Tag: Yathindra siddaramaiah

  • ಕೇಂದ್ರ ಚುನಾವಣಾ ಆಯುಕ್ತ ರಾಜಕೀಯ ಪುಢಾರಿ: ಯತೀಂದ್ರ ಸಿದ್ದರಾಮಯ್ಯ

    ಕೇಂದ್ರ ಚುನಾವಣಾ ಆಯುಕ್ತ ರಾಜಕೀಯ ಪುಢಾರಿ: ಯತೀಂದ್ರ ಸಿದ್ದರಾಮಯ್ಯ

    ಮೈಸೂರು: ಉತ್ತರಾಧಿಕಾರಿ ಹೇಳಿಕೆ ನೀಡಿ ಸಂಕಷ್ಟಕ್ಕೆ ಸಿಲುಕಿದ್ದ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಈಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ..

    ವೋಟ್ ಚೋರಿ (Vote Choroi) ಸಹಿ ಸಂಗ್ರಹ ಸಭೆಯಲ್ಲಿ ಮತಗಳ್ಳತನ ವಿರುದ್ಧ ಮಾತನಾಡುವಾಗ ಕೇಂದ್ರ ಚುನಾವಣಾ ಆಯುಕ್ತರನ್ನು (Chief Election Commissioner of India) ರಾಜಕೀಯ ಪುಢಾರಿ ಎಂದು ಹೊಸ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.  ಇದನ್ನೂ ಓದಿ:  ಧಾರವಾಡ ಹೈಕೋರ್ಟ್ ಆದೇಶಕ್ಕೆ ಮೇಲ್ಮನವಿ ಸಲ್ಲಿಸುತ್ತೇವೆ: ಸಿದ್ದರಾಮಯ್ಯ

     

    ವರುಣಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ನಡೆದ ವೋಟ್ ಚೋರಿ ಸಹಿ ಸಂಗ್ರಹ ಸಭೆಯಲ್ಲಿ ಈ ವಿವಾದಾತ್ಮಕ ಭಾಷಣ ಮಾಡಿದ್ದಾರೆ. ಕೇಂದ್ರ ಚುನಾವಣಾ ಆಯುಕ್ತ ಒಬ್ಬ ರಾಜಕೀಯ ಪುಢಾರಿ. ಕೇಂದ್ರ ಚುನಾವಣಾ ಆಯುಕ್ತ ರಾಜಕೀಯ ಪುಢಾರಿ ರೀತಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.  ಇದನ್ನೂ ಓದಿ: ಬಿಹಾರ, ಪಶ್ಚಿಮ ಬಂಗಾಳ ಮತದಾರರ ಪಟ್ಟಿಯಲ್ಲಿ ಹೆಸರು – ಚುನಾವಣಾ ಆಯೋಗದಿಂದ ಪ್ರಶಾಂತ್ ಕಿಶೋರ್‌ಗೆ ನೋಟಿಸ್

    ಮತಗಳ್ಳತನದ ಬಗ್ಗೆ ರಾಹುಲ್ ಗಾಂಧಿ (Rahul Gandhi) ಸಾಕ್ಷಿ ಸಮೇತ ದೂರು ಕೊಟ್ಟಿದ್ದಾರೆ. ಆದರೆ ದೂರು ಕೊಟ್ಟವರ ಮೇಲೆಯೇ ಚುನಾವಣಾ ಆಯುಕ್ತರು ಮಾತನಾಡುತ್ತಿದ್ದಾರೆ. ಆರೋಪ ಮಾಡಿರುವವರ ಮೇಲೆಯೇ ದಾಳಿ ಮಾಡಿ ತೇಜೋವಧೆ ಮಾಡುತ್ತಿದ್ದಾರೆ ಎಂದು ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಬಗ್ಗೆ ಟೀಕಿಸಿದ್ದಾರೆ.

  • ಯತೀಂದ್ರ ಅಹಿಂದ ನಾಯಕತ್ವಕ್ಕೆ ಹೇಳಿದ್ದು, ಸಿಎಂ ಸ್ಥಾನಕ್ಕೆ ಅಲ್ಲ: ಸತೀಶ್ ಜಾರಕಿಹೊಳಿ

    ಯತೀಂದ್ರ ಅಹಿಂದ ನಾಯಕತ್ವಕ್ಕೆ ಹೇಳಿದ್ದು, ಸಿಎಂ ಸ್ಥಾನಕ್ಕೆ ಅಲ್ಲ: ಸತೀಶ್ ಜಾರಕಿಹೊಳಿ

    – ದಲಿತ ಸಿಎಂ ವಿಚಾರ; ಅವಕಾಶ ಬರುವವರೆಗೆ ಕಾಯಬೇಕು, ಈಗ ಅವಕಾಶ ಇಲ್ಲ

    ಬೆಂಗಳೂರು: ಸಿಎಂ ಸ್ಥಾನದ ವಿಚಾರವೇ ಬೇರೆ, ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಹೇಳಿರೋದೇ ಬೇರೆ. ಸಿಎಂ ಸ್ಥಾನವಾಗಲೀ, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆಯಾಗಲಿ ಹೇಳಿಲ್ಲ ಎಂದು ಯತೀಂದ್ರ ಹೇಳಿಕೆಯನ್ನ ಸಚಿವ ಸತೀಶ್ ಜಾರಕಿಹೊಳಿ (Satish Jarkiholi)  ಮತ್ತೆ ಸಮರ್ಥಿಸಿಕೊಂಡಿದ್ದಾರೆ.

    ಈ ವಿಚಾರವಾಗಿ ಬೆಂಗಳೂರಲ್ಲಿ (Bengaluru) ಮಾತನಾಡಿದ ಅವರು, ನಾನು 30 ವರ್ಷದಿಂದ ಅಹಿಂದ ಭಾಗ. ಜೆಡಿಎಸ್‌ನಲ್ಲಿ ಇದ್ದಾಗಲೂ ಅಹಿಂದ ಭಾಗವೇ, ಈಗಲೂ ಅಹಿಂದ ಭಾಗವೇ. ಪರಮೇಶ್ವರ್, ಮಹದೇವಪ್ಪ ಎಲ್ಲರೂ ಅಹಿಂದ ಭಾಗವೇ. ಯತೀಂದ್ರ ಎಲ್ಲಿಯೂ ಸಿಎಂ ಸ್ಥಾನವಾಗಲೀ. ಅಧ್ಯಕ್ಷ ಸ್ಥಾನದ ಬಗ್ಗೆಯಾಗಲಿ ಕೇಳಿಲ್ಲ ಎಂದಿದ್ದಾರೆ.

     ಸಿಎಂ ಸ್ಥಾನದ ವಿಚಾರವೇ ಬೇರೆ, ಯತೀಂದ್ರ ಹೇಳಿರೋದೇ ಬೇರೆ. ನಾವೇನೂ ಸಿಎಂ ಸ್ಥಾನ ಕೇಳಿಲ್ಲ. ಯಾರು ಯತೀಂದ್ರ ಹೇಳಿಕೆ ವಿರೋಧಿಸುತ್ತಿದ್ದಾರೋ, ಅವರು ತಪ್ಪು ತಿಳಿದುಕೊಂಡಿದ್ದಾರೆ. ಅಹಿಂದ ಒಕ್ಕೂಟ, ಅಹಿಂದ ಹೋರಾಟ ಮೊದಲಿನಿಂದಲೂ ಇದೆ ಎಂದಿದ್ದಾರೆ. ಇದನ್ನೂ ಓದಿ: ಸಮಾಜದಲ್ಲಿ ದ್ವೇಷಪೂರಿತ ಭಾಷಣ ಮಾಡುವವರ ವಿರುದ್ಧ ಎಫ್‌ಐಆರ್: ಸಿದ್ದರಾಮಯ್ಯ

    ಅಹಿಂದ ನಾಯಕತ್ವಕ್ಕೂ, ಸಿಎಂ ಗಾದಿಗೂ ಯಾವುದೇ ಸಂಬಂಧ ಇಲ್ಲ. ಯತೀಂದ್ರ ಅವರು ಅಹಿಂದ ನಾಯಕತ್ವ ಮುನ್ನಡೆಸುತ್ತಾರೆ ಎಂಬ ಅರ್ಥದಲ್ಲಿ ಹೇಳಿದ್ದಾರೆ. ನೋಡೋಣ ಸನ್ನಿವೇಶ, ಸಂದರ್ಭ ನೋಡಿ ನಿರ್ಧಾರ ಮಾಡುತ್ತೇನೆ. ಸಿಎಂ ಗಾದಿಗೆ ನಾನೇನು ಈಗ ಕೇಳಿಲ್ಲ. ಮುಂದೆ ನೋಡೋಣ ಎಂದು ಹೇಳಿದ್ದಾರೆ.

    ಅವಕಾಶಕ್ಕಾಗಿ ಕಾಯಬೇಕು
    ದಲಿತ ಸಿಎಂ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಅವಕಾಶ ಬರುವವರೆಗೂ ಕಾಯಬೇಕು. ಈಗಂತೂ ಅವಕಾಶ ಇಲ್ಲ. ಸಮಯಕ್ಕಾಗಿ ಕಾಯಬೇಕು. ಅವಕಾಶ ಸೃಷ್ಟಿ ಆಗಬೇಕು ಅಲ್ಲಿ ತನಕ ಕಾಯಬೇಕು ಎಂದಿದ್ದಾರೆ. ಇದನ್ನೂ ಓದಿ: ಡಿಕೆಶಿ, JDS ಟ್ರಂಕ್ ವಾರ್ – ಹೆಚ್‌ಡಿಕೆ ಸಾಧನೆ ಪಟ್ಟಿ ಬಿಡುಗಡೆ ಮಾಡಿ ಟಾಂಗ್

    ನವೆಂಬರ್ ಕ್ರಾಂತಿ ಎಲ್ಲ ಆಗಲ್ಲ. ಇನ್ನೊಂದು 20 ರಿಂದ 30 ದಿನ ಇದೆ ಅಷ್ಟೇ. ಏನಾಗುತ್ತೆ ನೋಡೋಣ. ಕ್ರಾಂತಿ ಆಗೋದಕ್ಕೆ ಹೈಕಮಾಂಡ್ ಬಿಡಬೇಕಲ್ವ? ಹೈಕಮಾಂಡ್ ಹಾಗೆಲ್ಲ ಮಾಡೋಕೆ ಬಿಡಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಏಕನಾಥ್ ಶಿಂಧೆ ಒಬ್ಬರೇ, ಅಜಿತ್ ಪವಾರ್ ಕೂಡ ಒಬ್ಬರೇ, ಇನ್ನೊಬ್ಬ ಏಕನಾಥ್ ಶಿಂಧೆ, ಪವಾರ್ ಹುಟ್ಟಿಕೊಳ್ಳಲು ಸಾಧ್ಯವಿಲ್ಲ ಎಂದು ಡಿಕೆಶಿ ಬಣಕ್ಕೆ ಮಾರ್ಮಿಕವಾಗಿ ಟಕ್ಕರ್ ಕೊಟ್ಟಿದ್ದಾರೆ.

    2028ರ ಚುನಾವಣೆ ಆಗಬೇಕು. ಅವತ್ತು ಸ್ಥಿತಿಗತಿ ನೋಡಿಕೊಂಡು ನಿರ್ಧಾರ ಮಾಡೋಣ. ಪಕ್ಷದ ಹೈಕಮಾಂಡ್ ಯಾರನ್ನು ಏನು ಮಾಡಬೇಕು ನಿರ್ಧಾರ ಮಾಡ್ತಾರೆ. ಪಕ್ಷಕ್ಕೂ 70 ವರ್ಷದ ಅನುಭವ ಇದೆ. ಅವರು ಎಲ್ಲವನ್ನೂ ನಿರ್ಧಾರ ಮಾಡ್ತಾರೆ. ಡಿಕೆಶಿ ಡೆಡ್‌ಲೈನ್ ಬಗ್ಗೆ ನನಗೆ ಮಾಹಿತಿ ಇಲ್ಲ. ಪಾರ್ಟಿ ಕಚೇರಿಗಳನ್ನ ಎಲ್ಲಾ ಕಡೆ ಮಾಡಬೇಕು ಅಂತ ಅವರ ಕನಸಿದೆ ಎಂದಿದ್ದಾರೆ.

  • ನವೆಂಬರ್ ಕ್ರಾಂತಿ ಅನ್ನೋದೆಲ್ಲ ಊಹಾಪೋಹ, ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿರ್ತಾರೆ – ಯತೀಂದ್ರ

    ನವೆಂಬರ್ ಕ್ರಾಂತಿ ಅನ್ನೋದೆಲ್ಲ ಊಹಾಪೋಹ, ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿರ್ತಾರೆ – ಯತೀಂದ್ರ

    – ಅನಗತ್ಯವಾಗಿ ಮತ್ತೆ ಮಾತಾಡಿ ವಿವಾದ ಸೃಷ್ಟಿಸಲ್ಲ 

    ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ (Congress) ನಾಯಕತ್ವ ಕದನ ತಾರಕಕ್ಕೇರಿದೆ. ಈ ನಡುವೆ ಅನಗತ್ಯವಾಗಿ ಮತ್ತೆ ಮಾತಾಡಿ ವಿವಾದ ಸೃಷ್ಟಿಸಲ್ಲ ಎಂದು ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಹೇಳಿಕೊಂಡಿದ್ದಾರೆ.

    ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಅವರು, ಸಿದ್ದರಾಮಯ್ಯ ಉತ್ತರಾಧಿಕಾರಿ ಸತೀಶ್ ಜಾರಕಿಹೊಳಿ ಎಂಬರ್ಥದ ಹೇಳಿಕೆಗೆ ಮೇಲ್ಮನೆ ಸದಸ್ಯ ಹಾಗೂ ಸಿಎಂ ಪುತ್ರ ಯತೀಂದ್ರ ಮತ್ತೆ ಸಮರ್ಥನೆ ಮಾಡಿಕೊಂಡಿದ್ದಾರೆ.ಇದನ್ನೂ ಓದಿ: ಚಾಮುಂಡಿ ತಾಯಿಯ ಕ್ಷಮೆ ಕೇಳು: ಪ್ರತಾಪ್‌ ಸಿಂಹಗೆ ಪ್ರದೀಪ್‌ ಈಶ್ವರ್‌ ಆಗ್ರಹ

    ಪಕ್ಷದ ಶಿಸ್ತುಕ್ರಮದ ನೋಟಿಸ್ ಬೆದರಿಕೆಗೂ ಬಗ್ಗದೇ ನಾನು ಹೇಳಿದ್ರಲ್ಲಿ ತಪ್ಪೇನಿದೆ ಅಂತ ಪುನರುಚ್ಛರಿಸಿದ್ದಾರೆ. ನನ್ನ ಹೇಳಿಕೆ ವಿವಾದ ಸ್ವರೂಪ ಪಡೆದಾಗಲೇ ಸ್ಪಷ್ಟೀಕರಣ ಕೊಟ್ಟಿದ್ದೇನೆ. ಅನಗತ್ಯವಾಗಿ ಮತ್ತೆ ಮಾತಾಡಿ ವಿವಾದ ಸೃಷ್ಟಿಸಲ್ಲ ಅಂದಿದ್ದಾರೆ.

    ಪಕ್ಷ ನೋಟಿಸ್ ಕೊಟ್ಟರೆ ನೋಡಿಕೊಳ್ಳೋಣ ಬಿಡಿ, ಅಲ್ಲದೇ ಸಿದ್ದರಾಮಯ್ಯನವರೇ ಐದು ವರ್ಷ ಸಿಎಂ ಆಗಿ ಅಧಿಕಾರ ಪೂರೈಸ್ತಾರೆ. ನವೆಂಬರ್ ಕ್ರಾಂತಿ ಅನ್ನೋದೆಲ್ಲಾ ಊಹಾಪೋಹ ಅಂತ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.ಇದನ್ನೂ ಓದಿ: ರೇಣುಕಾಸ್ವಾಮಿ ಕೇಸ್‌ನ ಆರೋಪಿ ಪ್ರದೋಷ್ ತಂದೆ ನಿಧನ – 20 ದಿನ ಮಧ್ಯಂತರ ಜಾಮೀನು ನೀಡಿದ ಕೋರ್ಟ್

  • ಉತ್ತರಾಧಿಕಾರ ಪ್ರಶ್ನೆ ಎತ್ತಿದ ಯತೀಂದ್ರಗೆ ಫಜೀತಿ – ಹೈಕಮಾಂಡ್‌ಗೆ ಕೆಪಿಸಿಸಿ ವರದಿ ರವಾನೆ

    ಉತ್ತರಾಧಿಕಾರ ಪ್ರಶ್ನೆ ಎತ್ತಿದ ಯತೀಂದ್ರಗೆ ಫಜೀತಿ – ಹೈಕಮಾಂಡ್‌ಗೆ ಕೆಪಿಸಿಸಿ ವರದಿ ರವಾನೆ

    – ಮಗನ ಹೇಳಿಕೆ ಸಮರ್ಥಿಸಿಕೊಂಡ ಸಿಎಂ ಸಿದ್ದರಾಮಯ್ಯ

    ಬೆಂಗಳೂರು: ಅಧಿಕಾರ ಹಂಚಿಕೆ, ಸಂಪುಟ ಸರ್ಜರಿ ಕುದಿಯಲ್ಲಿ ಬೇಯುತ್ತಿರುವ ರಾಜ್ಯ ಕಾಂಗ್ರೆಸ್‌ನಲ್ಲಿ ಉತ್ತರಾಧಿಕಾರಿ ಸಮರ ತಾರಕಕ್ಕೇರಿದೆ. ಸಿದ್ದರಾಮಯ್ಯಗೆ (Siddaramaiah) ಸತೀಶ್ ಜಾರಕಿಹೊಳಿ ಸಮರ್ಥ ಉತ್ತರಾಧಿಕಾರಿ ಎಂಬ ಸಂದೇಶ ರವಾನಿಸಿ ಯತೀಂದ್ರ ಇಕ್ಕಟ್ಟಿಗೆ ಸಿಲುಕಿದ್ದಾರೆ. ಯತೀಂದ್ರ ಹೇಳಿಕೆ ರಾಜಕೀಯ ಸಂಚಲನ ಸೃಷ್ಟಿಸುತ್ತಿದ್ದಂತೆಯೇ ಹೈಕಮಾಂಡ್‌ಗೆ ಕೆಪಿಸಿಸಿ ರಿಪೋರ್ಟ್ ಸಲ್ಲಿಸಿದೆ.

    ಈಗ ಯತೀಂದ್ರ (Yathindra Siddaramaiah) ಮೇಲೆ ಹೈಕಮಾಂಡ್ ಶಿಸ್ತುಕ್ರಮದ ತೂಗುಗತ್ತಿ ಇದೆ. ಯತೀಂದ್ರ ಮಾತಿಗೆ ಕಡಿವಾಣಕ್ಕೆ ಪಕ್ಷದ ಕೆಲ ಶಾಸಕರು ಆಗ್ರಹಿಸಿದ್ದಾರೆ. ಡಿಸಿಎಂ ಡಿಕೆಶಿ ಕೂಡ, ‘ಯಾರ ಹತ್ತಿರ.. ಏನು ಮಾತನಾಡಬೇಕೋ.. ಅಲ್ಲಿ ಮಾತನಾಡುತ್ತೇನೆ. ನಾನು ಶಿಸ್ತಿನ ಜೊತೆ ನಿಲ್ಲುತ್ತೇನೆ’ ಅಂತ ಪರೋಕ್ಷ ಸಂದೇಶ ರವಾನಿಸಿದ್ದಾರೆ. ಇದನ್ನೂ ಓದಿ: ಆಂತರಿಕ ಸಂಘರ್ಷ, ಅಧಿಕಾರ ಹಸ್ತಾಂತರ ಚರ್ಚೆ ಮಧ್ಯೆ ರಾಜ್ಯಕ್ಕೆ ಬರಲಿದ್ದಾರೆ ರಾಹುಲ್‌ ಗಾಂಧಿ

    ಈ ಬೆನ್ನಲ್ಲೇ ಸಿಎಂ ಪ್ರತಿಕ್ರಿಯಿಸಿದ್ದು, ಮಗನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಸೈದ್ಧಾಂತಿಕವಾಗಿ ಮಾತ್ರ ಮಾತನಾಡಿದ್ದೇನೆ ಅಂತ ಹೇಳಿದ್ದಾನೆ. ಇದನ್ನು ತಿರುಚಿ ಬರೆಯಲಾಗಿದೆ ಅಂತ ವಿವಾದಕ್ಕೆ ಇತಿಶ್ರೀ ಹಾಡಿದ್ದಾರೆ.

    ಯತೀಂದ್ರ ಹೇಳಿಕೆಗೆ ಸಚಿವ ಮಹದೇವಪ್ಪ, ಮಾಜಿ ಸಚಿವ ರಾಜಣ್ಣ ಸಹಮತ ವ್ಯಕ್ತಪಡಿಸಿದ್ದಾರೆ. ಆದರೆ, ಯಾರೋ ತೆವಲಿಗೆ, ತೀಟೆಗೆ ಮಾತನಾಡಿದ್ದನ್ನ ಗಣನೆಗೆ ತೆಗೆದುಳ್ಳೊಕ್ಕಾಗಲ್ಲ ಅಂತ ಮದ್ದೂರು ಶಾಸಕ ಉದಯ್ ಮಾತನಾಡಿದ್ದಾರೆ. ಇದನ್ನೂ ಓದಿ: ಒಂದು ಮತ ಕಳವಿಗೆ 80 ರೂ. ʻಕೂಲಿʼ – ಬಿಜೆಪಿ ಮೇಲೆ ಆರೋಪ ಹೊರಿಸಿದ ಈಶ್ವರ್‌ ಖಂಡ್ರೆ

  • ಕಾಂಗ್ರೆಸ್‌ನಲ್ಲಿ ಜೋರಾದ ಉತ್ತರಾಧಿಕಾರಿ ಕದನ – ಯತೀಂದ್ರ ವಿರುದ್ಧ ಶಿಸ್ತುಕ್ರಮವೋ? ಸಿಎಂ ಪುತ್ರ ಅಂತ ಎಚ್ಚರಿಕೆಯೋ?

    ಕಾಂಗ್ರೆಸ್‌ನಲ್ಲಿ ಜೋರಾದ ಉತ್ತರಾಧಿಕಾರಿ ಕದನ – ಯತೀಂದ್ರ ವಿರುದ್ಧ ಶಿಸ್ತುಕ್ರಮವೋ? ಸಿಎಂ ಪುತ್ರ ಅಂತ ಎಚ್ಚರಿಕೆಯೋ?

    ಬೆಂಗಳೂರು: ಕಾಂಗ್ರೆಸ್‌ನಲ್ಲಿ ಉತ್ತರಾಧಿಕಾರತ್ವ ಸಮರ ತಾರಕಕ್ಕೇರಿದೆ. ಮಾತನಾಡಲ್ಲ ಎನ್ನುತ್ತಲೇ ಯತೀಂದ್ರಗೆ (Yathindra Siddaramaiah) ಶಿಸ್ತಿನ ಪಾಠ ಮಾಡಿದ್ದಾರೆ ಡಿಕೆಶಿ. ಈಗಲೂ ನಾನು ಶಿಸ್ತಿನ ಜೊತೆ ನಿಲ್ಲುತ್ತೇನೆ ಎನ್ನುವ ಮೂಲಕ ಚದುರಂಗದಾಟ ಶುರು ಆಗಿದೆ. ಹಾಗಾದ್ರೆ ಯತೀಂದ್ರ ವಿರುದ್ಧ ಶಿಸ್ತುಕ್ರಮವೋ..? ಎಚ್ಚರಿಕೆಯ ಆಟವೋ.? ಇನ್ನಷ್ಟೇ ಕಾದುನೋಡಬೇಕಿದೆ.

    ಕಾಂಗ್ರೆಸ್ ಕುಲುಮೆಯಲ್ಲೀಗ ಕಾದ ಕಬ್ಬಿಣ್ಣಕ್ಕೆ ಸಿಕ್ಕ ಸಿಕ್ಕವರ ಬಡಿತ ಜೋರಾಗಿದೆ. ಬದಲಿ ನಾಯಕತ್ವ ಜಟಾಪಟಿಗೆ ಉತ್ತರ ಸಿಗುವ ಮುನ್ನವೇ ಉತ್ತರಾಧಿಕಾರತ್ವ ಪ್ರಸ್ತಾಪ ಬಿಸಿಯೇರಿಸಿದೆ. ಸಿದ್ದರಾಮಯ್ಯ ಬಳಿಕ ಸತೀಶ್ ಜಾರಕಿಹೊಳಿ (Satish Jarkiholi) ಸಮರ್ಥ ನಾಯಕತ್ವದ ಬಗ್ಗೆ ಯತೀಂದ್ರ ಸಿದ್ದರಾಮಯ್ಯ ಕೊಟ್ಟ ಹೇಳಿಕೆಯನ್ನ ಬೇರೆ ಬೇರೆ ರೀತಿಯಲ್ಲಿ ವ್ಯಾಖ್ಯಾನಿಸಲಾಗ್ತಿದೆ. ಡಿಕೆಶಿ ಬಣದ ಬೆಂಬಲಿಗ ಶಾಸಕರಾದ ಶಿವಗಂಗಾ, ಇಕ್ಬಾಲ್ ಹುಸೇನ್ ಯತೀಂದ್ರಗೆ ಶಿಸ್ತಿನ ಗೆರೆ ಏಕಿಲ್ಲ ಎಂದು ಬಹಿರಂಗವಾಗಿ ಪ್ರಶ್ನಿಸಿ ಅಖಾಡವನ್ನ ರೋಚಕಗೊಳಿಸಿದ್ದಾರೆ. ಈ ನಡುವೆ ಯತೀಂದ್ರ ವಿರುದ್ಧ ಶಿಸ್ತು ಕ್ರಮಕ್ಕೆ ಬೆಂಬಲಿಗ ಶಾಸಕರ ಆಗ್ರಹಕ್ಕೆ ಡಿಕೆಶಿ ಪರೋಕ್ಷ ಬೆಂಬಲ ನೀಡಿದ್ದಾರೆ.

    ಹೈಕಮಾಂಡ್‌ಗೆ ಕೆಪಿಸಿಸಿ ವರದಿ ರವಾನೆ; ಸಿಡಿದ ಡಿಕೆ
    ಇನ್ನು, ಉತ್ತರಾಧಿಕಾರ ಬಗ್ಗೆ ಯತೀಂದ್ರ ನೀಡಿದ್ದ ಹೇಳಿಕೆ ಬಗ್ಗೆ ಕಾಂಗ್ರೆಸ್ ಹೈಕಮಾಂಡ್‌ಗೆ ಕೆಪಿಸಿಸಿ ವರದಿ (KPCC Report) ರವಾನಿಸಿದೆ. ಯತೀಂದ್ರ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತ ಬೆಂಬಲಿಗರು ಆಡಿರೋ ಮಾತನ್ನು ಡಿಕೆಶಿ ಪರೋಕ್ಷವಾಗಿ ಬೆಂಬಲಿಸಿದ್ದಾರೆ. ನನ್ನ ಪಕ್ಷದ ಆದ್ಯತೆ ಶಿಸ್ತು ಎನ್ನುವ ಮೂಲಕ ಯತೀಂದ್ರಗೆ ಡಿಕೆಶಿ (DK Shivakumar) ಪರೋಕ್ಷ ಗುನ್ನಾ ಕೊಟ್ಟಿದ್ದಾರೆ. ಈ ಬಗ್ಗೆ ನಾನು ಈಗ ಮಾತನಾಡಲ್ಲ. ಯಾರ ಹತ್ತಿರ.. ಏನು ಮಾತನಾಡಬೇಕೋ.. ಅಲ್ಲಿ ಮಾತನಾಡುತ್ತೇನೆ. ನಾನು ಶಿಸ್ತಿನ ಜೊತೆ ನಿಲ್ಲುತ್ತೇನೆ. ಶಿಸ್ತು ನನ್ನ ಪಕ್ಷದ ಆದ್ಯತೆ ಎಂದು ಪರೋಕ್ಷ ಸಂದೇಶ ರವಾನಿಸಿದ್ದಾರೆ.

    ಉತ್ತರಾಧಿಕಾರ ಹೇಳಿಕೆಗೆ ಸಿಎಂ ಮೌನ
    ಇನ್ನು ಪುತ್ರ ಯತೀಂದ್ರ ಉತ್ತರಾಧಿಕಾರತ್ವದ ಬಗ್ಗೆ ಇಷ್ಟೆಲ್ಲ ಮಾತನಾಡಿದ್ರೂ ಸಿಎಂ ಮಾತ್ರ ಇನ್ನೂ ಮೌನ. ಕಾಂಗ್ರೆಸ್ ಒಳಗೆ ಇಷ್ಟೆಲ್ಲ ಬೆಳವಣಿಗೆ ಆಗ್ತಿದ್ರೂ ಸಿಎಂ ಅಂತರ ಕಾಯ್ದುಕೊಂಡಿದ್ದು ಏಕೆ ಎಂಬ ಚರ್ಚೆ ಶುರುವಾಗಿದೆ. ಸಿಎಂ ಕಾದು ನೋಡುವ ತಂತ್ರಕ್ಕೆ ಮುಂದಾಗಿದ್ದು, ಎಲ್ಲವನ್ನೂ ನೋಡಿ ಕಡೆಗಳಿಗೆಯಲ್ಲಿ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗ್ತರಾ? ಎಂಬುದನ್ನ ಕಾದುನೋಡಬೇಕಿದೆ. ಈ ನಡುವೆ ಸಚಿವ ಪ್ರಿಯಾಂಕ್ ಖರ್ಗೆ ಯತೀಂದ್ರ ಹೇಳಿಕೆಯನ್ನ ಸಮರ್ಥಿಸಿಕೊಂಡ್ರೂ ಸಿಎಂ ಬದಲಾವಣೆ ತೀರ್ಮಾನ ಹೈಕಮಾಂಡ್ ಎಂದು ಮೇಲೆ ಕೈ ತೋರಿಸಿ ಜಾರಿಕೊಂಡಿದ್ದಾರೆ.

    ಬಿಹಾರ ಎಲೆಕ್ಷನ್ ಬಳಿಕ ಕ್ರಾಂತಿನಾ?
    ಈ ಮಧ್ಯೆ, ನವೆಂಬರ್ ಕ್ರಾಂತಿಯ ಬಗ್ಗೆ ರಾಜಣ್ಣ ಪುತ್ರ ರಾಜೇಂದ್ರ ಮತ್ತೆ ಮಾತನಾಡಿದ್ದಾರೆ. ಯತೀಂದ್ರ ಹೇಳಿಕೆಯಲ್ಲಿ ತಪ್ಪೇನಿಲ್ಲ. ಮುಂದೆ ಅಹಿಂದ ನಾಯಕ ಮುಖ್ಯಮಂತ್ರಿ ಆಗಬೇಕು ಅಂತ ಹೇಳಿದ್ದಾರೆ. ಇದು ಅವರ ವೈಯಕ್ತಿಕ ಅಭಿಪ್ರಾಯ ಎಂದಿದ್ದಾರೆ. ಬಿಹಾರ ಎಲೆಕ್ಷನ್ ನಂತರ ಕೆಲವೊಂದು ಬದಲಾವಣೆಗಳು ಆಗ್ತವೆ ನೋಡ್ತೀರಿ ಅಂತ ಮೇಲ್ಮನೆ ಸದಸ್ಯ ರಾಜೇಂದ್ರ ರಾಜಣ್ಣ ಹೇಳಿದ್ದಾರೆ.

  • ಎಲ್ಲಿ ಮಾತನಾಡಬೇಕೋ ಅಲ್ಲಿ ಮಾತನಾಡುತ್ತೇನೆ: ಯತೀಂದ್ರಗೆ ಡಿಕೆಶಿ ಪರೋಕ್ಷ ಗುನ್ನಾ

    ಎಲ್ಲಿ ಮಾತನಾಡಬೇಕೋ ಅಲ್ಲಿ ಮಾತನಾಡುತ್ತೇನೆ: ಯತೀಂದ್ರಗೆ ಡಿಕೆಶಿ ಪರೋಕ್ಷ ಗುನ್ನಾ

    ಬೆಂಗಳೂರು: ಯಾರ ಹತ್ತಿರ ಏನು ಮಾತನಾಡಬೇಕೋ ಅಲ್ಲಿ ಮಾತನಾಡುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಹೇಳಿದ್ದಾರೆ.

    ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ವಿರುದ್ಧ ಕೆಲ ಶಾಸಕರು ಶಿಸ್ತು ಕ್ರಮಕ್ಕೆ ಆಗ್ರಹಿಸಿದ್ದಕ್ಕೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ನಾನು ಈಗ ಮಾತನಾಡುವುದಿಲ್ಲ. ಎಲ್ಲಿ ಮಾತನಾಡಬೇಕೋ ಅಲ್ಲಿ ಮಾತನಾಡುತ್ತೇನೆ ಎಂದು ಉತ್ತರಿಸಿದರು.

    ನಾನು ಶಿಸ್ತಿನ ಜೊತೆ ನಿಲ್ಲುತ್ತೇನೆ. ಶಿಸ್ತು ನನ್ನ ಪಕ್ಷದ ಆದ್ಯತೆ ಎಂದು ಹೇಳುವ ಪರೋಕ್ಷವಾಗಿ ಯತೀಂದ್ರ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹಿಸಿದ ಶಾಸಕರ ಆಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿದರು.

    ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವಿಚಾರದಲ್ಲಿ ಡಿಕೆ ಶಿವಕುಮಾರ್‌ ಜಾಣ ನಡೆ ತೋರಿಸುತ್ತಿದ್ದಾರೆ. ಒಂದು ವೇಳೆ ಯತೀಂದ್ರ ಹೇಳಿಕೆಗೆ ಖಡಕ್‌ ಆಗಿ ಪ್ರತಿಕ್ರಿಯಿಸಿದರೆ ಮತ್ತೆ ಅದು ದೊಡ್ಡ ಮಟ್ಟದ ಸುದ್ದಿಯಾಗಲಿದೆ ಎನ್ನುವುದನ್ನು ಅರಿತಿರುವ ಡಿಕೆಶಿ ಎಲ್ಲಿ ಮಾತನಾಡಬೇಕೋ ಅಲ್ಲಿ ಮಾತನಾಡುತ್ತೇನೆ ಎಂದಷ್ಟೇ ಹೇಳಿದ್ದಾರೆ.  ಇದನ್ನೂ ಓದಿ:  ಆಂತರಿಕ ಸಂಘರ್ಷ, ಅಧಿಕಾರ ಹಸ್ತಾಂತರ ಚರ್ಚೆ ಮಧ್ಯೆ ರಾಜ್ಯಕ್ಕೆ ಬರಲಿದ್ದಾರೆ ರಾಹುಲ್‌ ಗಾಂಧಿ

    ಹೈಕಮಾಂಡ್‌ಗೆ ವರದಿ ಸಲ್ಲಿಕೆ:
    ಬೆಳಗಾವಿಯಲ್ಲಿ ಸಿದ್ದರಾಮಯ್ಯ ನಂತರ ಸತೀಶ್‌ ಜಾರಕಿಹೊಳಿ ಉತ್ತರಾಧಿಕಾರಿ ಎಂಬ ಯತೀಂದ್ರ ಭಾಷಣದ ವಿಡಿಯೋಗೆ ಸಂಬಂಧಿಸಿದಂತೆ ಹೈಕಮಾಂಡ್‌ಗೆ ಕೆಪಿಸಿಸಿಯಿಂದ ವರದಿ ಸಲ್ಲಿಕೆಯಾಗಿದೆ.

    ಯತೀಂದ್ರ ಸಿದ್ದರಾಮಯ್ಯ ಪದೇ ಪದೇ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಉಳಿದ ನಾಯಕರಂತೆ ಯತೀಂದ್ರ ಹೇಳಿಕೆಗಳಿಗೂ ಕಡಿವಾಣ ಹಾಕಬೇಕಾದ ಅನಿವಾರ್ಯತೆ ಬಗ್ಗೆ ಹೈ ಕಮಾಂಡ್ ಗೆ ವಿಸ್ತೃತ ವರದಿ ರವಾನೆಯಾಗಿದೆ.

  • ಯತೀಂದ್ರ ಹೇಳಿಕೆ ನಾಯಕತ್ವ ಕುರಿತಲ್ಲ, ಸತೀಶ್ ಜಾರಕಿಹೊಳಿಗಿರುವ ಸೈದ್ಧಾಂತಿಕ ಬದ್ಧತೆ ಹಿನ್ನೆಲೆಯಲ್ಲಿ ಮಾತಾಡಿದ್ದಾರೆ – ಪರಮೇಶ್ವರ್

    ಯತೀಂದ್ರ ಹೇಳಿಕೆ ನಾಯಕತ್ವ ಕುರಿತಲ್ಲ, ಸತೀಶ್ ಜಾರಕಿಹೊಳಿಗಿರುವ ಸೈದ್ಧಾಂತಿಕ ಬದ್ಧತೆ ಹಿನ್ನೆಲೆಯಲ್ಲಿ ಮಾತಾಡಿದ್ದಾರೆ – ಪರಮೇಶ್ವರ್

    ಬೆಂಗಳೂರು: ಯತೀಂದ್ರ ಹೇಳಿಕೆ ನಾಯಕತ್ವ ಕುರಿತಲ್ಲ, ಸತೀಶ್ ಜಾರಕಿಹೊಳಿಗಿರುವ (Satish Jarkiholi) ಸೈದ್ಧಾಂತಿಕ ಬದ್ಧತೆ ಹಿನ್ನೆಲೆಯಲ್ಲಿ ಮಾತಾಡಿದ್ದಾರೆ ಎಂದು ಗೃಹ ಸಚಿವ ಪರಮೇಶ್ವರ್ (G Parameshwar) ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮುಂದಿನ ನಾಯಕತ್ವ ದೃಷ್ಟಿಯಲ್ಲಿಟ್ಟುಕೊಂಡು ಸತೀಶ್ ಜಾರಕಿಹೊಳಿ ಅವರ ಹೆಸರನ್ನು ಯತೀಂದ್ರ ಹೇಳಿಲ್ಲ. ಸತೀಶ್ ಜಾರಕಿಹೊಳಿ ಸಿದ್ದರಾಮಯ್ಯನವರ ಉತ್ತರಾಧಿಕಾರಿ ಅಂತ ಯತ್ರೀಂದ್ರ ಹೇಳಿಲ್ಲ. ಸೈದ್ಧಾಂತಿಕ ಹಿನ್ನೆಲೆಯಲ್ಲಿ ಹೇಳಿದ್ದಾರೆ. ಸೈದ್ಧಾಂತಿಕವಾಗಿ ಸಿದ್ದರಾಮಯ್ಯ ದಾರಿಯಲ್ಲೇ ಸತೀಶ್ ಹೋಗ್ತಾರೆ ಅಂತ ಹೇಳಿದ್ದಾರೆ. ಅಹಿಂದ ಪ್ರಾರಂಭವಾದಾಗ ಸತೀಶ್ ಜಾರಕಿಹೊಳಿ ಬಹಳ ಮುಖ್ಯ ಪಾತ್ರ ವಹಿಸಿದ್ದರು. ಆ ಹಿನ್ನೆಲೆಯಲ್ಲಿ ಹೇಳಿದ್ದಾರೆ ಅದರಲ್ಲಿ ತಪ್ಪೇನಿದೆ? ಲೀಡರ್‌ಶಿಪ್ ದೃಷ್ಟಿಯಿಂದ ಮಾತನಾಡಿಲ್ಲ. ಅವರು ಪಕ್ಷದ ಬದ್ಧತೆ, ಸಮಾಜದ ಬದ್ಧತೆ ಬಗ್ಗೆ ಮಾತನಾಡಿದ್ದಾರೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.ಇದನ್ನೂ ಓದಿ: ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆ ಸದ್ಯಕ್ಕೆ ಇಲ್ಲ: ಹೆಚ್‌ಡಿಕೆ

    ಇನ್ನು ಸಿಎಂ ಬದಲಾವಣೆ ಮಾಡಿದರೆ ನೀವೂ ರೇಸ್‌ನಲ್ಲಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಮಲ್ಲಿ ತೀರ್ಮಾನ ಮಾಡುವುದು ಹೈಕಮಾಂಡ್. ಆ ಸಂದರ್ಭ ಬಂದಾಗ ಸಿಎಲ್‌ಪಿ ಕರೀತಾರೆ. ಎಂಎಲ್‌ಎಗಳ ಅಭಿಪ್ರಾಯ ತೆಗೆದುಕೊಳ್ಳುತ್ತಾರೆ. ಹೈಕಮಾಂಡ್‌ನಿಂದ ಬರುವ ವೀಕ್ಷಕರು ಹೈಕಮಾಂಡ್‌ಗೆ ಮಾಹಿತಿ ಕೊಡ್ತಾರೆ. ತೆಗೆದುಕೊಂಡ ತೀರ್ಮಾನದ ಬಗ್ಗೆ ಆ ಸಂದರ್ಭದಲ್ಲಿ ಅನೌನ್ಸ್ ಮಾಡ್ತಾರೆ. ಇದು ನಮ್ಮಲ್ಲಿರುವ ಪದ್ಧತಿ ಅದನ್ನ ಶಾರ್ಟ್ಕಟ್ ಮಾಡೋದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

  • ನಮ್ದೇನಿದ್ದರೂ 2028ಕ್ಕೆ ಸಿಎಂ ಕ್ಲೈಮ್‌, ಯತೀಂದ್ರ ಹೇಳಿಕೆ ಅದು ವೈಯಕ್ತಿಕ: ಸತೀಶ್‌ ಜಾರಕಿಹೊಳಿ

    ನಮ್ದೇನಿದ್ದರೂ 2028ಕ್ಕೆ ಸಿಎಂ ಕ್ಲೈಮ್‌, ಯತೀಂದ್ರ ಹೇಳಿಕೆ ಅದು ವೈಯಕ್ತಿಕ: ಸತೀಶ್‌ ಜಾರಕಿಹೊಳಿ

    ಬೆಳಗಾವಿ: ನಮ್ಮದು ಏನೇ ಇದ್ದರೂ 2028ಕ್ಕೆ ಸಿಎಂ ಸ್ಥಾನದ ಕ್ಲೈಮ್‌ ಮಾಡುತ್ತೇವೆ. ಯತೀಂದ್ರ ಹೇಳಿಕೆ ಅದು ಅವರ ವೈಯಕ್ತಿಕ ಅಭಿಪ್ರಾಯ ಎಂದು ಲೋಕೋಪಯೋಗಿ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ.

    ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿಕೆಗೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಎಲ್ಲರನ್ನು ಜೊತೆಗೆ ಕರೆದುಕೊಂಡು ಹೋಗುವ ಕೆಲಸ ಮಾಡುತ್ತೇವೆ. ಏನೇ ಆಗಲಿ ಅದನ್ನು ಪಕ್ಷ ನಿರ್ಧಾರ ಮಾಡಲಿದೆ ಎಂದು ತಿಳಿಸಿದರು.  ಇದನ್ನೂ ಓದಿ:  ಯಾವುದೇ ಕ್ಷಣದಲ್ಲಿ ಹೇಮಾವತಿ ಡ್ಯಾಂನಿಂದ ನೀರು ಹೊರಕ್ಕೆ – ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ

     

    ಯತಿಂದ್ರ (Yathindra Siddaramaiah) ಅವರು ಅವರ ವೈಯಕ್ತಿಕ ಹೇಳಿಕೆ ನೀಡಿದ್ದಾರೆ. ಅಂತಿಮವಾಗಿ ಯಾರು ನಾಯಕ ಎನ್ನುವುದನ್ನು ಪಕ್ಷದ ಶಾಸಕರು ನಿರ್ಧಾರ ಮಾಡುತ್ತಾರೆ. ಅಹಿಂದ ನಾಯಕತ್ವ ಇಲ್ಲದೇ ಪಕ್ಷ ಸಂಘಟನೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಇದನ್ನೂ ಓದಿ:  ಇಂದಿನಿಂದ ಸರ್ಕಾರಿ ಶಾಲೆಗಳು ಪುನಾರಂಭ

    ಎಲ್ಲವನ್ನೂ ಕಾಕತಿಯಲ್ಲಿ ನಿಂತು ನಿರ್ಧಾರ ಮಾಡಲು ಸಾಧ್ಯವಿಲ್ಲ. ಡಿಸೆಂಬರ್‌ ಕ್ರಾಂತಿಯ ಬಗ್ಗೆ ನಮಗೆ ಗೊತ್ತೇ ಇಲ್ಲ ಎಂದು ತಿಳಿಸಿದರು.  ಇದನ್ನೂ ಓದಿ:  ಸಿದ್ದರಾಮಯ್ಯ ನಂತರ ಸತೀಶ್ ಜಾರಕಿಹೊಳಿಗೆ ನಾಯಕತ್ವ- ಡಿಕೆಶಿಗೆ ಯತೀಂದ್ರ ಚೆಕ್‌ಮೇಟ್

    ಸಿದ್ದರಾಮಯ್ಯನವರ ನಂತರ ಪಕ್ಷವನ್ನು ಮುನ್ನಡೆಸುವ ವಿಚಾರಕ್ಕೆ, ಎಲ್ಲವನ್ನೂ ಕಾದು ನೋಡೋಣ ಎಂದು ಜಾರಕಿಹೊಳಿ ಉತ್ತರಿಸಿದರು.

  • ಮುಂದಿನ ಸಿಎಂ ವಿಚಾರದಲ್ಲಿ ನನ್ನ ಬಗ್ಗೆ ಚರ್ಚೆ ಬೇಡ, ಯತೀಂದ್ರ ಹೇಳಿಕೆ ಬಗ್ಗೆ ಅವರನ್ನೇ ಕೇಳಿ: ಡಿಕೆಶಿ ತಿರುಗೇಟು 

    ಮುಂದಿನ ಸಿಎಂ ವಿಚಾರದಲ್ಲಿ ನನ್ನ ಬಗ್ಗೆ ಚರ್ಚೆ ಬೇಡ, ಯತೀಂದ್ರ ಹೇಳಿಕೆ ಬಗ್ಗೆ ಅವರನ್ನೇ ಕೇಳಿ: ಡಿಕೆಶಿ ತಿರುಗೇಟು 

    ರಾಯಚೂರು: ರಾಜ್ಯದಲ್ಲಿ ಮುಂದಿನ ಸಿಎಂ ಯಾರು ಅನ್ನೋ ಚರ್ಚೆ ವಿಚಾರದಲ್ಲಿ ನನ್ನ ಬಗ್ಗೆ ಯಾರೂ ಚರ್ಚೆ ಮಾಡುವ ಅವಶ್ಯಕತೆಯಿಲ್ಲ. ಪಾರ್ಟಿ ಏನು ಹೇಳುತ್ತದೆಯೋ ಅದರಂತೆ ನಾವು ಒಟ್ಟಿಗೆ ಕೆಲಸ ಮಾಡಿಕೊಂಡು ಹೋಗ್ತಿವಿ ಅಂತ ನಾನು ಸಿದ್ದರಾಮಯ್ಯ (Siddaramaiah) ಹೇಳಿದ್ದೇವೆ. ಅದಕ್ಕೆ ನಾನು ಬದ್ದನಾಗಿದ್ದೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (D.K Shivakumar) ಹೇಳಿದ್ದಾರೆ.

    ಮಂತ್ರಾಲಯದಲ್ಲಿ ದೇವಾಲಯಕ್ಕೆ ಭೇಟಿ ಬಳಿಕ ಮಾಧಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ಮುಂದಿನ ಮುಖ್ಯಮಂತ್ರಿ ಕುರಿತು ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಹೇಳಿಕೆಗೆ ಅವರು ಪ್ರತಿಕ್ರಿಯಿಸಿದರು. ಅದರ ಬಗ್ಗೆ ಅವರು ಏನು ಹೇಳಿದ್ದಾರೆ ನನಗೆ ಗೊತ್ತಿಲ್ಲ. ಈ ಬಗ್ಗೆ ಅವರನ್ನೇ ಕೇಳಿ. ಅದನ್ನ ನನ್ನ ಕೇಳಿದ್ರೆ ನಾನು ಏನು ಹೇಳಲಿ ಎಂದು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ . ಇದನ್ನೂ ಓದಿ: ಡಿಕೆಶಿ ಟೆಂಪಲ್ ರನ್ – ರಾಯರ ಅನುಗ್ರಹಕ್ಕಾಗಿ ತುಲಾಭಾರ ನೆರವೇರಿಸಿದ ಡಿಸಿಎಂ

    ನನಗೆ ಪಕ್ಷ ಎಲ್ಲಾ ಕೊಟ್ಟಿದೆ. ಪಕ್ಷದ ಅಧ್ಯಕ್ಷನಾಗಿದ್ದೇನೆ. ಡಿಸಿಎಂ ಆಗಿ ರಾಜ್ಯದಲ್ಲಿ ಇತಿಹಾಸ ಬರೆಯುತ್ತಿದ್ದೇನೆ. ದೊಡ್ಡ ದೊಡ್ಡ ಕೆಲಸ ನಿಭಾಯಿಸಿದ್ದೇನೆ. ನೀರಾವರಿ ಕ್ಷೇತ್ರದಲ್ಲಿ ಇತಿಹಾಸ ಬರಿತಿದಿನಿ. ಮಹಾದಾಯಿ, ಮೇಕೆದಾಟು ಹೋರಾಟ ಮಾಡಿದಿನಿ. ಪಕ್ಷ ನನಗೆ ಏನೇನು ಕೊಡಬೇಕು ಎಲ್ಲಾ ಕೊಟ್ಟಿದೆ ಎಂದಿದ್ದಾರೆ. ಇದನ್ನೂ ಓದಿ: ಮಹಾಘಟಬಂಧನ್‌ನಲ್ಲಿ ಮುಂದುವರಿದ ಬಿಕ್ಕಟ್ಟು – 24 ಗಂಟೆಯಲ್ಲಿ ಸ್ಪಷ್ಟನೆ ಸಿಗುತ್ತೆ: ತೇಜಸ್ವಿ ಯಾದವ್

    ಬೆಳಗಾವಿಯ ರಾಯಬಾಗ ತಾಲೂಕಿನ ಕಪಲಗುದ್ದಿ ಗ್ರಾಮದಲ್ಲಿ ಶ್ರೀ ಸಂತ ಕನಕದಾಸರ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಿಎಂ ಸಿದ್ದರಾಮಯ್ಯ ಪುತ್ರ ಯತಿಂದ್ರ ಅವರು ಸಚಿವ ಸತೀಶ ಜಾರಕಿಹೊಳಿಯವರೇ ಮುಂದಿನ ಮುಖ್ಯಮಂತ್ರಿ ಎನ್ನುವ ಮುನ್ಸೂಚನೆಯನ್ನ ನೀಡಿದ್ದರು.

    ನಮ್ಮ ತಂದೆಯವರು ತಮ್ಮ ರಾಜಕೀಯ ಕೊನೆಗಾಲದಲ್ಲಿದ್ದಾರೆ‌. ವೈಚಾರಿಕವಾಗಿ ಪ್ರಗತಿಪರ ತತ್ವ ಆಲೋಚನೆ ಇರುವ ನಾಯಕರು ಬೇಕು. ಸತೀಶ್‌ ಜಾರಕಿಹೊಳಿಯವರು (SatishJar kiholi) ಈ ಜವಾಬ್ದಾರಿ ನಿಭಾಯಿಸುತ್ತಾರೆ. ಜಾರಕಿಹೊಳಿ ಅವರು ಮಾದರಿಯಾಗಿ ನಮ್ಮನ್ನು ಮುನ್ನಡೆಸುತ್ತಾರೆ ಎಂದಿದ್ದರು.

  • ಸಿದ್ದರಾಮಯ್ಯ ನಂತರ ಸತೀಶ್ ಜಾರಕಿಹೊಳಿಗೆ ನಾಯಕತ್ವ- ಡಿಕೆಶಿಗೆ ಯತೀಂದ್ರ ಚೆಕ್‌ಮೇಟ್

    ಸಿದ್ದರಾಮಯ್ಯ ನಂತರ ಸತೀಶ್ ಜಾರಕಿಹೊಳಿಗೆ ನಾಯಕತ್ವ- ಡಿಕೆಶಿಗೆ ಯತೀಂದ್ರ ಚೆಕ್‌ಮೇಟ್

    ಬೆಳಗಾವಿ: ಸಿಎಂ ಸಿದ್ದರಾಮಯ್ಯನವರ (Siddaramaiah) ನಂತರ ಕಾಂಗ್ರೆಸ್‌ ಪಕ್ಷವನ್ನು ಮುನ್ನಡೆಸುವವರು ಯಾರು ಎಂಬ ಪ್ರಶ್ನೆಗೆ ಪುತ್ರ ಯತೀಂದ್ರ (Yathindra Siddaramaiah) ಅವರು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ (Satish Jarkiholi) ಅವರ ಹೆಸರನ್ನು ಮುನ್ನೆಲೆಗೆ ತಂದಿದ್ದಾರೆ.

    ಹೌದು. ರಾಯಬಾಗ ತಾಲೂಕಿನ ಕಪ್ಪಲಗುದ್ದಿಯಲ್ಲಿ ನಡೆದ ಶ್ರೀ ಸಂತ ಕನಕದಾಸರ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೈಚಾರಿಕವಾಗಿ ಪ್ರಗತಿಪರ ತತ್ವ ಸಿದ್ದಾಂತ ಇರುವ ನಾಯಕರು ಬೇಕು. ಸತೀಶ್‌ ಜಾರಕಿಹೊಳಿಯವರು ಈ ಜವಾಬ್ದಾರಿ ನಿಭಾಯಿಸುತ್ತಾರೆ ಎಂದು ಹೇಳಿದ್ದಾರೆ.

    ಇವತ್ತು ತಂದೆಯವರು ರಾಜಕೀಯ ಕೂನೆಗಾಲದಲ್ಲಿದ್ದಾರೆ. ಅವರ ರಾಜಕೀಯ ಕೂನೆ ಘಟ್ಟದಲ್ಲಿರುವ ಸಮಯದಲ್ಲಿ ಈ ರೀತಿ ವೈಚಾರಿಕವಾಗಿ ಪ್ರಗತಿಪರವಾಗಿ ಸಿದ್ದಾಂತ ಇಟ್ಟುಕೊಂಡಿರುವವರಿಗೆ ಮಾರ್ಗದರ್ಶಶನ, ನೇತೃತ್ವ ವಹಿಸಿಕೊಳ್ಳಲು ಒಬ್ಬ ನಾಯಕ ಬೇಕು. ಸತೀಶ್ ಜಾರಕಿಹೊಳಿಯವರು ಅಂತಹ ಜವಾಬ್ದಾರಿ ವಹಿಸಿಕೊಳ್ಳಲು ಸಮರ್ಥರಿದ್ದಾರೆ ಎಂದಿದ್ದಾರೆ.

    ಕಾಂಗ್ರೆಸ್ ಪಕ್ಷದ ಸಿದ್ದಾಂತದಲ್ಲಿ ನಂಬಿಕೆ ಇಟ್ಟುಕೊಂಡಿರುವ ಎಲ್ಲಾ ರಾಜಕಾರಣಿಗಳಿಗೆ ಮಾದರಿಯಾಗಿ ನಮ್ಮನ್ನು ಮುನ್ನಡೆಸುವ ನಂಬಿಕೆ ಇದೆ. ತತ್ವ ಬದ್ಧತೆ ಇರುವ ನಾಯಕರು ಸಿಗುವುದು ಬಹಳ ಕಷ್ಟ. ಅಂತಹ ಕೆಲಸವನ್ನು ಜಾರಕಿಹೊಳಿ ಮಾಡುತ್ತಿದ್ದಾರೆ. ಆ ಕೆಲಸ ಇದೇ ರೀತಿ ಮುಂದುವರಿಯಲಿ ಎಂದು ಶುಭ ಹಾರೈಸಿದರು.