರಿ ನಡೆಯುತ್ತಿರುವಾಗ ಫೆಬ್ರವರಿ 8 ರಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಮೇಲ್ ಬಂದಿದೆ.ಇದನ್ನೂ ಓದಿ: ಕೃತಕ ಬುದ್ದಿಮತ್ತೆ ವಿಚಾರದಲ್ಲಿ ಎಲ್ಲಾ ದೇಶಗಳು ಒಗ್ಗಟ್ಟಿನಿಂದ ಮುಂದಡಿ ಇಡಬೇಕು: ಮೋದಿ

    mahantesh6699@proton.mi ಇಮೇಲ್ ಐಡಿ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ದುಷ್ಕರ್ಮಿಗಳು ಏರ್‌ಪೋರ್ಟ್‌ಗೆ ಆಗಮಿಸುವ ವಿಮಾನಗಳಿಗೆ ಡ್ರೋನ್ ಮುಖಾಂತರ ಬಾಂಬ್ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

    ಬೆಂಗಳೂರು, ಚೆನ್ನೈ ಹಾಗೂ ಕೇರಳದಿಂದ ಬರುವ ವಿಮಾನಗಳಿಗೆ ಡ್ರೋನ್ ಬಾಂಬ್ ದಾಳಿ ಬೆದರಿಕೆಯೊಡ್ಡಿದ್ದಾರೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿಗೆ ಪತ್ರ ಬರೆದಿದ್ದೇನೆ. ಪತ್ರ ಬರೆದು ಅವರಿಂದ ಪ್ರತಿಕ್ರಿಯೆ ಕೋರಿದ್ದೇನೆ. ನನ್ನ ಪತ್ರಕ್ಕೆ ಪ್ರತಿಕ್ರಿಯೆ ಬರದಿದ್ದರೆ ಡ್ರೋನ್ ಬಾಂಬ್ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

    ಏರ್ ಶೋ ನಡೆಯುತ್ತಿರುವ ಸಂದರ್ಭದಲ್ಲಿ ಬೆದರಿಕೆ ಬಂದ ಹಿನ್ನೆಲೆ ಪೊಲೀಸರು ಭದ್ರತೆ ಹೆಚ್ಚಿಸಿದ್ದು, ದುಷ್ಕರ್ಮಿಗಳ ವಿರುದ್ಧ ಬಿಎನ್‌ಎಸ್ 125, 351, 353 ಆಡಿ ಎಫ್‌ಐಆರ್ ದಾಖಲು ಮಾಡಲಾಗಿದೆ. ಈ ಬಗ್ಗೆ ಬೆಂಗಳೂರು ಏರ್‌ಪೋರ್ಟ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ಬೆಂಗಳೂರಿನ ಕೈಯಲ್ಲಿ ಭಾರತದ ಭವ್ಯ ಭವಿಷ್ಯ – ರಾಜನಾಥ್ ಸಿಂಗ್

     

  • 2ನೇ ದಿನಕ್ಕೆ ಕಾಲಿಟ್ಟ ಏರ್‌ ಶೋ – ಮಲ್ಟಿರೋಲ್ ಫೈಟರ್ ಏರ್ ಕ್ರಾಫ್ಟ್ ಆಕರ್ಷಣೆ

    2ನೇ ದಿನಕ್ಕೆ ಕಾಲಿಟ್ಟ ಏರ್‌ ಶೋ – ಮಲ್ಟಿರೋಲ್ ಫೈಟರ್ ಏರ್ ಕ್ರಾಫ್ಟ್ ಆಕರ್ಷಣೆ

    – ಬಾನಂಗಳದಲ್ಲಿ ಇಂದು 25ಕ್ಕೂ ಹೆಚ್ಚು ವಿಮಾನಗಳ ಹಾರಾಟ

    ಬೆಂಗಳೂರು: ಯಲಹಂಕದಲ್ಲಿ ನಡೆಯುತ್ತಿರುವ ಏರ್ ಶೋ (Aero India 2025) ಮಂಗಳವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಇಂದು 25ಕ್ಕೂ ಹೆಚ್ಚು ವಿಮಾನಗಳು ಹಾರಾಟ ನಡೆಸಲಿವೆ.

    ಎರಡನೇ ದಿನ ಕೂಡ ವ್ಯವಹಾರ ಸಮ್ಮೇಳನ ನಡೆಯಲಿದೆ. ಇಂದು ಕೂಡ ಭಾರತೀಯ ಸ್ಟಾರ್ಟ್ ಆಪ್ ಕಂಪನಿಗಳು ವಿದೇಶಿ ಪ್ರಮುಖರನ್ನ ಆಕರ್ಷಿಸಲಿವೆ. ಇದನ್ನೂ ಓದಿ: Bengaluru | ಏರ್‌ ಶೋ ಹಿನ್ನೆಲೆ ಟ್ರಾಫಿಕ್ ಜಾಮ್ ಬಿಸಿ – ಕಿಲೋಮೀಟರ್‌ಗಟ್ಟಲೆ ನಿಂತ ವಾಹನಗಳು

    ತುಮಕೂರಿನ ಹೆಎಎಲ್ ಏಷ್ಯಾದ ಅತಿ ದೊಡ್ಡ ವಿಮಾನ ತಯಾರಿಕಾ ಕಾರ್ಖಾನೆಯತ್ತ ವಿದೇಶಿ ರಕ್ಷಣಾ ಅಧಿಕಾರಿಗಳ ಚಿತ್ತ ನೆಟ್ಟಿದೆ. ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಉತ್ಪಾದನೆಗೊಳ್ಳುತ್ತಿರುವ ಉತ್ಪನ್ನಗಳ ಬಗ್ಗೆ ಜಗತ್ತಿನ ಮಾರುಕಟ್ಟೆಗೆ ಭಾರತೀಯ ಕಂಪನಿಗಳು ಪರಿಚಯಿಸಲಿವೆ.

    ಲಘು ಯುದ್ಧ ವಿಮಾನ, ಎಐ, ಫೈಟರ್ ಏರ್ ಕ್ರಾಫ್ಟ್, ಸೈಬರ್ ಸೆಕ್ಯುರಿಟಿ, ಡ್ರೋಣ್, ರೇಡಾರ್ಸ್ ಸೇರಿ ಅತ್ಯಾಧುನಿಕ ರಕ್ಷಣಾ ಉತ್ಪನ್ನಗಳ ಪ್ರದರ್ಶನ ನಡೆಯುತ್ತಿದೆ. ಇದನ್ನೂ ಓದಿ: ಮಹಾ ಕುಂಭದಿಂದ ಸಂಸ್ಕೃತಿ, ಏರ್‌ಶೋನಿಂದ ರಕ್ಷಣಾ ಬಲಿಷ್ಠತೆಯನ್ನ ಭಾರತ ಜಗತ್ತಿಗೇ ಸಾರಿದೆ: ರಾಜನಾಥ್‌ ಸಿಂಗ್‌

    ಮಲ್ಟಿರೋಲ್ ಫೈಟರ್ ಏರ್ ಕ್ರಾಫ್ಟ್ ಆಕರ್ಷಣೆ
    ಎರಡನೇ ದಿನದ ಏರ್ ಶೋನಲ್ಲಿ ಸ್ವೀಡನ್ ದೇಶದ ಮಲ್ಟಿರೋಲ್ ಫೈಟರ್ ಏರ್ ಕ್ರಾಫ್ಟ್ ಎಲ್ಲರನ್ನೂ ಆಕರ್ಷಿಸುತ್ತಿದೆ. ಸಾಬ್ ಕಂಪನಿಯಿAದ ನಿರ್ಮಿತವಾದ ಈ ಫೈಟರ್ ಏರ್ ಕ್ರಾಫ್ಟನ್ನು ಭಾರತಕ್ಕೆ ಪರಿಚಯಿಸುವ ಕುರಿತು ಉಭಯ ರಾಷ್ಟ್ರಗಳ ಜೊತೆ ಮಾತುಕತೆ ಕೂಡ ನಡೆಯುತ್ತಿದೆ.

    ಬ್ರೆಜಿಲ್ ಯುದ್ಧ ಕಾರ್ಗೋ ವಿಮಾನ
    ಆಧುನಿಕ ಯುದ್ಧಗಳ ಸಂಧರ್ಭದಲ್ಲಿ ಫೈಟರ್ ಜೆಟ್‌ಗಳಷ್ಟೇ ಪ್ರಾಮುಖ್ಯತೆ ಕಾರ್ಗೋ ವಿಮಾನಗಳಿಗೂ ಇದೆ. ಫೈಟರ್ ಜೆಟ್‌ಗಳು ಶತ್ರುವಿನ ಮೇಲೆ ಮುಗಿಬೀಳುವ ಸಾಮಾರ್ಥ್ಯ ಹೊಂದಿವೆ. ಕಾರ್ಗೋ ವಿಮಾನಗಳು ಫೈಟರ್ ಜೆಟ್‌ಗಳಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತವೆ. ಅದೇ ರೀತಿ ಈ ಬಾರಿ ಏರ್ ಶೋನಲ್ಲಿ ಸಿ-390 ಮಿಲಿನಿಯಂ ಹೆಸರಿನ ಭಾರೀ ಗಾತ್ರದ ಬ್ರೆಜಿಲ್ ಮೂಲದ ಕಾರ್ಗೋ ವಿಮಾನ ತನ್ನತ್ತ ಸೆಳೆಯುತ್ತಿದೆ. ವಾಯುಸೇನೆಯಲ್ಲಿ 6 ರೀತಿಯ ಕಾರ್ಯವನ್ನ ಮಾಡಿ, ತನ್ನ ಸೇನೆಗೆ ಬಲ ತುಂಬುವ ಈ ಕಾರ್ಗೋ ಸದ್ಯ ಬ್ರೆಜಿಲ್, ಪೋರ್ಚುಗಲ್, ಹಂಗೇರಿ ದೇಶಗಳಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ತಮ್ಮ ಸೇನೆಗೆ ಈ ಬಾಹುಬಲಿಯನ್ನ ಸೇರ್ಪಡೆ ಮಾಡಲು ಅನೇಕ ದೇಶಗಳು ಕೂಡ ಸಾಲಿನಲ್ಲಿ ಕಾದು ನಿಂತಿವೆ.

    ಏರ್ ಶೋನ ಎರಡನೇ ದಿನವನ್ನ ನೋಡಲು ರಕ್ಷಣಾ ಇಲಾಖೆ ಅಧಿಕಾರಿಗಳ ಕುಟುಂಬಗಳು, ಗಣ್ಯರು ಯಲಹಂಕದ ವಾಯುನೆಲೆಗೆ ಆಗಮಿಸಿದ್ದಾರೆ.

  • ನಾಳೆಯಿಂದ ಏರೋ ಇಂಡಿಯಾ ಶೋ – ಬಾನಂಗಳದಲ್ಲಿ ಮೋಡಿ ಮಾಡಲಿವೆ ಲೋಹದ ಹಕ್ಕಿಗಳು

    ನಾಳೆಯಿಂದ ಏರೋ ಇಂಡಿಯಾ ಶೋ – ಬಾನಂಗಳದಲ್ಲಿ ಮೋಡಿ ಮಾಡಲಿವೆ ಲೋಹದ ಹಕ್ಕಿಗಳು

    ಬೆಂಗಳೂರು: ನಾಳೆಯಿಂದ (ಫೆ.10) 15ನೇ ಆವೃತ್ತಿಯ ಏರೋ ಇಂಡಿಯಾ ಶೋ (Aero India Show) ಆರಂಭವಾಗಲಿದೆ. ಯಲಹಂಕದ (Yelahanka) ವಾಯು ನೆಲೆಯಲ್ಲಿ ನಡೆಯಲಿರುವ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ಈ ಬಾರಿ ಹಲವು ದಾಖಲೆಗಳ ನೀರಿಕ್ಷೆಗಳನ್ನ ಹುಟ್ಟಿಸಿದೆ.

    ರನ್ ಟು ಎ ಬಿಲಿಯನ್ ಆಪರ್ಚುನಿಟೀಸ್ ಎಂಬ ವಿಶಾಲ ಧ್ಯೇಯದೊಂದಿಗೆ 5 ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಯಲಹಂಕ ವಾಯುನೆಲೆ ಸಿದ್ಧವಾಗಿದೆ. ಫೆಬ್ರವರಿ 10 ರಿಂದ 14ರವರೆಗೆ ನಡೆಯಲಿರುವ ಏರ್ ಶೋಗೆ ದೇಶ, ವಿದೇಶದ ಗಣ್ಯರು ಆಗಮಿಸಲಿದ್ದಾರೆ. ದೇಶ, ವಿದೇಶದ ವಾಯುಪಡೆಯ ವಿಮಾನಗಳು ಬಾನಂಗಳದಲ್ಲಿ ಮೋಡಿ ಮಾಡಲು ರೆಡಿಯಾಗಿವೆ. ಇದನ್ನೂ ಓದಿ: ಅಬ್ಬಬ್ಬಾ.. ಮೊದಲ ಚಿತ್ರಕ್ಕೆ ಇಷ್ಟೊಂದು ಸಂಭಾವನೆ ಪಡೆದಿದ್ದಾರಾ ಮೊನಾಲಿಸಾ?

    ಕಾರ್ಯಕ್ರಮವನ್ನು ಭಾರತೀಯ ರಕ್ಷಣಾ ಇಲಾಖೆಯ ಸಚಿವ ರಾಜನಾಥ್ ಸಿಂಗ್ ಉದ್ಘಾಟನೆ ಮಾಡಲಿದ್ದಾರೆ. ಕಾರ್ಯಕ್ರಮದ ಮೊದಲ ಮೂರು ದಿನ ಅಂದರೆ ಫೆಬ್ರವರಿ 10, 11, 12ರವರೆಗೆ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ವ್ಯವಹಾರ ದಿನಗಳಾಗಿರುತ್ತವೆ. 13 ಮತ್ತು 14ರಂದು ಸಾರ್ವಜನಿಕ ವೀಕ್ಷಣೆಗೆ ಅವಕಾಶವನ್ನ ಕಲ್ಪಿಸಲಾಗಿದೆ. ಏರೋಸ್ಪೇಸ್ ವಲಯದಿಂದ ದೊಡ್ಡ ಶ್ರೇಣಿಯ ಮಿಲಿಟರಿ ವೇದಿಕೆಗಳ ವಾಯು ಪ್ರದರ್ಶನ, ವಸ್ತು ಪ್ರದರ್ಶನಗಳನ್ನು ಒಳಗೊಂಡಿದೆ. ಇದನ್ನೂ ಓದಿ: ಐಶ್ವರ್ಯ ಕೇಸಲ್ಲೀಗ ಪೊಲೀಸರಿಗೆ ಸಿಡಿಆರ್‌ ಸಂಕಷ್ಟ – ಎಸಿಪಿ ಚಂದನ್‌ಗೆ ಹೆಗಲಿಗೆ ತನಿಖೆ ಹೊಣೆ

    ಏರೋ ಇಂಡಿಯಾ ಶೋ ಹೈಲೈಟ್ಸ್:
    * ರಕ್ಷಣಾ ಸಚಿವರುಗಳ ಸಮಾವೇಶ, ದೇಶ ವಿದೇಶದ ರಕ್ಷಣಾ ಇಲಾಖೆಯ ಉನ್ನತ ಶ್ರೇಣಿಯ ಅಧಿಕಾರಿಗಳು ಭಾಗಿ.
    * ಮೊದಲ ಮೂರು ದಿನ ಉದ್ಯಮದ ವೃತ್ತಿಪರರು, ನೀತಿ ನಿರೂಪಕರು, ಹೂಡಿಕೆದಾರರಿಗೆ ಮೀಸಲು.
    * ಸಿಇಒ ದುಂಡು ಮೇಜಿನ ಸಭೆ, ಮಂಥನ್ ಸ್ಟಾರ್ಟ್ಅಪ್ ಕಾರ್ಯಕ್ರಮ.
    * ಏರೋಸ್ಪೇಸ್ ಕಂಪನಿಗಳ ವ್ಯಾಪಾರ ಮೇಳ.
    * ಆತ್ಮನಿರ್ಭರ್ ಯೋಜನೆಯಡಿ ಭಾರತೀಯ ರಕ್ಷಣಾ ಉತ್ಪಾದನೆ ಜಗತ್ತಿಗೆ ಪರಿಚಯಿಸುವುದು.
    * ಭಾರತದಲ್ಲಿ ಉತ್ಪಾದನೆಯ ಉಪಕರಣಗಳನ್ನ ಇತರ ದೇಶಗಳಿಗೆ ಮಾರಾಟ ಮಾಡುವ ಕುರಿತು ಒಡಂಬಡಿಕೆಗಳು.
    * ಭಾರತೀಯ ನವೋಧ್ಯಮಗಳ ಪ್ರಚಾರಕ್ಕಾಗಿ, ಅಭಿವೃದ್ಧಿಗಾಗಿ ಉತ್ಪನ್ನಗಳನ್ನ ವಿಶೇಷ ಐಡೆಕ್ಸ್ ಪೆವಿಲಿಯನ್‌ನಲ್ಲಿ ಪ್ರದರ್ಶನ
    * ದೇಶಿಯ ನಿರ್ಮಿತ ಯುದ್ಧ ವಿಮಾನಗಳ ಪ್ರದರ್ಶನ
    * ಡೈನಾಮಿಕ್ ಏರೋಬ್ಯಾಟಿಕ್ ಪ್ರದರ್ಶನಗಳು, ಲೈವ್ ತಂತ್ರಜ್ಞಾನ ಪ್ರದರ್ಶನಗಳು
    * ರಕ್ಷಣಾ ವೈಮಾನಿಕ ಕ್ಷೇತ್ರದಲ್ಲಿ ಯುದ್ಧ ವಿಮಾನಗಳು, ಉಪಕರಣಗಳು ಸೇರಿ ಉತ್ಪನ್ನಗಳ ಖರೀದಿಗೂ ಹಲವು ದೇಶಗಳೊಂದಿಗೆ ಒಪ್ಪಂದಗಳಾಗುವ ನಿರೀಕ್ಷೆ.

    ಏರೋಸ್ಪೇಸ್ ಮತ್ತು ರಕ್ಷಣೆಯಲ್ಲಿ ಸ್ವದೇಶಿಕರಣವನ್ನ ಉತ್ತೇಜಿಸುವುದು, ಅತ್ಯಾಧುನಿಕ ತಂತ್ರಜ್ಞಾನಗಳು, ಉತ್ಪನ್ನಗಳನ್ನು ಪ್ರದರ್ಶನ ಮಾಡಲಾಗುತ್ತದೆ. ಇಗಾಗಲೇ 700ಕ್ಕೂ ಪ್ರದರ್ಶಕರು ನೋಂದಣಿ ಮಾಡಿಕೊಂಡಿದ್ದು, ರಕ್ಷಣಾ ವ್ಯವಸ್ಥೆಗೆ ಸಂಬಂಧಪಟ್ಟಂತೆ ತಮ್ಮ ಉತ್ಪನ್ನಗಳನ್ನು ಪ್ರದರ್ಶನ ಮಾಡಲು ತಯಾರಿಗಳು ನಡೆಯುತ್ತಿವೆ. ಏರ್ ಶೋನಲ್ಲಿ ಯಾವುದೇ ಸಮಸ್ಯೆಗಳಾಗದಂತೆ ಪಾಲಿಕೆ, ಜಿಲ್ಲಾಡಳಿತ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡಿದೆ. ಇದನ್ನೂ ಓದಿ: ಮಹಾ ಕುಂಭಮೇಳಕ್ಕೆ ತೆರಳಿದ ಡಿಕೆಶಿ

  • ಏರೋ ಇಂಡಿಯಾ 2025 – ನಾಳೆಯಿಂದ ಬೆಂಗಳೂರು ವಿಮಾನಯಾನದಲ್ಲಿ ವ್ಯತ್ಯಯ

    ಏರೋ ಇಂಡಿಯಾ 2025 – ನಾಳೆಯಿಂದ ಬೆಂಗಳೂರು ವಿಮಾನಯಾನದಲ್ಲಿ ವ್ಯತ್ಯಯ

    ಬೆಂಗಳೂರು: ಯಲಹಂಕದ ವಾಯುನೆಲೆಯಲ್ಲಿ ನಡೆಯಲಿರುವ ಏರೋ ಇಂಡಿಯಾ 2025ರ (Aero India 2025) ಹಿನ್ನೆಲೆ ಫೆ.5ರಿಂದ ಫೆ.14ರವರೆಗೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪ್ರತಿದಿನ ಕೆಲವು ಗಂಟೆಗಳ ಕಾಲ ವಿಮಾನ ಹಾರಾಟ ಬಂದ್ ಆಗಲಿದೆ.

    ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಾಯುಯಾನ ಪ್ರದೇಶ ಮುಚ್ಚಲ್ಪಡಲಿದ್ದು, ಪ್ರಯಾಣಿಕರು ವಿಮಾನ ವೇಳಾಪಟ್ಟಿಗಳ ಪರಿಷ್ಕೃತ ಅಥವಾ ನವೀಕರಿಸಿದ ವಿವರಗಳಿಗಾಗಿ ಆಯಾ ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸಲು ಸೂಚಿಸಲಾಗಿದೆ. ಇದನ್ನೂ ಓದಿ: ಮೈಸೂರು ಮಹಾರಾಜರು ಕಟ್ಟಿಸಿದ್ದ ಶಿವನ ದೇವಾಲಯವಾಯ್ತು ಬಾರ್ & ರೆಸ್ಟೋರೆಂಟ್!

    ವಿಮಾನ ವೇಳಾಪಟ್ಟಿಯ ನವೀಕೃತ ಮಾಹಿತಿಗೆ ಅನುಸಾರವಾಗಿ ತಮ್ಮ ಆಗಮನ ಮತ್ತು ನಿರ್ಗಮನವನ್ನು ಯೋಜಿಸಲು ನಾವು ವಿನಂತಿ ಮಾಡುತ್ತೇವೆ. ನಿಮ್ಮ ತಾಳ್ಮೆ ಮತ್ತು ಸಹಕಾರಕ್ಕಾಗಿ ಧನ್ಯವಾದಗಳು ಎಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಪ್ರಕಟಣೆ ಹೊರಡಿಸಿದೆ. ಇದನ್ನೂ ಓದಿ: 3 ದಶಕಗಳ ಬಳಿಕ ಮಂಗಳೂರು ಕಡಲ ಕಿನಾರೆಗೆ ಬಂದ ಕಡಲಾಮೆಗಳು

    ಬೆಂಗಳೂರು ಏರ್‌ಪೋರ್ಟ್ ಕಾರ್ಯಾಚರಣೆಯು ಫೆ.5ರಿಂದ ಫೆ.15ರವರೆಗೆ 10 ದಿನಗಳಲ್ಲಿ ಬೇರೆಬೇರೆ ಸಮಯದಲ್ಲಿ ಬಂದ್ ಆಗಿರಲಿದೆ. ಆ ವೇಳಾಪಟ್ಟಿ ವಿವರ ಈ ಕೆಳಗೆ ನೀಡಲಾಗಿದೆ. ಇದನ್ನೂ ಓದಿ: ಸ್ನೇಹಿತರ ಹೆಸರಲ್ಲಿ ನಕಲಿ ಚಿನ್ನ ಅಡವಿಟ್ಟು 49 ಲಕ್ಷ ವಂಚನೆ – ಫೈನಾನ್ಸ್ ಮ್ಯಾನೇಜರ್ ಅರೆಸ್ಟ್‌

    ಫೆಬ್ರವರಿ 5: ಬೆಳಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ, ಅಪರಾಹ್ನ 3 ರಿಂದ ಸಂಜೆ 4:30ರವರೆಗೆ ಕಾರ್ಯಾಚರಣೆ ಸ್ಥಗಿತವಾಗಿರಲಿದೆ.
    ಫೆಬ್ರವರಿ 6: ಬೆಳಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಅಪರಾಹ್ನ 3 ರಿಂದ ಸಂಜೆ 4:39ರವರೆಗೆ ಕಾರ್ಯಾಚರಣೆ ಸ್ಥಗಿತವಾಗಿರಲಿದೆ.
    ಫೆಬ್ರವರಿ 7: ಬೆಳಗ್ಗೆ 09ರಿಂದ 11 ರವರೆಗೆ ಮತ್ತು ಅಪರಾಹ್ನ 3 ರಿಂದ ಸಂಜೆ 4:30ರವರೆಗೆ ಕಾರ್ಯಾಚರಣೆ ಸ್ಥಗಿತವಾಗಿರಲಿದೆ.
    ಫೆಬ್ರವರಿ 8:  ಬೆಳಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ ಮತ್ತು ಅಪರಾಹ್ನ 3 ರಿಂದ ಸಂಜೆ 4:30ರವರೆಗೆ ಕಾರ್ಯಾಚರಣೆ ಸ್ಥಗಿತವಾಗಿರಲಿದೆ.
    ಫೆಬ್ರವರಿ 9: ಬೆಳಿಗ್ಗೆ 9 ರಿಂದ 11 ರವರೆಗೆ ಕಾರ್ಯಾಚರಣೆ ಸ್ಥಗಿತವಾಗಿರಲಿದೆ.
    ಫೆಬ್ರವರಿ 10: ಬೆಳಿಗ್ಗೆ 9 ರಿಂದ 11:30 ರವರೆಗೆ ಮತ್ತು ಅಪರಾಹ್ನ 2:30 ರಿಂದ 3:30 ರವರೆಗೆ ಕಾರ್ಯಾಚರಣೆ ಸ್ಥಗಿತವಾಗಿರಲಿದೆ.
    ಫೆಬ್ರವರಿ 11-12: ಮಧ್ಯಾಹ್ನ 12:00 ರಿಂದ ಅಪರಾಹ್ನ 2:30 ರವರೆಗೆ ಕಾರ್ಯಾಚರಣೆ ಸ್ಥಗಿತವಾಗಿರಲಿದೆ.
    ಫೆಬ್ರವರಿ 13-14: ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಅಪರಾಹ್ನ 2:30 ರಿಂದ ಸಂಜೆ 5:00 ರವರೆಗೆ ಕಾರ್ಯಾಚರಣೆ ಸ್ಥಗಿತವಾಗಿರಲಿದೆ.

  • ಏರೋ ಇಂಡಿಯಾ ಶೋ ವಿಪತ್ತು ನಿರ್ವಹಣೆಗೆ ಸಜ್ಜಾಗಲು ಡಿಸಿ ಕರೆ

    ಏರೋ ಇಂಡಿಯಾ ಶೋ ವಿಪತ್ತು ನಿರ್ವಹಣೆಗೆ ಸಜ್ಜಾಗಲು ಡಿಸಿ ಕರೆ

    ಬೆಂಗಳೂರು: ನಗರದ ಯಲಹಂಕದಲ್ಲಿ (Yelahanka) ಫೆಬ್ರವರಿ 10 ರಿಂದ 14ರವರೆಗೆ ನಡೆಯಲಿರುವ ಏರೋ ಇಂಡಿಯಾ ಶೋಗೆ (Aero India Show) ಸಂಬಂಧಿಸಿದ ಎಲ್ಲಾ ವಿಪತ್ತು ನಿರ್ವಹಣಾ ಮುಂಜಾಗ್ರತಾ ಸಿದ್ಧತಾ ಕಾರ್ಯಗಳನ್ನು ತಪ್ಪದೇ ಮಾಡಿಕೊಳ್ಳಲು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ ಜಗದೀಶ್ (G Jagadish) ಅಧಿಕಾರಿಗಳಿಗೆ ಸೂಚಿಸಿದರು.

    ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ಏರೋ ಇಂಡಿಯಾ ಶೋನ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಂಬುಲೆನ್ಸ್‌ಗಳ ವ್ಯವಸ್ಥೆ, ಆಹಾರ ಸೌಲಭ್ಯ, ಜರ್ಮನ್ ಟೆಂಟ್, ಹೆಲಿಪ್ಯಾಡ್, ಸ್ವಚ್ಚತೆ, ನೀರಿನ ಸರಬರಾಜು, ಜನಸಂದಣಿ ನಿಯಂತ್ರಣ, ಸೇರಿದಂತೆ ತುರ್ತು ಪರಿಸ್ಥಿತಿಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಎಚ್ಚರಿಕೆಯಿಂದ ಕ್ರಮ ವಹಿಸಲು ಅಧಿಕಾರಿಗಳಿಗೆ ಅವರು ಸೂಚಿಸಿದರು. ಇದನ್ನೂ ಓದಿ: ಮೈಕ್ರೋ ಫೈನಾನ್ಸ್‌ನವರು ರೌಡಿಗಳನ್ನಿಟ್ಟುಕೊಂಡು ಹಣ ವಸೂಲಿ ಮಾಡ್ತಿದ್ದಾರೆ: ಡಿಕೆಶಿ

    ಏರೋ ಶೋ ನಡೆಯುವ ಸ್ಥಳದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾಂಸದ ಅಂಗಡಿಗಳನ್ನು ಮುಚ್ಚಿಸಲು ಈಗಾಗಲೇ ಕ್ರಮ ವಹಿಸಲಾಗಿದೆಯೇ ಖಾತ್ರಿಪಡಿಸಿಕೊಳ್ಳಿ. ಈ ಪ್ರದೇಶಗಳಲ್ಲಿ ಘನತ್ಯಾಜ್ಯ ಬಿಸಾಡುವುದನ್ನು ತಪ್ಪಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಸಂಬಂಧಿಸಿದ ಗ್ರಾಮ ಪಂಚಾಯಿತಿಗಳು ಅಥವಾ ಸ್ಥಳೀಯ ಸಂಸ್ಥೆಗಳು ಕೂಡಲೇ ಕ್ರಮ ವಹಿಸಬೇಕು. ಏರ್ ಶೋನ ಸುತ್ತಮುತ್ತಲಿನ ಪ್ರದೇಶದ ಸಂಪೂರ್ಣ ಸ್ವಚ್ಛತೆ ಕಾಯ್ದುಕೊಂಡಲ್ಲಿ ಮಾತ್ರ ಹಕ್ಕಿಗಳಿಂದ ಆಗುವ ಅವಘಡಗಳನ್ನು ತಪ್ಪಿಸಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು. ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಸೇರಿ ಕೈ ಸಾಲಭಾದೆ – ವ್ಯಕ್ತಿ ಮನೆಯಲ್ಲೇ ನೇಣಿಗೆ ಶರಣು

    ವಿಪತ್ತು ನಿರ್ವಹಣೆಯ ಕುರಿತು ಏರ್‌ಲಿಫ್ಟ್ ಹಾಗೂ ಇತರೆ ವಿಪತ್ತುಗಳ ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ನಿರ್ವಹಣಾ ಕಾರ್ಯಗಳ ಅಣಕು ಪ್ರದರ್ಶನದಲ್ಲಿ ಪ್ರತಿಯೊಬ್ಬ ಅಧಿಕಾರಿಯು ತಪ್ಪದೇ ಭಾಗವಹಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು. ಇದನ್ನೂ ಓದಿ: ಯುಪಿಎಗೆ ಹೋಲಿಸಿದ್ರೆ ಕರ್ನಾಟಕಕ್ಕೆ 9 ಪಟ್ಟು ಅಧಿಕ ಅನುದಾನ: ರೈಲ್ವೆ ಸಚಿವ ಅಶ್ವಿನಿ ವೈಷ್ಣವ್

    ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ರವೀಂದ್ರನಾಥ್ ಎನ್.ಮೇಟಿ, ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ ಪ್ರಮೋದ್ ಪಾಟೀಲ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕರಾದ ಪಲ್ಲವಿ ಹೊನ್ನಾಪುರ, ಯಲಹಂಕ ತಹಶೀಲ್ದಾರ್ ಶ್ರೇಯಶ್ ಜಿ.ಎಸ್, ಬಿಬಿಎಂಪಿ ಸಲಹೆಗಾರ ಬಸವರಾಜು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದರು. ಇದನ್ನೂ ಓದಿ: ರಿಲಯನ್ಸ್ ಬ್ರ‍್ಯಾಂಡ್ಸ್ ಸಹಯೋಗದೊಂದಿಗೆ ಮಾಝ್‌ನಿಂದ ಭಾರತದಲ್ಲಿ ಮೊದಲ ಮಳಿಗೆ ಶುರು