Tag: yashwantpur

  • ಕಲಬುರಗಿ ಮಾರ್ಗವಾಗಿ ಬೀದರ್- ಯಶವಂತಪುರ ರೈಲು ಮಂಜೂರು

    ಕಲಬುರಗಿ ಮಾರ್ಗವಾಗಿ ಬೀದರ್- ಯಶವಂತಪುರ ರೈಲು ಮಂಜೂರು

    ಬೀದರ್: ಜಿಲ್ಲೆಯ ಜನರ ಬಹುದಿನಗಳ ಕನಸು ನನಸಾಗಿದ್ದು, ಕೆಲವೇ ದಿನಗಳಲ್ಲಿ ಕಲಬುರಗಿ ಮಾರ್ಗವಾಗಿ ಬೀದರ್ ಟು ಯಶವಂತಪುರ ರೈಲು ಸಂಚಾರ ಪ್ರಾರಂಭವಾಗಲಿದೆ.

    ಸೋಮವಾರ ಕೇಂದ್ರ ರೈಲ್ವೆ ಇಲಾಖೆ ರೈಲು ಮಂಜೂರು ಮಾಡಿದೆ ಸಂಸದ ಭಗವಂತ್ ಖೂಬಾ ಮಾಹಿತಿ ನೀಡಿದ್ದಾರೆ. ಈ ಮೊದಲು ತೆಲಂಗಾಣದ ಸಿಕಂದರಾಬಾದ್ ಮಾರ್ಗವಾಗಿ ಬೀದರ್ ಟು ಯಶವಂತಪುರ ರೈಲು ಸಂಚಾರ ಮಾಡುತ್ತಿತ್ತು. ಹೀಗಾಗಿ ಪ್ರಯಾಣ ಸಮಯ ಹೆಚ್ಚಾಗುತ್ತಿತ್ತು.

    ಕಲಬುರಗಿ ಮಾರ್ಗವಾಗಿ ರೈಲು ಸಂಚರಿಸಿದರೆ ಸಮಯ ಉಳಿಯುತ್ತದೆ ಎಂಬುದು ಜಿಲ್ಲೆಯ ಜನರ ಒತ್ತಾಯವಾಗಿತ್ತು. ಬೀದರ್ ಸಂಸದ ಭಗವಂತ್ ಖೂಬಾ ಹಲವಾರು ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಿದ್ದರು. ಆದರೆ ಕಾರ್ಯ ಸಫಲವಾಗಿರಲಿಲ್ಲ. ಸೋಮವಾರ ಕೇಂದ್ರದ ರಾಜ್ಯ ರೈಲ್ವೆ ಸಚಿವ ಸುರೇಶ್ ಅಂಗಡಿಯವರನ್ನು ಖೂಬಾ ಅವರು ಭೇಟಿ ಮಾಡಿದ್ದು, ಈ ವೇಳೆ ಸುರೇಶ್ ಅಂಗಡಿಯವರು ಈ ಮಾಹಿತಿ ನೀಡಿದ್ದಾರೆ.

    ಕೆಲವೇ ದಿನಗಳಲ್ಲಿ ರೈಲು ಸಂಚಾರ ಆರಂಭವಾಗಲಿದೆ ಎಂದು ಸುರೇಶ್ ಅಂಗಡಿ ತಿಳಿಸಿದ್ದಾರೆ. ರೈಲು ಮಂಜೂರು ಮಾಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರಿಗೆ ಸಂಸದ ಭಗವಂತ್ ಖೂಬಾ ಜಿಲ್ಲೆಯ ಜನರ ಪರವಾಗಿ ಧನ್ಯವಾದ ತಿಳಿಸಿದ್ದಾರೆ.

  • ರಾಮನಾಮ ಜಪಿಸಿ ಮತ ಕೇಳಿದ ಜಗ್ಗೇಶ್

    ರಾಮನಾಮ ಜಪಿಸಿ ಮತ ಕೇಳಿದ ಜಗ್ಗೇಶ್

    -ರಾಮಮಂದಿರ ಸ್ಥಾಪನೆ ಹಿಂದೆ ಬಿಜೆಪಿ ಶ್ರಮ

    ಬೆಂಗಳೂರು: ನಟ, ಬಿಜೆಪಿ ಮುಖಂಡ ಜಗ್ಗೇಶ್, ರಾಮನಾಮ ಜಪಿಸಿ ಯಶವಂತಪುರದಲ್ಲಿ ಮತಯಾಚನೆ ಮಾಡಿದ್ದಾರೆ. ಜಗ್ಗೇಶ್ ಇಂದು ಯಶವಂತಪುರದ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಪರವಾಗಿ ಮತಯಾಚನೆ ಮಾಡಿದರು.

    ಪ್ರಚಾರದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಜಗ್ಗೇಶ್, 17 ಶಾಸಕರ ತ್ಯಾಗದಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಿದೆ. ಹಾಗಾಗಿ ಮತದಾರರು ಶಾಸಕರನ್ನು ಗೆಲ್ಲಿಸಬೇಕಿದೆ. ಬಿಜೆಪಿಯ ಶ್ರಮದಿಂದಾಗಿ ರಾಮಮಂದಿರ ಸ್ಥಾಪನೆ ಆಗುತ್ತಿದೆ. ರಾಮಮಂದಿರ ವಿಷಯ ನೆನಪಿನಲ್ಲಿಟ್ಟುಕೊಂಡು ಮತ ಹಾಕಬೇಕೆಂದು ಮನವಿ ಮಾಡಿಕೊಂಡರು.

    2018ರ ಚುನಾವಣೆಯಲ್ಲಿ ಜನರು 104 ಸ್ಥಾನ ನೀಡಿದರು. 17 ಜನರ ಭುಜಬಲದಿಂದಾಗಿ ಬಿಜೆಪಿ ಸರ್ಕಾರ ರಚನೆ ಮಾಡಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಅನಾಚಾರವನ್ನು ಜನರ ಮುಂದಿಟ್ಟು ಶಾಸಕರು ಹೊರ ಬಂದು ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ. ಎಲ್ಲ ಉಪಚುನಾವಣೆಯ ಕ್ಷೇತ್ರಗಳ ಮತದಾರರು ನಿಮ್ಮ ಮನಸಾಕ್ಷಿಯನ್ನು ಪ್ರಶ್ನೆ ಮಾಡಿಕೊಂಡರೆ ಬಿಜೆಪಿ ಯಾಕೆ ಬೇಕು ಎಂಬುದಕ್ಕೆ ಉತ್ತರ ಸಿಗುತ್ತದೆ ಎಂದರು.

  • ಯಡಿಯೂರಪ್ಪ, ಸಿದ್ದರಾಮಯ್ಯ ಗೊತ್ತು – ನಂಬಿದವ್ರಿಗೆ 30 ಲಕ್ಷ ರೂ. ದೋಖಾ

    ಯಡಿಯೂರಪ್ಪ, ಸಿದ್ದರಾಮಯ್ಯ ಗೊತ್ತು – ನಂಬಿದವ್ರಿಗೆ 30 ಲಕ್ಷ ರೂ. ದೋಖಾ

    ಬೆಂಗಳೂರು: ಸಿಲಿಕಾನ್ ಸಿಟಿ ಜನರೇ ಎಚ್ಚರವಾಗಿರಿ. ಯಾಕಂದ್ರೆ ನನಗೆ ಸಿದ್ದರಾಮಯ್ಯ ಗೊತ್ತು, ಯಡಿಯೂರಪ್ಪ ಗೊತ್ತು ಎಂದು ಕೆಲವರು ಹೇಳುತ್ತಾ ಬಂದು ಲಕ್ಷ ಲಕ್ಷ ದೋಚುತ್ತಾರೆ. ಇದಕ್ಕೆ ಇಬ್ಬರು ವ್ಯಕ್ತಿಗಳು 30 ಲಕ್ಷ ಕಳೆದುಕೊಂಡಿರುವುದೇ ಸಾಕ್ಷಿ

    ಚಂದ್ರಶೇಖರ್ ಮೋಸ ಮಾಡಿದ ವ್ಯಕ್ತಿ. ಈತ ಕುಣಿಗಲ್ ಮೂಲದವನಾಗಿದ್ದು, ಬೆಂಗಳೂರಿನಲ್ಲಿ ವಾಸವಾಗಿದ್ದಾನೆ. ನನಗೆ ಸಿದ್ದರಾಮಯ್ಯ ಗೊತ್ತು, ಬಿ.ಎಸ್.ಯಡಿಯೂರಪ್ಪ ಅವರೂ ಗೊತ್ತು. ಅವರಿಗೆ ಹೇಳಿ ನಿಮಗೆ ವಿಧಾನಸೌಧದಲ್ಲಿ ಕೆಲಸ ಕೊಡಿಸುತ್ತೇನೆ ಎಂದು ಹೇಳಿ ಶಿವಣ್ಣ ಮತ್ತು ಹನುಮಂತಪ್ಪನನ್ನು ನಂಬಿಸಿದ್ದಾನೆ. ಆದರೆ ಚಂದ್ರಶೇಖರ್ ಮಾತನ್ನು ನಂಬಿದ ಶಿವಣ್ಣ ಮತ್ತು ಹನುಮಂತಪ್ಪ ಇದೀಗ ಮೂರು ನಾಮ ಹಾಕಿಸಿಕೊಂಡಿದ್ದಾರೆ.

    ಚಂದ್ರಶೇಖರ್ ಕಳೆದ 6 ತಿಂಗಳ ಹಿಂದೆ ಹೋಟೆಲ್ ಒಂದರಲ್ಲಿ ಶಿವಣ್ಣ ಹಾಗೂ ಹನುಮಂತಪ್ಪನಿಗೆ ಪರಿಚಯನಾಗಿದ್ದಾನೆ. ನಾನು ಅಮೃತಾನಂದಮಯಿ ಆಶ್ರಮದಲ್ಲಿ ಕೆಲಸ ಮಾಡುತ್ತಿದ್ದೇನೆ. ನಮ್ಮ ಆಶ್ರಮಕ್ಕೆ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಬರುತ್ತಿರುತ್ತಾರೆ. ನಮಗೆ ತುಂಬಾ ಕ್ಲೋಸ್. ಏನೇ ಕೆಲಸ ಬೇಕಿದ್ದರೂ ಮಾಡಿಸಿಕೊಡುತ್ತೇನೆ ಎಂದು ಪುಸಲಾಯಿಸಿದ್ದಾನೆ. ಇವನ ಮಾತನ್ನು ನಂಬಿ ಇಬ್ಬರೂ 30 ಲಕ್ಷ ಕಳೆದುಕೊಂಡಿದ್ದಾರೆ.

    ಸದ್ಯ ಆರೋಪಿ ಚಂದ್ರಶೇಖರ್ ವಿರುದ್ಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ವಂಚಕನಿಗೆ ಪೊಲೀಸರು ಬಲೆ ಬೀಸಿದ್ದಾರೆ.

  • ಕೇವಲ 5 ಗಂಟೆಯಲ್ಲಿ ಶಿವಮೊಗ್ಗದಿಂದ ಬೆಂಗ್ಳೂರಿಗೆ ಬರುತ್ತೆ ಜನಶತಾಬ್ಧಿ ಎಕ್ಸ್‌ಪ್ರೆಸ್ ರೈಲು!

    ಕೇವಲ 5 ಗಂಟೆಯಲ್ಲಿ ಶಿವಮೊಗ್ಗದಿಂದ ಬೆಂಗ್ಳೂರಿಗೆ ಬರುತ್ತೆ ಜನಶತಾಬ್ಧಿ ಎಕ್ಸ್‌ಪ್ರೆಸ್ ರೈಲು!

    – ಮುಂಗಡ ಬುಕ್ಕಿಂಗ್ ಮಾಡದೇ ಇದ್ರೆ ಹತ್ತಬೇಡಿ
    – ರೈಲಿಗೆ ಬಿಎಸ್‍ವೈ, ರಾಘವೇಂದ್ರರಿಂದ ಹಸಿರು ನಿಶಾನೆ

    ಶಿವಮೊಗ್ಗ: ಇಂದಿನಿಂದ ನೀವು ಕೇವಲ 5 ಗಂಟೆಯಲ್ಲಿ ಬೆಂಗಳೂರು ತಲುಪಬಹುದು. ಯಶವಂತಪುರ ಮತ್ತು ಶಿವಮೊಗ್ಗ ನಡುವೆ ಜನಶತಾಬ್ಧಿ ಎಕ್ಸ್‌ಪ್ರೆಸ್ ರೈಲು ಸಂಚಾರ ಇಂದಿನಿಂದ ಆರಂಭಗೊಂಡಿದೆ.

    ನೂತನ ಜನಶತಾಬ್ಧಿ ರೈಲಿಗೆ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಅಷ್ಟೇ ಅಲ್ಲದೇ ಯಡಿಯೂರಪ್ಪ, ಆಯನೂರು ಮಂಜುನಾಥ್, ಸಂಸದ ರಾಘವೇಂದ್ರ, ರೈಲ್ವೆ ಇಲಾಖೆಯ ಅಧಿಕಾರಿಗಳು ಹಾಗೂ ಗಣ್ಯರ ಜೊತೆಗೂಡಿ, ಭದ್ರಾವತಿಯವರೆಗೆ ರೈಲಿನಲ್ಲಿ ಸಂಚಾರ ಮಾಡಿದ್ದಾರೆ.

    ನಿಲ್ದಾಣದ ಕೌಂಟರ್ ನಲ್ಲಿ ಟಿಕೆಟ್ ಪಡೆದು ಪ್ರಯಾಣಿಸಲು ಸಾಧ್ಯವಿಲ್ಲ. ರೈಲು ನಿಲ್ದಾಣ ಬಿಡುವ ಅರ್ಧಗಂಟೆ ಮೊದಲು ಆನ್ ಲೈನ್ ನಲ್ಲಿ ಅಥವಾ ಹಿಂದಿನ ದಿನ ರಾತ್ರಿ 8 ಗಂಟೆಯವರೆಗೂ ಕೌಂಟರ್ ನಲ್ಲಿ ಟಿಕೆಟ್ ಬುಕ್ ಮಾಡಿದ ಪ್ರಯಾಣಿಕರು ಮಾತ್ರ ಈ ರೈಲಿನಲ್ಲಿ ಪ್ರಯಾಣಿಸಬಹುದು.

    ಬೆಂಗಳೂರು ಶಿವಮೊಗ್ಗ ಮಧ್ಯೆ ಈಗ ಸಂಚರಿಸುವ ಪ್ಯಾಸೆಂಜರ್ ರೈಲು 8 ಗಂಟೆ ತೆಗೆದುಕೊಂಡರೆ, ಎಕ್ಸ್‌ಪ್ರೆಸ್ ರೈಲುಗಳು 6.30 ಗಂಟೆ ತೆಗದುಕೊಳ್ಳುತ್ತದೆ. ಆದರೆ ಈ ರೈಲು ಭದ್ರಾವತಿ, ಕಡೂರು, ತುಮಕೂರಿನಲ್ಲಿ ಮಾತ್ರ ನಿಲ್ಲುವ ಕಾರಣ ಕೇವಲ 5 ಗಂಟೆಯಲ್ಲಿ ಶಿವಮೊಗ್ಗ/ಬೆಂಗಳೂರು ತಲುಪುತ್ತದೆ.


    ಸಮಯ-ಮಾರ್ಗ:
    ಈ ರೈಲು (ರೈಲು ಸಂಖ್ಯೆ- 12090) ಸೋಮವಾರ, ಬುಧವಾರ, ಶುಕ್ರವಾರ ಹಾಗೂ ಶನಿವಾರ ಶಿವಮೊಗ್ಗದಿಂದ ಬೆಳಗ್ಗೆ 5.15ಕ್ಕೆ ಹೊರಟು, 10.10ಕ್ಕೆ ಯಶವಂತಪುರ ತಲುಪಲಿದೆ. ಇದೇ ರೀತಿ ಸೋಮವಾರ, ಬುಧವಾರ, ಶುಕ್ರವಾರ ಮತ್ತು ಭಾನುವಾರ ಯಶವಂತಪುರದಿಂದ (ರೈಲು ಸಂಖ್ಯೆ- 12089) ಸಂಜೆ 5.30 ಕ್ಕೆ ಹೊರಟು ರಾತ್ರಿ 10.10ಕ್ಕೆ ಶಿವಮೊಗ್ಗ ತಲುಪುತ್ತದೆ.

    ರೈಲಿನ ದರ:
    ಈ ರೈಲಿನಲ್ಲಿ ಎರಡು ಎಸಿ ಬೋಗಿಗಳು, 8 ಕಾರ್ ಚೇರ್, ಎರಡು ಲಗೇಜ್ ಬೋಗಿಗಳು ಇರಲಿವೆ. ಎಸಿ ಕಾರ್ ಚೇರ್ ಗೆ 485 ರೂಪಾಯಿ, ಸೆಕೆಂಡ್ ಕ್ಲಾಸ್ ಚೇರ್ ಕಾರ್ ಗೆ 145 ರೂಪಾಯಿ ದರ ನಿಗದಿಯಾಗಿದೆ. ಇದಲ್ಲದೆ ಮಕ್ಕಳಿಗೆ, ಹಿರಿಯ ನಾಗರಿಕರಿಗೆ ವಿಶೇಷ ರಿಯಾಯಿತಿ ಕೂಡ ಇದೆ.

    ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿರುವ ಶಿವಮೊಗ್ಗ ಈಗ ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿ ಹೊಂದುತ್ತಿದೆ. ಜಿಲ್ಲೆಯಲ್ಲಿ ಹಲವಾರು ಸುಂದರ ನಿಸರ್ಗತಾಣಗಳು ಇದ್ದು, ವಿಶ್ವವಿಖ್ಯಾತ ಪ್ರವಾಸಿ ತಾಣವಾಗಿದೆ. ಈಗ ಬೆಂಗಳೂರು- ಶಿವಮೊಗ್ಗ ನಡುವೆ ಹೆಚ್ಚುವರಿ ರೈಲು ಆರಂಭದಿಂದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ಸಿಗಲಿದೆ. ಶಿವಮೊಗ್ಗ-ಬೆಂಗಳೂರು ನಡುವೆ ಸಂಚರಿಸುತ್ತಿರುವ ಎಕ್ಸ್‌ಪ್ರೆಸ್ ರೈಲಿನೊಂದಿಗೆ ಈ ಜನಶತಾಬ್ಧಿ ರೈಲನ್ನು ಹೆಚ್ಚುವರಿಯಾಗಿ ಆರಂಭಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹುಡ್ಗಿ ಮೋಸ ಮಾಡಿದ್ದಾಳೆ, ನನ್ನ ಸಾಯಲು ಬಿಡಿ: ಯಶವಂತಪುರ ಸರ್ಕಲ್ ನಲ್ಲಿ ಕುಡುಕನ ಹೈಡ್ರಾಮಾ

    ಹುಡ್ಗಿ ಮೋಸ ಮಾಡಿದ್ದಾಳೆ, ನನ್ನ ಸಾಯಲು ಬಿಡಿ: ಯಶವಂತಪುರ ಸರ್ಕಲ್ ನಲ್ಲಿ ಕುಡುಕನ ಹೈಡ್ರಾಮಾ

    ಬೆಂಗಳೂರು: ನನಗೆ ಹುಡುಗಿ ಮೋಸ ಮಾಡಿದ್ದಾಳೆ. ನನ್ನ ಸಾಯಲು ಬಿಡಿ ಅಂತ ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಪೊಲೀಸರಿಗೆ ಕಾಟ ಕೊಟ್ಟ ಘಟನೆ ಬೆಂಗಳೂರಿನ ಯಶವಂತಪುರದಲ್ಲಿ ನಡೆದಿದೆ.

    ವಿಪರೀತ ಮದ್ಯಪಾನ ಮಾಡಿದ್ದ ವ್ಯಕ್ತಿ, ಯಶವಂತಪುರ ಸರ್ಕಲ್ ನಲ್ಲಿ ನನಗೆ ನನ್ನ ಹುಡುಗಿ ಮೋಸ ಮಾಡಿದ್ದಾಳೆ. ನಾನು ಸಾಯಬೇಕು ಅಂತ ಜೋರಾಗಿ ಕಿರುಚಾಡಿದ್ದಾನೆ. ಅಲ್ಲದೇ ಅತ್ತ ಹುಡುಗಿನೂ ಬಿಟ್ಟು ಹೋಗಿದ್ದಾಳೆ, ಇತ್ತ ನನ್ನ ಬಳಿ ಹಣವೂ ಇಲ್ಲ ಅಂತ ರಸ್ತೆ ಮಧ್ಯೆ ಗೋಳಾಡಿದ್ದಾನೆ.

    ಸುಮಾರು ಅರ್ಧ ಗಂಟೆಗೂ ಹೆಚ್ಚು ಸರ್ಕಲ್ ನಲ್ಲಿ ಈ ಹೈಡ್ರಾಮಾ ನಡೆದಿದ್ದು, ನಾನು ಬಲೂನ್ ಗೆ ಗಾಳಿ ತುಂಬಿ ಮಾರುತ್ತೇನೆ. ನನ್ನ ಸಾಯಲು ಬಿಡಿ ಅಂತ ಸಿಕ್ಕ ಸಿಕ್ಕ ವಾಹನಗಳಿಗೆ ಸಿಲುಕುವ ಮೂಲಕ ಆತ್ಮಹತ್ಯೆಗೆ ಯತ್ನಿಸಿ, ಪೊಲೀಸರಿಗೆ ಕಾಟ ಕೊಟ್ಟಿದ್ದಾನೆ. ಬಳಿಕ ಟ್ರಾಫಿಕ್ ಪೊಲೀಸರು ಹರಸಾಹಸ ಪಟ್ಟು ಆತನನ್ನು ಸಮಾಧಾನ ಪಡಿಸಿ, ಟ್ರಾಫಿಕ್ ಕ್ಲಿಯರ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಈ ಕಾರಣಕ್ಕೆ ಖೇಣಿ ಕಾಂಗ್ರೆಸ್ ಗೆ ಬರೋದು ಬೇಡ- ಶಾಸಕ ಸೋಮಶೇಖರ್

    ಈ ಕಾರಣಕ್ಕೆ ಖೇಣಿ ಕಾಂಗ್ರೆಸ್ ಗೆ ಬರೋದು ಬೇಡ- ಶಾಸಕ ಸೋಮಶೇಖರ್

    ಬೆಂಗಳೂರು: ನೈಸ್ ಸಂಸ್ಥೆಯ ಮಾಲೀಕ, ಕರ್ನಾಟಕ ಮಕ್ಕಳ ಪಕ್ಷದ ಶಾಸಕ ಅಶೋಕ್ ಖೇಣಿಯವರ ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ಯಶವಂತಪುರ ಕ್ಷೇತ್ರದ ಶಾಸಕ ಸೋಮಶೇಖರ್ ಅವರು ವಿರೋಧ ವ್ಯಕ್ತಪಡಿಸಿದ್ದಾರೆ.

    ಈ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಶಾಸಕನಾಗಿರುವ ಜೊತೆಗೆ ಸದನ ಸಮಿತಿಯ ಸದಸ್ಯ ಕೂಡ ಆಗಿದ್ದೇನೆ. ಅನೇಕ ಹಗರಣಗಳನ್ನು ಮತ್ತು ಅವ್ಯವಹಾರಗಳನ್ನು ಗಮನಕ್ಕೆ ಸದನ ಸಮಿತಿಯಲ್ಲಿ ಗಮನಕ್ಕೆ ತಂದಿದ್ದೇವೆ. ಹೀಗಾಗಿ ಇಂತಹ ಸಂದರ್ಭದಲ್ಲಿ ಅಶೋಕ್ ಖೇಣಿಯವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುವುದಕ್ಕೆ ನನ್ನ ವೈಯಕ್ತಿಕ ವಿರೋಧವಿದೆ. ಅಲ್ಲದೇ ಕೆಲ ಜಿಲ್ಲೆಗಳ ಶಾಸಕರು ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ವಿಚಾರಗಳನ್ನು ಕೆಪಿಸಿಸಿ ಅಧ್ಯಕ್ಷ ಹಾಗೂ ಮುಖ್ಯಮಂತ್ರಿಯವರ ಗಮನಕ್ಕೆ ತರುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ರೈತರ ಆತ್ಮಹತ್ಯೆಗೆ ಕುಡಿತ, ಜೂಜು ಕಾರಣ ಎಂದಿದ್ದ ಖೇಣಿ ಕಾಂಗ್ರೆಸ್ ಸೇರ್ಪಡೆ

    ಯಾವ ಕಾರಣಕ್ಕೂ ಖೇಣಿಯವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುವುದು ಒಳ್ಳೆಯದಲ್ಲ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ನಮ್ಮ ವಿರೋಧವನ್ನು ಲೆಕ್ಕಿಸದೇ ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷಕರು ಪಕ್ಷಕ್ಕೆ ಸೇರ್ಪಡೆ ಮಾಡಿದ್ರೆ, ಮುಂದೆ ಏನ್ ಮಾಡ್ಬೇಕು ಅಂತಾ ತೀರ್ಮಾನ ಮಾಡ್ತೇವೆ ಅಂತ ಅವರು ಹೇಳಿದ್ರು.

    ಸದನ ಸಮಿತಿಯಲ್ಲಿ ಮಂಡನೆಯಾದ ವಿಚಾರದ ಬಗ್ಗೆ ಇಡೀ ರಾಜ್ಯದ ಜನತೆಗೆ ತಿಳಿದಿದೆ. ಹೀಗಾಗಿ ಗೆಲುವಿಗಾಗಿ ಓರ್ವ ಅಭ್ಯರ್ಥಿ ಬೇಕೆಂಬ ಒಂದೇ ಕಾರಣಕ್ಕಾಗಿ ಖೇಣಿಯವರನ್ನು ಪಕ್ಷಕ್ಕೆ ತೆಗೆದುಕೊಂಡು ಬರಲಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಅವರಿಗೆ ಈ ಬಗ್ಗೆ ಮಾಹಿತಿ ಇಲ್ಲವಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸದನ ಸಮಿತಿಯಲ್ಲಿ ನಿರ್ಧರವಾದ ವಿಚಾರದ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ. ಈ ಕಾರಣಕ್ಕಾಗಿ ಖೇನಿಯವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದು ಸರಿಯಲ್ಲ. ಯಾಕಂದ್ರೆ ಪಕ್ಷಕ್ಕೆ ಕಳಂಕರಹಿತ ಇರುವವರನ್ನು ಸೇರ್ಪಡೆ ಮಾಡಬೇಕೆಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಅಂದ್ರು.