ನವದೆಹಲಿ: ನಗದು ಹಣ ಪತ್ತೆ ವಿವಾದದಲ್ಲಿ ಸಿಲುಕಿರುವ ದೆಹಲಿ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ಯಶವಂತ್ ವರ್ಮಾ (Yashwant Varma) ಅವರನ್ನು ಪದಚ್ಯುತಗೊಳಿಸುವ ಪ್ರಸ್ತಾಪವನ್ನು ಪರಿಶೀಲಿಸಲು ಮೂವರು ಸದಸ್ಯರ ಸಮಿತಿಯನ್ನು ರಚಿಸುವುದಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಪ್ರಕಟಿಸಿದ್ದಾರೆ.
ನ್ಯಾಯಮೂರ್ತಿ ವರ್ಮಾ ವಿರುದ್ಧದ ಆರೋಪಗಳ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ನ್ಯಾಯಾಧೀಶ ಅರವಿಂದ್ ಕುಮಾರ್, ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮಣೀಂದ್ರ ಮೋಹನ್ ಶ್ರೀವಾಸ್ತವ ಮತ್ತು ನ್ಯಾಯಶಾಸ್ತ್ರಜ್ಞ ಬಿ.ವಿ. ಆಚಾರ್ಯ ಅವರನ್ನು ಒಳಗೊಂಡ ಸಮಿತಿ ಇರಲಿದೆ. ಇದನ್ನೂ ಓದಿ: ಕಂತೆ ಕಂತೆ ಹಣ ಕೇಸ್ – ನ್ಯಾ.ಯಶವಂತ್ ವರ್ಮಾ ಅರ್ಜಿ ವಜಾ
ವರ್ಮಾ ಅವರ ನಿವಾಸದಲ್ಲಿ ಭಾರಿ ಪ್ರಮಾಣದ ನಗದು ಪತ್ತೆಯಾದ ನಂತರ, ಅವರ ವಿರುದ್ಧದ ದೋಷಾರೋಪಣೆಗೆ 146 ಸಂಸದರು ಬೆಂಬಲಿಸಿದ ನಿರ್ಣಯವನ್ನು ಅಂಗೀಕರಿಸಿದ ನಂತರ ಲೋಕಸಭಾ ಸ್ಪೀಕರ್ ಈ ಘೋಷಣೆ ಮಾಡಿದರು.
ಮಾ.14 ರ ಸಂಜೆ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ನಿವಾಸದಲ್ಲಿ ಸಂಭವಿಸಿದ ಬೆಂಕಿಯ ಪರಿಣಾಮವಾಗಿ ಅಗ್ನಿಶಾಮಕ ದಳದವರು ಲೆಕ್ಕಕ್ಕೆ ಸಿಗದ ದೊಡ್ಡ ಪ್ರಮಾಣದ ಹಣವನ್ನು ಪತ್ತೆಹಚ್ಚಿದರು. ನಂತರ ಬಂದ ವೀಡಿಯೊದಲ್ಲಿ ಬೆಂಕಿಯಲ್ಲಿ ಹಣದ ಬಂಡಲ್‌ಗಳು ಸುಟ್ಟುಹೋಗುತ್ತಿರುವುದನ್ನು ತೋರಿಸಲಾಗಿದೆ. ಇದನ್ನೂ ಓದಿ: ನ್ಯಾ. ವರ್ಮಾ ನಡೆ ವಿಶ್ವಾಸ ಮೂಡಿಸುವುದಿಲ್ಲ; ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್
ಈ ಘಟನೆಯು ನ್ಯಾಯಮೂರ್ತಿ ವರ್ಮಾ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಹೊರಿಸಿತು. ಆದರೆ, ಅವರು ಆರೋಪಗಳನ್ನು ನಿರಾಕರಿಸಿದರು. ಈ ಆರೋಪಗಳನ್ನು ತಮ್ಮ ಮೇಲೆ ಹೊರಿಸಲು ನಡೆಸಲಾದ ಪಿತೂರಿ ಎಂದು ಬಣ್ಣಿಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಭಾರತದ ಮುಖ್ಯ ನ್ಯಾಯಾಧೀಶರು ಆಂತರಿಕ ತನಿಖೆಗೆ ಆದೇಶಿಸಿದರು. ಮಾ.22 ರಂದು ಈ ವಿಷಯದ ತನಿಖೆಗಾಗಿ ಮೂವರು ಸದಸ್ಯರ ಸಮಿತಿಯನ್ನು ರಚಿಸಿದರು.
ಆರೋಪಗಳ ನಂತರ, ನ್ಯಾಯಮೂರ್ತಿ ವರ್ಮಾ ಅವರನ್ನು ಅವರ ಮಾತೃ ನ್ಯಾಯಾಲಯವಾದ ಅಲಹಾಬಾದ್ ಹೈಕೋರ್ಟ್‌ಗೆ ವಾಪಸ್ ಕಳುಹಿಸಲಾಯಿತು. ಅಲ್ಲಿ ಅವರು ಇತ್ತೀಚೆಗೆ ಪ್ರಮಾಣ ವಚನ ಸ್ವೀಕರಿಸಿದರು. ಆದಾಗ್ಯೂ, ಸಿಜೆಐ ನಿರ್ದೇಶನಗಳ ಮೇರೆಗೆ ಅವರ ನ್ಯಾಯಾಂಗ ಜವಾಬ್ದಾರಿಗಳನ್ನು ಹಿಂತೆಗೆದುಕೊಳ್ಳಲಾಯಿತು.
– ರಾಷ್ಟ್ರಪತಿ, ಪ್ರಧಾನಿಗೆ ಸಿಜೆಐ ಪತ್ರ ಬರೆದಿದ್ದು ಅಸಾಂವಿಧಾನಿಕವಲ್ಲ; ಸುಪ್ರೀಂ
ನವದೆಹಲಿ: ತಮ್ಮ ವಿರುದ್ಧದ ಆತಂರಿಕ ತನಿಖೆ ವರದಿಯನ್ನು ಪ್ರಶ್ನಿಸಿ ನ್ಯಾಯಮೂರ್ತಿ ಯಶವಂತ್ ವರ್ಮಾ (Yashwant Varma) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ (Supreme Court) ವಜಾ ಮಾಡಿದೆ.
ನಗದು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಹುದ್ದೆಯಿಂದ ತೆಗೆದುಹಾಕುವಂತೆ ಶಿಫಾರಸು ಮಾಡಿದ ಭಾರತದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ನೇತೃತ್ವದ ಸಮಿತಿಯ ಶಿಫಾರಸನ್ನು ಪ್ರಶ್ನಿಸಿ ವರ್ಮಾ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಇದನ್ನೂ ಓದಿ: ಕಂದಕಕ್ಕೆ ಬಿದ್ದ ಸಿಆರ್‌ಪಿಎಫ್ ವಾಹನ – ಮೂವರು ಹುತಾತ್ಮ, 16 ಮಂದಿಗೆ ಗಾಯ
ಈ ಬಗ್ಗೆ ಇಂದು ತೀರ್ಪು ನೀಡಿದ ಕೋರ್ಟ್, ಈ ಪ್ರಕರಣದಲ್ಲಿ ಆಗಿನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಮತ್ತು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಕಳುಹಿಸಿದ ಪತ್ರವು ಸಂವಿಧಾನಬಾಹಿರವಲ್ಲ ಎಂದು ಒಪ್ಪಿಕೊಂಡಿದೆ. ನ್ಯಾಯಾಲಯವು ಆಂತರಿಕ ತನಿಖಾ ಪ್ರಕ್ರಿಯೆಯನ್ನು ನಿಯಮಗಳ ಪ್ರಕಾರವೇ ಮಾಡಲಾಗಿದೆ ಎಂದು ಹೇಳಿದೆ.
ಮುಖ್ಯ ನ್ಯಾಯಾಧೀಶರಿಗೆ ಕೇವಲ ಹೆಸರಿಗೆ ಮಾತ್ರ ಹುದ್ದೆಯಲ್ಲ. ಅವರು ದೇಶ ಮತ್ತು ನ್ಯಾಯಾಂಗದ ಬಗ್ಗೆ ಜವಾಬ್ದಾರಿಗಳನ್ನು ಹೊಂದಿದ್ದಾರೆ. ಅವರು ಕೇವಲ ಅಂಚೆ ಕಚೇರಿಯಂತೆ ಕೆಲಸ ಮಾಡಲು ಸಾಧ್ಯವಿಲ್ಲ. ನ್ಯಾಯಮೂರ್ತಿ ವರ್ಮಾ ಅವರ ನಡವಳಿಕೆ ನ್ಯಾಯಾಂಗದ ಘನತೆಗೆ ಅನುಗುಣವಾಗಿಲ್ಲ. ಅವರ ವಿರುದ್ಧ ತೆಗೆದುಕೊಂಡ ತನಿಖೆ ಮತ್ತು ಕ್ರಮ ಸರಿಯಾಗಿದೆ ಎಂದು ಕೋರ್ಟ್ ಹೇಳಿದೆ. ಇದನ್ನೂ ಓದಿ: ಯಾವುದೇ ಕಾರಣಕ್ಕೂ ರಾಜಿಯಾಗಲ್ಲ, ನನಗೆ ರೈತರ ಹಿತವೇ ಮುಖ್ಯ: ಟ್ರಂಪ್‌ಗೆ ಮೋದಿ ಗುದ್ದು
ಹಿಂದಿನ ವಿಚಾರಣೆಯ ಸಮಯದಲ್ಲಿ, ನ್ಯಾ. ವರ್ಮಾ ಅವರು ಆಂತರಿಕ ಸಮಿತಿಯ ರಚನೆಯು ಅಸಾಂವಿಧಾನಿಕ ಎಂದು ವಾದಿಸಿದ್ದರು. ಆರಂಭದಲ್ಲಿಯೇ ಅದನ್ನು ಏಕೆ ಆಕ್ಷೇಪಿಸಲಿಲ್ಲ ಎಂದು ನ್ಯಾಯಪೀಠ ಅವರಿಗೆ ಪ್ರಶ್ನಿಸಿತ್ತು. ಯಶವಂತ್ ವರ್ಮಾ ವಿರುದ್ಧದ ದೋಷಾರೋಪಣೆ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಸಂಸತ್ತಿಗೆ ಈ ತೀರ್ಪು ಹಾದಿಯಾಗಿದೆ.
ನ್ಯಾ. ವರ್ಮಾ ಅವರ ದೆಹಲಿಯ ನಿವಾಸದಲ್ಲಿ ಸಂಭವಿಸಿದ ಅಗ್ನಿ ಅವಘಡದ ವೇಳೆ ಭಾರೀ ಪ್ರಮಾಣದ ನಗದು ಪತ್ತೆಯಾಗಿತ್ತು. ಈ ಘಟನೆ ನಂತರ ಅವರನ್ನು ದೆಹಲಿ ಹೈಕೋರ್ಟ್ನಿಂದ ಅಲಹಾಬಾದ್ ಹೈಕೋರ್ಟ್ಗೆ ವರ್ಗಾಯಿಸಲಾಯಿತು. ಭ್ರಷ್ಟಾಚಾರದ ಆರೋಪಗಳ ಹಿನ್ನಲೆಯಲ್ಲಿ ಆಗಿನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ತ್ರಿಸದಸ್ಯ ಸಮಿತಿಯನ್ನು ರಚಿಸಿದ್ದರು.
ನವದೆಹಲಿ: ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ (Justice Yashwant Varma) ವಿರುದ್ಧ ವಾಗ್ದಂಡನೆ (Impeachment) ಪ್ರಸ್ತಾವನೆಯ ಪ್ರಕ್ರಿಯೆಗೆ ಸಂಸತ್ತಿನಲ್ಲಿ ಅಧಿಕೃತ ಚಾಲನೆ ಸಿಕ್ಕಿದೆ. ನಗದು ಪತ್ತೆ ಪ್ರಕರಣದಲ್ಲಿ ನ್ಯಾಯಮೂರ್ತಿ ವರ್ಮಾರನ್ನು ಪದಚ್ಯುತಗೊಳಿಸುವಂತೆ ಕೋರಿ ಪಕ್ಷಾತೀತವಾಗಿ 200ಕ್ಕೂ ಹೆಚ್ಚು ಸಂಸದರು ಅಂಕಿತ ಹಾಕಿದ್ದಾರೆ.
ಲೋಕಸಭೆಯ (Loksabha) 145 ಮತ್ತು ರಾಜ್ಯಸಭೆಯ 63 ಸಂಸದರು ಯಶವಂತ್ ವರ್ಮಾ ವಿರುದ್ಧ ವಾಗ್ದಂಡನೆ ಕೋರಿ ಲೋಕಸಭೆಯ ಸ್ಪೀಕರ್ ಮತ್ತು ರಾಜ್ಯಸಭೆಯ ಸಭಾಧ್ಯಕ್ಷರಿಗೆ ನೋಟಿಸ್ ನೀಡಿದ್ದಾರೆ. ರಾಜ್ಯಸಭೆಯ ಸ್ಪೀಕರ್ ಜಗದೀಪ್ ಧನಕರ್ ಅವರಿಗೆ ಸಲ್ಲಿಕೆಯಾದ ಪತ್ರಕ್ಕೆ ಆಪ್ ಮತ್ತು ಇಂಡಿಯಾ ಕೂಟದ ನಾಯಕರು ಸೇರಿದಂತೆ 63 ರಾಜ್ಯಸಭಾ ಸದಸ್ಯರು ಅಂಕಿತ ಹಾಕಿದ್ದಾರೆ.
ವಾಗ್ದಂಡನೆ ಪ್ರಕ್ರಿಯೆ ಮುಂದೇನು?
ವಾಗ್ದಂಡನೆ ಎಂದರೆ ನ್ಯಾಯಾಧೀಶರ ಪದಚ್ಯುತ ಪ್ರಕ್ರಿಯೆ. ಪದಚ್ಯುತಗೊಳಿಸಲು ಲೋಕಸಭೆಯಲ್ಲಿ ಕನಿಷ್ಠ 100 ಸದಸ್ಯರು ಮತ್ತು ರಾಜ್ಯಸಭೆಯಲ್ಲಿ ಕನಿಷ್ಠ 50 ಸದಸ್ಯರು ಸಹಿ ಹಾಕಬೇಕಾಗುತ್ತದೆ.
ಸಮಿತಿಯಲ್ಲಿ ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯಮೂರ್ತಿಗಳು. ಹೈಕೋರ್ಟ್‌ನ ಹಾಲಿ ಮುಖ್ಯ ನ್ಯಾಯಮೂರ್ತಿ, ನ್ಯಾಯಶಾಸ್ತ್ರಜ್ಞರು ಮೂರು ತಿಂಗಳಲ್ಲಿ ವರದಿ ನೀಡುವಂತೆ ಸೂಚಿಸಲಾಗುತ್ತದೆ. ತನಿಖಾ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಲಾಗುತ್ತದೆ.
ಎರಡೂ ಸದನಗಳಲ್ಲಿ ವರದಿ ಮೇಲೆ ಚರ್ಚೆ ನಡೆದ ಬಳಿಕ ಪದಚ್ಯುತಗೊಳಿಸುವ ಪ್ರಸ್ತಾವನೆಯ ಮೇಲೆ ಮತದಾನ ಮಾಡಲಾಗುತ್ತದೆ. 2/3ರಷ್ಟು ಬಹುಮತ ದೊರೆತರೆ ವರ್ಮಾರ ವಾಗ್ದಂಡನೆ ಆಗಲಿದೆ. ಬಳಿಕ ಸಂಸತ್ ಶಿಫಾರಸಿನಂತೆ ರಾಷ್ಟ್ರಪತಿಗಳು ವಜಾ ಮಾಡುತ್ತಾರೆ.
ನವದೆಹಲಿ: ದೆಹಲಿಯಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಪತ್ತೆಯಾದ ಕಂತೆ ಕಂತೆ ನೋಟು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ (Allahabad High Court) ನ್ಯಾಯಾಧೀಶ ನ್ಯಾ.ಯಶವಂತ್ ವರ್ಮಾ (Yashwant Varma) ಸುಪ್ರೀಂ ಕೋರ್ಟ್ (Supreme Court) ಮೆಟ್ಟಿಲೇರಿದ್ದಾರೆ. ತಮ್ಮ ವಿರುದ್ಧದ ಆಂತರಿಕ ಸಮಿತಿ ನೀಡಿದ ವರದಿಯನ್ನು ಅವರು ಪ್ರಶ್ನಿಸಿದ್ದಾರೆ.
ನ್ಯಾಯಮೂರ್ತಿ ವರ್ಮಾ ಅವರನ್ನು ಅಧಿಕಾರದಿಂದ ತೆಗೆದುಹಾಕಲು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಹಾಭಿಯೋಗ (Impeachment – ಸರ್ಕಾರಿ ಸೇವೆಯಲ್ಲಿರುವ ವ್ಯಕ್ತಿಯ ಮೇಲೆ ಗಂಭೀರ ಆರೋಪ ಬಂದಾಗ ಅವರನ್ನು ಅಧಿಕಾರದಿಂದ ತೆಗೆದುಹಾಕಲು ಸಂಸತ್ತಿಗೆ ಇರುವ ಅಧಿಕಾರವನ್ನು ಮಹಾಭಿಯೋಗ ಎನ್ನುತ್ತಾರೆ) ನಿರ್ಣಯ ಮಂಡಿಸಲು ತಯಾರಿ ಆರಂಭಿಸಿದೆ ಎಂಬ ವರದಿಗಳು ಬಂದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ನ್ಯಾಯಾಧೀಶರ ವಿರುದ್ಧದ ದೂರುಗಳ ವಿಚಾರಣೆಯ ಆಂತರಿಕ ಕಾರ್ಯವಿಧಾನವನ್ನು ನ್ಯಾಯಮೂರ್ತಿ ವರ್ಮಾ ಪ್ರಶ್ನಿಸಿದ್ದಾರೆ. ಇದು ಸಂಸತ್ತಿನಲ್ಲಿ (Parliament) ಹೈಕೋರ್ಟ್ ನ್ಯಾಯಾಧೀಶರನ್ನು ತೆಗೆದುಹಾಕುವ ಅಧಿಕಾರವನ್ನು ಪ್ರತ್ಯೇಕವಾಗಿ ಹೊಂದಿರುವ ಕಾನೂನಿನಿಂದ ಅವಮಾನಿಸುವ ಸಮಾನಾಂತರ, ಸಾಂವಿಧಾನಿಕವಲ್ಲದ ಕಾರ್ಯವಿಧಾನವನ್ನು ಸೃಷ್ಟಿಸುತ್ತದೆ ಎಂದು ವಾದಿಸಿದ್ದಾರೆ.
ನ್ಯಾಯಾಧೀಶರ (ವಿಚಾರಣಾ) ಕಾಯ್ದೆ, 1968 ರ ಅಡಿಯಲ್ಲಿ ಒದಗಿಸಲಾದ ಸುರಕ್ಷತಾ ಕ್ರಮಗಳನ್ನು ಆಂತರಿಕ ಕಾರ್ಯವಿಧಾನವು ಹೊಂದಿಲ್ಲ. ಯಾವುದೇ ಔಪಚಾರಿಕ ದೂರು ದಾಖಲಾಗದೇ ಇದ್ದಾಗ ತನ್ನ ವಿರುದ್ಧ ಆಂತರಿಕ ವಿಚಾರಣೆ ನಡೆಸಲಾಗಿದೆ. ಇದು ಅನುಚಿತ ಮತ್ತು ಅಮಾನ್ಯವಾಗಿದೆ. ಸುಪ್ರೀಂ ಕೋರ್ಟ್ ಪತ್ರಿಕಾ ಪ್ರಕಟಣೆಯ ಮೂಲಕ ಆರೋಪಗಳನ್ನು ಬಹಿರಂಗಪಡಿಸಿದ್ದರಿಂದ ಅವರು ಮಾಧ್ಯಮ ವಿಚಾರಣೆಗೆ ಒಳಪಟ್ಟಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಇದನ್ನೂಓದಿ: ಕಂತೆ ಕಂತೆ ನೋಟು ಪತ್ತೆಯಾದ ಜಡ್ಜ್ ಮೇಲೆ ದಾಖಲಾಗಿತ್ತು ಸಿಬಿಐ ಎಫ್‌ಐಆರ್
ಮನೆಯಲ್ಲಿ ಕಂತೆ ಕಂತೆ ನೋಟು (Cash) ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ನ್ಯಾ.ನ್ಯಾಯಮೂರ್ತಿ ಯಶವಂತ್ ವರ್ಮಾ (Justice Yashwant Varma) ಅವರನ್ನು ವಜಾಗೊಳಿಸುವಂತೆ ಮೂವರು ಹಿರಿಯ ನ್ಯಾಯಾಧೀಶರ ಸಮಿತಿ ಶಿಫಾರಸು ಮಾಡಿತ್ತು. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು, ಹಿಮಾಚಲ ಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಿಎಸ್ ಸಂಧಾವಾಲಿಯಾ ಮತ್ತು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಅನು ಶಿವರಾಮನ್ ಇದ್ದ ಸಮಿತಿ ತನ್ನ ಅಂತಿಮ ವರದಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಿತ್ತು. ಇದನ್ನೂಓದಿ: ಬಂದ್‌ಗೆ ಮುಂದಾಗಿದ್ದ ಸಾರಿಗೆ ಸಂಘಟನೆಗಳಿಗೆ ಶಾಕ್ –ಎಸ್ಮಾ ಜಾರಿ, 6 ತಿಂಗಳು ಪ್ರತಿಭಟನೆಗೆ ನಿಷೇಧ
ನ್ಯಾ. ಯಶವಂತ್ ವರ್ಮಾ ಅವರ ನಿವಾಸದೊಳಗೆ ನೋಟುಗಳ ದೊಡ್ಡ ರಾಶಿ ಇರುವುದನ್ನು ಹಲವು ಮಂದಿ ನೋಡಿದ್ದಾರೆ. ಆದರೆ ವರ್ಮಾ ಅವರು ಎಂದಿಗೂ ದೂರು ದಾಖಲಿಸಿಲ್ಲ ಅಥವಾ ನ್ಯಾಯಾಂಗದ ಅಧಿಕಾರಿಗಳಿಗೆ ತಿಳಿಸಿಲ್ಲ ಎಂದು ಸಮಿತಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶರ ಈ ನಡವಳಿಕೆಯನ್ನು ಅಸ್ವಾಭಾವಿಕ ಎಂದು ಕರೆದಿರುವ ಸಮಿತಿಯು ಅವರನ್ನು ವಜಾಗೊಳಿಸುವಂತೆ ಶಿಫಾರಸು ಮಾಡಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾ. ವರ್ಮಾ ಅವರು ಸಮರ್ಥನೀಯ ವಿವರಣೆಯನ್ನು ನೀಡಿಲ್ಲ. ಯಾವುದೇ ಪಿತೂರಿ ಇದ್ದರೆ ಅವರು ದೂರು ದಾಖಲಿಸಿಲ್ಲ ಯಾಕೆ? ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅಥವಾ ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ಮಾಹಿತಿ ನೀಡಿಲ್ಲ ಯಾಕೆ ಎಂದು ಸಮಿತಿ ಪ್ರಶ್ನಿಸಿತ್ತು.
ನ್ಯಾ. ವರ್ಮಾ ಅವರ ಮಗಳು ಸೇರಿದಂತೆ 55 ಸಾಕ್ಷಿಗಳನ್ನು ವಿಚಾರಣೆ ನಡೆಸಿದ ಸಮಿತಿ ಅಗ್ನಿಶಾಮಕ ಮತ್ತು ಪೊಲೀಸ್ ಸಿಬ್ಬಂದಿಯಿಂದ ಕೋಣೆಯ ನೆಲದಾದ್ಯಂತ ಹರಡಿರುವ 500 ರೂ. ನೋಟುಗಳ ದೊಡ್ಡ ರಾಶಿಯನ್ನು ವಿಡಿಯೋ ಮತ್ತು ಫೋಟೋಗಳನ್ನು ಪರಿಶೀಲಿಸಿದೆ. ಇಷ್ಟು ದೊಡ್ಡ ಮೊತ್ತದ ಹಣವನ್ನು ನೋಡಿ ನನಗೆ ಆಘಾತ ಮತ್ತು ಆಶ್ಚರ್ಯವಾಯಿತು. ನನ್ನ ಜೀವನದಲ್ಲಿ ಇಷ್ಟೊಂದು ಹಣವನ್ನು ನಾನು ಮೊದಲ ಬಾರಿಗೆ ನೋಡಿದ್ದೇನೆ ಎಂದು ಒಬ್ಬ ಸಾಕ್ಷಿ ಸಮಿತಿಗೆ ತಿಳಿಸಿದ್ದಾರೆ ಎಂದು ವರದಿ ಹೇಳಿತ್ತು.
ನವದೆಹಲಿ: ಮನೆಯಲ್ಲಿ ಕಂತೆ ಕಂತೆ ನೋಟು (Cash) ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ನ (Delhi High Court) ಮಾಜಿ ನ್ಯಾ.ನ್ಯಾಯಮೂರ್ತಿ ಯಶವಂತ್ ವರ್ಮಾ (Justice Yashwant Varma) ಅವರನ್ನು ವಜಾಗೊಳಿಸುವಂತೆ ಮೂವರು ಹಿರಿಯ ನ್ಯಾಯಾಧೀಶರ ಸಮಿತಿ ಶಿಫಾರಸು ಮಾಡಿದೆ.
ಕಂತೆ ಕಂತೆ ಹಣ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ (Supreme Court) ನೇಮಿಸಿದ ಸಮಿತಿಯು 55 ಸಾಕ್ಷಿಗಳನ್ನು ಸಂದರ್ಶಿಸಿ ನ್ಯಾಯಮೂರ್ತಿ ವರ್ಮಾ ಅವರ ಹೇಳಿಕೆಯನ್ನು ದಾಖಲಿಸಿಕೊಂಡು ಶಿಫಾರಸು ಮಾಡಿದೆ.
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು, ಹಿಮಾಚಲ ಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಿಎಸ್ ಸಂಧಾವಾಲಿಯಾ ಮತ್ತು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಅನು ಶಿವರಾಮನ್ ಇದ್ದ ಸಮಿತಿ ತನ್ನ ಅಂತಿಮ ವರದಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಿದೆ. ಇದನ್ನೂ ಓದಿ:ಆರ್‌ಸಿಬಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದೆ – ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ಬಾಂಬ್
ನ್ಯಾ. ಯಶವಂತ್ ವರ್ಮಾ ಅವರ ನಿವಾಸದೊಳಗೆ ನೋಟುಗಳ ದೊಡ್ಡ ರಾಶಿ ಇರುವುದನ್ನು ಹಲವು ಮಂದಿ ನೋಡಿದ್ದಾರೆ. ಆದರೆ ವರ್ಮಾ ಅವರು ಎಂದಿಗೂ ದೂರು ದಾಖಲಿಸಿಲ್ಲ ಅಥವಾ ನ್ಯಾಯಾಂಗದ ಅಧಿಕಾರಿಗಳಿಗೆ ತಿಳಿಸಿಲ್ಲ ಎಂದು ಸಮಿತಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶರ ಈ ನಡವಳಿಕೆಯನ್ನು ಅಸ್ವಾಭಾವಿಕ ಎಂದು ಕರೆದಿರುವ ಸಮಿತಿಯು ಅವರನ್ನು ವಜಾಗೊಳಿಸುವಂತೆ ಶಿಫಾರಸು ಮಾಡಿದೆ.
ನ್ಯಾ. ವರ್ಮಾ ಅವರ ಮಗಳು ಸೇರಿದಂತೆ 55 ಸಾಕ್ಷಿಗಳನ್ನು ವಿಚಾರಣೆ ನಡೆಸಿದ ಸಮಿತಿ ಅಗ್ನಿಶಾಮಕ ಮತ್ತು ಪೊಲೀಸ್ ಸಿಬ್ಬಂದಿಯಿಂದ ಕೋಣೆಯ ನೆಲದಾದ್ಯಂತ ಹರಡಿರುವ 500 ರೂ. ನೋಟುಗಳ ದೊಡ್ಡ ರಾಶಿಯನ್ನು ವಿಡಿಯೋ ಮತ್ತು ಫೋಟೋಗಳನ್ನು ಪರಿಶೀಲಿಸಿದೆ. ಇಷ್ಟು ದೊಡ್ಡ ಮೊತ್ತದ ಹಣವನ್ನು ನೋಡಿ ನನಗೆ ಆಘಾತ ಮತ್ತು ಆಶ್ಚರ್ಯವಾಯಿತು. ನನ್ನ ಜೀವನದಲ್ಲಿ ಇಷ್ಟೊಂದು ಹಣವನ್ನು ನಾನು ಮೊದಲ ಬಾರಿಗೆ ನೋಡಿದ್ದೇನೆ ಎಂದು ಒಬ್ಬ ಸಾಕ್ಷಿ ಸಮಿತಿಗೆ ತಿಳಿಸಿದ್ದಾರೆ ಎಂದು ವರದಿ ಹೇಳಿದೆ. ಇದನ್ನೂ ಓದಿ: ಹಿಂಸಾಚಾರಕ್ಕೆ ಬೆದರಿಕೆ ಹಾಕಿದವರ ವಿರುದ್ಧ ಕ್ರಮ ಯಾಕಿಲ್ಲ – ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಪ್ರಶ್ನೆ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾ. ವರ್ಮಾ ಅವರು ಸಮರ್ಥನೀಯ ವಿವರಣೆಯನ್ನು ನೀಡಿಲ್ಲ. ಯಾವುದೇ ಪಿತೂರಿ ಇದ್ದರೆ ಅವರು ದೂರು ದಾಖಲಿಸಿಲ್ಲ ಯಾಕೆ? ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅಥವಾ ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ಮಾಹಿತಿ ನೀಡಿಲ್ಲ ಯಾಕೆ ಎಂದು ಸಮಿತಿ ಪ್ರಶ್ನಿಸಿದೆ.
ಸಮಿತಿಯೂ ಅಂಕಿತ್ ಸೆಹ್ವಾಗ್ (ಅಗ್ನಿಶಾಮಕ ಅಧಿಕಾರಿ, ಡಿಎಫ್‌ಎಸ್), ಪ್ರದೀಪ್ ಕುಮಾರ್ (ಅಗ್ನಿಶಾಮಕ ಅಧಿಕಾರಿ, ಡಿಎಫ್‌ಎಸ್), ಮನೋಜ್ ಮೆಹ್ಲಾವತ್ (ಸ್ಟೇಷನ್ ಆಫೀಸರ್, ಡಿಎಫ್‌ಎಸ್), ಭನ್ವರ್ ಸಿಂಗ್ (ಚಾಲಕ, ಡಿಎಫ್‌ಎಸ್), ಪ್ರವೀಂದ್ರ ಮಲಿಕ್ (ಅಗ್ನಿಶಾಮಕ ಅಧಿಕಾರಿ, ಡಿಎಫ್‌ಎಸ್), ಸುಮನ್ ಕುಮಾರ್ (ಸಹಾಯಕ ವಿಭಾಗೀಯ ಅಧಿಕಾರಿ, ಡಿಎಫ್‌ಎಸ್), ರಾಜೇಶ್ ಕುಮಾರ್ (ತುಘಲಕ್ ರಸ್ತೆ ಪೊಲೀಸ್ ಠಾಣೆ) ಸುನಿಲ್ ಕುಮಾರ್ (ಐಸಿಪಿಸಿಆರ್ ಉಸ್ತುವಾರಿ), ರೂಪ್ ಚಂದ್ (ಹೆಡ್ ಕಾನ್ಸ್‌ಟೇಬಲ್), ಮತ್ತು ಉಮೇಶ್ ಮಲಿಕ್ (ಎಸ್‌ಎಚ್‌ಒ, ತುಘಲಕ್ ರಸ್ತೆ ಪೊಲೀಸ್ ಠಾಣೆ) ಅವರನ್ನು ವಿಚಾರಣೆ ನಡೆಸಿದೆ.
ನವದೆಹಲಿ: ನ್ಯಾಯಮೂರ್ತಿ ಯಶವಂತ್ ವರ್ಮಾ (Yashwant Varma) ಭ್ರಷ್ಟಾಚಾರ ಪ್ರಕರಣದ ಕುರಿತು ತನಿಖೆ ನಡೆಸಿದ ಮೂವರು ನ್ಯಾಯಮೂರ್ತಿಗಳ ಆಂತರಿಕ ಸಮಿತಿಗೆ ಕಾನೂನು ಮಾನ್ಯತೆ ಇಲ್ಲ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ (Jagdeep Dhankar) ತಿಳಿಸಿದ್ದಾರೆ.
ಹಿರಿಯ ವಕೀಲ ವಿಜಯ್ ಹನ್ಸಾರಿಯಾ ಅವರು ಸಂಪಾದಿಸಿರುವ `ದಿ ಕಾನ್‌ಸ್ಟಿಟ್ಯೂಷನ್ ವಿ ಅಡಾಪ್ಟೆಡ್’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದ ಅವರು, ವಿಚಾರಣಾ ಸಮಿತಿಗೆ ಯಾವುದೇ ಸಾಂವಿಧಾನಿಕ ವ್ಯಾಪ್ತಿಯಾಗಲಿ ಅಥವಾ ಕಾನೂನಿನ ಮಾನ್ಯತೆಯಾಗಲಿ ಇಲ್ಲ. ಆಂತರಿಕ ವಿಚಾರಣಾ ಸಮಿತಿಯಲ್ಲಿದ್ದ ಎರಡು ಹೈಕೋರ್ಟ್ಗಳ ನ್ಯಾಯಮೂರ್ತಿಗಳಿಗೆ ಸಾಕಷ್ಟು ಕಷ್ಟವಾಗಿದೆ. ಅದರಲ್ಲಿ ಒಂದು ಹೈಕೋರ್ಟ್ನ ವ್ಯಾಪ್ತಿ, ಎರಡು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದ್ದಾಗಿದೆ ಎಂದರು.ಇದನ್ನೂ ಓದಿ: ಗೋಲ್ಡ್ ಸ್ಮಗ್ಲಿಂಗ್ ಕೇಸ್ | ನಟಿ ರನ್ಯಾರಾವ್‌ಗೆ ಜಾಮೀನು ಮಂಜೂರು
ಸಮಿತಿಯ ನ್ಯಾಯಮೂರ್ತಿಗಳು ಯಾವುದೇ ಸಾಂವಿಧಾನಿಕ ಆಧಾರ ಅಥವಾ ಕಾನೂನು ಮಾನ್ಯತೆಯಾಗಲಿ ಇಲ್ಲದ ವಿಚಾರಣೆಯಲ್ಲಿ ಭಾಗಿಯಾಗಿದ್ದಾರೆ. ಇದು ಅಪ್ರಸ್ತುತವಾಗಿತ್ತು. ನ್ಯಾಯಾಲಯದ ಆಡಳಿತಾತ್ಮಕ ವಿಭಾಗದಲ್ಲಿ ವಿಕಸಿತವಾಗಿರುವ ಕಾರ್ಯ ವಿಧಾನದ ಮೂಲಕ ತನಿಖಾ ವರದಿಯನ್ನು ಯಾರಿಗಾದರೂ ಕಳುಹಿಸಬಹುದಾಗಿದೆ. ತನಿಖಾ ಸಮಿತಿ ಎಲೆಕ್ಟ್ರಾನಿಕ್ ಪುರಾವೆಗಳನ್ನು ವಶಪಡಿಸಿಕೊಂಡಿದೆಯೇ ಎಂಬುದು ಜನರಿಗೆ ತಿಳಿದಿಲ್ಲ. ನ್ಯಾ. ವರ್ಮಾ ನಿವಾಸಕ್ಕೆ ಹಣ ಬಂದಿದ್ದು ಹೇಗೆ? ಅದರ ಹಿಂದಿನ ಉದ್ದೇಶ ಏನು? ಹಾಗೂ ಘಟನೆಯ ಹಿಂದಿರುವ ದೊಡ್ಡ ತಿಮಿಂಗಿಲಗಳ ಬಗ್ಗೆ ಅರಿಯಲು ದೇಶ ಕಾಯುತ್ತಿದೆ. ಘಟನೆ ನಡೆದು ಒಂದು ವಾರ ಕಳೆದರೂ 140 ಕೋಟಿ ಜನರಿರುವ ದೇಶಕ್ಕೆ ಆ ಬಗ್ಗೆ ಹೆಚ್ಚಿನ ವಿಷಯ ತಿಳಿಯಲಿಲ್ಲ. ಇಂತಹ ಎಷ್ಟು ಘಟನೆಗಳು ನಡೆದಿರಬಹುದು ಎಂದು ಊಹಿಸಿ. ಅಂತಹ ಪ್ರತಿಯೊಂದು ಘಟನೆಯೂ ಸಾಮಾನ್ಯ ಜನರ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಸಿದರು.
ಪ್ರಕರಣದ ಆರಂಭಿಕ ವರದಿಯನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಿದ ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ಕಾರ್ಯ ಶ್ಲಾಘನೀಯ. ಇದು ನ್ಯಾಯಾಂಗದ ಮೇಲಿನ ವಿಶ್ವಾಸವನ್ನು ಸ್ವಲ್ಪಮಟ್ಟಿಗೆ ಮರುಸ್ಥಾಪಿಸಿದೆ. ನ್ಯಾ.ವರ್ಮಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮತ್ತು ಕಾರ್ಯಾಂಗದ ಕೈಗಳನ್ನು ಕಟ್ಟಿಹಾಕಿದ 1991ರ ಕೆ ವೀರಸ್ವಾಮಿ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪನ್ನು ಮರುಪರಿಶೀಲಿಸುವ ಅಗತ್ಯವಿದೆ. ಸಮಗ್ರ ಮತ್ತು ವೈಜ್ಞಾನಿಕ ತನಿಖೆ ಮಾತ್ರ ಇಂತಹ ವಿವಾದವನ್ನು ಕೊನೆಗಾಣಿಸಲು ಸಾಧ್ಯ ಎಂದರು.ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಇರೋವರೆಗೂ ಗ್ಯಾರಂಟಿ ಸ್ಕೀಂ ನಿಲ್ಲೋದಿಲ್ಲ: ಡಿಕೆಶಿ ಸ್ಪಷ್ಟನೆ
ನವದೆಹಲಿ: ತಮ್ಮ ನಿವಾಸದಲ್ಲಿ ಅಪಾರ ಪ್ರಮಾಣದ ನಗದು ಪತ್ತೆಯಾದ ನಂತರ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ವಿಚಾರಣೆ ಎದುರಿಸುತ್ತಿರುವ ನ್ಯಾಯಮೂರ್ತಿ ಯಶವಂತ್ ವರ್ಮಾ (Yashwant Varma) ಅವರು ಶನಿವಾರ ಅಲಹಾಬಾದ್ ಹೈಕೋರ್ಟ್‌ನ (Allahabad High Court) ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಆದಾಗ್ಯೂ, ನ್ಯಾಯಮೂರ್ತಿ ವರ್ಮಾ ಅವರ ವಿರುದ್ಧದ ಆಂತರಿಕ ವಿಚಾರಣೆ ನಡೆಯುವವರೆಗೆ ಅವರಿಗೆ ಯಾವುದೇ ನ್ಯಾಯಾಂಗ ಕೆಲಸ ನಿಯೋಜಿಸಲಾಗುವುದಿಲ್ಲ. ಅಲಹಾಬಾದ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ನಂತರ, ನ್ಯಾಯಮೂರ್ತಿ ವರ್ಮಾ ಅವರು ಹಿರಿತನದಲ್ಲಿ 6ನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ – ನ್ಯಾಯಾಂಗ ತನಿಖೆಗೆ ಹೈಕೋರ್ಟ್ ಆದೇಶ
ವರ್ಮಾ ವರ್ಗಾವಣೆಯ ವಿರುದ್ಧ ಅಲಹಾಬಾದ್ ಬಾರ್ ಅಸೋಸಿಯೇಷನ್ ಪ್ರತಿಭಟನೆ ನಡೆಸಿದ ಹೊರತಾಗಿಯೂ, ಕೇಂದ್ರವು ಮಾರ್ಚ್ 28 ರಂದು ಅವರನ್ನು ದೆಹಲಿಯಿಂದ ಅಲಹಾಬಾದ್ ಹೈಕೋರ್ಟ್‌ಗೆ ವಾಪಸ್ ಕಳುಹಿಸುವುದಾಗಿ ಸೂಚಿಸಿತು. ಸುಪ್ರೀಂ ಕೋರ್ಟ್ ಕೊಲಿಜಿಯಂನ ಶಿಫಾರಸಿನ ಮೇರೆಗೆ ಈ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಇದನ್ನೂ ಓದಿ: ಭವಾನಿ ರೇವಣ್ಣಗೆ ʻಹೈʼ ರಿಲೀಫ್ – ಮೈಸೂರು, ಹಾಸನ ಪ್ರವೇಶಿಸಲು ಕೋರ್ಟ್ ಅಸ್ತು
ನವದೆಹಲಿ: ದೆಹಲಿ ಹೈಕೋರ್ಟ್ (Delhi High Court) ನ್ಯಾ.ಯಶವಂತ್ ವರ್ಮಾ (Yashwant Varma) ಅವರ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಜನ ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳ ಮೊಬೈಲ್ ಫೋನ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಾ.14ರಂದು ದೆಹಲಿ ಹೈಕೋರ್ಟ್ ನ್ಯಾಯಾಧೀಶ ಯಶವಂತ್ ವರ್ಮಾ ಅವರ ನಿವಾಸದಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಈ ವೇಳೆ ಕಂತೆ ಕಂತೆ ಹಣದ ರಾಶಿ ಪತ್ತೆಯಾಗಿತ್ತು ಎನ್ನಲಾಗಿದೆ. ಈ ವೀಡಿಯೊ ಸಹ ವೈರಲ್ ಆಗಿತ್ತು. ಈ ಸಂಬಂಧ ತನಿಖೆಯ ಭಾಗವಾಗಿ ದೆಹಲಿ ಪೊಲೀಸರು, ತುಘಲಕ್ ರಸ್ತೆ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಫೋನ್ ಸೇರಿದಂತೆ 8 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಜಡ್ಜ್ ಬಂಗ್ಲೆಯಲ್ಲಿ ಕಂತೆ ಕಂತೆ ನಗದು ಪತ್ತೆ ಕೇಸ್ – ಸುಪ್ರೀಂ ಕೋರ್ಟ್ ಸಮಿತಿಯಿಂದ ತನಿಖೆ ಆರಂಭ
ಅಗ್ನಿ ಅವಘಡ ಸಮಯದಲ್ಲಿ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದ ಸಿಬ್ಬಂದಿ ವೀಡಿಯೊಗಳನ್ನು ರೆಕಾರ್ಡ್ ಮಾಡಿದ್ದಾರೆಯೇ? ಈ ವೀಡಿಯೊಗಳನ್ನು ತಿರುಚಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪತ್ತೆಹಚ್ಚಲು ಎಲ್ಲಾ 8 ಪೊಲೀಸ್ ಅಧಿಕಾರಿಗಳ ಮೊಬೈಲ್ ಫೋನ್‌ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ.
ಮಾ.25ರಂದು ನ್ಯಾ.ಯಶವಂತ್ ವರ್ಮಾ ಮನೆಯಲ್ಲಿ ಕಂತೆ ಕಂತೆ ನಗದು ಪತ್ತೆಯಾದ ಪ್ರಕರಣದ ತನಿಖೆಗೆ ಸುಪ್ರೀಂ ಕೋರ್ಟ್ (Supreme Court) ನೇಮಿಸಿದ ಮೂವರು ಸದಸ್ಯರ ಸಮಿತಿ ಜಡ್ಜ್ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.
ನವದೆಹಲಿ: ಬೆಂಕಿ ನಂದಿಸುವ ಸಮಯದಲ್ಲಿ ನ್ಯಾ. ವರ್ಮಾ ಅವರ ನಿವಾಸದಲ್ಲಿ ಪತ್ತೆಯಾದ ನೋಟಿನ ಕಂತೆಗಳ ಕುರಿತು ಸುಪ್ರೀಂ ಕೋರ್ಟ್ (Supreme Court) ಶನಿವಾರ ರಾತ್ರಿ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಕೆ ಉಪಾಧ್ಯಾಯ ಅವರು ಸಲ್ಲಿಸಿದ ತನಿಖಾ ವರದಿಯನ್ನು ಬಿಡುಗಡೆ ಮಾಡಿದೆ.
ನ್ಯಾ. ಯಶ್ವಂತ್ ವರ್ಮಾ (Yashwant Varma) ಅವರ ನಿವಾಸದಲ್ಲಿ ಲೆಕ್ಕವಿಲ್ಲದಷ್ಟು ನೋಟು ಪತ್ತೆಯಾದ ಆರೋಪಗಳನ್ನು ದೃಢೀಕರಿಸುವ ಫೋಟೋಗಳು ಮತ್ತು ವೀಡಿಯೊ ಸೇರಿದಂತೆ ಹಲವು ದಾಖಲೆಗಳನ್ನು ಸುಪ್ರೀಂ ಕೋರ್ಟ್ ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದೆ. ಮಾರ್ಚ್ 14 ರಂದು ನಡೆದ ಅಗ್ನಿಶಾಮಕ ಕಾರ್ಯಾಚರಣೆಯ ಸಮಯದಲ್ಲಿ ದೆಹಲಿ ಪೊಲೀಸರು (Delhi Police) ಈ ವೀಡಿಯೊಗಳು ಮತ್ತು ಛಾಯಾಚಿತ್ರಗಳನ್ನು ತೆಗೆದಿದ್ದಾರೆ. ಇದನ್ನೂ ಓದಿ: ಅಮೆರಿಕ | ಗುಜರಾತ್ ಮೂಲದ ಅಪ್ಪ-ಮಗಳಿಗೆ ಗುಂಡಿಕ್ಕಿ ಹತ್ಯೆ – ಶೂಟರ್ ಅರೆಸ್ಟ್
ಈ ಬಗ್ಗೆ ಪ್ರತಿಕ್ರಿಯಿಸಿರುವ ನ್ಯಾಯಮೂರ್ತಿ ವರ್ಮಾ, ನಾನು ಅಥವಾ ನನ್ನ ಕುಟುಂಬ ಸದಸ್ಯರು ಆ ಕೋಣೆಯಲ್ಲಿ ಯಾವುದೇ ಹಣವನ್ನು ಇರಿಸಿಲ್ಲ ಎಂದು ನಾನು ನಿಸ್ಸಂದಿಗ್ಧವಾಗಿ ಹೇಳುತ್ತೇನೆ. ಆಪಾದಿತ ನಗದು ನಮಗೆ ಸೇರಿದೆ ಎಂಬ ಸಲಹೆಯನ್ನು ಬಲವಾಗಿ ಖಂಡಿಸುತ್ತೇನೆ. ಈ ನಗದನ್ನು ನಾವು ಸಂಗ್ರಹಿಸಿದ್ದೇವೆ ಎಂಬ ಕಲ್ಪನೆಯೇ ಸಂಪೂರ್ಣವಾಗಿ ಅಸಂಬದ್ಧವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ದೇಶ ಭ್ರಷ್ಟ ವಜ್ರೋದ್ಯಮಿ ಮೆಹುಲ್ ಚೋಕ್ಸಿ ಬೆಲ್ಜಿಯಂನಲ್ಲಿ ವಾಸ್ತವ್ಯ – ಶೀಘ್ರದಲ್ಲೇ ಭಾರತಕ್ಕೆ ಕರೆತರಲು ಪ್ಲ್ಯಾನ್
ಸಿಬ್ಬಂದಿ ಕ್ವಾರ್ಟರ್ಸ್ ಬಳಿ ಅಥವಾ ಔಟ್‌ಹೌಸ್‌ನಲ್ಲಿ ತೆರೆದ, ಮುಕ್ತವಾಗಿ ಪ್ರವೇಶಿಸಬಹುದಾದ ಮತ್ತು ಸಾಮಾನ್ಯವಾಗಿ ಬಳಸುವ ಸ್ಟೋರ್‌ರೂಮ್‌ನಲ್ಲಿ ಹಣ ಸಂಗ್ರಹಿಸಬಹುದು ಎಂಬ ಆರೋಪ ನಂಬಲಾಗದಂತಿದೆ ಎಂದಿದ್ದಾರೆ. ಇದು ನನ್ನ ವಾಸಸ್ಥಳದಿಂದ ಪ್ರತ್ಯೇಕವಾಗಿರುವ ಕೋಣೆಯಾಗಿದೆ. ಗೋಡೆಯೊಂದು ನನ್ನ ವಾಸಸ್ಥಳವನ್ನು ಆ ಔಟ್‌ಹೌಸ್‌ನಿಂದ ಪ್ರತ್ಯೇಕಿಸುತ್ತದೆ. ಪತ್ರಿಕೆಗಳಲ್ಲಿ ನನ್ನ ಮೇಲೆ ಆರೋಪ ಹೊರಿಸಿ ಮಾನಹಾನಿಯಾಗುವ ಮೊದಲು ಮಾಧ್ಯಮವು ಸ್ವಲ್ಪ ವಿಚಾರಣೆ ನಡೆಸಬೇಕಿತ್ತು ಎಂದು ನಾನು ಬಯಸುತ್ತೇನೆ ಎಂದು ನ್ಯಾ. ವರ್ಮಾ ಹೇಳಿದರು. ಇದನ್ನೂ ಓದಿ: ಪೈಲಟ್‌ಗಳಿಲ್ಲದ ವಿಮಾನಕ್ಕೆ ಏಕೆ ಹತ್ತಿಸುತ್ತೀರಿ – ಏರ್ ಇಂಡಿಯಾ ವಿರುದ್ಧ ಡೇವಿಡ್ ವಾರ್ನರ್ ಗರಂ!
ಗಾಂಧಿನಗರ: ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಮನೆಯಲ್ಲಿ 15 ಕೋಟಿ ರೂ. ನಗದು ಪತ್ತೆ ಬೆನ್ನಲ್ಲೇ ಅವರನ್ನು ಅಲಹಾಬಾದ್ ಹೈಕೋರ್ಟ್‍ಗೆ ವರ್ಗ ಮಾಡಲಾಗಿದೆ. ಇದಕ್ಕೆ ಅಲಹಾಬಾದ್ ಹೈಕೋರ್ಟ್ ವಕೀಲರು ಗರಂ ಆಗಿದ್ದಾರೆ.
ಅಲಹಾಬಾದ್ ಹೈಕೋರ್ಟ್ ಕಸದ ಬುಟ್ಟಿನಾ ಎಂದು ವಕೀಲರು ಪ್ರಶ್ನಿಸಿದ್ದಾರೆ. ಅಲಹಾಬಾದ್ ಹೈಕೋರ್ಟ್ ಸಿಜೆ ಮತ್ತು ಇತರೆ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿರುವ ಬಾರ್ ಕೌನ್ಸಿಲ್ (Allahabad HC bar Association), ಕೊಲಿಜಿಯಂ ನಿರ್ಧಾರ ಅಚ್ಚರಿ ತಂದಿದೆ. ಹಲವು ಪ್ರಶ್ನೆ ಹುಟ್ಟು ಹಾಕಿದೆ. ಈ ಬೆಳವಣಿಗೆ ಕಳವಳಕಾರಿ ಎಂದು ಅಸಮಾಧಾನ ವ್ಯಕ್ತಪಡಿಸಿದೆ. ಇದನ್ನೂ ಓದಿ: ಕಂತೆ ಕಂತೆ ನೋಟು ಪತ್ತೆಯಾದ ಜಡ್ಜ್ ಮೇಲೆ ದಾಖಲಾಗಿತ್ತು ಸಿಬಿಐ ಎಫ್‌ಐಆರ್
ಅಲಹಾಬಾದ್ ಹೈಕೋರ್ಟ್ ವಿಭಜಿಸುವ ಪಿತೂರಿಯೂ ನಡೆದಿದೆ ಎಂದು ಆರೋಪಿಸಿರುವ ಬಾರ್ ಕೌನ್ಸಿಲ್, ಸೋಮವಾರ ಸಭೆ ನಡೆಸಲಿದೆ. ಅಂದ ಹಾಗೇ, ಉತ್ತರಪ್ರದೇಶದ ಸಕ್ಕರೆ ಕಾರ್ಖಾನೆಯೊಂದಕ್ಕೆ ಸಂಬಂಧಿಸಿದ ಕೇಸಲ್ಲಿ ಇದೇ ನ್ಯಾಯಮೂರ್ತಿ ವಿರುದ್ಧ ಸಿಬಿಐ 2018ರಲ್ಲಿ ಎಫ್‍ಐಆರ್ ದಾಖಲಿಸಿದ್ದ ವಿಚಾರ ಬಹಿರಂಗಗೊಂಡಿದೆ.
ಈ ಬೆಳವಣಿಗೆ ನಡುವೆಯೇ ನ್ಯಾ. ವರ್ಮಾ (Justice Yashwant Varma) ಅವರ ನಿವಾಸದಲ್ಲಿ ಅಗ್ನಿಶಾಮಕ ದಳದವರು ಬೆಂಕಿ ನಂದಿಸುವ ಕಾರ್ಯಾಚರಣೆ ಸಮಯದಲ್ಲಿ ಯಾವುದೇ ನಗದು ಪತ್ತೆಯಾಗಿಲ್ಲ ಎಂದು ನಾನು ಹೇಳಿಲ್ಲ ಎಂದು ದೆಹಲಿ ಅಗ್ನಿಶಾಮಕ ದಳದ (ಡಿಎಫ್‌ಎಸ್) ಮುಖ್ಯಸ್ಥ ಅತುಲ್ ಗರ್ಗ್ (Atul Garg) ಸ್ಪಷ್ಟಪಡಿಸಿದ್ದಾರೆ.