Tag: Yatnal

  • ಬಿಜೆಪಿಯಲ್ಲಿ ಬಣ ಫೈಟ್ – ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭೇಟಿ

    ಬಿಜೆಪಿಯಲ್ಲಿ ಬಣ ಫೈಟ್ – ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭೇಟಿ

    ಬೆಂಗಳೂರು: ಬಿಜೆಪಿಯಲ್ಲಿ (BJP) ಬಣ ಫೈಟ್ ತಾರಕಕ್ಕೇರಿರುವ ಹೊತ್ತಲ್ಲೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ (Tarun Chugh) ರಾಜ್ಯಕ್ಕೆ ಭೇಟಿ ನೀಡಿದ್ದಾರೆ.

    ಇಂದು ಬೆಳಗ್ಗೆ ರಾಜ್ಯಕ್ಕೆ ತರುಣ್ ಚುಗು ಅವರು ಆಗಮಿಸಿದರು. ಬಿಜೆಪಿ ಕಚೇರಿಗೆ ಬಂದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗೆ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೂಗುಚ್ಛ ನೀಡಿ ಸ್ವಾಗತಿಸಿದರು. ಇದನ್ನೂ ಓದಿ: ವಕ್ಫ್ ಆಸ್ತಿ ವಿವಾದ – ಬೀದರ್‌ನ ಮಹಾಮಠದ ಬಸವಗಿರಿ ಮೇಲೆ ವಕ್ಫ್ ಕರಿಛಾಯೆ

    ವಿಜಯೇಂದ್ರ ಬಣದಿಂದ ಒಗ್ಗಟ್ಟಾಗಿ ನಿಂತು ಸ್ವಾಗತ ಕೋರಲಾಯಿತು. ಕಾಡುಮಲ್ಲೇಶ್ವರ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಪಕ್ಷದ ಕಚೇರಿಗೆ ರಾಷ್ಟ್ರೀಯ ನಾಯಕ ಆಗಮಿಸಿದರು.

    ಬಿಜೆಪಿ ಕಚೇರಿಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಮೊದಲಿಗೆ ಸಂಘಟನಾ ಪರ್ವ ಸಂಬಂಧ 30 ಪ್ರಮುಖರ ಜತೆ ಸಭೆ ಇದೆ. ಸಕ್ರಿಯ ಸದಸ್ಯತ್ವ ಸಮಿತಿಗಳು, ಜಿಲ್ಲಾ ಅಧ್ಯಕ್ಷರು, ಮಂಡಲ, ಬೂತ್ ಸಮಿತಿಗಳ ಪ್ರಮುಖರು ಭಾಗಿಯಾಗಿದ್ದಾರೆ. ವಿಜಯೇಂದ್ರ, ಸಿ.ಟಿ.ರವಿ, ಛಲವಾದಿ ನಾರಾಯಣಸ್ವಾಮಿ, ಆರ್.ಅಶೋಕ್, ಸುನೀಲ್ ಕುಮಾರ್, ರಾಜ್ಯ ಪದಾಧಿಕಾರಿಗಳು ಸೇರಿ ಹಲವರು ಉಪಸ್ಥಿತರಿದ್ದಾರೆ. ಇದನ್ನೂ ಓದಿ: ಅಕ್ರಮ ಆಸ್ತಿ ಗಳಿಕೆ ಆರೋಪ – ಇಂದು ‘ಲೋಕಾ’ ವಿಚಾರಣೆಗೆ ಹಾಜರಾಗ್ತಾರಾ ಜಮೀರ್?

    ಇಂದು ಇಡೀ ದಿನ ಬಿಜೆಪಿ ಕಚೇರಿಯಲ್ಲಿ ಸರಣಿ ಸಭೆಗಳು ನಿಗದಿಯಾಗಿವೆ. ಪಕ್ಷದ ವಿದ್ಯಮಾನಗಳ ಬಗ್ಗೆ ಪ್ರಮುಖ ಬಿಜೆಪಿ ನಾಯಕರ ಜೊತೆ ರಾಷ್ಟ್ರೀಯ ನಾಯಕರು ಸಮಾಲೋಚನೆ ನಡೆಸಲಿದ್ದಾರೆ. ಶಾಸಕರ ಸಭೆ, ಪ್ರಮುಖರ ಸಭೆ, ಹಿರಿಯರ ಜೊತೆ ವಿಶೇಷ ಸಭೆಗಳು ನಡೆಯಲಿವೆ. ಸದಸ್ಯತ್ವದ ಅಭಿಯಾನ, ಪಕ್ಷದೊಳಗಿನ ಆಂತರಿಕ ಸಂಘರ್ಷದ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಹೈಕಮಾಂಡ್‌ಗೆ ರಾಜ್ಯ ಬಿಜೆಪಿ ವಿದ್ಯಮಾನಗಳ ಕುರಿತು ರಿಪೋರ್ಟ್ ಸಲ್ಲಿಸಲಿದ್ದಾರೆ.

  • ಬಿಜೆಪಿಯಲ್ಲಿ ಸಿಎಂ ಸ್ಥಾನ ಲಾಬಿಗೆ ಅವಕಾಶವಿಲ್ಲ, ಯತ್ನಾಳ್ ಹೇಳಿಕೆ ತಪ್ಪು: ರೇಣುಕಾಚಾರ್ಯ

    ಬಿಜೆಪಿಯಲ್ಲಿ ಸಿಎಂ ಸ್ಥಾನ ಲಾಬಿಗೆ ಅವಕಾಶವಿಲ್ಲ, ಯತ್ನಾಳ್ ಹೇಳಿಕೆ ತಪ್ಪು: ರೇಣುಕಾಚಾರ್ಯ

    ದಾವಣಗೆರೆ: ಬಿಜೆಪಿಯಲ್ಲಿ ಸಿಎಂ, ಸಚಿವ ಸ್ಥಾನ ಲಾಬಿಗೆ ಅವಕಾಶವಿಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರು ಶಾಸಕ ಬಸನಗೌಡ ಯತ್ನಾಳ್ ಹೇಳಿಕೆಯನ್ನು ವಿರೋಧಿಸಿದರು.

    ದೆಹಲಿಯಿಂದ ಬಂದವರು ನಿಮಗೆ ಸಿಎಂ ಮಾಡ್ತೀವಿ 2,500 ಕೋಟಿ ರೆಡಿ ಮಾಡ್ರೀ ಎಂದಿದ್ರು ಎಂದು ಶಾಸಕ ಯತ್ನಾಳ್ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿರೋಧಿಸಿ ದಾವಣಗೆರೆ ಜಿಲ್ಲೆಯ ನ್ಯಾಮತಿ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯತ್ನಾಳ್ ಹೇಳಿಕೆ ತಪ್ಪು. ಬಹಿರಂಗ ಸಭೆಯಲ್ಲಿ ಹೇಳುವ ಅವಶ್ಯಕತೆ ಇರಲಿಲ್ಲ ಎಂದು ಕಿವಿಮಾತು ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್ ತೊರೆದ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರ್ಪಡೆ 

    YATNAL 1

    ಬಿಜೆಪಿಯಲ್ಲಿ ಸಿಎಂ ಸಚಿವ ಸ್ಥಾನಕ್ಕೆ ಲಾಬಿಗೆ ಅವಕಾಶವಿಲ್ಲ. ಯತ್ನಾಳ್ ನನಗಿಂತ ಹಿರಿಯರು ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ಅವರು ಬಿಜೆಪಿ ಮುಖಂಡರು ಅಂತ ಹೇಳಿಲ್ಲ, ಯಾರೋ ಮಧ್ಯವರ್ತಿಗಳು ಎಂದು ಹೇಳಿದ್ದಾರೆ. ಆದರೆ ಈ ವಿಷಯಗಳ ಬಗ್ಗೆ ಸಾರ್ವಜನಿಕ ಸಮಾರಂಭಗಳಲ್ಲಿ ಮಾತನಾಡಬಾರದು ಎಂದು ಮನವಿ ಮಾಡುತ್ತೇವೆ ಎಂದರು.

    ಶಾಸಕಾಂಗ ಸಭೆಯಲ್ಲಿ ನಿರ್ಣಯವಾದ ನಂತರ ಬೊಮ್ಮಾಯಿ ಸಿಎಂ ಆಗಿದ್ದಾರೆ. ನಮ್ಮಲ್ಲಿ ಹಣ ಕೇಳುವ ಸಂಸ್ಕೃತಿ ಇಲ್ಲ. ಅದು ಕಾಂಗ್ರೆಸ್ ಸಂಸ್ಕೃತಿ, ಲಕೋಟೆ ಸಂಸ್ಕೃತಿ ನಮ್ಮಲ್ಲಿ ಎಂದಿಗೂ ಇಲ್ಲ. ಯಾರನ್ನು ಸಚಿವರನ್ನಾಗಿ ಮಾಡಬೇಕು, ಯಾರನ್ನು ಬಿಡಬೇಕು ಅದು ಸಿಎಂ ಹಾಗೂ ಹೈಕಮಾಂಡ್‍ಗೆ ಬಿಟ್ಟ ವಿಚಾರ ಎಂದು ತಿಳಿಸಿದರು.

    kumarswamy

    ಪಿಎಸ್‍ಐ ನೇಮಕಾತಿ ಅಕ್ರಮದಲ್ಲಿ ಬಿಜೆಪಿ ಪ್ರಭಾವಿಗಳಿದ್ದಾರೆಂಬ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಪ ಮಾಡ್ತಿರುವುದು ಗಾಳಿಯಲ್ಲಿ ಗುಂಡು ಹೊಡೆಯುವ ಸಂಸ್ಕೃತಿ. ಸರ್ಕಾರ ಪಥನವಾಗುತ್ತದೇ ಎಂದು ಹೇಳುವುದಲ್ಲಾ ಅದನ್ನು ಸಾಬೀತು ಮಾಡಲಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಸಿದ್ದರಾಮಯ್ಯ ಮಠದ ಶ್ರೀಗಳಂತೆ ಮಾತನಾಡಿದ್ರು: ಸಿದ್ದು ಹೊಗಳಿದ ಡಿಕೆಶಿ


    ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಕುಮಾರಸ್ವಾಮಿ ದಿನ ಬೆಳಗ್ಗೆಯಾದರೆ ರಾಜೀನಾಮೆ ಎಂದು ಹೇಳುತ್ತಾರೆ. ಅವರ ಅವಧಿಯಲ್ಲಿ ಎಷ್ಟು ಜನ ಸಚಿವರ ರಾಜೀನಾಮೆ ಪಡೆದಿದ್ದಾರೆ. ರಾಜೀನಾಮೆ ಕೇಳುವ ನೈತಿಕತೆ ಅವರಿಗಿಲ್ಲ ಎಂದು ಟಾಂಗ್ ಕೊಟ್ಟರು.

  • ಯತ್ನಾಳ್ ಸತ್ತಿದ್ದಾರೆ, ಅದಕ್ಕಾಗಿ ಶವಯಾತ್ರೆ ಮಾಡ್ತಿದ್ದೇವೆ: ಮೊಹಮ್ಮದ್ ನಲಪಾಡ್

    ಯತ್ನಾಳ್ ಸತ್ತಿದ್ದಾರೆ, ಅದಕ್ಕಾಗಿ ಶವಯಾತ್ರೆ ಮಾಡ್ತಿದ್ದೇವೆ: ಮೊಹಮ್ಮದ್ ನಲಪಾಡ್

    ಬೆಂಗಳೂರು: ಬಿಜೆಪಿ ಪಕ್ಷದವರಿಗೆ ಮಾಡುವುದಕ್ಕೆ ಕೆಲಸವಿಲ್ಲ. ಅದಕ್ಕಾಗಿ ಬಾಯಿಂಗೆ ಬಂದ ಹಾಗೆ ಮಾತಾನಾಡುತ್ತಾರೆ. ಯತ್ನಾಳ್ ಈಗಾಗಲೇ ಸತ್ತಿದ್ದು ಅವರ ಶವಯಾತ್ರೆಯನ್ನು ಯುತ್ ಕಾಂಗ್ರೆಸ್ ಮಾಡಿದೆ ಎಂದು ಯುತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಹೇಳಿದ್ದಾರೆ.

    ಇಂದು ಮೌರ್ಯ ಸರ್ಕಲ್‍ನಲ್ಲಿ ಯುತ್ ಕಾಂಗ್ರೆಸ್ ವತಿಯಿಂದ ಬಿಜೆಪಿ ಶಾಸಕ ಯತ್ನಾಳ್ ವಿರುದ್ಧ ಪ್ರತಿಭಟನೆ ಮಾಡಿದರು. ನಿನ್ನೆ ಯತ್ನಾಳ್ ಅವರು ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಪಾಕಿಸ್ತಾನದ ಎಜೆಂಟ್ ಅಂತ ಕರೆದಿದ್ದಾರೆ. ಯಾವ ಆಧಾರದ ಮೇಲೆ ಅವರು ಹೀಗೆ ಕರೆಯುತ್ತಾರೆ. ಅವರಿಗೆ ನೈತಿಕತೆ ಇಲ್ಲ. ಯತ್ನಾಳ್ ಅಫ್ಘಾನಿಸ್ತಾನದ ಎಜೆಂಟ್ ಅಂತ ನಾನು ಹೇಳುತ್ತೇನೆ. ಅವರು ಈಗಾಗಲೇ ಸತ್ತಿದ್ದಾರೆ. ಅದಕ್ಕಾಗಿ ನಾವೂ ಶವಯಾತ್ರೆ ಮಾಡುತ್ತಿದ್ದೇವೆ. ಇದು ಕೊಳಕು ಬಿಜೆಪಿ ಪಕ್ಷ ಜನ ಇದನ್ನು ಕಿತ್ತು ಹಾಕಬೇಕು ಎಂದಿದ್ದಾರೆ. ಇದನ್ನೂ ಓದಿ: ಸೈನ್ ಭಾಷೆ ಅರ್ಥಮಾಡಿಕೊಳ್ಳುವ ಎಐ ಮಾದರಿಯನ್ನು ರಚಿಸಿದ 20 ವರ್ಷದ ಯುವತಿ

    nalapad

    ಬಿಜೆಪಿಗೆ ಧಿಕ್ಕಾರ ಕೂಗಿ ಶವಯಾತ್ರೆ ಮಾಡಿದ ಕಾಂಗ್ರೆಸ್ ಕಾರ್ಯಕರ್ತರು ಯತ್ನಾಳ್ ಭಾವಚಿತ್ರವನ್ನು ಚಟ್ಟದ ಮೇಲೆ ಹಾಕಿ ಶವಯಾತ್ರೆ ಮಾಡಿ ಚಿತೆಗೆ ಬೆಂಕಿ ಹಚ್ಚಿ ಸಂಸ್ಕಾರ ಮಾಡಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ಯತ್ನಾಳ್ ದೇಶದ್ರೋಹಿ ಕೋಮುವಾದಿ ಅಂತ ಕೂಗಿ ಬಾಯಿ ಬಡೆದುಕೊಂಡು ಅಂತ್ಯಸಂಸ್ಕಾರ ಮಾಡಿದ್ದಾರೆ. ಇದನ್ನೂ ಓದಿ: ಹಿಜಬ್ ಹಾಕಿಸೋಕೆ ಅಥವಾ ತೆಗಿಸೋಕೆ ಯಾರೇ ಬಂದ್ರು ಒದ್ದು ಒಳಗೆ ಹಾಕಿ: ಪ್ರಹ್ಲಾದ್ ಜೋಶಿ

  • ಡಿಕೆಶಿ ಜೊತೆ ಊಟ, ತಿಂಡಿಗೆ ಹೋಗೋದು ತಪ್ಪಾ: ಸೋಮಣ್ಣ ಪ್ರಶ್ನೆ

    ಡಿಕೆಶಿ ಜೊತೆ ಊಟ, ತಿಂಡಿಗೆ ಹೋಗೋದು ತಪ್ಪಾ: ಸೋಮಣ್ಣ ಪ್ರಶ್ನೆ

    ಚಾಮರಾಜನಗರ: ಡಿ.ಕೆ.ಶಿವಕುಮಾರ್ ಅವರೊಂದಿಗೆ ಊಟ, ತಿಂಡಿಗೆ ಹೋಗುವುದು ತಪ್ಪಾ? ಡಿಕೆಶಿ ಜೊತೆ ಯಾರೂ ಹೋಗುವ ಹಾಗೇ ಇಲ್ವಾ? ಎಂದು ಸಚಿವ ವಿ.ಸೋಮಣ್ಣ ಪ್ರಶ್ನಿಸಿದ್ದಾರೆ.

    ಬಿಜೆಪಿ ಶಾಸಕರು ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚೆ ಮಾಡುತ್ತಿದ್ದಾರೆ ಎಂಬ ವದಂತಿ ಬಗ್ಗೆ ಚಾಮರಾಜನಗರದಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದೆಲ್ಲಾ ಮೈನರ್ ವಿಚಾರ ಬಿಟ್ಟುಬಿಡಿ. ಚುನಾವಣೆಗೆ ಇನ್ನೂ 15-16 ತಿಂಗಳು ಇದೆ. ಈ ಅವಧಿಯಲ್ಲಿ ನಾವೇನು ಮಾಡಬೇಕು, ಜಿಲ್ಲೆಯ ಅಭಿವೃದ್ಧಿಗೆ ಸಿಎಂ ಹತ್ತಿರ ಏನು ಒತ್ತಡ ತರಬೇಕು. ಈ ಬಗ್ಗೆ ನನಗೆ ಸಲಹೆ ಕೊಡಿ ಮನವಿ ಮಾಡಿದರು. ಇದನ್ನೂ ಓದಿ: ಬಂಡೀಪುರದಲ್ಲಿ ಹುಲಿ ಗಣತಿ ಆರಂಭ: ಲೆಕ್ಕ ಹೇಗೆ ಹಾಕುತ್ತಾರೆ? ಇಲ್ಲಿದೆ ಪೂರ್ಣ ಮಾಹಿತಿ

    ರಾಜಕೀಯ ಬೆಳವಣಿಗೆ ಬಗ್ಗೆ ಬೆಂಗಳೂರಿನವರು ಏನು ಮಾಡಿಕೊಳ್ಳುತ್ತಾರೆ. ಬೆಂಗಳೂರು ಕಾಸ್ಮೋ ಪಾಲಿಟಿನ್ ಸಿಟಿ. ಯಾರೂ ಎಲ್ಲಿಗೆ ಹೋಗುತ್ತಾರೆ. ಎಲ್ಲಿಗೆ ಬರುತ್ತಾರೆ ಎಂದು ಕಂಡು ಹಿಡಿಯುವುದಕ್ಕೆ ಆಗುವುದಿಲ್ಲ. ಯಾವುದೋ ರೆಸಾರ್ಟ್ ಡಿಕೆಶಿಗೆ ಮಾತ್ರ ಇರುತ್ತಾ? ಜೆಡಿಎಸ್, ಬಿಜೆಪಿಗೆ ಮಾತ್ರ ಇರುತ್ತಾ? ಅದು ಎಲ್ಲರಿಗೂ ರೆಸಾರ್ಟ್. ಅದು ಇರುವುದು ಕೆಲವರು ಆರಾಮವಾಗಿ ಇರುವುದಕ್ಕೆ ನಮ್ಮಂತಹವರು ಇರುವುದು ಬೀದಿ ಸುತ್ತುವುದಕ್ಕೆ ಎಂದು ಹೇಳಿದರು.

    ಬಿಜೆಪಿಯ ಕೆಲ ಶಾಸಕರು, ಸಚಿವರು ಕಾಂಗ್ರೆಸ್‍ಗೆ ಹೋಗುತ್ತಾರೆ ಎಂಬ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ, ಯತ್ನಾಳ್ ಅವರು ಗೌಡ್ರು. ವಿಜಯಪುರದ ನಾಯಕರು ಅವರು ಏನು ಹೇಳಿದ್ದಾರೆಂದು ಖಂಡಿತವಾಗಿ ನನಗೆ ಗೊತ್ತಿಲ್ಲ. ನಾನು ಅವರು ಒಂದು ಸಾವಿರ ಕಿಲೋಮೀಟರ್ ದೂರದಲ್ಲಿದ್ದೇವೆ. ಅವರ ಜೊತೆ ಮಾತನಾಡಲು ಫೋನ್ ಮಾಡಿದ್ದೆ. ಆದರೆ ಅವರು ನನ್ನ ಸ್ವೀಕರಿಸಲಿಲ್ಲ ಎಂದರು.  ಇದನ್ನೂ ಓದಿ: ಆಹಾರ ಅರಸಿ ನಾಡಿಗೆ ಬಂದ ಆನೆ ವಿದ್ಯುತ್ ಶಾಕಿಗೆ ಬಲಿ

  • ಸುಪ್ರೀಂ ಆದೇಶ ಹಿಂದೂಗಳಿಗೆ ಮಾತ್ರವೇ – ಮೈಸೂರು ಡಿಸಿಗೆ ಯತ್ನಾಳ್ ಪ್ರಶ್ನೆ

    ಸುಪ್ರೀಂ ಆದೇಶ ಹಿಂದೂಗಳಿಗೆ ಮಾತ್ರವೇ – ಮೈಸೂರು ಡಿಸಿಗೆ ಯತ್ನಾಳ್ ಪ್ರಶ್ನೆ

    ವಿಜಯಪುರ: ಮೈಸೂರು ಜಿಲ್ಲೆಯಲ್ಲಿ ದೇವಸ್ಥಾನ ತೆರವು ವಿಚಾರವನ್ನು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಖಂಡಿಸಿದ್ದಾರೆ. ಇದನ್ನೂ ಓದಿ: ವೈಟ್ ಬೋರ್ಡ್ ವಾಹನದಲ್ಲಿ ಪ್ರಯಾಣಿಕರನ್ನು ಸಾಗಿಸೋದು ಅಕ್ಷಮ್ಯ ಅಪರಾಧ: ಸುಧಾಕರ್

    Bagadi Gautham

    ಸುಪ್ರೀಂಕೋರ್ಟ್ ಆದೇಶ ನೆಪ ಮಾಡಿಕೊಂಡು ಹಿಂದೂ ದೇವಾಲಯ ಧ್ವಂಸ ಸರಿಯಲ್ಲ. ಹಿಂದೂ ದೇವಾಲಯಗಳನ್ನು ಧ್ವಂಸ ಮಾಡುವ ಹುನ್ನಾರವನ್ನು ನಾವು ಖಂಡಿಸುತ್ತೇವೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ರಿಟರ್ನ್ ಟಿಕೆಟ್ ಬುಕ್ ಮಾಡಿದ್ದ ಎಮ್ಮಾ ರಾಡುಕಾನು ಯುಎಸ್ ಓಪನ್ ಚಾಂಪಿಯನ್

    ಸುಪ್ರೀಂ ಕೋರ್ಟ್ ಆದೇಶವನ್ನು ತಮಗೆ ಬೇಕಾದ ಹಾಗೇ ತಿರುಚಿ ಹಿಂದೂಗಳ ಶ್ರದ್ಧಾ ಕೇಂದ್ರಗಳಿಗೆ ಮಾತ್ರ ಕೈಹಾಕುವ ಯತ್ನಕ್ಕೆ ಅಧಿಕಾರಿಗಳು ಕೈ ಹಾಕಬಾರದು. ಪ್ರಾರ್ಥನಾ ಮಂದಿರಗಳಿಗೂ ದೇವಸ್ಥಾನಗಳಿಗೂ ಬಹಳ ವ್ಯತ್ಯಾಸವಿದೆ. ಸುಪ್ರೀಂ ಕೋರ್ಟ್ ಆದೇಶ ಹಿಂದುಗಳಿಗೆ ಮಾತ್ರವೇ ಎಂದು ಮೈಸೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ಉತ್ತರಿಸಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಗೌಡ್ರ ಕುಟುಂಬದಲ್ಲಿ ಹಬ್ಬದ ಸಂಭ್ರಮ – ನಿಖಿಲ್ ಪತ್ನಿಗೆ ಸೀಮಂತ

  • ಮುಖ್ಯಮಂತ್ರಿ ಚಂದ್ರು ಅವನೇನು ಮುಖ್ಯಮಂತ್ರಿಯೋ, ಪ್ರಧಾನ ಮಂತ್ರಿಯೋ: ಕಾಶಪ್ಪನವರ್

    ಮುಖ್ಯಮಂತ್ರಿ ಚಂದ್ರು ಅವನೇನು ಮುಖ್ಯಮಂತ್ರಿಯೋ, ಪ್ರಧಾನ ಮಂತ್ರಿಯೋ: ಕಾಶಪ್ಪನವರ್

    ಬಾಗಲಕೋಟೆ: ಮೀಸಲಾತಿಗೆ ಅಪಸ್ವರ ಎತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಚಂದ್ರು ಅವನೇನು ಮುಖ್ಯಮಂತ್ರಿಯೋ, ಪ್ರಧಾನ ಮಂತ್ರಿಯೋ ಎಂದು ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

    ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಚಂದ್ರು ಅವನೇನು ಮುಖ್ಯಮಂತ್ರಿಯೋ, ಪ್ರಧಾನ ಮಂತ್ರಿಯೋ? ಪಂಚಮಸಾಲಿ ಸಮುದಾಯ ಮೀಸಲಾತಿ ಬೇಡ ಅನ್ನೋದಕ್ಕೆ ಇವರ್ಯಾರು? ನಮಗೆ ಮೀಸಲಾತಿ ಬೇಕಿದೆ, ಇದಕ್ಕಾಗಿಯೇ ರಾಜ್ಯದಲ್ಲಿ ಪಾದಯಾತ್ರೆ ಮಾಡಿದ್ದೇವೆ. 10 ಲಕ್ಷ ಜನ ಸೇರಿಸಿ ಸಮಾವೇಶ ಮಾಡಿ ನ್ಯಾಯ ಕೇಳಿದ್ದೇವೆ. ನಮಗೆ ಮೀಸಲಾತಿ ಬೇಡ ಅನ್ನೋಕೆ ಇವರ್ಯಾರು? ನೀವು ನಿಮ್ಮಷ್ಟಕ್ಕೆ ಹೋರಾಟ ಮಾಡಿ, ಆದರೆ ನಮ್ಮ ತಂಟೆಗೆ ಬಂದರೆ ಸುಮ್ಮನೆ ಕೂರೋಕಾಗಲ್ಲ. ಜನ ಕೇಳ್ತಾರೆ ಅಂತ ಬಾಯಿಗೆ ಬಂದಂತೆ ಮಾತನಾಡೋಕೆ ಇವನ್ಯಾರು? ಮೀಸಲಾತಿ ಬೇಡ ಅನ್ನೋಕೆ ಇವನಿಗೆ ರೈಟ್ಸ್ ಕೊಟ್ಟೋರು ಯಾರು? ಅವರು ಉದ್ದಾರ ಆಗಿರಬಹುದು, ಸಂವಿಧಾನಾತ್ಮಕವಾಗಿ ಹಕ್ಕಿದೆ ಮೀಸಲಾತಿ ಕೇಳುತ್ತೇವೆ. ಅಗಸ್ಟ್ 26ರಿಂದ ಮಲೆ ಮಹದೇಶ್ವರ ಬೆಟ್ಟದಿಂದ ಮತ್ತೇ ಜಾಗೃತಿ ಸಭೆ ಆರಂಭಿಸುತ್ತೇವೆ ಎಂದರು.ಇದನ್ನೂ ಓದಿ: ಬಲಿಷ್ಠ ಸಮುದಾಯವನ್ನು ಪ್ರವರ್ಗ 2ಎ ಗೆ ಸೇರಿಸದಂತೆ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಆಗ್ರಹ

    ಬಸನಗೌಡ ಪಾಟೀಲ್ ಯತ್ನಾಳ್ ಸಚಿವ ಸ್ಥಾನ ಕೈ ತಪ್ಪಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಸಿ.ಪಿ ಯೋಗೇಶ್ವರ್‍ಗೆ ಮಂತ್ರಿ ಸ್ಥಾನ ನೀಡಬಾರದು ಎಂದು ಬಿಎಸ್‍ವೈ ಪಟ್ಟು ಹಿಡಿದಿದ್ದರು ಎಂದು ಸುದ್ದಿ ಕೇಳಿ ಬಂತು. ಯತ್ನಾಳ್ ಸಣ್ಣವರಲ್ಲ, ಅವರಿಗೆ ಶಕ್ತಿಯಿದೆ, ತಾಕತ್ತಿದೆ. ಯತ್ನಾಳ್ ಜೊತೆ ಅವರ ಸಮಾಜವಿದೆ. ಅವರೇ ಮುಂದೆ ಮುಖ್ಯಮಂತ್ರಿ ಯಾಕೆ ಆಗಬಾರದು? ಬಿಜೆಪಿ ಪಕ್ಷದ ಬಗ್ಗೆ ನಾನು ಮಾತನಾಡಲ್ಲ. ನಮ್ಮದು ಪಕ್ಷಾತೀತ ಪಂಚಮಸಾಲಿ ಮೀಸಲಾತಿ ಹೋರಾಟ. ನಮ್ಮ ಹೋರಾಟದಲ್ಲಿ ನಾನು ಕಾಂಗ್ರೆಸ್ ಪಕ್ಷದವನಾದರೂ ಕೂಡಾ ಪಕ್ಷ ಬದಿಗೊತ್ತಿ ನಿಂತಿದ್ದೇನೆ. ಯತ್ನಾಳ್, ರಾಜೂಗೌಡರಿಗೆ ಮಂತ್ರಿಸ್ಥಾನ ನೀಡಬೇಕಿತ್ತು. ಆದರೆ ಅದು ಅವರ ವೈಯಕ್ತಿಕ ವಿಚಾರ ಯತ್ನಾಳ್ ಬಿಜೆಪಿಯ ಹಿರಿಯ ಮನುಷ್ಯ. ಅವರ ವಿಷಯದಲ್ಲಿ ಕುತಂತ್ರ ನಡೆಸಿದೆ. ಕುತಂತ್ರ ಇದ್ದೆ ಇರುತ್ತದೆ. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಇಳಿಸಿದ್ದಕ್ಕೆ ಯತ್ನಾಳ್ ಅವರಿಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ. ಯಡಿಯೂರಪ್ಪ ನವರೇ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಮಂತ್ರಿಸ್ಥಾನ ಕೊಡಬಾರದು ಎಂದಿದ್ದಾರೆ ಎಂದರು. ಇದನ್ನೂ ಓದಿ: ಬೋವಿ ಸ್ವಾಮೀಜಿ, ನಾರಾಯಣಸ್ವಾಮಿ ನಡುವೆ ತಾರಕಕ್ಕೇರಿದ ಒಳಮೀಸಲಾತಿ ಸಮರ

    ರಾಜಕೀಯ ಪ್ರೇರಿತ ಕೇಸ್:
    ನಿನ್ನೆ ಇಳಕಲ್ ಪಟ್ಟಣಕ್ಕೆ ಮಾಜಿ ಸಚಿವ ವಿನಯ್ ಕುಲಕರ್ಣಿ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾವು ಜಾಮೀನು ಸಿಗುತ್ತೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಸೋಮವಾರ ಸಿಗಬಹುದು ಎಂದುಕೊಂಡಿದ್ವಿ ಆದರೆ ನಿನ್ನೆ ಸಿಕ್ಕಿದೆ. ಜೈಲಿನಿಂದ ಬಿಡುಗಡೆಯಾದ ಬಳಿಕ ವಿನಯ್ ಕುಲಕರ್ಣಿಯವರು ಬೆಂಗಳೂರಿಗೆ ಹೊರಟಿದ್ದರು. ಸ್ನೇಹಿತರಿಂದ ವಿಷಯ ತಿಳಿದು ಮಾರ್ಗಮಧ್ಯೆ ಮನೆಗೆ ಬರಮಾಡಿಕೊಂಡೆ. ಚಹಾ ಕುಡಿದು ಹೋಗಿ ಎಂದು ಮನವಿ ಮಾಡಿದ್ದೆ, ಭೇಟಿ ವೇಳೆ ಯಾವುದೇ ಚರ್ಚೆ ಆಗಿಲ್ಲ. ಅವರೊಬ್ಬರು ಸಮಾಜದ ಮುಖಂಡರು ಸಮಾಜ ಅವರ ಜೊತೆ ಇದೆ ಎಂದು ಅಂದೆ ಸ್ಪಷ್ಟಪಡಿಸಿದ್ದೆ. ಏನೋ ದುರದೃಷ್ಟ ಉದ್ದೇಶ ಪೂರ್ವಕವಾಗಿ ಅವರ ಮೇಲೆ ಪ್ರಕರಣ ಹಾಕಲಾಗಿದೆ. ಸುಮಾರು 10 ತಿಂಗಳ ಕಾಲ ಜೈಲುಶಿಕ್ಷೆ ಅನುಭವಿಸುವ ಪರಿಸ್ಥಿತಿ ಬಂತು. ಅವರಿಗೆ ಅನ್ಯಾಯ ಆಗಿದೆ ಭಗವಂತ ಅವರಿಗೆ ನ್ಯಾಯ ಕೊಡುತ್ತಾನೆ. ನ್ಯಾಯಾಲಯಕ್ಕೆ ನಾವು ಗೌರವ ಕೋಡುತ್ತೇವೆ. ವಿನಯ್ ಕುಲಕರ್ಣಿ ಬಿಡುಗಡೆ ವೇಳೆ ಕೋವಿಡ್ ನಿಯಮ ಉಲ್ಲಂಘನೆಗೆ ಪ್ರಕರಣ ದಾಖಲಾಗಿರುವುದು ರಾಜಕೀಯ ಕುತಂತ್ರ. ಶ್ರೀರಾಮುಲು ಜನ ಸೇರಿಸಿ ಜಾತ್ರೆ ಮಾಡಿದರೆ ಅವರಿಗೆ ಕೇಸ್ ಹಾಕಿದ್ರಾ? ನನ್ನ ಮೇಲೂ ಕೇಸ್ ಹಾಕಿದ್ದಾರೆ. ಸಣ್ಣಪುಟ್ಟ ಕಾರ್ಯಕ್ರಮ ಮಾಡಿದರೆ ಕೇಸ್ ಹಾಕುತ್ತಾರೆ. ಇದು ದ್ವೇಷದ ರಾಜಕೀಯ, ಇವತ್ತು ಅವರು ಮಾಡಿದರೆ ನಾಳೆ ನಾವು ಮಾಡುತ್ತೇವೆ ಎಂದರು.

  • ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ: ಶಾಸಕ ಜ್ಯೋತಿಗಣೇಶ್

    ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ: ಶಾಸಕ ಜ್ಯೋತಿಗಣೇಶ್

    – ಯತ್ನಾಳ್ ಹೇಳಿಕೆಗೆ ಮೂರು ಕಾಸಿನ ಕಿಮ್ಮತ್ತು ಇಲ್ಲ

    ತುಮಕೂರು: ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ನನಗೆ ಸಚಿವ ಸ್ಥಾನ ಬೇಡ ಎಂದು ತುಮಕೂರು ನಗರ ಬಿಜೆಪಿ ಶಾಸಕ ಜ್ಯೋತಿಗಣೇಶ್ ಹೇಳಿದ್ದಾರೆ.

    ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ಪಕ್ಷದಲ್ಲಿ ಸೇವೆ ಮಾಡಿದ ನೂರಾರು ಹಿರಿಯ ನಾಯಕರಿದ್ದಾರೆ. ಅಂಥವರನ್ನು ಗುರುತಿಸಿ ಪಕ್ಷ ಸಚಿವ ಸ್ಥಾನ ಕೊಡಲಿ, ಅಭಿಮಾನಿಗಳು ಯಾರೂ ನನ್ನ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಒತ್ತಾಯ ಮಾಡಬಾರದು ಎಂದು ಮನವಿ ಮಾಡಿದ್ದಾರೆ.

    ಜೆ.ಸಿ ಮಾಧುಸ್ವಾಮಿ ಉತ್ತಮ ಸಂಸದೀಯ ಪಟು, ಮಾಧುಸ್ವಾಮಿ, ಬಿ.ಸಿ ನಾಗೇಶ್ ಜಿಲ್ಲೆಯಲ್ಲಿ ಹಿರಿಯರಿದ್ದಾರೆ. ಅವರಿಗೆ ಸಚಿವ ಸ್ಥಾನ ಕೊಡಬೇಕು ಎಂದರು. ಇದೇ ವೇಳೆ ಬಸವರಾಜ್ ಯತ್ನಾಳ್ ಬಗ್ಗೆ ಮಾತನಾಡಿದ ಜ್ಯೋತಿಗಣೇಶ್, ಯತ್ನಾಳ್ ಗೆ ಬುದ್ಧಿ ಭ್ರಮಣೆಯಾಗಿದೆ. ಹಾಗಾಗಿ ಅವರು ಯಡಿಯೂರಪ್ಪರ ಬಗ್ಗೆ ಪದೇ ಪದೇ ಅವಹೇಳನಕಾರಿಯಾಗಿ ಮಾತನಾಡುತ್ತಾರೆ ಎಂದು ಕಿಡಿಕಾರಿದ್ದಾರೆ.

    ಯತ್ನಾಳ್ ಹೇಳಿಕೆ ಅವರಿಗೆ ಶೋಭೆ ತರುವಂಥದಲ್ಲ. 2016-2017 ರ ಹೊತ್ತಲ್ಲಿ ಇದೇ ಯತ್ನಾಳ್ ಯಡಿಯೂರಪ್ಪ ಇಲ್ಲದೇ ಇದ್ದರೆ, ಬಿಜೆಪಿಗೆ 3 ಸ್ಥಾನನೂ ಬರುವುದಿಲ್ಲ ಎಂದಿದ್ದರು. ಈಗ ಅವರ ವಿರುದ್ಧ ಮಾತನಾಡುತ್ತಾರೆ. ಯತ್ನಾಳ್ ಹೇಳಿಕೆಗೆ ಮೂರು ಕಾಸಿನ ಕಿಮ್ಮತ್ತು ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಹೊಸ ಬಾಂಬ್ ಸಿಡಿಸಿದ ಯತ್ನಾಳ್

  • ನೀನು ಮರಿಯಾನೆಯೂ ಅಲ್ಲಾ, ಏನೂ ಅಲ್ಲಾ – ಯೋಗೇಶ್ವರ್ ವಿರುದ್ಧ ರೇಣುಕಾಚಾರ್ಯ ಆಕ್ರೋಶ

    ನೀನು ಮರಿಯಾನೆಯೂ ಅಲ್ಲಾ, ಏನೂ ಅಲ್ಲಾ – ಯೋಗೇಶ್ವರ್ ವಿರುದ್ಧ ರೇಣುಕಾಚಾರ್ಯ ಆಕ್ರೋಶ

    ದಾವಣಗೆರೆ: ಯೋಗೇಶ್ವರ್‍ ಗೆ ಸಿಎಂ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಪಕ್ಷಾಂತರಿ ರಾಜಕೀಯದ ಬಗ್ಗೆ ಮಾತನಾಡುವಾಗ ನನಗೆ ಅಸಹ್ಯವಾಗುತ್ತಿದೆ. ನೀನು ಮರಿಯಾನೆಯೂ ಅಲ್ಲಾ. ಏನೂ ಅಲ್ಲಾ ಎಂದು ಸಿ.ಪಿ.ಯೋಗೇಶ್ವರ್ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

    ಹೊನ್ನಾಳಿ ತಾಲೂಕಿನ ಬಸವನಹಳ್ಳಿಯಲ್ಲಿ ಮಾತನಾಡಿದ ರೇಣುಕಾಚಾರ್ಯ ಅವರು, ಯೋಗೇಶ್ವರ್ ಸಿಎಂ ಯಡಿಯೂರಪ್ಪರ ಬಗ್ಗೆ ಮಾತನಾಡಲು ಯಾವುದೇ ಅಧಿಕಾರವಿಲ್ಲ. ಅವರ ವಿರುದ್ಧ ಮಾತನಾಡಿದರೆ ಬಿಜೆಪಿ ಪಕ್ಷದ ಬಗ್ಗೆ ಮಾತನಾಡಿದಂತೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ರಾಜ್ಯದ ನಾಲ್ವರಿಗೆ ಮಂತ್ರಿಗಿರಿ – ಆಯ್ಕೆಗೆ ಮಾನದಂಡ ಏನು?

    ಇದೇ ಸಂದರ್ಭದಲ್ಲಿ ಶಾಸಕ ಯತ್ನಾಳ್‍ಗೆ ಪರೋಕ್ಷವಾಗಿ ಟಾಂಗ್ ನೀಡಿದ ಅವರು, ಯಡಿಯೂರಪ್ಪನವರ ಬಗ್ಗೆ ಮಾತನಾಡಿದರೆ ದೊಡ್ಡವರಾಗ್ತೀವಿ ಎಂದು ಕೆಲವರು ಅಂದುಕೊಂಡಿದ್ದಾರೆ. ಯಡಿಯೂರಪ್ಪನವರ ಬಗ್ಗೆ ಮಾತನಾಡಿದರೆ ಬಿಜೆಪಿ ಬಗ್ಗೆ ಮಾತನಾಡಿದಂತೆ. ಅವರಿಗೆ ನಾಲಿಗೆಗೂ, ಮೆದುಳಿಗೂ ಸಂಬಂಧ ಇಲ್ಲ. ಬುದ್ಧಿ ಸ್ಥಿಮಿತ ಇಲ್ಲ ಎಂದು ಅರ್ಥ. ಯಡಿಯೂರಪ್ಪನವರ ಬಗ್ಗೆ ಮಾತನಾಡಿದರೆ ಸಹಿಸುವುದಿಲ್ಲ ಎಂದು ಮತ್ತೊಮ್ಮೆ ಎಚ್ಚರಿಕೆ ನೀಡಿದರು.

    ನಾಯಕತ್ವದ ವಿರುದ್ಧ ಮಾತನಾಡುವವರ ಬಗ್ಗೆ ವರಿಷ್ಠರು ತುರ್ತಾಗಿ ಕ್ರಮ ಕೈಗೊಳ್ಳಬೇಕು. ನಾಳೆ ಬೆಂಗಳೂರಿನಲ್ಲಿ ಸಿಎಂ ಹಾಗೂ ರಾಜ್ಯಾಧ್ಯಕ್ಷರನ್ನು ಭೇಟಿ ಮಾಡುತ್ತೇನೆ, ಯಡಿಯೂರಪ್ಪ ಕುಟುಂಬ ರಾಜಕಾರಣ ಎಂದೂ ಮಾಡಿಲ್ಲ. ಯಡಿಯೂರಪ್ಪ ಭ್ರಷ್ಟಾಚಾರ ಮಾಡಿದ್ದರೆ ಅದನ್ನು ಬಹಿರಂಗಪಡಿಸಲಿ ಎಂದರು.

  • ಧರ್ಮ ಬಿಟ್ಟು ರಾಜಕಾರಣವಿಲ್ಲ, ರಾಜಕಾರಣ ಬಿಟ್ಟು ಧರ್ಮವಿಲ್ಲ: ಸಚಿವ ಬಿ.ಸಿ.ಪಾಟೀಲ್

    ಧರ್ಮ ಬಿಟ್ಟು ರಾಜಕಾರಣವಿಲ್ಲ, ರಾಜಕಾರಣ ಬಿಟ್ಟು ಧರ್ಮವಿಲ್ಲ: ಸಚಿವ ಬಿ.ಸಿ.ಪಾಟೀಲ್

    ಚಾಮರಾಜನಗರ: ಸಿಎಂ ಯಡಿಯೂರಪ್ಪ ಪರ ಮಠಾಧೀಶರ ಬ್ಯಾಟಿಂಗ್ ವಿಚಾರವಾಗಿ ಪ್ರತಿಕ್ರಿಯಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್, ಧರ್ಮ ಬಿಟ್ಟು ರಾಜಕಾರಣವಿಲ್ಲ, ರಾಜಕಾರಣ ಬಿಟ್ಟು ಧರ್ಮವಿಲ್ಲ. ಪ್ರತಿಯೊಬ್ಬರಿಗು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಇದೆ, ವಾಕ್ ಸ್ವಾತಂತ್ರ್ಯ ಇದೆ, ಮಠಾಧೀಶರು ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

    ಚಾಮರಾಜನಗರ ಜಿಲ್ಲೆಯಲ್ಲಿ ಮಾತನಾಡಿದ ಅವರು, ಸಿಎಂ ಬದಲಾವಣೆ ಇಲ್ಲ ಎಂದು ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಸ್ಪಷ್ಡಪಡಿಸಿದ್ದಾರೆ. ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮಾಮೂಲಿಯಂತೆ ಪಕ್ಷದ ಆಗು ಹೋಗುಗಳು ಹಾಗು ಪಕ್ಷ ಸಂಘಟನೆ ಬಗ್ಗೆ ಚರ್ಚಿಸಲು ಬರುತ್ತಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾವು ಬಿಜೆಪಿಗೆ ಬಂದಿದ್ದಕ್ಕೆ ಈಶ್ವರಪ್ಪ ಮಿನಿಸ್ಟರ್ ಆಗಿದ್ದು: ಬಿ.ಸಿ.ಪಾಟೀಲ್ ತಿರುಗೇಟು

    ಮುಖ್ಯಮಂತ್ರಿ ಬದಲಾವಣೆ ವಿಚಾರ ಸಂಪೂರ್ಣ ಸುಳ್ಳು, ಮುಂದಿನ ಎರಡು ವರ್ಷ ಕಾಲ ಯಡಿಯೂರಪ್ಪ ನವರೇ ಸಿಎಂ ಆಗಿರುತ್ತಾರೆ. ನಾನೇ ಮುಂದಿನ ಸಿಎಂ ಎಂದು ಯತ್ನಾಳ್ ಎಲ್ಲಾ ಶಾಸಕರಿಗೆ ಫೋನ್ ಮಾಡಿ ಬೆಂಬಲ ಕೋರುತ್ತಿದ್ದಾರೆಂಬ ರೇಣುಕಾಚಾರ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನಗೆ ಯಾರಿಂದಲೂ ಯಾವುದೇ ಫೋನ್ ಬಂದಿಲ್ಲ ಎಂದು ತಿಳಿಸಿದ್ದಾರೆ.  ಇದನ್ನೂ ಓದಿ: ಈಶ್ವರಪ್ಪನವರಿಗೆ ಈಗ ಅರಿವಾಗುತ್ತಿರುವುದು ಆಶ್ಚರ್ಯ: ಆರ್.ವಿ.ದೇಶಪಾಂಡೆ

  • ಎರಡ್ಮೂರು ತಿಂಗಳಲ್ಲಿ ಸಿಎಂ ಸ್ಥಾನದಿಂದ ಬಿಎಸ್‍ವೈ ಔಟ್: ಶಾಸಕ ದರ್ಶನಾಪುರ ಭವಿಷ್ಯ

    ಎರಡ್ಮೂರು ತಿಂಗಳಲ್ಲಿ ಸಿಎಂ ಸ್ಥಾನದಿಂದ ಬಿಎಸ್‍ವೈ ಔಟ್: ಶಾಸಕ ದರ್ಶನಾಪುರ ಭವಿಷ್ಯ

    – ಸಿಎಂ ಟೆಂಪಲ್ ರನ್‍ಗೆ ವ್ಯಂಗ್ಯ

    ಯಾದಗಿರಿ: ಇನ್ನೂ ಎರಡು ಅಥವಾ ಮೂರು ತಿಂಗಳಲ್ಲಿ ಸಿಎಂ ಸ್ಥಾನದಿಂದ ಬಿಎಸ್ ಯಡಿಯೂರಪ್ಪನವರನ್ನು ತೆಗೆಯುತ್ತಾರೆ ಎಂದು ಶಹಪುರ ಕಾಂಗ್ರೆಸ್ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಭವಿಷ್ಯ ನುಡಿದಿದ್ದಾರೆ.

    ಶಹಪುರದ ಚಾಮನಾಳದಲ್ಲಿ ಮಾಧ್ಯಮದವರೊಂದಿಗೆ ಮಾತಾನಾಡಿದ ಶಾಸಕ, ಸಿಎಂ ಬಿಎಸ್‍ವೈ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ಸಿಎಂ ಬಿಎಸ್‍ವೈ ಪುತ್ರ ವಿಜಯೇಂದ್ರ ಮೇಲೆ ಓಪನ್ ಆಗಿ ಆರೋಪಗಳಿವೆ. ಎಲ್ಲಾ ಸಚಿವರು ಹಾಗೂ ಶಾಸಕರು ಈಗಾಗಲೇ ಬಿಜೆಪಿ ಹೈಕಮಾಂಡ್‍ಗೆ ಸಿಎಂ ಪುತ್ರನ ಬಗ್ಗೆ ದೂರು ನೀಡಿದ್ದಾರೆ. ಸಿಎಂ ಪುತ್ರನ ಮೇಲೆ ಹಲವಾರು ಆರೋಪಗಳಿರುವುದರಿಂದಾಗಿ ಬಿಎಸ್ ವೈ ಅವರನ್ನು ಬಿಜೆಪಿ ಹೈಕಮಾಂಡ್ ಮುಂದುವರಿಸಲು ಸಾಧ್ಯವಿಲ್ಲ. ರಾಜ್ಯಕ್ಕೆ ಬಂದ ಅಮಿತ್ ಶಾ ರಾಜ್ಯದಲ್ಲಿ ಐದು ವರ್ಷ ಬಿಜೆಪಿ ಸರ್ಕಾರ ಇರುತ್ತೆ ಅಂತ ಹೇಳಿದ್ದಾರೆ ಹೊರತು, ಐದು ವರ್ಷ ಯಡಿಯೂರಪ್ಪ ಸಿಎಂ ಆಗಿರುತ್ತಾರೆ ಅಂತ ಹೇಳಿಲ್ಲ ಎಂದರು.

    ದೇವರು ಮೋರೆ ಹೋಗುವ ಬದಲು ಜನರ ಮೊರೆ ಹೋಗಬೇಕು, ಜನರ ಮನಸ್ಸಿನಲ್ಲಿ ನೀವು ಇದ್ದರೆ ಸರ್ಕಾರ ಮಾಡಬಹುದು ಎಂದು ಸಿಎಂ ಬಿಎಸ್‍ವೈ ಟೆಂಪಲ್ ರನ್ ಗೆ ಟಾಂಗ್ ನೀಡಿದರು. ಈಗಾಗಲೇ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ್ ಹಾಗೂ ರೇಣುಕಾಚಾರ್ಯ ಅವರು ಸಿಡಿ ವಿಚಾರದ ಬಗ್ಗೆ ಹೇಳಿಕೆ ನೀಡಿದ್ದಾರೆ. ಸಿಡಿ ವಿಚಾರವಾಗಿ ಸಿಎಂ ಬಿಎಸ್‍ವೈಗೆ ಹೆದರಿಸಿ ಹಣ ಕೊಟ್ಟು ಕೆಲವರು ಸಚಿವರಾಗಿದ್ದಾರೆ. ಶಾಸಕ ಯತ್ನಾಳ್ ಅವರು ಸಿಎಂ ಬಿಎಸ್ ವೈ ಅವರ ಸಿಡಿ ನೋಡಿರಬಹುದು ಅಂತ ವ್ಯಂಗ್ಯವಾಡಿದರು.