Tag: Yastika Bhatia

  • ಕೊನೇ 30 ಎಸೆತಗಳಲ್ಲಿ 72 ರನ್‌; ಹರ್ಮನ್‌ಪ್ರೀತ್‌ ಬೆಂಕಿ ಬ್ಯಾಟಿಂಗ್‌ – ಮುಂಬೈಗೆ 7 ವಿಕೆಟ್‌ಗಳ ಜಯ

    ಕೊನೇ 30 ಎಸೆತಗಳಲ್ಲಿ 72 ರನ್‌; ಹರ್ಮನ್‌ಪ್ರೀತ್‌ ಬೆಂಕಿ ಬ್ಯಾಟಿಂಗ್‌ – ಮುಂಬೈಗೆ 7 ವಿಕೆಟ್‌ಗಳ ಜಯ

    ನವದೆಹಲಿ: ನಾಯಕಿ ಹರ್ಮನ್‌ ಪ್ರೀತ್‌ಕೌರ್‌ ಅವರ ಬೆಂಕಿ ಬ್ಯಾಟಿಂಗ್‌ ನೆರವಿನಿಂದ ಮುಂಬೈ ಇಂಡಿಯನ್ಸ್‌ ಮಹಿಳಾ ತಂಡವು (Mumbai Indians Women) ಗುಜರಾತ್‌ ಜೈಂಟ್ಸ್‌ ಮಹಿಳಾ ತಂಡದ ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸಿದೆ.

    ಇಲ್ಲಿನ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಗುಜರಾತ್‌ (Gujarat Giants Women) ನೀಡಿದ 191ರನ್‌ಗಳ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್‌ 19.5 ಓವರ್‌ಗಳಲ್ಲಿ ನಿಗದಿ ಗುರಿ ತಲುಪಿ ಯಶಸ್ಸುಕಂಡಿತು ಕೊನೆಯ 2 ಓವರ್‌ಗಳಲ್ಲಿ ಮುಂಬೈ ಗೆಲುವಿಗೆ 23 ರನ್‌ಗಳ ಅಗತ್ಯವಿತ್ತು, ಆದ್ರೆ ಹರ್ಮನ್‌ಪ್ರೀತ್‌ ಕೌರ್‌ (Harmanpreet Kaur) ಅವರ ಸಿಕ್ಸರ್‌, ಬೌಂಡರಿ ನೆರವಿನಿಂದ 11 ಎಸೆತಗಳಲ್ಲೇ ಗುರಿ ತಲುಪುವಂತಾಯಿತು. 19ನೇ ಓವರ್‌ನಲ್ಲೇ 10 ರನ್‌ ಗಳಿಸಿದ ಮುಂಬೈ, ಕೊನೇ ಓವರ್‌ನ 5 ಎಸೆತಗಳಲ್ಲೇ 13 ರನ್‌ ಬಾರಿಸಿತು. ಒಟ್ಟಾರೆ ಕೊನೇ 30 ಎಸೆತಗಳಲ್ಲಿ ಮುಂಬೈ ಬರೋಬ್ಬರಿ 72 ರನ್‌ ಸಿಡಿಸಿ ಗೆಲುವು ತನ್ನದಾಗಿಸಿಕೊಂಡಿತು.

    ಶನಿವಾರ ನಡೆದ ಮಹಿಳಾ ಕ್ರಿಕೆಟ್‌ ಅಭಿಮಾನಿಗಳ (Womens Cricket Fans) ಕಣ್ಣಿಗೆ ಹಬ್ಬವಾಗಿತ್ತು. ಇತ್ತಂಡದ ಆಟಗಾರರೂ ಸಿಕ್ಸರ್‌ – ಬೌಂಡರಿ ಮಳೆ ಸುರಿಸಿದರು. ಈ ಆಟದಲ್ಲಿ ಬರೋಬ್ಬರಿ 44 ಬೌಂಡರಿ, 13 ಸಿಕ್ಸರ್‌ಗಳು ದಾಖಲಾದವು. ಈ ಪೈಕಿ ಮುಂಬೈ ಪರ 22 ಬೌಂಡರಿ, 7 ಸಿಕ್ಸರ್‌ ಸಿಡಿದರೆ, ಗುಜರಾತ್‌ ಪರ 22 ಬೌಂಡರಿ, 6 ಸಿಕ್ಸರ್‌ಗಳು ದಾಖಲಾಯಿತು. ಇದನ್ನೂ ಓದಿ: ಟೀಂ ಇಂಡಿಯಾಗೆ ಇನ್ನಿಂಗ್ಸ್‌, 64 ರನ್‌ಗಳ ಜಯ – ತಾರಾ ಆಟಗಾರರ ಗೈರಿನ ಮಧ್ಯೆಯೂ ಅತ್ಯುತ್ತಮ ಸಾಧನೆ

    ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಮುಂಬೈ ತಂಡ ಆರಂಭದಲ್ಲೇ ಸ್ಫೋಟಕ ಪ್ರದರ್ಶನಕ್ಕೆ ಮುಂದಾಯಿತು. ಮುಂಬೈ ಪರ ಯಾಸ್ತಿಕಾ ಭಾಟಿಯಾ 49 ರನ್‌, ಹೇಲಿ ಮ್ಯಾಥೀವ್ಸ್‌ 18 ರನ್‌, ನಟಾಲಿ ಸ್ಕಿವರ್‌ ಬ್ರಂಟ್‌ 2 ರನ್‌ ಗಳಿಸಿ ಪೆವಿಲಿಯನ್‌ ಪೆರೇಡ್‌ ನಡೆಸಿದರು. ಆದ್ರೆ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ ಹರ್ಮನ್‌ ಪ್ರೀತ್‌ಕೌರ್‌ 48 ಎಸೆತಗಳಲ್ಲಿ ಅಜೇಯ 95 ರನ್‌ (10 ಬೌಂಡರಿ, 5 ಸಿಕ್ಸರ್)‌ ಸಿಡಿಸುವ ಮೂಲಕ ಮುಂಬೈ ತಂಡಕ್ಕೆ ಗೆಲುವು ತಂದುಕೊಟ್ಟರು. ಅಮೇಲಿಯಾ ಕೇರ್‌ 12 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರು.

    ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ್ದ ಗುಜರಾತ್‌ ತಂಡ ದಯಾಳನ್ ಹೇಮಲತಾ, ನಾಯಕಿ ಬೆತ್‌ ಮೂನಿ ಅವರ ಸ್ಫೋಟಕ ಅರ್ಧಶತಕಗಳ ನೆರವಿನಿಂದ ನಿಗದಿತ ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 190 ರನ್‌ ಕಲೆಹಾಕಿತು. ಇದನ್ನೂ ಓದಿ: ಯಶಸ್ವಿ ಅರ್ಧಶತಕ – 700 ರನ್‌ ಸಿಡಿಸಿ ಸಚಿನ್‌, ಕೊಹ್ಲಿ ದಾಖಲೆ ಉಡೀಸ್‌

    ಕಳೆದ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಅಬ್ಬರಿಸಿದ ಲಾರಾ ವೊಲ್ವಾರ್ಡ್ಟ್ 13 ರನ್‌ಗಳಿಗೆ ವಿಕೆಟ್‌ ಒಪ್ಪಿಸಿದರು. 2ನೇ ವಿಕೆಟ್‌ಗೆ ಜೊತೆಯಾದ ಹೇಮಲತಾ ಹಾಗೂ ಬೆತ್‌ ಮೂನಿ 62 ಎಸೆತಗಳಲ್ಲಿ 121 ರನ್‌ಗಳ ಜೊತೆಯಾಟ ನೀಡಿದರು. ಹೇಮಲತಾ 40 ಎಸೆತಗಳಲ್ಲಿ ಸ್ಫೋಟಕ 74 ರನ್‌ (9 ಬೌಂಡರಿ, 2 ಸಿಕ್ಸರ್‌) ಚಚ್ಚಿದರೆ, ಬೆತ್‌ ಮೂನಿ 35 ಎಸೆತಗಳಲ್ಲಿ 66 ರನ್‌ (8 ಬೌಂಡರಿ, 3 ಸಿಕ್ಸರ್‌) ಬಾರಿಸಿದರು. ಮಧ್ಯಮ ಕ್ರಮಾಂಕದಲ್ಲಿ ಭಾರತಿ ಫುಲ್ಮಾಲಿ 21 ರನ್‌ಗಳ ಕೊಡುಗೆ ನೀಡಿದರು. ಅಂತಿಮವಾಗಿ ಗುಜರಾತ್‌ ತಂಡ 190 ರನ್‌ ಗಳಿಸಿ 191 ರನ್‌ ಗಳ ಗುರಿ ನೀಡಿತ್ತು.

  • WPL 2024: ಮುಂಬೈ ಇಂಡಿಯನ್ಸ್‌ ಗೆಲುವಿನ ಶುಭಾರಂಭ – ಉದ್ಘಾಟನಾ ಪಂದ್ಯದಲ್ಲೇ ಡೆಲ್ಲಿ ಕ್ಯಾಪಿಟಲ್ಸ್‌ಗೆ ಸೋಲು

    WPL 2024: ಮುಂಬೈ ಇಂಡಿಯನ್ಸ್‌ ಗೆಲುವಿನ ಶುಭಾರಂಭ – ಉದ್ಘಾಟನಾ ಪಂದ್ಯದಲ್ಲೇ ಡೆಲ್ಲಿ ಕ್ಯಾಪಿಟಲ್ಸ್‌ಗೆ ಸೋಲು

    ಬೆಂಗಳೂರು: ನಾಯಕಿ ಹರ್ಮನ್‌ಪ್ರೀತ್‌ ಕೌರ್‌, ಆರಂಭಿಕ ಆಟಗಾರ್ತಿ ಯಾಸ್ತಿಕಾ ಭಾಟಿಯ (Yastika Bhatia )ಸ್ಫೋಟಕ ಅರ್ಧಶತಕಗಳ ನೆರವಿನಿಂದ ಮುಂಬೈ ಇಂಡಿಯನ್ಸ್‌ (Mumbai Indians) ಮಹಿಳಾ ತಂಡವು ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 4 ವಿಕೆಟ್‌ಗಳ ಅಮೋಘ ಜಯ ಸಾಧಿಸಿದೆ.

    ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಮಹಿಳಾ ಪ್ರೀಮಿಯರ್‌ಲೀಗ್‌ (WPL 2024) 2ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲೇ ಮುಂಬೈ ಶುಭಾರಂಭ ಕಂಡಿದೆ. ಇದನ್ನೂ ಓದಿ: ಟೀಂ ಇಂಡಿಯಾ ವಿರುದ್ಧ ಶತಕ – ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ರೂಟ್‌!

    ಇನ್ನೂ 2023ರ ಮಹಿಳಾ ಪ್ರೀಮಿಯರ್‌ ಲೀಗ್‌ ಆವೃತ್ತಿಯ ಫೈನಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ಸೋಲು ಕಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 2ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲೂ ಮುಂಬೈ ವಿರುದ್ಧವೇ ಸೋಲನುಭವಿಸಿದೆ.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ ಮಹಿಳಾ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 171 ರನ್‌ ಬಾರಿಸಿತು. ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಮುಂಬೈ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 173 ರನ್‌ ಸಿಡಿಸಿ ಗೆಲುವು ಸಾಧಿಸಿತು. ಇದನ್ನೂ ಓದಿ: ನಲುಗಿದ ಆಂಗ್ಲ ಪಡೆಗೆ ರೂಟ್‌ ಶತಕದ ಬಲ – ಮೊದಲ ದಿನವೇ 300ರ ಗಡಿ ದಾಟಿದ ಇಂಗ್ಲೆಂಡ್‌

    ಬೃಹತ್‌ ಮೊತ್ತದ ಚೇಸಿಂಗ್‌ ಆರಂಭಿಸಿದ ಮುಂಬೈ ತಂಡಕ್ಕೆ ಕೊನೆಯ ಓವರ್‌ನಲ್ಲಿ ಮುಂಬೈ ಗೆಲುವಿಗೆ 12 ರನ್‌ಗಳ ಅಗತ್ಯವಿತ್ತು. ಮೊದಲ ಎಸೆತದಲ್ಲೇ ಮುಂಬೈ ತಂಡ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ನಂತರ ಮುಂದಿನ 2 ಎಸೆತಗಳಲ್ಲಿ ಕೇವಲ 3 ರನ್‌ ತಂಡಕ್ಕೆ ಸೇರಿತು. 4ನೇ ಎಸೆತದಲ್ಲಿ ಬೌಂಡರಿ ಬಾರಿಸಿದ ಹರ್ಮನ್‌ಪ್ರೀತ್‌ 5ನೇ ಎಸೆತವನ್ನು ಸಿಕ್ಸರ್‌ ಸಿಡಲು ಹೋಗಿ ಕ್ಯಾಚ್‌ ನೀಡಿದರು. ಕೊನೇ ಎಸೆತದಲ್ಲಿ 5 ರನ್‌ಗಳ ಅಗತ್ಯವಿದ್ದಾಗ ಸೂಪರ್‌ ಓವರ್‌ ನಿರೀಕ್ಷಿಸಲಾಗಿತ್ತು. ಆದ್ರೆ ಕ್ರೀನಲ್ಲಿದ್ದ ಸಜೀವನ್ ಸಜನ ಸಿಕ್ಸರ್‌ ಬಾರಿಸುವ ಮೂಲಕ ಗೆಲುವು ತಂದುಕೊಟ್ಟರು.

    ಮುಂಬೈ ಇಂಡಿಯನ್ಸ್‌ ಪರ ಯಾಸ್ತಿಕಾ ಭಾಟಿಯಾ 57 ರನ್‌ (45 ಎಸೆತ, 8 ಬೌಂಡರಿ, 2 ಸಿಕ್ಸರ್‌),‌ ಹರ್ಮನ್‌ಪ್ರೀತ್ ಕೌರ್ 55 ರನ್‌ (34 ಎಸೆತ, 7 ಬೌಂಡರಿ, 1 ಸಿಕ್ಸರ್‌) ಚಚ್ಚಿದರೆ, ನಟಾಲಿ ಸ್ಕಿವರ್ ಬ್ರಂಟ್ 19 ರನ್‌, ಅಮೆಲಿಯಾ ಕೆರ್ 24 ರನ್‌, ಪೂಜಾ ವಸ್ತ್ರಕರ್ 1 ರನ್‌, ಅಮನ್ಜೋತ್ ಕೌರ್ 3 ರನ್‌, ಸಜೀವನ್ ಸಜನ 6 ರನ್‌ ಕೊಡುಗೆ ನೀಡಿದ್ರೆ ಹೇಲಿ ಮ್ಯಾಥ್ಯೂಸ್ ಶೂನ್ಯ ಸುತ್ತಿದರು.

    ಇನ್ನೂ ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ ಪರ ಆಲಿಸ್ ಕ್ಯಾಪ್ಸಿ ಸ್ಪೋಟಕ 75 ರನ್‌ (53 ಎಸತ, 8 ಬೌಂಡರಿ, 3 ಸಿಕ್ಸರ್‌) ಚಚ್ಚಿದರೆ, ಜೆಮಿಮಾ ರೋಡ್ರಿಗ್ಸ್‌ 42 ರನ್‌, ನಾಯಕಿ ಮೆಗ್ ಲ್ಯಾನಿಂಗ್ 31 ರನ್‌, ಮರಿಜಾನ್ನೆ ಕಪ್ 16 ರನ್‌ ಗಳಿದ್ರೆ ಶಫಾಲಿ ವರ್ಮಾ ಕೇವಲ 1 ರನ್‌ಗೆ ವಿಕೆಟ್‌ ಒಪ್ಪಿಸಿದ್ರು. ಅನ್ನಾಬೆಲ್ ಸದರ್ಲ್ಯಾಂಡ್ 1 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರು.

    ಮುಂಬೈ ಇಂಡಿಯನ್ಸ್‌ ಪರ ನಟಾಲಿ ಸ್ಕೀವರ್‌ ಬ್ರಂಟ್‌, ಅಮೇಲಿಯಾ ಕೇರ್‌ ತಲಾ 2 ವಿಕೆಟ್‌ ಕಿತ್ತರೆ, ಶಬ್ನಿಮ್ ಇಸ್ಮಾಯಿಲ್ 1 ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು. ಇದನ್ನೂ ಓದಿ: ಮಾ.22 ರಿಂದ IPL ಶುರು; ಉದ್ಘಾಟನಾ ಪಂದ್ಯದಲ್ಲೇ ಚೆನ್ನೈ-ಆರ್‌ಸಿಬಿ ನಡುವೆ ಹೈವೋಲ್ಟೇಜ್‌ ಕದನ!

    ಡೆಲ್ಲಿ ಕ್ಯಾಪಿಟಲ್ಸ್‌ ಪರ ಅರುಂಧತಿ ರೆಡ್ಡಿ, ಆಲಿಸ್ ಕ್ಯಾಪ್ಸಿ ತಲಾ 2 ವಿಕೆಟ್‌ ಪಡೆದರೆ, ಶಿಖಾ ಪಾಂಡೆ ಮತ್ತು ಮರಿಜಾನ್ನೆ ಕಪ್ ತಲಾ ಒಂದೊಂದು ವಿಕೆಟ್‌ ಪಡೆದರು.

  • ಎದ್ದು ಬಿದ್ದು ಬ್ಯಾಟಿಂಗ್‌ಗೆ ಆಗಮಿಸಿದ ಯಾಸ್ತಿಕಾ ಭಾಟಿಯಾ – ಬಿದ್ದು ಬಿದ್ದು ನಕ್ಕ ಸ್ಮೃತಿ, ಕೌರ್

    ಎದ್ದು ಬಿದ್ದು ಬ್ಯಾಟಿಂಗ್‌ಗೆ ಆಗಮಿಸಿದ ಯಾಸ್ತಿಕಾ ಭಾಟಿಯಾ – ಬಿದ್ದು ಬಿದ್ದು ನಕ್ಕ ಸ್ಮೃತಿ, ಕೌರ್

    ಲಂಡನ್: ಕಾಮನ್‍ವೆಲ್ತ್ ಕ್ರೀಡಾಕೂಟದ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ರಣ ರೋಚಕ ಕಾದಾಟದ ನಡುವೆ ಭಾರತದ ಬ್ಯಾಟರ್ ಯಸ್ತಿಕಾ ಭಾಟಿಯಾ ಬಿದ್ದು ಸಹ ಆಟಗಾರ್ತಿಯರ ನಗುವಿಗೆ ಕಾರಣರಾದ ಪ್ರಸಂಗವೊಂದು ನಡೆದಿದೆ.

    ಫೈನಲ್ ಪಂದ್ಯದಲ್ಲಿ ಗೆಲ್ಲಲು 162 ರನ್‍ಗಳ ಗುರಿಯನ್ನು ಪಡೆದ ಭಾರತ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿದ್ದರೂ ನಾಯಕಿ ಹರ್ಮನ್‍ಪ್ರೀತ್ ಕೌರ್, ಜೆಮಿಮಾ ರಾಡಿಗ್ರಾಸ್ ಹೋರಾಟದಿಂದ ಗೆಲುವಿನ ಹಂತದವರೆಗೆ ತಲುಪಿತ್ತು. ಈ ವೇಳೆ ಯಸ್ತಿಕಾ ಭಾಟಿಯಾ 9ನೇ ಕ್ರಮಾಂಕದಲ್ಲಿ ಬ್ಯಾಟರ್ ಆಗಿ ಬರಲು ಸಿದ್ಧರಾಗಿದ್ದರು. ಒಂದು ಕಡೆ ಪಂದ್ಯ ರೋಚಕ ಘಟ್ಟ ತಲುಪಿತ್ತು. ಈ ವೇಳೆ ಒತ್ತಡದಲ್ಲೇ ಡಗೌಟ್‍ನಿಂದ ಬಂದ ಯಸ್ತಿಕಾ ಭಾಟಿಯಾ ಡಗೌಟ್‌ ಬಳಿ ಇದ್ದ ಜಾಹೀರಾತು ಬೋರ್ಡ್‌ ನೋಡದೆ ಕೆಳಕ್ಕೆ ಬಿದ್ದರು. ಆ ಬಳಿಕ ಎದ್ದು ಬ್ಯಾಟಿಂಗ್‍ಗೆ ಆಗಮಿಸಿದರು. ಇದನ್ನೂ ಓದಿ: ಕಾಮನ್‌ವೆಲ್ತ್‌ನಲ್ಲಿ ಹ್ಯಾಟ್ರಿಕ್‌ ಸಾಧನೆ – ಪಿವಿ ಸಿಂಧುಗೆ ಚಿನ್ನ

    ಇತ್ತ ಯಸ್ತಿಕಾ ಭಾಟಿಯಾ ಬಿದ್ದು, ಎದ್ದು ಬ್ಯಾಟಿಂಗ್‍ಗೆ ಆಗಮಿಸುತ್ತಿದ್ದಂತೆ ಬೌಂಡರಿ ಲೈನ್‌ ಪಕ್ಕ ಕೂತಿದ್ದ ನಾಯಕಿ ಹರ್ಮನ್‍ಪ್ರೀತ್ ಕೌರ್, ಸ್ಮೃತಿ ಮಂದಾನ ಸೇರಿದಂತೆ ಸಹ ಆಟಗಾರ್ತಿಯರು ಬಿದ್ದು, ಬಿದ್ದು ನಕ್ಕರು. ಇದನ್ನೂ ಓದಿ: ನಾಲ್ಕು ವರ್ಷಗಳ ಹಿಂದೆ ಪದಕ ಗೆದ್ದಾಗ ಕೊಟ್ಟ ಭರವಸೆ ಇನ್ನೂ ಈಡೇರಿಲ್ಲ – ಬೇಸರ ವ್ಯಕ್ತಪಡಿಸಿದ ಗುರುರಾಜ್ ಪೂಜಾರಿ

    ಪಂದ್ಯದಲ್ಲಿ ಗೆಲ್ಲಲು 162 ರನ್‍ಗಳ ಗುರಿಯನ್ನು ಪಡೆದ ಭಾರತ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿದ್ದರೂ ನಾಯಕಿ ಹರ್ಮನ್‍ಪ್ರೀತ್ ಕೌರ್, ಜೆಮಿಮಾ ರಾಡಿಗ್ರಾಸ್ ಹೋರಾಟದಿಂದ ಗೆಲುವಿನ ಹಂತದವರೆಗೆ ತಲುಪಿತ್ತು. ಆದರೆ ಕೊನೆಯಲ್ಲಿ ವಿಕೆಟ್ ಕಳೆದುಕೊಳ್ಳುವುದರೊಂದಿಗೆ ಅಂತಿಮವಾಗಿ 19.3 ಓವರ್‌ಗಳಲ್ಲಿ 152 ರನ್‍ಗಳಿಗೆ ಆಲೌಟ್ ಆಯ್ತು. ಈ ಮೂಲಕ ಟೀಂ ಇಂಡಿಯಾದ ಮಹಿಳೆಯರು ಸ್ವಲ್ಪದರಲ್ಲೇ ಚಿನ್ನದ ಪದಕದಿಂದ ವಂಚಿತರಾದರು. ರೋಚಕ ಫೈನಲ್‍ನಲ್ಲಿ ಆಸ್ಟ್ರೇಲಿಯಾ 9 ರನ್‍ಗಳಿಂದ ಇಂಡಿಯಾವನ್ನು ಸೋಲಿಸಿ ಚೊಚ್ಚಲ ಪದಕವನ್ನು ಮುಡಿಗೇರಿಸಿಕೊಂಡಿದೆ. ಇದೇ ಮೊದಲ ಬಾರಿಗೆ ಕಾಮನ್‍ವೆಲ್ತ್ ಗೇಮ್ಸ್‌ನಲ್ಲಿ ಕ್ರಿಕೆಟ್ ಸೇರಿಸಲಾಗಿತ್ತು. ಇದನ್ನೂ ಓದಿ: Well Done Girls: ಗೋಲ್ಡ್‌ ಜಸ್ಟ್‌ ಮಿಸ್‌ – ಚೊಚ್ಚಲ ಪ್ರಯತ್ನದಲ್ಲೇ ಬೆಳ್ಳಿಗೆದ್ದ ವನಿತೆಯರು

    Live Tv
    [brid partner=56869869 player=32851 video=960834 autoplay=true]