Tag: yeddyurppa

  • ಜಾರಕಿಹೊಳಿಗೆ ಜಲಸಂಪನ್ಮೂಲ, ಸುಧಾಕರ್‌ಗೆ ವೈದ್ಯಕೀಯ – ಯಾರಿಗೆ ಯಾವ ಖಾತೆ?

    ಜಾರಕಿಹೊಳಿಗೆ ಜಲಸಂಪನ್ಮೂಲ, ಸುಧಾಕರ್‌ಗೆ ವೈದ್ಯಕೀಯ – ಯಾರಿಗೆ ಯಾವ ಖಾತೆ?

    – ಖಾತೆ ಕಸರತ್ತಿಗೆ ಇಂದು ಬಿತ್ತು ತೆರೆ
    – ಹೈಕಮಾಂಡ್ ಅಣತಿಯಂತೆ ನಡೆದಿದೆ ಖಾತೆ ಹಂಚಿಕೆ

    ಬೆಂಗಳೂರು: ಬೆಳಗಾವಿ ರಾಜಕಾರಣ ಪ್ರವೇಶಿಸಿದ್ದಕ್ಕೆ ಅಸಮಾಧಾನಗೊಂಡು ಡಿಕೆ ಶಿವಕುಮಾರ್ ವಿರುದ್ಧ ಬಂಡಾಯ ಸಾರಿದ್ದ ರಮೇಶ್ ಜಾರಕಿಹೊಳಿ ಅವರಿಗೆ ಕೊನೆಗೂ ಡಿಕೆಶಿ ಬಳಿಯಿದ್ದ ಜಲಸಂಪನ್ಮೂಲ ಖಾತೆ ಸಿಕ್ಕಿದೆ.

    ಡಾ.ಕೆ.ಸುಧಾಕರ್ ಅವರಿಗೆ ವೈದ್ಯಕೀಯ ಶಿಕ್ಷಣ ಅಥವಾ ಇಂಧನ ಇಲಾಖೆ ಸಿಗಲಿದೆ ಎಂದು ಹೇಳಲಾಗುತಿತ್ತು. ಆದರೆ ಈಗ ವೈದ್ಯಕೀಯ ಶಿಕ್ಷಣ ಖಾತೆ ಫೈನಲ್ ಆಗಿದೆ.

    ಮಂತ್ರಿಗಳಾಗಿ 10 ಮಂದಿ ಶಾಸಕರು ಪ್ರಮಾಣವಚನ ಸ್ವೀಕರಿಸಿದ್ದರೂ ಇನ್ನು ಖಾತೆ ಹಂಚಿಕೆ ಆಗಿರಲಿಲ್ಲ. ಜಲಸಂಪನ್ಮೂಲ ಖಾತೆ ಸಿಗಬೇಕೆಂದು ಜಾರಕಿಹೊಳಿ ಪಟ್ಟು ಹಿಡಿದಿದ್ದರು. ಈ ಬೇಡಿಕೆಯನ್ನು ಸಿಎಂ ಈಡೇರಿಸಿದ್ದಾರೆ.

    ಪ್ರಮಾಣವಚನ ಸ್ವೀಕರಿಸಿದ ದಿನದಂದು ಎಲ್ಲ ಸಚಿವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದರೆ, ಜಾರಕಿಹೊಳಿ ಯಾವುದೇ ಪ್ರತಿಕ್ರಿಯೆ ನೀಡದೇ ಮೌನಕ್ಕೆ ಶರಣಾಗಿದ್ದರು. ಸಮ್ಮಿಶ್ರ ಸರ್ಕಾರದಲ್ಲಿ ದಿನಕ್ಕೊಂದು ಬಾಂಬ್ ಸಿಡಿಸುತ್ತಿದ್ದ ಜಾರಕಿಹೊಳಿ ಮೌನ ಹಲವು ಪ್ರಶ್ನೆಗಳನ್ನು ಎತ್ತಿತ್ತು.

    ಪ್ರಮಾಣವಚನಕ್ಕೂ ಮುನ್ನವೇ ಜಾರಕಿಹೊಳಿ ಜಲಸಂಪನ್ಮೂಲ ಖಾತೆ ಸಿಗಬೇಕೆಂದು ಸಿಎಂ ಬಳಿ ಮನವಿ ಮಾಡಿಕೊಂಡಿದ್ದರು. ಆದರೆ ಸಿಎಂ ಯಾವುದೇ ಖಚಿತ ಭರವಸೆ ನೀಡಿರಲಿಲ್ಲ. ಹೀಗಾಗಿ ಖಚಿತ ಭರವಸೆ ಸಿಗದ ಕಾರಣ ಜಾರಕಿಹೊಳಿ ಮೌನಕ್ಕೆ ಶರಣಾಗಿದ್ದರು ಎಂದು ಹೇಳಲಾಗುತ್ತಿದೆ.

    ಬೆಂಗಳೂರು ಅಭಿವೃದ್ಧಿ ಮತ್ತು ಗೃಹ ಖಾತೆಗಳ ಹಂಚಿಕೆ ಸದ್ಯಕ್ಕಿಲ್ಲ. ಇವೆರಡೂ ಖಾತೆಗಳನ್ನೂ ಹಂಚಿಕೆ ಮಾಡದಿರಲು ಸಿಎಂ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಬೆಂಗಳೂರು ನಗರಾಭಿವೃದ್ಧಿ ಇಲಾಖೆಯನ್ನು ಸಿಎಂ ತಮ್ಮಲ್ಲೇ ಉಳಿಸಿಕೊಳ್ಳಲಿದ್ದಾರೆ. ಗೃಹ ಖಾತೆ ಬಸವರಾಜ್ ಬೊಮ್ಮಾಯಿ ಬಳಿಯೇ ಉಳಿಯಲಿದೆ. ಈ ಎರಡೂ ಖಾತೆಗಳನ್ನು ಮಿತ್ರಮಂಡಳಿಗೆ ಹಂಚಿಕೆ ಮಾಡದಿರುವ ಮೂಲಕ ಪಕ್ಷದಲ್ಲಿ ಮತ್ತಷ್ಟು ಗೊಂದಲ ಸೃಷ್ಟಿಗೆ ಬ್ರೇಕ್ ಹಾಕಲು ಸಿಎಂ ಕಸರತ್ತು ನಡೆಸಿದ್ದಾರೆ.

    ಜಾರಕಿಹೊಳಿಯವರಿಗೆ ಜಲಸಂಪನ್ಮೂಲ ಖಾತೆ ಕೊಡುವಂತೆ ಹೈಕಮಾಂಡ್‍ಗೂ ಸಿಎಂ ಮನವರಿಕೆ ಮಾಡಿದ್ದರು. ಡಿಸಿಎಂ ಸ್ಥಾನ ಕೊಡದ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಖಾತೆ ಕೊಡಲು ಸಿಎಂ ಒಪ್ಪಿಕೊಂಡಿದ್ದಾರೆ.

    ಯಾರಿಗೆ ಯಾವ ಖಾತೆ..?
    1. ರಮೇಶ್ ಜಾರಕಿಹೊಳಿ – ಜಲಸಂಪನ್ಮೂಲ
    2. ಎಸ್.ಟಿ ಸೋಮಶೇಖರ್ – ಸಹಕಾರ
    3. ಬೈರತಿ ಬಸವರಾಜು – ನಗರಾಭಿವೃದ್ಧಿ ಇಲಾಖೆ
    4. ಬಿ.ಸಿ.ಪಾಟೀಲ್ – ಅರಣ್ಯ ಇಲಾಖೆ
    5. ಆನಂದ್ ಸಿಂಗ್ – ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ
    6. ಗೋಪಾಲಯ್ಯ – ಸಣ್ಣ ಕೈಗಾರಿಕೆ ಮತ್ತು ಸಕ್ಕರೆ
    7. ಶಿವರಾಮ್ ಹೆಬ್ಬಾರ್ – ಕಾರ್ಮಿಕ
    8. ಶ್ರೀಮಂತ ಪಾಟೀಲ್ – ಜವಳಿ
    9. ಡಾ.ಕೆ.ಸುಧಾಕರ್ – ವೈದ್ಯಕೀಯ ಶಿಕ್ಷಣ ಇಲಾಖೆ
    10. ನಾರಾಯಣಗೌಡ – ಪೌರಾಡಳಿತ, ತೋಟಗಾರಿಕೆ

  • ಜಾರಕಿಹೊಳಿಗೆ ಜಲಸಂಪನ್ಮೂಲ ಖಾತೆ – ಯಾರಿಗೆ ಯಾವ ಖಾತೆ ಸಿಗಬಹುದು?

    ಜಾರಕಿಹೊಳಿಗೆ ಜಲಸಂಪನ್ಮೂಲ ಖಾತೆ – ಯಾರಿಗೆ ಯಾವ ಖಾತೆ ಸಿಗಬಹುದು?

    – ಖಾತೆ ಕಸರತ್ತಿಗೆ ಇಂದು ಬೀಳುತ್ತೆ ತೆರೆ
    – ಹೈಕಮಾಂಡ್ ಅಣತಿಯಂತೆ ನಡೆದಿದೆ ಖಾತೆ ಹಂಚಿಕೆ

    ಬೆಂಗಳೂರು: ಬೆಳಗಾವಿ ರಾಜಕಾರಣ ಪ್ರವೇಶಿಸಿದ್ದಕ್ಕೆ ಅಸಮಾಧಾನಗೊಂಡು ಡಿಕೆ ಶಿವಕುಮಾರ್ ವಿರುದ್ಧ ಬಂಡಾಯ ಸಾರಿದ್ದ ರಮೇಶ್ ಜಾರಕಿಹೊಳಿ ಅವರಿಗೆ ಡಿಕೆಶಿ ಬಳಿಯಿದ್ದ ಜಲಸಂಪನ್ಮೂಲ ಖಾತೆ ಸಿಗುವ ಸಾಧ್ಯತೆಯಿದೆ.

    ಮಂತ್ರಿಗಳಾಗಿ 10 ಮಂದಿ ಶಾಸಕರು ಪ್ರಮಾಣವಚನ ಸ್ವೀಕರಿಸಿದ್ದರೂ ಇನ್ನು ಖಾತೆ ಹಂಚಿಕೆ ಆಗಿರಲಿಲ್ಲ. ಇಂದು ಖಾತೆ ಹಂಚಿಕೆ ಆಗಲಿದ್ದು ಜಾರಕಿಹೊಳಿಗೆ ಬಹುತೇಕ ಜಲಸಂಪನ್ಮೂಲ ಖಾತೆಯೇ ಸಿಗುವ ಸಾಧ್ಯತೆಯಿದೆ. ಜಲಸಂಪನ್ಮೂಲ ಖಾತೆ ಸಿಗಬೇಕೆಂದು ಜಾರಕಿಹೊಳಿ ಪಟ್ಟು ಹಿಡಿದಿದ್ದರು. ಈ ಬೇಡಿಕೆಯನ್ನು ಸಿಎಂ ಈಡೇರಿಸಿದ್ದಾರೆ ಎನ್ನಲಾಗುತ್ತಿದೆ.

    ಪ್ರಮಾಣವಚನ ಸ್ವೀಕರಿಸಿದ ದಿನದಂದು ಎಲ್ಲ ಸಚಿವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದರೆ, ಜಾರಕಿಹೊಳಿ ಯಾವುದೇ ಪ್ರತಿಕ್ರಿಯೆ ನೀಡದೇ ಮೌನಕ್ಕೆ ಶರಣಾಗಿದ್ದರು. ಸಮ್ಮಿಶ್ರ ಸರ್ಕಾರದಲ್ಲಿ ದಿನಕ್ಕೊಂದು ಬಾಂಬ್ ಸಿಡಿಸುತ್ತಿದ್ದ ಜಾರಕಿಹೊಳಿ ಮೌನ ಹಲವು ಪ್ರಶ್ನೆಗಳನ್ನು ಎತ್ತಿತ್ತು.

    ಪ್ರಮಾಣವಚನಕ್ಕೂ ಮುನ್ನವೇ ಜಾರಕಿಹೊಳಿ ಜಲಸಂಪನ್ಮೂಲ ಖಾತೆ ಸಿಗಬೇಕೆಂದು ಸಿಎಂ ಬಳಿ ಮನವಿ ಮಾಡಿಕೊಂಡಿದ್ದರು. ಆದರೆ ಸಿಎಂ ಯಾವುದೇ ಖಚಿತ ಭರವಸೆ ನೀಡಿರಲಿಲ್ಲ. ಹೀಗಾಗಿ ಖಚಿತ ಭರವಸೆ ಸಿಗದ ಕಾರಣ ಜಾರಕಿಹೊಳಿ ಮೌನಕ್ಕೆ ಶರಣಾಗಿದ್ದರು ಎಂದು ಹೇಳಲಾಗುತ್ತಿದೆ.

    ಜಾರಕಿಹೊಳಿಯವರಿಗೆ ಜಲಸಂಪನ್ಮೂಲ ಖಾತೆ ಕೊಡುವಂತೆ ಹೈಕಮಾಂಡ್‍ಗೂ ಸಿಎಂ ಮನವರಿಕೆ ಮಾಡಿದ್ದಾರೆ. ಡಿಸಿಎಂ ಸ್ಥಾನ ಕೊಡದ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಖಾತೆ ಕೊಡಲು ಸಿಎಂ ಒಪ್ಪಿಕೊಂಡಿದ್ದಾರೆ. ಡಾ.ಕೆ.ಸುಧಾಕರ್ ಅವರಿಗೆ ಖಾತೆ ಹಂಚಿಕೆಯಲ್ಲಿ ಬಂಪರ್ ಖಾತೆ ಸಿಗಲಿದೆ. ಸುಧಾಕರ್‌ಗೆ ವೈದ್ಯಕೀಯ ಶಿಕ್ಷಣ ಅಥವಾ ಇಂಧನ ಇಲಾಖೆ ಸಿಗೋ ಸಾಧ್ಯತೆ ಇದೆ ಎನ್ನಲಾಗಿದೆ.

    ಆದರೆ ಬೆಂಗಳೂರು ಅಭಿವೃದ್ಧಿ ಮತ್ತು ಗೃಹ ಖಾತೆಗಳ ಹಂಚಿಕೆ ಸದ್ಯಕ್ಕಿಲ್ಲ. ಇವೆರಡೂ ಖಾತೆಗಳನ್ನೂ ಹಂಚಿಕೆ ಮಾಡದಿರಲು ಸಿಎಂ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಬೆಂಗಳೂರು ನಗರಾಭಿವೃದ್ಧಿ ಇಲಾಖೆಯನ್ನು ಸಿಎಂ ತಮ್ಮಲ್ಲೇ ಉಳಿಸಿಕೊಳ್ಳಲಿದ್ದಾರೆ. ಗೃಹ ಖಾತೆ ಬಸವರಾಜ್ ಬೊಮ್ಮಾಯಿ ಬಳಿಯೇ ಉಳಿಯಲಿದೆ. ಈ ಎರಡೂ ಖಾತೆಗಳನ್ನು ಮಿತ್ರಮಂಡಳಿಗೆ ಹಂಚಿಕೆ ಮಾಡದಿರುವ ಮೂಲಕ ಪಕ್ಷದಲ್ಲಿ ಮತ್ತಷ್ಟು ಗೊಂದಲ ಸೃಷ್ಟಿಗೆ ಬ್ರೇಕ್ ಹಾಕಲು ಸಿಎಂ ಕಸರತ್ತು ನಡೆಸಿದ್ದಾರೆ.

    ಯಾರಿಗೆ ಯಾವ ಖಾತೆ?
    1. ರಮೇಶ್ ಜಾರಕಿಹೊಳಿ – ಜಲಸಂಪನ್ಮೂಲ ಖಾತೆ
    2. ಎಸ್.ಟಿ ಸೋಮಶೇಖರ್ – ಸಹಕಾರ ಖಾತೆ
    3. ಬೈರತಿ ಬಸವರಾಜು – ನಗರಾಭಿವೃದ್ಧಿ ಇಲಾಖೆ
    4. ಬಿ.ಸಿ.ಪಾಟೀಲ್ – ಅರಣ್ಯ ಇಲಾಖೆ
    5. ಆನಂದ್ ಸಿಂಗ್ – ಯುವಜನ, ಕ್ರೀಡಾ, ಕೌಶಲ್ಯಾಭಿವೃದ್ಧಿ ಇಲಾಖೆ
    6. ಗೋಪಾಲಯ್ಯ – ಕಾರ್ಮಿಕ ಇಲಾಖೆ
    7. ಶಿವರಾಮ್ ಹೆಬ್ಬಾರ್ – ಪೌರಾಡಳಿತ ಇಲಾಖೆ
    8. ಶ್ರೀಮಂತ ಪಾಟೀಲ್ – ತೋಟಗಾರಿಕೆ ಇಲಾಖೆ ಮತ್ತು ಸಕ್ಕರೆ ಖಾತೆ
    9. ಡಾ.ಕೆ.ಸುಧಾಕರ್ – ವೈದ್ಯಕೀಯ ಇಲಾಖೆ
    10. ನಾರಾಯಣಗೌಡ – ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ

  • ಪ್ರಧಾನಿ ಮೋದಿ ವಿರುದ್ಧ ಯಡಿಯೂರಪ್ಪ ಸಿಡಿದ ಭಾಷಣ ರಹಸ್ಯ

    ಪ್ರಧಾನಿ ಮೋದಿ ವಿರುದ್ಧ ಯಡಿಯೂರಪ್ಪ ಸಿಡಿದ ಭಾಷಣ ರಹಸ್ಯ

    ಬೆಂಗಳೂರು: ಪ್ರಧಾನಿ ನರೇಂದ್ರ ಬಹಿರಂಗ ಸಮಾವೇಶದಲ್ಲಿ ನೆರೆ ಪರಿಹಾರ ಪ್ರಸ್ತಾಪದ ಬಗ್ಗೆ ಬಿಎಸ್‍ವೈಗೆ ಗೊತ್ತಿತ್ತಾ? ರಾಜ್ಯ ಬಿಜೆಪಿಯಿಂದ ತನಿಖಾ ವರದಿಯಲ್ಲಿನ ಅಸಲಿಯತ್ತು ಏನು? ಈ ಎಲ್ಲ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಒಂದು ಭಾಷಣದ ರಹಸ್ಯ ಎಕ್ಸ್ ಕ್ಲೂಸಿವ್  ಸ್ಟೋರಿ ರೋಚಕವಾಗಿದೆ. ಅಷ್ಟಕ್ಕೂ ಬಿಎಸ್‍ವೈ ಭಾಷಣ ಸಿದ್ಧವಾಗಿದ್ದು ಡಾಲರ್ಸ್ ಕಾಲೋನಿ ನಿವಾಸದಲ್ಲಿ ಅಂತೆ. ಇದು ಬಿಜೆಪಿಯ ಆಂತರಿಕ ತನಿಖಾ ವರದಿ.

    ಜನವರಿ 2ರಂದು ತುಮಕೂರಿಗೆ ಪ್ರಧಾನಿ ಬಂದಾಗ ಬಿಎಸ್‍ವೈ ಮೇಲೆ ಫುಲ್ ಖುಷಿಯಾಗಿದ್ರಂತೆ. ಸಿದ್ಧಗಂಗಾ ಮಠದಲ್ಲಿ ಭಾಷಣ ಮಾಡಿದ ನಂತರವೂ ಮೋದಿ ಯಡಿಯೂರಪ್ಪ ಮೇಲೆ ವಿಶ್ವಾಸ, ಪ್ರೀತಿ ಅಪಾರ ಅಂತೆ. ಆದ್ರೆ ಅದೇ ತುಮಕೂರಿನ ಕೃಷಿ ಸಮ್ಮಾನ್ ಕಾರ್ಯಕ್ರಮದಲ್ಲಿ ಮೋದಿ ಸಪ್ಪೆಯಾದ್ರಂತೆ. ಬಿಎಸ್‍ವೈ ಮೇಲೆ ಸಣ್ಣದೊಂದು ಅಸಮಾಧಾನ ವ್ಯಕ್ತಪಡಿಸಿದ್ದು ಹಳೆಯ ಸುದ್ದಿ.

    ಆದರೆ ಈಗ ನೆರೆ ಪರಿಹಾರ ವಿಚಾರದಲ್ಲಿ ಅಸಮಾಧಾನ ವ್ಯಕ್ತವಾಗುವ ರೀತಿ ಭಾಷಣದ ಬಗ್ಗೆ ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ಗಂಭೀರ ಚರ್ಚೆ ನಡೆದಿದೆ. ಭಾಷಣ ಬರೆದವರು ಯಾರು ಎಂಬ ಆಂತರಿಕ ತನಿಖೆಗೆ ಸೂಚಿಸಿದ್ದ ಹೈಕಮಾಂಡ್‍ಗೆ ಉತ್ತರ ಸಿಕ್ಕಿದೆ. ಭಾಷಣದ ಸಿದ್ಧಪಡಿಸಿದ ಬಗ್ಗೆ ರಾಜ್ಯ ಬಿಜೆಪಿ. ರಹಸ್ಯ ತನಿಖಾ ವರದಿ ರವಾನಿಸಿದೆ. ಭಾಷಣ ಸಿದ್ಧಪಡಿಸಿದ್ದು ವಾರ್ತಾ ಇಲಾಖೆಯ ಅಧಿಕಾರಿಗಳು ಅಲ್ಲ. ಯಡಿಯೂರಪ್ಪ ನಿವಾಸದಲ್ಲೇ ಸಿದ್ಧಗೊಂಡಿದ್ದ ಭಾಷಣದ ಸಾರಾಂಶ ಅನ್ನೋದು ಬಿಜೆಪಿ ತನಿಖಾ ವರದಿಯ ಹೈಲೈಟ್ಸ್. ಇದನ್ನೂ ಓದಿ: ಪ್ರಗತಿ ಸಭೆಯಲ್ಲಿ ಕರ್ನಾಟಕದ ಸಾಧನೆಯನ್ನು ಹೊಗಳಿದ ಮೋದಿ

    ಅಷ್ಟೇ ಅಲ್ಲ ಮೊದಲು ಯಡಿಯೂರಪ್ಪ ಭಾಷಣವನ್ನ ಓದಿ ಓಕೆ ಮಾಡಿದ್ರಂತೆ. ಆದರೆ ಯಡಿಯೂರಪ್ಪ ಭಾಷಣ ಓಕೆ ಮಾಡಿದ ಮೇಲೆ ನೆರೆ ವಿಚಾರ ಸೇರಿಸಿದ್ರಂತೆ. ಭಾಷಣದಲ್ಲಿ ನೆರೆ ಪರಿಹಾರ ಆಗ್ರಹ ಅಂಶ ಸೇರಿಸಿದವರ ಹೆಸ್ರು ಯಡಿಯೂರಪ್ಪಗೆ ಮಾತ್ರ ಗೊತ್ತಂತೆ. ಆ ಭಾಷಣದಲ್ಲಿ ನೆರೆ ವಿಚಾರ ಸೇರಿಸಿದ್ದು ಯಾರು ಎಂಬುದನ್ನ ತಿಳಿದು ಬಿಎಸ್‍ವೈ ಸೈಲೆಂಟ್ ಆಗಿದ್ದಾರೆ ಅಂತಾ ರಾಜ್ಯ ಬಿಜೆಪಿ ವರದಿ ರವಾನಿಸಿದೆ. ಹಾಗಾದ್ರೆ ಆ ಭಾಷಣದಲ್ಲಿ ನೆರೆ ಪರಿಹಾರ ಆಗ್ರಹ ವಿಚಾರ ಸೇರಿಸಿದವರು ಅಷ್ಟು ಪ್ರಮುಖರೇ? ನೆರೆ ಪರಿಹಾರವನ್ನು ಮನವಿ ರೂಪದಲ್ಲಿ ಕೇಳಲು ಹೋಗಿ ಆಗ್ರಹ ರೂಪದಲ್ಲಿ ಕೇಳಿಬಿಟ್ಟರಾ? ಈ ಪ್ರಶ್ನೆಗಳಿಗೆ ಮಾತ್ರ ಉತ್ತರ ಸಿಕ್ಕಿಲ್ಲ.

  • ಬೆಳ್ಳಂಬೆಳಗ್ಗೆ ಸಿಎಂಗೆ ಅಚ್ಚರಿ – ಯಡಿಯೂರಪ್ಪಗೆ ಜೈ ಅಂದ ಪ್ರಧಾನಿ ಮೋದಿ

    ಬೆಳ್ಳಂಬೆಳಗ್ಗೆ ಸಿಎಂಗೆ ಅಚ್ಚರಿ – ಯಡಿಯೂರಪ್ಪಗೆ ಜೈ ಅಂದ ಪ್ರಧಾನಿ ಮೋದಿ

    ಬೆಂಗಳೂರು: ಬರೋಬ್ಬರಿ ನಾಲ್ಕು ತಿಂಗಳ ನಂತರ ಸಿಎಂ ಯಡಿಯೂರಪ್ಪ ಮೇಲೆ ದೆಹಲಿ ನಾಯಕರಿಗೆ ಪ್ರೀತಿ ಹುಟ್ಟಿದೆ. ಯಡಿಯೂರಪ್ಪ ಕುರಿತು ತಾತ್ಸಾರದಿಂದಿದ್ದ ಪ್ರಧಾನಿ ಮೋದಿಯವರು ಕೊನೆಗೂ ಯಡಿಯೂರಪ್ಪಗೆ ಜೈ ಎನ್ನುವ ಸಂದರ್ಭ ಬಂದೇಬಿಡ್ತು. ಉಪಚುನಾವಣೆ ಫಲಿತಾಂಶ ಬಂದ ಬೆನ್ನಲ್ಲೇ ಕೇಂದ್ರದ ನಾಯಕರು ಯಡಿಯೂರಪ್ಪಗೆ ಬಹುಪರಾಕ್ ಹಾಡುತ್ತಿದ್ದಾರೆ.

    ಇವತ್ತು ಬೆಳ್ಳಂಬೆಳಗ್ಗೆ ಸಿಎಂ ಯಡಿಯೂರಪ್ಪಗೆ ಅಚ್ಚರಿಯೊಂದು ಕಾದಿತ್ತು. ಇವತ್ತು ಬೆಳಗ್ಗೆ ಖುದ್ದು ಪ್ರಧಾನಿ ನರೇಂದ್ರ ಮೋದಿಯವರು ಯಡಿಯೂರಪ್ಪಗೆ ದೂರವಾಣಿ ಕರೆ ಮಾಡಿದ್ರು. ಹತ್ತು ನಿಮಿಷಗಳಿಗೂ ಹೆಚ್ಚು ಕಾಲ ಪ್ರಧಾನಿಗಳು ಯಡಿಯೂರಪ್ಪ ಜೊತೆ ಫೋನಿನಲ್ಲಿ ಮಾತುಕತೆ ನಡೆಸಿದ್ರು. ಮೊದಲಿಗೆ ಉಪಚುನಾವಣೆಯಲ್ಲಿ ಸಿಕ್ಕಿದ ಭರ್ಜರಿ ಗೆಲುವಿಗೆ ಪ್ರಧಾನಿಗಳು ಸಿಎಂ ಯಡಿಯೂರಪ್ಪಗೆ ತುಂಬು ಹೃದಯದ ಅಭಿನಂದನೆ ತಿಳಿಸಿದ್ರು.

    ಪ್ರಧಾನಿಗಳು ಯಡಿಯೂರಪ್ಪಗೆ ಉಪಚುನಾವಣೆ ಗೆಲುವಿಗೆ ಮತ್ತೊಮ್ಮೆ ಅಭಿನಂದನೆ ತಿಳಿಸಿದ್ರು. ಬಳಿಕ ಕುಶಲೋಪರಿ ವಿಚಾರಿಸಿ ಆಡಳಿತ, ಅಭಿವೃದ್ಧಿಗೆ ಸಂಬಂಧಿಸಿದಂತೆ ಮಾತು ಆರಂಭಿಸಿದರು. ರಾಜ್ಯ ಸರ್ಕಾರಕ್ಕೆ ಎಲ್ಲ ರೀತಿಯ ಸಹಕಾರ ಕೊಡುವುದಾಗಿ ಸಿಎಂಗೆ ಭರವಸೆ ಪ್ರಧಾನಿ ಮೋದಿ ಭರವಸೆ ಕೊಟ್ಟಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಈ ವೇಳೆ ಉಪಚುನಾವಣೆ ಬಂದಾಗ ಮೊದಲೇ ಕರೆ ಮಾಡಿ ಅಭಿನಂದನೆ ಹೇಳಲು ನಾನಾ ಕೆಲಸ ಕಾರ್ಯಗಳ ಒತ್ತಡಗಳಿದ್ದವು ಎಂದು ಸಿಎಂಗೆ ಪ್ರಧಾನಿಯವರು ಸ್ಪಷ್ಟನೆ ಕೊಟ್ರು. ಜೊತೆಗೆ ರಾಜ್ಯಕ್ಕೆ ಬರಬೇಕಾದ ಜಿಎಸ್ ಟಿ ತೆರಿಗೆಯ ಪಾಲು ಕೊಡುವ ಬಗ್ಗೆಯೂ ಮಹತ್ವದ ಮಾತುಕತೆ ನಡೆಸಿದರು. ಆದಷ್ಟು ಬೇಗ ರಾಜ್ಯದ ಜಿಎಸ್ಟಿ ಪಾಲು ಕೊಡುವುದಾಗಿ ಭರವಸೆ ಕೊಟ್ಟು, ಸಿಎಂ ಅವರಿಂದ ರಾಜ್ಯದ ತೆರಿಗೆ ಸಂಗ್ರಹ, ಅಭಿವೃದ್ಧಿ ಕುರಿತು ಪ್ರಧಾನಿಗಳು ಮಾಹಿತಿ ಪಡೆದರು. ಇನ್ನು ಸಿಎಬಿ ಮತ್ತು ಎನ್‍ಆರ್‍ಸಿ ಜಾರಿ ಬಗ್ಗೆಯೂ ಸಿಎಂ ಜೊತೆ ಚರ್ಚೆ ನಡೆಸಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಮಾಹಿತಿ ಪಡೆದರು. ಕೊನೆಯಲ್ಲಿ ಮತ್ತೊಮ್ಮೆ ಸಿಎಂಗೆ ಅಭಿನಂದನೆ ತಿಳಿಸಿ ಪ್ರಧಾನಿ ಮೋದಿಯವರು ಕರೆ ಕಡಿತ ಮಾಡಿದರು. ಇದನ್ನೂ ಓದಿ: ಮೈತ್ರಿ ಸರ್ಕಾರದ ಸ್ಟ್ರಾಟಜಿ ಅನುಸರಿಸಲು ಯಡಿಯೂರಪ್ಪ ಆಲೋಚನೆ

    ಬಹಳ ಕಾಲದ ನಂತರ ಪ್ರಧಾನಿ ಮೋದಿಯವರು ಹೀಗೆ ಯಡಿಯೂರಪ್ಪಗೆ ಕರೆ ಮಾಡಿದ್ದಾರೆ. ಇದರಿಂದ ಯಡಿಯೂರಪ್ಪರ ಹುಮ್ಮಸ್ಸು ಇನ್ನಷ್ಟು ಇಮ್ಮಡಿಸಿದೆ. ಉಪಚುನಾವಣೆ ಫಲಿತಾಂಶದ ಬಳಿಕ ಮೋದಿಯವರು ಟ್ವೀಟ್ ಮಾಡುವ ಮೂಲಕ ಯಡಿಯೂರಪ್ಪಗೆ ಅಭಿನಂದನೆ ಹೇಳಿದ್ದರು. ಮೊನ್ನೆ ಸಂಸತ್ ನಲ್ಲಿ ನಡೆದ ಸಂಸದರ ಸಭೆಯಲ್ಲೂ ಯಡಿಯೂರಪ್ಪ ಪರ ಚಪ್ಪಾಳೆ ತಟ್ಟಿಸಿ ಬಹುಪರಾಕ್ ಅಂದಿದ್ದರು. ಬದಲಾದ ಸನ್ನಿವೇಶ ನೋಡುತ್ತಿದ್ದರೆ ಸಧ್ಯಕ್ಕೆ ಸಿಎಂ ಯಡಿಯೂರಪ್ಪರ ಸ್ಥಾನ, ನಾಯಕತ್ವ ಅಬಾಧಿತ ಎನ್ನುವ ವಿಶ್ಲೇಷಣೆ ಕೇಳಿಬಂದಿದೆ.

     

  • ಮೈತ್ರಿ ಸರ್ಕಾರದ ಸ್ಟ್ರಾಟಜಿ ಅನುಸರಿಸಲು ಯಡಿಯೂರಪ್ಪ ಆಲೋಚನೆ

    ಮೈತ್ರಿ ಸರ್ಕಾರದ ಸ್ಟ್ರಾಟಜಿ ಅನುಸರಿಸಲು ಯಡಿಯೂರಪ್ಪ ಆಲೋಚನೆ

    ಬೆಂಗಳೂರು: ಉಪಚುನಾವಣೆಯ ಬಳಿಕ ರಾಜ್ಯ ಬಿಜೆಪಿ ಸರ್ಕಾರ ಭೌತಿಕವಾಗಿಯೇನೋ ಸ್ಥಿರತೆ ಕಾಪಾಡಿಕೊಂಡಿದೆ. ಆದರೆ ಆಂತರಿಕವಾಗಿ ಒಂದು ಸುಭದ್ರ ಸರ್ಕಾರಕ್ಕಿರಬೇಕಾದ ಯಾವ ಲಕ್ಷಣಗಳೂ ಇಲ್ಲ. ಸರ್ಕಾರದಲ್ಲಿ ಸದ್ಯ ಗುಂಪುಗಾರಿಕೆಗೆ ತಾತ್ಕಾಲಿಕ ತಡೆ ಬಿದ್ದಿರಬಹುದು. ಆದರೆ ಸಂಪುಟ ವಿಸ್ತರಣೆ ಕುರಿತ ಜಟಾಪಟಿ, ಸವಾಲುಗಳು ಬಗೆಹರಿಯುವ ಲಕ್ಷಣಗಳು ಕಾಣ್ತಿಲ್ಲ.

    ಸಂಪುಟ ಸರ್ಕಸ್ ಸುಸೂತ್ರವಾಗಿ ನಿಭಾಯಿಸುವ ದಾರಿಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪನವರು ಹುಡುಕುತ್ತಲೇ ಇದ್ದಾರೆ. ನಿತ್ಯ ಆಪ್ತರ ಜೊತೆ ಮಾತುಕತೆಗಳನ್ನು ನಡೆಸುತ್ತಿದ್ದರೂ ಸಮಸ್ಯೆಗಳನ್ನು ಬಗೆಹರಿಸುವ ದಾರಿ ಸಿಕ್ತಿಲ್ಲ. ಈ ನಡುವೆ ಮೈತ್ರಿ ಸರ್ಕಾರದಲ್ಲೂ ಆರಂಭದಲ್ಲಿ ಇಂಥದ್ದೇ ಸನ್ನಿವೇಶ ನಿರ್ಮಾಣವಾಗಿದ್ದಾಗ ಕಾಂಗ್ರೆಸ್-ಜೆಡಿಎಸ್ ನಾಯಕರು ಅನುಸರಿಸಿದ್ದ ಸ್ಟ್ರಾಟಜಿಯ ಜಾರಿ ಕುರಿತು ಸಿಎಂ ಯಡಿಯೂರಪ್ಪ ಗಂಭೀರವಾಗಿ ಆಲೋಚನೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಮಂತ್ರಿಗಿರಿ ಕೊಡದಿದ್ರೆ ಮುಖ್ಯಮಂತ್ರಿ ಸ್ಥಾನ ಕೊಡಲಿ: ಉಮೇಶ್ ಕತ್ತಿ ಹೊಸ ಬಾಂಬ್

    ಮೈತ್ರಿ ಸರ್ಕಾರದ ಭಾಗವಾಗಿದ್ದ ಕಾಂಗ್ರೆಸ್ ಪಕ್ಷದಲ್ಲಿ ಸಚಿವ ಸ್ಥಾನಕ್ಕೆ ಆಕಾಂಕ್ಷಿಗಳ ಪಟ್ಟಿ ಉದ್ದವೇ ಇತ್ತು. ಅಲ್ಲಿ ಎಲ್ಲರೂ ಸಚಿವ ಸ್ಥಾನ ಕೇಳೋರೆ ಅನ್ನುವಂತಾಗಿತ್ತು. ಆಗ ಕಾಂಗ್ರೆಸ್ ಹೈಕಮಾಂಡ್ ಒಂದು ಪರಿಹಾರಾತ್ಮಕ ಸೂತ್ರವನ್ನು ರಾಜ್ಯ ನಾಯಕರಿಗೆ ಕಳಿಸಿಕೊಟ್ಟಿತ್ತು. ಅದರ ಪ್ರಕಾರ ಆಗಿದ್ದ ಮೊದಲ ಹಂತದ ಸಂಪುಟ ಸಚಿವರ ಮೌಲ್ಯಮಾಪನ ಮಾಡುವುದು. ಒಂದು ವರ್ಷಕ್ಕೊಮ್ಮೆ ಮೌಲ್ಯಮಾಪನ ಮಾಡಿ ಆ ಪೈಕಿ ಯಾರು ಕೆಲಸ ಮಾಡದ ಸಚಿವರು ಇರುತ್ತಾರೋ ಅವರನ್ನು ಬದಲಾಯಿಸುವ ನಿರ್ಧಾರ ಆಗಿತ್ತು. ಹಾಗೆ ಬದಲಾದ ಸಚಿವರ ಸ್ಥಾನಕ್ಕೆ ಉಳಿದ ಆಕಾಂಕ್ಷಿಗಳ ಪೈಕಿ ಕೆಲವರನ್ನು ತುಂಬುವುದು ಆ ಸ್ಟ್ರಾಟಜಿಯ ಮುಖ್ಯ ಉದ್ದೇಶ. ಇದರಿಂದ ಅಸಮಧಾನವೂ ತಣಿಯುತ್ತೆ, ಆಕಾಂಕ್ಷಿಗಳ ಬೇಗುದಿಯನ್ನೂ ನಿಯಂತ್ರಿಸಬಹುದು ಎಂಬ ಲೆಕ್ಕಾಚಾರ ಹಾಕಿತ್ತು ಕಾಂಗ್ರೆಸ್. ಆದರೆ ನಂತರದ ರಾಜಕೀಯ ಸನ್ನಿವೇಶಗಳು ಕಾಂಗ್ರೆಸ್‍ಗೆ ತನ್ನ ಆ ಸ್ಟ್ರಾಟಜಿ ಜಾರಿಗೆ ಅವಕಾಶ ಮಾಡಿಕೊಡಲಿಲ್ಲ.

    ಅದೇ ಸ್ಟ್ರಾಟಜಿಯನ್ನು ಬಿಜೆಪಿ ಸರ್ಕಾರದಲ್ಲೂ ಅಳವಡಿಸಲು ಯಡಿಯೂರಪ್ಪನವರು ಒಲವು ತೋರಿದ್ದಾರೆ ಎನ್ನಲಾಗಿದೆ. ಹೇಳಿಕೇಳಿ ಸರ್ಕಾರ ಸ್ಥಿರವಾಗಿದೆ. ವರ್ಷಕ್ಕೊಮ್ಮೆ ಸಚಿವರ ಬದಲಾವಣೆ ಪ್ರಸ್ತಾಪಕ್ಕೆ ಸ್ವಲ್ಪ ಕಷ್ಟವಿದ್ದರೂ ಎಲ್ಲರನ್ನೂ ಒಪ್ಪಿಸಬಹುದು. ಒಂದೊಮ್ಮೆ ಯಾರಾದರೂ ಅಸಮಧಾನಗೊಂಡರೂ ಅವರಿಗೆ ಪಕ್ಷದ ಶಿಸ್ತು ದಾಟಲು ಅವಕಾಶ ಮತ್ತು ಧೈರ್ಯ ಎರಡೂ ಇರೋದಿಲ್ಲ. ಜೊತೆಗೆ ಸದ್ಯದ ಪರಿಸ್ಥಿತಿಯಲ್ಲಿ ಬೇರೆ ಪಕ್ಷ ಬಿಟ್ಟು ಬಂದಿರೋ ಅಪೇಕ್ಷಿತ ಶಾಸಕರೇ ಇರಲಿ ಪಕ್ಷದ ಅಸಮಧಾನಗೊಂಡವರೇ ಇರಲಿ ಬಿಜೆಪಿ ಬಿಟ್ಟು ಹೋಗಲು ಸಾಧ್ಯವೇ ಇಲ್ಲ. ಅವರ ಸಿಟ್ಟು ಏನೇ ಇದ್ರೂ ಪಕ್ಷದ ಚೌಕಟ್ಟು ದಾಟಿ ಹೋಗಲ್ಲ. ಒಂದೊಮ್ಮೆ ಅಂಥ ಸ್ಥಿತಿ ಬಂದರೂ ಅಂತಹವರ ಸಂಖ್ಯೆ ಒಂದೆರಡಷ್ಟೇ.

    ಈ ಎಲ್ಲ ಲೆಕ್ಕಾಚಾರಗಳನ್ನೂ, ಸಂಭಾವ್ಯ ಅಪಾಯಗಳನ್ನೂ ಯಡಿಯೂರಪ್ಪ ಆಲೋಚನೆ ಮಾಡುತ್ತಿದ್ದಾರೆ. ಒಂದೊಮ್ಮೆ ಹೈಕಮಾಂಡ್ ಸಹ ಕೊನೆಯಲ್ಲಿ ಕೈ ಹಿಡಿಯದಿದ್ರೆ ಇದೇ ದಾರಿಯಲ್ಲಿ ಸಾಗುವುದು ಯಡಿಯೂರಪ್ಪ ಅವರಿಗೆ ಅನಿವಾರ್ಯ ಆಗಲೂಬಹುದು.

  • ಈ ಆಡಿಯೋದಲ್ಲಿ ಹೊಸದಾಗಿ ಏನಿದೆ? – ಸುಪ್ರೀಂನಲ್ಲಿ ಏನಾಯ್ತು? ಕಾಂಗ್ರೆಸ್ಸಿಗೆ ಜಯವೋ? ಹಿನ್ನಡೆಯೋ?

    ಈ ಆಡಿಯೋದಲ್ಲಿ ಹೊಸದಾಗಿ ಏನಿದೆ? – ಸುಪ್ರೀಂನಲ್ಲಿ ಏನಾಯ್ತು? ಕಾಂಗ್ರೆಸ್ಸಿಗೆ ಜಯವೋ? ಹಿನ್ನಡೆಯೋ?

    ನವದೆಹಲಿ: ಅನರ್ಹ ಶಾಸಕರ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಆಡಿದ್ದ ಆಡಿಯೋವನ್ನೇ ಮುಂದಿಟ್ಟುಕೊಂಡು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಕಾಂಗ್ರೆಸ್ ಹೋರಾಟ ಅರ್ಧ ಠುಸ್, ಅರ್ಧ ಸಕ್ಸಸ್ ಆಗಿದೆ.

    ಬಿಎಸ್‌ವೈ ಆಡಿಯೋವನ್ನು ಸಾಕ್ಷ್ಯವನ್ನಾಗಿ ಪರಿಗಣಿಸಬೇಕೆಂದು ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾ.ಎನ್.ವಿ.ರಮಣ, ನ್ಯಾ. ಸಂಜೀವ್ ಖನ್ನಾ, ನ್ಯಾ. ಕೃಷ್ಣ ಮುರಾರಿ ಪೀಠದಲ್ಲಿ ಇತ್ಯರ್ಥಗೊಂಡಿದ್ದು ಸ್ಪಷ್ಟವಾಗಿ ಏನನ್ನೂ ಹೇಳಿಲ್ಲ.

    ಈಗಾಗಲೇ ವಾದ-ಪ್ರತಿವಾದ ಮುಗಿದಿರುವ ಕಾರಣ ಬಿಎಸ್‌ವೈ ಆಡಿಯೋ ಬಗ್ಗೆ ವಿಚಾರಣೆ ನಡೆಸಲು ಸಾಧ್ಯವಿಲ್ಲ. ಪ್ರತಿವಾದಿಯನ್ನಾಗಿಯೂ ಪರಿಗಣಿಸಲು ಆಗುವುದಿಲ್ಲ. ಆದರೆ ಆದೇಶ ನೀಡುವಾಗ ಆಡಿಯೋವನ್ನು ಸಾಕ್ಷ್ಯವನ್ನಾಗಿ ಪರಿಗಣಿಸುವುದಾಗಿ ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಸುಪ್ರೀಂಕೋರ್ಟಿನ ಈ ಆದೇಶದಿಂದಾಗಿ ಅನರ್ಹರ ಕೇಸು ಒಂದೆರಡು ದಿನಗಳಲ್ಲಿ ಇತ್ಯರ್ಥವಾಗುವ ಸಾಧ್ಯತೆಗಳಿವೆ.

    ಕಾಂಗ್ರೆಸ್ ಪರ ವಾದ ಮಂಡಿಸಿದ ವಕೀಲ ಕಪಿಲ್ ಸಿಬಲ್, ಅನರ್ಹರು ಮುಂಬೈಗೆ ತೆರಳುವ ಹಿಂದೆ ಬಿಜೆಪಿ ವರಿಷ್ಠರ ಕೈವಾಡ ಇರುವುದನ್ನು ಹುಬ್ಬಳ್ಳಿ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಸತ್ಯ ಒಪ್ಪಿಕೊಂಡಿದ್ದಾರೆ. ಹೀಗಾಗಿ ಆಡಿಯೋವನ್ನು ಸಾಕ್ಷಿಯನ್ನಾಗಿ ಕೋರ್ಟ್ ಪರಿಗಣಿಸಬೇಕು ಎಂದು ಮನವಿ ಮಾಡಿದರು. ಕಪಿಲ್ ಸಿಬಲ್ ಅವರ ವಾದವನ್ನು ಜೆಡಿಎಸ್ ಪರ ವಕೀಲರಾದ ರಾಜೀವ್ ಧವನ್ ಬೆಂಬಲಿಸಿದರು.

    ನ್ಯಾ. ರಮಣ ಹೇಳಿದ್ದೇನು?
    ಈ ಆಡಿಯೋದಲ್ಲಿ ಹೊಸದಾಗಿ ಏನಿದೆ ಎಂದು ಪ್ರಶ್ನಿಸಿದ ನ್ಯಾಯಾಧೀಶರು ಸ್ಪೀಕರ್ ಪರ ವಾದದ ವೇಳೆ ಈ ಅಂಶಗಳು ಇತ್ತಲ್ಲವೇ? ನಾವು ಈಗಾಗಲೇ ಎಲ್ಲ ಅಂಶಗಳನ್ನು ಪರಿಗಣಿಸಿದ್ದೇವೆ. ಈಗಾಗಲೇ ವಾದ, ಪ್ರತಿವಾದ ಪೂರ್ಣಗೊಂಡಿದೆ. ಆಡಿಯೋ ಸಂಬಧ ನೋಟಿಸ್ ಸಾಧ್ಯವೇ ಇಲ್ಲ. ನೋಟಿಸ್ ಕೊಟ್ಟರೆ ಆದೇಶ ವಿಳಂಬವಾಗಲಿದೆ. ಆದೇಶದ ವೇಳೆ ಸಾಕ್ಷಿಯಾಗಿ ಆಡಿಯೋ ಪರಿಗಣಿಸುತ್ತೇವೆ ಎನ್ನುವ ವಿಚಾರವನ್ನು ಅರ್ಜಿದಾರರ ಗಮನಕ್ಕೆ ತಂದರು.

    ಸುಪ್ರೀಂನಲ್ಲಿ ಮುಂದೆ ಏನಾಗಬಹುದು?
    ಅನರ್ಹ ಶಾಸಕರ ಬಗ್ಗೆ ಸಿಎಂ ಮಾತನಾಡಿದ್ದ ಆಡಿಯೋವನ್ನು ಸುಪ್ರೀಂಕೋರ್ಟ್ ಸಾಕ್ಷಿಯನ್ನಾಗಿ ಪರಿಗಣಿಸಿದ ಪರಿಣಾಮ ಅನರ್ಹರಿಗೆ ಟೆನ್ಷನ್ ಶುರುವಾಗಿದೆ. ಸುಪ್ರೀಂಕೋರ್ಟ್ ಏನ್ ತೀರ್ಪು ನೀಡಬಹುದೋ ಏನೋ ಅಂತ ಆತಂಕಕ್ಕೆ ಒಳಗಾಗಿದ್ದಾರೆ.

    ಸಾಧ್ಯತೆ 1 – ಒಂದೆರಡು ದಿನಗಳಲ್ಲಿ ತೀರ್ಪು ಬರಬಹುದು
    ಸಾಧ್ಯತೆ 2 – ಅನರ್ಹರಿಗೆ ಬೈಎಲೆಕ್ಷನ್ ಸ್ಪರ್ಧೆಗೆ ಅವಕಾಶ ಕೊಡಬಹುದು
    ಸಾಧ್ಯತೆ 3 – ಸ್ಪೀಕರ್ ಕಚೇರಿಗೆ ಅರ್ಜಿಗಳನ್ನು ವಾಪಸ್ ಕಳುಹಿಸಬಹುದು
    ಸಾಧ್ಯತೆ 4 – ಸ್ಪೀಕರ್ ಆದೇಶವನ್ನು ಎತ್ತಿ ಹಿಡಿಯಬಹುದು

    ಕಾಂಗ್ರೆಸ್ಸಿಗೆ ಜಯವೋ? ಹಿನ್ನಡೆಯೋ?
    – ಸಿಎಂ ಆಡಿಯೋ ಬಗ್ಗೆ ತನಿಖೆಗೆ ಆದೇಶಿಸಿಲ್ಲ – ಇದು ಹಿನ್ನಡೆ
    – ಸಿಎಂ ಆಡಿಯೋ ಬಗ್ಗೆ ವಿಚಾರಣೆಯೂ ಇಲ್ಲ – ಇದು ಹಿನ್ನಡೆ
    – ಅನರ್ಹರ ಆದೇಶ ಕೂಡ ವಿಳಂಬವಿಲ್ಲ – ಇದು ಹಿನ್ನಡೆ
    – ಸಿಎಂ ಆಡಿಯೋ ಸಾಕ್ಷ್ಯವಾಗಿಯಷ್ಟೇ ಪರಿಗಣನೆ – ಸ್ವಲ್ಪ ಜಯ

  • ಕರುನಾಡ ತೀರ್ಪು: ಮತ ಎಣಿಕೆ ಲೈವ್ ಬ್ಲಾಗ್

    ಕರುನಾಡ ತೀರ್ಪು: ಮತ ಎಣಿಕೆ ಲೈವ್ ಬ್ಲಾಗ್

    ಬೆಂಗಳೂರು: ಇವತ್ತು ಕರ್ನಾಟಕದ ಪಾಲಿಗೆ ನಿರ್ಣಾಯಕ ದಿನ. ಮುಂದಿನ ಸರ್ಕಾರ ಯಾರದ್ದು ಎಂದು ಗೊತ್ತಾಗಲಿರುವ ಮಹತ್ವದ ದಿನ. ಸಿಎಂ ಸಿದ್ದರಾಮಯ್ಯ, ಬಿಎಸ್ ಯಡಿಯೂರಪ್ಪ, ಕುಮಾರಸ್ವಾಮಿ ಸೇರಿ ಹಲವು ಘಟಾನುಘಟಿ ರಾಜಕಾರಣಿಗಳ ರಾಜಕೀಯ ಭವಿಷ್ಯ ಇಂದು ನಿರ್ಧಾರ ಆಗಲಿದೆ.

    ಬೆಳಗ್ಗೆ 8 ಗಂಟೆಯಿಂದ ರಾಜ್ಯದ 38 ಮತ ಎಣಿಕೆ ಕೇಂದ್ರಗಳಲ್ಲಿ ಮತ ಎಣಿಕೆ ಶುರುವಾಗಿದ್ದು, ಬೆಳಗ್ಗೆ 11 ಗಂಟೆ ಹೊತ್ತಿಗೆ ಸ್ಪಷ್ಟ ಫಲಿತಾಂಶ ಲಭ್ಯವಾಗಲಿದೆ. ಹೀಗಾಗಿ ಕರ್ನಾಟಕ ಚುನಾವಣೆಗೆ ಸಂಬಂಧಿಸಿದ ಲೈವ್ ಮಾಹಿತಿ ಇಲ್ಲಿದೆ.

    ಬೆಳಗ್ಗೆ 8.40: ಬೀದರ್ ದಕ್ಷಿಣದಲ್ಲಿ ಅಶೋಕ್ ಖೇಣಿಗ ಹಿನ್ನಡೆ

    ಬೆಳಗ್ಗೆ 8.35: ದಕ್ಷಿಣ ಕನ್ನಡದ 5 ಜಿಲ್ಲೆಗಳಲ್ಲಿ ಬಿಜೆಪಿಗೆ ಮುನ್ನಡೆ

    ಬೆಳಗ್ಗೆ 8.33: 4ರಲ್ಲಿ ಜೆಡಿಎಸ್, 2ರಲ್ಲಿ ಕಾಂಗ್ರೆಸ್, 1ರಲ್ಲಿ ಬಿಜೆಪಿಗೆ ಮುನ್ನಡೆ

    ಬೆಳಗ್ಗೆ 8.20: ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯನವರಿಗೆ 3479 ಮತಗಳಿಂದ ಹಿನ್ನಡೆ

    ಬೆಳಗ್ಗೆ 8.14: ದಕ್ಷಿಣ ಕನ್ನಡದಲ್ಲಿ ಬಿಜೆಪಿ-2, ಮೂರರಲ್ಲಿ ಕಾಂಗ್ರೆಸ್ ಗೆ ಮುನ್ನಡೆ

    ಬೆಳಗ್ಗೆ 8.12: ಉಡುಪಿಯ 5 ಕ್ಷೇತ್ರಗಳಲ್ಲಿ ಬಿಜೆಪಿಗೆ ಮುನ್ನಡೆ

    ಬೆಳಗ್ಗೆ 8.05: ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯನವರಿಗೆ ಆರಂಭಿಕ ಹಿನ್ನಡೆ – ಜಿ. ಟಿ ದೇವೇ ಗೌಡರಿಗೆ ಮುನ್ನಡೆ

    ಬೆಳಗ್ಗೆ 8.05: ಬೆಂಗಳೂರಿನಲ್ಲಿ ಶಾಂತಿನಗರದ ಹ್ಯಾರಿಸ್ ಗೆ ಮುನ್ನಡೆ, ಮಂಗಳೂರಿನಲ್ಲಿ ರಮಾನಾಥ್ ರೈಗೆ ಮುನ್ನಡೆ

    ಬೆಳಗ್ಗೆ 7.52: ಕಾಂಗ್ರೆಸ್-08, ಬಿಜೆಪಿ-07, ಜೆಡಿಎಸ್-01 ಅಂಚೆ ಮತಗಳಲ್ಲಿ ಮುನ್ನಡೆಯನ್ನು ಸಾಧಿಸಿವೆ.

    ಬೆಳಗ್ಗೆ 744: ದೆಹಲಿಯ ಎಐಸಿಸಿ ಕಚೇರಿಯಲ್ಲಿ ಹೋಮ-ಹವನ

    ಬೆಳಗ್ಗೆ 7.41: ಇವಿಎಂಗೂ ಮೊದಲು ಅಂಚೆ ಮತಗಳ ಎಣಿಕೆ ಕಾರ್ಯ ಮಂಗಳೂರಲ್ಲಿ ಆರಂಭ, ರಾಜ್ಯಾದ್ಯಂತ ಅಂಚೆ ಮತಗಳ ಎಣಿಕೆ ಕಾರ್ಯ ಪ್ರಾರಂಭ

    ಬೆಳಗ್ಗೆ 7.35: ಮುಖ್ಯಮಂತ್ರಿಗಳ ಕ್ಷೇತ್ರ ಚಾಮುಂಡೇಶ್ವರಿಯಲ್ಲಿ ಸ್ಟ್ರಾಂಗ್ ರೂಂ ಓಪನ್

    ಬೆಳಗ್ಗೆ 7.31: ಕಾರವಾರದಲ್ಲಿ ಅರ್ಧ ಗಂಟೆಗೂ ಮೊದಲೇ ಮತ ಎಣಿಕೆ ಆರಂಭ, ಜೆಡಿಎಸ್ ನ ಆನಂದ್ ಅಸ್ನೋಟಿಕರ್, ಭಟ್ಕಳದಲ್ಲಿ ಕಾಂಗ್ರೆಸ್ ಗೆ ಮುನ್ನಡೆ

    ಬೆಳಗ್ಗೆ 7.14: ಕರ್ನಾಟಕ ಫಲಿತಾಂಶ- ಎಣಿಕೆ ಕೇಂದ್ರಗಳತ್ತ ಅಭ್ಯರ್ಥಿಗಳು

    ಬೆಳಗ್ಗೆ  6:40 -ಮತ ಎಣಿಕೆ ಕಾರ್ಯಕ್ಕಾಗಿ ಸುಮಾರು 16,662 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ಪೈಕಿ 3,410 ಮತ ಎಣಿಕೆ ಮೆಲ್ವೀಚಾರಕರು, 3,410 ಎಣಿಕೆ ಸಹಾಯಕರು ಮತ್ತು 3,410 ಮೈಕ್ರೋ ಅಬ್ಸರ್‍ವರ್ ಗಳು ಇರಲಿದ್ದಾರೆ. ಸುಮಾರು 888 ಮಂದಿ ಅಂಚೆ ಮತಪತ್ರಗಳನ್ನು ಎಣಿಸಲಿದ್ದಾರೆ. ಇವರುಗಳ ಜೊತೆಗೆ ಹೆಚ್ಚುವರಿಯಾಗಿ 5,544 ಮಂದಿ ಭದ್ರತಾ ಕೊಠಡಿಯಿಂದ ಇವಿಎಂಗಳನ್ನು ಮತ ಎಣಿಕೆ ಕೇಂದ್ರಕ್ಕೆ ತರಲು ನಿಯೋಜಿಸಲಾಗಿದೆ.

    ಬೆಳಗ್ಗೆ  6:37  – 222 ಮತಕ್ಷೇತ್ರಗಳ ಮತ ಎಣಿಕೆಗಾಗಿ ರಾಜ್ಯಾದ್ಯಂತ 38 ಮತ ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ ಬೆಂಗಳೂರಿನಲ್ಲಿ 5 ಕಡೆ, ತುಮಕೂರಿನಲ್ಲಿ 3 ಕಡೆ ಹಾಗೂ ಚಿತ್ರದುರ್ಗ, ದಕ್ಷಿಣ ಕನ್ನಡ, ಮೈಸೂರು ಜಿಲ್ಲೆಗಳಲ್ಲಿ ತಲಾ 2 ಕಡೆಗಳಲ್ಲಿ ಹಾಗೂ ಇನ್ನುಳಿದ ಜಿಲ್ಲೆಗಳಲ್ಲಿ ತಲಾ ಒಂದೊಂದು ಕಡೆ ಮತ ಎಣಿಕೆ ಕಾರ್ಯ ನಡೆಯಲಿದೆ.