Tag: yashwanth

  • ಮೊದಲ ವರ್ಷದ ಎಂಗೇಜ್‌ಮೆಂಟ್ ಆ್ಯನಿವರ್ಸರಿ ಸಂಭ್ರಮದಲ್ಲಿ ಶೋಭಾ ಶೆಟ್ಟಿ

    ಮೊದಲ ವರ್ಷದ ಎಂಗೇಜ್‌ಮೆಂಟ್ ಆ್ಯನಿವರ್ಸರಿ ಸಂಭ್ರಮದಲ್ಲಿ ಶೋಭಾ ಶೆಟ್ಟಿ

    ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಖ್ಯಾತಿಯ ಶೋಭಾ ಶೆಟ್ಟಿ (Shobha Shetty) ಮೊದಲ ವರ್ಷದ ಎಂಗೇಜ್‌ಮೆಂಟ್ ಆ್ಯನಿವರ್ಸರಿ ಸಂಭ್ರಮದಲ್ಲಿದ್ದಾರೆ. ಕಳೆದ ವರ್ಷ ಭಾವಿ ಪತಿಗೆ ರಿಂಗ್ ತೊಡಿಸಿದ ಫೋಟೋ ಶೇರ್ ಮಾಡಿ ಪ್ರೀತಿಯಿಂದ ವಿಶ್‌ ಮಾಡಿದ್ದಾರೆ. ಇದನ್ನೂ ಓದಿ:ರನ್ಯಾರಾವ್ ವಿರುದ್ಧ ಕಾಫಿಪೋಸಾ ಜಾರಿ – ಒಂದು ವರ್ಷ ಜೈಲೇ ಗತಿ

    ಇದೇ ದಿನಾಂಕ ಕಳೆದ ವರ್ಷ ಅವರು ಯಶವಂತ್ ರೆಡ್ಡಿ ಜೊತೆ ಶೋಭಾ ಎಂಗೇಜ್ ಆಗಿದ್ದರು. ಇಂದಿಗೆ ನಿಶ್ಚಿತಾರ್ಥವಾಗಿ ಒಂದು ವರ್ಷ ಕಳೆದಿದೆ. ಈ ಖುಷಿಯಲ್ಲಿ ಪೋಸ್ಟ್‌ವೊಂದನ್ನು ಶೇರ್ ಮಾಡಿ, ಹೇ ಪಾಪು ಮಾ, ನಮ್ಮ ಮೊದಲ ವರ್ಷದ ನಿಶ್ಚಿತಾರ್ಥದ ವಾರ್ಷಿಕೋತ್ಸವ. ನಾವು ಭೇಟಿಯಾಗಿ ಸುಮಾರು 5 ವರ್ಷಗಳಾಗಿವೆ. ಅಂತ್ಯವಿಲ್ಲದ ಪ್ರೀತಿ. ಮೊದಲ ವರ್ಷದ ನಿಶ್ಚಿತಾರ್ಥದ ವಾರ್ಷಿಕೋತ್ಸವದ ಶುಭಾಶಯಗಳು ಮೈ ಲವ್ ಎಂದು ಶೋಭಾ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಡಾ.ರಾಜ್ ಕುಮಾರ್ ಕನ್ನಡದ ಸಂಸ್ಕೃತಿಯ ಪ್ರತೀಕ – ಶಾಸಕ ರಿಜ್ವಾನ್ ಅರ್ಷದ್

    ಮುದ್ದಾದ ಜೋಡಿ ಯಶವಂತ್ ರೆಡ್ಡಿ ಜೊತೆಗಿನ ಶೋಭಾ ಫೋಟೋ ನೋಡಿ ಫ್ಯಾನ್ಸ್ ಕೂಡ ಶುಭಕೋರಿದ್ದಾರೆ. ನೂರು ಕಾಲ ಜೊತೆಯಾಗಿ ಬಾಳಿ, ಮದುವೆ ಯಾವಾಗ ಎಂದೆಲ್ಲಾ ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ.

    ಕಾರ್ತಿಕ ದೀಪಂ, ಹಲವು ಶಾರ್ಟ್ ಫಿಲ್ಮ್ಂಗಳಲ್ಲಿ ಶೋಭಾ ಮತ್ತು ಯಶವಂತ್ ರೆಡ್ಡಿ ಜೊತೆಯಾಗಿ ನಟಿಸಿದ್ದಾರೆ. ಈ ಸ್ನೇಹವೇ ಪ್ರೀತಿಗೆ ತಿರುಗಿದೆ. ಇಬ್ಬರ ಪ್ರೀತಿಗೆ ಕುಟುಂಬಸ್ಥರ ಸಮ್ಮತಿಯೂ ಇದೆ. ಸದ್ಯದಲ್ಲೇ ಈ ಜೋಡಿ ಕಡೆಯಿಂದ ಮದುವೆ ಡೇಟ್ ಬಗ್ಗೆ ಅಪ್‌ಡೇಟ್ ಸಿಗಲಿದೆ.

  • ಭಾವಿ ಪತಿಗೆ ಕಾರ್ ಗಿಫ್ಟ್ ಮಾಡಿದ ‘ಅಗ್ನಿಸಾಕ್ಷಿ’ ನಟಿ

    ಭಾವಿ ಪತಿಗೆ ಕಾರ್ ಗಿಫ್ಟ್ ಮಾಡಿದ ‘ಅಗ್ನಿಸಾಕ್ಷಿ’ ನಟಿ

    ನ್ನಡದ ‘ಅಗ್ನಿಸಾಕ್ಷಿ’ (Agnisakshi) ನಟಿ ಶೋಭಾ ಶೆಟ್ಟಿ (Shoba Shetty) ಇದೀಗ ಭಾವಿ ಪತಿ ಯಶ್‌ವಂತ್ ಹುಟ್ಟುಹಬ್ಬಕ್ಕೆ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಗೆಳೆಯನ ಬರ್ತ್‌ಡೇ ಅದ್ಧೂರಿಯಾಗಿ ನಟಿ ಸೆಲೆಬ್ರೇಟ್ ಮಾಡಿದ್ದಾರೆ.

    ಇದೀಗ ಭಾವಿ ಪತಿಗೆ ಬೀಸ್ಟ್ ಎಕ್ಸ್‌ಯುವಿ 700 ಕಾರ್ ಅನ್ನು ಈ ವರ್ಷ ಯಶ್‌ವಂತ್‌ಗೆ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಆಗಿ ಕೊಟ್ಟಿದ್ದಾರೆ. ಅಂದಹಾಗೆ, ಮಾರುಕಟ್ಟೆಯಲ್ಲಿ ಈ ಕಾರಿಗೆ 15ರಿಂದ 20 ಲಕ್ಷ ರೂ. ಇದೆ. ಸದ್ಯ ಶೋಭಾ ಕೊಟ್ಟಿರುವ ಲವ್ಲಿ ಗಿಫ್ಟ್ ನೋಡಿ ಯಶ್‌ವಂತ್ ಕೂಡ ಸಂಭ್ರಮಿಸಿದ್ದಾರೆ. ಇದನ್ನೂ ಓದಿ:ಲಾಯರ್ ಆಗಿ ಶಿವಣ್ಣ ಖಡಕ್ ಎಂಟ್ರಿ- ಮೇಕಿಂಗ್ ವಿಡಿಯೋ ಚಿಂದಿ ಎಂದ ಫ್ಯಾನ್ಸ್

    ಇತ್ತೀಚೆಗೆ ನಟಿ ಹೈದರಾಬಾದ್‌ನಲ್ಲಿ ಹೊಸ ಮನೆ ಖರೀದಿಸಿದ್ದಾರೆ. ಗೃಹ ಪ್ರವೇಶ ಕೂಡ ಆಗಿದ್ದು, ಮುಂದಿನ ತಿಂಗಳು ಆ ಮನೆಗೆ ಶಿಫ್ಟ್ ಆಗಲಿದ್ದಾರೆ. ಇದನ್ನೂ ಓದಿ:ದಕ್ಷಿಣದ ಸಿನಿಮಾಗಳ ಮುಂದೆ ‘ಗೌರಿ’ ಸಾಂಗ್ ಸಖತ್ ಟ್ರೆಂಡಿಂಗ್

    ಕಳೆದ ತಿಂಗಳು ಅದ್ಧೂರಿಯಾಗಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಸದ್ಯದಲ್ಲೇ ‘ಬಿಗ್‌ ಬಾಸ್‌’ (Bigg Boss) ಖ್ಯಾತಿಯ ಶೋಭಾ ಮತ್ತು ಯಶ್‌ವಂತ್ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

  • ‘ಗಾಳಿಗುಡ್ಡ’ ಚಿತ್ರತಂಡ ಸೇರಿಕೊಂಡ ದರ್ಶಕ್‌, ಅರ್ಚನಾ ಕೊಟ್ಟಿಗೆ, ಯಶ್‌ವಂತ್

    ‘ಗಾಳಿಗುಡ್ಡ’ ಚಿತ್ರತಂಡ ಸೇರಿಕೊಂಡ ದರ್ಶಕ್‌, ಅರ್ಚನಾ ಕೊಟ್ಟಿಗೆ, ಯಶ್‌ವಂತ್

    ಸಿನಿಮಾ ಎಂಬ ಸುಂದರ ಲೋಕ ಎಂಥವರನ್ನು ಸೆಳೆದು ಬಿಡುತ್ತದೆ. ಎಷ್ಟೋ ಜನ ತಮಗಿರುವ ಫ್ಯಾಷನ್‌ಗೋಸ್ಕರ ಇಂಡಸ್ಟ್ರಿಗೆ ಬಂದರೆ ಇನ್ನು ಎಷ್ಟೋ ಜನ ತಮ್ಮ ಪ್ರತಿಭೆಯ ಅನಾವರಣಕ್ಕೋಸ್ಕರ ಕಾಲಿಡುತ್ತಾರೆ. ಇಲ್ಲಿ ನಿರ್ದೇಶಕರಿಗೆ ಪ್ರತಿಭೆ ಇರಬೇಕು. ನಿರ್ಮಾಪಕರಿಗೆ ಸಿನಿಮಾ ಮೇಲೆ ಜವಾಬ್ದಾರಿ ಇರಬೇಕು. ಆಗ ಮಾತ್ರ ಅದ್ಭುತವಾದೊಂದು ಸಿನಿಮಾ ಸೆಟ್ಟೇರುವುದಕ್ಕೆ ಸಾಧ್ಯ. ಇಷ್ಟೆಲ್ಲಾ ಪೀಠಿಕೆ ಹಾಕುವುದಕ್ಕೆ ಕಾರಣ ‘ಗಾಳಿಗುಡ್ಡ’ ಸಿನಿಮಾ. ಇದನ್ನೂ ಓದಿ:ಹೊಸ ಹೇರ್ ಸ್ಟೈಲಿನಲ್ಲಿ ಮಿಂಚಿದ ದುನಿಯಾ ವಿಜಯ್ ಪುತ್ರಿ

    ಇತ್ತಿಚೆಗಷ್ಟೇ ‘ಗಾಳಿಗುಡ್ಡ’ (Galigudda Film) ಸಿನಿಮಾ ಮುಹುರ್ತ ಕಂಡಿದೆ. ನಾಗರಭಾವಿ ಹನುಮಗಿರಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ಮುಹೂರ್ತ ಮುಗಿಸಿದೆ. ಈ ಸಿನಿಮಾಕ್ಕೆ ರಘು ಅಥರ್ವ ಎಂಬುವವರು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ನಿರ್ದೇಶನಕ್ಕೆ ಹೊಸಬರೇ ಆದರೂ ಪ್ರತಿಭೆ ಉಳ್ಳವರು. ನಿರ್ದೇಶನದ ಕನಸು ಹೊತ್ತ ರಘು ಅಥರ್ವ ಅದಕ್ಕೆಂದೆ ಒಂದಷ್ಟು ತಯಾರಿ, ತರಬೇತಿಗಳನ್ನು ಮಾಡಿಕೊಂಡು ಒಂದೊಳ್ಳೆಯ ಚಿತ್ರಕ್ಕೆ ನಿರ್ದೇಶನ ಮಾಡಲು ರೆಡಿಯಾಗಿದ್ದಾರೆ.

    ಈ ಸಿನಿಮಾಗೆ ರಘು ಪವನ್ ಬಂಡವಾಳ ಹೂಡುತ್ತಿದ್ದಾರೆ. ಸಿನಿಮಾ ಮೇಲಿನ ಆಸಕ್ತಿ ಇಂದು ನಿರ್ಮಾಣಕ್ಕೆ ಕರೆದು ನಿಲ್ಲಿಸಿದೆ. ರಘು ಪವನ್ ಒಬ್ಬ ಪ್ಯಾಷನೇಟ್ ನಿರ್ಮಾಪಕ ಎಂಬುದೇ ಇಡೀ ಚಿತ್ರತಂಡದ ಖುಷಿಗೆ ಕಾರಣವಾಗಿದೆ. ಸಿನಿಮಾ ಮೇಲೆ ಪ್ಯಾಷನ್ ನಿರ್ಮಾಪಕನಿಗಿದ್ದರೆ ಆ ಸಿನಿಮಾದಲ್ಲಿ ಯಾವುದಕ್ಕೂ ಕೊರತೆ ಇರುವುದಿಲ್ಲ. ತಂತ್ರಜ್ಞರು, ಕಲಾವಿದರು ಖುಷಿ ಖುಷಿಯಾಗಿ ಸಿನಿಮಾ ಮುಗಿಸುತ್ತಾರೆ. ರಘು ಪವನ್ ಕೂಡ ಅದೇ ರೀತಿ ಇರುವವರು. ಇದನ್ನೂ ಓದಿ:ಮೊದಲ ಬಾರಿಗೆ ದ್ವಿಪಾತ್ರದಲ್ಲಿ ನಟಿಸಲಿದ್ದಾರೆ ವಿಜಯ್ ದೇವರಕೊಂಡ

    ಮುಹೂರ್ತ ಮುಗಿಸಿಕೊಂಡಿರುವ ‘ಗಾಳಿಗುಡ್ಡ’ ಸಿನಿಮಾ ಕಳಸ, ಕುದರೆಮುಖ, ಚಿಕ್ಕಮಗಳೂರು ಮುಂತಾದ ಜಾಗಗಳಲ್ಲಿ ಶೂಟಿಂಗ್ ಮಾಡಲು ಪ್ಲ್ಯಾನ್ ಮಾಡಿದೆ. ಎಲ್ಲಾ ಅಂದುಕೊಂಡಂತೆ ಆದರೆ 2025 ಬೇಸಿಗೆಗೆ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ.

    ಮಲ್ಯಾಳಮ್ ಸಂಗೀತ ನಿರ್ದೇಶಕ ರಾಹುಲ್ ಸುಬ್ರಮಣ್ಯನ್ ಈ ಸಿನಿಮಾಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಶಾಖಾಹಾರಿ ಖ್ಯಾತಿಯ ವಿಶ್ವಜಿತ್ ರಾವ್ ಛಾಯಾಗ್ರಹಣ ಜವಾಬ್ದಾರಿ ಹೊತ್ತಿದ್ದಾರೆ.

    ಉಳಿದಂತೆ‌ ‘ಗೌರಿ ಶಂಕರ’ ಖ್ಯಾತಿಯ ಯಶ್ವಂತ್ ಬೆಟ್ಟಸ್ವಾಮಿ, ದರ್ಶಕ್, ಅರ್ಚನಾ ಕೊಟ್ಟಿಗೆ (Archana Kottige), ಮಂಜುನಾಥ್ ಹೆಗ್ಡೆ, ದೀಪಕ್ ರೈ, ಶ್ರೀವತ್ಸ, ಸಂದ್ಯಾ, ರೇಖಾ ಕೂಡ್ಲಿಗೆ ಸೇರಿದಂತೆ ದೊಡ್ಡ ತಾರಾಬಳಗವೇ ಈ ಸಿನಿಮಾದಲ್ಲಿದೆ.

  • ಈದ್ಗಾದಲ್ಲಿ ಗಣೇಶೋತ್ಸವಕ್ಕೆ ಬ್ರೇಕ್- ಹೈಕೋರ್ಟ್ ಆದೇಶದ ಬೆನ್ನಲ್ಲೇ ಕಣ್ಣೀರಿಟ್ಟ ಯಶವಂತ್

    ಈದ್ಗಾದಲ್ಲಿ ಗಣೇಶೋತ್ಸವಕ್ಕೆ ಬ್ರೇಕ್- ಹೈಕೋರ್ಟ್ ಆದೇಶದ ಬೆನ್ನಲ್ಲೇ ಕಣ್ಣೀರಿಟ್ಟ ಯಶವಂತ್

    ಬೆಂಗಳೂರು: ಭಾರೀ ವಿವಾದ ಎಬ್ಬಿಸಿದ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಪಾಡಲು ರಾಜ್ಯ ಹೈಕೋರ್ಟ್ ನೀಡಿದ ಆದೇಶದ ಬೆನ್ನಲ್ಲೇ ಚಾಮರಾಜಪೇಟೆ ನಾಗರೀಕರ ಒಕ್ಕೂಟದ ಖಜಾಂಚಿ ಯಶವಂತ್ ಕಣ್ಣೀರಿಟ್ಟಿದ್ದಾರೆ.

    ಈ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ರಾಜಕೀಯ ಷಡ್ಯಂತ್ರ ಮಾಡಲಾಗುತ್ತಿದೆ. ಸೆ.23ಕ್ಕೆ ವಿಚಾರಣೆ ಮುಂದೂಡಿಕೆಯಾಗಿದೆ. ಮುಂದಿನ ದಿನಗಳಲ್ಲಿ ನಮಗೆ ಜಯ ಸಿಗುತ್ತೆ ಅನ್ನೋ ಭರವಸೆಯಿದೆ. ಗಣೇಶೋತ್ಸವಕ್ಕೆ ಅವಕಾಶ ಸಿಗುತ್ತೆ ಅಂದುಕೊಂಡಿದ್ದೆವು. ನಾವು ಇದುವರೆಗೂ ಮುಸ್ಲಿಮರಿಗೆ ತೊಂದರೆ ಕೊಟ್ಟಿಲ್ಲ. ಆದರೆ ನಮ್ಮ ಗಣೇಶೋತ್ಸವಕ್ಕೆ ಯಾಕೆ ಇಷ್ಟೊಂದು ತೊಂದರೆ ಕೊಡುತ್ತಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕಿಲ್ಲ ಅವಕಾಶ – ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್ ಆದೇಶ

    ಗಲಭೆ ಎಬ್ಬಿಸೋಕೆ ಅವರೇ ಹೀಗೆ ಮಾಡುತ್ತಿದ್ದಾರೆ. ಅವರು ಹಬ್ಬ ಮಾಡಿದಾಗ ನಾವು ಏನಾದ್ರೂ ತೊಂದರೆ ಮಾಡಿದ್ವಾ..? ನಮ್ಮ ಆಚರಣೆಗಳಿಗೆ ಯಾಕೆ ತೊಂದ್ರೆ ಕೊಡುತ್ತಿದ್ದಾರೆ. ದಾಖಲೆಗಳಿಲ್ಲದಿದ್ದರೂ ವಕ್ಫ್ ಬೋರ್ಡ್ ಮತ್ತೆ ಕೇಸ್ ಹಾಕಿದ್ದಾರೆ. ನಮಗೆ ಜಯ ಸಿಕ್ಕೇ ಸಿಗುತ್ತೆ. ಮೈದಾನ ವಿಚಾರವಾಗಿ ರಾಜಕೀಯ ಷಡ್ಯಂತ್ರ ನಡೆಯುತ್ತಿದೆ ಎಂದು ಕಣ್ಣೀರಿಟ್ಟರು.

    Live Tv
    [brid partner=56869869 player=32851 video=960834 autoplay=true]

  • ಪ್ರಧಾನಿ ಮೋದಿ ಜೊತೆಯ ಸಂವಾದಕ್ಕೆ ಗ್ರಾಮೀಣ ಪ್ರತಿಭೆ ವಿದ್ಯಾರ್ಥಿ ಆಯ್ಕೆ

    ಪ್ರಧಾನಿ ಮೋದಿ ಜೊತೆಯ ಸಂವಾದಕ್ಕೆ ಗ್ರಾಮೀಣ ಪ್ರತಿಭೆ ವಿದ್ಯಾರ್ಥಿ ಆಯ್ಕೆ

    ಬೆಂಗಳೂರು: ವಿದ್ಯಾರ್ಥಿಗಳಲ್ಲಿ ಆತ್ಮಸ್ಥೆರ್ಯ ಹಾಗೂ ಪರೀಕ್ಷಾ ಭಯವನ್ನು ದೂರಗೊಳಿಸುವ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಗ್ರಾಮೀಣ ಪ್ರತಿಭೆ ವಿದ್ಯಾರ್ಥಿಯೊಬ್ಬ ಆಯ್ಕೆಯಾಗಿದ್ದಾನೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಕುಗ್ರಾಮ ಭೈರನಾಯ್ಕನಹಳ್ಳಿ ಸರ್ಕಾರಿ ಪ್ರೌಢ ಶಾಲೆಯ 9ನೇ ತರಗತಿಯ ಯಶವಂತ್, ಈ ಸಂವಾದಕ್ಕೆ ಆಯ್ಕೆಯಾಗಿದ್ದಾನೆ. ಪರೀಕ್ಷೆಗಳ ಪ್ರಾಶಾಸ್ತ್ಯ ಮತ್ತು ಮಹತ್ವದ ಕುರಿತು ಯಶವಂತ ಬರೆದಿದ್ದ ಕನ್ನಡ ಪ್ರಬಂಧ ಪ್ರಧಾನಿ ನರೇಂದ್ರ ಮೋದಿಯವರ ಸಂವಾದ ಕಾರ್ಯಕ್ರಮಕ್ಕೆ ಆಯ್ಕೆಯಾಗುವಂತೆ ಮಾಡಿದೆ.

    ಶಾಲೆಯ ವಿದ್ಯಾರ್ಥಿ ಕನ್ನಡದಲ್ಲಿ ಬರೆದಿದ್ದ ಪ್ರಬಂಧವನ್ನು ಶಾಲೆಯ ಮುಖ್ಯ ಶಿಕ್ಷಕರು ಇಂಗ್ಲಿಷ್‍ನಲ್ಲಿ ತರ್ಜುಮೆ ಮಾಡಿ ಕಳುಹಿಸಿದ್ದರು. ಒಟ್ಟಾರೆ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಯ ಪರಿಶ್ರಮದಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಯೊಬ್ಬ ಪ್ರಧಾನಿಗಳ ಸಂವಾದಕ್ಕೆ ಆಯ್ಕೆಯಾಗಿದ್ದಾನೆ. ದೆಹಲಿಗೆ ತೆರಳಲು ಶಿಕ್ಷಕರು ಎಲ್ಲಾ ತಯಾರಿಯನ್ನು ನಡೆಸುತ್ತಿದ್ದಾರೆ.

    ಯಶವಂತ್ ಕಡು ಬಡತನದ ಕುಟುಂಬದ ವಿದ್ಯಾರ್ಥಿ. ತಂದೆ ಡ್ರೈವಿಂಗ್ ಕೆಲಸ ಮಾಡುತ್ತಿದ್ದರೆ, ತಾಯಿ ಮನೆ ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ಶಿಕ್ಷಕರ ಹಾಗೂ ಸಹಪಾಠಿಗಳ ಸಹಯೋಗದಿಂದ ಶಿಕ್ಷಣದ ಆಸಕ್ತಿಗೆ ಇಂದು ಒಂದು ದಾರಿ ಸಿಕ್ಕ ಆಗಿದೆ. ಈ ಖುಷಿಯಲ್ಲಿ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಯಶವಂತ್‍ಗೆ ಸನ್ಮಾನಿಸಿ ಗೌರವಿಸಿದರು.

    ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಯಶವಂತ್ ಸಂತಸವನ್ನು ವ್ಯಕ್ತಪಡಿಸಿ, ಈ ಪರಿಶ್ರಮಕ್ಕೆ ನನ್ನ ತಂದೆ-ತಾಯಿ, ಪರಿಶ್ರಮ, ಮುಖ್ಯವಾಗಿ ನನ್ನ ಮೆಚ್ಚಿನ ಗುರುಗಳು, ಹೀಗಾಗಿ ಪ್ರಧಾನಿಯವರ ಕಾರ್ಯಕ್ರಮ ಹಾಗೂ ಅವರನ್ನು ನೇರವಾಗಿ ನೋಡುವ ಅವಕಾಶ ಸಿಕ್ಕಿದೆ. ನನಗೆ ಸಂತೋಷವಾಗಿದೆ ಎಂದು ಹೇಳಿದ್ದಾನೆ.