Tag: Yatharv Yash

  • ನನ್ನ ತಮ್ಮನಿಗೆ ತಿಂಡಿ ತಿನ್ನಿಸಲು ಬಿಡಿ – ಐರಾ, ಯಥರ್ವ್ ಕ್ಯೂಟ್ ವೀಡಿಯೋ ವೈರಲ್

    ನನ್ನ ತಮ್ಮನಿಗೆ ತಿಂಡಿ ತಿನ್ನಿಸಲು ಬಿಡಿ – ಐರಾ, ಯಥರ್ವ್ ಕ್ಯೂಟ್ ವೀಡಿಯೋ ವೈರಲ್

    ಬೆಂಗಳೂರು: ಪ್ರೀತಿಯ ತಮ್ಮನಿಗೆ ಐರಾ ತಿಂಡಿ ತಿನ್ನಿಸುತ್ತಿರುವ ಕ್ಯೂಟ್ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ನಟ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಆಗಾಗ ತಮ್ಮ ಮಕ್ಕಳು ಆಟ ಆಡುತ್ತಿರುವ, ತುಂಟ ಮತ್ತು ಚೇಷ್ಟೆಯ ಕ್ಯೂಟ್ ವೀಡಿಯೋಗಳನ್ನು ಅಭಿಮಾನಿಗಳೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಯಶ್ ಕೂಡ ತಮ್ಮ ಬ್ಯೂಸಿ ಶೆಡ್ಯೂಲ್‍ಗಳ ಮಧ್ಯೆ ಪತ್ನಿ ಹಾಗೂ ಮಕ್ಕಳನ್ನು ಡಿನ್ನರ್, ಪ್ರವಾಸ, ಔಟಿಂಗ್ ಎಂದು ಕರೆದುಕೊಂಡು ಹೋಗುವ ಮೂಲಕ ಫ್ಯಾಮಿಲಿ ಜೊತೆಗೆ ಆಗಾಗ ಕಾಲ ಕಳೆಯುತ್ತಿರುವ ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

    ಸದ್ಯ ಮದುವೆ ಬಳಿಕ ರಾಧಿಕ ಪಂಡಿತ್ ಸಿನಿಮಾದಿಂದ ದೂರ ಉಳಿದಿದ್ದು, ಮಕ್ಕಳ ಬಗ್ಗೆ ಕಾಳಜಿ ವಹಿಸುವುದರಲ್ಲಿ ಫುಲ್ ಬ್ಯೂಸಿಯಾಗಿದ್ದಾರೆ. ಈ ಮಧ್ಯೆ ಐರಾ ಮತ್ತು ಯಥರ್ವ್‍ನ ಹಳೆಯ ವಿಡಿಯೋವೊಂದನ್ನು ರಾಧಿಕಾ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:  ಐರಾಗೆ ಹುಟ್ಟುಹಬ್ಬದ ಸಂಭ್ರಮ – ನಿನ್ನ ಕೈ ಹಿಡಿಯಲು ಯಾವಾಗಲೂ ಇರುತ್ತೇನೆ ಅಂದ ರಾಧಿಕಾ

    ವೀಡಿಯೋದಲ್ಲಿ ಐರಾ ಪ್ಲೇಟ್ ಹಿಡಿದುಕೊಂಡು ತಾನು ತಿನ್ನುತ್ತಿರುವ ತಿಂಡಿಯನ್ನು ಯಥರ್ವ್‍ಗೆ ತಿನ್ನಿಸಲು ಕೈ ಚಾಚುತ್ತಾಳೆ. ಆಗ ರಾಧಿಕಾ ಪಂಡಿತ್ ಐರಾಗೆ ತಿನ್ನಿಸದಂತೆ ತಡೆತ್ತಾರೆ. ಆದರೂ ತಮ್ಮನನ್ನು ಮುದ್ದು ಮಾಡುತ್ತಾ, ಐರಾ ತಿಂಡಿಯನ್ನು ತಿನ್ನಿಸಲು ಮತ್ತೆ ಪ್ರಯತ್ನಿಸುವುದನ್ನು ಕಾಣಬಹುದಾಗಿದೆ. ಈ ವೀಡಿಯೋ ಜೊತೆಗೆ ಯಾರಾದರೂ ಪ್ಲೀಸ್ ನನ್ನ ತಮ್ಮನಿಗೆ ತಿನ್ನಿಸಲು ಬಿಡಿ ಎಂದು ಕ್ಯಾಪ್ಷನ್‍ನಲ್ಲಿ ಬರೆಯಲಾಗಿದೆ.

     

    View this post on Instagram

     

    A post shared by Radhika Pandit (@iamradhikapandit)

    ಸದ್ಯ ಈ ಕ್ಯೂಟ್ ವೀಡಿಯೋ ಸೋಶಿಯಲ್ ಮೀಡಿಯದಲ್ಲಿ ವೈರಲ್ ಆಗುತ್ತಿದ್ದು, ಅಕ್ಕ- ತಮ್ಮನ ಪ್ರೀತಿ ನೋಡಿ ಅಭಿಮಾನಿಗಳು ಕ್ಯೂಟ್ ಎಂದು ಕಾಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ 3 ನೇ ವಸಂತಕ್ಕೆ ಕಾಲಿಟ್ಟ ಐರಾಗೆ ರಾಧಿಕಾ ಪಂಡಿತ್ ಸೋಶಿಯಲ್ ಮೀಡಿಯಾದಲ್ಲಿ ಫೋಟೋವೊಂದನ್ನು ಪೋಸ್ಟ್ ಮಾಡಿ, ನಿನ್ನ ಕೈ ಹಿಡಿಯಲು ಸದಾ ಯಾವಾಗಲೂ ನಿನ್ನೊಂದಿಗೆ ಇರುತ್ತೇನೆ. ಹುಟ್ಟುಹಬ್ಬದ ಶುಭಾಶಯಗಳು ಎಂಜೆಲ್ ಎಂದು ಭಾವನಾತ್ಮಕವಾಗಿ ಶುಭಾಶಯ ತಿಳಿಸಿದ್ದರು. ಇದನ್ನೂ ಓದಿ: ಜನ ಥಿಯೇಟರ್‌ಗೆ ಬಂದು ಸಿನಿಮಾ ನೋಡಿದ್ರೆ ನಮಗೆ ಖುಷಿ: ಶ್ರೀಮುರಳಿ

  • ವಿಶೇಷವಾದ ಬಂಧ, ಪ್ರೀತಿಯ ಶುದ್ಧ ರೂಪ: ರಾಧಿಕಾ ಪಂಡಿತ್

    ವಿಶೇಷವಾದ ಬಂಧ, ಪ್ರೀತಿಯ ಶುದ್ಧ ರೂಪ: ರಾಧಿಕಾ ಪಂಡಿತ್

    ಬೆಂಗಳೂರು: ಸ್ಯಾಂಡಲ್‍ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಅವರ ಮನೆಯಲ್ಲಿ ರಕ್ಷಾ ಬಂಧನ ಸಂಭ್ರಮ ಜೋರಾಗಿತ್ತು ಎನ್ನುವುದಕ್ಕೆ ಸಾಕ್ಷಿಯಾದಂತೆ ಕೆಲವು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

    ವಿಶೇಷವಾದ ಬಂಧ, ಪ್ರೀತಿಯ ಶುದ್ಧ ರೂಪದೊಂದಿಗೆ ಎಲ್ಲ ಸಹೋದರ ಸಹೋದರಿಯರಿಗೆ ರಕ್ಷಾ ಬಂಧನದ ಶುಭಾಶಯಗಳು ಎಂದು ಬರೆದುಕೊಂಡ ಐರಾ ಅಥರ್ವ್‍ನಿಗೆ ರಾಖಿ ಕಟ್ಟಿ ಇಬ್ಬರು ತಬ್ಬಿಕೊಂಡು ಪ್ರೀತಿಯಿಂದ ಒಬ್ಬರಿಗೊಬ್ಬರು ಮುತ್ತು ಕೊಡುತ್ತಿರುವ ಫೋಟೋ ಹಾಗೂ ಯಶ್‍ಗೆ ಅವರ ಸಹೋದರಿ ನಂದಿನಿ ರಾಖಿ ಕಟ್ಟುತ್ತಿದ್ದಾರೆ ಇನ್ನೊಂದು ಫೋಟೋದಲ್ಲಿ ರಾಧಿಕಾ ಪಂಡಿತ್ ಅವರ ಸಹೋದರನ ಜೊತೆಗೆ ಇರುವ ಮುದ್ದಾದ ಫೋಟೋವನ್ನು ರಾಧಿಕಾ ಪಂಡಿತ್ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ:  ವಿಭಿನ್ನವಾಗಿ ರಕ್ಷಾ ಬಂಧನ ಆಚರಿಸಿದ ಸೆಲೆಬ್ರಿಟಿಗಳು

     

    View this post on Instagram

     

    A post shared by Radhika Pandit (@iamradhikapandit)

    ರಾಧಿಕಾ ಪಂಡಿತ್ ಅವರ ಮನೆಯಲ್ಲಿ ರಕ್ಷಾ ಬಂಧನ ಸಖತ್ ಜೋರಾಗಿಯೇ ಇತ್ತು ಎಂದು ಈ ಫೋಟೋಗಳು ಹೇಳುತ್ತಿವೆ. ಅಭಿಮಾನಿಗಳು ಈ ಮುದ್ದಾದ ಫೋಟೋಗಳನ್ನು ಮೆಚ್ಚಿ ಕಮೆಂಟ್ ಮಾಡುತ್ತಿದ್ದಾರೆ. ಅಯ್ಯೋ. ಇದು ಅದ್ಭುತವಾಗಿದೆ. ಈ ವಿಶೇಷ ಅಪ್‍ಡೇಟ್‍ಗಳಿಂದ ರಕ್ಷಾಬಂಧನ ಸಂಪೂರ್ಣವಾಯಿತು ಫೋಟೋಗಳು ತುಂಬಾ ಮುದ್ದಾಗಿವೆ. ನಾವು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೆವೆ ನೀವು ಲೈವ್‍ಗೆ ಬನ್ನಿ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.

    ಅಣ್ಣ-ತಂಗಿಯರ ಬಾಂಧವ್ಯ ಬೆಸೆಯುವ ಹಬ್ಬ ರಕ್ಷಾ ಬಂಧನ ಸಹೋದರ-ಸಹೋದರಿಯ ಪ್ರೀತಿಯ ಪ್ರತೀಕವೇ ರಕ್ಷಾ ಬಂಧನ ಹಬ್ಬದ ವಿಶೇಷ. ರಕ್ಷಾ ಬಂಧನ ಹಬ್ಬದ ಸಂದರ್ಭದಲ್ಲಿ ಸಹೋದರಿಯರು ತನ್ನ ಸಹೋದರರಿಗೆ ಪ್ರೀತಿಯ ಶ್ರೀರಕ್ಷೆಯನ್ನು ಕಟ್ಟುವುದು ಸಂಪ್ರದಾಯವಾಗಿದೆ. ಈ ರಕ್ಷಾ ಬಂಧನ ಹಬ್ಬವನ್ನು ಯಶ್ ಮುದ್ದಾದ ಮುಕ್ಕಳು ಜೋರಾಗಿ ಆಚರಿಸಿದ್ದಾರೆ.

  • ಅಪ್ಪನ ಮೂಗು, ಮುಖಕ್ಕೆ ಪಂಚ್ ಮಾಡಿದ ಯಥರ್ವ್

    ಅಪ್ಪನ ಮೂಗು, ಮುಖಕ್ಕೆ ಪಂಚ್ ಮಾಡಿದ ಯಥರ್ವ್

    ಬೆಂಗಳೂರು: ನಟ ಯಶ್ ಮುದ್ದಾದ ಮಗನ ಜೊತೆಗೆ ಫೈಟ್ ಮಾಡುತ್ತಿರುವ ವೀಡಿಯೋವನ್ನು ಸ್ಯಾಂಡಲ್‍ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಯರ್ಥವ್ ಅಪ್ಪ ಯಶ್ ಮುಖಕ್ಕೆ ಪಂಚ್ ಮಾಡುತ್ತಾ ಅಪ್ಪನಿಗೆ ಮುದ್ದಾಗಿ ಅವಾಜ್ ಹಾಕಿದ್ದಾನೆ. ಯಶ್ ಮುಖ, ಮೂತಿ ನೋಡದೆ ಸರಿಯಾಗಿ ಪಂಚ್ ಕೊಡುತ್ತಿರುವ ಮಗನಿಗೆ, ನೀನು ಜಾಂಬಿಯಾ ಎಂದು ಯಶ್ ಕೇಳಿದ್ದಾರೆ. ಆಗ ಯರ್ಥವ್ ಮುದ್ದಾಗಿ ಏನು ಎಂದು ಕೇಳಿದಾ ಯಶ್ ನನಗೆ ನೋವಾಗುತ್ತಿದೆ ಎಂದು ಹೇಳಿದ್ದಾರೆ. ಆಗ ಮತ್ತೆ ಅಪ್ಪನ ಮುಖಕ್ಕೆ ಜೋರಾಗಿ ಗುದ್ದಿ ಯರ್ಥವ್ ಅಪ್ಪನ ಮೂಗನ್ನು ಕಚ್ಚಲು ಮುಂದಾಗಿದ್ದಾನೆ. ಈ ವೀಡಿಯೋವನ್ನು ರಾಧಿಕಾ ಪಂಡಿತ್ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡು ಅವನಿಗೆ ಬೇರೆ ಆಹಾರಗಳಿಗಿಂತ ಅವನ ಅಪ್ಪನ ಮೂಗೆ ತುಂಬಾ ರುಚಿ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಮಗನ ಫೋಟೋ ಶೇರ್ ಮಾಡಿ ಕ್ಯೂರಿಯಾಸಿಟಿ ಹುಟ್ಟಿಸಿದ ರಾಧಿಕಾ ಪಂಡಿತ್

     

    View this post on Instagram

     

    A post shared by Radhika Pandit (@iamradhikapandit)

    ಯಥರ್ವ್ ಅವರ ಅಪ್ಪನನ್ನು ರೇಗಿಸಿ ಸ್ಮೈಲ್ ಮಾಡುತ್ತಿದ್ದಾನೆ. ನನ್ನ ಮುಂದಿನ ಪೋಸ್ಟ್ ನಲ್ಲಿ ವೀಡಿಯೋ ಅಪ್‍ಲೋಡ್ ಮಾಡುತ್ತೇನೆ ಬರೆದುಕೊಂಡು ಮುದ್ದಾದ ಫೋಟೋವನ್ನು ಕೆಲವು ದಿನಗಳ ಹಿಂದೆ ರಾಧಿಕಾ ಪಂಡಿತ್ ಹಂಚಿಕೊಂಡಿದ್ದರು. ಹಾಗೇ ಅಭಿಮಾನಿಗಳಲ್ಲಿ ಕ್ಯೂರಿಯಾಸಿಟಿಯನ್ನು ಹುಟ್ಟಿಸಿದ್ದರು. ಇದೀಗ ವೀಡಿಯೋ ಹಂಚಿಕೊಂಡಿದ್ದು ಸಖತ್ ವೈರಲ್ ಆಗುತ್ತಿದೆ.

     

    View this post on Instagram

     

    A post shared by Radhika Pandit (@iamradhikapandit)

    ನಿಮ್ಮ ಮುದ್ದಾದ ಮಕ್ಕಳ ಜೊತೆಗೆ ಒಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬನ್ನಿ, ನಿಮ್ಮ ಮಗನ ನಗು ತುಂಬ ಮುದ್ದಾಗಿದೆ. ಅಪ್ಪ, ಮಗನ ಕುಸ್ತಿಯನ್ನು ಮೆಚ್ಚಿ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

  • ಲವ್ ಯೂ ಅಪ್ಪಾ – ಯಶ್‍ಗೆ ಐರಾ, ಯಥರ್ವ್ ವಿಶ್

    ಲವ್ ಯೂ ಅಪ್ಪಾ – ಯಶ್‍ಗೆ ಐರಾ, ಯಥರ್ವ್ ವಿಶ್

    ಬೆಂಗಳೂರು: ಇಂದು ವಿಶ್ವದ ಅಪ್ಪಂದಿರ ದಿನ. ಈ ವಿಶೇಷ ದಿನದಂದು ರಾಕಿಂಗ್ ಸ್ಟಾರ್ ಯಶ್‍ಗೆ ತಮ್ಮ ಮುದ್ದಾದ ಮಕ್ಕಳಾದ ಐರಾ ಹಾಗೂ ಯಥರ್ವ ವಿಶ್ ಮಾಡಿದ್ದಾರೆ.

    ಸದಾ ಸಿನಿಮಾ ಶೂಟಿಂಗ್ ಅಂತ ಬ್ಯೂಸಿಯಾಗಿರುವ ಯಶ್, ಬಿಡುವು ಸಿಕ್ಕಗಲೆಲ್ಲಾ ತಮ್ಮ ಪ್ರೀತಿಯ ಮಕ್ಕಳ ಜೊತೆ ಕಾಲ ಕಳೆಯುತ್ತಾರೆ. ಎಷ್ಟೇ ದೊಡ್ಡವರಾಗಿದ್ದರು, ತಮ್ಮ ಮಕ್ಕಳ ಜೊತೆ ಮಕ್ಕಳಂತೆ ಆಟವಾಡುವ ಯಶ್ ಫೋಟೋ, ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುತ್ತಲೇ ಇರುತ್ತದೆ.

    ಸದ್ಯ ರಾಧಿಕಾ ಪಂಡಿತ್‍ರವರು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಮಕ್ಕಳ ಜೊತೆ ಯಶ್ ಇರುವ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಒಂದು ಫೋಟೋದಲ್ಲಿ ಕೃಷ್ಣ ವೇಶ ಧರಿಸಿ ಐರಾ ಪ್ರೀತಿಯ ಅಪ್ಪನ ಕೆನ್ನೆಗೆ ಚುಂಬಿಸುತ್ತಿದ್ದರೆ, ಮತ್ತೊಂದು ಫೋಟೋದಲ್ಲಿ ಯಥರ್ವ ಅಪ್ಪನನ್ನು ದಿಟ್ಟಿಸಿ ನೋಡುತ್ತಾ, ಅಪ್ಪನ ಮುಖವನ್ನು ಸವರುತ್ತಿರುವುದನ್ನು ಕಾಣಬಹುದಾಗಿದೆ. ಮತ್ತೊಂದರಲ್ಲಿ ಫೋಟೋದಲ್ಲಿ ಯಶ್ ತಮ್ಮ ಮುದ್ದಾದ ಇಬ್ಬರು ಮಕ್ಕಳನ್ನು ಎರಡು ಕೈಗಳ ಮೇಲೆ ಎತ್ತಿಕೊಂಡಿರುವುದನ್ನು ನೋಡಬಹುದಾಗಿದೆ.

    ಈ ಫೋಟೋಗಳ ಜೊತೆಗೆ ರಾಧಿಕಾ ಪಂಡಿತ್, ಯಶ್ ಒಬ್ಬರು ಅದ್ಭುತ ಬಾಯ್‍ಫ್ರೆಂಡ್ ಹಾಗೂ ಉತ್ತಮ ಪತಿ ಕೂಡ. ಆದರೆ ಅವರಲ್ಲಿರುವ ಒಬ್ಬ ಒಳ್ಳೆಯ ತಂದೆಯನ್ನು ಕೂಡ ನೋಡಿದೆ. ಐರಾ, ಯಥರ್ವ್ ಲವ್ ಯೂ ಡಾಡಾ, ವಿಶ್ವದ ಎಲ್ಲ ಅದ್ಭುತ ತಂದೆಯಂದಿರಿಗೂ ಹ್ಯಾಪಿ ಫಾದರ್ಸ್ ಡೇ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

    ಒಟ್ಟಾರೆ ಯಶ್ ಒಬ್ಬ ಉತ್ತಮ ಫ್ಯಾಮಿಲಿ ಮ್ಯಾನ್ ಹಾಗೂ ಬೆಸ್ಟ್ ತಂದೆ ಎಂಬುವುದಕ್ಕೆ ವೈರಲ್ ಆಗುತ್ತಿರುವ ಈ ಫೋಟೋಗಳೇ ಸಾಕ್ಷಿ ಎಂದರೆ ತಪ್ಪಾಗಲಾರದು.

     

    View this post on Instagram

     

    A post shared by Radhika Pandit (@iamradhikapandit)

  • ಜೂನಿಯರ್ ಯಶ್‍ಗೆ ನಾಮಕರಣ ಸಂಭ್ರಮ

    ಜೂನಿಯರ್ ಯಶ್‍ಗೆ ನಾಮಕರಣ ಸಂಭ್ರಮ

    ಬೆಂಗಳೂರು: ಸ್ಯಾಂಡಲ್‍ವುಡ್‍ನ ರಾಕಿಂಗ್ ದಂಪತಿ ಯಶ್ ಮತ್ತು ರಾಧಿಕಾ ಪಂಡಿತ್ ತನ್ನ ಮಗನಿಗೆ ಬರೋಬ್ಬರಿ 10 ತಿಂಗಳ ಬಳಿಕ ಇದೀಗ ನಾಮಕರಣ ಮಾಡಿದ್ದಾರೆ.

    ಯಶ್ ಮತ್ತು ರಾಧಿಕಾ ತಮ್ಮ ಮುದ್ದು ಮಗನಿಗೆ ಯಥರ್ವ್ ಯಶ್ ಎಂದು ನಾಮಕರಣ ಮಾಡಿದ್ದಾರೆ. ನಾಮಕರಣ ಸಂಭ್ರಮದ ವಿಡಿಯೋವನ್ನು ಯಶ್ ಮತ್ತು ರಾಧಿಕಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನಾಮಕರಣದ ಕಾರ್ಯಕ್ರಮವನ್ನು ಯಶ್ ಸರಳವಾಗಿ ಆಚರಿಸಿದ್ದು, ಕಾರ್ಯಕ್ರಮದಲ್ಲಿ ಎರಡು ಕುಟುಂಬದರು ಮತ್ತು ಆಪ್ತರು ಮಾತ್ರ ಭಾಗಿಯಾಗಿದ್ದರು.

    ವಿಡಿಯೋ ಕೊನೆಯಲ್ಲಿ ಯಶ್ ಮಗಳು ಐರಾ ಸಹೋದರನ ಹೆಸರನ್ನು ಹೇಳಿದ್ದಾಳೆ. ಈ ವಿಡಿಯೋಗೆ ಯಶ್ “ನಮ್ಮನ್ನ ಸಂಪೂರ್ಣಗೊಳಿಸಿದವನು. ರಾರಾಜಿಸುತ ಬದುಕು ಮಗನೇ. ಹರಸಿ ಹಾರೈಸಿ” ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.

    ಕೆಲ ದಿನಗಳ ಹಿಂದೆ ನಟಿ ರಾಧಿಕಾ ಪಂಡಿತ್ ಕೊನೆಗೂ ಜೂನಿಯರ್‌ಗೆ ಹೆಸರು ಫಿಕ್ಸ್ ಆಗಿದ್ದು, ಶೀಘ್ರವೇ ನಾಮಕರಣ ಮಾಡಲಾಗುತ್ತದೆ ಎಂದು ಬರೆದುಕೊಂಡಿದ್ದರು.

    ಕಳೆದ ವರ್ಷದ ಅಕ್ಟೋಬರ್ 30ರಂದು ರಾಧಿಕಾ ಪಂಡಿತ್ ಫೋರ್ಟಿಸ್ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಯಶ್ ಮನೆಗೆ ಜೂನಿಯರ್ ಯಶ್ ಆಗಮಿಸಿ ಆರು ತಿಂಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಏಪ್ರಿಲ್ 30 ರಂದು ಯಶ್ ಮತ್ತು ರಾಧಿಕಾ ಅಭಿಮಾನಿಗಳಿಗೆ ಜೂನಿಯರ್ ರಾಜಾಹುಲಿಯ ದರ್ಶನ ಮಾಡಿಸಿದ್ದರು.