Tag: yashpal suvarna

  • ಸಿದ್ದರಾಮಯ್ಯ 135 ಕ್ಷೇತ್ರಗಳ ಮುಖ್ಯಮಂತ್ರಿಯಲ್ಲ: ಯಶ್‌ಪಾಲ್ ಸುವರ್ಣ

    ಸಿದ್ದರಾಮಯ್ಯ 135 ಕ್ಷೇತ್ರಗಳ ಮುಖ್ಯಮಂತ್ರಿಯಲ್ಲ: ಯಶ್‌ಪಾಲ್ ಸುವರ್ಣ

    ಉಡುಪಿ: ಸಿದ್ದರಾಮಯ್ಯ (Siddaramaiah) 135 ಕ್ಷೇತ್ರಗಳ ಮುಖ್ಯಮಂತ್ರಿ ಅಲ್ಲ. ರಾಜ್ಯದ ಎಲ್ಲಾ ಕ್ಷೇತ್ರಗಳನ್ನು ಸಮಾನವಾಗಿ ನೋಡಬೇಕು ಎಂದು ಶಾಸಕ ಯಶ್‌ಪಾಲ್ ಸುವರ್ಣ (Yashpal Suvarna) ಸಿದ್ದರಾಮಯ್ಯ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ.

    ಗುತ್ತಿಗೆ ಆಧಾರದಲ್ಲಿ ಬೊಮ್ಮಾಯಿ (Basavaraj Bommai) ಸರ್ಕಾರ ದಿ.ಪ್ರವೀಣ್ ನೆಟ್ಟಾರು  (Praveen Nettaru) ಅವರ ಪತ್ನಿಗೆ ಗ್ರೂಪ್ ಸಿ ಹುದ್ದೆ ನೀಡಿತ್ತು. ಆದರೆ ಈಗ ಅವರನ್ನು ಉದ್ಯೋಗದಿಂದ ಕೊಕ್ ಮಾಡಲಾಗಿದೆ. ಈ ಕುರಿತು ಉಡುಪಿಯಲ್ಲಿ (Udupi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ (Congress) ನಿಜವಾದ ಬಣ್ಣ ಬಯಲಾಗಿದೆ. ಜನತೆಗೆ ಆಶ್ವಾಸನೆ ಕೊಟ್ಟ ಭಾಗ್ಯಗಳನ್ನು ಮೊದಲು ಈಡೇರಿಸಿ. ಜನರ ದಿಕ್ಕು ತಪ್ಪಿಸಲು ಹಲವಾರು ಹೇಳಿಕೆ ಹಾಗೂ ಚಟುವಟಿಕೆಗಳನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಕಿತ್ತುಕೊಂಡ ನೆಟ್ಟಾರು ಪತ್ನಿಯ ಉದ್ಯೋಗವನ್ನು ಮರಳಿ ನೀಡಿ: ಸಿದ್ದರಾಮಯ್ಯಗೆ ಕಟೀಲ್ ಮನವಿ

    ಪಿಎಫ್‌ಐ (PFI) ಸಂಘಟನೆಯ ದುಷ್ಕೃತ್ಯದಿಂದ ಪ್ರವೀಣ್ ನೆಟ್ಟಾರು ಅವರನ್ನು ಕಳೆದುಕೊಂಡಿದ್ದೇವೆ. ಇಂತಹ ಕೃತ್ಯಗಳಿಗೆ ಕೈ ಹಾಕಿದಾಗ ಜನತೆ ಸರ್ಕಾರಕ್ಕೆ ಸೂಕ್ತ ಉತ್ತರ ಕೊಡುತ್ತಾರೆ. ನೀವು ಹೆಚ್ಚು ದಿನ ಅಧಿಕಾರದಲ್ಲಿ ಇರುವುದಿಲ್ಲ ಎಂದು ಅನಿಸುತ್ತಿದೆ. ನಾವು ವಿಪಕ್ಷದಲ್ಲಿ ಇದ್ದುಕೊಂಡು ಪ್ರವೀಣ್ ನೆಟ್ಟಾರು ಅವರ ಪತ್ನಿಗೆ ಮತ್ತು ಕುಟುಂಬಕ್ಕೆ ನ್ಯಾಯ ಕೊಡಿಸುತ್ತೇವೆ. ಪ್ರವೀಣ್ ಪತ್ನಿಗೆ ಸ್ವ-ಉದ್ಯೋಗವನ್ನಾದರೂ ನಾವು ಕಲ್ಪಿಸುತ್ತೇವೆ. ಪ್ರವೀಣ್ ನೆಟ್ಟಾರು ಕುಟುಂಬದ ಜೊತೆ ಬಿಜೆಪಿ (BJP) ಎಂದಿಗೂ ಇರುತ್ತದೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ 225 ಮೊಬೈಲ್ ಟವರ್ ಮಂಜೂರು : ಬಿವೈ ರಾಘವೇಂದ್ರ

  • ಮೋದಿ ಸರ್ಕಾರದಿಂದ ಮಾತ್ರ ಕಠಿಣ ಕ್ರಮ ಸಾಧ್ಯ – NIAಗೆ ಯಶ್‍ಪಾಲ್ ಸುವರ್ಣ ಧನ್ಯವಾದ

    ಮೋದಿ ಸರ್ಕಾರದಿಂದ ಮಾತ್ರ ಕಠಿಣ ಕ್ರಮ ಸಾಧ್ಯ – NIAಗೆ ಯಶ್‍ಪಾಲ್ ಸುವರ್ಣ ಧನ್ಯವಾದ

    ಉಡುಪಿ: ದೇಶಾದ್ಯಂತ ಕಾರ್ಯಾಚರಣೆ ಮಾಡಿದ ಎನ್‍ಐಎ ಗೆ ಧನ್ಯವಾದ. ಎನ್‍ಐಎ (NIA) ಇಲಾಖೆಯ ಅಧಿಕಾರಿಗಳಿಗೆ ಧನ್ಯವಾದ. ಮಾತಾಂಧ ಶಕ್ತಿಗಳನ್ನು ದೇಶದಲ್ಲಿ ನಿಷೇಧ ಮಾಡಿರುವುದು ಸಂಭ್ರಮಿಸಬೇಕಾದ ವಿಚಾರ ಎಂದು ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ (YashPal Suvarna) ಹೇಳಿದ್ದಾರೆ.

    ದೇಶದಲ್ಲಿ ಕಠಿಣ ಕ್ರಮ ಮೋದಿ ಸರ್ಕಾರದಿಂದ ಮಾತ್ರ ಸಾಧ್ಯ. ನವರಾತ್ರಿ (Navratri) ಸಂದರ್ಭ ದೇಶಕ್ಕೆ ಶುಭಸುದ್ದಿ ಕೊಟ್ಟ ಅಮಿತ್ ಶಾ (AmitShah) ಗೆ ಅಭಿನಂದನೆ ಎಂದು ಉಡುಪಿ (Udupi) ಯಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ ಅವರು ಹೇಳಿದರು. ನವರಾತ್ರಿ ಸಂದರ್ಭ ದೇಶದ್ರೋಹಿಗಳನ್ನು ಮಟ್ಟ ಹಾಕುವ ನಿರ್ಧಾರ ಮಾಡಲಾಗಿದೆ. ಇದು ಇಡೀ ದೇಶದ ಜನ ಸಿಹಿ ಹಂಚುವ ಕ್ಷಣ ಎಂದರು.

    ಎನ್ ಐಎ ತನಿಖೆ ಸಂದರ್ಭ ಹಲವಾರು ವಿಚಾರ ಬೆಳಕಿಗೆ ಬಂದಿದೆ. ಕರಾವಳಿ ಭಾಗದಲ್ಲಿ ಇಂತಹ ಚಟುವಟಿಕೆಗಳು ಯಾವ ಮಟ್ಟದಲ್ಲಿ ನಡೆಯುತ್ತದೆ ಎಂಬ ಬಗ್ಗೆ ಕೂಡ ಮಾಹಿತಿಗಳನ್ನ ಅಧಿಕಾರಿಗಳು ಕಲೆಹಾಕಿದ್ದಾರೆ. ಸ್ಲೀಪರ್ ಸೆಲ್ ರೀತಿಯ ಅಡಗುದಾಣಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಇದೆ. ಹಿಜಬ್‍ನ ಬೆನ್ನೆಲುಬು ಸಂಘಟನೆಯನ್ನು ಬ್ಯಾನ್ ಮಾಡಲಾಗಿದೆ. ಕರಾವಳಿ ಭಾಗ ಶಾಂತಿಯುತವಾಗಿರಲು ಎನ್‍ಐಎಗೆ ಬೆಂಬಲಿಸುತ್ತೇವೆ. ಅಮಿತ್ ಶಾ ಸೂಕ್ತ ದಾಖಲೆಗಳನ್ನು ಪಡೆದು ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಪಿಎಫ್‌ಐ ನಂತೆಯೇ RSSನ್ನೂ ಬ್ಯಾನ್‌ ಮಾಡಿ: ಕೇರಳ ವಿಪಕ್ಷಗಳ ಒತ್ತಾಯ

    ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡುವ ಸಂಘಟನೆಗೆ ದೇಶದಲ್ಲಿ ಅವಕಾಶ ಇಲ್ಲ ಎಂದು ಹೇಳಿದರು. ವಿದೇಶಿ ಹಣ ವರ್ಗಾವಣೆ, ಹಿಂಸೆ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕಾಂಗ್ರೆಸ್ ಸರ್ಕಾರ ಪಿಎಫ್‍ಐ (PFI) ಗೆ ಬೆಂಬಲವಾಗಿ ನಿಂತಿತ್ತು. ದುಷ್ಕೃತ್ಯ, ದೇಶದ್ರೋಹಿ ಚಟುವಟಿಕೆಗೆ ಕಾಂಗ್ರೆಸ್ ಕಾರಣ. ಸಿದ್ದರಾಮಯ್ಯ ಸರ್ಕಾರ 150 ಜನರ ಕೇಸು ವಾಪಸ್ ತೆಗೆದಿತ್ತು. ಇದನ್ನೂ ಓದಿ: ಪಿಎಫ್‌ಐ ಬ್ಯಾನ್ – ರಾಷ್ಟ್ರೀಯ ಸುರಕ್ಷತೆ ನಮ್ಮ ಸರ್ಕಾರದ ಮೊದಲ ಆದ್ಯತೆ: ಪ್ರಹ್ಲಾದ್ ಜೋಶಿ

    ಎಸ್ ಡಿಪಿಐ ಒಂದು ರಾಜಕೀಯ ಪಕ್ಷ ಆಗಿರುವ ಕಾರಣ ಕಾನೂನು ಬಾಹಿರ ಚಟುವಟಿಕೆ ಮಾಡುವ ಸಂಘನೆಗಳನ್ನು ಬ್ಯಾನ್ ಮಾಡಲಾಗಿದೆ. ಪಿಎಫ್‍ಐ ದೇಶದ ಪರ, ಸಮಾಜದ ಉದ್ಧಾರಕ್ಕೆ ಎಂದೂ ಕೆಲಸ ಮಾಡಿಲ್ಲ. ಗಲಭೆ ಸೃಷ್ಟಿಸೋದೇ ಪಿಎಫ್‍ಐ ಕೆಲಸವಾಗಿತ್ತು. ದೇಶವಿರೋಧಿ ಚಟುವಟಿಕೆಯಲ್ಲಿ SDPI ಶಾಮೀಲಾಗಿದ್ದರೆ ಕೇಂದ್ರ ಬ್ಯಾನ್ ಮಾಡಲಿದೆ ಎಂದು ಯಶ್ ಪಾಲ್ ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ಬ್ರಹ್ಮಗಿರಿ ಸರ್ಕಲ್‌ನಲ್ಲಿ ಸಾವರ್ಕರ್ ಪುತ್ಥಳಿ- ಯಶ್ ಪಾಲ್ ಸುವರ್ಣ ನಗರಸಭೆಗೆ ಪತ್ರ

    ಬ್ರಹ್ಮಗಿರಿ ಸರ್ಕಲ್‌ನಲ್ಲಿ ಸಾವರ್ಕರ್ ಪುತ್ಥಳಿ- ಯಶ್ ಪಾಲ್ ಸುವರ್ಣ ನಗರಸಭೆಗೆ ಪತ್ರ

    ಉಡುಪಿ: ರಾಜ್ಯದ ಬಹುಚರ್ಚಿತ ವಿಷಯವಾಗಿರುವ ಸಾವರ್ಕರ್ ಭಾವಚಿತ್ರಕ್ಕೆ ಸಂಬಂಧಪಟ್ಟಂತೆ ಉಡುಪಿಯಲ್ಲಿ ಕಳೆದ ಮೂರು ದಿನಗಳಿಂದ ಬ್ರಹ್ಮಗಿರಿ ಸರ್ಕಲ್ ನಲ್ಲಿ ಹೈಡ್ರಾಮಾ ಸೃಷ್ಟಿಯಾಗಿದೆ. ಇದೀಗ ಸರ್ಕಲ್ ನಲ್ಲಿ ಪ್ರತಿಮೆ ಸ್ಥಾಪಿಸುವುದಾಗಿ ಬಿಜೆಪಿ ನಗರಸಭೆಗೆ ಪತ್ರ ಕಳುಹಿಸಿದೆ.

    ಹಿಂದೂ ಮಹಾಸಭಾದ ಮುಖಂಡ ಪ್ರಮೋದ್ ಉಚ್ಚಿಲ ಮತ್ತು ಇಬ್ಬರು ಗೆಳೆಯರು ಉಡುಪಿ ಬ್ರಹ್ಮಗಿರಿ ಸರ್ಕಲ್‍ನಲ್ಲಿ ಸ್ವಾತಂತ್ರೋತ್ಸವದ ಅಮೃತಮಹೋತ್ಸವ ಸಂದರ್ಭ ಸಾವರ್ಕರ್ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನು ಒಳಗೊಂಡ ಕಟೌಟ್ ಹಾಕಿದ್ದರು. ಈ ಕಟೌಟ್ ಸಮಾಜದ ಶಾಂತಿಯನ್ನ ಕೆಡಿಸುತ್ತದೆ ಎಂದು ಪಿಎಫ್‍ಐ ಮತ್ತು ಎಸ್ಡಿಪಿಐ ಉಡುಪಿ ನಗರ ಠಾಣೆಗೆ ದೂರು ನೀಡಿತ್ತು. ಕಾಂಗ್ರೆಸ್‍ನ ಕೆಲ ಜಿಲ್ಲಾ ನಾಯಕರು ಈ ಕಟೌಟ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು.

    ಬಿಜೆಪಿ ಹಿಂದುಳಿದ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ ಮತ್ತು ಹಿಂದೂ ಸಂಘಟನೆಯ ಕಾರ್ಯಕರ್ತರು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ್ದರು. ಯುವಮೋರ್ಚಾದ ಕೆಲ ಕಾರ್ಯಕರ್ತರು ಬೆಳವಣಿಗೆಯ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನ ಮಾಡಿದ್ದರು. ಈ ನಡುವೆ ಯಶ್ ಪಾಲ್ ಸುವರ್ಣ ನಗರಸಭೆಗೆ ಬ್ರಹ್ಮಗಿರಿ ಸರ್ಕಲ್ನಲ್ಲಿ ಸಾವರ್ಕರ್ ಪ್ರತಿಮೆ ರಚಿಸಲು ಅನುಮತಿ ಕೋರಿ ಅರ್ಜಿ ಪತ್ರವನ್ನು ಬರೆದಿದ್ದಾರೆ.

    ಪತ್ರದಲ್ಲೇನಿದೆ..?: ಉಡುಪಿ ನಗರಸಭೆಯ ಅಜ್ಜರಕಾಡು ವ್ಯಾಪ್ತಿಯಲ್ಲಿ ಬ್ರಹ್ಮಗಿರಿ ವೃತ್ತದಲ್ಲಿ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಂಚೂಣಿಯಲ್ಲಿ ಹೋರಾಟ ನಡೆಸಿದ್ದ ಹೋರಾಟಗಾರ ವಿನಾಯಕ ದಾಮೋದರ ಸಾವರ್ಕರ್ ಅವರ ಪುತ್ಥಳಿ ನಿರ್ಮಿಸಿ ಸಾವರ್ಕರವರ ಪುತ್ತಳಿ ನಿರ್ಮಿಸಿ ವೀರಸಾವರ್ಕರ್ ಅವರಿಗೆ ಸಮಸ್ತ ದೇಶಪ್ರೇಮಿಗಳ ಪರವಾಗಿ ಗೌರವ ಸಲ್ಲಿಸಲು ನಿರ್ಧರಿಸಿದ್ದೇವೆ. ಇದನ್ನೂ ಓದಿ: 10 ಮಕ್ಕಳನ್ನು ಹೆರಿ, ಹಣ ಪಡೆಯಿರಿ- ರಷ್ಯಾ ಮಹಿಳೆಯರಿಗೆ ಬಂಪರ್‌ ಆಫರ್‌

    ಭಾರತ ಸ್ವಾತಂತ್ರ್ಯಗೊಂಡ 75 ವರ್ಷಗಳನ್ನು ಪೂರೈಸಿರುವ ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸುಸಂದರ್ಭದಲ್ಲಿ ಕ್ರಾಂತಿಕಾರಿ ಹೋರಾಟದ ಮೂಲಕ ಬ್ರಿಟಿಷರ ಪಾಲಿಗೆ ಸಿಂಹಸ್ವಪ್ನರಾಗಿದ್ದ ವೀರ ಸಾವರ್ಕರ್ ಪುತ್ಥಳಿ ನಿರ್ಮಾಣಕ್ಕೆ ಅತ್ಯಂತ ಸಮಂಜಸ ಸಮಯ ಬಂದೊದಗಿದ್ದು ತಾವು ನಗರಸಭೆಯ ಮೂಲಕ ಈ ಪುತ್ತಳಿ ಅಳವಡಿಸಲು ಅನುಮತಿ ನೀಡಿ ಸಹಕರಿಸಬೇಕಾಗಿ ವಿನಂತಿ.

    ಹೀಗಂತ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ. ಯಶ್ ಪಾಲ್ ಅವರಿಂದ ತಲುಪಿದ ಪತ್ರಕ್ಕೆ ಉಡುಪಿ ನಗರಸಭೆ ಸ್ವೀಕೃತಿಯನ್ನು ನೀಡಿದೆ.

    Live Tv
    [brid partner=56869869 player=32851 video=960834 autoplay=true]

  • ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿದವರು ಷಂಡರು: ಯಶ್‌ಪಾಲ್ ಸುವರ್ಣ

    ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿದವರು ಷಂಡರು: ಯಶ್‌ಪಾಲ್ ಸುವರ್ಣ

    ಉಡುಪಿ: ನನಗೆ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿದವರು ಷಂಡರು ಎಂದು ನಗರದ ಸರ್ಕಾರಿ ಮಹಿಳಾ ಪಿಯು ಕಾಲೇಜು ಉಪಾಧ್ಯಕ್ಷ ‌ಯಶ್‌ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ ಬೆದರಿಕೆ ಹಾಕಿರುವ ವಿಚಾರವಾಗಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಹಿಂದುತ್ವದ ವಿಚಾರದಲ್ಲಿ ಕೆಲಸ ಮಾಡುವಾಗ ಬೆದರಿಕೆಗಳು ಸಾಮಾನ್ಯ. ಧಮ್ಕಿ ಕೊಟ್ಟವನಿಗೆ ನನ್ನ ವ್ಯಾಲ್ಯೂಯೇಷನ್ ಎಷ್ಟು ಅಂತ ಗೊತ್ತಿಲ್ಲ. ಒಬ್ಬ ಮನುಷ್ಯನ ಬೆಲೆ ಎಷ್ಟು ಅಂತ ಗೊತ್ತಿದ್ದರೆ ಆತ ಬೆಲೆ ಕಟ್ಟುತ್ತಿರಲಿಲ್ಲ. ಧಮ್ಕಿ ಬಂತು ಅಂತ ನನ್ನ ಕೆಲಸದ ಶೈಲಿ ರಾಷ್ಟ್ರೀಯತೆ ಹಿಂದುತ್ವದ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಬಾಲಕಿಯರಿಗೆ ರೈಫಲ್ ತರಬೇತಿ, ಸೂಸೈಡ್ ಬಾಂಬ್ ತರಬೇತಿ ನೀಡಿದ್ದೆ – ಐಸಿಸ್ ಸೇರಿದ್ದ ಶಿಕ್ಷಕಿಯಿಂದ ತಪ್ಪೊಪ್ಪಿಗೆ

    ಕಿಡಿಗೇಡಿಗಳು ಅವರ ತಲೆ ತೆಗೆಯುವುದಾಗಿ ಬೆದರಿಕೆ ಹಾಕಿದ್ದಲ್ಲದೇ, ತಲೆಗೆ 10 ಲಕ್ಷ ರೂಪಾಯಿ ಘೋಷಿಸಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿದವರು ಷಂಡರು. ತಾಕತ್ ಇದ್ದರೆ ಅವರು ಎದುರು ಬಂದು ಮಾತಾಡಲಿ. ನನ್ನ ಜೀವನದಲ್ಲಿ ಇಂತದ್ದು ತುಂಬಾ ನೋಡಿದ್ದೇನೆ. ನಾನು ದೇಶದ್ರೋಹಿ ಚಟುವಟಿಕೆ ಮಾಡಿಲ್ಲ, ಅನ್ಯಾಯ ಮಾಡಿಲ್ಲ. ನನಗೆ ದೋ ನಂಬರ್ ಬ್ಯುಸಿನೆಸ್ ಇಲ್ಲ ನಾನು ಯಾರದೋ ಅನ್ನದ ಬಟ್ಟಲಿಗೆ ಕೈಹಾಕಿ ತಿಂದಿಲ್ಲ ಎಂದು ಸಿಡಿದರು. ಇದನ್ನೂ ಓದಿ: ಮೈಕ್‌ ದಂಗಲ್‌ – ಇಂದು ಬಿಜೆಪಿ ಮುಖಂಡರ ಮನೆ ಮುಂದೆ ಶ್ರೀರಾಮ ಸೇನೆಯಿಂದ ಪ್ರತಿಭಟನೆ

    court order law

    ಶಾಲೆಯ ಶಿಸ್ತು ಮತ್ತು ಕೋರ್ಟ್ ಆದೇಶ ಪಾಲಿಸಲು ನಾವು ಹಿಜಬ್‍ನ ವಿರುದ್ಧವೇ ನಿಲ್ಲುತ್ತೇವೆ. ಈ ವರ್ಷ ಕೂಡ 40ಕ್ಕೂ ಹೆಚ್ಚು ಮುಸ್ಲಿಮ್ ವಿದ್ಯಾರ್ಥಿನಿಯರನ್ನು ನಾವು ಅಡ್ಮಿಶನ್ ಮಾಡಿಸಿಕೊಂಡಿದ್ದೇವೆ. ನಾವು ಹಿಜಬ್ ತೆಗೆದು ಕ್ಲಾಸಿಗೆ ಬರುತ್ತೇವೆ ಎಂದು ಬರೆದುಕೊಟ್ಟಿದ್ದಾರೆ ಎಂದು ತಿಳಿಸಿದರು.

    ಕಿಡಿಗೇಡಿಗಳು ಪ್ರಮೋದ್ ಮುತಾಲಿಕ್ ಅವರಿಗೂ ಬೆದರಿಕೆ ಹಾಕಿದ್ದಾರೆ. ನಾನು ಅವರ ಜೊತೆ ಮಾತನಾಡಿಲ್ಲ, ಮಾತನಾಡುತ್ತೇನೆ. ನನ್ನ ಸಿದ್ಧಾಂತ ದೇಶದ ವಿಚಾರದ ಹೋರಾಟ ಮಾಡುತ್ತೇನೆ. ನಾನು ಭಯಪಡುವ ಪ್ರಶ್ನೆಯೇ ಇಲ್ಲ. ಟೀಕೆ ಬೆದರಿಕೆ ಸಾಮಾಜಿಕ ಚಟುವಟಿಕೆಯ ಒಂದು ಅವಿಭಾಜ್ಯ ಅಂಗ ಎಂದರು.

  • ಮುತಾಲಿಕ್‌, ಯಶ್‌ ಪಾಲ್‌ ತಲೆ ಕಡಿದರೆ 20 ಲಕ್ಷ – ಸಾಮಾಜಿಕ ಜಾಲತಾಣದಲ್ಲಿ ಓಪನ್‌ ಬೆದರಿಕೆ!

    ಮುತಾಲಿಕ್‌, ಯಶ್‌ ಪಾಲ್‌ ತಲೆ ಕಡಿದರೆ 20 ಲಕ್ಷ – ಸಾಮಾಜಿಕ ಜಾಲತಾಣದಲ್ಲಿ ಓಪನ್‌ ಬೆದರಿಕೆ!

    ಉಡುಪಿ: ಪ್ರಮೋದ್‌ ಮುತಾಲಿಕ್‌ ಹಾಗೂ ಯಶ್‌ ಪಾಲ್‌ ಸುವರ್ಣ ಇವರಿಬ್ಬರ ತಲೆ ಕಡಿದರೆ 20 ಲಕ್ಷ ನೀಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಓಪನ್‌ ಬೆದರಿಕೆ ಹಾಕಿರುವ ಪೋಸ್ಟ್‌ ವೈರಲ್‌ ಆಗಿದೆ.

    ʻಈ ಎರಡು ತಲೆ ಕಡಿದರೆ 20 ಲಕ್ಷ..! ಒಂದು ತಲೆಗೆ 10 ಲಕ್ಷ, ಇನ್ನೊಂದು ತಲೆಗೆ 10 ಲಕ್ಷ. ಕೂಡಲೇ ನಿಮ್ಮ ಖಾತೆಗೆ ಜಮಾ ಆಗುತ್ತದೆʼ ಹೀಗಂತ ಹಂದಿಗೆ ಹೋಲಿಕೆ ಮಾಡಿ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಮತ್ತು ಉಡುಪಿಯ ಸರ್ಕಾರಿ ಮಹಿಳಾ ಪದವಿಪೂರ್ವ ಕಾಲೇಜಿನ ಉಪಾಧ್ಯಕ್ಷ ಯಶ್ ಪಾಲ್ ಸುವರ್ಣ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಕೊಲೆ ಬೆದರಿಕೆ ಬಂದಿದೆ. 100% ಈ ಎರಡು ತಲೆ ಉರುಳೋದು ಖಚಿತ ಎಂದು ಮಾರಿಗುಡಿ ಎಂಬ ಪೇಜ್‌ನಲ್ಲಿ ಧಮ್ಕಿ ಕೊಡಲಾಗಿದೆ. ಇದನ್ನೂ ಓದಿ: ಪತ್ನಿ ಆಸೆ ತೀರಿಸಲು ವೃದ್ಧನನ್ನೆ ಕೊಂದ ಪತಿ 

    ಉಡುಪಿಯಲ್ಲಿ ಹಿಜಬ್ ಸಂಘರ್ಷ ನಡೆದಾಗ ಯಶ್ ಪಾಲ್, ಸಿಎಫ್‌ಐ, ವಿದ್ಯಾರ್ಥಿಗಳನ್ನು ಟೆರರಿಸ್ಟ್‌ಗಳು ಎಂದಿದ್ದರು. ಕಾನೂನು ಹೋರಾಟದ ನೇತೃತ್ವ ವಹಿಸಿದ್ದರು. ರಾಜ್ಯದ ಧರ್ಮ ದಂಗಲ್‌ನಲ್ಲಿ ಪ್ರಮೋದ್ ಮುತಾಲಿಕ್ ಸಂಪೂರ್ಣವಾಗಿ ತೊಡಗಿಸಿಕೊಂಡಿರುವುದು ಈ ಧಮ್ಕಿಗೆ ಕಾರಣ ಎನ್ನಲಾಗಿದೆ. ಈ ವಿಚಾರವನ್ನು ಕಾಪು ಬಿಜೆಪಿ ಯುವ ಮೋರ್ಚಾ ಲಿಖಿತ ರೂಪದಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್‌ ಗಮನಕ್ಕೆ ತಂದಿದೆ.

  • ಹೈಕೋರ್ಟ್ ವಿರುದ್ಧ ಮಾತನಾಡುವವರು ಉಗ್ರರು, ನ್ಯಾಯ ಸಿಗದಿದ್ರೆ ಪಾಕಿಸ್ತಾನ, ಆಫ್ಘನ್‌ಗೆ ಹೋಗಲಿ: ಸುವರ್ಣ

    ಹೈಕೋರ್ಟ್ ವಿರುದ್ಧ ಮಾತನಾಡುವವರು ಉಗ್ರರು, ನ್ಯಾಯ ಸಿಗದಿದ್ರೆ ಪಾಕಿಸ್ತಾನ, ಆಫ್ಘನ್‌ಗೆ ಹೋಗಲಿ: ಸುವರ್ಣ

    ಉಡುಪಿ: ಹೈಕೋರ್ಟ್ ವಿರುದ್ಧ ಮಾತನಾಡುವವರು ಉಗ್ರರು, ಸುಪ್ರೀಂ ಕೋರ್ಟ್ನಲ್ಲಿ ನ್ಯಾಯ ಸಿಗದಿದ್ದರೆ ಪಾಕಿಸ್ತಾನ, ಅಫ್ಘಾನಿಸ್ತಾನಕ್ಕೆ ಹೋಗಿ ಎಂದು ಸರ್ಕಾರಿ ಪಿಯು ಕಾಲೇಜು ಉಪಾಧ್ಯಕ್ಷ ಯಶ್‌ಪಾಲ್ ಸುವರ್ಣ ಹೇಳಿಕೆ ನೀಡಿದ್ದಾರೆ.

    ಅಂಬೇಡ್ಕರ್ ಬಗ್ಗೆ ಮಾತನಾಡುವ ಅರ್ಹತೆ ಇವರಿಗಿಲ್ಲ. ಹೈಕೋರ್ಟ್ ವಿಸ್ತೃತ ಪೀಠದಿಂದ ತೀರ್ಪು ಬಂದರೂ ಕೋರ್ಟ್ ವಿರುದ್ಧ ಮಾತನಾಡುವ ಹಿಜಬ್ ಹೋರಾಟಗಾರ್ತಿಯರು ವಿದ್ಯಾರ್ಥಿನಿಯರೇ ಅಲ್ಲ. ಅವರು ಟೆರರಿಸ್ಟ್ ಸಂಘಟನೆಯ ಸದಸ್ಯರು. ಸುಪ್ರೀಂ ಕೋರ್ಟ್ನಲ್ಲೂ ನಿಮ್ಮ ವಿರುದ್ಧ ತೀರ್ಪು ಬಂದರೆ ಪಾಕಿಸ್ತಾನಕ್ಕೆ, ಅಫ್ಘಾನಿಸ್ತಾನಕ್ಕೆ ಹೋಗಿ ಜೀವನ ಮಾಡಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಹಿಜಬ್ ವಿವಾದ, ತುರ್ತು ವಿಚಾರಣೆ ನಿರಾಕರಿಸಿದ ಸುಪ್ರೀಂಕೋರ್ಟ್ – ಹೋಳಿ ರಜೆ ಬಳಿಕ ವಿಚಾರಣೆ

    ಅಂಬೇಡ್ಕರ್ ಬಗ್ಗೆ ಮಾತನಾಡುವ ಅರ್ಹತೆ ವಿದ್ಯಾರ್ಥಿನಿಯರಿಗೆ ಇಲ್ಲ. ನೆಲದ ಕಾನೂನು ಗೌರವಿಸದವರು, ಅವರಿಗೆ ಬೆಂಬಲ ನೀಡುತ್ತಿರುವ ಸಂಘಟನೆಗಳು ದೇಶವಿರೋಧಿ ಸಂಘಟನೆ ಎಂದು ಹೇಳಿದ್ದಾರೆ.

    ವಿದ್ಯಾರ್ಥಿಗಳು ದೇಶ ವಿರೋಧಿಗಳು ಎಂಬುದು ಮತ್ತೆ ಸಾಬೀತಾಗಿದೆ. ದೇಶ ವಿರೋಧಿ ಸಂಘಟನೆಗಳ ಕುಮ್ಮಕ್ಕಿನಿಂದ ಹೇಳಿಕೆಯನ್ನು ನೀಡುತ್ತಿದ್ದಾರೆ. ಅಂಬೇಡ್ಕರ್ ಬಗ್ಗೆ ಮಾತನಾಡುವ ಅರ್ಹತೆ ವಿದ್ಯಾರ್ಥಿನಿಯರಿಗೆ ಇಲ್ಲ. ಅವರಿಗೆ ಭಾರತ ದೇಶದ ಮೇಲೆ ಅಭಿಮಾನ ಇಲ್ಲ. ನ್ಯಾಯಾಧೀಶರ ಬಗ್ಗೆ ಹಗುರವಾಗಿ ಮಾತನಾಡುವವರು ಈ ದೇಶದಲ್ಲಿ ಇರಬೇಕಾ? ಮುಸಲ್ಮಾನ ವಿದ್ಯಾರ್ಥಿನಿಯರನ್ನು ಶಿಕ್ಷಣವಂಚಿತರನ್ನಾಗಿ ಮಾಡಲಾಗುತ್ತಿದೆ. ಇದರ ಹಿಂದೆ ಒಂದು ದೊಡ್ಡ ಷಡ್ಯಂತ್ರ ಇದೆ. ಮುಸಲ್ಮಾನ ಮಹಿಳೆಯರನ್ನು ಗುಲಾಮರ ರೀತಿಯಲ್ಲಿ ನಡೆಸಿಕೊಳ್ಳಲಾಗುತ್ತಿದೆ. ದೇಶವಿರೋಧಿ ಸಂಘಟನೆಗಳ ಕುಮ್ಮಕ್ಕಿದೆ ಒಳಗಾಗಬೇಡಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹಿಜಬ್‌ ವಿವಾದದ ಹಿಂದೆ ಕಾಣದ ಕೈಗಳ ಕೈವಾಡ: ಹೈಕೋರ್ಟ್‌ ಶಂಕೆ

    ಆರು ವಿದ್ಯಾರ್ಥಿನಿಯರಿಂದ ಗಂಡಾಂತರ ಇದೆ. ನಮ್ಮ ಕಾಲೇಜಿನ 6 ವಿದ್ಯಾರ್ಥಿನಿಯರಿಂದ ಸಮಾಜಕ್ಕೆ ದೊಡ್ಡ ಗಂಡಾಂತರ ಇದೆ. ಹಿಜಬ್ ತೆಗೆದು ಬಂದರೂ ಅವರನ್ನು ಕ್ಲಾಸಿಗೆ ಸೇರಿಸುವ ಪರಿಸ್ಥಿತಿಯಿಲ್ಲ. ನಾವು ಈ ಬಗ್ಗೆ ಬಹಳ ಚಿಂತನೆ ನಡೆಸಬೇಕಾಗಿದೆ. ಅವರನ್ನು ಕ್ಲಾಸಿಗೆ ಬಿಡಬೇಕಾ ಬೇಡವೇ ಎಂಬ ಬಗ್ಗೆ ಚರ್ಚೆ ಮಾಡುತ್ತೇವೆ. ಸಮಾನ ನಾಗರಿಕ ಸಂಹಿತೆ, ಹಿಂದೂ ರಾಷ್ಟ್ರ ನಿರ್ಮಾಣ ಮಾಡುವ ಕಲ್ಪನೆ ಇದೆ. ಮುಸಲ್ಮಾನರನ್ನು ನಾವು ಚುನಾವಣೆಯ ಲಾಭಕ್ಕೆ ಬಳಸುತ್ತಿಲ್ಲ. ಅಭಿವೃದ್ಧಿಯ ಚಿಂತನೆ, ರಾಷ್ಟ್ರೀಯ ಚಿಂತನೆ ಇದ್ದ ಮುಸ್ಲಿಮರನ್ನು ಒಪ್ಪುತ್ತೇವೆ ಎಂದು ಹೇಳಿದ್ದಾರೆ.