Tag: Yathiraja

  • Jaggesh@60- ಮೋದಿ ಭೇಟಿ ಮಾಡಿದ್ದು ನನ್ನ ಬದುಕಿನ ಶ್ರೇಷ್ಠ ದಿನ ಎಂದ ನಟ ಜಗ್ಗೇಶ್

    Jaggesh@60- ಮೋದಿ ಭೇಟಿ ಮಾಡಿದ್ದು ನನ್ನ ಬದುಕಿನ ಶ್ರೇಷ್ಠ ದಿನ ಎಂದ ನಟ ಜಗ್ಗೇಶ್

    ಮಾರ್ಚ್ 17ಕ್ಕೆ ನಟ ಜಗ್ಗೇಶ್ (Jaggesh) ಹುಟ್ಟು ಹಬ್ಬ (Birthday). ಈ ಬಾರಿಯ ಹುಟ್ಟು ಹಬ್ಬದ ವಿಶೇಷವೆಂದರೆ, ಜಗ್ಗೇಶ್ ಅವರಿಗೆ 60 ತುಂಬಲಿದೆ. ಪ್ರತಿ ಬಾರಿಯೂ ಅವರು ತಮ್ಮ ಹುಟ್ಟು ಹಬ್ಬವನ್ನು ಮಂತ್ರಾಲಯದ ಗುರು ರಾಯರ ಸನ್ನಿಧಿಯಲ್ಲಿ ಆಚರಿಸುತ್ತಾರೆ. ಹಾಗಾಗಿ ಹುಟ್ಟು ಹಬ್ಬದ ಮೂರುದಿನದ ಮುಂಚೆಯೇ ಅವರು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಭೇಟಿ ಮಾಡಿದ್ದಾರೆ.

    ದೆಹಲಿಯ ಪಿಎಂ ನಿವಾಸದಲ್ಲಿ ಪ್ರಧಾನಿ ಮೋದಿಯನ್ನು ಭೇಟಿ ಮಾಡಿರುವ ಜಗ್ಗೇಶ್, ಆ ಭೇಟಿಗೆ ವಿಶೇಷ ಅರ್ಥವೊಂದನ್ನೂ ನೀಡಿದ್ದಾರೆ. ‘ನನ್ನ ಬದುಕಿನ ಶ್ರೇಷ್ಠದಿನ ಇಂದು. ಮಾರ್ಚ್ 17 ನನ್ನ ಹುಟ್ಟುದಿನ. ಈ ವರ್ಷ ನನಗೆ 60ನೇ ವಸಂತ. ನನ್ನ ನೆಚ್ಚಿನ ಪ್ರಧಾನಿಗಳು ನನ್ನ ಹಾಗೂ ಹೆಂಡತಿ ಮಗನ ಮನತುಂಬಿ ಹರಸಿದರು. ನನ್ನ ಗುರುಗಳು ರಾಯರ ವಿಗ್ರಹ ಸಮರ್ಪಿಸಿದೆ’ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಪುನೀತ್ ಜನ್ಮ ದಿನದಂದು ಓಟಿಟಿಯಲ್ಲಿ ‘ಗಂಧದ ಗುಡಿ’

    ಕಿರಿಯ ಪುತ್ರ ಯತಿರಾಜ್ (Yathiraja), ಪತ್ನಿ ಪರಿಮಳಾ (Parimala) ಜೊತೆ ಪ್ರಧಾನಿಯನ್ನು ಭೇಟಿ ಮಾಡಿ, ಮಂತ್ರಾಲಯದಿಂದ ತೆಗೆದುಕೊಂಡು ಹೋಗಿದ್ದ ರಾಯರ ವಿಗ್ರಹ ಮತ್ತು ವಿಶೇಷ ಶಾಲನ್ನು ಮೋದಿಗೆ ಅರ್ಪಿಸಿದ್ದಾರೆ ಜಗ್ಗೇಶ್. ಮೋದಿ ಕೂಡ ಜಗ್ಗೇಶ್ ಪುತ್ರನ ಹಾಗೂ ಪತ್ನಿಯ ಜೊತೆ ಸಲುಗೆಯಿಂದಲೇ ಮಾತನಾಡಿದ್ದಾರೆ. ಆ ಫೋಟೋಗಳನ್ನು ಕೂಡ ಸೋಷಿಯಲ್ ಮೀಡಿಯಾದಲ್ಲಿ ಜಗ್ಗೇಶ್ ಹಂಚಿಕೊಂಡಿದ್ದಾರೆ.

    ಜಗ್ಗೇಶ್ ಅವರು 60 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿಯ ಹುಟ್ಟು ಹಬ್ಬ ಹೇಗಿರಲಿದೆ ಎನ್ನುವ ಕುತೂಹಲ ಕೂಡ ಅಭಿಮಾನಿಗಳಲ್ಲಿದೆ. ಪ್ರತಿ ಬಾರಿಯಂತೆ ಅಂದು ಜಗ್ಗೇಶ್ ಮಂತ್ರಾಲಯದಲ್ಲಿ ಇರುತ್ತಾರಾ? ಅಥವಾ ಅಭಿಮಾನಿಗಳ ಜೊತೆ ಹುಟ್ಟು ಹಬ್ಬ ಆಚರಿಸುತ್ತಾರಾ ಕಾದು ನೋಡಬೇಕು.

  • ಕಿಂಗ್ ಮತ್ತು ಕ್ವೀನ್ ಆಗಿ ಶ್ರೇಯಸ್ ಚಿಂಗ ಹಾಗೂ ಇತಿ ಆಚಾರ್ಯ

    ಕಿಂಗ್ ಮತ್ತು ಕ್ವೀನ್ ಆಗಿ ಶ್ರೇಯಸ್ ಚಿಂಗ ಹಾಗೂ ಇತಿ ಆಚಾರ್ಯ

    ಕುತೂಹಲ ಮೂಡಿಸಿದೆ ರಿವೇಂಜ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಪೋಸ್ಟರ್ . ಕನ್ನಡ ಚಿತ್ರರಂಗಕ್ಕೀಗ ಸುವರ್ಣ ಯುಗ ಎಂದರೆ ತಪ್ಪಾಗಲಾರದು. ಕಂಟೆಂಟ್ ಓರಿಯಂಟೆಡ್ ಸಿನಿಮಾಗಳನ್ನು ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಿದ್ದಾರೆ. ಈ ಹಿಂದೆ ಡೇವಿಡ್ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿರುವ ಶ್ರೇಯಸ್ ಚಿಂಗ ನಾಯಕನಾಗಿ ಹಾಗೂ ಇತಿ ಆಚಾರ್ಯ ನಾಯಕಿಯಾಗಿ ಅಭಿನಯಿಸುತ್ತಿರುವ “ಕಿಂಗ್ & ಕ್ವೀನ್” ಚಿತ್ರದ ಪೋಸ್ಟರ್ ಅನಾವರಣವಾಗಿದೆ‌‌.

    ನವರಸ ನಾಯಕ ಜಗ್ಗೇಶ್ ಪುತ್ರ ಯತಿರಾಜ್ ಸಹ ವಿಶೇಷಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕನ್ನಡ ಚಿತ್ರರಂಗದ ಹಿರಿಯ ಪಿ.ಆರ್.ಓ ಸುಧೀಂದ್ರ ವೆಂಕಟೇಶ್ ಹೊಸವರ್ಷದ ಆರಂಭದ ದಿನ ಈ ಹೊಸ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಇದನ್ನೂ ಓದಿ:ನಾನಿಲ್ಲಿ ಗೆದ್ದಿರುವಂಥದ್ದು ನಿಮ್ಮಿಂದ, ನೀವು ನನ್ನನ್ನು ಗೆಲ್ಲಿಸಿದ್ದೀರಿ: ರೂಪೇಶ್ ಶೆಟ್ಟಿ

    ನಿರ್ದೇಶನ ವಿಭಾಗದಲ್ಲಿ ಕಾರ್ಯ ನಿರ್ವಹಿಸಿರುವ ಅರ್ಜುನ್ ಸುಬ್ರಹ್ಮಣ್ಯ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ನಿರ್ದೇಶಕರೆ ಬರೆದಿದ್ದಾರೆ. ಶ್ರೇಯಸ್ ಚಿಂಗ ಅಭಿನಯದ “ಡೇವಿಡ್” ಚಿತ್ರವನ್ನು ನಿರ್ಮಿಸಿರುವ ಪ್ರಸಾದ್ ರುದ್ರಮುನಿ ನಿರಗಂಟಿ, ಪ್ರದೀಪ್ ಅಬ್ಬಯ್ಯ ಹಾಗೂ ವರುಣ್ ರಾಘವೇಂದ್ರ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

    ಚಿತ್ರದಲ್ಲಿ ನಾಲ್ಕು ಸುಮಧುರ ಹಾಡುಗಳಿದೆ. ಅದ್ಭುತ ಗಾಯನದ ಮೂಲಕ ಜನಮನಸೂರೆಗೊಂಡಿರುವ ALL OK ಸಂಗೀತ ನೀಡಲಿದ್ದಾರೆ. ಚಿತ್ರದಲ್ಲಿ ಮೈನವಿರೇಳಿಸುವ ಆರು ಸಾಹಸ ಸನ್ನಿವೇಶಗಳಿದೆ‌. ಚೇತನ್ ಡಿಸೋಜ, ಚಾಮರಾಜ್, ರವಿ ಜಮಖಂಡಿ, ರೋಹಿತ್ ಅರುಣ್ ಸಾಹಸ ಸಂಯೋಜಿಸಲಿದ್ದಾರೆ. ಶ್ರೇಯಸ್ ಚಿಂಗ, ಇತಿ ಆಚಾರ್ಯ,  ಶೋಭ್ ರಾಜ್, ಯತಿರಾಜ್ ಜಗ್ಗೇಶ್, ಲಲಿತ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಫೆಬ್ರವರಿ ಮೊದಲವಾರದಿಂದ ಬೆಂಗಳೂರಿನಲ್ಲಿ ಚಿತ್ರೀಕರಣ ಆರಂಭವಾಗಲಿದೆ.

    Live Tv
    [brid partner=56869869 player=32851 video=960834 autoplay=true]