Tag: Yatra

  • ಬೆಂಗಳೂರಿನಿಂದ ಮೈಸೂರಿನವರೆಗೆ ಝೈದ್ ಸಾರಥ್ಯದಲ್ಲಿ ‘ಬನಾರಸ್’ ಯಾತ್ರೆ

    ಬೆಂಗಳೂರಿನಿಂದ ಮೈಸೂರಿನವರೆಗೆ ಝೈದ್ ಸಾರಥ್ಯದಲ್ಲಿ ‘ಬನಾರಸ್’ ಯಾತ್ರೆ

    ಝೈದ್ ಖಾನ್ ನಾಯಕನಾಗಿ ನಟಿಸಿರುವ ಬನಾರಸ್ (Banaras) ಚಿತ್ರ ಬಿಡುಗಡೆಗೆ ಇನ್ನು ಐದು ದಿನ ಮಾತ್ರ ಬಾಕಿ ಉಳಿದುಕೊಂಡಿದೆ. ಈ ಚಿತ್ರ ನವೆಂಬರ್ ೪ರಂದು ದೇಶಾದ್ಯಂತ ತೆರೆಗಾಣಲಿದೆ. ಇದುವರೆಗೂ ಅತ್ಯಂತ ವ್ಯವಸ್ಥಿತವಾಗಿ ಪ್ಯಾನಿಂಡಿಯಾ ಮಟ್ಟದಲ್ಲಿ ಬನಾರಸ್ ಅನ್ನು ಮುನ್ನೆಲೆಗೆ ತರಲಾಗಿದೆ. ಇದೀಗ ಕಡೇಯ ಕ್ಷಣಗಳಲ್ಲಿ ಸಂಚಲನ ಮೂಡಿಸುವ ಸಲುವಾಗಿ ಝೈದ್ ಊರಿಂದೂರಿಗೆ ಬನಾರಸ್ ಯಾತ್ರ ಆರಂಭಿಸಿದ್ದಾರೆ.

    ಬೆಂಗಳೂರಿ (Bangalore) ನಿಂದ ಹೊರಟ ಬನಾರಸ್ ಯಾತ್ರೆ ಆ ನಂತರದಲ್ಲಿ ಮೈಸೂರ್ (Mysore) ರಸ್ತೆಯತ್ತ ಸಾಗಿ ಬಂದು, ಗಾಳಿ ಆಂಜನೇಯ ದೇವಸ್ಥಾನಕ್ಕೆ ಝೈದ್ ತೆರಳಿ ವಂದಿಸಿದ ತರುವಾಯ ರಾಜರಾಜೇಶ್ವರಿನಗರ, ಕೆಂಗೇರಿ ಹಾದಿಯಲ್ಲಿ ಮುಂದುವರೆಯಿತು. ಅಂಚೆಪುರ, ಕಂಬಿಪಾಳ್ಯ ಮಾರ್ಗವಾಗಿ ಸಾಗಿದ ಈ ಬೃಹತ್ ಬನಾರಸ್ ಯಾತ್ರೆ ಬಿಡದಿಯ ಶಶಿ ತಟ್ಟೆ ಇಡ್ಲಿ ಹೊಟೇಲಿನ ಬಳಿ ಜಮಾವಣೆಗೊಂಡಿತ್ತು. ಅಲ್ಲಿಯೇ ಝೈದ್ ಖಾನ್, ಬೆಂಬಲಿಸಿದ ಎಲ್ಲರೊಂದಿಗೂ ತಿಂಡಿ ಮುಗಿಸಿಕೊಂಡವರೇ ರಾಮನಗರ ಜಿಲ್ಲೆಯತ್ತ ಪಯಣ ಬೆಳೆಸಿದ್ದರು. ಅಲ್ಲಿಯೂ ಅಪಾರ ಪ್ರಮಾಣದಲ್ಲಿ ಪ್ರೇಕ್ಷಕರು, ಅಭಿಮಾನಿಗಳ ಸಮ್ಮುಖದಲ್ಲಿ ಬನಾರಸ್ ಪ್ರಚಾರದ ನಿಮಿತ್ತವಾಗಿ ರೋಡ್ ಶೋ ನಡೆಸಲಾಯಿತು. ಇದನ್ನೂ ಓದಿ:ವಿರಹ ಮುಂದುವರೆಯಲಿ ಎಂದು ದಿವ್ಯಾ ಉರುಡುಗ ಕಾಲೆಳೆದ ಕಿಚ್ಚ

    ಆ ಬಳಿಕ ಕೆಂಗಲ್ ಆಂಜನೇಯ ಸ್ವಾಮಿ ದೇವಸ್ಥಾನಕ್ಕೂ ಝೈದ್ ದರ್ಶನ ಪಡೆದುಕೊಂಡರು. ನಂತರ ಬನಾರಸ್ ಯಾತ್ರೆ ಚೆನ್ನಪಟ್ಟಣಕ್ಕೆ ತೆರಳಿತ್ತು. ಅಲ್ಲಿ ಅದ್ದೂರಿಯಾಗಿ ರೋಡ್ ಶೋ ನೆರವೇರಿತು. ಝೈದ್ ಅಲ್ಲಿಯೂ ದೇವಸ್ಥಾನ ಮತ್ತು ದರ್ಗಾಗಳಿಗೆ ಭೇಟಿ ನೀಡಿದರು. ಅಲ್ಲೇ ಒಂದು ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಹೊಸಾ ಕಚೇರಿಯೊಂದರ ಆರಂಭ ಸಮಾರಂಭದಲ್ಲಿ ಭಾಗಿಯಾದರು. ಚನ್ನಪಟ್ಟಣದಲ್ಲಿಯೇ ಮಧ್ಯಾಹ್ನದ ಊಟ ಮುಗಿಸಿಕೊಂಡು ಮತ್ತೆ ಬನಾರಸ್ ಯಾತ್ರೆಗೆ ಚಾಲನೆ ಸಿಕ್ಕಿತ್ತು.

    ಮದ್ದೂರಿನಿಂದ ಹಾದು ಹೋಗಿ ಮಂಡ್ಯಕ್ಕೆ ತೆರಳಿ ಅಲ್ಲಿಯೂ ಝೈದ್ ಸಾರಥ್ಯದಲ್ಲಿ ರೋಡ್ ಶೋ ನಡೆಯಿತು. ಅಲ್ಲಿನ ದೇವಸ್ಥಾನ ದರ್ಗಾಗಳಿಗೂ ಭೇಟಿಯಿತ್ತ ಝೈದ್ ಒಂದು ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಐದು ಗಂಟೆ ಸುಮಾರಿಗೆ ಶ್ರೀರಂಗಪಟ್ಟಣಕ್ಕೆ ತೆರಳಿ ಅಲ್ಲಿಂದ ಸೀದಾ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಹೋಗಿ, ತಾಯಿಯ ಆಶೀರ್ವಾದ ಪಡೆದುಕೊಂಡ ಬಳಿಕ ಮೈಸೂರು ನಗರದಲ್ಲಿ ಅದ್ದೂರಿಯಾಗಿ ರೋಡ್ ಶೋ ನಡೆದಿದೆ. ಬಳಿಕ ೮.೩೦ರ ಸುಮಾರಿಗೆ ಒಂದು ಸುತ್ತಿನ ಬೆಂಗಳೂರು-ಮೈಸೂರು ಯಾತ್ರೆ ಮುಗಿಸಿಕೊಂಡಿರುವ ಝೈದ್ ತಮ್ಮ ತಂಡ, ಅಭಿಮಾನಿಗಳೊಂದಿಗೆ ಬೆಂಗಳೂರಿಗೆ ಮರಳಿದ್ದಾರೆ. ಹೀಗೆ ಬನಾರಸ್ ಯಾತ್ರೆ ಹೋದಲ್ಲೆಲ್ಲ ಜನಜಂಗುಳಿ ನೆರೆದು ಝೈದ್‌ರನ್ನು ಸ್ವಾಗತಿಸಿದ್ದಾರೆ. ಈ ಪ್ರತಿಕ್ರಿಯೆ ಚಿತ್ರ ತಂಡಕ್ಕೆ ಹೊಸಾ ಭರವಸೆ ತಂದುಕೊಟ್ಟಿದೆ.

    Live Tv
    [brid partner=56869869 player=32851 video=960834 autoplay=true]

  • ರೈಲ್ವೆ ಇಲಾಖೆಯಿಂದ ಚಾರ್ ಧಾಮ್ ಯಾತ್ರೆಗೆ ಮೇ ತಿಂಗಳಲ್ಲಿ ವಿಶೇಷ ಆಫರ್

    ರೈಲ್ವೆ ಇಲಾಖೆಯಿಂದ ಚಾರ್ ಧಾಮ್ ಯಾತ್ರೆಗೆ ಮೇ ತಿಂಗಳಲ್ಲಿ ವಿಶೇಷ ಆಫರ್

    ನವದೆಹಲಿ: ರೈಲ್ವೆ ಇಲಾಖೆ ಮೇ ತಿಂಗಳಲ್ಲಿ ಚಾರ್ ಧಾಮ್ ಯಾತ್ರೆಗೆ ವಿಶೇಷ ರಿಯಾಯ್ತಿ ಘೋಷಿಸಿದೆ. ಐಆರ್​ಸಿಟಿಸಿ ವಿಶೇಷ ರಿಯಾಯ್ತಿ ಘೋಷಿಸಿದ್ದು, ಹಲವು ಅಗತ್ಯ ಸೌಲಭ್ಯಗಳಿರುವ ಟೂರ್ ಪ್ಯಾಕೇಜ್ ಇದಾಗಿದೆ.

    ಯಾವ ಸ್ಥಳಗಳಿಗೆ: ಹರಿದ್ವಾರ, ಬಾರ್‍ಕೊಟ್, ಜಾನಕಿಚಟ್ಟಿ, ಯಮುನೋತ್ರಿ, ಉತ್ತರಕಾಶಿ, ಗಂಗೋತ್ರಿ, ಗುಪ್ತಕಾಶಿ, ಸನ್‍ಪ್ರಯಾಗ, ಕೇದಾರನಾಥ, ಬದರಿನಾಥ ಕ್ಷೇತ್ರಗಳನ್ನು ಸಂದರ್ಶಿಸಲಾಗುತ್ತದೆ. ನಾಗಪುರ ಮತ್ತು ದೆಹಲಿ ಮಾರ್ಗವಾಗಿ ವಾಯುಯಾನ ಟಿಕೆಟ್‍ಗಳನ್ನೂ ಈ ಪ್ಯಾಕೇಜ್ ಒಳಗೊಂಡಿರುತ್ತದೆ.

    ಭಾರತ ಸರ್ಕಾರದ ಆಜಾದಿ ಕ ಅಮೃತ್ ಮಹೋತ್ಸವ್ ಮತ್ತು ದೇಖೋ ಆಪ್ನಾ ದೇಶ್ ಉಪಕ್ರಮಗಳ ಭಾಗವಾಗಿ ಐಆರ್​ಸಿಟಿಸಿ ಈ ಯೋಜನೆಯನ್ನು ಪರಚಯಿಸಿದೆ. ಈ ವರ್ಷ ಕೊರೊನಾ ಪ್ರಕರಣಗಳು ಕಡಿಮೆಯಾಗಿರುವುದರಿಂದ ಸಾಕಷ್ಟು ಜನರು ಈ ಸೌಲಭ್ಯ ಪಡೆದುಕೊಳ್ಳಬಹುದು. ಮೇ 14ರಿಂದ ಆರಂಭವಾಗಿ ಮೇ 25ಕ್ಕೆ ಮುಕ್ತಾಯವಾಗಲಿರುವ ಈ ಯಾತ್ರೆಯು 12 ಹಗಲು ಮತ್ತು 11 ರಾತ್ರಿಗಳ ಪ್ರವಾಸ ಪ್ಯಾಕೇಜ್ ಹೊಂದಿರುತ್ತದೆ. ಇದನ್ನೂ ಓದಿ: ಕ್ರಿಶ್ಚಿಯನ್ ವರ, ಮುಸ್ಲಿಂ ವಧು ಹಿಂದೂ ಸಂಪ್ರದಾಯದಂತೆ ಮದುವೆ 

    ಪ್ರಯಾಣ ದರ: ಒಬ್ಬರಿಗೆ 77,600 ಮತ್ತು ಇಬ್ಬರಿಗೆ 61,400 ಶುಲ್ಕ ನಿಗದಿಪಡಿಸಲಾಗಿದೆ. ಈ ಶುಲ್ಕವು ಪ್ರಯಾಣದರದೊಂದಿಗೆ ವಸತಿ, ಊಟೋಪಚಾರ ವೆಚ್ಚಗಳನ್ನೂ ಒಳಗೊಂದಿದೆ. ಹೆಚ್ಚಿನ ಮಾಹಿತಿಗೆ  www.irctctourism.com ಜಾಲತಾಣ ನೋಡಿ.

     

  • ಮೊದಲ ಬಾರಿಗೆ ಮಕ್ಕಳೊಂದಿಗೆ ಕಾಣಿಸಿಕೊಂಡ ಧನುಷ್

    ಮೊದಲ ಬಾರಿಗೆ ಮಕ್ಕಳೊಂದಿಗೆ ಕಾಣಿಸಿಕೊಂಡ ಧನುಷ್

    ಜನಿಕಾಂತ್ ಅಳಿಯ ಖ್ಯಾತ ನಟ ಧನುಷ್, ವಿಚ್ಛೇಧನದ ಬಳಿಕೆ ಹೆಚ್ಚೆಚ್ಚು ಕುಟುಂಬದೊಂದಿಗೆ ಪ್ರೀತಿ ಹಂಚಿಕೊಳ್ಳುತ್ತಿದ್ದಾರೆ. ಮೊನ್ನೆಯಷ್ಟೇ ಅವರು ಪತ್ನಿ ಐಶ್ವರ್ಯ ರಜನಿಕಾಂತ್ ಅವರ ವಿಡಿಯೋ ಆಲ್ಬಂಗೆ ಶುಭ  ಹಾರೈಸಿ ಟ್ವಿಟ್ ಮಾಡಿದ್ದರು. ಇದೀಗ ತಮ್ಮ ಇಬ್ಬರು ಮಕ್ಕಳ ಜತೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ : ಪುನೀತ್ ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ಪ್ರದಾನ

    ನೆನ್ನೆಯಷ್ಟೇ ನಡೆದ ‘ರಾಕ್ ವಿತ್ ರಾಜಾ’ ಸಂಗೀತ ಕಾರ್ಯಕ್ರಮಕ್ಕೆ ತಮ್ಮಿಬ್ಬರ ಮಕ್ಕಳಾದ ಯಾತ್ರಾ ಮತ್ತು ಲಿಂಗ ಅವರನ್ನು ತಮ್ಮ ಜತೆಗೆ ಕರೆತಂದಿದ್ದರು ಧನುಷ್. ಹೀಗೆ ಮೊದಲ ಬಾರಿಗೆ ಅವರು ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಕ್ಕಳೊಂದಿಗೆ ಕಾಣಿಸಿಕೊಂಡಿದ್ದಾರೆ. ಕಾರ್ಯಕ್ರಮ ಮುಗಿಯುವ ತನಕವೂ ಅಪ್ಪನ ಅಕ್ಕಪಕ್ಕದಲ್ಲಿ ಮಕ್ಕಳು ಕೂತು ಕಾರ್ಯಕ್ರಮ ವೀಕ್ಷಿಸಿದ್ದಾರೆ. ಇದನ್ನೂ ಓದಿ : ಅಜಿತ್ ನಟನೆ ಬ್ಲಾಕ್ ಬಸ್ಟರ್ ‘ವಲಿಮೈ’ಸಿನಿಮಾ ಒಟಿಟಿಗೆ ಎಂಟ್ರಿ

    ಕೆಲವು ತಿಂಗಳ ಹಿಂದೆಯಷ್ಟೇ ತಮ್ಮ ದಾಂಪತ್ಯ ಜೀವನಕ್ಕೆ ವಿದಾಯ ಹೇಳುವ ದಿನಗಳು ಬಂದಿವೆ ಎಂದು ಐಶ್ವರ್ಯ ಜತೆಗೆ ವಿಚ್ಛೇಧನ ಪಡೆಯುತ್ತಿರುವುದಾಗಿ ನಟ ಧನುಷ್ ಘೋಷಣೆ ಮಾಡಿದ್ದರು. ತಾವಿಬ್ಬರೂ ಗೌರವಯುತವಾಗಿಯೇ ದೂರವಾಗುತ್ತಿದ್ದೇವೆ ಎಂದು ಐಶ್ವರ್ಯ ಕೂಡ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಆದರೆ, ಮತ್ತೆ ಮತ್ತೆ ಅವರು ತಮ್ಮ ನಡುವಿನ ಬಾಂಧವ್ಯದ ಕುರಿತಾಗಿ ಕುರುಹುಗಳನ್ನು ಬಿಟ್ಟುಕೊಡುತ್ತಿದ್ದಾರೆ. ಇದನ್ನೂ ಓದಿ : ಕನ್ನಡದ ಹುಡುಗನ ಚಿತ್ರಕ್ಕೆ ಹನ್ಸಿಕಾ ಮೊಟ್ವಾನಿ ಹೀರೋಯಿನ್

    ಐಶ್ವರ್ಯ ಮತ್ತು ಧನುಷ್ ದಾಂಪತ್ಯ ಜೀವನಕ್ಕೆ ದಶಕದ ಸಂಭ್ರಮ. ಅಷ್ಟರಲ್ಲಿ ಡಿವೋರ್ಸ್ ವಿಚಾರ ಬಂದು ರಜನಿಕಾಂತ್ ಕುಟುಂಬವನ್ನೇ ನೋವಿಗೆ ತಳ್ಳಿತ್ತು. ಮಗಳು ಮತ್ತೆ ಧನುಷ್ ಜತೆಯೇ ಬದುಕಲಿ ಎಂದು ರಜನಿಕಾಂತ್ ಕೂಡ ಆಸೆಪಟ್ಟು, ಮತ್ತೆ ಒಂದು ಮಾಡಲು ನೋಡಿದರು. ಅದು ಸರಿ ಹೋದಂತೆ ಕಾಣುತ್ತಿಲ್ಲ. ಹೀಗಾಗಿ ಆಗಲೇ ಇಬ್ಬರೂ ದೂರ ದೂರವೇ ವಾಸಿಸುತ್ತಿದ್ದಾರೆ. ಮಕ್ಕಳು ಮಾತ್ರ ಎರಡೂ ಮನೆಯಲ್ಲಿ ಇರುತ್ತಾರೆ ಎನ್ನುವ ಮಾಹಿತಿ ಇದೆ.

  • ಮಾನಸ ಸರೋವರದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ 26 ಕನ್ನಡಿಗರು ವಾಪಸ್

    ಮಾನಸ ಸರೋವರದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ 26 ಕನ್ನಡಿಗರು ವಾಪಸ್

    ಬೆಂಗಳೂರು: ಮಾನಸ ಸರೋವರಕ್ಕೆ ತೆರಳಿ ಸಂಕಷ್ಟದಲ್ಲಿ ಸಿಲುಕಿರುವ ಕನ್ನಡಿಗರ ಪೈಕಿ 26 ಮಂದಿಯನ್ನು ರಕ್ಷಿಸುವಲ್ಲಿ ಕರ್ನಾಟಕ ಭವನ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

    ಮೈಸೂರಿನ ತಂಡದಲ್ಲಿದ್ದ ಶ್ರೀಕಾಂತ್ ಶರ್ಮಾ ಜೊತೆಗೆ ಬೆಂಗಳೂರಿನ ಬಸವನಗುಡಿಯ ನಿವಾಸಿಗಳಾದ ಸರಸ್ವತಿ ರೆಡ್ಡಿ, ಕೃಷ್ಣ ವೇಣಿ, ಪದ್ಮಾ, ಶೋಭಾ ದೇವಿ, ಪ್ರಮೀಳಾ ಸೇರಿದಂತೆ 26 ಮಂದಿಯ ತಂಡ ಮೈಸೂರಿಗೆ ಬಂದು ಸೇರಿದೆ. ಚನ್ನಪಟ್ಟಣದ ಮಲ್ಲೇಶ್ ಅವರು ಕೂಡಾ ಮರಳಿದ್ದು, ಕಾಲು ಮುರಿದಿದ್ದರಿಂದ ಚಿಕಿತ್ಸೆ ಪಡಿಯುತ್ತಿದ್ದಾರೆ. ತಾವು ಅನುಭವಿಸಿದ ಕಷ್ಟವನ್ನು ಹಂಚಿಕೊಂಡ ಮಲ್ಲೇಶ್, ಪಬ್ಲಿಕ್ ಟಿವಿಗೆ ಧನ್ಯವಾದ ತಿಳಿಸಿದರು.

    ಮತ್ತೊಂದು ತಂಡ ಇವತ್ತು ರಾತ್ರಿ ಬೆಂಗಳೂರಿಗೆ ಆಗಮಿಸಲಿದೆ. ಉಳಿದವರಲ್ಲಿ ಕೆಲವರು ಸಿಮೀಕೋಟ್‍ನಿಂದ ನೇಪಾಳದ ಗಂಜ್‍ಗೆ ಬಂದಿದ್ದು, ಕಠ್ಮಂಡು ಮೂಲಕ ನಾಳೆ ಬೆಂಗಳೂರಿಗೆ ಬರಲಿದ್ದಾರೆ. ರಕ್ಷಣಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಅಧಿಕಾರಿಗಳಾದ ವೆಂಕಟೇಶ್, ಈಶ್ವರ್ ಕಟ್ಟಿಮನಿ ಬಳಿ ಯಾತ್ರಿಗಳು ಕಣ್ಣೀರಿಟ್ಟು, ತಾವು ಅನುಭವಿಸಿದ ನರಕಯಾತನೆಯನ್ನು ಹೇಳಿಕೊಂಡಿದ್ದಾರೆ.

  • ಈ ವರ್ಷದಿಂದಲೇ ಮುಸ್ಲಿಮರಿಗೆ ನೀಡಲಾಗ್ತಿದ್ದ ಹಜ್ ಸಬ್ಸಿಡಿ ರದ್ದು: ಅಬ್ಬಾಸ್ ನಖ್ವಿ

    ಈ ವರ್ಷದಿಂದಲೇ ಮುಸ್ಲಿಮರಿಗೆ ನೀಡಲಾಗ್ತಿದ್ದ ಹಜ್ ಸಬ್ಸಿಡಿ ರದ್ದು: ಅಬ್ಬಾಸ್ ನಖ್ವಿ

    ನವದೆಹಲಿ: ಹಜ್ ಯಾತ್ರೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನೀಡುತ್ತಿದ್ದ ಸಹಾಯಧನ ಈ ವರ್ಷದಿಂದ ರದ್ದಾಗಿದೆ ಎಂದು ಮಂಗಳವಾರ ಕೇಂದ್ರ ಅಲ್ಪಸಂಖ್ಯಾತ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.

    ಕೇಂದ್ರ ಸರ್ಕಾರ ರಚಿಸಿದ ಸಮಿತಿಯ ಶಿಫಾರಸುಗಳ ಜಾರಿ ಕುರಿತು ಪತ್ರಿಕಾಗೋಷ್ಠಿ ಉದ್ದೇಶಿ ಮಾತನಾಡಿದ ಅವರು, 2018 ರಿಂದಲೇ ಹಜ್ ಯಾತ್ರೆಗೆ ನೀಡುತ್ತಿದ್ದ ಸಹಾಯಧನವನ್ನು ರದ್ದು ಪಡಿಸಲಾಗಿದ್ದು, ಈ ಹಣವನ್ನು ಅಲ್ಪಸಂಖ್ಯಾತ ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ಮಹಿಳೆಯರ ಅಭಿವೃದ್ಧಿಗೆ ಬಳಸುವುದಾಗಿ ತಿಳಿಸಿದರು.

    ಕೇಂದ್ರ ಸರ್ಕಾರ ಈಗಾಗಲೇ ಮುಸ್ಲಿಂ ಮಹಿಳೆಯರ ಹಜ್ ಯಾತ್ರೆಗೆ ಸಂಬಂಧಿಸಿದಂತೆ 45ಕ್ಕಿಂತ ಹೆಚ್ಚು ವರ್ಷ ವಯಸ್ಸಾಗಿರುವ ಮಹಿಳೆಯರು ಪುರುಷರು ಜೊತೆ ಇಲ್ಲದೆ ಕನಿಷ್ಠ ನಾಲ್ಕು ಮಂದಿಯ ಗುಂಪಿನಲ್ಲಿ ಹೋಗುವುದಕ್ಕೆ ಅವಕಾಶ ಕಲ್ಪಿಸಿದ ಮರು ದಿನವೇ ಸಬ್ಸಿಡಿ ರದ್ದು ಮಾಡುವ ನಿರ್ಣಯವನ್ನು ಘೋಷಿಸಿದೆ.

    ಕೇಂದ್ರ ಅಲ್ಪಸಂಖ್ಯಾತ ಅಭಿವೃದ್ಧಿ ಸಚಿವಾಲಯ ಕಳೆದ ವರ್ಷ ಹಜ್ ಯಾತ್ರೆ ಕೈಗೊಳ್ಳುವ 2018-22 ರ ವರ್ಷದ ನಿಯಮಗಳನ್ನು ರೂಪಿಸಲು ಕೇಂದ್ರದ ಮಾಜಿ ಕಾರ್ಯದರ್ಶಿ ಅಫ್ಜಲ್ ಅಮಾನುಲ್ಲಾ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚನೆ ಮಾಡಿತ್ತು. ಈ ಸಮಿತಿ ನೀಡಿದ ಶಿಪಾರಸ್ಸುಗಳ ಆಧಾರದ ಮೇಲೆ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

    ಅಫ್ಜಲ್ ಅಮಾನುಲ್ಲಾ ಸಮಿತಿಯ ಶಿಫಾರಸ್ಸುಗಳ ಆಧಾರದ ಮೇಲೆ 2018ರ ಹಜ್ ಯಾತ್ರೆಯು ಹೊಸ ನಿಯಮಗಳು ರೂಪುಗೊಳ್ಳುತ್ತವೆ. ಈ ಸಮಿತಿಯ ನಿಯಮಗಳು ಉತ್ತಮವಾಗಿದ್ದು, ಪಾರದರ್ಶಕ ಮತ್ತು ಜನಸ್ನೇಹಿಯಾಗಿವೆ. ಅಲ್ಲದೇ ಹಜ್ ಯಾತ್ರೆ ಕೈಗೊಳ್ಳುವ ಯಾತ್ರಿಕರ ಸುರಕ್ಷತೆ ಮತ್ತು ಭದ್ರತೆಯನ್ನು ಖಾತರಿಪಡಿಸುತ್ತದೆ. ಅಲ್ಲದೇ ಈ ನಿಯಮಗಳು ಅಲ್ಪ ಸಂಖ್ಯಾತರ ಘನತೆ ಹಾಗೂ ಮನಃಪೂರ್ವಕವಾಗಿ ಅಧಿಕಾರ ನೀಡುವುದು ಸಮಿತಿ ನೀತಿ ಭಾಗವಾಗಿದೆ ಎಂದು ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಸ್ಪಷ್ಟಪಡಿಸಿದರು.

    ಸೌದಿ ಸರ್ಕಾರದ ಜೊತೆ ರಾಜತಾಂತ್ರಿಕ ಸಂಬಂಧ ಈಗ ಮತ್ತಷ್ಟು ಉತ್ತಮವಾಗಿರುವ ಕಾರಣ 2018ರಲ್ಲಿ ಹೆಚ್ಚುವರಿಯಾಗಿ 5 ಸಾವಿರ ಮಂದಿ ಯಾತ್ರೆಗೆ ಅವಕಾಶ ನೀಡಿದೆ. ಇದರಿಂದಾಗಿ ಈ ವರ್ಷ 1,75,025 ಮಂದಿ ಹಜ್ ಯಾತ್ರೆಯನ್ನು ಕೈಗೊಳ್ಳಲಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಹೆಚ್ಚುವರಿಯಾಗಿ 40 ಸಾವಿರ ಮಂದಿಗೆ ಅವಕಾಶ ಸಿಕ್ಕಿದ್ದು, ಸ್ವಾತಂತ್ರ್ಯ ಸಿಕ್ಕಿದ ಬಳಿಕ ಅತಿ ಹೆಚ್ಚು ಮಂದಿ ಯಾತ್ರೆ ಕೈಗೊಳ್ಳಲಿದ್ದಾರೆ ಎಂದು ನಖ್ವಿ ತಿಳಿಸಿದ್ದಾರೆ.

    ಕಾಂಗ್ರೆಸ್ ಅವಧಿಯಲ್ಲಿ 1,36,020 ಮಂದಿ ಹಜ್ ಯಾತ್ರೆಯನ್ನು ಕೈಗೊಂಡಿದ್ದರೆ ನಮ್ಮ ಸರ್ಕಾರದ ಅವಧಿಯಲ್ಲಿ ಈ ಸಂಖ್ಯೆ 1,75,025ಕ್ಕೆ ಏರಿಕೆಯಾಗಿದೆ ಎಂದು ನಖ್ವಿ ಹೇಳಿದರು.

    ರೋಷನ್ ಬೇಗ್ ಸ್ವಾಗತ: ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ ಎಂದು ರಾಜ್ಯ ವಕ್ಫ್ ಖಾತೆಯ ಸಚಿವ ರೋಷನ್ ಬೇಗ್ ಹೇಳಿದ್ದಾರೆ. ಹಜ್ ಪವಿತ್ರ ಯಾತ್ರೆಯಾಗಿದ್ದು, ಬೇರೆಯವರಿಂದ ಸಹಾಯ ಪಡೆದು ಯಾತ್ರೆ ಹೋಗಬಾರದು ಎಂದು ಅವರು ಅಭಿಪ್ರಾಯಪಟ್ಟರು.

    ಸುಪ್ರೀಂಕೋರ್ಟ್ ಹೇಳಿದ್ದೇನು?
    ಹಜ್ ಸಬ್ಸಿಡಿ ಹೆಸರಿನಲ್ಲಿ ಭಾರೀ ಅಕ್ರಮಗಳು ನಡೆಯುತ್ತಿದ್ದು, ತಲುಪುಬೇಕಾದವರಿಗೆ ಸಹಾಯಧನ ತಲುಪದೇ ಬೇರೆ ಯಾರಿಗೋ ತಲುಪುತ್ತಿದೆ ಎನ್ನುವ ಆರೋಪಗಳು ಕೇಳಿ ಬಂದಿತ್ತು. 2022ರೊಳಗಾಗಿ ಹಜ್ ಸಬ್ಸಿಡಿಯನ್ನು ಹಂತ ಹಂತವಾಗಿ ಸ್ಥಗಿತಗೊಳ್ಳಿಸಬೇಕೆಂದು 2012ರಲ್ಲಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಸರ್ಕಾರಕ್ಕೆ ಸೂಚಿಸಿತ್ತು. ಖರ್ಚುಗಳನ್ನು ಭರಿಸಲು ಸಾಧ್ಯವಿರುವ ಮಂದಿ ಮಾತ್ರ ಹಜ್ ಯಾತ್ರೆಯನ್ನು ಮಾಡಬೇಕು ಎಂದು ಕುರಾನ್ ಹೇಳುತ್ತದೆ. ಹೀಗಾಗಿ ಸಬ್ಸಿಡಿ ಪಡೆದು ಯಾತ್ರೆ ಮಾಡುವುದು ಕುರಾನ್ ಬೋಧನೆಗೆ ವಿರುದ್ಧವಾಗುತ್ತದೆ ಅಲ್ಲವೇ ಎಂದು ಸುಪ್ರೀಂ ಪ್ರಶ್ನಿಸಿತ್ತು. ಹಜ್ ಯಾತ್ರೆಗೆ ಬಳಸುವ ಹಣವನ್ನು ಅಲ್ಪಸಂಖ್ಯಾತರ ಶಿಕ್ಷಣ, ಅಭಿವೃದ್ಧಿಗೆ ಬಳಸಬೇಕೆಂದು ಸಲಹೆ ನೀಡಿತ್ತು. 2012ರ ತನಕ ಪ್ರತೀ ವರ್ಷ ಹಜ್ ಯಾತ್ರೆಗೆ ಸುಮಾರು 650 ಕೋಟಿ ರೂ. ಮೀಸಲಿಡಲಾಗುತ್ತಿತ್ತು. ಸುಪ್ರೀಂ ಆದೇಶ ಬಳಿಕ ಇದನ್ನು 450 ಕೋಟಿ ರೂ. ಗೆ ಕಡಿತಗೊಳಿಸಲಾಗಿತ್ತು.

    ಅಫ್ಜಲ್ ಅಮಾನುಲ್ಲಾ ಸಮಿತಿಯ ಶಿಫಾರಸ್ಸುಗಳು ಏನಿತ್ತು?
    ಹಜ್ ಯಾತ್ರೆ ಕೈಗೊಳ್ಳಲು ಇದುವರೆಗೂ ವಿಮಾನ ಪ್ರಯಾಣದಲ್ಲಿ ಮಾತ್ರ ಅವಕಾಶ ನೀಡಲಾಗುತ್ತಿದೆ. ಇದರ ಜೊತೆಗೆ ಹಡಗು ಯಾನದ ಮೂಲಕ ಹಜ್ ಯಾತ್ರೆ ಕೈಗೊಳ್ಳಲು ಅವಕಾಶ ಕಲ್ಪಿಸಿಕೊಡಬೇಕು.

    ಯಾತ್ರೆಯ ವೇಳೆ ಮಹಿಳೆಯ ಯಾತ್ರಿಕರ ಜೊತೆ ಪುರುಷ ಸಂಬಂಧಿ ಇರಬೇಕು ಎಂಬ ನಿಯಮವನ್ನು ರದ್ದಾಗಬೇಕು. 45ಕ್ಕಿಂತ ಹೆಚ್ಚು ವರ್ಷ ಮೇಲ್ಪಟ್ಟ ಮಹಿಳೆಯರು ಪುರುಷರು ಜೊತೆ ಇಲ್ಲದೆ ಕನಿಷ್ಠ, ನಾಲ್ಕು ಮಂದಿಯ ಗುಂಪಿನಲ್ಲಿ ಹೋಗುವುದಕ್ಕೆ ಅವಕಾಶ ಕಲ್ಪಿಸಿಕೊಡಬೇಕು.