Tag: Yedyurappa

  • ಯಡಿಯೂರಪ್ಪಗೆ ಹಣ ವಸೂಲಿ ಮಾಡಿ ಡೆಲ್ಲಿಗೆ ಕಳಿಸೋದು ಕಾಯಕ: ವೀರಪ್ಪ ಮೊಯ್ಲಿ

    ಯಡಿಯೂರಪ್ಪಗೆ ಹಣ ವಸೂಲಿ ಮಾಡಿ ಡೆಲ್ಲಿಗೆ ಕಳಿಸೋದು ಕಾಯಕ: ವೀರಪ್ಪ ಮೊಯ್ಲಿ

    ಚಿಕ್ಕಬಳ್ಳಾಪುರ: ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪಗೆ ಹಣ ವಸೂಲಿ ಮಾಡಿ ದೆಹಲಿಗೆ ಕಳಿಸುವುದು ಕೆಲಸ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ ಎಂ. ವೀರಪ್ಪ ಮೊಯ್ಲಿ ಗಂಭೀರ ಆರೋಪ ಮಾಡಿದ್ದಾರೆ.

    ವೀರಪ್ಪ ಮೊಯ್ಲಿ ಅವರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸಿದರು. ಈ ವೇಳೆ ಮಾತನಾಡಿದ ಅವರು, ರಾಜ್ಯ ಹಾಗೂ ದೇಶದ ಜನರ ಅಭಿವೃದ್ಧಿ ಕಾಂಗ್ರೆಸ್-ಜೆಡಿಎಸ್‍ನಿಂದ ಮಾತ್ರ ಸಾಧ್ಯ. ಆದರೆ ಬಿಜೆಪಿಯ ಯಡಿಯೂರಪ್ಪಗೆ ಹಣ ವಸೂಲಿ ಮಾಡಿ ದೆಹಲಿಗೆ ಕಳಿಸುವುದು ಕಾಯಕ ಎಂದು ಟೀಕೆ ಮಾಡಿದರು.

    ಈಗಾಗಲೇ ದೆಹಲಿಗೆ ಯಡಿಯೂರಪ್ಪ ವರ್ಗಾವಣೆಯ 1,800 ಕೋಟಿ ರೂಪಾಯಿಯ ಡೈರಿ ಸಿಕ್ಕಿದೆ. ಅದನ್ನು ಈಗ ಮೋದಿ ಸರ್ಕಾರ ಅಡಗಿಸಬಹುದು. ಮುಂದೆ ಚುನಾವಣೆ ನಂತರ ಮೇ ತಿಂಗಳಿನಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು, ಅದನ್ನು ಬಯಲು ಮಾಡ್ತೇವೆ ಎಂದರು.

    ಕಳೆದ ಎರಡು ಬಾರಿ ನೀವು ಸಂಸದರಾಗಿ ಆಯ್ಕೆ ಮಾಡಿದ್ದು, ಈ ಬಾರಿಯೂ ನೀವು ನಮಗೆ ಅವಕಾಶ ಮಾಡಿಕೊಡಿ. ಈ ರಾಜ್ಯದಲ್ಲಿ ಕುಮಾರಸ್ವಾಮಿ ಸರ್ಕಾರ ಭದ್ರವಾಗಿರಬೇಕು. ಕೇಂದ್ರದಲ್ಲಿ ರಾಹುಲ್ ಗಾಂಧಿ ಪ್ರಧಾನಿಯಾಗಬೇಕಿದೆ. ಇದಲ್ಲದೆ ಎತ್ತಿನಹೊಳೆ ಯೋಜನೆಯನ್ನು ಪೂರ್ಣಗೊಳಿಸಲು ನೀವು ನನಗೆ ಮತ ನೀಡಬೇಕಿದೆ. ಮನೆ ಮನೆಯಲ್ಲಿ ಯುವಕ – ಯುವತಿಯರಿಗೆ ಕೆಲಸ, ಹೊಲ, ಹೊಲಕ್ಕೆ ಜಲ, ಮನೆ ಮನೆಗೆ ಕುಡಿಯುವ ನೀರು ಈ ಮೂರು ದೀಕ್ಷೆಗಳನ್ನು ಈಡೇರಿಸಲು ತಾವು ಮತ ನೀಡಬೇಕು ಎಂದು ವೀರಪ್ಪ ಮೊಯ್ಲಿ ತಮ್ಮ ಪ್ರಚಾರ ಭಾಷಣದಲ್ಲಿ ಮನವಿ ಮಾಡಿಕೊಂಡರು.

    ದೊಡ್ಡಬಳ್ಳಾಪುರ ತಾಲೂಕಿನ ಎಸ್ ಎಸ್ ಘಾಟಿ, ತೂಬಗರೆ, ಮೇಳೆಕೋಟೆ ಹಾಗೂ ಕಾರಹಳ್ಳಿ ಗ್ರಾಮಗಳಲ್ಲಿ ವೀರಪ್ಪ ಮೊಯ್ಲಿ ಚುನಾವಣಾ ಪ್ರಚಾರ ನಡೆಸಿದ್ದು, ವೀರಯ ಮೊಯ್ಲಿಗೆ ದೇವನಹಳ್ಳಿ ಜೆಡಿಎಸ್ ಶಾಸಕ ನಾರಾಯಣಸ್ವಾಮಿ, ವಸತಿ ಸಚಿವ ಎಂಟಿಬಿ ನಾಗರಾಜ್ ಸಾಥ್ ನೀಡಿದರು.

  • ಪ್ರಧಾನಿ ಮೋದಿ ಆಯ್ತು ಈಗ ಬಿಎಸ್‍ವೈ ಹುಟ್ಟುಹಬ್ಬಕ್ಕೆ ಬಿಜೆಪಿ ಮುಖಂಡರಿಂದ ಪೌರ ಕಾರ್ಮಿಕರ ಪಾದ ಪೂಜೆ

    ಪ್ರಧಾನಿ ಮೋದಿ ಆಯ್ತು ಈಗ ಬಿಎಸ್‍ವೈ ಹುಟ್ಟುಹಬ್ಬಕ್ಕೆ ಬಿಜೆಪಿ ಮುಖಂಡರಿಂದ ಪೌರ ಕಾರ್ಮಿಕರ ಪಾದ ಪೂಜೆ

    ಮಂಡ್ಯ: ಪ್ರಧಾನಿ ನರೇಂದ್ರ ಮೋದಿ ಆಯ್ತು ಈಗ ಮಂಡ್ಯ ಬಿಜೆಪಿ ಮುಖಂಡರು ಪೌರ ಕಾರ್ಮಿಕರ ಪಾದ ಪೂಜೆ ಮಾಡಿದ್ದಾರೆ.

    ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಹುಟ್ಟುಹಬ್ಬದ ಅಂಗವಾಗಿ ಬಿಜೆಪಿ ಮುಖಂಡರು ಪೌರ ಕಾರ್ಮಿಕರ ಪಾದ ಪೂಜೆ ಮಾಡಿದ್ದಾರೆ. ಬಿಜೆಪಿ ಮುಖಂಡರಾದ ಸಿದ್ದರಾಮಯ್ಯ, ಶಿವಕುಮಾರ್ ಆರಾಧ್ಯ ಸೇರಿದಂತೆ ಇತರರು ಸುಮಾರು ಎಂಟು ಜನ ಪೌರಕಾರ್ಮಿಕರ ಪಾದ ತೊಳೆದು ಪೂಜೆ ಸಲ್ಲಿಸಿದ್ದಾರೆ. ಮಂಡ್ಯದ ಶಕ್ತಿ ದೇವತೆ ಕಾಳಿಕಾಂಬಾ ದೇವಾಲಯದ ಆವರಣದಲ್ಲಿ ಈ ಪಾದ ಪೂಜೆ ನಡೆದಿದೆ. ಪಾದ ಪೂಜೆ ಬಳಿಕ ಪೌರ ಕಾರ್ಮಿಕರಿಗೆ ವಸ್ತ್ರ ಮತ್ತು ಹಣ್ಣು ಹಂಪಲು ವಿತರಣೆ ಮಾಡಲಾಗಿದೆ. ಇದನ್ನೂ ಓದಿ: ಪ್ರಧಾನಿ ಮೋದಿಯಿಂದ ಪೌರಕಾರ್ಮಿಕರ ಪಾದಪೂಜೆ – ವಿಡಿಯೋ ನೋಡಿ

    ಭಾನುವಾರ ಪ್ರಧಾನಿ ಮೋದಿ ಉತ್ತರಪ್ರದೇಶದ ಪ್ರಯಾಗ್ ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಭಾಗಿಯಾಗಿದ್ದರು. ಹಣೆಗೆ ವಿಭೂತಿ ಹಚ್ಚಿಕೊಂಡು, ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು 5 ಜನ ಪೌರಕಾರ್ಮಿಕರ ಪಾದಕ್ಕೆ ನೀರು ಹಾಕಿ ತೊಳೆದು, ಕರವಸ್ತ್ರದಿಂದ ಸ್ವಚ್ಛಗೊಳಿಸಿದ್ದರು. ಪಾದಪೂಜೆಯ ಬಳಿಕ ಅವರಿಗೆ ಶಾಲು ಹೊದಿಸಿ ಕೈಮುಗಿದು ಧನ್ಯವಾದ ತಿಳಿಸಿದ್ದರು. ಪಾದಪೂಜೆ ಕಾರ್ಯಕ್ರಮಕ್ಕೂ ಮುನ್ನ ಪ್ರಧಾನಿ ಮೋದಿ ಅವರು ತ್ರಿವೇಣಿ ಸಂಗಮಕ್ಕೆ ತೆರಳಿ ಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದ್ದರು. ಬಳಿಕ ಸ್ವಚ್ಛ ಕುಂಭ್ – ಸ್ವಚ್ಛ ಆಭಾರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಾನು ತೆಲುಗಿನವಳಲ್ಲ, ಕನ್ನಡದವಳು: ಅನಿತಾ ಕುಮಾರಸ್ವಾಮಿ

    ನಾನು ತೆಲುಗಿನವಳಲ್ಲ, ಕನ್ನಡದವಳು: ಅನಿತಾ ಕುಮಾರಸ್ವಾಮಿ

    ಬೆಂಗಳೂರು: ನಾನು ತೆಲುಗಿನವಳಲ್ಲ, ಕನ್ನಡದವಳು ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಸ್ಪಷ್ಟನೆ ನೀಡಿದ್ದಾರೆ.

    ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಕೆಲವು ಮಾಧ್ಯಮಗಳಲ್ಲಿ ನಾನು ತೆಲುಗಿನವಳು ಎಂದು ತೋರಿಸುತ್ತಿದ್ದಾರೆ. ಅದು ಸಿನಿಮಾ ವಿಚಾರದಲ್ಲಿ ಮಾತಾನಾಡಿರುವುದು. ನಾನು ಕನ್ನಡದವಳು. ನನಗೆ ತೆಲುಗು ಒಂದು ವರ್ಡ್ ಬರಲ್ಲ. ನಾನು ಮೂಲತಃ ಕೋಲಾರ, ಚಿಕ್ಕಬಳ್ಳಾಪುರದವಳು. ಕೋಲಾರ ಹಾಗೂ ಚಿಕ್ಕಬಳ್ಳಾಪುರ ಆಂಧ್ರ ಪ್ರದೇಶದ ಗಡಿಭಾಗದಲ್ಲಿ ಇರುವುದರ ಕಾರಣ ಅಲ್ಲಿ ತೆಲುಗಿನವರು ಇದ್ದಾರೆ. ಹಾಗಂತ ನಾನು ತೆಲುಗಿನವಳಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

    ಶ್ರೀಕಂಠೇಗೌಡ ಸುಮಲತಾ ಬಗ್ಗೆ ಹೇಳಿಕೆ ಕೊಟ್ಟ ಬಗ್ಗೆ ನಾನು ಪ್ರತಿಕ್ರಿಯೆ ಕೊಡಲ್ಲ. ನಾನು ಮಾತ್ರ ಕನ್ನಡದವಳು. ನನಗೂ ತೆಲುಗಿಗೂ ಸಂಬಂಧ ಇಲ್ಲ. ಅಲ್ಲಿ ಭಾಷೆ ಮಾತಾನಾಡಬಹುದು. ಕುಮಾರಸ್ವಾಮಿ ಸಿನಿಮಾ ವಿಚಾರದ ಬಗ್ಗೆ ಮಾತಾನಾಡುವಾಗ ಹೇಳಿರಬಹುದು. ಇದಕ್ಕೆ ರಾಜಕೀಯ ಬೆರೆಸಬೇಡಿ ಎಂದು ಅನಿತಾ ಕುಮಾರಸ್ವಾಮಿ ಅವರು ಹೇಳಿದ್ದಾರೆ.

    ಯಡಿಯೂರಪ್ಪ ಅವರು ಮೂರು ನಾಲ್ಕು ದಿನ ಸಿಎಂ ಆಗಿ ಕುರ್ಚಿ ಕೈತಪ್ಪಿ ಹೋಗಿದ್ದರಿಂದ ತಬ್ಬಿಬ್ಬು ಆಗಿದ್ದಾರೆ. ಅದಕ್ಕೆ ಕೊನೆ ಕ್ಷಣದ ಯತ್ನ ಮಾಡುತ್ತಿದ್ದಾರೆ. ಇದೇ ವೇಳೆ ಬಜೆಟ್ ಬಗ್ಗೆ ಮಾತನಾಡಿದ ಅವರು ಬಜೆಟ್ ಚೆನ್ನಾಗಿ ಇರುತ್ತೆ. ಮಹಿಳೆ, ಯುವಕರ, ಬಡವರ ಪರ ಬಜೆಟ್ ಇರಲಿ ಎಂದು ಸಿಎಂಗೆ ಸಲಹೆ ಕೊಟ್ಟಿದ್ದೇನೆ ಎಂದು ನಗುತ್ತಾ ಅನಿತಾ ಅವರು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಎಸ್‍ವೈ ಡಾಕ್ಟರ್ ಅಲ್ಲ, ಕಾಂಗ್ರೆಸ್‌ನಲ್ಲಿ ಯಾರೂ ಪೇಷಂಟ್‍ಗಳಿಲ್ಲ: ಸಚಿವ ವೆಂಕಟರಮಣಪ್ಪ

    ಬಿಎಸ್‍ವೈ ಡಾಕ್ಟರ್ ಅಲ್ಲ, ಕಾಂಗ್ರೆಸ್‌ನಲ್ಲಿ ಯಾರೂ ಪೇಷಂಟ್‍ಗಳಿಲ್ಲ: ಸಚಿವ ವೆಂಕಟರಮಣಪ್ಪ

    ಚಿತ್ರದುರ್ಗ: ಮಾಜಿ ಸಿಎಂ ಯಡಿಯೂರಪ್ಪ ಡಾಕ್ಟರ್ ಅಲ್ಲ, ಕಾಂಗ್ರೆಸ್‌ನಲ್ಲಿ ಯಾರೂ ಪೇಷಂಟ್‍ಗಳಿಲ್ಲ. ಹೀಗಾಗಿ ಆಪರೇಷನ್ ಕಮಲ ನಡೆಯೋದಿಲ್ಲ ಎಂದು ಕಾರ್ಮಿಕ ಸಚಿವ ವೆಂಕಟರಮಣಪ್ಪ ವ್ಯಂಗ್ಯವಾಡಿದ್ದಾರೆ.

    ಜಿಲ್ಲಾಪಂಚಾಯತ್ ಕಛೇರಿಯಲ್ಲಿ ಗಣರಾಜ್ಯೋತ್ಸವ ಆಚರಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಯಾವುದೇ ಕಾರಣಕ್ಕೂ ಆಪರೇಷನ್ ಕಮಲ ನಡೆಯಲ್ಲ. ನಮ್ಮ ಶಾಸಕರೆಲ್ಲ ದೇವಸ್ಥಾನಗಳಿಗೆ ಪ್ರವಾಸ ಹೋಗಿದ್ದರು ಅಷ್ಟೇ. ಬಿಜೆಪಿಯಿಂದ ಆಪರೇಷನ್ ಕಮಲ ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

    ಬಳಿಕ ವಿಧಾನಸೌಧದಲ್ಲಿ ಸಚಿವ ಪುಟ್ಟರಂಗಶೆಟ್ಟಿ ಕಚೇರಿಯಲ್ಲಿ ನಡೆದ ಲಂಚ ಪ್ರಕರಣದ ಬಗ್ಗೆ ಮಾತನಾಡಿದ ಅವರು ಅದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ನಮ್ಮ ಕಚೇರಿಯ ಒಳಗೆ ಈ ಘಟನೆ ಆಗಿದ್ದರೆ, ನಾನು ಅದಕ್ಕೆ ಉತ್ತರಿಸುತ್ತಿದ್ದೆ. ಆದರೆ ಈ ಬಗ್ಗೆ ತನಿಖೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಚಿತ್ರದುರ್ಗ ಜಿಲ್ಲಾಪಂಚಾಯತ್ ಸದಸ್ಯ ಯೋಗೀಶ್ ಬಾಬು ಹೆಸರು ಕೂಡ ಕೇಳಿ ಬಂದಿದೆ. ಒಂದು ವೇಳೆ ಆ ಆರೋಪ ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನಾನೇ ಒತ್ತಾಯಿಸುತ್ತೇನೆ ಎಂದರು.

    ಅಲ್ಲದೇ ರೆಸಾರ್ಟ್ ರಾಜಕೀಯದ ಬಗ್ಗೆ ಸಹ ಪ್ರತಿಕ್ರಿಯಿಸಿದ ಸಚಿವರು, ರೆಸಾರ್ಟ್ ನಲ್ಲಿ ಕಿತ್ತಾಡಿರುವ ಶಾಸಕ ಗಣೇಶ್ ನನ್ನು ಪಕ್ಷದಿಂದ ಈಗಾಗಲೇ ಅಮಾನತುಗೊಳಿಸಲಾಗಿದೆ. ಅದು ಅವರ ವೈಯಕ್ತಿಕ ದ್ವೇಷದಿಂದ ಗಲಾಟೆ ನಡೆದಿದೆ. ಹೀಗಾಗಿ ಈ ಗಲಾಟೆ ಕುರಿತು ವಿಚಾರಣೆ ನಡೆಸಲು ಸಮಿತಿಯೊಂದನ್ನು ರಚಿಸಲಾಗಿದೆ. ಆ ಸಮಿತಿಯ ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಪಕ್ಷ ಕ್ರಮ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಜಾಪ್ರಭುತ್ವದಲ್ಲಿ ಇಷ್ಟು ಕೀಳುಮಟ್ಟದ ರಾಜಕೀಯ ಮಾಡೋದು ಸರಿಯಲ್ಲ: ಬಿಎಸ್‍ವೈ ವಿರುದ್ಧ ಪರಂ ಕಿಡಿ

    ಪ್ರಜಾಪ್ರಭುತ್ವದಲ್ಲಿ ಇಷ್ಟು ಕೀಳುಮಟ್ಟದ ರಾಜಕೀಯ ಮಾಡೋದು ಸರಿಯಲ್ಲ: ಬಿಎಸ್‍ವೈ ವಿರುದ್ಧ ಪರಂ ಕಿಡಿ

    ಬೆಂಗಳೂರು: ಬಿ.ಎಸ್ ಯಡಿಯೂರಪ್ಪ ಅವರು ಇಷ್ಟು ಕೀಳುಮಟ್ಟದ ರಾಜಕೀಯ ಮಾಡುವುದು ಸರಿಯಲ್ಲ ಎಂದು ಡಿಸಿಎಂ ಜಿ. ಪರಮೇಶ್ವರ್ ವಾಗ್ದಾಳಿ ನಡೆಸಿದ್ದಾರೆ.

    ಸಿದ್ದರಾಮಯ್ಯನವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ನಾವು ಇನ್ನೂ ಯಾವುದೇ ಅಜೆಂಡಾ ಮಾಡಿಕೊಂಡಿಲ್ಲ. ಆದರೆ ಮುಂದಿನ ಲೋಕಸಭೆ ಚುನಾವಣೆಯ ತಯಾರಿಗಾಗಿ ಹಾಗೂ ಅವರವರ ಕ್ಷೇತ್ರದ ತಯಾರಿ ಬಗ್ಗೆ ಚರ್ಚೆ ಮಾಡುತ್ತೇವೆ. ಇದರ ಜೊತೆಗೆ ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ಮಾಡುತ್ತೇವೆ. ನಮ್ಮ ಶಾಸಕರ ಜೊತೆ ನಾವು ಮಾತನಾಡಿದ್ದೇವೆ. ಎಲ್ಲರೂ ಸಭೆಗೆ ಬರುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.

    ಸಿಎಲ್‍ಪಿ ಸಭೆಯಲ್ಲಿ ಕಾಂಗ್ರೆಸ್ ಬಣ್ಣ ಬಯಲಾಗುತ್ತೆ ಎಂಬ ಯಡಿಯೂರಪ್ಪ ಹೇಳಿಕೆಗೆ ಪರಮೇಶ್ವರ್ ಟಾಂಗ್ ಕೊಟ್ಟಿದ್ದಾರೆ. ಪಾಪ ಯಡಿಯೂರಪ್ಪ ಅವರನ್ನು ಭಾರತೀಯ ಜನತಾ ಪಾರ್ಟಿಯ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಅಲ್ಲ. ಅವರು ತಮ್ಮ ಪಕ್ಷದ ಶಾಸಕರನ್ನು ನೋಡಿಕೊಳ್ಳಲಿ. ಬಿಎಸ್‍ವೈ ಅವರು ತಮ್ಮ ಶಾಸಕರನ್ನು ಕರೆದುಕೊಂಡು ಹೋಗಿ ಎಲ್ಲಿಯೋ ಇಟ್ಟಿದ್ದಾರೆ. ಅವರಿಗೆ ನಮ್ಮ ಪಕ್ಷದ ಶಾಸಕರ ಚಿಂತೆ ಬೇಡ ಎಂದರು.

    ಬೆಜೆಪಿಯವರು ನಮ್ಮ ಶಾಸಕರನ್ನು ಸೆಳೆಯುವ ಕೆಲಸ ಮಾಡಿದ್ದರು ಹಾಗೂ ಮಾಡುತ್ತಲೇ ಇದ್ದಾರೆ. ಅದರಲ್ಲಿ ಅವರು ಯಶಸ್ವಿಯಾಗಲ್ಲ ಎಂದು ನಾವು ಹೇಳುತ್ತಿದ್ದರೂ ಅವರಿಗೆ ಅದು ಅರ್ಥವಾಗುತ್ತಿಲ್ಲ. ಅವರು ಮಾತ್ರ ಇನ್ನೂ ಬಹಳ ಆಸೆ ಇಟ್ಟುಕೊಂಡಿದ್ದಾರೆ ಎಂದು ಪ್ರತಿಕ್ರಿಯಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆ ಯಡಿಯೂರಪ್ಪಗೆ 76-77 ವರ್ಷ ವಯಸ್ಸಾಗಿದೆ ಇನ್ನೂ ಬುದ್ಧಿ ಬಂದಿಲ್ಲ: ಸಿದ್ದರಾಮಯ್ಯ

    ಆ ಯಡಿಯೂರಪ್ಪಗೆ 76-77 ವರ್ಷ ವಯಸ್ಸಾಗಿದೆ ಇನ್ನೂ ಬುದ್ಧಿ ಬಂದಿಲ್ಲ: ಸಿದ್ದರಾಮಯ್ಯ

    ಚಿಕ್ಕಮಗಳೂರು: ಬಿಜೆಪಿಯವರು ಅತ್ಯಂತ ಮಾನಗೆಟ್ಟವರು, ಲಜ್ಜೆಗೆಟ್ಟವರು. ಆ ಯಡಿಯೂರಪ್ಪಗೆ 76-77 ವರ್ಷ ವಯಸ್ಸಾಗಿದೆ ಇನ್ನೂ ಬುದ್ಧಿ ಬಂದಿಲ್ಲ ಎಂದು ಹೇಳಿ ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

    ಕಡೂರಿನಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಕಳೆದ 6 ತಿಂಗಳಿನಿಂದ ಸರ್ಕಾರ ಅಭದ್ರಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿಯವರು ನಮ್ಮ ಶಾಸಕರಿಗೆ ಕೋಟ್ಯಂತರ ರೂಪಾಯಿ ಆಫರ್ ನೀಡಿದ್ದಾರೆ. ಅವರ ಶಾಸಕರನ್ನು ರೆಸಾರ್ಟ್ ನಲ್ಲಿ ಕೂಡಿ ಹಾಕಿದ್ದಾರೆ. ನಾಳೆ ಸರ್ಕಾರ ಮಾಡುತ್ತೇವೆ, ನಾಡಿದ್ದು ಸರ್ಕಾರ ಮಾಡುತ್ತೇವೆ ಎಂದು ಹೇಳುತ್ತಾರೆ. ಆದರೆ ಎಲ್ಲಾ ಬರೀ ಸುಳ್ಳು, ದಯವಿಟ್ಟು ಅವರು ಏನೇ ಹೇಳಿದರೂ ಅದೆಲ್ಲಾ ಸುಳ್ಳೆಂದು ಪ್ರಚಾರ ಮಾಡಿ ಎಂದರು.

    ಬಿಜೆಪಿಯವರಿಗೆ ಪ್ರಜಾಪ್ರಭುತ್ವ ಹಾಗೂ ಸಂವಿಧಾನದಲ್ಲಿ ನಂಬಿಕೆ ಇಲ್ಲ. ಜನ ವಿರೋಧ ಪಕ್ಷದಲ್ಲಿ ಕೂರುವಂತೆ ಹೇಳಿದ್ದಾರೆ. ಅಧಿಕಾರ ಮಾಡಲು ತೀರ್ಪು ನೀಡಿಲ್ಲ. ಆದರೆ ವಾಮಮಾರ್ಗದಲ್ಲಿ ಅಧಿಕಾರ ಹಿಡಿಯಲು ಬರುತ್ತಿದ್ದಾರೆ. ಸರ್ಕಾರವನ್ನು ಅಭದ್ರಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಡಿ.19ರ ಬಳಿಕ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆ-ಸಿಎಂಗೆ ಕಾದಿದೆ ಮುಳ್ಳಿನ ಹಾಸಿಗೆ

    ಡಿ.19ರ ಬಳಿಕ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆ-ಸಿಎಂಗೆ ಕಾದಿದೆ ಮುಳ್ಳಿನ ಹಾಸಿಗೆ

    ರಾಯಚೂರು: ಗುರು ಬದಲಾವಣೆಯಿಂದ ಡಿಸೆಂಬರ್ 19ರ ಬಳಿಕ ರಾಜ್ಯ ರಾಜಕಾರಣದಲ್ಲಿ ಮಹಾ ಬದಲಾವಣೆಯಾಗಲಿದೆ ಅಂತ ರಾಜಗುರು ಬೆಳ್ಳೂರು ಶಂಕರನಾರಾಯಣ ದ್ವಾರಕನಾಥ ಗುರೂಜಿ ಭವಿಷ್ಯ ನುಡಿದಿದ್ದಾರೆ.

    ಸಿಎಂ ಕುಮಾರಸ್ವಾಮಿ ಗೆ ಗುರು ಬದಲಾವಣೆಯಿಂದ ಬಾರಿ ಕಂಟಕ ಕಾದಿದ್ದು ಮುಂದಿನದ್ದು ಮುಳ್ಳಿನ ಹಾದಿ ಅಂತ ಗುರೂಜಿ ಹೇಳಿದ್ದಾರೆ. ಮಾರ್ಚ್ 27 ರವರೆಗೆ ಸಿಎಂ ತುಂಬಾ ಎಚ್ಚರವಾಗಿರಲೇ ಬೇಕು. ಇಲ್ಲದಿದ್ದರೇ ಭಾರೀ ಬದಲಾವಣೆಯಾಗುವ ಸಾಧ್ಯತೆಯಿದೆ. ಕುಮಾರಸ್ವಾಮಿ ಮಾತಿನ ಮೇಲೆ ನಿಗಾ ಇರಬೇಕು. ಎಲ್ಲದಕ್ಕೂ ಪ್ರತಿಕ್ರಿಯಿಸುತ್ತಾ ಹೋದರೆ ಸಿಎಂ ಖುರ್ಚಿಗೆ ಕಂಟಕ. ಉತ್ತಮ ಕುಟುಂಬದಿಂದ ಬಂದಿರುವ ಕುಮಾರಸ್ವಾಮಿಗೆ ಇನ್ನೂ ಶನಿ ಕಂಟಕ ಇದೆ ಅಂತ ಗುರೂಜಿ ಹೇಳಿದ್ದಾರೆ.

    ಬಿಎಸ್‍ವೈ ಸೇಫ್:
    ಡಿಸೆಂಬರ್ 19ರ ಬಳಿಕ ಮೋದಿಗೆ ಸಮಯ ಸರಿಯಿಲ್ಲ, ರಾಷ್ಟ್ರ ರಾಜಕಾರಣದಲ್ಲೂ ದೊಡ್ಡ ಬದಲಾವಣೆಯಿದೆ ಅಂತ ಗುರೂಜಿ ಭವಿಷ್ಯ ನುಡಿದಿದ್ದಾರೆ. ಆದ್ರೆ ಯಡಿಯೂರಪ್ಪ ನವರಿಗೆ ಗುರು ಪ್ರಭಾವ ಬೀರಲ್ಲ. ಶನಿ ದೂರವಾಗುತ್ತಿರುವುದರಿಂದ ಬಿಎಸ್‍ವೈಗೆ ಶಾಂತಿ ಜೀವನ ಲಭಿಸಲಿದೆ. ಡಿಸೆಂಬರ್ 19ರ ಬಳಿಕ ಯಡಿಯೂರಪ್ಪ ನವರ ಚಿಂತೆಗಳು ಕಡಿಮೆಯಾಗುತ್ತವೆ. ಈಗಾಗಲೇ ಸಾಕಷ್ಟು ಕಷ್ಟಗಳನ್ನ ಅನುಭವಿಸಿರುವ ಬಿಎಸ್‍ವೈ ಗೆ ಉತ್ತಮ ದಿನಗಳು ಎದುರಾಗಲಿವೆ ಎಂದಿದ್ದಾರೆ.

    ಡಿಕೆಶಿ ಸಿಎಂ ಆಗೋದು ಪಕ್ಕಾ:
    ಶನಿಯ ಕಾಟವೂ ಇಲ್ಲದಿರುವುದರಿಂದ ಗುರು ಬದಲಾವಣೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಗೆ ಹೆಚ್ಚು ಬಲ ತರಲಿದೆ. ಮುಂದೆ ಡಿಕೆಶಿ ಸಿಎಂ ಆಗುವುದರಲ್ಲಿ ಅನುಮಾನವಿಲ್ಲ. ಗುರು ಬಲ ಹೆಚ್ಚುವುದರಿಂದ ಡಿ.ಕೆ.ಶಿವಕುಮಾರ್ ಎಷ್ಟೇ ಕಷ್ಟ ಬಂದರೂ ಎಲ್ಲಾ ಕಷ್ಟ ಎದುರಿಸುತ್ತಾರೆ. ತಮ್ಮ ಮಾತಿನ ಶೈಲಿ, ವರ್ತನೆಯನ್ನು ಅವರು ಬದಲಾಯಿಸಿಕೊಳ್ಳಬೇಕಿದೆ. ಗುರು ಬದಲಾವಣೆ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದ ಇದ್ದರೆ ಯಾವ ಕೆಡುಕು ಉಂಟಾಗಲ್ಲ. ಡಿಕೆ ಶಿವಕುಮಾರ್ ಉಚ್ಛ ಸ್ಥಾಯಿಗೆ ಏರುತ್ತಾರೆ ಅನ್ನೋ ನನ್ನ ಮಾತು ಸುಳ್ಳಾಗಲ್ಲ. ಡಿಕೆಶಿ ವಿಚಾರದಲ್ಲಿ ನನ್ನ ಮೇಲೂ ಶೋಧ ನಡೆಯಿತು. ಗುರು ಬಲ ಚೆನ್ನಾಗಿರುವುದರಿಂದ ಎಂದೂ ಕೆಡುಕಾಗಲ್ಲ ಅಂತ ದ್ವಾರಕನಾಥ್ ಗುರೂಜಿ ತಿಳಿಸಿದರು.

    ಗುರು ಪ್ರಭಾವ ಏನೆಲ್ಲಾ ಬೀರಿದೆ?
    ಗುರು ಬದಲಾವಣೆ ಪರಿಣಾಮವಾಗಿ ಕೆಲ ಸಚಿವರ ವರ್ತನೆ ಬದಲಾಗಿದೆ. ಸಚಿವರು ಅಥವಾ ಕಾಂಗ್ರೆಸ್ ನ ಕೆಲ ಮುಖಂಡರಿಂದ ಸರ್ಕಾರಕ್ಕೆ ತೊಂದರೆಯಿದೆ. ಸಿಎಂ ಕುಮಾರಸ್ವಾಮಿ ತುಂಬಾ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಸಿಎಂ ಸ್ಥಾನ ಕಳೆದುಕೊಳ್ಳುತ್ತಾರೆ ಅಂತ ನಾನು ನೇರವಾಗಿ ಹೇಳುವುದಿಲ್ಲ. ಬದಲಾವಣೆಗಳ ಬಗ್ಗೆ ತುಂಬಾ ಎಚ್ಚರ ವಹಿಸಲೇ ಬೇಕು. ಡಿಸೆಂಬರ್ 19 ರಾಜ್ಯ ರಾಜಕಾರಣದ ಮಹತ್ವದ ದಿನ ಅಂತ ದ್ವಾರಕನಾಥ್ ಗುರೂಜಿ ಭವಿಷ್ಯ ನುಡಿದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿ.ಸಿ ಪಾಟೀಲಣ್ಣ ಬಿಜೆಪಿ ಸೇರಣ್ಣ, ಬಿಎಸ್‍ವೈ ಜೊತೆಗಿರಣ್ಣ: ಯಡಿಯೂರಪ್ಪ ಅಭಿಮಾನಿ

    ಬಿ.ಸಿ ಪಾಟೀಲಣ್ಣ ಬಿಜೆಪಿ ಸೇರಣ್ಣ, ಬಿಎಸ್‍ವೈ ಜೊತೆಗಿರಣ್ಣ: ಯಡಿಯೂರಪ್ಪ ಅಭಿಮಾನಿ

    ಚಿತ್ರದುರ್ಗ: ಬಿ.ಸಿ ಪಾಟೀಲಣ್ಣ ಬಿಜೆಪಿ ಸೇರಣ್ಣ, ಬಿಎಸ್‍ವೈ ಜೊತೆಗಿರಣ್ಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ಅಭಿಮಾನಿಗಳು ಹಿರೇಕೆರೂರಿನ ಕಾಂಗ್ರೆಸ್ ಶಾಸಕ ಬಿ.ಸಿ. ಪಾಟೀಲ್ ಕಾರು ಅಡ್ಡಗಟ್ಟಿ ಪಕ್ಷಕ್ಕೆ ಆಹ್ವಾನಿಸಿದ್ದಾರೆ.

    ಭಾನುವಾರ ರಾತ್ರಿ ಚಿತ್ರದುರ್ಗದ ಸಿರಿಗೆರೆ ಗ್ರಾಮದಲ್ಲಿ ನಡೆದ ತರಳುಬಾಳು ಮಠದ ಶಿವಕುಮಾರ ಶ್ರೀಗಳ 26ನೇ ಶ್ರದ್ಧಾಂಜಲಿ ಸಮಾರಂಭ ಮುಗಿಸಿಕೊಂಡು ಹೊರಟ ಕಾಂಗ್ರೆಸ್‍ನ ಅಸಮಾಧಾನಿತ ಶಾಸಕರೆಂದೇ ಗುರುತಿಸಿಕೊಂಡಿರುವ ಶಾಸಕ ಬಿ.ಸಿ ಪಾಟೀಲ್ ಅವರ ಕಾರನ್ನು ಬಿಎಸ್‍ವೈ ಅಭಿಮಾನಿಗಳು ತಡೆದು ನಿಲ್ಲಿಸಿದ್ದಾರೆ.

    ಬಿಎಸ್ ವೈ ಅಭಿಮಾನಿಗಳು ಬಿ.ಸಿ ಪಾಟೀಲ್ ಅವರನ್ನು ಬಿಜೆಪಿ ಪಕ್ಷ ಸೇರುವಂತೆ ಬೆನ್ನು ಬಿದ್ದು ಬೇಡಿದರು. ಅಲ್ಲದೇ “ಅಣ್ಣ ಬಿಜೆಪಿ ಸೇರಣ್ಣ. ಯಡಿಯೂರಪ್ಪ ಜೊತೆಗಿರಣ್ಣ ಎಂದು ಹೇಳುತ್ತಾ ‘ಯಡಿಯೂರಪ್ಪಗೆ ಜೈ, ಬಿ.ಸಿ ಪಾಟೀಲ್‍ಗೆ ಜೈ’ ಎಂದು ಘೋಷಣೆ ಕೂಗಿದರು.

    ಈ ವೇಳೆ ಬಿಜೆಪಿ ಅಭಿಮಾನಿಗಳ ಒತ್ತಾಯದಿಂದ ಕಸಿವಿಸಿಗೊಂಡ ಬಿ.ಸಿ ಪಾಟೀಲ್ ಏನೂ ಮಾತನಾಡದೇ ಕಾರಿನಲ್ಲಿ ತೆರಳಿದರು. ಈ ವೇಳೆ ಶಾಸಕರ ಕಾರನ್ನು ಮುತ್ತಿಕೊಂಡ ಜನರನ್ನು ನಿಭಾಯಿಸಲು ಪೊಲೀಸರು ಹರ ಸಾಹಸಪಡಬೇಕಾಯಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಯಡಿಯೂರಪ್ಪ ಅವರ ಫೇಸ್ ವ್ಯಾಲ್ಯೂ ಕಡಿಮೆ ಆಗಿದೆ- ಸಚಿವ ಎಂ.ಸಿ ಮನಗೂಳಿ

    ಯಡಿಯೂರಪ್ಪ ಅವರ ಫೇಸ್ ವ್ಯಾಲ್ಯೂ ಕಡಿಮೆ ಆಗಿದೆ- ಸಚಿವ ಎಂ.ಸಿ ಮನಗೂಳಿ

    ಚಿಕ್ಕಬಳ್ಳಾಪುರ: ಯಡಿಯೂರಪ್ಪಗೆ ಈ ಮೊದಲು ಇದ್ದ ಹುರುಪು, ಉತ್ಸಾಹ ತಿರುಗಾಟ ಇಲ್ಲ. ಬಿಎಸ್‍ವೈ ಫೇಸ್ ವ್ಯಾಲ್ಯೂ ಕಡಿಮೆಯಾಗಿದೆ ಎಂದು ತೋಟಗಾರಿಕಾ ಸಚಿವ ಎಂ.ಸಿ ಮನಗೂಳಿ ಹೇಳಿದ್ದಾರೆ.

    ನಂದಿಗಿರಿಧಾಮಕ್ಕೆ ಭೇಟಿ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು 10-12 ಜನ ಶಾಸಕರನ್ನು ಸೆಳೆದು ಆಪರೇಷನ್ ಕಮಲ ಮಾಡಿ ಸಮ್ಮಿಶ್ರ ಸರ್ಕಾರ ಉರುಳಿಸಲು ಯಡಿಯೂರಪ್ಪ ಪ್ರಯತ್ನಿಸಿದ್ದರು. ಆದರೆ ಬಿಜೆಪಿಯವರು ಕರೆದರೆ ಕಾಂಗ್ರೆಸ್‍ನವರು, ಜೆಡಿಎಸ್‍ನವರು ಯಾರೂ ಹೋಗಲಿಲ್ಲ ಎಂದರು.

    ಬಿಜೆಪಿ ನಾಯಕರು ನನ್ನನ್ನು ಸಂಪರ್ಕಿಸಿಲ್ಲ. ನಾವು ಯಾರೂ ಹೋಗುವುದಿಲ್ಲ. ಯಡಿಯೂರಪ್ಪ ಅವರ ಫೇಸ್ ವ್ಯಾಲ್ಯೂ ಕಡಿಮೆ ಆಗಿದೆ. ಅವರು ಮೀಟಿಂಗ್ ಮಾಡುವುದನ್ನು ಕಡಿಮೆ ಮಾಡಿದ್ದಾರೆ. ಅವರಿಗೆ ಹೈಕಮಾಂಡ್‍ಗಳಾದ ಮೋದಿ ಅಮಿತ್ ಶಾ ಅವರು ಏನು ಹೇಳಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಈಗ ಯಡಿಯೂರಪ್ಪ ಅವರ ಹೋರಾಟ ಕಡಿಮೆ ಆಗಿದೆ. ಸದ್ಯ ಈಗ ಯಾವೊಬ್ಬ ಶಾಸಕ ಬಿಜೆಪಿಗೆ ಹೋಗುತ್ತಿಲ್ಲ ಎಂದು ಸಚಿವ ಎಂ.ಸಿ ಮನಗೂಳಿ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಧ್ಯರಾತ್ರಿ ಬೆಂಗ್ಳೂರಿಗೆ ಧಾವಿಸಿದ ಹೆಚ್‍ಡಿಕೆ- ಬಿಜೆಪಿ ನಾಯಕರು ಇರೋ ಹೋಟೆಲ್‍ನಲ್ಲೇ ವಾಸ್ತವ್ಯ!

    ಮಧ್ಯರಾತ್ರಿ ಬೆಂಗ್ಳೂರಿಗೆ ಧಾವಿಸಿದ ಹೆಚ್‍ಡಿಕೆ- ಬಿಜೆಪಿ ನಾಯಕರು ಇರೋ ಹೋಟೆಲ್‍ನಲ್ಲೇ ವಾಸ್ತವ್ಯ!

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಿಡ್‍ನೈಟ್ ಪೊಲಿಟಿಕಲ್ ಡ್ರಾಮಾ ನಡೆದಿದೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ವಾಸ್ತವ್ಯ ಹೂಡಿರುವ ಹೋಟೆಲ್ ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿಕೆ ಭೇಟಿ ನೀಡಿದ್ದಾರೆ.

    ನಗರದ ತಾಜ್ ವೆಸ್ಟಂಡ್ ಹೋಟೆಲ್ ಗೆ ಕುಮಾರಸ್ವಾಮಿ ಭೇಟಿ ನೀಡಿದ್ದಾರೆ. ಶ್ಯಾಂಗ್ರಿಲಾ ಹೋಟೆಲ್ ನಲ್ಲಿ ಬಿಜೆಪಿ ನಾಯಕರ ಜೊತೆ ರಾತ್ರಿ 10.20ರ ಸುಮಾರಿಗೆ ಸಭೆ ನಡೆಸಿದ ಬಳಿಕ ತಾಜ್ ವೆಸ್ಟಂಡ್ ಹೋಟೆಲ್ ಗೆ ಬಿಎಸ್ ವೈ ಬಂದಿದ್ದಾರೆ. ಇದಾದ ಬಳಿಕ ಮಧ್ಯರಾತ್ರಿ 2 ಗಂಟೆಗೆ ಸರಿಯಾಗಿ ಹೆಚ್. ಡಿ ಕುಮಾರಸ್ವಾಮಿ ಹೋಟೆಲ್ ಗೆ ಆಗಮಿಸಿದ್ದಾರೆ.

    ಅಲ್ಲದೇ ಯಡಿಯೂರಪ್ಪ ವಾಸ್ತವ್ಯ ಹೂಡಿರುವ ಹೋಟೆಲ್ ನಲ್ಲೇ ಕುಮಾರಸ್ವಾಮಿ ಕೂಡ ವಾಸ್ತವ್ಯ ಹೂಡಿದ್ದಾರೆ. ಉಭಯ ಪಕ್ಷಗಳ ನಾಯಕರು ಒಂದೇ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿರುವುದು ಇದೀಗ ತೀವ್ರ ಕುತೂಹಲ ಮೂಡಿಸಿದೆ.

    ತಾಜ್ ವೆಸ್ಟಂಡ್ ಹೋಟೆಲ್ ನಲ್ಲಿ ಬಿಜೆಪಿ ನಾಯಕರಾದ ಪ್ರಕಾಶ್ ಜಾವ್ಡೇಕರ್, ಜೆ.ಪಿ ನಡ್ಡಾ, ಸಭಾ ಪತಿ ಬೋಪಯ್ಯ ಇದ್ದಾರೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ತಾಜ್ ವೆಸ್ಟಂಡ್ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಆದರೆ ಕುಮಾರಸ್ವಾಮಿ ಕಳೆದ ಮೂರು ದಿನಗಳಿಂದ ತಾಜ್ ವೆಸ್ಟಂಡ್ ಹೋಟೆಲ್ ನಲ್ಲೆ ವಾಸ್ತವ್ಯ ಹೂಡಿದ್ದಾರೆ ಅನ್ನೋ ಮಾತುಗಳು ಕೂಡ ಕೇಳಿ ಬರುತ್ತಿದೆ.