Tag: yashpal suvarna

  • ಉಜಿರೆಯಲ್ಲಿ ಇದ್ದಿದ್ದಕ್ಕೆ ಬಚಾವಾದೆ, ಉಡುಪಿಯಲ್ಲಿ ಇದ್ದಿದ್ರೆ ಮಲ್ಪೆ ಬೀಚಲ್ಲಿ ಫುಟ್ಬಾಲ್ ಆಡಿಸ್ತಿದ್ದೆ – ಸಮೀರ್‌ಗೆ ಯಶ್‌ಪಾಲ್ ಸುವರ್ಣ ಎಚ್ಚರಿಕೆ

    ಉಜಿರೆಯಲ್ಲಿ ಇದ್ದಿದ್ದಕ್ಕೆ ಬಚಾವಾದೆ, ಉಡುಪಿಯಲ್ಲಿ ಇದ್ದಿದ್ರೆ ಮಲ್ಪೆ ಬೀಚಲ್ಲಿ ಫುಟ್ಬಾಲ್ ಆಡಿಸ್ತಿದ್ದೆ – ಸಮೀರ್‌ಗೆ ಯಶ್‌ಪಾಲ್ ಸುವರ್ಣ ಎಚ್ಚರಿಕೆ

    ಉಡುಪಿ: ನೀನು ಉಜಿರೆಯಲ್ಲಿ (Mangaluru) ಇದ್ದದ್ದಕ್ಕೆ ಬಚಾವಾದೆ, ಉಡುಪಿಯಲ್ಲಿ ಇದ್ದಿದ್ರೆ ಮಲ್ಪೆ ಬೀಚಿನಲ್ಲಿ ಫುಟ್ಬಾಲ್ ಆಡಿಸುತ್ತಿದ್ದೆ ಎಂದು ಶಾಸಕ ಯಶ್‌ಪಾಲ್ ಸುವರ್ಣ (Yashpal Suvarna) ಯೂಟ್ಯೂಬರ್ ಸಮೀರ್‌ಗೆ (Youtuber Sameer) ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

    `ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಯೂಟ್ಯೂಬರ್ ಸಮೀರ್‌ಗೆ ನೇರ ಎಚ್ಚರಿಕೆ ಕೊಡುತ್ತೇನೆ. ನೀನು ಉಜಿರೆಯಲ್ಲಿ ಇದ್ದದ್ದಕ್ಕೆ ಬಚಾವಾದೆ. ಉಡುಪಿಯಲ್ಲಿ ಇರುತ್ತಿದ್ದರೆ ಮಲ್ಪೆ ಬೀಚಿನಲ್ಲಿ ಫುಟ್ಬಾಲ್ ಆಡಿಸುತ್ತಿದ್ದೆ. ನಿನ್ನನ್ನು ನಾವು ಫುಟ್ಬಾಲ್ ಮಾಡಿ ಆಡಿಸುತ್ತಿದ್ದೆವು. ಅಧಿವೇಶನ ಮುಗಿದ ಮೇಲೆ ಬರುತ್ತೇನೆ. ಸಮೀರ್ ಬಗ್ಗೆ ಒಳ್ಳೆಯ ಪ್ಲ್ಯಾನ್‌ ಮಾಡಿ, ಆತನನ್ನು ರಾಜ್ಯದಿಂದ ಓಡಿಸುತ್ತೇವೆ. ಕಾಂಗ್ರೆಸ್ ಹೈಕಮಾಂಡ್‌ನ ಒತ್ತಡದಿಂದ ಆತ ಬಂಧನವಾಗಿಲ್ಲ. ನಮ್ಮ ಸರ್ಕಾರ ಇರಲಿ, ಇರದೇ ಇರಲಿ. ನಮ್ಮದು ಹಿಂದೂ ಸಮಾಜದ ಪರ ವಾದ. ನಮ್ಮದು ಹಿಂದುತ್ವದ ಫ್ಯಾಕ್ಟರಿ, ಹಿಂದು ಸಮಾಜವನ್ನು ಒಡೆಯಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.ಇದನ್ನೂ ಓದಿ: ಸುಜಾತಾ ಭಟ್‌ರನ್ನು ಮೊದಲು ಪೊಲೀಸರು ವಶಕ್ಕೆ ಪಡೆದ ವಿಚಾರಣೆ ನಡೆಸಬೇಕು: ವಾಸಂತಿ ಸಹೋದರ ಒತ್ತಾಯ

    ಅಣ್ಣಪ್ಪ ಪಂಜುರ್ಲಿ ದೈವದ ಅನುಗ್ರಹವಾಗಿದೆ. ದೇವರ ಮಧ್ಯಸ್ಥಿಕೆಯಲ್ಲಿ ಎಲ್ಲ ಇತ್ಯರ್ಥ ಆಗುತ್ತದೆ. ಬಿಜೆಪಿ ಹೋರಾಟ ಒಂದು ಭಾಗ ಮಾತ್ರ. ಅಣ್ಣಪ್ಪ ಪಂಜುರ್ಲಿ ಎಲ್ಲರ ಮನೆಯ ದೇವರು. ಮೊಗವೀರ ಸಮುದಾಯದ ಪ್ರಾರ್ಥನೆ ಫಲ ಕೊಟ್ಟಿದೆ. ಕೋಟ್ಯಂತರ ದೈವಭಕ್ತರ ಪ್ರಾರ್ಥನೆ ಫಲಿಸಿದೆ. ಪರಶುರಾಮನ ಸೃಷ್ಟಿಯಲ್ಲಿ ಧರ್ಮಕ್ಕೆ ಗೆಲುವಾಗಿದೆ. ಮಂಜುನಾಥ ಸ್ವಾಮಿ, ಅಣ್ಣಪ್ಪ ಸ್ವಾಮಿ ಕಣ್ಣು ಬಿಟ್ಟಿದ್ದಾರೆ. ಉಡುಪಿ ಕೃಷ್ಣ ಮುಖ್ಯಪ್ರಾಣ ಅನ್ಯಾಯಕ್ಕೆ ಶಿಕ್ಷೆ ಕೊಟ್ಟಿದ್ದಾರೆ ಎಂದು ಹೇಳಿದರು.

    ಹಿಂದೂ ಧರ್ಮದ ಷಡ್ಯಂತ್ರಕ್ಕೆ ಫಲಿತಾಂಶ ಹೊರಬೀಳಬೇಕಿದೆ. ಹಣಕಾಸಿನ ವಿಚಾರದಲ್ಲಿ ಧರ್ಮದ ಅವಹೇಳನಕ್ಕೆ ಶಿಕ್ಷೆ ಪ್ರಾಪ್ತಿಯಾಗಿದೆ. ಹಿಂದೂ ಧರ್ಮವನ್ನು ತನ್ನ ಸ್ವಾರ್ಥಕ್ಕಾಗಿ ಬಳಸಿಕೊಂಡವರು ಶಿಕ್ಷೆ ಅನುಭವಿಸುತ್ತಿದ್ದಾರೆ. ಹಿಂದೆ ಬ್ರಿಟಿಷರ ದಬ್ಬಾಳಿಕೆ ನಡೆಯುತ್ತಿತ್ತು. ಈಗ ಕಮ್ಯುನಿಸ್ಟರ ಮಾನಸಿಕತೆ ದಬ್ಬಾಳಿಕೆ ಮಾಡುತ್ತಿದೆ. ಮತಾಂತರದ ದೊಡ್ಡ ಷಡ್ಯಂತ್ರವಿದು, ಸಂಸದ ಶಶಿಕಾಂತ್ ಸೆಂಥಿಲ್ ವಿರುದ್ಧ ಸಹ ವಿಚಾರಣೆಯಾಗಬೇಕು ಎಂದು ಆಗ್ರಹಿಸಿದರು.ಇದನ್ನೂ ಓದಿ: ಬೆಂಗಳೂರು – ಸಿಗಂದೂರು ನಡುವೆ ಕೆಎಸ್ಆರ್‌ಟಿಸಿ ನಾನ್ ಎಸಿ ಸ್ಲೀಪರ್ ಬಸ್ ಸಂಚಾರ ಆರಂಭ

  • ಬುರುಡೆ ಕೇಸ್‌ ಹಿಂದೆ ಕೈ ಸಂಸದ ಶಶಿಕಾಂತ್‌ ಸೆಂಥಿಲ್‌ ಇದ್ದಾರೆ: ಯಶ್‌ಪಾಲ್‌ ಸುವರ್ಣ

    ಬುರುಡೆ ಕೇಸ್‌ ಹಿಂದೆ ಕೈ ಸಂಸದ ಶಶಿಕಾಂತ್‌ ಸೆಂಥಿಲ್‌ ಇದ್ದಾರೆ: ಯಶ್‌ಪಾಲ್‌ ಸುವರ್ಣ

    ಮಂಗಳೂರು: ಧರ್ಮಸ್ಥಳದ ಬುರುಡೆ ಪ್ರಕರಣದ (Dharmasthala Mass Burial Case) ಅನಾಮಿಕನ ಹಿಂದೆ ಕಾಂಗ್ರೆಸ್‌ ಸಂಸದ ಶಶಿಕಾಂತ್‌ ಸೆಂಥಿಲ್‌ (Sasikanth Senthil) ಇದ್ದಾರೆ ಎಂದು ಉಡುಪಿಯ ಬಿಜೆಪಿ ಶಾಸಕ ಯಶ್‌ಪಾಲ್‌ ಸುವರ್ಣ (Yashpal Suvarna) ಸ್ಫೋಟಕ ಆರೋಪ ಮಾಡಿದ್ದಾರೆ.

    ಧರ್ಮಸ್ಥಳ ದೇವಸ್ಥಾನಕ್ಕೆ (Dharmasthala) ಭೇಟಿ ನೀಡಿ ಪಬ್ಲಿಕ್‌ ಟಿವಿ ಜೊತೆ ಮಾತನಾಡಿದ ಅವರು, ಈ ಷಡ್ಯಂತ್ರ ಮಾಡಿದವರ ಮೂಲಕ್ಕೆ ಹೋಗಬೇಕು. ದಕ್ಷಿಣ ಕನ್ನಡದ ಮಾಜಿ ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಅವರನ್ನು ತನಿಖೆಗೆ ಒಳಪಡಿಸಿದರೆ ಸತ್ಯ ಸಂಗತಿ ಬಯಲಾಗಲಿದೆ ಎಂದು ಹೇಳಿದರು.  ಇದನ್ನೂ ಓದಿ: ಎಡಪಂಥೀಯರನ್ನ ಕೇಳಿ ತನಿಖೆಗೆ ಕೊಟ್ಟಿದ್ದಾರೆ, ಸಿಎಂ ರಾಜ್ಯದ ಜನರ ಕ್ಷಮೆ ಕೇಳಬೇಕು: ವಿಜಯೇಂದ್ರ ಕಿಡಿ

     

    ಅಂದು ಬ್ರಿಟಿಷರು ಬಂದು ಹಿಂದೂಗಳನ್ನು ಒಡೆದು ಆಳಿದ್ದರು. ಈಗ ಕಮ್ಯೂನಿಸ್ಟರು ಹಿಂದೂ ಸಮಾಜದ ಒಳಗೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ದಬ್ಬಾಳಿಕೆ ಮಾಡಿ ಹಿಂದೂಗಳನ್ನು ಒಡೆಯಲು ಮುಂದಾಗುತ್ತಿದ್ದಾರೆ ಎಂದರು.

    ದೇವರ ಸ್ಮರಣೆಯಿಂದ ನಮ್ಮ ದಿನ ಆರಂಭವಾಗುತ್ತದೆ. ಮತ ಬ್ಯಾಂಕ್‌ಗಾಗಿ ಕಾಂಗ್ರೆಸ್‌ ರಾಜಕೀಯ ಮಾಡುತ್ತಿದೆ. ಈ ಷಡ್ಯಂತ್ರಕ್ಕೆ ಮುಂದಿನ ದಿನಗಳಲ್ಲಿ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದು ತಿಳಿಸಿದರು.  ಇದನ್ನೂ ಓದಿ: ಧರ್ಮಸ್ಥಳ ಕ್ಷೇತ್ರದ ಅಪಪ್ರಚಾರದ ಹಿಂದೆ ಮತಾಂತರ ಮಾಫಿಯಾ: ಸಿ.ಟಿ ರವಿ

    ಗೃಹ ಸಚಿವರು ಸದನದಲ್ಲಿ ರಾಜಕೀಯವನ್ನು ಬಿಟ್ಟು ಸರಿಯಾದ ಉತ್ತರ ನೀಡಲಿ. ಧರ್ಮದ ವಿರುದ್ಧದ ಅವಹೇಳನ, ಷಡ್ಯಂತ್ರವನ್ನು ನಾವು ಸಹಿಸುವುದಿಲ್ಲ. ಮಂಜುನಾಥ ಸ್ವಾಮಿ ಎಲ್ಲಾ ಷಡ್ಯತ್ರಗಳಿಗೆ ಉತ್ತರ ಕೊಡುತ್ತಾನೆ ಎಂದು ಹೇಳಿದರು.

  • ದೇಶ ವಿರೋಧಿ, ಹಿಂದೂ ವಿರೋಧಿಗಳಿಗೆ ಸ್ವರ್ಗ ಇಲ್ಲ: ಖರ್ಗೆಗೆ ಯಶ್‌ಪಾಲ್ ಸುವರ್ಣ ತಿರುಗೇಟು

    ದೇಶ ವಿರೋಧಿ, ಹಿಂದೂ ವಿರೋಧಿಗಳಿಗೆ ಸ್ವರ್ಗ ಇಲ್ಲ: ಖರ್ಗೆಗೆ ಯಶ್‌ಪಾಲ್ ಸುವರ್ಣ ತಿರುಗೇಟು

    ಉಡುಪಿ: ಕಾಂಗ್ರೆಸ್ಸಿಗೂ ನರಕಕ್ಕೂ ಯಾವುದೇ ವ್ಯತ್ಯಾಸ ಇಲ್ಲ. ದೇಶ ವಿರೋಧಿ ಹಾಗೂ ಹಿಂದೂ ವಿರೋಧಿಗಳಿಗೆ ಸ್ವರ್ಗ ಇಲ್ಲ ಎಂದು ಮಲ್ಲಿಕಾರ್ಜುನ್ ಖರ್ಗೆಗೆ ಶಾಸಕ ಯಶ್‌ಪಾಲ್ ಸುವರ್ಣ ತಿರುಗೇಟು ನೀಡಿದರು.

    ಕುಂಭಮೇಳದಲ್ಲಿ ಸ್ನಾನ ಮಾಡಿದರೆ ದೇಶದ ಬಡತನ ನೀಗುವುದಿಲ್ಲ ಎಂಬ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ, ಕಾಂಗ್ರೆಸ್ ಈಗಾಗಲೇ ನರಕದಲ್ಲಿ ಇದೆ. ಸ್ವರ್ಗಕ್ಕೆ ಹೋಗುವಂತಹ ಅವಕಾಶವನ್ನು ದೇವರು ಅವರಿಗೆ ಕಲ್ಪಿಸುವುದಿಲ್ಲ. ದೇಶ ವಿರೋಧಿ ಹಿಂದೂ, ವಿರೋಧಿಗಳಿಗೆ ಸ್ವರ್ಗ ಇಲ್ಲ. ದೇವರು ಅವರನ್ನು ಸ್ವಾಗತ ಕೂಡ ಮಾಡುವುದಿಲ್ಲ. ದೇವರನ್ನೇ ನಂಬದ ಕಾಂಗ್ರೆಸ್ಸಿಗೆ ಸ್ವರ್ಗ-ನರಕದ ಕಲ್ಪನೆ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಸ್ವರ್ಗ, ನರಕ ಧಾರ್ಮಿಕತೆಯ ಬಗ್ಗೆ ಖರ್ಗೆಗೆ ಜ್ಞಾನ ಇಲ್ಲ. ಇಡೀ ವಿಶ್ವ ಪ್ರಧಾನಿ ನರೇಂದ್ರ ಮೋದಿಯ ನಾಯಕತ್ವವನ್ನು ಒಪ್ಪಿದೆ. ಮೋದಿಯಂತಹ ವ್ಯಕ್ತಿ ನಮ್ಮ ರಾಷ್ಟ್ರಕ್ಕೆ ನಾಯಕನಾಗಬೇಕು ಎಂದು ಪ್ರಪಂಚ ಹಂಬಲಿಸುತ್ತಿದೆ ಎಂದು ಖರ್ಗೆ ವಿರುದ್ಧ ಹರಿಹಾಯ್ದರು.

    ಖರ್ಗೆ ಅವರು ಹೇಳಿಕೆಯಿಂದ ಕಾಂಗ್ರೆಸ್‌ನ ಪ್ರಮುಖ ನಾಯಕರು ಮಜುಗರಕ್ಕೀಡಾಗಿದ್ದಾರೆ. ಕಾಂಗ್ರೆಸ್‌ನ ಸಿದ್ಧಾಂತ, ನಡವಳಿಕೆಗಳನ್ನು ನಾಯಕರು ಒಪ್ಪದ ಸ್ಥಿತಿಗೆ ಬಂದಿದ್ದಾರೆ. ಅಲ್ಪಸಂಖ್ಯಾತರ ಒಲೈಕೆಗಾಗಿ ಕಾಂಗ್ರೆಸ್‌ನಲ್ಲಿ ಇದ್ದಾರೆ. ಖರ್ಗೆ ಹೇಳಿಕೆ ಇಡೀ ದೇಶದ ಜನತೆಯನ್ನು ತಲೆತಗ್ಗಿಸುವಂತೆ ಮಾಡಿದೆ. ರಾಜ್ಯ, ಕೇಂದ್ರದ ಹಿರಿಯ ನಾಯಕರಾಗಿದ್ದವರಿಗೆ ಜವಾಬ್ದಾರಿ ಇರಬೇಕು ಎಂದು ಟಾಂಗ್ ಕೊಟ್ಟರು.

    ಇಡೀ ವಿಶ್ವ ಭಾರತದ ಕುಂಭಮೇಳದತ್ತ ನೋಡುತ್ತಿದೆ. ಹಿರಿಯ ರಾಜಕಾರಣಿ ವಯಸ್ಸಿನ ದೋಷದಿಂದ ಈ ರೀತಿಯ ಹೇಳಿಕೆ ಕೊಟ್ಟಿರಬಹುದು. ಖರ್ಗೆ ಹೇಳಿಕೆಯನ್ನು ಖಂಡಿಸುತ್ತೇನೆ. ಅವರು ಬಹಿರಂಗವಾಗಿ ಕ್ಷಮೆ ಕೋರಬೇಕು. ಅಂತರರಾಷ್ಟ್ರೀಯ ಪ್ರತಿನಿಧಿಗಳು ಕುಂಭಮೇಳಕ್ಕೆ ಪೈಪೋಟಿಯಲ್ಲಿ ಬರುತ್ತಿದ್ದಾರೆ. ಜಾತಿ, ಧರ್ಮ ಮೀರಿ ಜನ ಕುಂಭಮೇಳದಲ್ಲಿ ಭಾಗಿಯಾಗುತ್ತಿದ್ದಾರೆ. ದೇಶಕ್ಕೆ ಸ್ವಾಗತ ಮಾಡಬೇಕಾದ ಕಾಂಗ್ರೆಸ್ ದಾರಿ ತಪ್ಪಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

  • ಮಹಾಲಕ್ಷ್ಮಿ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ಅವ್ಯವಹಾರ; ರಘುಪತಿ-ಯಶಪಾಲ್ ಫೈಟ್

    ಮಹಾಲಕ್ಷ್ಮಿ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ಅವ್ಯವಹಾರ; ರಘುಪತಿ-ಯಶಪಾಲ್ ಫೈಟ್

    – ಆಣೆ ಪ್ರಮಾಣದಿಂದ ಹಿಂದಕ್ಕೆ ಸರಿದ ಇತ್ತಂಡಗಳು

    ಉಡುಪಿ: ಇಲ್ಲಿನ ಮಹಾಲಕ್ಷ್ಮಿ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್‌ನ (Mahalakshmi Co Operative Bank) ಕೋಟ್ಯಂತರ ರೂಪಾಯಿ ಆರ್ಥಿಕ ಅವ್ಯವಹಾರ ವಿಚಾರ ದೇವಸ್ಥಾನದ ಮೆಟ್ಟಿಲು ಹತ್ತಿದೆ. ಸಾಲ ತೆಗೆದುಕೊಂಡು ಗ್ರಾಹಕರು ಮರುಪಾವತಿ ಮಾಡುತ್ತಿಲ್ಲ ಎಂದು ಬ್ಯಾಂಕ್‌ನವರು ಹೇಳಿದ್ರೆ. ನಮಗೆ ಹಣ ಸಿಕ್ಕಿಲ್ಲ ಅನ್ಯಾಯವಾಗಿದೆ ಅನ್ನೋದು ಗ್ರಾಹಕರ ಅಳಲು. ಈ ಸಂಬಂಧ ಬ್ಯಾಂಕ್ ಪರವಾಗಿ ಬ್ಯಾಂಕ್ ಅಧ್ಯಕ್ಷ & ಬಿಜೆಪಿ ಹಾಲಿ ಶಾಸಕ ಯಶ್‌ಪಾಲ್ ಸುವರ್ಣ (Yashpal Suvarna) ನಿಂತರೆ.. ಗ್ರಾಹಕರ ಪರವಾಗಿ ಬಿಜೆಪಿ ಮಾಜಿ ಶಾಸಕ ರಘುಪತಿ ಭಟ್ (Raghupati Bhat) ದನಿ ಎತ್ತಿದ್ದಾರೆ.

    ಬ್ಯಾಂಕಿನ ಎಂ.ಡಿ ಸಿಬ್ಬಂದಿ, ಮೋಸ ಆಗಿದೆ ಎನ್ನುತ್ತಿರುವ ಗ್ರಾಹಕರು ದೇವಸ್ಥಾನದಲ್ಲಿ ಮುಖಾಮುಖಿಯಾದರು. ಸ್ವಾಮೀಜಿಗಳ, ಜಾತಿ ಮುಖಂಡರ ಮಧ್ಯಪ್ರವೇಶದಿಂದ ಆಣೆ ಪ್ರಮಾಣಕ್ಕೆ ಬ್ರೇಕ್ ಬಿತ್ತು. ಕಾನೂನು ರೀತಿಯ ಹೋರಾಟದ ತೀರ್ಮಾನ ಮಾಡಲಾಯಿತು. ಉಡುಪಿಯ ಮಹಾಲಕ್ಷ್ಮಿ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ನ ಸಾಲ ಮತ್ತು ಮರುಪಾವತಿ ವಿಚಾರದಲ್ಲಿ ಕಳೆದ ಒಂದು ವಾರದಿಂದ ಭಾರಿ ಚರ್ಚೆ ನಡೆಯುತ್ತಿದೆ. ಸಾಲ ತೆಗೆದುಕೊಂಡು ಗ್ರಾಹಕರು ಮರುಪಾವತಿ ಮಾಡುತ್ತಿಲ್ಲ ಎಂಬುದು ಬ್ಯಾಂಕ್ ನ ವಾದ. ನಮಗೆ ಹಣ ಸಿಕ್ಕಿಲ್ಲ ಅನ್ಯಾಯವಾಗಿದೆ ಎಂಬುದು ಗ್ರಾಹಕರ ಆಳಲು.

    ಈ ನಡುವೆ ಮಧ್ಯವರ್ತಿಗಳು ಮಾಡಿದ್ದಾರೆ ಎನ್ನಲಾದ ಕೋಟ್ಯಾಂತರ ರೂಪಾಯಿ ಅವ್ಯವಹಾರ, ಗ್ರಾಹಕರು ಮತ್ತು ಬ್ಯಾಂಕ್ ನಡುವಿನ ತೀವ್ರ ತಿಕ್ಕಾಟಕ್ಕೆ ಕಾರಣವಾಗಿದೆ. ಮಾಜಿ ಶಾಸಕ ರಘುಪತಿ ಭಟ್ ಗ್ರಾಹಕರ ಪರವಾಗಿ ಧ್ವನಿಯೆತ್ತುತ್ತಿದ್ದಂತೆ ಬ್ಯಾಂಕ್ ಆಣೆ ಪ್ರಮಾಣದ ಸವಾಲು ಹಾಕಿತ್ತು. ಹಾಲಿ ಶಾಸಕ ಯಶ್ ಪಾಲ್ ಸುವರ್ಣ ನಡುವೆ ಜಟಾಪಟಿ ಆರಂಭವಾಗಿತ್ತು. ಈ ಮಾತುಕತೆಯಂತೆ ಕರಂಬಳ್ಳಿ ವೆಂಕಟರಮಣ ದೇವಸ್ಥಾನಕ್ಕೆ ಬ್ಯಾಂಕಿನ ಜಿಎಂ, ಸಿಬ್ಬಂದಿ ಆಗಮಿಸಿದ್ದರು. ಅನ್ಯಾಯವಾಗಿದೆ ಎನ್ನುವ ಗ್ರಾಹಕರು ದೇವರ ಮುಂದೆ ಅಳಲನ್ನು ತೋಡಿಕೊಂಡರು.

    ಬ್ಯಾಂಕ್‌ನ ಎಂಡಿ ದೇವರಿಗೆ ಕಾಣಿಕೆ ಅರ್ಪಿಸಿ ವಿಶೇಷ ಪೂಜೆ ನೆರವೇರಿಸಿದರು. ಕಾನೂನು ಹೋರಾಟದ ಮೊರೆ ಹೋಗುವುದಾಗಿ ಹೇಳಿದರು. ಆಣೆ ಪ್ರಮಾಣ ಕ್ಷೇತ್ರದಲ್ಲಿ ನಡೆಯುವುದಿಲ್ಲ ಎಂದ ಪ್ರಧಾನ ಅರ್ಚಕರು ದೂರನ್ನು ದೇವರ ಮುಂದೆ ಇಡೀ ನ್ಯಾಯಕ್ಕಾಗಿ ಪ್ರಾರ್ಥನೆ ಮಾಡಿ ಎಂಬ ಸಲಹೆ ನೀಡಿದರು.

    ಬ್ಯಾಂಕ್ ವಿಚಾರದ ಚರ್ಚೆ ತಾರಕಕ್ಕೆ ಹೋಗುತ್ತಿದ್ದಂತೆ ಸ್ವಾಮೀಜಿಗಳಿಬ್ಬರು ಅಭಿಪ್ರಾಯ ಮಂಡಿಸಿದ್ದಾರೆ ಉಡುಪಿಯ ಪೇಜಾವರ ಮಠಾಧೀಶ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ಪಲಿಮಾರು ಮಠಾಧೀಶ ವಿದ್ಯಾಧೀಶ ಸ್ವಾಮೀಜಿ ಬ್ಯಾಂಕ್ ಮತ್ತು ಗ್ರಾಹಕರ ನಾಯಕರುಗಳಿಗೆ ಕರೆ ಮಾಡಿ ಕಾನೂನು ರೀತಿಯಲ್ಲಿ ಹೋರಾಟ ಮಾಡಿ ದೈವ ದೇವರನ್ನು ನಡುವೆ ತರಬೇಡಿ ಎಂಬ ಸೂಚನೆಯನ್ನು ನೀಡಿದ್ದಾರೆ. ಇದನ್ನು ಒಪ್ಪಿದ ಗ್ರಾಹಕರು ಮತ್ತು ಬ್ಯಾಂಕ್.. ಆಣೆ ಪ್ರಮಾಣ ಮಾಡದೇ ಪೂಜೆಗೆ ಸೀಮಿತಗೊಳಿಸಿದೆ. ಸಂಕಷ್ಟದಲ್ಲಿರುವ ಗ್ರಾಹಕರಿಗೆ ಸಹಾಯ ಮಾಡುವುದಾಗಿ ರಘುಪತಿ ಭಟ್ ಹೇಳಿದ್ದಾರೆ.

    ಇಷ್ಟೆಲ್ಲ ಬೆಳವಣಿಗೆ ನಡೆಯುತ್ತಿದ್ದಂತೆ ಮಹಾಲಕ್ಷ್ಮಿ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ಪತ್ರಿಕಾಗೋಷ್ಠಿ ನಡೆಸಿದೆ. ಆರ್‌ಬಿಐ ಚೌಕಟ್ಟಿನ ಮೂಲಕ ಮಹಾಲಕ್ಷ್ಮಿ ಕೋ ಬ್ಯಾಂಕ್ ಕೆಲಸ ಮಾಡುತ್ತಿದೆ. ಆರ್ಥಿಕ ಶಿಸ್ತು ಇದೆ ಯಾವುದೇ ತನಿಖೆಗೆ ಬ್ಯಾಂಕ್, ನಾವು ಸಿದ್ಧವಿದೆ ಎಂದಿದೆ. ಈ ನಡುವೆ ಮಾಜಿ ಶಾಸಕ ರಘುಪತಿ ಭಟ್ ವಿರುದ್ಧ ಹರಿಹಾಯ್ದ ಶಾಸಕ ಯಶ್ ಪಾಲ್ ಸುವರ್ಣ, ರಘುಪತಿ ಭಟ್ ಬ್ಯಾಂಕ್‌ನ ಹಕರು, ನ್ಯಾಯಾಧೀಶರಲ್ಲ ಎಂದಿದ್ದಾರೆ. ಆಧಾರ ರಹಿತ ಹೇಳಿಕೆ ಆರೋಪಕ್ಕೆ ವಾರದೊಳಗೆ ಸ್ಪಷ್ಟನೆ ನೀಡಬೇಕು, ಇಲ್ಲದಿದ್ದಲ್ಲಿ ಸದಸ್ಯತನ ರದ್ಧು ಮಾಡುತ್ತೇವೆ ಎಂದು ತಾಕೀತು ಮಾಡಿದ್ದಾರೆ. ಕೋರ್ಟ್ ನಲ್ಲಿ ಅವರು ತಪ್ಪಿತಸ್ಥರು ಅಂತ ಸಾಭೀತಾದರೆ ರಘುಪತಿ ಭಟ್ ಸಾಲದ ಜವಾಬ್ದಾರಿ ತೆಗೆದುಕೊಳ್ತಾರಾ? ಎಂದು ಸವಾಲು ಹಾಕಿದ್ದಾರೆ.

    ಬ್ಯಾಂಕಿನಲ್ಲಿ ಆದ ವ್ಯವಹಾರ ಅವ್ಯವಹಾರ ದೇವಸ್ಥಾನದ ವರೆಗೆ ಹೋಗಿದ್ದು ಎಷ್ಟು ಸರಿ? ಆಣೆ ಪ್ರಮಾಣದವರೆಗೆ ತಲುಪಿದ್ದು ಸರಿಯಲ್ಲ ಎಂಬುದು ಭಕ್ತರ,ಜನರ ಅಭಿಪ್ರಾಯ. ಕಾನೂನು ರೀತಿಯ ಹೋರಾಟ ಮುಂದುವರೆಯುತ್ತೋ? ಮಾತುಕತೆಯ ಮೂಲಕ ಪರಿಹಾರವಾಗುತ್ತೋ ನೋಡಬೇಕು.

  • ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಸೇರಿ 11 ಮಂದಿ ವಿರುದ್ಧ FIR ದಾಖಲು

    ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಸೇರಿ 11 ಮಂದಿ ವಿರುದ್ಧ FIR ದಾಖಲು

    ಉಡುಪಿ: ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ಪ್ರತಿಭಟನೆ ನಡೆಸಿ ಅವರ ಪ್ರತಿಕೃತಿಗೆ ಚಪ್ಪಲಿ ಏಟು ಹಾಗೂ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ (Yashpal Suvarna) ಸೇರಿ 11 ಮಂದಿ ಬಿಜೆಪಿ (BJP) ಮುಖಂಡರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲಾಗಿದೆ.

    ಪ್ರಾಂಶುಪಾಲರಿಗೆ ಪ್ರಶಸ್ತಿ ವಾಪಸ್ ಪಡೆದ ವಿಚಾರವಾಗಿ ಮಣಿಪಾಲದ (Manipal) ಸಿಂಡಿಕೇಟ್ ಸರ್ಕಲ್‌ನಲ್ಲಿ ಸೆ.6ರಂದು ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ಹೆದ್ದಾರಿ ತಡೆದು ಬಿಜೆಪಿ ಮುಖಂಡರು ಸಿಎಂ ಪ್ರತಿಕೃತಿಗೆ ಬೆಂಕಿ ಹಚ್ಚಿದ್ದರು. ಅಲ್ಲದೇ ಹಿಂದೂ ವಿರೋಧಿ ಸಿದ್ದರಾಮಯ್ಯ ತೊಲಗಿಸಿ ಎಂದು ಘೋಷಣೆ ಕೂಡ ಕೂಗಿದ್ದರು. ಈ ಸಂದರ್ಭ ನಗರಸಭಾ ಸದಸ್ಯ ಗಿರೀಶ್ ಅಂಚನ್, ಯುವ ಮೋರ್ಚಾ ಮುಖಂಡ ಪೃಥ್ವಿರಾಜ್ ಶೆಟ್ಟಿ ಸಿಎಂ ಪ್ರತಿಕೃತಿಗೆ ಚಪ್ಪಲಿಯಿಂದ ಹೊಡೆದಿದ್ದರು. ಇದನ್ನೂ ಓದಿ: ಹಿರಿಯ ಪತ್ರಕರ್ತ ವಸಂತ ನಾಡಿಗೇರ್ ನಿಧನ

    ಈ ಕುರಿತು ಎನ್‌ಎಸ್‌ಯುಐ ಮುಖಂಡ ಸೌರಭ್ ಬಲ್ಲಾಳ್ ಶಾಂತಿಭಂಗ ತರುವ ಉದ್ದೇಶದಿಂದ ಕೃತ್ಯ ಎಸೆಗಿದ್ದಾರೆ ಎಂದು ದೂರು ನೀಡಿದ್ದಾರೆ. ಈ ಪ್ರಕರಣದಲ್ಲಿ ಯಶ್‌ಪಾಲ್ ಸುವರ್ಣ ಎ5 ಆರೋಪಿಯಾಗಿದ್ದಾರೆ. ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಸದಸ್ಯರಾದ ಗಿರೀಶ್ ಅಂಚನ್, ವಿಜಯ ಕೊಡವೂರು, ಬಾಲಕೃಷ್ಣ ಶೆಟ್ಟಿ ವಿರುದ್ಧವೂ ದೂರು ನೀಡಲಾಗಿದೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಹಳಿ ಮೇಲಿದ್ದ ಸಿಲಿಂಡರ್‌ಗೆ ಗುದ್ದಿದ ರೈಲು – ಕಾನ್ಪುರದಲ್ಲಿ ರೈಲು ದುರಂತಕ್ಕೆ ಸಂಚು!

  • ಸಿದ್ದರಾಮಯ್ಯ-ಡಿ.ಕೆ.ಸುರೇಶ್ ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ನೆಲೆಸುತ್ತಾರಾ?: ಯಶ್‌ಪಾಲ್ ಸುವರ್ಣ

    ಸಿದ್ದರಾಮಯ್ಯ-ಡಿ.ಕೆ.ಸುರೇಶ್ ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ನೆಲೆಸುತ್ತಾರಾ?: ಯಶ್‌ಪಾಲ್ ಸುವರ್ಣ

    ಉಡುಪಿ: ವಿಜಯನಗರದಲ್ಲಿ (Vijayanagar) ಕುಂಕುಮ ಬೇಡ ಎಂದ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ಉಡುಪಿ (Udupi) ಶಾಸಕ ಯಶ್‌ಪಾಲ್ ಸುವರ್ಣ (Yashpal Suvarna) ಕಿಡಿಕಾರಿದ್ದಾರೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಪಸಂಖ್ಯಾತರ ಓಲೈಕೆಗಾಗಿ ಸಿಎಂ ಹೀಗೆ ವರ್ತಿಸುತ್ತಾರೆ. ಸಿದ್ದರಾಮಯ್ಯ-ಡಿಕೆ ಸುರೇಶ್ ನಿವೃತ್ತಿ ಜೀವನವನ್ನು ಬಾಂಗ್ಲಾದೇಶ ಅಥವಾ ಪಾಕಿಸ್ತಾನದಲ್ಲಿ ಕಳೆಯುವ ಯೋಚನೆ ಮಾಡಿರಬಹುದು ಎಂದು ತಿರುಗೇಟು ಕೊಟ್ಟರು. ಇದನ್ನೂ ಓದಿ: ಗ್ಯಾರಂಟಿ ನಿರ್ವಹಿಸಲಾಗದೆ ಕೇಂದ್ರದ ಅನುದಾನ ಬಂದಿಲ್ಲ ಅಂತಿದ್ದಾರೆ ಕಾಂಗ್ರೆಸ್‌ನವ್ರು: ಜೋಶಿ ಆರೋಪ

    ಸಿದ್ದರಾಮಯ್ಯ ದೇಶ ವಿರೋಧಿ, ಹಿಂದೂ ವಿರೋಧಿ ನೀತಿ ಮುಂದುವರಿಸಿದ್ದಾರೆ. ಕಾಂಗ್ರೆಸ್ ಸಂಸದ ಪ್ರತ್ಯೇಕ ರಾಷ್ಟ್ರದ ಕೂಗು ಎಬ್ಬಿಸಿದ್ದಾರೆ. ಭ್ರಷ್ಟಾಚಾರ ದೇಶ ವಿರೋಧಿ, ಹಿಂದೂ ವಿರೋಧಿ ನಿಲುವನ್ನು ಕಾಂಗ್ರೆಸ್ ತಳೆದಿದೆ. ಕುಂಕುಮ ಕೊಡಲು ಬಂದಾಗ ಅದನ್ನು ಸಿದ್ದರಾಮಯ್ಯ ತಡೆದಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಪಂಜಾಬ್‌ ರಾಜ್ಯಪಾಲ ಸ್ಥಾನಕ್ಕೆ ಬನ್ವಾರಿಲಾಲ್ ಪುರೋಹಿತ್ ರಾಜೀನಾಮೆ

  • ಪ್ರಾಣಪ್ರತಿಷ್ಠೆ ದಿನ ಸಾರ್ವತ್ರಿಕ ರಜೆ ಘೋಷಿಸುವಂತೆ ಸಿಎಂಗೆ ಪತ್ರ: ಯಶ್‌ಪಾಲ್‌ ಸುವರ್ಣ

    ಪ್ರಾಣಪ್ರತಿಷ್ಠೆ ದಿನ ಸಾರ್ವತ್ರಿಕ ರಜೆ ಘೋಷಿಸುವಂತೆ ಸಿಎಂಗೆ ಪತ್ರ: ಯಶ್‌ಪಾಲ್‌ ಸುವರ್ಣ

    ಉಡುಪಿ: ಜನವರಿ 22 ಅಯೋಧ್ಯೆಯಲ್ಲಿ ರಾಮಮಂದಿರ (Ayodhya Ram Mandir) ಉದ್ಘಾಟನೆ ಆಗಲಿದೆ. ಪ್ರಾಣಪ್ರತಿಷ್ಠೆ ದಿನ ಸಾರ್ವತ್ರಿಕ ರಜೆ ಘೋಷಣೆ ಮಾಡುವಂತೆ ಸಿಎಂ ಸಿದ್ದರಾಮಯ್ಯಗೆ (Siddaramaiah) ಪತ್ರ ಬರೆದು ಮನವಿ ಮಾಡಿದ್ದೇನೆ ಎಂದು ಶಾಸಕ ಯಶ್ ಪಾಲ್ ಸುವರ್ಣ (Yashpal Suvarna) ಹೇಳಿದ್ದಾರೆ.

    ಪಬ್ಲಿಕ್‌ ಟಿವಿ ಜೊತೆ ಮಾತನಾಡಿದ ಅವರು, ಹಲವಾರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಅವಕಾಶವಾಗುತ್ತದೆ. ಯುವಜನತೆಗೆ ರಾಮಜನ್ಮಭೂಮಿ ಹೋರಾಟ ಇತಿಹಾಸ ತಿಳಿಯಬೇಕಾಗಿದೆ. ಪೂಜೆ, ಭಜನಾ ಕಾರ್ಯಕ್ರಮದಲ್ಲಿ ಯುವ ಜನತೆ ಭಾಗಿಯಾಗಬೇಕು. ಮುಖ್ಯಮಂತ್ರಿ ಆಗಿ ಅವರಿಗೆ ಮನವಿ ಮಾಡಿದ್ದೇವೆ. ರಜೆ ಕೊಡ್ತಾರೋ ಬಿಡ್ತಾರೋ ಅವರಿಗೆ ಬಿಟ್ಟಿದ್ದು ಎಂದರು. ಇದನ್ನೂ ಓದಿ: Ayodhya Ram Mandir – ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ ಪ್ರತಿಮೆ ಆಯ್ಕೆ?

    ಭಾರತ ಹಿಂದೂ ರಾಷ್ಟ್ರ, ರಾಜ್ಯದಲ್ಲಿ ಆರೂವರೆ ಕೋಟಿ ಹಿಂದೂಗಳಿದ್ದಾರೆ. ರಾಜ್ಯದ ಜನರ ಭಾವನೆಯ ಜೊತೆ ಚೆಲ್ಲಾಟ ಆಡಬಾರದು. ಮನವಿಯನ್ನು ಒಪ್ಪಿಕೊಂಡು ರಜೆ ಸಾರಿದರೆ ಉತ್ತಮ. ಇಲ್ಲದಿದ್ದರೆ ಸ್ಥಳೀಯವಾಗಿ ರಜೆಯ ವ್ಯವಸ್ಥೆಗಳನ್ನು ಮಾಡಬೇಕಾಗುತ್ತದೆ. ಸಿದ್ದರಾಮಯ್ಯನವರಿಗೆ ಯಾವುದು ಸರಿ ಯಾವುದು ತಪ್ಪು ಎಂದು ಗೊತ್ತಿದೆ. ಸಿದ್ದರಾಮಯ್ಯ ನಿವೃತ್ತಿ ಅಂಚಿನಲ್ಲಿದ್ದಾರೆ. ಅವರ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ತಿಳಿಸಿದರು.

    ಸಿದ್ದರಾಮಯ್ಯನವರ ಕುಟುಂಬ ಹೆಂಡತಿ, ಮಕ್ಕಳು ಧಾರ್ಮಿಕ ಕಾರ್ಯಕ್ರಮದಲ್ಲಿ ಉಡುಪಿ ಕೃಷ್ಣಮಠ-ಮಂದಿರಗಳಿಗೆ ಹೋಗುತ್ತಾರೆ. ಸಿದ್ದರಾಮಯ್ಯ ಅಲ್ಪಸಂಖ್ಯಾತರ ಓಲೈಕೆಗಾಗಿ ಹೀಗೆ ವರ್ತಿಸುತ್ತಿದ್ದಾರೆ. ರಾಮಮಂದಿರ ನಿರ್ಮಾಣ ಆಗುತ್ತಿರುವುದು ಸಿದ್ದರಾಮಯ್ಯ ಅವರ ಮನಸ್ಸಿನಲ್ಲಿ ಬಹಳ ಖುಷಿ ಇದೆ. ಜನವರಿ 4 ಭೇಟಿಯಾಗಿ ಶಿಕ್ಷಣ ಸಚಿವರು ಸಿಎಂ ಇಬ್ಬರಿಗೆ ಮನವಿ ಮಾಡುತ್ತೇನೆ ಎಂದು ಹೇಳಿದರು.

  • ಹಿಂದೂ ಸಮಾಜೋತ್ಸವದ ಕಟೌಟ್ ತೆರವು- ವಿಹಿಂಪ, ಭಜರಂಗದಳ, ಬಿಜೆಪಿ ಅಸಮಾಧಾನ

    ಹಿಂದೂ ಸಮಾಜೋತ್ಸವದ ಕಟೌಟ್ ತೆರವು- ವಿಹಿಂಪ, ಭಜರಂಗದಳ, ಬಿಜೆಪಿ ಅಸಮಾಧಾನ

    ಉಡುಪಿ: ಶಿವಮೊಗ್ಗದ ಈದ್ ಮಿಲಾದ್ (Eid Milad) ಮೆರವಣಿಗೆಯಲ್ಲಿ ಯುವಕರ ಗುಂಪು ಪುಂಡಾಟ ಮೆರೆದಿತ್ತು. ಔರಂಗಜೇಬನ ಕಟೌಟ್, ಟಿಪ್ಪುವಿನ ಪತಾಕೆಗೆ ಪೊಲೀಸರು ಅಕ್ಷೇಪಿಸಿದ್ದು ಇದಕ್ಕೆ ಕಾರಣವಾಗಿತ್ತು. ಘಟನೆ ನಡೆಯುತ್ತಿದ್ದಂತೆ ಸರ್ಕಾರ ಎಲ್ಲಾ ಜಿಲ್ಲೆಗಳಿಗೆ ಕಟ್ಟುನಿಟ್ಟಿನ ಸೂಚನೆ ರವಾನಿಸಿದೆ. ಪ್ರಚೋದನಾತ್ಮಕ ಭಾವನೆಗಳಿಗೆ ಧಕ್ಕೆ ತರುವ ಬ್ಯಾನರ್, ಬಂಟಿಂಗ್ಸ್ ಕಟೌಟ್ ಗಳನ್ನು ತೆರವು ಮಾಡಲು ಸೂಚಿಸಿದೆ. ಈ ಸೂಚನೆಯ ಮೊದಲ ಪರಿಣಾಮ ಕರಾವಳಿ ಜಿಲ್ಲೆ ಉಡುಪಿ ಮೇಲೆ ಬಿದ್ದಿದೆ. ಅಕ್ಟೋಬರ್ 10 ಎಂಜಿಎಂ ಮೈದಾನದಲ್ಲಿ ಹಿಂದೂ ಸಮಾಜೋತ್ಸವ ನಿಗದಿಯಾಗಿದೆ. ಕಾರ್ಯಕ್ರಮಕ್ಕೆ ನಗರ ಸಿದ್ಧಗೊಳ್ಳುತ್ತಿದೆ. ಸರಕಾರದ ಸೂಚನೆಯಂತೆ ಎಸ್‍ಪಿ ಡಾ. ಅರುಣ್ ಕೆ ಅವರು ಎಲ್ಲಾ ಅನಧಿಕೃತ ನಿಯಮಬಾಹಿರ ಕಟೌಟ್ ಗಳನ್ನು ತೆರವು ಮಾಡಲು ಸೂಚಿಸಿದ್ದಾರೆ.

    ವಿಶ್ವ ಹಿಂದು ಪರಿಷತ್ ಭಜರಂಗದಳ ಬಿಜೆಪಿ (BJP) ಮತ್ತು ಸಂಘ ಪರಿವಾರದ ಮುಖಂಡರು ನಗರದಲ್ಲಿ 30ಕ್ಕೂ ಹೆಚ್ಚು ಕಟೌಟ್ಗಳನ್ನು ಅಳವಡಿಸಿದ್ದರು. ಯಾವುದೇ ಮುನ್ಸೂಚನೆ ನೀಡಿದೆ ಉಡುಪಿ ನಗರಸಭೆ ಕಟಾವುಟಗಳನ್ನು ತೆರೆವು ಮಾಡಿದ್ದು ಆಯೋಜಕರ ಅಸಮಾಧಾನಕ್ಕೆ ಕಾರಣವಾಗಿದೆ. ವಿಶ್ವ ಹಿಂದೂ ಪರಿಷತ್ ಬಜರಂಗದಳ ಮುಖಂಡರು ಉಡುಪಿ ಬಿಜೆಪಿ ಶಾಸಕ ಯಶ್ ಪಾಲ ಸುವರ್ಣ ಈ ಬಗ್ಗೆ ಎಸ್ಪಿ ಜೊತೆ ಮಾತುಕತೆ ಮಾಡಿದ್ದಾರೆ. ನಿಯಮದ ಹೆಸರಿನಲ್ಲಿ ಸಿದ್ದರಾಮಯ್ಯ ಸರ್ಕಾರ ನಡೆಸಿರುವ ಹುನ್ನಾರ ಇದು. ಇಬ್ಬಗೆ ನೀತಿಯನ್ನು ಸರ್ಕಾರ ಪ್ರದರ್ಶಿಸುತ್ತಿದೆ ಎಂದು ಶಾಸಕ ಯಶ್ ಪಾಲ್ ಆರೋಪಿಸಿದ್ದಾರೆ.

    ಶಿವಮೊಗ್ಗ ಘಟನೆ ನಂತರ ಕಠಿಣ ನಿಯಮವನ್ನು ಜಾರಿಗೆ ತರಲು ಸರ್ಕಾರದಿಂದ ಮೌಖಿಕ ಸೂಚನೆ ಬಂದಿದೆ. ನಗರಸಭೆಗೆ ಪೊಲೀಸ್ ಇಲಾಖೆ ಸೂಚನೆ ನೀಡಿದೆ. ಅಧಿಕಾರಿಗಳು ಆದೇಶವನ್ನು ಪಾಲಿಸಿದ್ದಾರೆ ಎಂದು ನಗರಸಭೆ ಪೌರಾಯುಕ್ತ ರಾಯಪ್ಪ ತಿಳಿಸಿದ್ದಾರೆ.

    ತಿಂಗಳ ಹಿಂದೆ ಉಡುಪಿಯಲ್ಲಿ ಅಧಿಕಾರ ವಹಿಸಿಕೊಂಡ ಎಸ್. ಪಿ ಡಾ. ಅರುಣ್ ಹಲವಾರು ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಿದ್ದಾರೆ. ನಗರದ ಸೌಂದರ್ಯ ಕೆಡಿಸುವ ಡಿಜಿಟಲ್ ಬ್ಯಾನರ್ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದ್ದದ್ದರಿಂದ ಈ ವಿಚಾರದಲ್ಲೂ ನಿಯಮ ಬಿಗಿ ಮಾಡಿದ್ದಾರೆ. ಶೌರ್ಯ ಜಾಗರಣಾ ರಥಯಾತ್ರೆ ಹೆಸರಿನ ಕಾರ್ಯಕ್ರಮದ ಮೇಲೆ ಸರ್ಕಾರದ ನಿಯಮದ ಮೊದಲ ಪರಿಣಾಮ ಬಿದ್ದಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವೀಡಿಯೋ ಹಲವು ಬಾರಿ ಫಾರ್ವರ್ಡ್ ಆಗಿದೆ: ಯಶ್‍ಪಾಲ್ ಸುವರ್ಣ ಹೊಸ ಬಾಂಬ್

    ವೀಡಿಯೋ ಹಲವು ಬಾರಿ ಫಾರ್ವರ್ಡ್ ಆಗಿದೆ: ಯಶ್‍ಪಾಲ್ ಸುವರ್ಣ ಹೊಸ ಬಾಂಬ್

    – ಉಡುಪಿಯ ಬಿಜೆಪಿ ಕಚೇರಿಯಿಂದ ಎಸ್‍ಪಿ ಕಚೇರಿ ವರೆಗೆ ಜಾಥಾ

    ಉಡುಪಿ: ನಗರದ ಖಾಸಗಿ ಕಾಲೇಜಿನ (BJP) ಟಾಯ್ಲೆಟ್‍ನಲ್ಲಿ ವಿದ್ಯಾರ್ಥಿನಿಯರ ವೀಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಯಶ್‍ಪಾಲ್ ಸುವರ್ಣ (Yashpal Suvarna) ಹೊಸ ಬಾಂಬ್ ಸಿಡಿಸಿದ್ದಾರೆ.

    ಕಾಪು ಮೂಲದ ಜಿಹಾದಿ ಮಹಿಳೆ ಸಂಘಟನೆ ಪ್ರಾರಂಭವಾಗಿದೆ. ಚಿತ್ರೀಕರಣಗೊಂಡ ವೀಡಿಯೋ ಹಲವು ಬಾರಿ ಫಾರ್ವರ್ಡ್ ಆಗಿದೆ. ಇದಕ್ಕೆ ನನ್ನ ಬಳಿ ಸಾಕ್ಷಿ ಇದೆ. ಈ ಪ್ರಕರಣದ ಹಿಂದೆ ದೊಡ್ಡ ಷಡ್ಯಂತ್ರ ಇದೆ. ವೀಡಿಯೋ ಮಾಡಿರುವ ವಿದ್ಯಾರ್ಥಿನಿ ಬಳಿ ಮೂರು ಮೊಬೈಲ್‍ಗಳಿವೆ ಎಂಬ ಮಾಹಿತಿ ಇದೆ. ಆ ವಿದ್ಯಾರ್ಥಿಗಳ ಹಿಂದೆ ಯಾರು ಇದ್ದಾರೆ ಎಂಬುದು ತನಿಖೆಯಾಗಬೇಕು ಎಂದು ಯಶ್‍ಪಾಲ್ ಸುವರ್ಣ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಬುರ್ಖಾ ಧರಿಸದಿದ್ದಕ್ಕೆ ಮುಸ್ಲಿಂ ವಿದ್ಯಾರ್ಥಿನಿಯರನ್ನ ಬಸ್ ಹತ್ತಲು ಬಿಡದ ಡ್ರೈವರ್ ಅಮಾನತು

    ಒಂದು ವಿದ್ಯಾರ್ಥಿನಿ ಟಾಯ್ಲೆಟ್‍ನಲ್ಲಿ ಮೊಬೈಲ್ ಇಟ್ಟು ಚಿತ್ರೀಕರಣ ಮಾಡುವುದು ಅಷ್ಟು ಸುಲಭದ ವಿಚಾರವಲ್ಲ. ನಾಳೆ ಆ ವಿದ್ಯಾರ್ಥಿನಿ ಯಾರೇ ಬಾಂಬ್ ಕೊಟ್ಟರೂ ಅದನ್ನು ಇಡಲು ಹಿಂಜರಿಯುವುದಿಲ್ಲ. ಈ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಗೃಹಸಚಿವ ಜಿ. ಪರಮೇಶ್ವರ್ ಕಿವುಡ ಹಾಗೂ ಮೂಕರಾಗಿದ್ದಾರೆ. ಈ ಪ್ರಕರಣದ ತನಿಖೆಯನ್ನು ಕೇಂದ್ರಕ್ಕೆ ಒಪ್ಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

    ಈ ಬಗ್ಗೆ ಮಾತಾಡಿರುವ ಮಾಜಿ ಶಾಸಕ ರಘುಪತಿ ಭಟ್, ಇದು ಕೊಲೆಯಷ್ಟೇ ದೊಡ್ಡ ಅಪರಾಧ. ವೀಡಿಯೋ ಯಾರಿಗೆ ಫಾರ್ವರ್ಡ್ ಆಗಿದೆ ಎಂಬುದನ್ನು ಬಯಲಿಗೆಳೆಯಬೇಕು. ಸೂಕ್ತ ತನಿಖೆ ನಡೆದರೆ ಎಲ್ಲಾ ಮಾಹಿತಿ ಹೊರಬರಲಿದೆ. ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಆದರೆ ಒಂದು ಕೋಮಿನ ಬಗ್ಗೆ ಮಾತ್ರ ಸರ್ಕಾರ ಗಮನಹರಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

    ಮುಸ್ಲಿಂ ಹುಡುಗಿಯರು, ಹಿಂದೂ ಹುಡುಗಿಯ ವಿಡಿಯೋ ಚಿತ್ರೀಕರಿಸಿದ್ದಕ್ಕೆ ಗೃಹ ಸಚಿವರಿಗೆ ಇದು ಸಣ್ಣ ವಿಚಾರವಾಗಿದೆ. ಮುಸ್ಲಿಂ ಹುಡುಗಿಯ ಚಿತ್ರೀಕರಣ ಆಗಿದ್ದರೂ ಅದು ದೊಡ್ಡ ವಿಷಯವೇ. ಹಿಂದೂ ಹುಡುಗಿಯ ಚಿತ್ರೀಕರಣ ಆದರೂ ಅದು ದೊಡ್ಡ ವಿಷಯವೇ ಆಗಿದೆ. ಸಿಡಿಆರ್ ತೆಗೆದರೆ ಎಲ್ಲವೂ ಹೊರಬರಲಿದೆ. ಸರ್ಕಾರ ಪೊಲೀಸರ ಕೈ ಕಟ್ಟಿ ಹಾಕಿದೆ. ಇಲ್ಲಿ ಎನ್‍ಐಎ ಘಟಕ ತೆರೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.

    ಉಡುಪಿಯ ಬಿಜೆಪಿ ಕಚೇರಿಯಿಂದ ಎಸ್‍ಪಿ ಕಚೇರಿವರೆಗೂ ಬಿಜೆಪಿಯ ಶಾಸಕರು ಹಾಗೂ ಜಿಲ್ಲಾ ನಾಯಕರು ಮತ್ತು ಕಾರ್ಯಕರ್ತರು ಜಾಥಾ ನಡೆಸಿದ್ದಾರೆ. ಬಳಿಕ ಎಸ್‍ಪಿ ಕಚೇರಿಗೆ ತೆರಳಿ ಸೂಕ್ತ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಗೃಹ ಸಚಿವರ ಮನೆಗೆ ಮುತ್ತಿಗೆ ಯತ್ನ – ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್‍ಐಆರ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಡಿಯೋ ಚಿತ್ರೀಕರಣ ಏಳೆಂಟು ತಿಂಗಳಿಂದ ನಡೆಯುತ್ತಿದೆ, ಯುವಕರು ಭಾಗಿ: ಸುರೇಶ್ ನಾಯಕ್

    ವಿಡಿಯೋ ಚಿತ್ರೀಕರಣ ಏಳೆಂಟು ತಿಂಗಳಿಂದ ನಡೆಯುತ್ತಿದೆ, ಯುವಕರು ಭಾಗಿ: ಸುರೇಶ್ ನಾಯಕ್

    ಉಡುಪಿ: ಉಡುಪಿ (Udupi) ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿನಿಯ ವಿಡಿಯೋ ಚಿತ್ರೀಕರಣ ಏಕೈಕ ಘಟನೆ ಅಲ್ಲ, ಇದು ಏಳೆಂಟು ತಿಂಗಳಿಂದ ನಡೆಯುತ್ತಿದೆ ಎಂಬ ಸಂಶಯ ಇದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ (Suresh Nayak) ಅನುಮಾನ ವ್ಯಕ್ತಪಡಿಸಿದ್ದಾರೆ.

    ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಲೇಜಿನಲ್ಲಿ ಸಂತ್ರಸ್ತರ ಬಾಯಿ ಮುಚ್ಚಿಸುವ ಕೆಲಸ ಪೊಲೀಸರಿಂದ ಆಗಿದೆ. ಹಿಜಾಬ್ (Hijab) ವಿವಾದಕ್ಕಿಂತ ಇದು ಹೇಯ ಕೃತ್ಯ. ಈ ಬಗ್ಗೆ ಪ್ರಶ್ನಿಸುವವರನ್ನು ಧಮನಿಸಲಾಗಿದೆ. ವಿಡಿಯೋ ಎಲ್ಲೆಲ್ಲಿ ಹರಿದಾಡಿದೆ ಎಂಬುದನ್ನು ತನಿಖೆ ಮಾಡಬೇಕು. ಮುಸ್ಲಿಂ ಯುವತಿಯರ ಜೊತೆ ಮುಸ್ಲಿಂ ಯುವಕರು ಒಳಗೊಂಡಿದ್ದಾರೆ. ಇದು ಉಡುಪಿಗೆ ಕಳಂಕ. ಪೊಲೀಸ್ ಇಲಾಖೆಯ ವರ್ತನೆ ಸರಿ ಇಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಉಡುಪಿ ವಿಡಿಯೋ ಚಿತ್ರೀಕರಣ ಕೇಸ್ – ವಿದ್ಯಾರ್ಥಿನಿಯರು, ಕಾಲೇಜ್ ವಿರುದ್ಧ ಎಫ್‌ಐಆರ್ ದಾಖಲು

    ಬಿಜೆಪಿ (BJP) ಪಕ್ಷ ಶುಕ್ರವಾರ ಉಡುಪಿ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಲಿದೆ. ಎಸ್ಪಿ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತೇವೆ. ಇದು ಕೇರಳ ಸ್ಟೋರಿ ಮಾದರಿಯ ಘಟನೆ. ವಿಶೇಷ ತಂಡ, ಎಸ್‌ಐಟಿ ರಚನೆ ಮಾಡಿ ತನಿಖೆ ಮಾಡಿ. ಉಡುಪಿ ಎಸ್‌ಪಿ ನೇತೃತ್ವದಲ್ಲಿ ತನಿಖೆ ಬೇಡ ಎಂದು ಆಗ್ರಹಿಸಿದರು. ಇದನ್ನೂ ಓದಿ: ಯಾವ ಕೋಮಿನ ಬಗ್ಗೆಯೂ ಹೇಳಿಲ್ಲ, ಅಮಾಯಕರ ಬಿಡುಗಡೆಗೆ ಪ್ರಸ್ತಾಪ: ತನ್ವೀರ್ ಸೇಠ್

    ಕಾಂಗ್ರೆಸ್‌ಗೆ (Congress) ಅವರ ಮೇಲೆ ಅಷ್ಟು ಪ್ರೀತಿ ಯಾಕೆ? ಕಾಂಗ್ರೆಸ್‌ನವರು ಅವರ ಮನೆಯ ಮಕ್ಕಳನ್ನು ಶೂಟಿಂಗ್ ಮಾಡಲಿ. ಮೂರು ವಿದ್ಯಾರ್ಥಿನಿಯರನ್ನು ಸಸ್ಪೆಂಡ್ ಮಾಡಿದ್ದು ಯಾಕೆ? ಅದು ಸಾಮಾನ್ಯ ಮೊಬೈಲ್ ಅಲ್ಲ. ಒಂದು ಲಕ್ಷ ಮೌಲ್ಯದ ಮೊಬೈಲ್ ಅದು. ಅವರಿಗೆ ದುಬಾರಿ ಮೊಬೈಲ್ ಕೊಟ್ಟವರು ಯಾರು? ಎಸ್‌ಐಟಿ ಮೂಲಕ ಇದನ್ನು ತನಿಖೆ ಮಾಡಬಹುದು. ರಾಜ್ಯ ಸರ್ಕಾರ ಮಾಡದಿದ್ದರೆ ಕೇಂದ್ರದ ಗಮನ ಸೆಳೆಯುತ್ತೇವೆ. ಇದು ತಮಾಷೆಗೆ ಆದ ಘಟನೆ ಅಲ್ಲ. ಏಳೆಂಟು ತಿಂಗಳಿಂದ ಈ ರೀತಿ ಆಗುತ್ತಿದೆ. ಇದು ಗಂಭೀರ ವಿಚಾರವಾಗಿದ್ದು, ವಿದ್ಯಾರ್ಥಿನಿಯರು ಭಯ ಪಡುತ್ತಾರೆ ಎಂದು ಹರಿಹಾಯ್ದರು. ಇದನ್ನೂ ಓದಿ: ತನ್ವಿರ್ ಸೇಠ್ ಪತ್ರ ಬರೆದಿರುವುದು ನನಗೆ ಗೊತ್ತಿಲ್ಲ: ಪರಮೇಶ್ವರ್

    ಈ ಘಟನೆಯ ಹಿಂದೆ ಯಾವ ಶಕ್ತಿ ಇದೆ ಎಂದು ತನಿಖೆ ಆಗಬೇಕು. ರಾಜ್ಯ ಸರ್ಕಾರ ಪ್ರಕರಣ ಹಳ್ಳಹಿಡಿಸುವ ಪ್ರಯತ್ನ ಮಾಡುತ್ತಿದೆ. ಬೆಂಗಳೂರು (Bengaluru) ಭಯೋತ್ಪಾದಕರಿಗೆ (Terrorists) ಗೃಹ ಸಚಿವರು ಯಾವ ಸರ್ಟಿಫಿಕೇಟ್ ಕೊಟ್ಟಿದ್ದಾರೆ ಎಂದು ಗೊತ್ತು. ಗೃಹ ಸಚಿವರು ಈ ಪ್ರಕರಣದಲ್ಲಿ ಪೊಲೀಸರ ದಿಕ್ಕು ತಪ್ಪಿಸುತ್ತಿದ್ದಾರೆ. ಪರಮೇಶ್ವರ್ (G.Parameshwara) ಹೇಳುವಷ್ಟು ಸಣ್ಣ ವಿಚಾರ ಇದಲ್ಲ. ಅವರಲ್ಲಿ ಇದಕ್ಕಿಂತ ದೊಡ್ಡ ವಿಚಾರಗಳಿರಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಸರ್ಕಾರ ಮುಸ್ಲಿಂ ಓಲೈಕೆಗೆ ಸಂವಿಧಾನಬಾಹಿರವಾಗಿ ವರ್ತಿಸಿದ್ರೆ ಪರಿಣಾಮ ನೆಟ್ಟಗಿರಲ್ಲ: ಸುನೀಲ್ ಕುಮಾರ್

    ಬಳಿಕ ಮಾತನಾಡಿದ ಶಾಸಕ ಯಶ್‌ಪಾಲ್ ಸುವರ್ಣ (Yashpal Suvarna), ಘಟನೆ ನಡೆದು ಒಂದು ವಾರದ ಬಳಿಕ ಪ್ರಕರಣ ಸಂಬಂಧ ಎಫ್‌ಐಆರ್ (FIR) ದಾಖಲಾಗಿದೆ. ವಿದ್ಯಾರ್ಥಿಗಳ ಎಲ್ಲಾ ಮೊಬೈಲ್ ವಶಕ್ಕೆ ಪಡೆದುಕೊಳ್ಳಬೇಕು. ಡಿಲೀಟ್ ಮಾಡಿದ ಫೋಟೋ ವಿಡಿಯೋಗಳನ್ನು ರಿಕವರ್ ಮಾಡಬೇಕು. ಹೈದರಾಬಾದ್‌ನಲ್ಲಿ ಇದಕ್ಕೆ ಸಂಬಂಧಪಟ್ಟ ಲ್ಯಾಬ್ ಇದೆ. ಮಹಿಳಾ ಆಯೋಗದ ಸೂಚನೆ ಮೇರೆಗೆ ಸೆಕ್ಷನ್ ಹಾಕಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ದೆಹಲಿ ಮೆಟ್ರೋದಲ್ಲಿ 2 ಮದ್ಯದ ಬಾಟಲಿ ಕೊಂಡ್ಯೊಯಲು ಅಬಕಾರಿ ಇಲಾಖೆಯ ಆಕ್ಷೇಪ

    ರಾಜ್ಯ ಮತ್ತು ಕೇಂದ್ರ ಜಂಟಿಯಾಗಿ ತನಿಖೆ ಮಾಡಬೇಕು. ಕಾಲೇಜಿನ 10 ದಿನದ ಸಿಸಿಟಿವಿ ಫೂಟೇಜ್ ಪಡೆದುಕೊಳ್ಳಬೇಕು. ಸೈಬರ್ ಕ್ರೈಂ ಬಗ್ಗೆ ಕಾಲೇಜಿನಲ್ಲಿ ಪೊಲೀಸರು ಮಾಹಿತಿ ನೀಡಿದ್ದು ಯಾಕೆ? ಬಹಳ ಮಾಹಿತಿ ಲಭ್ಯವಾಗುತ್ತಿದೆ. ಮನೆಯಿಂದಲೂ ಮಾಹಿತಿ ಪಡೆಯುತ್ತಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]