Tag: Yedyurappa

  • ವಲಸಿಗರ ಅಸಮಾಧಾನ ಸ್ಫೋಟ – ಅಂತರ ಕಾಯ್ದುಕೊಂಡ ಮಾಧುಸ್ವಾಮಿ

    ವಲಸಿಗರ ಅಸಮಾಧಾನ ಸ್ಫೋಟ – ಅಂತರ ಕಾಯ್ದುಕೊಂಡ ಮಾಧುಸ್ವಾಮಿ

    ಬೆಂಗಳೂರು: ಖಾತೆ ಹಂಚಿಕೆ ವಿಚಾರದಲ್ಲಿ ವಲಸಿಗ ಶಾಸಕರ ಅಸಮಾಧಾನ ಬಹಿರಂಗವಾಗಿದೆ. ಸಿಎಂ ನಿವಾಸದಲ್ಲಿ ನಡೆದ ಸಭೆಯಲ್ಲಿ ಸಂಧಾನ ಸಕ್ಸಸ್ ಆಗಿದೆ ಎಂದು ಪರಿಭಾವಿಸಿದರೂ ಸಂಪುಟ ಸಭೆಯಲ್ಲಿ ಗೋಚರವಾಗಿದೆ.

    ಸಚಿವ ಅಶೋಕ್, ಬೊಮ್ಮಾಯಿ ನೇತೃತ್ವದಲ್ಲಿ ಅಸಮಾಧಾನ ಬಗೆಹರಿದಿದೆ, ಸಂಜೆ 4:30ರ ಸಂಪುಟ ಸಭೆಗೆ ಎಲ್ಲ ಸಚಿವರು ಬರುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಸಚಿವ ಮಾಧುಸ್ವಾಮಿ, ಸುಧಾಕರ್, ಎಂಟಿಬಿ ನಾಗರಾಜ್ ಹಾಗೂ ಗೋಪಾಲಯ್ಯ ಗೈರು ಹಾಜರಾಗಿದ್ದು ಅಚ್ಚರಿ ಕಾರಣವಾಯ್ತು.

    ವಿಧಾನಸೌಧದ ಮೊಗಸಾಲೆಯಲ್ಲೇ ಎಂಟಿಬಿ ಹಾಗೂ ಗೋಪಾಲಯ್ಯಗೆ ಕರೆ ಮಾಡಿದ ಅಶೋಕ್, “ನೀವು ಬರ್ತಿನಿ ಅಂತ ಒಪ್ಪಿಕೊಂಡಿದ್ದೀರಿ. ಈಗ ಬರಬೇಕು ತಾನೆ” ಹೇಳಿ ಎಂದು ಗರಂ ಆದ್ರು. ಅಶೋಕ್ ಮಾತಿಗೆ ಅತೃಪ್ತ ಸಚಿವರು ಕರಗಲೇ ಇಲ್ಲ. ಸಚಿವ ಸುಧಾಕರ್ ಅಂತೂ ದಿನಪೂರ ಮನೆಯಿಂದ ಹೊರಗಡೆ ಬರಲೇ ಇಲ್ಲ.

    ಇದಕ್ಕೂ ಮುನ್ನ, ಮುಖ್ಯಮಂತ್ರಿಗಳ ಎದುರು ಮಾತನಾಡಿದ ಎಂಟಿಬಿ ನಾಗರಾಜ್, ಎಲ್ಲರಿಗೂ ಎಣ್ಣೆ ಕುಡಿಸೋ ಪಾಪದ ಖಾತೆ ನಂಗೆ ಬೇಡ. ವಸತಿ ಖಾತೆ ಸಿಕ್ಕಿದ್ದಿದ್ರೆ ಬಡವರಿಗೆ ಸೈಟ್ ಕೊಡೋದೋ, ಸ್ಲಂ ಅಭಿವೃದ್ಧಿ ಮಾಡೋದು ಮಾಡ್ಬೋದಿತ್ತು. ಹೊಸ ಖಾತೆ ನೀಡುವವರೆಗೆ ವಿಧಾನಸೌಧಕ್ಕೆ ಕಾಲಿಡಲ್ಲ. ಸರ್ಕಾರಿ ಕಾರು ಬಳಸಲ್ಲ ಅಂತ ಶಪಥ ಮಾಡಿದ್ದಾರೆ ಎನ್ನಲಾಗಿದೆ. ಇನ್ನಿಬ್ಬರು ವಲಸಿಗ ಶಾಸಕರಾದ ಗೋಪಾಲಯ್ಯ ಹಾಗೂ ನಾರಾಯಣಗೌಡ, ನಾವೇನು ತಪ್ಪು ಮಾಡಿದ್ದೇವೆ. ನಮ್ಮ ಖಾತೆ ಬದಲಾವಣೆಗೆ ಕಾರಣ ಏನು ಅಂತ ಬೇಸರ ವ್ಯಕ್ತಪಡಿಸಿದರು.

    ಸಿಎಂನಿಂದ ಅಂತರ: ಈ ಬಾರಿ ಖಾತೆ ಹಂಚಿಕೆಯಲ್ಲಿ ಸಚಿವ ಮಾಧುಸ್ವಾಮಿ ಅವರ ಹಿಂದಿನ ಖಾತೆಗಳೇ ಹರಿದು ಹಂಚಿಕೆಯಾಗಿವೆ. ಈ ಬಗ್ಗೆ ಮಾಧುಸ್ವಾಮಿ ತೀವ್ರ ಅಸಮಾಧಾನಗೊಂಡಿದ್ದಾರೆ. ತಮ್ಮ ಬಳಿಯಿದ್ದ ಕಾನೂನು ಮತ್ತು ಸಂಸದೀಯ ವ್ಯವಹಾರ ಖಾತೆಯನ್ನು ಬೊಮ್ಮಾಯಿಗೆ, ಸಣ್ಣ ನೀರಾವರಿ ಖಾತೆಯನ್ನು ಯೋಗೇಶ್ವರ್ ಅವರಿಗೆ ನೀಡಲಾಗಿದೆ. ಇದರಿಂದ ಮಾಧುಸ್ವಾಮಿ ಕುಪಿತಗೊಂಡಿದ್ದು, ವೈದ್ಯಕೀಯ ಶಿಕ್ಷಣಕ್ಕೂ ನನಗೂ ಏನ್ ಸಂಬಂಧ? ವಿಧಾನಮಂಡಲದಲ್ಲಿ ಸರ್ಕಾರವನ್ನು ಸಮರ್ಥವಾಗಿಯೇ ಸಮರ್ಥಿಸಿಕೊಂಡರೂ ನನ್ನ ಖಾತೆಗಳ ಬದಲಾವಣೆ ಏಕೆ ಅಂತ 3 ದಿನಗಳ ಹಿಂದೆಯೇ ಅಸಮಾಧಾನ ವ್ಯಕ್ತಪಡಿಸಿದ್ದ ವಿಚಾರ ಈಗ ಪ್ರಕಟವಾಗಿದೆ.

    ಯಾವುದೇ ಕಾರಣಕ್ಕೂ ಖಾತೆ ಬದಲಾವಣೆ ಮಾಡದಂತೆ ಮನವಿ ಮಾಡಿಕೊಂಡರೂ ಖಾತೆ ಬದಲಿಸಿರೋದು ಸಿಟ್ಟಿಗೆ ಕಾರಣವಾಗಿದೆ. ಮುಖ್ಯಮಂತ್ರಿಗಳಿಂದ ಅಂತರ ಕಾಯ್ದುಕೊಂಡಿರುವ ಮಾಧುಸ್ವಾಮಿ, ಇಂದು ತುಮಕೂರಿನಲ್ಲಿ ನಡೆದ ಸಿದ್ಧಗಂಗಾ ಶ್ರೀಗಳ ಪುಣ್ಯಸ್ಮರಣೆ ಕಾರ್ಯಕ್ರಮದಿಂದ ದೂರ ಉಳಿದಿದ್ದರು.

    ಮುಖ್ಯಮಂತ್ರಿಗಳು ಕಾರ್ಯಕ್ರಮದಿಂದ ನಿರ್ಗಮಿಸುತ್ತಿದ್ದಂತೆ, ಮಾಧುಸ್ವಾಮಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ತಮ್ಮ ಅಸಮಾಧಾನ ತೋರ್ಪಡಿಸಿದರು. ಈ ಬಗ್ಗೆ ತುಮಕೂರಿನ ಸಿದ್ದಗಂಗಾ ಮಠದಲ್ಲಿ ಮಾತನಾಡಿ,”ನಂಗ್ಯಾವ ಅಸಮಾಧಾನವೂ ಇಲ್ಲ. ಖಾತೆ ಹಂಚಿಕೆ ಮಾಡೋದು ಸಿಎಂ ಪರಮಾಧಿಕಾರ. ನಮಗೆ ಕ್ಯಾಪ್ಟನ್, ಅಂಪೈರ್ ಎಲ್ಲವೂ ಚೀಫ್ ಮಿನಿಸ್ಟರ್ರೇ. ಅವರು ಯಾವುದು ಮಾಡು ಅಂತಾರೊ ಅದನ್ನ ಮಾಡ್ತೇನೆ, ನಿಭಾಯಿಸ್ತೇನೆ. ರಾಜೀನಾಮೆ ಕೊಟ್ರೆ ಮೊದಲು ಮಾಧ್ಯಮಗಳಿಗೇ ಹೇಳ್ತೇನೆ” ಎಂದು ಬೇಸರದಲ್ಲೇ ಮಾಧುಸ್ವಾಮಿ ಮಾತನಾಡಿದ್ದಾರೆ. ಮಾಧುಸ್ವಾಮಿಗೂ ಮುನ್ನ ಮಾತನಾಡಿದ್ದ ಸಿಎಂ ಯಡಿಯೂರಪ್ಪ, ಮಾಧುಸ್ವಾಮಿಯನ್ನು ಕರೆದು ಮಾತನಾಡಿಸ್ತೇನೆ ಎಂದು ಪ್ರತಿಕ್ರಿಯಿಸಿದ್ದರು.

  • ಮಾಜಿ ಸಿಎಂಗೆ ಕೊರೊನಾ – ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ

    ಮಾಜಿ ಸಿಎಂಗೆ ಕೊರೊನಾ – ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ

    ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಕೊರೊನಾ ಸೋಂಕು ಬಂದಿರುವುದು ದೃಢಪಟ್ಟಿದೆ.

    ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಸಿದ್ದರಾಮಯ್ಯ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಕೊರೊನಾ ಟೆಸ್ಟ್‌ ಮಾಡಿಸಿದ್ದು ಪಾಸಿಟಿವ್‌ ಬಂದಿದೆ.

    ಈ ಬಗ್ಗೆ ಟ್ವೀಟ್‌ ಮಾಡಿರುವ ಪುತ್ರ ಯತೀಂದ್ರ, ನಿನ್ನೆ ಬೆಳಿಗ್ಗೆಯಿಂದ ತಂದೆಯವರಿಗೆ ಜ್ವರ ಬಂದಿದ್ದು ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದರು. ಕೊರೊನಾ ಆಂಟಿಜೆನ್‌ ಟೆಸ್ಟ್‌ ಮಾಡಲಾಗಿದ್ದು ಕೊರೊನಾ ಸೋಂಕು ಬಂದಿರುವುದು ದೃಢಪಟ್ಟಿದೆ. ಇತ್ತೀಚೆಗೆ ಅವರ ಸಂಪರ್ಕಕ್ಕೆ ಬಂದವರು ಕ್ವಾರಂಟೈನ್‌ ಆಗಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ಅವರು ಹೇಳಿದ್ದಾರೆ.

    ರಾತ್ರಿ 11:30ಕ್ಕೆ ಮಣಿಪಾಲ್ ಆಸ್ಪತ್ರೆಗೆ ಸಿದ್ದರಾಮಯ್ಯ ದಾಖಲಾಗಿದ್ದಾರೆ. ಆಸ್ಪತ್ರೆಯಲ್ಲಿ ಮಗ ಡಾ.ಯತೀಂದ್ರ ಅವರು ಸಿದ್ದರಾಮಯ್ಯನವರನ್ನು ಈಗ ನೋಡಿಕೊಳ್ಳುತ್ತಿದ್ದಾರೆ.

    ಕೊರೊನಾ ಬಂದಿರುವ ಬಗ್ಗೆ ಟ್ವೀಟ್‌ ಮಾಡಿರುವ ಸಿದ್ದರಾಮಯ್ಯ, ನನ್ನ ಕೊರೊನ ಪರೀಕ್ಷೆಯಲ್ಲಿ ಪಾಸಿಟಿವ್ ಎಂದು ವರದಿ ಬಂದಿದೆ. ರೋಗ ಲಕ್ಷಣಗಳಿಲ್ಲದಿದ್ದರೂ ವೈದ್ಯರ ಸಲಹೆಯಂತೆ ನಿನ್ನೆ ರಾತ್ರಿಯೇ ಆಸ್ಪತ್ರೆಗೆ ದಾಖಲಾಗಿದ್ದೇನೆ. ಆತಂಕಕ್ಕೆ ಕಾರಣ ಇಲ್ಲ. ಕಳೆದ ಕೆಲವು ದಿನಗಳಿಂದ ನನ್ನ ಜೊತೆ ಸಂಪರ್ಕದಲ್ಲಿದ್ದವರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ

    ಯಡಿಯೂರಪ್ಪ ಕೂಡ ಇದೇ ಆಸ್ಪತ್ರೆಯಲ್ಲಿ ಕೊರೊನಾ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಆರಂಭದಲ್ಲಿ ಸಿಎಂ ಆರೋಗ್ಯ ವಿಚಾರಿಸಲೆಂದೇ ಸಿದ್ದರಾಮಯ್ಯ ಮಣಿಪಾಲ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದಾರೆ ಎನ್ನಲಾಗಿತ್ತು. ನಂತರ ತಮ್ಮ ಆರೋಗ್ಯ ಆರೋಗ್ಯ ತಪಾಸಣೆಗೆ ಬಂದಿರುವ ವಿಚಾರ ತಿಳಿದಿದೆ.

    ಆಸ್ಪತ್ರೆಗೆ ದಾಖಲಾಗುವ ಮುನ್ನ ಸಿಎಂ ಸಿದ್ದರಾಮಯ್ಯ ಸಿಎಂ ಆರೋಗ್ಯ ವಿಚಾರಿಸಿದರು. ಸದ್ಯ ಹಾಲಿ, ಮಾಜಿ ಸಿಎಂಗಳು ಸ್ಪೆಷಲ್‌ ವಾರ್ಡ್‌ನಲ್ಲಿದ್ದು ಆರೋಗ್ಯವಾಗಿದ್ದಾರೆ.

  • ಮಣಿಪಾಲ ಆಸ್ಪತ್ರೆಗೆ ಮಾಜಿ ಸಿಎಂ ಸಿದ್ದರಾಮಯ್ಯ ದಾಖಲು

    ಮಣಿಪಾಲ ಆಸ್ಪತ್ರೆಗೆ ಮಾಜಿ ಸಿಎಂ ಸಿದ್ದರಾಮಯ್ಯ ದಾಖಲು

    ಬೆಂಗಳೂರು: ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಮೂತ್ರದ ಸೋಂಕಿನಿಂದ ಕಾಣಿಸಿಕೊಂಡಿರುವ ಜ್ವರ ಇದಾಗಿದ್ದು, ಆತಂಕಪಡುವ ಅವಶ್ಯಕತೆಯಿಲ್ಲ ಎಂದ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ವೈದ್ಯರ ಸಲಹೆ ಮೇರೆಗೆ ರಾತ್ರಿ ಆಸ್ಪತ್ರೆಯಲ್ಲೇ ಸಿದ್ದರಾಮಯ್ಯ ಉಳಿದುಕೊಂಡಿದ್ದಾರೆ. ರಾತ್ರಿ 11:30ಕ್ಕೆ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದು, ಆಸ್ಪತ್ರೆಯಲ್ಲಿ ಮಗ ಡಾ.ಯತೀಂದ್ರ ಅವರು ಸಿದ್ದರಾಮಯ್ಯನವರನ್ನು ಈಗ ನೋಡಿಕೊಳ್ಳುತ್ತಿದ್ದಾರೆ.

    ಯಡಿಯೂರಪ್ಪ ಕೂಡ ಇದೇ ಆಸ್ಪತ್ರೆಯಲ್ಲಿ ಕೊರೊನಾ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಆರಂಭದಲ್ಲಿ ಸಿಎಂ ಆರೋಗ್ಯ ವಿಚಾರಿಸಲೆಂದೇ ಸಿದ್ದರಾಮಯ್ಯ ಮಣಿಪಾಲ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದಾರೆ ಎನ್ನಲಾಗಿತ್ತು. ನಂತರ ತಮ್ಮ ಆರೋಗ್ಯ ಆರೋಗ್ಯ ತಪಾಸಣೆಗೆ ಬಂದಿರುವ ವಿಚಾರ ತಿಳಿದಿದೆ.

    ಆಸ್ಪತ್ರೆಯಲ್ಲಿ ದಾಖಲಾಗುವ ಮುನ್ನ ಸಿಎಂ ಸಿದ್ದರಾಮಯ್ಯ ಸಿಎಂ ಆರೋಗ್ಯ ವಿಚಾರಿಸಿದರು. ಇಂದು ಸಿದ್ದರಾಮಯ್ಯನವರು ಕೊರೊನಾ ಪರೀಕ್ಷೆಗೆ ಒಳಗಾಗುವ ಸಾಧ್ಯತೆಯಿದೆ. ಸದ್ಯ ಹಾಲಿ, ಮಾಜಿ ಸಿಎಂಗಳು ಸ್ಪೆಷಲ್‌ ವಾರ್ಡ್‌ನಲ್ಲಿದ್ದು ಆರೋಗ್ಯವಾಗಿದ್ದಾರೆ.

  • ಕೋವಿಡ್‌ 19 – ರಾಜ್ಯ ಸರ್ಕಾರಕ್ಕೆ ಗಿಫ್ಟ್‌ ನೀಡಿದ ಮೈಕ್ರೋಸಾಫ್ಟ್‌

    ಕೋವಿಡ್‌ 19 – ರಾಜ್ಯ ಸರ್ಕಾರಕ್ಕೆ ಗಿಫ್ಟ್‌ ನೀಡಿದ ಮೈಕ್ರೋಸಾಫ್ಟ್‌

    ಬೆಂಗಳೂರು: ಕೋವಿಡ್‌ 19 ನಿಯಂತ್ರಣ ಸಂಬಂಧ ಜಾಗತಿಕ ಸಾಫ್ಟ್‌ವೇರ್‌ ಕಂಪನಿ ಮೈಕ್ರೋಸಾಫ್ಟ್‌ ಕರ್ನಾಟಕಕ್ಕೆ 3 ಆರ್‌ಟಿ ಪಿಸಿಆರ್ ಪರೀಕ್ಷಾ ಯಂತ್ರಗಳನ್ನು ಕೊಡುಗೆಯಾಗಿ ನೀಡಿದೆ.

    ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಮೈಕ್ರೋಸಾಫ್ಟ್ ಕಂಪನಿಯ ಕಾರ್ಪೊರೇಟ್ ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಕುಮಾರ್ ಭೇಟಿಯಾಗಿ ಯಂತ್ರವನ್ನು ಕೊಡುಗೆಯಾಗಿ ನೀಡಿದರು.

    ಈ ವೇಳೆ ಮಾತನಾಡಿದ ಸಿಎಂ, ಖಾಸಗಿ ಕಂಪನಿಗಳು ಕೋವಿಡ್ 19 ರ ವಿರುದ್ಧದ ಹೋರಾಟದಲ್ಲಿ ಸರ್ಕಾರದೊಂದಿಗೆ ಕೈಜೋಡಿಸಿರುವುದು ಸ್ವಾಗತಾರ್ಹ. ಕೊರೊನಾ ವೈರಸ್‌ ನಿಯಂತ್ರಿಸಲು ಸಾರ್ವಜನಿಕರು ಸೇರಿದಂತೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಮನವಿ ಮಾಡಿದರು.  ಇದನ್ನೂ ಓದಿ: ಮಧ್ಯರಾತ್ರಿ ನಟಿ ಸುಧಾರಾಣಿಯನ್ನು ಕಾಯಿಸಿದ ಖಾಸಗಿ ಆಸ್ಪತ್ರೆ ವಿರುದ್ಧ ಕ್ರಮ: ಸಚಿವ ಸುಧಾಕರ್

    ಈ ವೇಳೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ ಉಪಸ್ಥಿತರಿದ್ದರು.

  • 24 ಬಿಜೆಪಿ ಶಾಸಕರಿಗೆ ಒನ್ ಇಯರ್ ಗಿಫ್ಟ್ ನೀಡಿದ ಸಿಎಂ

    24 ಬಿಜೆಪಿ ಶಾಸಕರಿಗೆ ಒನ್ ಇಯರ್ ಗಿಫ್ಟ್ ನೀಡಿದ ಸಿಎಂ

    ಬೆಂಗಳೂರು: ಸರ್ಕಾರದ ಮೊದಲ ವರ್ಷದ ಸಂಭ್ರಮದ ಸಮಯದಲ್ಲಿ ಸಿಎಂ ಯಡಿಯೂರಪ್ಪ ಬಿಜೆಪಿ ಶಾಸಕರಿಗೆ ಗಿಫ್ಟ್‌ ನೀಡಿದ್ದಾರೆ. 24 ಮಂದಿ ಶಾಸಕರಿಗೆ ವಿವಿಧ ನಿಗಮ, ಮಂಡಳಿಗಳ ಅಧ್ಯಕ್ಷ ಸ್ಥಾನವನ್ನು ನೀಡಿದ್ದಾರೆ.

    ಈ ಹಿಂದೆ ಸಚಿವ ಸ್ಥಾನ‌ ಆಂಕಾಕ್ಷಿಗಳಾಗಿದ್ದವರಿಗೂ ಸಿಎಂ‌ ಮಣೆ ಹಾಕಿದ್ದಾರೆ. ಅರಗ ಜ್ಞಾನೇಂದ್ರ, ರಾಜುಗೌಡ, ದತ್ತಾತ್ರೇಯ ಪಾಟೀಲ್ ರೇವೂರ್, ತಿಪ್ಪಾರೆಡ್ಡಿಗೆ ನಿಗಮ ಮಂಡಳಿ ಸ್ಥಾನ ನೀಡಿದ್ದಾರೆ.

    ಅತೃಪ್ತರ ಸಭೆಯಲ್ಲಿ ಭಾಗವಹಿಸಿದ್ದವರಿಗೂ ಶಾಸಕರಿಗೂ ಯಡಿಯೂರಪ್ಪ ಮಣೆ ಹಾಕಿದ್ದಾರೆ. ಪರಣ್ಣ ಮುನವಳ್ಳಿ, ಶಿವರಾಜ್ ಪಾಟೀಲ್ , ರಾಜಕುಮಾರ್ ತೇಲ್ಕೋರ್ ಸೇರಿದಂತೆ ಹಲವರಿಗೆ ಅಧ್ಯಕ್ಷ ಸ್ಥಾನವನ್ನು ಕಲ್ಪಿಸಿದ್ದಾರೆ. ಇದನ್ನೂ ಓದಿ: ನಮ್ಮ ಸಾಧನೆ ಬಗ್ಗೆ ಪ್ರಧಾನಿ ಸಂಸದರಿಂದ ಚಪ್ಪಾಳೆ ಹೊಡೆಸಿದ್ರು – ಸಿಎಂ

    ಯಾರಿಗೆ ಯಾವ ಹುದ್ದೆ?
    1 . ಅರಗ ಜ್ಞಾನೇಂದ್ರ(ತೀರ್ಥಹಳ್ಳಿ) ಕರ್ನಾಟಕ ಗೃಹಮಂಡಳಿ
    2. ಎಂ. ಚಂದ್ರಪ್ಪ (ಹೊಳಲ್ಕೆರೆ) ರಾಜ್ಯ ರಸ್ತೆ ಸಾರಿಗೆ ಸಂಸ್ಥೆ
    3. ರಾಜುಗೌಡ(ಸುರಪುರ) ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
    4. ಎಂ ಪಿ ಕುಮಾರಸ್ವಾಮಿ(ಮೂಡಿಗೆರೆ) ಕರ್ನಾಟಕ ಮಾರುಕಟ್ಟೆ ಕನ್ಸಲ್ಟೆಂಟ್ ಮತ್ತು ಏಜೆನ್ಸಿಸ್ ಲಿಮಿಟೆಡ್
    5. ಎಎಸ್ ಪಾಟೀಲ್ ನಡಹಳ್ಳಿ (ಮುದ್ದೆ ಬಿಹಾಳ) ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ
    6. ಎಚ್.ಹಾಲಪ್ಪ(ಸಾಗರ) ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್

    7. ಮಾಡಾಳ್ ವಿರೂಪಾಕ್ಷಪ್ಪ(ಚನ್ನಗಿರಿ) ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ
    8. ತಿಪ್ಪಾರೆಡ್ಡಿ (ಚಿತ್ರದುರ್ಗ) ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ
    9. ಶಿವನಗೌಡ ನಾಯಕ್ (ದೇವದುರ್ಗ) ರಸ್ತೆ ಅಭಿವೃದ್ಧಿ ನಿಗಮ ನಿಯಮಿತ
    10.ಕಳಕಪ್ಪ ಬಂಡಿ(ರೋಣ) ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ
    11. ಪರಣ್ಣ ಮುನವಳ್ಳಿ (ಗಂಗಾವತಿ) ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ
    12. ಸಿದ್ದು ಸವದಿ(ತೇರದಾಳ) ಕರ್ನಾಟಕ ಕೈಮಗ್ಗ, ಅಭಿವೃದ್ಧಿ ನಿಗಮ ನಿಯಮಿತ

    13. ಪ್ರೀತಮ್ ಜಿ ಗೌಡ(ಹಾಸನ) ಅರಣ್ಯ, ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ
    14. ರಾಜ್‍ಕುಮಾರ್ ಪಾಟೀಲ್ ತೇಲ್ಕೂರ್ (ಸೇಡಂ) ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ, ಕಲಬುರಗಿ
    15. ದತ್ತಾತ್ರೇಯ ಪಾಟೀಲ್ ರೇವೂರ(ಗುಲ್ಬರ್ಗ ದಕ್ಷಿಣ) ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ, ಕಲಬುರಗಿ
    16. ಶಂಕರ್ ಪಾಟೀಲ್ ಮುನೇನಕೊಪ್ಪ(ನವಲಗುಂದ) ಕರ್ನಾಟಕ ನಗರ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ
    17. ಎಚ್ ನಾಗೇಶ್(ತಿಪಟೂರು) ಕರ್ನಾಟಕ ತೆಂಗಿನ ನಾರಿನ ಅಭಿವೃದ್ಧಿ ನಿಗಮ
    18. ಎಸ್ ವಿ ರಾಮಚಂದ್ರ(ಜಗಳೂರು) ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮ

    19. ನೆಹರೂ ಓಲೇಕಾರ್( ಹಾವೇರಿ) ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ
    20. ಐಹೊಳೆ ದುರ್ಯೋಧನ(ರಾಯಭಾಗ) ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ
    21. ಲಾಲಾಜಿ ಆರ್ ಟಂಡನ್ (ಕಾಪು) ರಾಜ್ಯ ಹಿಂದುಳಿದ ವರ್ಗಗಳ ಆಯೋಗ
    22. ಬಸವರಾಜ ದಡೇಸೂರ್ (ಕನಕಗಿರಿ) ರಾಜ್ಯ ಸಮಾಜ ಕಲ್ಯಾಣ ಅಭಿವೃದ್ಧಿ ಮಂಡಳಿ
    23. ಡಾ.ಎಸ್.ಶಿವರಾಜ್ ಪಾಟೀಲ್(ರಾಯಚೂರು) ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ
    24.ಸಿ.ಎಸ್.ನಿರಂಜನ್ ಕುಮಾರ್ (ಗುಂಡ್ಲುಪೇಟೆ) ರಾಜ್ಯ ಅರಣ್ಯ ಕೈಗಾರಿಕಾ ನಿಗಮ ನಿಯಮಿತ

  • ನಮ್ಮ ಸಾಧನೆ ಬಗ್ಗೆ ಪ್ರಧಾನಿ ಸಂಸದರಿಂದ ಚಪ್ಪಾಳೆ ಹೊಡೆಸಿದ್ರು – ಸಿಎಂ

    ನಮ್ಮ ಸಾಧನೆ ಬಗ್ಗೆ ಪ್ರಧಾನಿ ಸಂಸದರಿಂದ ಚಪ್ಪಾಳೆ ಹೊಡೆಸಿದ್ರು – ಸಿಎಂ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ಸರ್ಕಾರದ ಸಾಧನೆಯನ್ನು ಪ್ರಶಂಸಿಸಲು ಸಂಸದರ ಕೈಯಿಂದ ಚಪ್ಪಾಳೆ ಹೊಡೆಸಿದ ವಿಚಾರವನ್ನು ಸಿಎಂ ಯಡಿಯೂರಪ್ಪನವರು ಇಂದು ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ.

    ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾದ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ನಡೆದ ʼಸಾರ್ಥಕ ವರ್ಷ, ಸಮರ್ಥ ನಾಯಕʼ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಮಾತನಾಡಿದರು.

    ಭಾಷಣದಲ್ಲಿ ಲೋಕಸಭಾ ಚುನಾವಣೆಯ ವಿಚಾರವನ್ನು ಪ್ರಸ್ತಾಪಿಸಿದ ಸಿಎಂ, 28 ಲೋಕಸಭಾ ಕೇತ್ರದಲ್ಲಿ 25 ಕ್ಷೇತ್ರಗಳನ್ನು ನಾವು ಗೆಲ್ಲುವ ಮೂಲಕ ಪ್ರಧಾನಿ ಮೋದಿಯವರಿಗೆ ಕಾಣಿಕೆ ನೀಡಿದ್ದೇವೆ. ಕರ್ನಾಟಕದ ಜನ ನಮ್ಮನ್ನು ಆಶೀರ್ವಾದ ಮಾಡಿದ್ದಾರೆ. 25 ಕ್ಷೇತ್ರಗಳನ್ನು ಗೆದ್ದಿರುವುದು ದಾಖಲೆ. ಕಾರ್ಯಕರ್ತರು, ಶಾಸಕರು ಹಗಲಿರುಳು ದುಡಿದ ಪರಿಣಾಮದಿಂದ ಇದು ಸಾಧ್ಯವಾಗಿದೆ ಎಂದು ಹೇಳಿದರು. ಇದನ್ನೂ ಓದಿ: I Know ಯಡಿಯೂರಪ್ಪ ಕೆಪಾಬಿಲಿಟಿ ಎಂದ ಮೋದಿ..!

    ಉಪ ಚುನಾವಣೆಯಲ್ಲಿ ಬಿಜೆಪಿ ಸರ್ಕಾರದ ಸಾಧನೆಯ ಬಗ್ಗೆ ಮಾತನಾಡಿದ ಅವರು, 15 ಕ್ಷೇತ್ರಗಳ ಪೈಕಿ ನಾವು 12ರಲ್ಲಿ ಗೆದ್ದುಕೊಂಡಿದ್ದೇವೆ. ದೆಹಲಿಯಲ್ಲಿ ಪ್ರಧಾನಿ ಮೋದಿ ವಾರಕ್ಕೊಮ್ಮೆ ಸಂಸದರ ಸಭೆ ಕರೆಯುತ್ತಾರೆ. ಈ ಸಭೆಯಲ್ಲಿ ಎಲ್ಲ ಸಂಸದರನ್ನು ಎದ್ದು ನಿಲ್ಲಿಸಿ ಚಪ್ಪಾಳೆ ಹೊಡೆಸಿದ್ದಾರೆ. ಇದು ನಮಗೆ ಸಿಕ್ಕಿದ ದೊಡ್ಡ ಗೌರವವಾಗಿದ್ದು ಹೆಮ್ಮೆಯ ಸಂಗತಿ ಎಂದರು.

    ಕರ್ನಾಟಕ ಜನರ ಆಶೀರ್ವಾದ ನಮಗೆ ಸಿಕ್ಕಿದ್ದರೂ ನಾವು ಮಾಡಬೇಕಾದ ಕೆಲಸ ಬಹಳಷ್ಟಿದೆ. ನನಗೆ ಕಣ್ಣೀರು ಬರುತ್ತಿದ್ದು ಕೋವಿಡ್‌ ಕಾಡದೇ ಇದ್ದರೆ ರಾಜ್ಯವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಬಹುದಾಗಿತ್ತು. ಅಧಿಕಾರಕ್ಕೆ ಬಂದಾಗ ಪ್ರವಾಹ ಬಂತು. ಆದರೆ ಈ ವರ್ಷ ಭಗವಂತನ ದಯದಿಂದ ಉತ್ತಮ ಮಳೆ ಆಗಿದ್ದು ಜಲಾಶಯಗಳು ಭರ್ತಿಯಾಗುತ್ತಿದೆ. ಬಾಕಿ ಇರುವ ಮೂರು ವರ್ಷದ ಅವಧಿಯಲ್ಲಿ ಕರ್ನಾಟಕವನ್ನು ಅಭಿವೃದ್ಧಿ ಮಾಡುತ್ತೇವೆ ಎಂದು ಸಿಎಂ ಈ ವೇಳೆ ಭರವಸೆಯ ಮಾತನ್ನು ಆಡಿದರು. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಸಿಎಂಗೆ ಅಚ್ಚರಿ – ಯಡಿಯೂರಪ್ಪಗೆ ಜೈ ಅಂದ ಪ್ರಧಾನಿ ಮೋದಿ

  • ಮುಖ್ಯಮಂತ್ರಿ ಪದಕಕ್ಕೆ ಸಬ್ ಇನ್ಸ್‌ಪೆಕ್ಟರ್ ಶಿವಾನಂದ ಗುಡಗನಟ್ಟಿ ಆಯ್ಕೆ

    ಮುಖ್ಯಮಂತ್ರಿ ಪದಕಕ್ಕೆ ಸಬ್ ಇನ್ಸ್‌ಪೆಕ್ಟರ್ ಶಿವಾನಂದ ಗುಡಗನಟ್ಟಿ ಆಯ್ಕೆ

    ಬೆಳಗಾವಿ/ಚಿಕ್ಕೋಡಿ: ಸರ್ಕಾರ ಪ್ರಕಟಿಸಿರುವ ಮುಖ್ಯಮಂತ್ರಿ ಪದಕಕ್ಕೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಶಿವಾನಂದ ಗುಡಗನಟ್ಟಿ ಆಯ್ಕೆಯಾಗಿದ್ದಾರೆ.

    2018ನೇ ಸಾಲಿನಲ್ಲಿ ಬೆಂಗಳೂರು ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದರೋಡೆ, ಸರಗಳ್ಳತನ, ಅಪಹರಣ, ಕಳ್ಳತನ ಪ್ರಕರಣಗಳ ಮಾಹಿತಿ ಸಂಗ್ರಹಿಸಿ ಅಪರಾಧಿಗಳನ್ನು ಮಟ್ಟ ಹಾಕಿದ್ದು, ಕಳುವಾಗಿದ್ದ 17 ದ್ವಿಚಕ್ರ ವಾಹನಗಳ, 46 ಕೆಜಿ ಚಿನ್ನವನ್ನ ಪತ್ತೆ ಹಚ್ಚಿ ವಶಪಡಿಸಿಕೊಳ್ಳುವಲ್ಲಿ ಇವರು ಯಶಸ್ವಿ ಕಾರ್ಯಾಚರಣೆಗಳನ್ನು ನಡೆಸಿ ಆರೋಪಿಗಳ ಹೆಡೆ ಮುರಿ ಕಟ್ಟಿದ್ದರು.

    ಶಿವಾನಂದ ಅವರ ಜನಪರ ಅತ್ಯುತ್ತಮ ಸೇವೆಯನ್ನು ನೋಡಿ ಸರ್ಕಾರ ಮುಖ್ಯಮಂತ್ರಿ ಪದಕ ನೀಡಿ ಗೌರವಿಸಲಿದೆ. ಸದ್ಯ ಶಿವಾನಂದ ಗುಡಗನಟ್ಟಿ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಜನ ಸ್ನೇಹಿ ಸೇವೆಯನ್ನು ಕೂಡ ಪರಿಗಣಿಸಲಾಗಿದ್ದು, ಇದೇ ಮಾರ್ಚ್ 16ರಂದು ವಿಧಾನಸಭೆಯಲ್ಲಿ ಮುಖಮಂತ್ರಿ ಯಡಿಯೂರಪ್ಪ ಅವರು ಪದಕ ನೀಡಿ ಗೌರವಿಸಲಿದ್ದಾರೆ.

  • ಬಜೆಟ್‍ನಲ್ಲಿ ಕಟೀಲ್‍ಗೆ ಸೆಡ್ಡು ಹೊಡೆದ ಸಿಎಂ: ಮಾಜಿ ಸಚಿವ ಸೊರಕೆ

    ಬಜೆಟ್‍ನಲ್ಲಿ ಕಟೀಲ್‍ಗೆ ಸೆಡ್ಡು ಹೊಡೆದ ಸಿಎಂ: ಮಾಜಿ ಸಚಿವ ಸೊರಕೆ

    ಉಡುಪಿ: ಬಜೆಟ್‍ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಸಿಎಂ ಸೆಡ್ಡು ಹೊಡೆದಿದ್ದಾರೆ. ಅಂದು ಎತ್ತಿನಹೊಳೆ ಯೋಜನೆ ವಿರೋಧಿಸಿ ಪ್ರತಿಭಟಿಸಿದ್ದ ನಳೀನ್ ಕುಮಾರ್ ಕಟೀಲ್ ಇಂದು ಬಿಜೆಪಿ ರಾಜ್ಯಾಧ್ಯಕ್ಷರಾಗಿರುವಾಗ ಬಜೆಟ್‍ನಲ್ಲಿ ಯೋಜನೆಗೆ ಬಂಪರ್ ಕೊಡುಗೆ ಕೊಟ್ಟಿದ್ದಾರೆ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ವ್ಯಂಗ್ಯವಾಡಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಳೀನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲೇ ಹಲವು ನೇತ್ರಾವತಿ ತಿರುವು ವಿರುದ್ಧ ಸಾಕಷ್ಟು ಹೋರಾಟಗಳು ನಡೆದಿತ್ತು. ಅದು ಯಡಿಯೂರಪ್ಪನವರಿಗೆ ಗೊತ್ತಿತ್ತು. ಈಗ ಸಮಯ ಬಳಸಿಕೊಂಡು ತನ್ನ ರಾಜ್ಯಾಧ್ಯಕ್ಷರಿಗೆ ಸಿಎಂ ಯಡಿಯೂರಪ್ಪ ನೇರ ಸೆಡ್ಡು ಹೊಡೆದಿದ್ದಾರೆ. ಎತ್ತಿನಹೊಳೆ ಯೋಜನೆಗೆ 1500 ಕೋಟಿ ಬಿಡುಗಡೆ ಮಾಡಿದ್ದಾರೆ ಎಂದು ಸೊರಕೆ ಛೇಡಿಸಿದರು.

    ಕೊರೊನಾ ತಡೆಗಟ್ಟುವ ಮುನ್ನೆಚ್ಚರಿಕಾ ಕ್ರಮ ಬಜೆಟ್‍ನಲ್ಲಿ ಇರಲಿಲ್ಲ. ಆರ್ಥಿಕ ಚೇತರಿಕೆ ಕೊಡದ ಬಜೆಟ್ ಮಂಡನೆಯಾಗಿದೆ. ದೇಶ, ವಿಶ್ವ ಚಿಂತಿಸುವಾಗ ಸಿಎಂ ಯಡಿಯೂರಪ್ಪನಿಗೆ ಕೊರೊನಾ ಚಿಂತೆಯೇ ಇಲ್ಲ ಎಂದರು.

    ಕರಾವಳಿ ಸಮಸ್ಯೆಯನ್ನು ಸಿಎಂ ಉಲ್ಲೇಖ ಮಾಡಿಲ್ಲ. ಉದ್ಯೋಗ ಸೃಷ್ಟಿಯ ಯಾವುದೇ ಕಾರ್ಯಕ್ರಮ ಇಲ್ಲ. ಯಡಿಯೂರಪ್ಪ ಬಜೆಟ್ ಪುನರುಜ್ಜೀವನ ಕೊಡುವಲ್ಲಿ ವಿಫಲವಾಗಿದೆ. ಯಡಿಯೂರಪ್ಪರದ್ದು ನಿರಾಶಾದಾಯಕ ಬಜೆಟ್. ಕೇಂದ್ರದ ಅನುದಾನ ಬಂದಿಲ್ಲವೆಂದು ಸಿಎಂ ಬಜೆಟ್ ಭಾಷಣದಲ್ಲೇ ಒಪ್ಪಿಕೊಂಡಿರುವುದು ಅವರ ಅಸಹಾಯಕತೆಯ ಪ್ರದರ್ಶನ ಎಂದರು.

  • ನಾಳೆ ಬಜೆಟ್ – ಇಂದು ಸಂಜೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ

    ನಾಳೆ ಬಜೆಟ್ – ಇಂದು ಸಂಜೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ

    ಬೆಂಗಳೂರು: ನಾಳೆ ರಾಜ್ಯ ಸರ್ಕಾರದ ಬಜೆಟ್ ಮಂಡನೆಯಾಗಲಿದೆ. ಈ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಇಂದು ಸಂಜೆ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ.

    ಶಾಸಕರಿಗೆ ಭೋಜನ ನೆಪದಲ್ಲಿ ಸಿಎಂ ಯಡಿಯೂರಪ್ಪ ಶಾಸಕಾಂಗ ಪಕ್ಷದ ಸಭೆ ನಡೆಸಲಿದ್ದಾರೆ. ನಾಳೆ ಬಿಜೆಪಿ ಸರ್ಕಾರದ ಈ ಅವಧಿಯ ಮೊದಲ ಪೂರ್ಣ ಬಜೆಟ್ ಮಂಡನೆ ಆಗುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಪಕ್ಷದ ಶಾಸಕರ ಜೊತೆ ಬಜೆಟ್ ಕುರಿತು ಅನೌಪಚಾರಿಕ ಚರ್ಚೆ ನಡೆಸಲಿದ್ದಾರೆ.

    ಇಂದು ಸಂಜೆ 7ಕ್ಕೆ ಖಾಸಗಿ ಹೋಟೆಲ್ ನಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಉಭಯ ಸದನಗಳಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸುವಿಕೆ ಹಾಗೂ ವಿಪಕ್ಷಗಳ ಹೋರಾಟಕ್ಕೆ ತಂತ್ರ ರೂಪಿಸುವುದರ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚಿಸಲಾಗುತ್ತದೆ.

  • ಸರ್ಕಾರದ್ದು ಒಡೆದು ಆಳುವ ನೀತಿ – ವಿದ್ಯಾರ್ಥಿಗಳ ಆಕ್ರೋಶ

    ಸರ್ಕಾರದ್ದು ಒಡೆದು ಆಳುವ ನೀತಿ – ವಿದ್ಯಾರ್ಥಿಗಳ ಆಕ್ರೋಶ

    ಚಿಕ್ಕಮಗಳೂರು: ಕಳೆದ ಶೈಕ್ಷಣಿಕ ವರ್ಷದಲ್ಲಿ ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ನೀಡುವ ಯೋಜನೆಯನ್ನ ಜಾರಿಗೆ ತಂದ ರಾಜ್ಯ ಸರ್ಕಾರ ಎಲ್ಲಾ ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ನೀಡುವುದಾಗಿ ಹೇಳಿತ್ತು. ಆದರೆ ಈಗ ಸರ್ಕಾರ ಕೇವಲ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಮಾತ್ರ ಲ್ಯಾಪ್‍ಟಾಪ್ ನೀಡಲು ಮುಂದಾಗಿರುವುದನ್ನು ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟಿಸಿದರು.

    ಸರ್ಕಾರ ವಿದ್ಯಾರ್ಥಿಗಳ ಮಧ್ಯೆ ಬೇಧ-ಭಾವ ಮಾಡುತ್ತಿರೋದು ಸರಿಯಲ್ಲ ಎಂದು ಜಿಲ್ಲೆಯ ಕೊಪ್ಪ ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ಹಾಗೂ ತೃತೀಯ ವರ್ಷದ ವಿದ್ಯಾರ್ಥಿಗಳು ಆರೋಪಿಸಿ ಪ್ರತಿಭಟಿಸಿದ್ದಾರೆ. ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿ, ರಾಜ್ಯ ಸರ್ಕಾರದ ತಾರತಮ್ಯ ನೀತಿಯನ್ನು ಖಂಡಿಸಿದ್ದಾರೆ.

    ಕಾಲೇಜು ಪ್ರಾಂಶುಪಾಲರ ಒಪ್ಪಿಗೆ ಪಡೆದ ವಿದ್ಯಾರ್ಥಿಗಳು ತಾಲೂಕು ಕಛೇರಿ ಮುಂಭಾಗ ಗಂಟೆಗೂ ಹೆಚ್ಚು ಕಾಲ ಪ್ರತಿಭಟಿಸಿದರು. ಪ್ರತಿಭಟನೆಯ ಬಳಿಕ ನ್ಯಾಯಕ್ಕಾಗಿ ಒತ್ತಾಯಿಸಿದ ವಿದ್ಯಾರ್ಥಿಗಳು ಶೀರಸ್ತೆದಾರರ ಮೂಲಕ ಮನವಿ ಸಲ್ಲಿಸಿ ಎಲ್ಲಾ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ನೀಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.