Tag: Yediyurappa

  • ರಾಷ್ಟ್ರೀಯವಾದಿಗಳ ಹೆಮ್ಮೆ ಮುಖರ್ಜಿ ಕನಸು ಮೋದಿಯಿಂದ ನನಸು: ಯಡಿಯೂರಪ್ಪ

    ರಾಷ್ಟ್ರೀಯವಾದಿಗಳ ಹೆಮ್ಮೆ ಮುಖರ್ಜಿ ಕನಸು ಮೋದಿಯಿಂದ ನನಸು: ಯಡಿಯೂರಪ್ಪ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಜೀ ಅವರು ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಕನಸನ್ನು ನನಸಾಗಿಸಿದ್ದಾರೆ. ಇದು ಪ್ರತಿಯೊಬ್ಬ ರಾಷ್ಟ್ರೀಯವಾದಿ ಭಾರತೀಯರಿಗೆ ಹೆಮ್ಮೆಯ ಸಂಗತಿ ಎಂದು ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಹೇಳಿದ್ದಾರೆ.

    ಭಾರತೀಯ ಜನಸಂಘದ ಸ್ಥಾಪಕರಾದ ಡಾ. ಶ್ಯಾಮಪ್ರಸಾದ್ ಮುಖರ್ಜಿ (Shyam Prasad Mukherji) ಅವರ ಜನ್ಮದಿನದ ಪ್ರಯುಕ್ತ ಮಲ್ಲೇಶ್ವರದ ಬಿಜೆಪಿ (BJP) ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಡಾ. ಮುಖರ್ಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ಇದನ್ನೂ ಓದಿ: ಗ್ಯಾರಂಟಿ ಬೇಡ ಅಂತ ಹೇಳಿ, ಅದೇ ದುಡ್ಡಲ್ಲಿ ರಸ್ತೆ ಮಾಡಿಸ್ತೀವಿ: ರಾಯರೆಡ್ಡಿ

     

    ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಜೀವನವೇ ಒಂದು ಸಂದೇಶ. ಅವರ ಚಿಂತನೆಗಳಿಂದ ಇಂದು ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತನೂ ಧೈರ್ಯವಂತರಾಗಿ ದೇಶ ಮೊದಲು ಎಂಬ ಸಿದ್ಧಾಂತಕ್ಕೆ ಬದ್ಧರಾಗಿದ್ದಾರೆ. ಡಾ. ಮುಖರ್ಜಿ ಅವರು ದೇಶದ ಏಕತೆ, ಸಮಗ್ರತೆ, ಸಾಂಸ್ಕೃತಿಕ ಹಿರಿಮೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಶ್ರೇಷ್ಠ ರಾಷ್ಟ್ರೀಯ ನಾಯಕ ಎಂದು ತಿಳಿಸಿದರು.

    ನಮ್ಮ ಪಕ್ಷಕ್ಕೆ ಸೈದ್ಧಾಂತಿಕ ಅಡಿಪಾಯ ಹಾಕಿ ಕೊಟ್ಟ ಭಾರತೀಯ ಜನಸಂಘದ ಸ್ಥಾಪಕರು. ದೇಶದ ರಾಜಕಾರಣದಲ್ಲಿ ಒಂದು ಬಲಿಷ್ಠ ರಾಷ್ಟ್ರೀಯವಾದಿ ಸಿದ್ಧಾಂತ ಇರುವ ರಾಜಕೀಯ ಪರಿವಾರಕ್ಕೆ ನಾಂದಿ ಹಾಡಿದವರು. 370ನೇ ವಿಧಿಯನ್ನು ವಿರೋಧಿಸಿ ಜಮ್ಮು ಮತ್ತು ಕಾಶ್ಮೀರವನ್ನು ಭಾರತದೊಂದಿಗೆ ಸಂಪೂರ್ಣವಾಗಿ ಒಗ್ಗೂಡಿಸಲು ಗಟ್ಟಿಯಾಗಿ ನಿಂತು, ಅದಕ್ಕಾಗಿ ತಮ್ಮ ಪ್ರಾಣವನ್ನೇ ಸಮರ್ಪಿಸಿದ ಧೀಮಂತ ನಾಯಕ ಎಂದು ಯಡಿಯೂರಪ್ಪ ನೆನಪಿಸಿದರು.

    ಡಾ. ಮುಖರ್ಜಿ ಅವರು ನಾಗರೀಕ ಆಡಳಿತವನ್ನು ಪ್ರತಿಪಾದಿಸಿದವರು. ಅದರಲ್ಲಿ ಈ ನೆಲದ ಸಾಂಸ್ಕೃತಿಕ ಮೌಲ್ಯಗಳನ್ನು ಎತ್ತಿಹಿಡಿದವರು ಹಾಗೂ ತುಷ್ಟೀಕರಣದ ವಿರುದ್ಧ ಮಾತನಾಡುವ, ಎಲ್ಲದಕ್ಕಿಂತ ಹೆಚ್ಚಾಗಿ ರಾಷ್ಟ್ರೀಯ ಹಿತಾಸಕ್ತಿಗಾಗಿ ಧ್ವನಿ ಎತ್ತುವ ಧೈರ್ಯ ಹೊಂದಿದವರು ತಿಳಿಸಿದರು.

  • ಭ್ರಷ್ಟ ಕುಟುಂಬದ ಮಾತು ಕೇಳಿ ನನ್ನನ್ನ ಉಚ್ಚಾಟನೆ ಮಾಡಲಾಗಿದೆ: ಯತ್ನಾಳ್ ನಿಗಿನಿಗಿ ಕೆಂಡ

    ಭ್ರಷ್ಟ ಕುಟುಂಬದ ಮಾತು ಕೇಳಿ ನನ್ನನ್ನ ಉಚ್ಚಾಟನೆ ಮಾಡಲಾಗಿದೆ: ಯತ್ನಾಳ್ ನಿಗಿನಿಗಿ ಕೆಂಡ

    – ಪ್ರಹ್ಲಾದ್ ಜೋಶಿಯನ್ನ ಸೋಲಿಸಲು ಬಿಎಸ್‌ವೈ ಚೇಲಾಗಳನ್ನ ರೆಡಿ ಮಾಡಿದ್ದಾರೆ; ಹೊಸ ಬಾಂಬ್

    ಹುಬ್ಬಳ್ಳಿ: ಭ್ರಷ್ಟ ಕುಟುಂಬದ ಮಾತು ಕೇಳಿ ನನ್ನನ್ನ ಉಚ್ಚಾಟನೆ ಮಾಡಲಾಗಿದೆ ಎಂದು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್(Basanagouda Patil Yatnal) ಆರೋಪಿಸಿದರು.

    ಹುಬ್ಬಳ್ಳಿಯ(Hubballi) ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನೇನು ಭ್ರಷ್ಟಾಚಾರ ಮಾಡಿಲ್ಲ, ಅಡ್ಡ ಮತದಾನ ಮಾಡಿಲ್ಲ. ಎಲ್ಲಾ ಸಮುದಾಯದ ಯುವಕರು ರಸ್ತೆಗೆ ಬಂದು ನನ್ನ ಪರವಾಗಿ ಧ್ವನಿ ಎತ್ತುತ್ತಿದ್ದಾರೆ. ಹಿಂದುತ್ವದ ಪರವಾಗಿ ಮಾತನಾಡುತ್ತಿರುವವನ್ನು ತುಳಿಯುತ್ತಿದ್ದಾರೆ ಎಂಬ ಭಾವನೆ ಜನರಲ್ಲಿದೆ. ನನ್ನ ಪರವಾಗಿ ಮಾತನಾಡಿ, ಹೋರಾಟ ಮಾಡಿ ಎಂದು ನಾನು ಯಾರಿಗೂ ಹೇಳಿಲ್ಲ. ಇಡೀ ಹಿಂದು ಸಮಾಜ ನನ್ನ ಪರವಾಗಿ ಹೋರಾಟ ಮಾಡುತ್ತಿದೆ ಎಂದರು. ಇದನ್ನೂ ಓದಿ: ಅಯ್ಯೋ ವಿಧಿಯೇ… ಕಾಲೇಜಿನಲ್ಲಿ ವಿದಾಯ ಭಾಷಣ ಮಾಡುತ್ತಲೇ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು

    ಈ ಹಿಂದೆ ಯಡಿಯೂರಪ್ಪನವರನ್ನ(B S Yediyurappa) ಮತ್ತು ಸಿದ್ದರಾಮಯ್ಯನವರನ್ನ(Siddaramaiah) ಹೊರಗಡೆ ಹಾಕಿದಾಗ ಇಷ್ಟು ದೊಡ್ಡಮಟ್ಟದ ಹೋರಾಟ ಮಾಡಿಲ್ಲ. ಇಂದು ಸ್ವಯಂಪ್ರೇರಿತವಾಗಿ ಜನರು ಹೋರಾಟ ಮಾಡುತ್ತಿದ್ದಾರೆ. ನಾವು ಯಾರಿಗೂ ದುಡ್ಡು ಕೊಟ್ಟು ಹೋರಾಟ ಮಾಡಲು ಹೇಳಿಲ್ಲ. ಹಿಂದೂ ಯುವಕರ ಕೊಲೆಯಾದ ಸಮಯದಲ್ಲಿ ನ್ಯಾಯಕ್ಕಾಗಿ ಹೋರಾಟ ಮಾಡಿದ್ದೇನೆ. ನಾನು ಕೂಡಲಸಂಗಮದ ಶ್ರೀಗಳಿಗೆ ಹೋರಾಟ ಮಾಡಿ ಎಂದು ಹೇಳಿಲ್ಲ ಎಂದು ಹೇಳಿದರು.

    ಮೋಹನ್ ಲಿಂಬಿಕಾಯಿ ಯಡಿಯೂರಪ್ಪನ ಚೇಲಾ
    ಮೀಸಲಾತಿಗಾಗಿ ಪಾದಯಾತ್ರೆ ಆರಂಭ ಮಾಡಿದಾಗ ನಾನೇ ಅದಕ್ಕೆ ಚಾಲನೆ ನೀಡಿದ್ದೆ. ಶನಿವಾರ ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ಮಾಡಿದ ಮಹಾನಾಯಕ ನಮ್ಮ ಸ್ವಾಮೀಜಿಗಳಿಗೆ ಹೋರಾಟ ಕೈ ಬಿಡಲು ಆಮಿಷ ತೋರಿಸಿದ್ದರು. ಸಮಾಜದ ವ್ಯಕ್ತಿಗಳಿಗೆ ಅನ್ಯಾಯ ಆದಾಗ ಸ್ವಾಮೀಜಿ ಹೋರಾಟ ಮಾಡಿದ್ದಾರೆ. ಪರೋಕ್ಷವಾಗಿ ಪಂಚಮಸಾಲಿ ಮುಖಂಡರಾದ ಮೋಹನ್ ಲಿಂಬಿಕಾಯಿ, ನೀಲಕಂಠ ಶೆಟ್ಟಿ, ಪ್ರಭಣ್ಣ ಹುಣಸಿಕಟ್ಟಿ ಮೇಲೆ ಹರಿಹಾಯ್ದ ಅವರು, ಮೋಹನ್ ಲಿಂಬಿಕಾಯಿ ಯಡಿಯೂರಪ್ಪನ ಚೇಲಾ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಹುಬ್ಬಳ್ಳಿ | ಭೀಕರ ರಸ್ತೆ ಅಪಘಾತ – ಮೂವರು ಮಹಿಳೆಯರು ಸ್ಥಳದಲ್ಲೇ ಸಾವು

    ಪಂಚಮಸಾಲಿ ಹೋರಾಟದ ಸಮಯದಲ್ಲಿ ಸುವರ್ಣಸೌಧದ ಮುಂದೆ ಲಾಠಿ ಚಾರ್ಜ್ ಮಾಡಲಾಗಿದೆ. ಬಿಜೆಪಿ ಸರ್ಕಾರ 2ಡಿ ಮೀಸಲಾತಿ ನೀಡಿತ್ತು. ಈಗಿನ ಸರ್ಕಾರ ಮೀಸಲಾತಿ ಜಾರಿ ಮಾಡಲು ಆಸಕ್ತಿ ತೋರುತ್ತಿಲ್ಲ. ಮುಸ್ಲಿಂ ಮೀಸಲಾತಿ ನೀಡಲು ಸಿದ್ದರಾಮಯ್ಯ ಸರ್ಕಾರ ಮುಂದಾಗುತ್ತಿದೆ. ಆದರೆ ರೈತಾಪಿ ವರ್ಗ ಅತೀ ಹೆಚ್ಚು ಇರುವ ಪಂಚಮಸಾಲಿ ಸಮುದಾಯಕ್ಕೆ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಸರ್ಕಾರಕ್ಕೆ ಬುದ್ಧಿ ಕಲಿಸುವ ಕಾರ್ಯ ಆಗಬೇಕು
    ಮಾನವೀಯತೆ ಬಿಟ್ಟು ಪಂಚಮಸಾಲಿ ಸಮುದಾಯದ ಹೋರಾಟದ ಸಮಯದಲ್ಲಿ ಹಿಗ್ಗಾಮುಗ್ಗಾ ಹೊಡೆದು ಚಿತ್ರಹಿಂಸೆ ನೀಡಲಾಗಿದೆ. ಲಾಠಿ ಚಾರ್ಜ್ ಗೈಡ್‌ಲೈನ್ಸ್ ಬಿಟ್ಟು, ಮಾನವ ಹಕ್ಕು ಉಲ್ಲಂಘನೆ ಮಾಡಿ ಪಂಚಮಸಾಲಿ ಸಮುದಾಯದ ಮೇಲೆ ಹಲ್ಲೆ ಮಾಡಲಾಗಿದೆ. ಈ ಸರ್ಕಾರಕ್ಕೆ ಹಿಂದೂಗಳ ಮೇಲೆ ಎಷ್ಟು ದ್ವೇಷಯಿದೆ. ಅಮಾನುಷವಾಗಿ ಈ ಲಾಠಿ ಚಾರ್ಜ್ ಮಾಡಲಾಗಿದೆ. ಹೈಕೋರ್ಟ್ ಸೂಚನೆಯನ್ನು ಸ್ವಾಗತ ಮಾಡುತ್ತೇನೆ. ಸರ್ಕಾರಕ್ಕೆ ಬುದ್ಧಿ ಕಲಿಸುವ ಕಾರ್ಯ ಆಗಬೇಕು ಎಂದರು. ಇದನ್ನೂ ಓದಿ: ಬ್ಯಾಕ್‌ ಟು ಬ್ಯಾಕ್‌ ಹಿಟ್‌ ಸಿನಿಮಾ ಕೊಟ್ಟಿದ್ದ ರಶ್ಮಿಕಾಗೆ ಶುರುವಾಯ್ತಾ ಬ್ಯಾಡ್ ಟೈಮ್?

    ವಿಜಯೇಂದ್ರನ ಹಗರಣಕ್ಕೆ ಯಡಿಯೂಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ರು
    ಯಡಿಯೂರಪ್ಪನವರನ್ನ ಮುಖ್ಯಮಂತ್ರಿ ಸ್ಥಾನದಿಂದ ಹೈಕಮಾಂಡ್ ಕೆಳಗೆ ಇಳಿಸಿದ್ದು ಏಕೆಂದರೆ ಅವರು ಮಾಡಿದ ಭ್ರಷ್ಟಾಚಾರ, ಚೆಕ್ ಮೂಲಕ ಲಂಚ ತೆಗೆದುಕೊಂಡಿದ್ದೆ ರಾಜೀನಾಮೆಗೆ ಕಾರಣ. ಅವರ ಸುಪುತ್ರ ವಿಜಯೇಂದ್ರ(B Y Vijayendra) ಮಾಡಿದ ಹಗರಣದಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ನನ್ನನ್ನ ನೀವು ಹೊರಗಡೆ ಹಾಕಿರಬಹುದು. ರಾಜ್ಯದಲ್ಲಿ ಇವತ್ತು ಹಿಂದುತ್ವದ ನಾಯಕ ಬೇಕು ಎಂದು ಹೋರಾಟ ಮಾಡುತ್ತಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಭಗವಾಧ್ವಜದ ಮೇಲೆ ಚುನಾವಣೆ ಎದುರಿಸ್ತೇನೆ, ಮುಸ್ಲಿಂ ಮತಗಳು ಬೇಕಿಲ್ಲ: ಯತ್ನಾಳ್‌ ಲೇವಡಿ

    ಎಲ್ಲಾ ಸಮಾಜ ನ್ಯಾಯಕ್ಕಾಗಿ ಸದನದಲ್ಲಿ ಹೋರಾಟ ಮಾಡಿದವನು ನಾನು. ಕೂಡಲಸಂಗಮ ಸ್ವಾಮೀಜಿಗಳು ಬಹಳಷ್ಟು ನಿಸ್ವಾರ್ಥರಾಗಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ಕೊಡಲು ಸಂವಿಧಾನದಲ್ಲಿ ಅವಕಾಶ ಇಲ್ಲ. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಹೋರಾಟವನ್ನ ನಮ್ಮ ಸ್ವಾಮೀಜಿಗಳು ಮುಂದುವರೆಸುತ್ತಾರೆ. ಸಮಾಜದ ಹೋರಾಟದಿಂದ ಮಂತ್ರಿ ಸ್ಥಾನವನ್ನ ತಪ್ಪಿಸಿಕೊಂಡವನು ನಾನು ಎಂಬುದು ಎಲ್ಲರಿಗೂ ಗೊತ್ತು. ಪ್ರಬಣ್ಣ ಹುಣಸಿಕಟ್ಟಿ ಶನಿವಾರ ಸ್ವಾಮೀಜಿಗಳ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಪ್ರಹ್ಲಾದ್ ಜೋಶಿ(Prahlad Joshi) ಮತ್ತು ಅರವಿಂದ್ ಬೆಲ್ಲದ್ ಅವರನ್ನ ಸೋಲಿಸಲು ಇಲ್ಲೊಬ್ಬ ನ್ಯಾಯವಾದಿಯನ್ನ ಯಡಿಯೂರಪ್ಪ ರೆಡಿ ಮಾಡಿದ್ದಾರೆ. ಪ್ರತಿಯೊಬ್ಬರನ್ನ ಸೋಲಿಸಲು ಒಬ್ಬೊಬ್ಬ ಚೇಲಾಗಳನ್ನ ಯಡಿಯೂರಪ್ಪ ಸಿದ್ಧ ಮಾಡಿ ಇಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

  • ಕರ್ನಾಟಕದಲ್ಲಿ ಯಾರೆಲ್ಲ ಹೊಸ ಪಕ್ಷ ಕಟ್ಟಿದ್ದರು? ರಚನೆ ಮಾಡಿದ್ದು ಯಾಕೆ? ಕೊನೆಗೆ ಏನಾಯ್ತು?

    ಕರ್ನಾಟಕದಲ್ಲಿ ಯಾರೆಲ್ಲ ಹೊಸ ಪಕ್ಷ ಕಟ್ಟಿದ್ದರು? ರಚನೆ ಮಾಡಿದ್ದು ಯಾಕೆ? ಕೊನೆಗೆ ಏನಾಯ್ತು?

    ಬೆಂಗಳೂರು:  ಬಿಜೆಪಿಯಿಂದ (BJP) 6 ವರ್ಷ ಉಚ್ಚಾಟನೆಗೊಂಡಿರುವ ಬಸನಗೌಡ ಪಾಟೀಲ್‌ ಯತ್ನಾಳ್ (Basangouda Patil Yatnal) ಈಗ ಹೊಸ ಪಕ್ಷ ಸ್ಥಾಪನೆಗೆ ಮುಂದಾಗಿದ್ದಾರೆ. ಅಭಿಮಾನಿಗಳಿಂದ ಒತ್ತಡ ಇದೆ ಎಂದಿರುವ ಯತ್ನಾಳ್, ರಾಜ್ಯವೆಲ್ಲಾ ಸುತ್ತಾಡಿ ಜನಾಭಿಪ್ರಾಯ ಸಂಗ್ರಹಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ.

    ಕರ್ನಾಟಕದಲ್ಲಿ ಹೊಸ ಪಕ್ಷ ಕಟ್ಟಿ ಗೆದ್ದವರ ಪಟ್ಟಿ ನೋಡಿದರೆ ಜೆಡಿಎಸ್ ಮಾತ್ರ ಕಾಣುತ್ತದೆ. ಉಳಿದ ಘಟಾನುಘಟಿಗಳು ಹೊಸ ಪಕ್ಷದ ಸಹವಾಸವೇ ಬೇಡ ಎಂದು ಮರಳಿ ರಾಷ್ಟ್ರೀಯ ಪಕ್ಷದ ಗೂಡು ಸೇರಿದ್ದಾರೆ.

    ಮಾಜಿ ಸಿಎಂಗಳಾದ ಬಂಗಾರಪ್ಪ, ಯಡಿಯೂರಪ್ಪ, ಹಾಲಿ ಸಿಎಂ ಸಿದ್ದರಾಮಯ್ಯ ಅವರಂತಹ ಮಾಸ್ ಲೀಡರ್‌ಗಳೇ ಸುಸ್ತಾಗಿದ್ದಾರೆ. ಜನಶಕ್ತಿ ಎಷ್ಟೇ ಒಟ್ಟಿಗಿದ್ದರೂ ಆರ್ಥಿಕ ಸಂಪನ್ಮೂಲದ ಶಕ್ತಿಯೂ ಅಷ್ಟೇ ಇರಬೇಕು.

    ಎಸ್.ಬಂಗಾರಪ್ಪ
    ಎಸ್.ಬಂಗಾರಪ್ಪ (S Bangarappa ) 2 ಬಾರಿ ಪಕ್ಷ ಕಟ್ಟಿದ್ದರು. ಸಿಎಂ ಸ್ಥಾನದಿಂದ ಕೆಳಗಿಳಿಸಿದ ಬಳಿಕ ಕಾಂಗ್ರೆಸ್ ವಿರುದ್ಧ ಗುಟುರು ಹಾಕಿ ಕರ್ನಾಟಕ ಕಾಂಗ್ರೆಸ್ ಪಾರ್ಟಿ (ಕೆಸಿಪಿ) ಸ್ಥಾಪನೆ ಮಾಡಿದ್ದರು. ಇದನ್ನೂ ಓದಿ: ಹೊಸ ಹಿಂದೂ ಪಕ್ಷ ಸ್ಥಾಪನೆಯಾಗುತ್ತಾ? ಏನಿದು ಯತ್ನಾಳ್‌ ಲೆಕ್ಕಾಚಾರ?

    1996ರಲ್ಲಿ ಕೆಸಿಪಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಗೆಲುವು ಕಂಡಿದ್ದರು. ಇದಾದ ಬಳಿಕ ಮತ್ತೆ ಕಾಂಗ್ರೆಸ್‌ ಮರಳಿ ಕಡಿಮೆ ಅವಧಿಯಲ್ಲೇ ಮತ್ತೆ ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿ ಕರ್ನಾಟಕ ವಿಕಾಸ ಪಕ್ಷ ರಚಿಸಿದ್ದರು.

    1998ರಲ್ಲಿ ಲೋಕಸಭೆಯ ಮಧ್ಯಂತರ ಚುನಾವಣೆಯಲ್ಲಿ ಸ್ಪರ್ಧಿಸಿ ಕೆಸಿಪಿಯಿಂದ ಸೋಲು ಕಂಡರು. ಬಳಿಕ ಕಾಂಗ್ರೆಸ್ ಸೇರ್ಪಡೆಯಾದರು.

    ಸಿದ್ದರಾಮಯ್ಯ:
    ದೇವೇಗೌಡರ ವಿರುದ್ಧ ಗುಟುರು ಹಾಕಿ ಹೊಸ ಪಕ್ಷ ಕಟ್ಟಿದ್ದರು. ಅಖಿಲ ಭಾರತ ಪ್ರಗತಿಪರ ಜನತಾದಳ (ಎಬಿಪಿಜೆಡಿ) ಎಂಬ ಹೊಸಪಕ್ಷ ಸ್ಥಾಪಿಸಿದ್ದರು. ಆದರೆ ಯಾವುದೇ ಸಾರ್ವತ್ರಿಕ ಚುನಾವಣೆ ಎದುರಿಸದೇ ಪಕ್ಷವನ್ನು ವಿಸರ್ಜಿಸಿ ಬೃಹತ್ ಸಮಾವೇಶ ಮಾಡಿ ಸಿದ್ದರಾಮಯ್ಯ (Siddaramaiah) ಕಾಂಗ್ರೆಸ್‌ ಸೇರಿದ್ದರು. ಇದನ್ನೂ ಓದಿ: ನಾಳೆಯಿಂದ UPI, ಮಿನಿಮಮ್ ಬ್ಯಾಂಕ್ ಬ್ಯಾಲೆನ್ಸ್ ರೂಲ್ ಚೇಂಜ್

    ಯಡಿಯೂರಪ್ಪ:
    2012ರಲ್ಲಿ ಬಿಜೆಪಿ ವಿರುದ್ಧ ಸಡ್ಡು ಹೊಡೆದು ಕರ್ನಾಟಕ ಜನತಾ ಪಾರ್ಟಿ (KJP) ಸ್ಥಾಪನೆ ಮಾಡಿದ್ದರು. 2013ರ ಚುನಾವಣೆಯಲ್ಲಿ ಕೆಜೆಪಿ ಸ್ಪರ್ಧಿಸಿದ್ದರಿಂದ ಬಿಜೆಪಿ 40 ಸ್ಥಾನಕ್ಕೆ ಕುಸಿದಿತ್ತು. ಯಡಿಯೂರಪ್ಪ (Yediyurappa) ನೇತೃತ್ವದ ಕೆಜೆಪಿಯಿಂದ 6 ಮಂದಿಗೆ ಗೆಲುವು ಸಿಕ್ಕಿತ್ತು. ಲೋಕಸಭೆ ಚುನಾವಣೆ ವೇಳೆ ಕೆಜೆಪಿಯನ್ನು ವಿಲೀನಗೊಳಿಸಿ ಬಿಜೆಪಿಗೆ ಸೇರ್ಪಡೆಯಾದರು.

    ಶ್ರೀರಾಮುಲು:
    ಬಿಜೆಪಿಗೆ ಸಡ್ಡು ಹೊಡೆದು ಬಿಎಸ್‌ಆರ್ ಕಾಂಗ್ರೆಸ್ ಪಕ್ಷ ಸ್ಥಾಪನೆ ಮಾಡಿದ್ದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಚುನಾವಣೆಯಲ್ಲಿ ಹೊಡೆತ ಬಿದ್ದಿತ್ತು. ಬಿಎಸ್‌ಆರ್ ಕಾಂಗ್ರೆಸ್‌ನಿಂದ ನಾಲ್ವರ ಗೆಲುವು ಸಾಧಿಸಿದ್ದರು. ನಂತರ ಪಕ್ಷ ಮುನ್ನಡೆಸಲಾಗದೇ ರಾಮುಲು (Sriramulu) ಬಿಜೆಪಿ ಸೇರಿದ್ದರು.

    ಜನಾರ್ದನ ರೆಡ್ಡಿ
    ಗಣಿ ಕೇಸಲ್ಲಿ ಜೈಲಿನಿಂದ ವಾಪಸ್ ಆದ ಬಳಿಕ ಬಿಜೆಪಿ ಜರ್ನಾರ್ದನ ರೆಡ್ಡಿ ಅವರನ್ನು (Janardhan Reddy) ದೂರ ಇಟ್ಟಿತ್ತು. 2023ರ ಚುನಾವಣೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ) ಸ್ಥಾಪನೆ ಮಾಡಿದ್ದರು. ಜನಾರ್ದನ ರೆಡ್ಡಿ ವಿಧಾನಸಭೆಗೆ ಆಯ್ಕೆಯಾದರೂ ಬಿಜೆಪಿಗೆ ಹಲವು ಕಡೆ ಪೆಟ್ಟು ನೀಡಿತ್ತು. 2024ರ ಲೋಕಸಭಾ ಚುನಾವಣೆ ವೇಲೆ ರೆಡ್ಡಿ ಬಿಜೆಪಿಗೆ ಬೆಂಬಲ ನೀಡಿದರು ಅಷ್ಟೇ ಅಲ್ಲದೇ ಕೆಆರ್‌ಪಿಪಿಯನ್ನು ಬಿಜೆಪಿ ಜೊತೆ ವಿಲೀನ ಮಾಡಿದರು.

    ಉಪೇಂದ್ರ
    ಪ್ರಜಾಕೀಯ ಪಕ್ಷ ಸ್ಥಾಪನೆ ಮಾಡಿರುವ ಉಪೇಂದ್ರ (Upendra) ಸದ್ಯ ಯಾವುದೇ ರಾಜಕೀಯ ಪಕ್ಷದ ಜೊತೆ ಗುರುತಿಸಿಕೊಂಡಿಲ್ಲ.

    ಅಶೋಕ್ ಖೇಣಿ
    ಕರ್ನಾಟಕ ಮಕ್ಕಳ ಪಕ್ಷ ಸ್ಥಾಪಿಸಿದ್ದ ಅಶೋಕ್ ಖೇಣಿ (Ashok Kheny) ಒಂದು ಬಾರಿ ಗೆಲುವು ಸಾಧಿಸಿದ ಬಳಿಕ ಕಾಂಗ್ರೆಸ್ ಜೊತೆ ಪಕ್ಷವನ್ನು ವಿಲೀನ ಮಾಡಿದ್ದಾರೆ.

  • ಹೊಸ ಹಿಂದೂ ಪಕ್ಷ ಸ್ಥಾಪನೆಯಾಗುತ್ತಾ? ಏನಿದು ಯತ್ನಾಳ್‌ ಲೆಕ್ಕಾಚಾರ?

    ಹೊಸ ಹಿಂದೂ ಪಕ್ಷ ಸ್ಥಾಪನೆಯಾಗುತ್ತಾ? ಏನಿದು ಯತ್ನಾಳ್‌ ಲೆಕ್ಕಾಚಾರ?

    ಬೆಂಗಳೂರು: ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿ ಬಿಜೆಪಿಯಿಂದ (BJP) 6 ವರ್ಷ ಉಚ್ಚಾಟನೆಗೊಂಡಿರುವ ಬಸನಗೌಡ ಪಾಟೀಲ್‌ ಯತ್ನಾಳ್ (Basangouda Patil Yatnal) ಈಗ ಹೊಸ ಪಕ್ಷ ಸ್ಥಾಪನೆಗೆ ಮುಂದಾಗಿದ್ದಾರೆ. ಅಭಿಮಾನಿಗಳಿಂದ ಒತ್ತಡ ಇದೆ ಎಂದಿರುವ ಯತ್ನಾಳ್, ರಾಜ್ಯವೆಲ್ಲಾ ಸುತ್ತಾಡಿ ಜನಾಭಿಪ್ರಾಯ ಸಂಗ್ರಹಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ.

    ಏನಿದು ಯತ್ನಾಳ್‌ ಲೆಕ್ಕಾಚಾರ?
    ಯತ್ನಾಳ್ ಪ್ರಖರ ಹಿಂದುತ್ವವಾದಿಯಾಗಿದ್ದು ಅದೇ ಅವರ ಶಕ್ತಿ. ಹಿಂದುತ್ವ (Hindutva) ಪರಿಕಲ್ಪನೆ ಇಟ್ಟುಕೊಂಡು ಪಕ್ಷ ಸ್ಥಾಪನೆ ಮಾಡುವುದು ದೇಶದಲ್ಲಿ ಹೊಸದಲ್ಲ. ಈ ಹಿಂದೆ ಮಹಾರಾಷ್ಟ್ರದಲ್ಲಿ ಬಾಳಾ ಠಾಕ್ರೆ ಈ ಕಲ್ಪನೆ ಇಟ್ಟುಕೊಂಡು ಶಿವಸೇನೆ ಸ್ಥಾಪಿಸಿದ್ದರು. ಆದರೆ ಕರ್ನಾಟಕದ ಮಟ್ಟಿಗೆ ಹೊಸದು. ಇದನ್ನೂ ಓದಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಮೋದಿ ನಿವೃತ್ತಿ ಘೋಷಣೆ ಬಗ್ಗೆ ಮಾತನಾಡಿದ್ದಾರೆ: ಸಂಜಯ್ ರಾವತ್

    ಹಿಂದುತ್ವದ ಜೊತೆಗೆ ಉತ್ತರ ಕರ್ನಾಟಕ ಅಭಿವೃದ್ಧಿ ಉದ್ದೇಶ ಹೊಸ ಪಕ್ಷಕ್ಕೆ ಬೂಸ್ಟ್ ಸಿಗಲಿದೆ. ಹಿಂದುತ್ವ ಪರ ಇರುವ ನಾಯಕರಿಂದ ಪ್ರತ್ಯಕ್ಷ, ಪರೋಕ್ಷ ಬೆಂಬಲ ಸಿಗುವ ಸಾಧ್ಯತೆಯಿದೆ.

    ಹಿಂದುತ್ವ ಪರ ಇರುವ ಸಂಘಟನೆಗಳಿಂದಲೂ ಬೆಂಬಲ ಸಿಗಲಿದೆ.  ಯತ್ನಾಳ್ ಉಚ್ಛಾಟನೆಯಿಂದ ಹಿಂದುತ್ವದ ಸರ್ಕಲ್‌ನಲ್ಲಿ ಅನುಕಂಪದ ಅಲೆ ಈಗ ಸ್ವಲ್ಪ ಎದ್ದಿದೆ. ಹಿಂದುತ್ವವಾದಿ ನಾಯಕರು ಒಂದೇ ವೇದಿಕೆಯಲ್ಲಿ ಸಮಾಗಮವಾಗಲಿದ್ದಾರೆ. ಇದನ್ನೂ ಓದಿ: ವಿಜಯೇಂದ್ರನ ಚಮಚಾಗಳಿದ್ರೆ ಪ್ರಶ್ನೆ ಕೇಳ್ಬೇಡಿ – ಮಾಧ್ಯಮಗಳ ಮುಂದೆ ಸಿಡಿಮಿಡಿಗೊಂಡ ಯತ್ನಾಳ್

    ಹೊಸ ಪಕ್ಷ ಯಶಸ್ವಿಯಾಗುತ್ತಾ ಇಲ್ವೋ ಎನ್ನುವುದಕ್ಕೆ ಚುನಾವಣೆ ಉತ್ತರ ನೀಡಲಿದೆ. ಆದರೆ ಬಿಜೆಪಿಯಿಂದ ಹೊರ ಬಂದ ಕಾರಣ ಉತ್ತರ ಕರ್ನಾಟಕದಲ್ಲಿ ಅದರಲ್ಲೂ ಪಂಚಮಸಾಲಿಗಳು ನಿರ್ಣಾಯಕರಾಗಿರುವ ಕೆಲ ಕ್ಷೇತ್ರಗಳಲ್ಲಿ ಬಿಜೆಪಿಗೆ ಹೊಡೆತ ಬೀಳುವ ಸಾಧ್ಯತೆಯಿದೆ.

     

  • ಯತ್ನಾಳ್ ಕೊಟ್ಟಿದ್ದ ಉತ್ತರ ಪತ್ರ ಬಹಿರಂಗ – ಯಡಿಯೂರಪ್ಪ, ವಿಜಯೇಂದ್ರ ಮೇಲೆ ಚಾರ್ಜ್‌ಶೀಟ್‌

    ಯತ್ನಾಳ್ ಕೊಟ್ಟಿದ್ದ ಉತ್ತರ ಪತ್ರ ಬಹಿರಂಗ – ಯಡಿಯೂರಪ್ಪ, ವಿಜಯೇಂದ್ರ ಮೇಲೆ ಚಾರ್ಜ್‌ಶೀಟ್‌

    ಬೆಂಗಳೂರು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಫೆ. 12ರಂದು ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿಗೆ ಕೊಟ್ಟಿದ್ದ ಉತ್ತರದ ಪತ್ರ ಬಹಿರಂಗವಾಗಿದೆ. 26 ಅಂಶಗಳನ್ನು ಉಲ್ಲೇಖಿಸಿ 9 ಪುಟಗಳ ಉತ್ತರ ಕೊಟ್ಟಿದ್ದ ಯತ್ನಾಳ್, ಯಡಿಯೂರಪ್ಪ (Yediyurappa) ಹಾಗೂ ವಿಜಯೇಂದ್ರ (Vijayendra) ವಿರುದ್ಧ ಚಾರ್ಜ್‌ಶೀಟ್‌ ಹಾಕಿ ವಂಶಪಾರಂಪರ್ಯ ರಾಜಕಾರಣದ ಬಗ್ಗೆ ಉಲ್ಲೇಖಿಸಿದ್ದರು.

    ನನ್ನ ಮೇಲಿನ ಆರೋಪಗಳು ವ್ಯಕ್ತಿ ಮತ್ತು ಕುಟುಂಬದಿಂದ ಬಂದಿವೆಯೇ ಹೊರತು ಪಕ್ಷದಿಂದಲ್ಲ. ನಾನು ಯಾವಾಗಲೂ ಪಕ್ಷದ ಸಿದ್ಧಾಂತ ಮತ್ತು ಹಿಂದುತ್ವದ ಕಾರಣಕ್ಕೆ ಕೆಲಸ ಮಾಡುತ್ತಿದ್ದೇನೆ. ನಾನು ಹಿಂದುತ್ವದ ಸಿದ್ಧಾಂತ ಮತ್ತು ಬಿಜೆಪಿ ತತ್ವಗಳಿಗೆ ಬದ್ಧನಾಗಿದ್ದೇನೆ. ಕರ್ನಾಟಕಕ್ಕೆ ತಟಸ್ಥ ವೀಕ್ಷಕರನ್ನು ನೇಮಿಸಬೇಕೆಂದು ನಾನು ಕೇಂದ್ರ ನಾಯಕತ್ವವನ್ನು ಒತ್ತಾಯಿಸುತ್ತೇನೆ ಎಂದು ಪತ್ರದಲ್ಲಿ ಕೇಳಿಕೊಂಡಿದ್ದರು. ಇದನ್ನೂ ಓದಿ: ಬಿಜೆಪಿಯಿಂದ ಬಸನಗೌಡ ಪಾಟೀಲ್‌ ಯತ್ನಾಳ್‌ ಉಚ್ಛಾಟನೆ

    ನನ್ನ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಕ್ಷದ ಹೈಕಮಾಂಡ್‌ಗೆ ಒತ್ತಾಯಿಸುತ್ತಿರುವ ಬಂಡಾಯಗಾರರ ಸಭೆಗಳು ಯಡಿಯೂರಪ್ಪನವರ ಮನೆಯಲ್ಲಿ ನಡೆದಿವೆ. ವಿಜಯೇಂದ್ರ ಕೂಡ ಆ ಸಭೆಯಲ್ಲಿ ಇದ್ದರು. ಬಿಜೆಪಿ ಕೇಂದ್ರ ನಾಯಕತ್ವವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಈ ಸಭೆಗಳಲ್ಲಿ ಭಾಗವಹಿಸಿದವರು ಬಿ.ಎಸ್.ಯಡಿಯೂರಪ್ಪ ಪಕ್ಷದಿಂದ ಹೊರ ನಡೆದು ಕೆಜೆಪಿಯನ್ನು (KJP) ಬೆಂಬಲಿಸಿದವರು ಎಂದು ಆರೋಪಿಸಿದರು. ಇದನ್ನೂ ಓದಿ: ಯತ್ನಾಳ್‌ ಉಚ್ಚಾಟನೆ | ಸುದೀರ್ಘ ಅವಧಿಯಿಂದ ಸ್ಥಿತಿ-ಗತಿಗಳನ್ನು ಅವಲೋಕಿಸಿ ತೆಗೆದುಕೊಂಡ ಕ್ರಮ – ವಿಜಯೇಂದ್ರ

    ಕುಟುಂಬ ರಾಜಕಾರಣ, ಹೊಂದಾಣಿಕೆ ರಾಜಕಾರಣದ ಬಗ್ಗೆ ಮಾತನಾಡಿದ್ದೇನೆ ಎಂದು ಯತ್ನಾಳ್ ಸಮರ್ಥಿಸಿದರು. ಆದರೆ ಯತ್ನಾಳ್ ಉತ್ತರಕ್ಕೆ ಕೇರ್ ಮಾಡದ ಬಿಜೆಪಿ ಹೈಕಮಾಂಡ್ ಈಗ 6 ವರ್ಷಗಳ ಕಾಲ ಉಚ್ಚಾಟನೆ ಮಾಡಿದೆ. ಇದನ್ನೂ ಓದಿ: ಪಕ್ಷಕ್ಕೆ ದುಡಿದ ಯತ್ನಾಳ್‌ ಮತ್ತೆ ಬಿಜೆಪಿಗೆ ಬರುತ್ತಾರೆ: ರಮೇಶ್‌ ಜಾರಕಿಹೊಳಿ

  • POCSO Case: ಬಂಧನ ಭೀತಿಯಿಂದ ಬಚಾವ್, ಬಿಎಸ್‌ವೈಗೆ ಜಾಮೀನು- ಕೋರ್ಟ್‌ ಹೇಳಿದ್ದೇನು?

    POCSO Case: ಬಂಧನ ಭೀತಿಯಿಂದ ಬಚಾವ್, ಬಿಎಸ್‌ವೈಗೆ ಜಾಮೀನು- ಕೋರ್ಟ್‌ ಹೇಳಿದ್ದೇನು?

    ಬೆಂಗಳೂರು: ಪೋಕ್ಸೋ ಪ್ರಕರಣದಲ್ಲಿ (POCSO Case) ಮುಖ್ಯಮಂತ್ರಿ ಯಡಿಯೂರಪ್ಪಗೆ (BS Yediyurappa) ಭಾಗಶಃ ರಿಲೀಫ್ ಸಿಕ್ಕಿದೆ.

    ತಮ್ಮ ವಿರುದ್ಧದ ಪ್ರಕರಣವನ್ನು ರದ್ದು ಮಾಡುವಂತೆ ಹಾಗೂ ನಿರೀಕ್ಷಣಾ ಜಾಮೀನು ಮಂಜೂರು ಮಾಡುವಂತೆ ಕೋರಿ ಯಡಿಯೂರಪ್ಪ ಸಲ್ಲಿಸಿದ್ದ 2 ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ (High Court) ಸಕ್ಷಮ ನ್ಯಾಯಾಲಯದ ಆದೇಶವನ್ನು ವಜಾ ಮಾಡಿ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

    ಯಡಿಯೂರಪ್ಪ ಸದ್ಯಕ್ಕೆ ನಿರಾಳರಾಗಿದ್ದು ಬಂಧನ ಭೀತಿಯಿಂದ ಬಚಾವ್ ಆಗಿದ್ದಾರೆ. ಆದರೆ ತನಿಖಾಧಿಕಾರಿಗಳು ನೀಡುವ ಅಂತಿಮ ವರದಿಯ ಆಧಾರದಲ್ಲಿ ವಿಚಾರಣೆ ಮುಂದುವರೆಸುವಂತೆ ಆದೇಶ ನೀಡಿದೆ.
    ಇದನ್ನೂ ಓದಿ: ಮುಡಾ ಕೇಸಲ್ಲಿ ಸಿಎಂ ಸಿದ್ದರಾಮಯ್ಯಗೆ ಬಿಗ್‌ ರಿಲೀಫ್‌ – CBI ತನಿಖೆಗೆ ವಹಿಸಲು ಹೈಕೋರ್ಟ್‌ ನಕಾರ

     

     `ಹೈ’ ತೀರ್ಪಿನಲ್ಲಿ ಏನಿದೆ?
    ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಲಾಗಿದೆ. ಬಿಎಸ್‌ವೈ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ. ಸಕ್ಷಮ ಕೋರ್ಟ್ ಸಂಜ್ಞೆ ಪರಿಗಣಿಸಿರುವ ಆದೇಶ ವಜಾಗೊಳಿಸಲಾಗಿದೆ. ಅಪರಾಧ, ತನಿಖೆ, ಅಂತಿಮ ವರದಿ ಹಾಗೆಯೇ ಉಳಿಯಲಿದೆ.

    ಅಂತಿಮ ವರದಿಗೆ ಸಂಬಂಧಿಸಿ ಆದೇಶ ಮಾಡಲು ಮತ್ತೆ ಸಕ್ಷಮ ಕೋರ್ಟ್‌ಗೆ ಪ್ರಕರಣ ವರ್ಗ ಮಾಡಲಾಗಿದೆ. ಸಂಜ್ಞೆ ಆದೇಶ ಹೊರತುಪಡಿಸಿ ಉಳಿದ ಎಲ್ಲಾ ವಾದಗಳನ್ನು ಮುಕ್ತವಾಗಿ ಇರಿಸಲಾಗಿದೆ. ಅರ್ಜಿದಾರರು ಸೂಕ್ತ ವೇದಿಕೆಯಲ್ಲಿ ಪರಿಹಾರ ಪಡೆಯಬಹುದು.

  • ವಿಜಯೇಂದ್ರ ಚಡ್ಡಿ ಹಾಕೋ ಮುನ್ನ ನಾನು ಪಕ್ಷ ಸಂಘಟನೆ ಮಾಡಿದ್ದೇನೆ.. ಈ ಬಚ್ಚಾನಿಂದ ಕಲಿಯಬೇಕಿಲ್ಲ: ಯತ್ನಾಳ್

    ವಿಜಯೇಂದ್ರ ಚಡ್ಡಿ ಹಾಕೋ ಮುನ್ನ ನಾನು ಪಕ್ಷ ಸಂಘಟನೆ ಮಾಡಿದ್ದೇನೆ.. ಈ ಬಚ್ಚಾನಿಂದ ಕಲಿಯಬೇಕಿಲ್ಲ: ಯತ್ನಾಳ್

    – ಅಣ್ಣ ಕೇಂದ್ರ ಮಂತ್ರಿಯಾಗಲಿ, ನಿಮ್ಮ ಅಪ್ಪ ರಾಷ್ಟ್ರಪತಿಯಾಗಲಿ ಎಂದು ಟಾಂಗ್

    ಬೆಂಗಳೂರು: ವಿಜಯೇಂದ್ರ (Vijayendra) ಚಡ್ಡಿ ಹಾಕೋ ಮುನ್ನ ನಾನು ಸಂಘಟನೆ ಮಾಡಿದ್ದೇನೆ. ವಿಜಯೇಂದ್ರ ಬಚ್ಚಾ, ನಾವು ಅವನಿಂದ ಕಲಿಯಬೇಕಿಲ್ಲ ಎಂದು ಮತ್ತೊಮ್ಮೆ ವಿಜಯೇಂದ್ರ ವಿರುದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ವಾಗ್ದಾಳಿ ನಡೆಸಿದ್ದಾರೆ.

    ಬಿಜೆಪಿ ಜಿಲ್ಲಾ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಎದ್ದಿರುವ ಗೊಂದಲಗಳ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ವಿಜಯೇಂದ್ರ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಜಿಲ್ಲಾಧ್ಯಕ್ಷರ ಆಯ್ಕೆಯಲ್ಲಿ ನನ್ನ ಪಾತ್ರ ಏನೂ ಇಲ್ಲ.. ತಪ್ಪು ಹೊರಿಸೋದು ಬೇಡ: ವಿಜಯೇಂದ್ರ

    ವಿಜಯೇಂದ್ರ ಅವರ ಒರಿಜಿನಲ್ ಬಣ್ಣ ಹೊರಗೆ ಬಂದಿದೆ. ವಿಜಯೇಂದ್ರ ಯಾಕೆ ಸರ್ಕಸ್ ಮಾಡ್ತಿದ್ದೀರಾ ಚುನಾವಣೆ ಅಂತ. ರಾಧಾಮೋಹನ್‌ಗೆ ಹೇಳಿ ರಾಜ್ಯಾಧ್ಯಕ್ಷ ನೀವೇ ಅಂತ ಕೈ ಎತ್ತಿಸಿಕೊಳ್ಳಿ. ಸಂಸದ ಸುಧಾಕರ್ ಮಾತ್ರವಲ್ಲ. ರಾಜ್ಯದ ಹಿರಿಯ ನಾಯಕರಿಗೆ ಜಿಲ್ಲಾ ಅಧ್ಯಕ್ಷ ಆಯ್ಕೆ ಬಗ್ಗೆ ಅಸಮಾಧಾನ ಇದೆ. ಇದೇನು ಪ್ರೈವೇಟ್ ಕಂಪನಿನಾ. ಎಲ್ಲ ನೀವೇ ಮಾಡಿಕೊಳ್ಳೋದಾದ್ರೆ ಮಾಡಿಕೊಳ್ಳಿ. ಅಣ್ಣ ಕೇಂದ್ರ ಮಂತ್ರಿಯಾಗಲಿ, ನಿಮ್ಮ ಅಪ್ಪ ರಾಷ್ಟ್ರಪತಿ ಆಗಲಿ ಅಂತ ಕಿಡಿಕಾರಿದರು.

    ಹೈಕಮಾಂಡ್ ನಾಯಕರೇ ಅಧ್ಯಕ್ಷ ಘೋಷಣೆ ಮಾಡಲಿ. ಚುನಾವಣೆ ಯಾಕೆ ಬೇಕು? ವಿಜಯೇಂದ್ರ ಚಡ್ಡ ಹಾಕೋ ಮುನ್ನ ಸಂಘಟನೆ ಮಾಡಿದ್ದೇವೆ. ಈ ಬಚ್ಚಾನಿಂದ ನಾವು ಕಲಿಯಬೇಕಿಲ್ಲ. ನಮಗೆ ಯಾವುದೇ ಭಯ ಇಲ್ಲ. ಪಕ್ಷದಿಂದ ತೆಗೆದು ಹಾಕ್ತೀರಾ ಹಾಕಲಿ. ನಾವು ಹೆದರೊಲ್ಲ ಎಂದು ಸವಾಲು ಹಾಕಿದರು. ಇದನ್ನೂ ಓದಿ: 23 ಜಿಲ್ಲೆಗಳಿಗೆ ಜಿಲ್ಲಾಧ್ಯಕ್ಷರ ಆಯ್ಕೆ ಮಾಡಿದ ಬಿಜೆಪಿ – ಯಾವ ಜಿಲ್ಲೆಗೆ ಯಾರು ಅಧ್ಯಕ್ಷರು?

    ನಿನ್ನೆ ಮಾಡಿರೋ ಜಿಲ್ಲಾಧ್ಯಕ್ಷರ ಪಟ್ಟಿಯಲ್ಲಿ ಯಡಿಯೂರಪ್ಪ-ರಾಘವೇಂದ್ರ ಬಿಟ್ಟು ಇನ್ಯಾರಿಗೂ ಅಧ್ಯಕ್ಷರ ಸ್ಥಾನ ಪಟ್ಟಿ ಇಷ್ಟ ಆಗಿಲ್ಲ. ಹೀಗೆ ಆದರೆ ಪಕ್ಷ ಕಟ್ಟಲು ಸಾಧ್ಯವಿಲ್ಲ. ಮಾಜಿ ಕೆಜೆಪಿ ಒಳಗೆ ಇರೋರಿಗೆ, ಹೊಗಳು ಭಟ್ಟರಿಗೆ, ಅಡ್ಜೆಸ್ಟ್ಮೆಂಟ್ ಮಾಡೋರಿಗೆ ಸ್ಥಾನಮಾನ ಕೊಡ್ತಿದ್ದಾರೆ. ಉಸ್ತುವಾರಿ ರಾಧಾಮೋಹನ್ ದಾಸ್ ಕೂಡಾ ಪಕ್ಷಪಾತವಾಗಿದ್ದಾರೆ. ಹುಲಿ ಅಂತ ತಂದು ಕೂರಿಸಿದ್ರೆ ಅದು ಹುಲಿ ಆಗೊಲ್ಲ ಎಂದು ವಿಜಯೇಂದ್ರ ವಿರುದ್ಧ ಕಿಡಿಕಾರಿದರು.

    ನಾಳೆ ಸಭೆ ಮಾಡ್ತಿದ್ದೇವೆ. ಸಭೆ ಎರಡು ಹಂತದಲ್ಲಿ ಆಗುತ್ತದೆ. ತಟಸ್ಥ ಪರಿವರ್ತನೆ ಆಗಿ ನಿಷ್ಠಾವಂತ ಆಗಿದೆ. ನಾಳೆ ಕೂತು ಚರ್ಚೆ ಮಾಡ್ತೀವಿ. ಈ ಅಧ್ಯಕ್ಷರನ್ನ ಒಪ್ಪೋಕೆ ಸಾಧ್ಯವಿಲ್ಲ ಎಂದು ವಿಜಯೇಂದ್ರ ಬದಲಾವಣೆಗೆ ಒತ್ತಾಯ ಮಾಡಿದರು. ಇದನ್ನೂ ಓದಿ: ವಿಜಯೇಂದ್ರ ಇದ್ರೆ ಬಿಜೆಪಿಗೆ ಭವಿಷ್ಯ ಇಲ್ಲ: ಸಂಸದ ಸುಧಾಕರ್

    ನಮ್ಮಲ್ಲಿ ಯಾರು ಅಭ್ಯರ್ಥಿ ಅನ್ನೋದು ಫೈನಲ್ ಮಾಡಿಲ್ಲ. ರಾಮುಲು ಸೇರಿ ಎಲ್ಲವೂ ಅಸಮಾಧಾನ ಇದ್ದಾರೆ. ಅವರ ಹಿಂದೆ ಇರೋ ಚೇಲಾಗಳು ಜಾಸ್ತಿ ಆಗಿದ್ದಾರೆ. ಬಹಳ ದಿನ ಅನ್ಯಾಯ, ಸರ್ವಾಧಿಕಾರಿ ಇರೋ ಮನೋಭಾವನೆ ಇರೋ ನಾಯಕನ ಅಂತ್ಯ ಆಗುತ್ತದೆ. ಯಡಿಯೂರಪ್ಪ ಒಬ್ಬನೇ ಲಿಂಗಾಯತ ನಾಯಕ ಅಂತ ಹೈಕಮಾಂಡ್ ತಿಳಿದುಕೊಂಡಿದೆ. ಹೀಗಾಗಿ ಇನ್ನು ಏನು ನಿರ್ಧಾರ ಮಾಡಿಲ್ಲ ಅಂತ ಹೈಕಮಾಂಡ್ ವಿರುದ್ಧವೂ ಬೇಸರ ಹೊರ ಹಾಕಿದರು.

  • ವಿಜಯೇಂದ್ರ ನೀನು ಬಚ್ಚಾ, ಅಧ್ಯಕ್ಷ ಸ್ಥಾನಕ್ಕೆ ಯೋಗ್ಯನಲ್ಲ: ರಮೇಶ್‌ ಜಾರಕಿಹೊಳಿ ಕೆಂಡಾಮಂಡಲ

    ವಿಜಯೇಂದ್ರ ನೀನು ಬಚ್ಚಾ, ಅಧ್ಯಕ್ಷ ಸ್ಥಾನಕ್ಕೆ ಯೋಗ್ಯನಲ್ಲ: ರಮೇಶ್‌ ಜಾರಕಿಹೊಳಿ ಕೆಂಡಾಮಂಡಲ

    ಬೆಳಗಾವಿ: ವಿಜಯೇಂದ್ರ ನೀನು ಬಚ್ಚಾ, ನೀನು ಅಧ್ಯಕ್ಷ ಸ್ಥಾನಕ್ಕೆ ಯೋಗ್ಯನಲ್ಲ ಎಂದು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ (Ramesh Jarkiholi) ಏಕವಚನದಲ್ಲೇ ವಿಜಯೇಂದ್ರ (B.Y.Vijayendra) ವಿರುದ್ಧವೇ ಗುಡುಗಿದ್ದಾರೆ.

    ಗೋಕಾಕ್‌ನ ಅಂಕಲಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಜಗಳ ಇದೆ. ಅದು ಕೇವಲ‌ ಅಧ್ಯಕ್ಷ ಸ್ಥಾನ ಬದಲಾವಣೆಗಾಗಿ ಮಾತ್ರ. ಅಧ್ಯಕ್ಷ ಸ್ಥಾನ ಬದಲಾವಣೆಗೆ ಆಗದಿದ್ದರೂ ಪಕ್ಷ ಸಂಘಟನೆ ಮಾಡುತ್ತೇವೆ ಎಂದರು.

    ಯಡಿಯೂರಪ್ಪ (Yediyurappa) ಅವರ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು ಎಂಬ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‌ಇಂದಿಗೂ ಯಡಿಯೂರಪ್ಪನವರು ನಮ್ಮ ನಾಯಕ. ನಾನು ಅವರ ಮೇಲೆ ಅಗೌರವದಿಂದ ಮಾತನಾಡಿಲ್ಲ. ಆದರೆ ನೀನು ಸುಳ್ಳು ಹೇಳುವುದನ್ನು ಬಿಡು. ನಾನು ಶಿಕಾರಿಪುರಕ್ಕೆ ಬರುತ್ತೇನೆ. ನಿನ್ನ ಮನೆಯ ಮುಂದೆಯಿಂದಲೇ ಪ್ರವಾಸ ಶುರು ಮಾಡುತ್ತೇನೆ. ನೀನು ದಿನಾಂಕ ನಿಗದಿ ಮಾಡು. ಬೆಂಬಲಿಗರು ಬರಲ್ಲ ಗನ್ ಮ್ಯಾನ್ ಬರಲ್ಲ, ನಾನೊಬ್ಬನೇ ಬರುತ್ತೇನೆ. ಅಲ್ಲಿಂದಲೇ ಪ್ರವಾಸ ಶುರು ಮಾಡುತ್ತೇನೆ ತಡಿ ನೋಡೊಣ ಎಂದು ಸವಾಲೆಸೆದರು.

    ನಿನ್ನನ್ನು ರಾಜ್ಯದಲ್ಲಿ ಓಡಾಡದ ಹಾಗೆ ಮಾಡುವ ಶಕ್ತಿ ನನಗಿದೆ ಎಂದು ಗುಡುಗಿದ ಜಾರಕಿಹೊಳಿ, ನಿನ್ನಂತ ಕೀಳು ಮಟ್ಟದ ರಾಜಕೀಯ ಮಾಡಲು ನನಗೆ ಬರಲ್ಲ. ವಿಜಯೇಂದ್ರ ಬಗ್ಗೆ ಗೌರವ ಇಲ್ಲ. ಅಧ್ಯಕ್ಷ ಸ್ಥಾನದ ಮೇಲೆ ಮಾತ್ರ ಗೌರವ ಇದೆ. ಅವರನ್ನ ಬದಲಿಸಿ ಹೊಸಬರಿಗೆ ಅವಕಾಶ ನೀಡಲಿ. ಯಡಿಯೂರಪ್ಪನವರೇ ಇನ್ನು‌ ನೀವು ಸಿಎಂ ಆಗಲ್ಲ ಪದೇ ಪದೇ ಸೈಕಲ್ ಮೇಲೆ ಓಡಾಡಿದ್ದೀನಿ ಎಂದು ಹೇಳಬೇಡಿ ಅದರ ಎರಡು ಪಟ್ಟು ಲಾಭ ಪಡೆದುಕೊಂಡಿದ್ದಿರಿ ಎಂದರು. ಇದನ್ನೂ ಓದಿ: 60 ಜನ ಕಾಂಗ್ರೆಸ್‌ನವರು ನಮ್ಮೊಟ್ಟಿಗೆ ಬರಲು ರೆಡಿಯಾಗಿದ್ದರು – ಯತ್ನಾಳ್ ಬಾಂಬ್

    ಪಕ್ಷಕ್ಕೆ ಬಂದು ಮೂರು ವರ್ಷ ಆಯ್ತು ಅಂತೀಯಾ. ನಾನು ನಿಮ್ಮ ಅಪ್ಪನನ್ನು ಸಿಎಂ ಮಾಡಲು ಬಂದಿದ್ದೆ. ನೀನು ಅದೇ ಹರಾಮಿ ದುಡ್ಡಲ್ಲಿ ಓಡಾಡ್ತಿದ್ದಿಯಾ ಎಂದು ವಾಗ್ದಾಳಿ ನಡೆಸಿದರು.

    ಒಬ್ಬ ಬಹುಸಂಖ್ಯಾತ ಯತ್ನಾಳ್‌ ಇದ್ದಾರೆ ಅದಕ್ಕಾಗಿ ಅವರನ್ನ ಒಪ್ಪಿಕೊಂಡಿದ್ದೇನೆ. ಲಿಂಗಾಯತರಲ್ಲಿ ಇನ್ನೂ ಸಾಕಷ್ಟು ನಾಯಕರಿದ್ದಾರೆ. ನೀನು ಸಣ್ಣ ಹುಡುಗ ನಿನಗೆ ಅಧ್ಯಕ್ಷ ಸ್ಥಾನ ನೀಗುವುದಿಲ್ಲ. ಹೈಕಮಾಂಡ್ ಮುಂದುವರೆಸಿದರೆ ಆಗಲಿ ಪಕ್ಷದ ನಿರ್ಣಯ ನಾನು ಸ್ವಾಗತ ಮಾಡುತ್ತೇನೆ. 2028 ಕ್ಕೆ ಪಕ್ಷ ಅಧಿಕಾರ ತರಲು ಕೆಲಸ ಮಾಡ್ತಿನಿ ನನ್ನಿಂದ ತಪ್ಪಾಗಿದ್ದರೆ ಕ್ಷೇತ್ರದ ಜನರಲ್ಲಿ ಕ್ಷೇಮ ಕೇಳುತ್ತೇನೆ ಎಂದರು.

     

  • ಬಿಎಸ್‌ವೈ ಹೆಸರಲ್ಲಿ ನಡೆಯುವುದು ಶಕ್ತಿ ಪ್ರದರ್ಶನವಲ್ಲ, ಗುಂಪುಗಾರಿಕೆ ಪ್ರದರ್ಶನ: ಈಶ್ವರಪ್ಪ

    ಬಿಎಸ್‌ವೈ ಹೆಸರಲ್ಲಿ ನಡೆಯುವುದು ಶಕ್ತಿ ಪ್ರದರ್ಶನವಲ್ಲ, ಗುಂಪುಗಾರಿಕೆ ಪ್ರದರ್ಶನ: ಈಶ್ವರಪ್ಪ

    – ರಥಸಪ್ತಮಿ ದಿನದಿಂದ ರಾಜ್ಯದಲ್ಲಿ ರಾಜಕೀಯ ಬದಲಾವಣೆ

    ಬಾಗಲಕೋಟೆ: ಯಡಿಯೂರಪ್ಪ (Yediyurappa) ಹೆಸರಲ್ಲಿ ನಡೆಯುವ ಉತ್ಸವ ಶಕ್ತಿ ಪ್ರದರ್ಶನವಲ್ಲ, ಗುಂಪುಗಾರಿಕೆ ಪ್ರದರ್ಶನ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ (KS Eshwarappa) ಹೇಳಿದ್ದಾರೆ.

    ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಸಂಘಟನೆ ಉಳಿಯತ್ತದೆ ಮತ್ತೆ ಬಿಜೆಪಿ (BJP) ಮತ್ತಷ್ಟು ಗಟ್ಟಿಯಾಗುತ್ತದೆ. ಪ್ರತಿ ವರ್ಷವೂ ಯಡಿಯೂರಪ್ಪನವರ ಹುಟ್ಟು ಹಬ್ಬ ಆಚರಣೆಗೆ ಮಾಡದ ಸಮಾವೇಶ ಈಗ ಯಾಕೆ ಎಂದು ಪ್ರಶ್ನಿಸಿದರು. ಹೀಗೆ ಗುಂಪುಗಾರಿಕೆ ನಡೆಯುವ ಕೆಲಸವನ್ನು ಯಡಿಯೂರಪ್ಪ ನಿಲ್ಲಿಸಬೇಕು ಎಂದರು.

    ಬಿಜೆಪಿಯಲ್ಲಿ (BJP) ಇರುವ ಗುಂಪುಗಾರಿಕೆ ಮುಂದೆ ಸರಿ ಹೋಗುತ್ತದೆ. ಈಗ ಯಾರ್ಯಾರು ಏನು ಬೇಕಾದ್ರೂ ಹಾರಾಡಬಹುದು. ಬಿಜೆಪಿ ಪಕ್ಷಕ್ಕಾಗಿ ತಪಸ್ಸು ಮಾಡಿ ಕಟ್ಟಿದವರಿಗೆ ಬೆಲೆ ಇದೆ. ಬಿಜೆಪಿಯಲ್ಲಿ ಗುಂಪುಗಾರಿಕೆ ನಡೆಯುವುದಿಲ್ಲ. ವರಿಷ್ಠರು ಅದನ್ನು ಸರಿಯಾಗಿ ಚಿವುಟಿ ಹಾಕುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಹೆಬ್ಬಾಳ್ಕರ್‌ ವಿರುದ್ಧ ಸಿಟಿ ರವಿ ಅಸಂವಿಧಾನಿಕ ಪದ ಬಳಸಿ ನಿಂದಿಸಿದ್ರಾ?

     

    ರೇಣುಕಾಚಾರ್ಯ (Renukcharya) ಬಣದ ಗುಂಪು ಸಮಾವೇಶ ಮಾಡುತ್ತಿದೆ. ಅದಕ್ಕೆ ಬಿಎಸ್‌ವೈ ಅವರ ಒಪ್ಪಿಗೆ ಇದೆ ಇಲ್ವೋ ಗೊತ್ತಿಲ್ಲ. ಆದರೆ ಗುಂಪುಗಾರಿಕೆ ಆಗುವುದಕ್ಕೆ ಬಿಎಸ್‌ವೈ ಒಪ್ಪಿಗೆ ಕೊಡುತ್ತಾರೆ ಎನ್ನುವುದು ನನಗೇನು ಅನಿಸುವುದಿಲ್ಲ ಎಂದರು.

    ಕಾಂಗ್ರೆಸ್‌ನಲ್ಲಿ (Congress) ಒಳ ಒಳಗೆ ಬಡಿದಾಟವಿದೆ. ಯಾವಾಗ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡುತ್ತಾರೆ ಅಂತಾ ಕಾಯ್ತಿದ್ದಾರೆ. ನಾಯಕರು ಸುಮ್ಮನೆ ಸಿದ್ದರಾಮಯ್ಯ ಬೆನ್ನಿಗೆ ನಾವಿದ್ದೇವೆ ಎನ್ನುತ್ತಾರೆ. ಸಿಎಂ ಬೆಂಬಲಕ್ಕೆ ಯಾರೆಲ್ಲ ನಿಂತಿದ್ದಾರೋ ಅವರೆಲ್ಲ ಸಿಎಂ ಖುರ್ಚಿ ಮೇಲೆ ಸಿಎಂ ಆಗಲು ಟವೆಲ್ ಹಾಕಿದ್ದಾರೆ. ರಥಸಪ್ತಮಿ ದಿನದಿಂದ ರಾಜ್ಯದಲ್ಲಿ ಏನೇನು ರಾಜಕೀಯ ಬದಲಾವಣೆ ಆಗುತ್ತದೆ ಕಾದು ನೋಡಬೇಕು ಎಂದು ಮಾರ್ಮಿಕವಾಗಿ ನುಡಿದರು.

     

    ಅಂಬೇಡ್ಕರ್ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಅಂಬೇಡ್ಕರ್ ಜೀವಂತವಾಗಿದ್ದಾಗ ಕಾಂಗ್ರೆಸ್ ಪೂರ್ಣ ಪ್ರಮಾಣದಲ್ಲಿ ಅಪಮಾನ ಮಾಡಿತ್ತು. ಅಂಬೇಡ್ಕರ್‌ ಅವರು ಚುನಾವಣೆಗೆ ನಿಂತಾಗ ಕಾಂಗ್ರೆಸ್‌ ಅವರನ್ನು ಸೋಲಿಸಿತ್ತು. ಅವರು ಸಾವನ್ನಪ್ಪಿದಾಗ ದೆಹಲಿಯಲ್ಲಿ ಜಾಗವನ್ನು ಕಾಂಗ್ರೆಸ್ ಕೊಡಲಿಲ್ಲ. ಕೇಂದ್ರ ಮಂತ್ರಿಮಂಡಲದಲ್ಲಿ ಅವರು ರಾಜೀನಾಮೆ ನೀಡಲು ಮುಂದಾದಾಗ ಕೊಟ್ಟರೆ ಕೊಡಲಿ ಎಂದು ಹೇಳಿ ಸುಮ್ಮನಾಗಿದ್ದರು ಎಂದರು.

  • ನೋಟಿಸ್‌ಗೆ ಬಗ್ಗದ ಯತ್ನಾಳ್ ? – ಬಿಎಸ್‌ವೈ ಭದ್ರಕೋಟೆ ಶಿವಮೊಗ್ಗದಲ್ಲಿ ಲಿಂಗಾಯತ ಸಮಾವೇಶಕ್ಕೆ ತಯಾರಿ

    ನೋಟಿಸ್‌ಗೆ ಬಗ್ಗದ ಯತ್ನಾಳ್ ? – ಬಿಎಸ್‌ವೈ ಭದ್ರಕೋಟೆ ಶಿವಮೊಗ್ಗದಲ್ಲಿ ಲಿಂಗಾಯತ ಸಮಾವೇಶಕ್ಕೆ ತಯಾರಿ

    ನವದೆಹಲಿ: ಶೋಕಾಸ್ ನೋಟಿಸ್‌ಗೆ ಉತ್ತರ ನೀಡಲು ಬಿಜೆಪಿ ರಾಷ್ಟ್ರೀಯ ಶಿಸ್ತು ಸಮಿತಿ ಮುಂದೆ ಹಾಜರಾದ ಬಳಿಕ ಕೊಂಚ ಮೌನವಾದಂತೆ ಕಂಡ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ತೆರೆಮರೆಯಲ್ಲಿ ಮಾಸ್ಟರ್ ಪ್ಲ್ಯಾನ್ ಮಾಡುತ್ತಿದ್ದು, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (BS Yediyurappa) ಕುಟುಂಬಕ್ಕೆ ಸೆಡ್ಡು ಹೊಡೆಯಲು ಲಿಂಗಾಯತ ಸಮಾವೇಶ (Lingayat Samavesha) ಮಾಡಲು ಚಿಂತನೆ ನಡೆಸಿದ್ದಾರೆ.

    ವಕ್ಫ್ ಹೋರಾಟದ (Waqf Protest) ನೆಪದಲ್ಲಿ ದೆಹಲಿಗೆ ಆಗಮಿಸಿದ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ಭಿನ್ನರ ಗುಂಪು ವಿವಿಧ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿತ್ತು. ಈ ನಡುವೆಯೇ ಯತ್ನಾಳ್ ಅವರು ಶಿಸ್ತು ಸಮಿತಿ ಮುಂದೆ ಹಾಜರಾಗಿ ಶೋಕಾಸ್ ನೋಟಿಸ್‌ಗೆ ಉತ್ತರ ನೀಡಿ ಬಹಿರಂಗ ಹೇಳಿಕೆ ನೀಡುವುದಿಲ್ಲ ಎಂದು ಭರವಸೆ ನೀಡಿ ಬಂದಿದ್ದರು.

    ಈ ಭರವಸೆ ಬೆನ್ನಲ್ಲೇ ತೆರೆಮರೆಯಲ್ಲಿ ಕಾರ್ಯತಂತ್ರ ರೂಪಿಸುತ್ತಿರುವ ಯತ್ನಾಳ್ ಮತ್ತು ಅವರ ಟೀಂ ಶಿವಮೊಗ್ಗ ಜಿಲ್ಲೆಯಲ್ಲಿ ಲಿಂಗಾಯತ ಸಮಾವೇಶ ಮಾಡಲು ತಯಾರಿ ಆರಂಭಿಸಿದ್ದಾರೆ. ಮಾಜಿ ಕೇಂದ್ರ ಸಚಿವ ಜಿ.ಎಂ ಜಿದ್ದೇಶ್ವರ್ (GM Siddeshwara) ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಶಿಕಾರಿಪುರ ಅಥವಾ ಸೊರಬದಲ್ಲಿ ಲಿಂಗಾಯತ ಸಮಾವೇಶ ನಡೆಸಿ ಸಾದರ ಮತ್ತು ಪಂಚಮಸಾಲಿ ಲಿಂಗಾಯತ ಸಮುದಾಯದ ಶಕ್ತಿ ಪ್ರದರ್ಶ‌ನಕ್ಕೆ ಚಿಂತನೆ ನಡೆಸಿದ್ದಾರೆ.

    ವಿಧಾನಸಭೆ ಕಲಾದ ಬಳಿಕ ಸಮಾವೇಶ ನಡೆಸಬಹುದು ಎನ್ನಲಾಗಿದ್ದು, ಪಕ್ಷದ ವೇದಿಕೆಯಲ್ಲಿ ಈ ಕಾರ್ಯಕ್ರಮ ಮಾಡದೇ ಖಾಸಗಿಯಾಗಿ ಮಾಡುವ ಮೂಲಕ ರಾಜ್ಯಧ್ಯಕ್ಷ ಬಿ.ವೈ ವಿಜಯೇಂದ್ರ ಮತ್ತು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪಗೆ ತೊಡೆ ತಟ್ಟಲು ಸಿದ್ಧತೆ ಮಾಡಿಕೊಂಡಿದ್ದು ಇದು ಮತ್ತೊಂದು ಹಂತದ ಆತಂರಿಕ‌ ಕಲಹಕ್ಕೆ ವೇದಿಕೆಯಾಗುವ ಸಾಧ್ಯತೆ ಇದೆ.