Tag: Yatharv

  • ಗಿಣಿಮರಿಗಳ ಜೊತೆಗೆ ಒಂದು ದಿನ ಕಳೆದ ‘ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ’

    ಗಿಣಿಮರಿಗಳ ಜೊತೆಗೆ ಒಂದು ದಿನ ಕಳೆದ ‘ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ’

    ಸಿನಿಮಾಗಳಿಗೆ ಎಷ್ಟು ಪ್ರಾಮುಖ್ಯತೆ ಕೊಡುತ್ತಾರೋ ಅಷ್ಟೇ ಕುಟುಂಬಕ್ಕೂ ಕ್ವಾಲಿಟಿ ಸಮಯ ಕೊಡುತ್ತಾರೆ ನಟ ಯಶ್. ಕೆಜಿಎಫ್ 2 ಸಿನಿಮಾ ರಿಲೀಸ್ ನಂತರ ಅವರು ಹೆಚ್ಚೆಚ್ಚು ಕುಟುಂಬದೊಂದಿಗೆ ಪ್ರವಾಸ ಮಾಡುತ್ತಿದ್ದಾರೆ. ಮೊನ್ನೆಯಷ್ಟೇ ಗೋವಾದಲ್ಲಿ ರಜಾ ದಿನಗಳನ್ನು ಕಳೆದಿದ್ದ ಯಶ್ ಮತ್ತು ರಾಧಿಕಾ ಪಂಡಿತ್, ಇದೀಗ ಮಕ್ಕಳೊಂದಿಗೆ ಪಕ್ಷಿಧಾಮಕ್ಕೆ ವಿಸಿಟ್ ನೀಡಿದ್ದಾರೆ.

    ಮಂಗಳವಾರ ಇಡೀ ದಿನ ಕನಕಪುರ ಸಮೀಪದ ಪಕ್ಷಿಧಾಮವೊಂದರಲ್ಲಿ ತಮ್ಮ ಮಕ್ಕಳು ಮತ್ತು ಪತ್ನಿಯೊಂದಿಗೆ ಸಮಯ ಕಳೆದಿರುವ ಯಶ್, ಅಲ್ಲಿನ ಪಕ್ಷಿಗಳೊಂದಿಗೆ ಆಟವಾಡಿದ್ದಾರೆ. ಅದರಲ್ಲೂ ಗಿಣಿಗಳ ಜೊತೆ ರಾಧಿಕಾ ಪಂಡಿತ್ ಮತ್ತು ಮಕ್ಕಳಾದ ಐರಾ ಮತ್ತು ಯಥರ್ವ್ ಆಟವಾಡಿದ್ದಾರೆ. ಗಿಣಿಗಳನ್ನು ಮೈಮೇಲೆ ಬಿಟ್ಟುಕೊಂಡು ನಲಿದಿದ್ದಾರೆ. ಇದನ್ನೂ ಓದಿ: ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾದ ಮೊದಲ ವಿಮರ್ಶೆ ಮಾಡಿದ ನಟ ರಮೇಶ್ ಅರವಿಂದ್

    ಒಂದು ಕಡೆ ಕುಟುಂಬಕ್ಕೆ ತಮ್ಮ ಸಮಯವನ್ನು ಯಶ್ ನೀಡುತ್ತಿದ್ದರೆ, ಮತ್ತೊಂದು ಕಡೆ ಹೊಸ ಸಿನಿಮಾಗಾಗಿಯೂ ಅವರು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಕೆಜಿಎಫ್ 2 ನಂತರ ಯಶ್ ಅವರಿಗೆ ಮಾರುಕಟ್ಟೆ ವಿಸ್ತಾರವಾಗಿರುವುದರಿಂದ ಅದೇ ಮಾದರಿಯ ಚಿತ್ರ ಮಾಡುವ ಜವಾಬ್ದಾರಿ ಕೂಡ ಅವರ ಹೆಗಲ ಮೇಲಿದೆ. ಹಾಗಾಗಿ ತುಂಬಾ ತಲೆಕೆಡಿಸಿಕೊಂಡು ಸ್ಕ್ರಿಪ್ಟ್ ಕೆಲಸ ಮಾಡುತ್ತಿದ್ದಾರೆ.

    ಯಶ್ ಅವರ ಮುಂದಿನ ಸಿನಿಮಾವನ್ನು ನರ್ತನ್ ಅವರು ನಿರ್ದೇಶನ ಮಾಡುತ್ತಿದ್ದು, ಈಗಾಗಲೇ ಕಥೆಯನ್ನು ಫೈನಲ್ ಮಾಡಲಾಗಿದೆ ಎನ್ನುವ ಮಾಹಿತಿ ಇದೆ. ಮೂರು ನಿರ್ಮಾಣ ಸಂಸ್ಥೆಗಳು ಯಶ್ ಸಿನಿಮಾವನ್ನು ತಯಾರಿಸಲು ಮುಂದೆ ಬಂದಿದ್ದು, ಯಾವ ನಿರ್ಮಾಣ ಸಂಸ್ಥೆಯು ಇವರ ಚಿತ್ರಕ್ಕೆ ಬಂಡವಾಳ ಹಾಕಲಿದೆ ಎನ್ನುವುದು ಸದ್ಯಕ್ಕೆ ಸಸ್ಪೆನ್ಸ್.

  • ಪತಿಗೆ ತಾನು ಇಟ್ಟಿರೋ ಹೆಸರನ್ನು ಮೊದಲ ಬಾರಿ ರಿವೀಲ್ ಮಾಡಿದ ರಾಧಿಕಾ

    ಪತಿಗೆ ತಾನು ಇಟ್ಟಿರೋ ಹೆಸರನ್ನು ಮೊದಲ ಬಾರಿ ರಿವೀಲ್ ಮಾಡಿದ ರಾಧಿಕಾ

    ಬೆಂಗಳೂರು: ಸ್ಯಾಂಡಲ್‍ವುಡ್ ಸ್ಟಾರ್ ಕಪಲ್ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅವರದ್ದು ಲವ್ ಮ್ಯಾರೇಜ್ ಎಂಬುದು ತಿಳಿದಿರುವ ವಿಚಾರ. ಇದೀಗ ತಾವು ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದ ಸಂದರ್ಭದಲ್ಲಿ ಯಶ್‍ಗೆ ತಾನು ಇಟ್ಟ ಹೆಸರನ್ನು ನಟಿ ರಾಧಿಕಾ ಮೊದಲ ಬಾರಿಗೆ ರಿವೀಲ್ ಮಾಡಿದ್ದಾರೆ.

    ಹೌದು. ಕೆಲ ದಿನಗಳ ಹಿಂದೆ ರೇಡಿಯೋ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಸಿಂಡ್ರೆಲ್ಲಾ ಈ ವಿಚಾರವನ್ನು ಬಾಯಿಬಿಟ್ಟಿದ್ದಾರೆ. ಆರ್‍ಜೆ ಜೊತೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಯಶ್‍ಗೆ ತಾನು ಪ್ರೀತಿಯಿಂದ ಇಟ್ಟ ಹೆಸರನ್ನು ನಟಿ ಬಹಿರಂಗಪಡಿಸಿದ್ದಾರೆ.

    ಯಶ್ ಪರಿಚಯವಾದಾಗಿಂದ ಅವರ ಹೆಸರನ್ನು ನನ್ನ ವಾಟ್ಸಾಪ್ ನಲ್ಲಿ ಬೇರೆ ರೀತಿಯಲ್ಲಿ ಸೇವ್ ಮಾಡಿಕೊಂಡಿದ್ದೆ. ಅಂದಿನಿಂದ ಇಂದಿನವರೆಗೂ ಅದೇ ಹೆಸರು ಸೇವ್ ಆಗಿದೆ. ನಾವಿಬ್ಬರೂ ಡೇಟ್ ಮಾಡುತ್ತಿದ್ದ ಸಂದರ್ಭದಲ್ಲಿ ಯಾರಿಗೂ ಗೊತ್ತಾಗಬಾರದೆಂದು ಅವರಿಗೆ ಪೆಟ್ ನೇಮ್ ಒಂದನ್ನು ಇಟ್ಟಿದ್ದೆ. ಈವಾಗಲೂ ಅದೇ ಹೆಸರು ನನ್ನ ಮೊಬೈಲ್ ನಲ್ಲಿ ಇದೆ ಎಂದರು. ಇದನ್ನೂ ಓದಿ: ಸಖತ್ ಸದ್ದು ಮಾಡುತ್ತಿದೆ ಜಡ್ಡುವಿನ ಪುಷ್ಟ ಲುಕ್

    ಹೀಗೆ ಮಾತನಾಡುತ್ತಾ ಆ ಹೆಸರನ್ನು ರಾಧಿಕಾ ರಿವೀಲ್ ಮಾಡಿದ್ದಾರೆ. ಮೊದಲ ಬಾರಿಗೆ ಇದನ್ನು ರಿವೀಲ್ ಮಾಡುತ್ತಿದ್ದೇನೆ ಎಂದು ಹೇಳುತ್ತಾ ‘ಡೊಲ್ಲಾ’ ಎಂದು ಹೆಸರಿಟ್ಟಿರುವುದಾಗಿ ಹೇಳಿ ನಕ್ಕರು. ಅಲ್ಲದೆ ಆ ಹೆಸರಿನ ಅರ್ಥವನ್ನು ಕೂಡ ತಿಳಿಸಿದ್ದಾರೆ. ಕೊಂಕಣಿಯಲ್ಲಿ ಡೊಲ್ಲ ಅಂದರೆ ಫ್ಯಾಟ್ ಎಂದರ್ಥ. ಹೀಗಾಗಿ ನಾನು ಆ ಹೆಸರಿಟ್ಟಿರುವುದಾಗಿ ಹೇಳುತ್ತಾ ರಾಧಿಕಾ ನಾಚಿಕೊಂಡಿದ್ದಾರೆ. ಸದ್ಯ ರಾಧಿಕಾ ಪತಿಗಿಟ್ಟ ಪೆಟ್ ನೇಮ್ ರಿವೀಲ್ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

    ರಾಧಿಕಾ ಪಂಡಿತ್ ಹಾಗೂ ಯಶ್ 2016ರ ಡಿಸೆಂಬರ್ 9 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸದ್ಯ ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. 2018 ಡಿಸೆಂಬರ್ ನಲ್ಲಿ ಐರಾ ಜನಿಸಿದರೆ, 2019 ರ ಅಕ್ಟೋಬರ್ ನಲ್ಲಿ ಯಥರ್ವ್ ಹುಟ್ಟಿದ್ದಾನೆ. ಈ ಸ್ಟಾರ್ ಜೋಡಿಗಳಂತೆ ಇವರ ಮಕ್ಕಳು ಸ್ಟಾರ್ ಆಗಿದ್ದು, ಇವರಿಬ್ಬರಿಗೂ ಅಭಿಮಾನಿ ಬಳಗವಿದೆ. ಸೋಷಿಯಲ್ ಮೀಡಿಯಾದಲ್ಲಿ ಯಶ್ ಮಕ್ಕಳು ಈಗಾಗಲೇ ಸೆಲೆಬ್ರಿಟಿ ಆಗಿದ್ದಾರೆ. ಐರಾ ಅಭಿಮಾನಿಗಳ ಪೇಜಿನಿಂದ ಇದೀಗ ಈ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. ಇದನ್ನೂ ಓದಿ: ಬ್ರೇಕಪ್ ವಿಚಾರವಾಗಿ ಕೊನೆಗೂ ಮೌನ ಮುರಿದ ಅರ್ಜುನ್ ಕಪೂರ್!

     

    View this post on Instagram

     

    A post shared by Ayra Yash ♥️ (@ay_ra_official)

  • ಬೇಬಿ ಹಾಡಿಗೆ ಹೆಜ್ಜೆ ಹಾಕಿದ ಯಥರ್ವ್, ಐರಾ- ವೀಡಿಯೋ ನೋಡಿ

    ಬೇಬಿ ಹಾಡಿಗೆ ಹೆಜ್ಜೆ ಹಾಕಿದ ಯಥರ್ವ್, ಐರಾ- ವೀಡಿಯೋ ನೋಡಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಾಧಿಕಾ ಪಂಡಿತ್ ಅವರ ಮುದ್ದು ಮಕ್ಕಳು ಗೂಗಲ್‍ಗೆ ಅವಾಜ್ ಹಾಕಿರುವ ವೀಡಿಯೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

    ಈ ವಾರವನ್ನು ನಾವು ಸಂಗೀತದೊಂದಿಗೆ ಆರಂಭಿಸೋಣ. ಕಳೆದ ಎರಡು ವರ್ಷದಿಂದ, ನಾನು ಪಣ ತೊಟ್ಟಿರುವ ಸಂಗೀತ ಎಂದು ಬರೆದುಕೊಂಡು ಮಕ್ಕಳು ಗೂಗಲ್‍ಗೆ ಅವಾಜ್ ಹಾಕುತ್ತಾ ಬೇಬಿ ಸಾಂಗ್ ಹಾಕಿ ಎಂದು ಹೇಳುತ್ತಾ ಕುಣಿದಿದ್ದಾರೆ. ಈ ವೀಡಿಯೋವನ್ನು ನಟಿ ತಮ್ಮ ಇನ್‍ಸ್ಟಾಗ್ರಾಮ್ ಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವೀಡಿಯೋ ಹಂಚಿಕೊಳ್ಳುತ್ತಿದ್ದಂತೆ ಮುದ್ದುಮಕ್ಕಳನ್ನು ನೋಡಿದ ಅಭಿಮಾನಿಗಳು ಮೆಚ್ಚುಗೆ ಸೂಚಿಸಿ ಕಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಒಗ್ಗಟ್ಟು ಇಲ್ಲದೆ 3 ಪಾಲಿಕೆಯಲ್ಲಿ ಸೋಲು – ಸಿದ್ದರಾಮಯ್ಯ ವಿರುದ್ಧ ಹೈಕಮಾಂಡ್‍ಗೆ ಡಿಕೆಶಿ ಚಾರ್ಜ್‍ಶೀಟ್

     

    View this post on Instagram

     

    A post shared by Radhika Pandit (@iamradhikapandit)

    ವೀಡಿಯೋದಲ್ಲಿ ಏನಿದೆ?
    ಏ ಗೂಗಲ್ ಪ್ಲೇ ಬೇಬಿ ಶಾರ್ಕ್ ಸಾಂಗ್ ಎಂದು ಯಥರ್ವ್ ಮೊದಲು ಹೇಳುತ್ತಾನೆ. ಅಲೆಕ್ಸಾಗೆ ಕೇಳಿಸುವುದಿಲ್ಲ. ನಂತರ ಯಥರ್ವ್ ಜೋರಾಗಿ ಕಿರುಚುತ್ತಾ ಗೂಗಲ್‍ಗೆ ಅವಾಜ್ ಹಾಕಿದ್ದಾನೆ. ಏ ಗೂಗಲ್ ಪ್ಲೇ ಬೇಬಿ ಶಾರ್ಕ್ ಸಾಂಗ್ ಎಂದು. ಆಗ ತಕ್ಷಣ ಬೇಬಿ ಸಾಂಗ್ ಪ್ಲೇ ಆಗುತ್ತಿದ್ದಂತೆ ಯಥರ್ವ್ ಕುಣಿದು ಕುಪ್ಪಳಿಸಿದ್ದಾನೆ. ಈ ಮಧ್ಯೆ ಯಥರ್ವ್ ಜೊತೆಗೆ ಐರಾ ಬಂದು ಡಾನ್ಸ್ ಮಾಡುವುದಕ್ಕೆ ಶರುಮಾಡಿದ್ದಾಳೆ, ಅಕ್ಕ-ತಮ್ಮ ಇಬ್ಬರು ಜೊತೆಯಾಗಿ ಮುದ್ದಾಗಿ ಹೆಜ್ಜೆ ಹಾಕಿದ್ದಾರೆ.

     

    View this post on Instagram

     

    A post shared by Radhika Pandit (@iamradhikapandit)

    ಸದ್ಯ ರಾಧಿಕಾ ಪಂಡಿತ್ ಸಿನಿಮಾದಿಂದ ದೂರ ಉಳಿದಿದ್ದು ಮಕ್ಕಳ ಲಾಲನೆ-ಪೋಷಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇತ್ತ ಸೋಶಿಯಲ್ ಮೀಡಿಯಾದಲ್ಲಿ ಕೂಡ ಸಖತ್ ಆ್ಯಕ್ಟಿವ್ ಆಗಿರುತ್ತಾರೆ. ತಮ್ಮ ಮಕ್ಕಳ ಮುದ್ದಾದ ವೀಡಿಯೋವನ್ನು ಆಗಾಗ ಹಂಚಿಕೊಳ್ಳುವ ಮೂಲಕವಾಗಿ ಅಭಿಮಾನಿಗಳ ಜೊತೆಗೆ ನಿರಂತರ ಸಂಪರ್ಕದಲ್ಲಿ ಇರುತ್ತಾರೆ.

  • ಅಬ್ಬಾ ಬಿಸಿಲು- ಸ್ವಿಮ್ಮಿಂಗ್ ಪೂಲ್‍ನಲ್ಲಿ ಐರಾ, ಯಥರ್ವ್

    ಅಬ್ಬಾ ಬಿಸಿಲು- ಸ್ವಿಮ್ಮಿಂಗ್ ಪೂಲ್‍ನಲ್ಲಿ ಐರಾ, ಯಥರ್ವ್

    ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟಿವ್ ಆಗಿರುವ ಸ್ಯಾಂಡಲ್‍ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್, ತಮ್ಮ ಮಕ್ಕಳ ಫೋಟೋ, ವೀಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಅದೇ ರೀತಿ ಇದೀಗ ಬೇಸಿಗೆಯ ಸಂದರ್ಭದಲ್ಲಿ ಐರಾ ಹಾಗೂ ಯಥರ್ವ್ ಸ್ವಿಮ್ಮಿಂಗ್ ಪೂಲ್ ಬಳಿ ಪೋಸ್ ನೀಡಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Radhika Pandit (@iamradhikapandit)

    ಐರಾ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಸ್ಟೈಲಾಗಿ ನಿಂತಿರುವ ಫೋಟೋ ಹಾಗೂ ಯಥರ್ವ್ ಬರಿ ಮೈಯ್ಯಲ್ಲಿ ಸ್ವಿಮ್ಮಿಂಗ್ ಪೂಲ್ ಕಟ್ಟೆಯ ಮೇಲೆ ಕುಳಿತಿರುವ ಫೋಟೋಗಳನ್ನು ತಮ್ಮ ಇನ್‍ಸ್ಟಾ ಸ್ಟೋರಿಯಲ್ಲಿ ಹಾಕಿದ್ದಾರೆ. ಬೇಸಿಗೆ ಆರಂಭವಾಗಿದ್ದು, ವಾತಾವರಣ ಸಖತ್ ಹಾಟ್ ಆಗಿದೆ. ಮಧ್ಯಾಹ್ನದ ನೆತ್ತಿ ಸುಡುವ ಬಿಸಿಲಿಗೆ ಬೇಸತ್ತಿರುವ ಜನ, ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಅದೇ ರೀತಿ ಐರಾ ಹಾಗೂ ಯಥರ್ವ್ ಸಹ ಸ್ವಿಮ್ಮಿಂಗ್ ಪೂಲ್‍ನಲ್ಲಿ ಕಾಲ ಕಳೆದಿದ್ದಾರೆ.

    ರಾಧಿಕಾ ಪಂಡಿತ್ ತಮ್ಮ ಇನ್‍ಸ್ಟಾಗ್ರಾಮ್ ಮೂಲಕ ಅಪ್‍ಡೇಟ್ಸ್ ಗಳನ್ನು ನೀಡುತ್ತಲೇ ಇದ್ದು, ಮಕ್ಕಳ ಫೋಟೋಗಳನ್ನು ಹೆಚ್ಚು ಹಂಚಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು ಸಹ ನೆಚ್ಚಿನ ನಟ, ನಟಿಯ ಮಕ್ಕಳ ಫೋಟೋ ನೋಡಿ ಸಖತ್ ಖುಷಿ ಪಡುತ್ತಿದ್ದಾರೆ, ಲೈಕ್ ಮಾಡುತ್ತಿದ್ದಾರೆ.

    ವಿವಾಹದ ಬಳಿಕ ನಟನೆಯಿಂದ ಸ್ವಲ್ಪ ದೂರವೇ ಉಳಿದಿರುವ ರಾಧಿಕಾ ಪಂಡಿತ್, ಮಕ್ಕಳ ಪಾಲನೆ, ಪೋಷಣೆಯಲ್ಲಿ ಬ್ಯುಸಿಯಾಗಿದ್ದಾರೆ. ಪೂರ್ತಿ ಸಮಯವನ್ನು ಕುಟುಂಬಕ್ಕಾಗಿ ಮೀಸಲಿರಿಸಿದ್ದಾರೆ. ಇನ್ನೊಂದೆಡೆ ಅವರ ಅಭಿಮಾನಿಗಳು ರಾಧಿಕಾ ಪಂಡಿತ್ ಅವರನ್ನು ತೆರೆಯ ಮೇಲೆ ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ. ಯಶ್ ಸಹ ತಮ್ಮ ಬ್ಯುಸಿ ಶೆಡ್ಯೂಲ್ ಮಧ್ಯೆ ಕುಟುಂಬಕ್ಕೆ ಸಮಯ ನೀಡುತ್ತಿದ್ದಾರೆ. ಮಕ್ಕಳು ಹಾಗೂ ಕುಟುಂಬದೊಂದಿಗೆ ಕಾಲ ಕಳೆಯುತ್ತಾರೆ.

     

    View this post on Instagram

     

    A post shared by Radhika Pandit (@iamradhikapandit)

    ಇದೀಗ ಕೆಜಿಎಫ್-2 ಕೆಲಸಗಳಲ್ಲಿ ಯಶ್ ತಮ್ಮನ್ನು ತೊಡಗಿಸಿಕೊಂಡಿದ್ದು, ಸಿನಿಮಾ ಜುಲೈ 16ಕ್ಕೆ ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡ ಈಗಾಗಲೇ ತಿಳಿಸಿದೆ. ಕೆಜಿಎಫ್-2 ರಿಲೀಸ್‍ಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದು, ನೆಚ್ಚಿನ ನಟನ ಸಿನಿಮಾ ಯಾವಾಗ ಬಿಡುಗಡೆಯಾಗುತ್ತೋ ಎಂದು ಎದುರು ನೋಡುತ್ತಿದ್ದಾರೆ.

  • ಮುದ್ದಿನ ಮಗನೊಂದಿಗೆ ಆಟವಾಡುತ್ತ ಕಾಲ ಕಳೆದ ರಾಕಿ ಭಾಯ್

    ಮುದ್ದಿನ ಮಗನೊಂದಿಗೆ ಆಟವಾಡುತ್ತ ಕಾಲ ಕಳೆದ ರಾಕಿ ಭಾಯ್

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಸಮಯ ಸಿಕ್ಕಾಗಲೆಲ್ಲ ತಮ್ಮ ಮುದ್ದಿನ ಮಕ್ಕಳೊಂದಿಗೆ, ಕುಟುಂಬದೊಂದಿಗೆ ಕಾಲ ಕಳೆಯುವುದು ತಿಳಿದೇ ಇದೆ. ಅದೇ ರೀತಿ ಇದೀಗ ಮಗ ಯಥರ್ವ್‍ನೊಂದಿಗೆ ಆಟವಾಡಿದ್ದಾರೆ.

    ಈ ವೀಡಿಯೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಯಶ್, ಅಪಾಪೀನ್… ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಯಶ್ ಕೆನ್ನೆಗಳನ್ನು ಉಬ್ಬಿಸಿಕೊಂಡರೆ, ಯಥರ್ವ್ ಅಪ್ಪನ ಕೆನ್ನೆಗೆ ಬಾರಿಸಿದ್ದಾನೆ. ಹೀಗೆ ಆಟವಾಡಿರುವ 46 ಸೆಕೆಂಡ್‍ನ ವೀಡಿಯೋವನ್ನು ಹಾಕಿದ್ದಾರೆ. ಇದರಲ್ಲಿ ಜೂನಿಯರ್ ಯಶ್ ಸೊಗಸಾಗಿ ಮಾತನಾಡಿದ್ದು, ಕ್ಯೂಟ್ ಆಗಿ ಆ್ಯಕ್ಷನ್ ಸಹ ಮಾಡಿದ್ದಾನೆ.

    ಏರೋಪ್ಲೇನ್ ಸೌಂಡ್ ತೋರಿಸಿದ್ದು, ಅಪಪೀ ಎಂದು ಸೌಂಡ್ ಮಾಡಿದ್ದು, ಬಳಿಕ ಸೂಯ್……..ಎಂದು ಹೇಳಿದ್ದಾನೆ. ಆಗ ಯಶ್ ಓ ಏರೋಪ್ಲೇನ್, ಓಕೆ ಮಗನೆ ಎಂದು ಮುತ್ತು ನೀಡಿದ್ದಾರೆ. ಹೀಗೆ ಮಗನ ಕೈಲಿ ಕೆನ್ನೆಗೆ ಬಾರಿಸಿಕೊಂಡು ರಾಕಿ ಭಾಯ್ ಸಂತಸಪಟ್ಟಿದ್ದಾರೆ. ತಂದೆ ಮಗ ಇಬ್ಬರೂ ನಕ್ಕು ಸಖತ್ ಎಂಜಾಯ್ ಮಾಡಿದ್ದಾರೆ.

     

    View this post on Instagram

     

    A post shared by Yash (@thenameisyash)

    ಸ್ಯಾಂಡಲ್‍ವುಡ್ ಬಹುನಿರೀಕ್ಷಿತ ಕೆಜಿಎಫ್-2 ಸಿನಿಮಾ ಬಿಡುಗಡೆ ದಿನಾಂಕ ಹತ್ತಿರವಾಗುತ್ತಿದ್ದು, ಜುಲೈ 16ರಂದು ಚಿತ್ರ ಬಿಡುಗಡೆಯಾಗಲಿದೆ. ಈ ಕ್ಷಣಕ್ಕಾಗಿ ರಾಕಿ ಭಾಯ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇತ್ತೀಚೆಗಷ್ಟೇ ತೆಲುಗಿನ ವಿತರಣೆ ಹಕ್ಕು ಭಾರೀ ಮೊತ್ತಕ್ಕೆ ಮಾರಾಟವಾಗಿದೆ. ತೆಲುಗಿನ ಖ್ಯಾತ ನಿರ್ಮಾಪಕ ದಿಲ್ ರಾಜು ಬರೋಬ್ಬರಿ 65 ಕೋಟಿ ರೂ.ಗೆ ಕೆಜಿಎಫ್-2 ಸಿನಿಮಾ ಬಿಡುಗಡೆ ರೈಟ್ಸ್ ನನ್ನು ತಮ್ಮದಾಗಿಸಿಕೊಂಡಿದ್ದಾರೆ.

    ನಿರ್ಮಾಪಕ ವಿಜಯ್ ಕಿರಂಗದೂರು 70 ಕೋಟಿ ರೂ. ಬೇಡಿಕೆ ಇಟ್ಟಿದ್ದನ್ನು ನೋಡಿ ಹಲವು ನಿರ್ಮಾಪಕರು ಅಚ್ಚರಿಗೊಂಡು ಹಿಂದೆ ಸರಿದಿದ್ದರು. ಟಾಲಿವುಡ್‍ನ ಖ್ಯಾತ ನಿರ್ಮಾಪಕ ದಿಲ್ ರಾಜು, ತೆಲಂಗಾಣ ಮತ್ತು ಆಂಧ್ರಪ್ರದೇಶ ಸೇರಿ ಎರಡು ತೆಲುಗು ರಾಜ್ಯಗಳಲ್ಲೂ ಕೆಜಿಎಫ್-2 ಸಿನಿಮಾ ಬಿಡುಗಡೆಯ ಹಕ್ಕನ್ನು 65 ಕೋಟಿ ರೂ.ಗೆ ಮಾತನಾಡಿ ಖರೀದಿಸುವ ಮೂಲಕ ಎಲ್ಲಾ ನಿರ್ಮಾಪಕರು ಗಪ್-ಚುಪ್‍ಗೊಳ್ಳುವಂತೆ ಮಾಡಿದ್ದಾರೆ.

  • ವೈರಲ್ ಆಯ್ತು ಯಶ್, ಯಥರ್ವ್ ಫೋಟೋ

    ವೈರಲ್ ಆಯ್ತು ಯಶ್, ಯಥರ್ವ್ ಫೋಟೋ

    ಬೆಂಗಳೂರು : ಸ್ಯಾಂಡಲ್‍ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಮಗ ಯಥರ್ವ ಜೊತೆ ಇರುವ ಫೋಟೋವೊಂದನ್ನು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಈ ಫೋಟೋ ಇದೀಗ ಎಲ್ಲೆಡೆ ಧೂಳ್ ಎಬ್ಬಿಸುತ್ತಿದೆ.

     

    View this post on Instagram

     

    A post shared by Yash (@thenameisyash)

    ಇತ್ತೀಚೆಗಷ್ಟೇ ರಾಕಿಂಗ್ ಸ್ಟಾರ್ ಯಶ್ ಕುಟುಂಬ ಸಮೇತ ಐಲ್ಯಾಂಡ್ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಬೇಬಿ ಶಾರ್ಕ್ ಗಳನ್ನು ನೋಡಲು ಭೇಟಿ ನೀಡಿದ್ದಾಗ ಮಗ ಯಥರ್ವ್ ಜೊತೆ ಯಶ್ ಫೋಟೋ ಕ್ಲಿಕ್ಕಿಸಿಕೊಂಡಿದ್ದರು.

     

    View this post on Instagram

     

    A post shared by Yash (@thenameisyash)

    ಮಾಲ್ಡೀವ್ಸ್ ಟ್ರಿಪ್‍ಗೆ ತೆರಳಿದ್ದ ವೇಳೆ ಯಶ್ ಮಗ ಯಥರ್ವ್ ಯಶ್‍ನನ್ನು ತಮ್ಮ ಕೈ ಮೇಲೆ ಎತ್ತಿಕೊಂಡಿದ್ದು, ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಇನ್ನೂ ಫ್ಯಾಮಿಲಿ ಜೊತೆ ಟ್ರಿಪ್ ಫುಲ್ ಎಂಜಾಯ್ ಮಾಡಿದ್ದ ಯಶ್, ಕಳೆದ ವಾರ ಬೆಂಗಳೂರಿಗೆ ಮರಳಿದ್ದಾರೆ. ಪ್ರವಾಸದ ವೇಳೆ ತೆಗೆದುಕೊಂಡಿದ್ದ ಮಗನೊಂದಿಗಿನ ಫೋಟೋವನ್ನು ಜನವರಿ 27ರಂದು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲೂ ವಿಶೇಷವೆನೆಂದರೆ ಯಶ್ ಕ್ಯಾಪ್ಷನ್ ಎಲ್ಲರ ಗಮನ ಸೆಳೆಯುತ್ತಿದೆ.

     

    View this post on Instagram

     

    A post shared by Yash (@thenameisyash)

    ಹೌದು.. ಬೇಬಿ ಶಾರ್ಕ್ ಡು..ಡು..ಡು ಜೊತೆಗೆ ಡಡ್ಡಾ ಶಾರ್ಕ್ ಡು..ಡು..ಡು ಎಂಬ ಪ್ರಾಸ ಪದಗಳೊಂದಿಗೆ ಕ್ಯಾಪ್ಷನ್ ಹಾಕಿ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

    ಅಷ್ಟೇ ಅಲ್ಲದೆ ಯಶ್ ಪತ್ನಿ ರಾಧಿಕಾ ಪಂಡಿತ್ ಜೊತೆ ತಂಗಿದ್ದ ರೆಸಾರ್ಟ್ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಫ್ಯಾಮಿಲಿ ಹಾಲಿಡೇ ಬಹಳ ಮುಖ್ಯ. ಇದು ನಮ್ಮನ್ನು ಪುನರ್ ಯೌವನಗೊಳಿಸುತ್ತದೆ ಎಂದು ರಾಧಿಕಾ ಪಂಡಿತ್ ಹೇಳಿಕೊಂಡಿದ್ದಾರೆ.

     

    View this post on Instagram

     

    A post shared by Yash (@thenameisyash)

    ಸದ್ಯ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಿಗ್ ಬಜೆಟ್ ಚಿತ್ರ ಕೆಜಿಎಫ್-2 ಸಿನಿಮಾ ಬಿಡುಗಡೆಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ, ಈ ಚಿತ್ರಕ್ಕೆ ನಿರ್ದೇಶಕ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳಿದ್ದು, ಹೊಂಬಾಳೆ ಬ್ಯಾನರ್ ಆಡಿ ಚಿತ್ರವನ್ನು ನಿರ್ಮಿಸಲಾಗಿದೆ. ಈ ವರ್ಷದ ಕೊನೆಯಲ್ಲಿ ಚಿತ್ರ ಎಲ್ಲ ಥಿಯೇಟರ್‍ಗಳ ಸ್ಕ್ರೀನ್ ಮೇಲೆ ಬರಲಿದೆ ಎನ್ನಲಾಗ್ತಿದೆ.

  • ಐರಾ, ಯಥರ್ವ್ ತುಂಟಾಟದ ಫೋಟೋ ಮೂಲಕ ಹೊಸ ವರ್ಷಕ್ಕೆ ಶುಭ ಕೋರಿದ ರಾಧಿಕಾ

    ಐರಾ, ಯಥರ್ವ್ ತುಂಟಾಟದ ಫೋಟೋ ಮೂಲಕ ಹೊಸ ವರ್ಷಕ್ಕೆ ಶುಭ ಕೋರಿದ ರಾಧಿಕಾ

    ಬೆಂಗಳೂರು: ಸ್ಯಾಂಡಲ್‍ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಹೊಸ ವರ್ಷಕ್ಕೆ ವಿಭಿನ್ನವಾಗಿ ಶುಭ ಕೋರಿದ್ದು, ಐರಾ, ಯಥರ್ವ್ ತುಂಟಾಟದ ಕ್ಯೂಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

    ಇನ್‍ಸ್ಟಾಗ್ರಾಮ್‍ನಲ್ಲಿ ಇಬ್ಬರ ಫೋಟೋಗಳನ್ನು ಹಂಚಿಕೊಂಡಿದ್ದು, ಲವ್, ಫನ್ ಜೊತೆಗೆ ಸ್ವಲ್ಪ ತುಂಟಾಟವೂ ಕೂಡಿರಲಿ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಅದ್ಭುತ ವರ್ಷಕ್ಕೆ ನಾವು ಕಾಲಿಡುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳು ಹಾಗೂ ಸಿನಿ ಪ್ರಿಯರಿಗೆ ನ್ಯೂ ಇಯರ್ ವಿಶ್ ಮಾಡಿದ್ದಾರೆ.

     

    View this post on Instagram

     

    A post shared by Radhika Pandit (@iamradhikapandit)

    ಡಿಸೆಂಬರ್ 9ರಂದು ತಮ್ಮ ನಾಲ್ಕನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿರುವ ರಾಕಿಂಗ್ ದಂಪತಿ, ವಾರ್ಷಿಕೋತ್ಸವ ಸಂಭ್ರಮದ ಫೋಟೋವನ್ನು ಹಂಚಿಕೊಂಡು ‘ಡಿಯರ್ ಹಸ್ಬೆಂಡ್ ಥ್ಯಾಂಕ್ ಯೂ’ ಎಂದು ಬರೆದುಕೊಂಡಿದ್ದರು. ಹೀಗೆ ಸಿಂಪಲ್ ಆಗಿ ಆ್ಯನಿವರ್ಸರಿ ಆಚರಿಸಿಕೊಂಡಿದ್ದರು. ಇದೀಗ ಹೊಸ ವರ್ಷಕ್ಕೆ ತಮ್ಮ ಇಬ್ಬರು ಮಕ್ಕಳ ಫೋಟೋವನ್ನು ಪೋಸ್ಟ್ ಮಾಡಿ ಅರ್ಥಗರ್ಭಿತ ಸಾಲುಗಳ ಮೂಲಕ ರಾಧಿಕಾ ಪಂಡಿತ್ ವಿಶ್ ಮಾಡಿದ್ದಾರೆ.

    ಇತ್ತೀಚೆಗಷ್ಟೇ ಯಥರ್ವ್ ಮೊದಲ ವರ್ಷದ ಹುಟ್ಟುಹಬ್ಬವನ್ನು ಸಹ ಹಡಗಿನಲ್ಲಿ ಅದ್ಧೂರಿಯಾಗಿದ್ದ ಆಚರಿಸಲಾಗಿತ್ತು. ಈ ಕುರಿತು ವಿಡಿಯೋವನ್ನು ಸಹ ಯಶ್ ಹಂಚಿಕೊಂಡಿದ್ದರು. ಹೀಗೆ ದಂಪತಿ ಇಬ್ಬರು ಮಕ್ಕಳೊಂದಿಗೆ ಸುಖಕರ ಸಂಸಾರ ನಡೆಸುತ್ತಿದ್ದು, ಬಿಡುವಿದ್ದಾಗಲೆಲ್ಲ ಯಶ್ ಕುಟುಂಬ ಹಾಗೂ ಮಕ್ಕಳೊಂದಿಗೆ ಕಾಲ ಕಳೆಯುತ್ತಿರುತ್ತಾರೆ. ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ಸಹ ಯಶ್ ತಮ್ಮ ಮಕ್ಕಳೊಂದಿಗೆ ಸುಂದರ ಕ್ಷಣಗಳನ್ನು ಕಳೆದಿದ್ದಾರೆ.

     

    View this post on Instagram

     

    A post shared by Radhika Pandit (@iamradhikapandit)

  • ಹಡಗಿನಲ್ಲಿ ‘ಯಥರ್ವ್’ ಸಂಭ್ರಮ- ಗೋವಾ ಬೀಚ್‍ನಲ್ಲಿ ಜೂ.ರಾಖಿ ಭಾಯ್ ಕಲರವ

    ಹಡಗಿನಲ್ಲಿ ‘ಯಥರ್ವ್’ ಸಂಭ್ರಮ- ಗೋವಾ ಬೀಚ್‍ನಲ್ಲಿ ಜೂ.ರಾಖಿ ಭಾಯ್ ಕಲರವ

    ಬೆಂಗಳೂರು: ಮನೆಯಲ್ಲಿ ಸಿಂಪಲ್ಲಾಗಿ ಯಥರ್ವ್ ಹುಟ್ಟುಹಬ್ಬ ಆಚರಿಸಿದರೂ ಬಳಿಕ ತುಂಬಾ ವಿಷೇಶವಾಗಿ ಹಾಗೂ ವಿಭಿನ್ನವಾಗಿ ತಮ್ಮದೇ ಶೈಲಿಯಲ್ಲಿ ಯಶ್ ಕುಟುಂಬ ಆಚರಿಸಿದ್ದು, ಗೋವಾ ಬೀಚ್‍ನಲ್ಲಿ ಹಡಗಿನಲ್ಲಿ ಅದ್ಧೂರಿಯಾಗಿ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ.

    ಈ ವಿಡಿಯೋವನ್ನು ನಟಿ ರಾಧಿಕಾ ಪಂಡಿತ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ತುಂಬಾ ರಿಚ್ ಆಗಿ ಆಚರಿಸಿರುವುದನ್ನು ನೋಡಬಹುದಾಗಿದೆ. ಈ ಸಂಭ್ರಮಾಚರಣೆಯಲ್ಲಿ ಕೇವಲ ನಾಲ್ಕೈದು ಮಂದಿ ಕುಟುಂಬಸ್ಥರು ಮಾತ್ರ ಭಾಗವಹಿಸಿದ್ದು, ಗೋವಾದ ಬೀಚ್‍ನಲ್ಲಿ ಬೃಹತ್ ಹಡಗಿನಲ್ಲಿ ಆನಂದಿಸಿ, ಕೇಕ್ ಕಟ್ ಮಾಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ತಮ್ಮ ಇಬ್ಬರು ಮಕ್ಕಳನ್ನು ಎತ್ತಿಕೊಂಡು ಸಂಭ್ರಮಿಸಿದ್ದಾರೆ.

    ರಾಧಿಕಾ ಪಂಡಿತ್ ಡಿಯೋ ಪೋಸ್ಟ್ ಮಾಡಿ ಸಂಭ್ರಮ ಹಂಚಿಕೊಂಡಿದ್ದು, ನೀನು ಈ ಕೇಕ್‍ನ ಫ್ಲೇವರ್‍ನ್ನು ನೆನಪಿಟ್ಟುಕೊಳ್ಳುವುದಿಲ್ಲ, ಈ ದಿನ ಏಕೆ ವಿಶೇಷ ಎಂದು ಸಹ ನಿನಗೆ ತಿಳಿಯುವುದಿಲ್ಲ. ಆದರೆ ಹೆತ್ತವರಾದ ನಮಗೆ ಜೀವನದಲ್ಲಿ ಆಚರಿಸಬೇಕಾದ ಸಂಭ್ರಮವಾಗಿದೆ. ಇಂತಹ ಅದ್ಭುತ ಸಂತೋಷ ಉಂಟಾಗಿ ಇಂದಿಗೆ ಒಂದು ವರ್ಷ ಕಳೆದಿದೆ. ಹ್ಯಾಪಿ ಬರ್ತ್ ಡೇ ಎಂದು ಬರೆದು ಹಾರ್ಟ್ ಸಿಂಬಲ್ ಮೂಲಕ ತಮ್ಮ ಮಗನಿಗೆ ರಾಧಿಕಾ ಮತ್ತೊಮ್ಮೆ ಶುಭಾಶಯ ತಿಳಿಸಿದ್ದಾರೆ.

    ಹಡಗಿನಲ್ಲಿ ಸಮುದ್ರದ ಮಧ್ಯೆ ತೆರಳಿ ಜಾಲಿ ರೈಡ್ ಮೂಲಕ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಇದರಲ್ಲಿ ಕುಟುಂಬಸ್ಥರು ಹಾಗೂ ಕೆಲ ಸ್ನೇಹಿತರು ಮಾತ್ರ ಭಾಗವಹಿಸಿದ್ದು, ಡ್ರೋನ್ ಬಳಸಿ ರಿಚ್ ಆಗಿ ವಿಡಿಯೋ ಮಾಡಿಸಲಾಗಿದೆ. ಈ ವಿಡಿಯೋದ ತುಣುಕನ್ನು ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅವರ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದಾರೆ.

    ಸಮುದ್ರ, ಬೀಚ್ ಎಂದರೆ ರಾಧಿಕಾ ಪಂಡಿತ್ ಅವರಿಗೆ ತುಂಬಾ ಇಷ್ಟ ಎಂದು ಈ ಹಿಂದೆ ರಾಖಿ ಭಾಯ್ ತಿಳಿಸಿದ್ದಾರೆ. ಹೀಗಾಗಿ ರಾಧಿಕಾ ಇಷ್ಟದಂತೆಯೇ ಗೋವಾದಲ್ಲೇ ಹುಟ್ಟುಹಬ್ಬ ಆಚರಿಸಿದ್ದಾರೆ. ಅಲ್ಲದೆ ಯಾಶ್ ಹಾಗೂ ರಾಧಿಕಾ ಪಂಡಿತ್ ಅವರ ನಿಶ್ಚಿತಾರ್ಥ ಸಹ ಗೋವಾದಲ್ಲೇ ನಡೆದಿತ್ತು. ಮ್ಯೂಸಿಕ್ ಬೀಟ್ ಜೊತೆಗೆ ಹಡಗಿನಲ್ಲಿ ಕಾಲ ಕಳೆದ ರಿಚ್ ವಿಡಿಯೋವನ್ನು ರಾಧಿಕಾ ಪಂಡಿತ್ ಹಂಚಿಕೊಂಡಿದ್ದಾರೆ. ಇದನ್ನು ಕಂಡ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

  • ತಮ್ಮನಿಗೆ ಟೀಚರ್ ಆದ ಐರಾ – ವಿಡಿಯೋ ನೋಡಿ

    ತಮ್ಮನಿಗೆ ಟೀಚರ್ ಆದ ಐರಾ – ವಿಡಿಯೋ ನೋಡಿ

    ಬೆಂಗಳೂರು: ನಟಿ ರಾಧಿಕಾ ಪಂಡಿತ್ ಸದಾ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, ಆಗಾಗ ತಮ್ಮ ಮಕ್ಕಳ ಫೋಟೋ ಮತ್ತು ವಿಡಿಯೋಗಳನ್ನು ಅಭಿಮಾನಿಗಳು ಜೊತೆ ಶೇರ್ ಮಾಡುತ್ತಿರುತ್ತಾರೆ. ಇದೀಗ ತಮ್ಮ ಮಕ್ಕಳು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ:  ಸೆಲ್ಫಿಗಾಗಿ ಪರದಾಡಿದ ರಾಧಿಕಾ- ಬೇಸರಗೊಂಡು ವಿಡಿಯೋ ಮಾಡಿದ ಯಶ್, ಐರಾ

    ನಟಿ ರಾಧಿಕಾ ಪಂಡಿತ್ ಸದ್ಯಕ್ಕೆ ತಮ್ಮ ಇಬ್ಬರು ಮುದ್ದು ಮಕ್ಕಳ ಪೋಷಣೆಯಲ್ಲಿ ಬ್ಯೂಸಿಯಾಗಿದ್ದಾರೆ. ಇದೀಗ ತಮ್ಮ ಮಗ ಯಥರ್ವ್  ನ ವಿಡಿಯೋವೊಂದನ್ನು ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    ಮೊದಲಿಗೆ ಯಥರ್ವ್ ಅಪ್ಪ ಯಶ್ ಮತ್ತು ಅಮ್ಮ ರಾಧಿಕಾ ಫೋಟೋ ಮುಂದೆ ಕುಳಿತಿದ್ದು, ಇಬ್ಬರನ್ನು ಗುರುತಿಸುವ ಪ್ರಯತ್ನ ಮಾಡುತ್ತಿದ್ದನು. ಈ ಮಧ್ಯೆ ಸಹೋದರಿ ಐರಾ ಬಂದು ತನ್ನ ಮುದ್ದು ತಮ್ಮನಿಗೆ ರಾಧಿಕಾ ಫೋಟೋ ತೋರಿಸಿ ಇದು ಅಮ್ಮ ಎಂದು ಹೇಳಿಕೊಟ್ಟಿದ್ದಾಳೆ. ಈ ವಿಡಿಯೋವನ್ನು ರಾಧಿಕಾ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.

    ಅಲ್ಲದೇ “ವಿದ್ಯಾರ್ಥಿ ಟೀಚರ್ ಆದಾಗ, ನನ್ನ ಕೆಲಸ ಮುಗಿದಿದೆ” ಎಂದು ಬರೆದುಕೊಂಡಿದ್ದಾರೆ. ಅಂದರೆ ಈ ಹಿಂದೆ ರಾಧಿಕಾ ತಮ್ಮ ಮಗಳು ಐರಾಗೆ ಯಶ್ ಮತ್ತು ತಮ್ಮ ಜೋಡಿ ಫೋಟೋವನ್ನು ತೋರಿಸಿ ಅಪ್ಪ, ಅಮ್ಮನ ಗುರುತಿಸುವಂತೆ ಹೇಳಿಕೊಟ್ಟಿದ್ದರು. ಆಗ ಐರಾ ವಿದ್ಯಾರ್ಥಿನಿಯಾಗಿದ್ದಳು. ಈಗ ತನ್ನ ಸಹೋದರ ಯಥರ್ವ್ ನಿಗೆ ಟೀಚರ್ ಆಗಿ ಅಪ್ಪ-ಅಮ್ಮ ಫೋಟೋ ತೋರಿಸಿ ಅಮ್ಮ ಹೇಳಿದ ರೀತಿಯೇ ಹೇಳಿಕೊಟ್ಟಿದ್ದಾಳೆ.

    ಇತ್ತೀಚೆಗೆಷ್ಟೆ ರಾಧಿಕಾ ಒಳ್ಳೆಯ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಪರಾಡಿದ್ದರು. ರಾಧಿಕಾ ಆ ಕಡೆ ಈ ಕಡೆ ಕುಳಿತು ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಪತಿ ಯಶ್ ಹಾಗೂ ಮಗಳು ಐರಾ ಜೊತೆಗೋಡಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದರು. ಈ ವಿಡಿಯೋವನ್ನು ರಾಧಿಕಾ ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದರು.

    https://www.instagram.com/p/CFd-US7gvx0/?igshid=1ggota00xbp69

    “ಹುಡುಗಿಯರು ಸೆಲ್ಫಿ ತೆಗೆದುಕೊಳ್ಳುವಾಗ ಒಳ್ಳೆಯ ಬ್ಯಾಗ್ರೌಂಡ್‍ಗಾಗಿ ಹುಡುಕಾಡುತ್ತಾರೆ. ಹೇಗೆ ನಿಂತರೆ ಒಳ್ಳೆಯ ಫೋಟೋ ಬರುತ್ತೆ ಎಂದು ಯೋಚಿಸಿ ಫೋಟೋ ತೆಗೆಯುತ್ತಾರೆ. ಒಟ್ಟಾರೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದು ತುಂಬಾನೇ ಕಷ್ಟಕರ. ನಾನು ಪರದಾಡುತ್ತಿರುವುದನ್ನು ನೋಡಿ ಬೇಸರಗೊಂಡ ಅಪ್ಪ-ಮಗಳು ನನಗೆ ಗೊತ್ತಿಲ್ಲದೆ ವಿಡಿಯೋ ಮಾಡಿದ್ದಾರೆ ಎಂದು ಬರೆದುಕೊಂಡಿದ್ದರು.