Tag: yashomathi

  • ಯಶೋಮತಿಯಿಂದ ಸಲಹೆ ಪಡೆಯುವಷ್ಟು ದಡ್ಡ ನಾನಲ್ಲ- ಸುನಿಲ್ ಹೆಗ್ಗರವಳ್ಳಿ

    ಯಶೋಮತಿಯಿಂದ ಸಲಹೆ ಪಡೆಯುವಷ್ಟು ದಡ್ಡ ನಾನಲ್ಲ- ಸುನಿಲ್ ಹೆಗ್ಗರವಳ್ಳಿ

    ಬೆಂಗಳೂರು: ಮಾಧ್ಯಮದ ಮೂಲಕ ಪತ್ರಕರ್ತ ರವಿ ಬೆಳಗೆಯವರ ಪತ್ನಿ ಯಶೋಮತಿ ಅವರ ಫೇಸ್‍ಬುಕ್ ಸ್ಟೇಟಸ್ ನ್ನು ಗಮನಿಸಿದ್ದೇನೆ. ಸುನಿಲ್ ವಿರುದ್ಧದ ಹೇಳಿಕೆ ಅಂತ ನನಗನ್ನಿಸಿಲ್ಲ. ಆದ್ರೆ ಯಶೋಮತಿಯವರಿಂದ ಸಲಹೆ ಪಡೆಯುವಷ್ಟು ದಡ್ಡ ನಾನಲ್ಲ ಅಂತ ಸುನಿಲ್ ಹೆಗ್ಗರವಳ್ಳಿ ಪ್ರತಿಕ್ರಿಯಿಸಿದ್ದಾರೆ.

    ಕೊಲೆ ಸುಪಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಪ್ತಚರ ಇಲಾಖೆ ಕರೆದಿರುವ ಹಿನ್ನೆಲೆಯಲ್ಲಿ ಇಂದು ಸುನಿಲ್ ಹೆಗ್ಗರವಳ್ಳಿ ಕಮಿಷನರ್ ಕಚೇರಿಗೆ ಬಂದಿದ್ದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಶೋಮತಿಯವರ ಸ್ಟೇಟಸ್ ನ ಮೊದಲನೇ ಲೈನ್ ನಲ್ಲಿ ನನ್ನ ಮಗ ಎರಡು ದಿನದಿಂದ ಶಾಲೆಗೆ ಹೋಗಲಿಲ್ಲ. ಊಟ ಮಾಡಲೆಂದು ಅನ್ನ ಹಾಕ್ಕೊಂಡ್ರೆ ರವಿ ಕಣ್ಣೆದುರಿಗೆ ಬರುತ್ತಾರೆ ಅಂತೆಲ್ಲಾ ಬರೆದಿದ್ದಾರೆ. ಹಾಗೆಯೇ ನನಗೂ ಕುಟುಂಬ ಇದೆ. ನನಗೂ 80 ವರ್ಷದ ತಂದೆ, 75 ವರ್ಷದ ತಾಯಿಯಿದ್ದಾರೆ. 8 ವರ್ಷದ ಮಗ ಇದ್ದಾನೆ. ಒಂದು ವೇಳೆ ನನಗೇನಾದ್ರೂ ಹೆಚ್ಚು ಕಡಿಮೆ ಆಗಿದ್ರೆ ಅಥವಾ ನನ್ನ ಕೊಲೆಯೇ ಆಗಿದ್ರೆ ಇಂದು ನನ್ನ ತಂದೆ-ತಾಯಿ, ಹೆಂಡ್ತಿ-ಮಗನ ಸ್ಥಿತಿ ಹೇಗಿರುತ್ತಿತ್ತು ಎಂದು ಪ್ರಶ್ನಿಸಿದ ಅವರು, ಇಂದು ಅದೃಷ್ಟವಶಾತ್ ನಾನು ಬದುಕಿದ್ದೀನಿ. ಹೀಗಾಗಿ ಅವರು ಅತ್ಯಂತ ಸುಲಭವಾಗಿ ಈ ಮಾತುಗಳನ್ನು ಹೇಳಬಹುದು ಅಂತ ಹೇಳಿದ್ರು. ಇದನ್ನೂ ಓದಿ: ಸುನಿಲ್ ಹೆಗ್ಗರವಳ್ಳಿ ವಿರುದ್ಧ ಮೊದಲ ಬಾರಿಗೆ ಸಿಡಿದ ಯಶೋಮತಿ

    ಬಳಿಕ ಹೇಡಿತರ ರಕ್ಷಣೆ ಕೇಳಿದ್ದಾನೆ ಅಂತ ಹೇಳಿದ್ದಾರೆ. ಹೇಡಿ ಅನ್ನೋದಕ್ಕಿಂತ ನನಗೂ ಒಂದು ಜವಾಬ್ದಾರಿ ಇದೆ. ಯಾರು ಹೇಡಿ ಅನ್ನೋದು ಈಗಾಗ್ಲೇ ಎಲ್ಲರಿಗೂ ತಿಳಿದಿದೆ. ನನಗೆ ನನ್ನ ತಂದೆ-ತಾಯಿ, ಪತ್ನಿ ಮಗ ಇವರೆಲ್ಲರ ಜವಾಬ್ದಾರಿ ಇದ್ದಾಗ, ನಾನು ರವಿ ಬೆಳಗೆರೆ ಎದುರಿಗೆ ಎದೆ ಬಿಚ್ಚಿ ರಿವಾಲ್ವರ್ ಕೊಟ್ಟು ಗುಂಡು ಹೊಡಿರಿ ಅಂತ ಕೇಳಕ್ಕಾಗಲ್ಲ. ಹೀಗಾಗಿ ಒಂದು ಪ್ರಕರಣ ನಡೆದಾಗ ಯಾವ ರೀತಿ ನಡೆದುಕೊಳ್ಳಬೇಕು ಎಂಬುದು ನನಗೆ ಗೊತ್ತಿದೆ. ಅದೇ ರೀತಿ ನಾನು ನಡೆದುಕೊಳ್ಳುತ್ತಿದ್ದೇನೆ. ಒಟ್ಟಿನಲ್ಲಿ ಯಶೋಮತಿಯವರಿಂದ ಸಲಹೆ ಪಡೆಯುವಷ್ಟು ದಡ್ಡ ನಾನಲ್ಲ. ಹಾಗೆಯೇ ಅವರ ಸಲಹೆ ನನಗೆ ಬೇಕಾಗಿಲ್ಲ. ಅವರ ವಿಷಯ ಏನ್ ಬೇಕಾದ್ರೂ ಮಾತನಾಡಿಕೊಳ್ಳಲಿ. ಆದ್ರೆ ನನ್ನ ಹಾಗೂ ನನ್ನ ಕುಟುಂಬದ ವಿಷಯಕ್ಕೆ ಅವರು ಬರುವುದು ಬೇಡ ಅಂತ ಸುನಿಲ್ ಹೆಗ್ಗರವಳ್ಳಿ ಎಚ್ಚರಿಕೆ ನೀಡಿದ್ದಾರೆ.

    ಭದ್ರತೆಗೆ ಕೋರಿಕೆ: ನನಗೆ ಭದ್ರತೆ ಬೇಕು. ಹೀಗಾಗಿ ಈಗಾಗಲೆ ಸಿಎಂ, ಗೃಹಸಚಿವರನ್ನು ಭೇಟಿಯಾಗಿದ್ದೇನೆ. ಸಿಎಂ ಕೂಡ ಭದ್ರತೆ ಕೊಡಿಸುವುದಾಗಿ ಹೇಳಿದ್ರು. ಇಂಟಲಿಜೆನ್ಸ್ ಕರೆ ಮಾಡಿ ಸ್ಟೇಟ್ ಸ್ ಚೆಕ್ ಮಾಡಿದ್ರು. ನನಗೆ ಗನ್ ಮ್ಯಾನ್ ಬೇಕು ಅಂತ ಹೇಳಿದ್ದೀನಿ ವಿಚಾರ ಮಾಡಿ ನಮಗೆ ವ್ಯವಸ್ಥೆ ಮಾಡ್ತಾರೆ. ರವಿ ಬೆಳಗೆರೆ ಪ್ರಭಾವಿ ವ್ಯಕ್ತಿ ಹೀಗಾಗಿ ಭದ್ರತೆಗೆ ಕೋರಿದ್ದೆನೆ. ಆದ್ರೆ ಗನ್ ಮ್ಯಾನ್ ಕೊಡ್ತಾರೋ ಏನೋ ಸರ್ಕಾರಕ್ಕೆ ಬಿಟ್ಟ ವಿಚಾರ ಅಂತ ಸುನಿಲ್ ಹೇಳಿದ್ದಾರೆ.

  • ರವಿ ಬೆಳಗೆರೆ ಸುಪಾರಿ ಪ್ರಕರಣ: ಸಿಸಿಬಿ ಅಧಿಕಾರಿಗಳಿಗೆ ಪತ್ನಿ ಯಶೋಮತಿ ಹೇಳಿದ್ದಿಷ್ಟು

    ರವಿ ಬೆಳಗೆರೆ ಸುಪಾರಿ ಪ್ರಕರಣ: ಸಿಸಿಬಿ ಅಧಿಕಾರಿಗಳಿಗೆ ಪತ್ನಿ ಯಶೋಮತಿ ಹೇಳಿದ್ದಿಷ್ಟು

    ಬೆಂಗಳೂರು: ತನ್ನ ಸಹೋದ್ಯೋಗಿ ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆಯವರನ್ನು ಪೊಲೀಸರು ಬಂಧಿಸಿದ ಬೆನ್ನಲ್ಲೇ ಅವರ ಎರಡನೇ ಪತ್ನಿ ಯಶೋಮತಿ ನಾಪತ್ತೆಯಾಗಿದ್ದರು.

    ಸದ್ಯ ರವಿ ಬೆಳಗೆರೆ ವಿಚಾರಣೆ ನಡೆಯುತ್ತಿದ್ದು, ಶನಿವಾರ ರವಿ ಜೊತೆ ಪೊಲೀಸರು ರಾಜರಾಜೇಶ್ವರಿ ನಗರದಲ್ಲಿರೋ ಯಶೋಮತಿಯವರ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಯಶೋಮತಿ ಅಲ್ಲಿರಲಿಲ್ಲ. ಬಳಿಕ ನಿನ್ನೆ ಸಂಜೆಯೇ ಸಿಸಿಬಿ ಅಧಿಕಾರಿಗಳ ಜೊತೆ ಮಾತನಾಡಿದ ಯಶೋಮತಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನೇನು ಹೇಳೋದಿಲ್ಲ. ವೈಯಕ್ತಿಕವಾಗಿ ನನ್ನ ಮಾನ ಹರಣ ಆಗ್ತಿದೆ. ಸುನಿಲ್ ನನಗೆ ರವಿ ಕಡೆಯಿಂದ ಪರಿಚಯವಾಗಿದ್ದರು ಅಂತ ಹೇಳಿದ್ದಾರೆ.

    ಈ ಪ್ರಕರಣದಲ್ಲಿ ಅವರಿಬ್ಬರ ನಡುವೆ ಗಲಾಟೆಯಾಗಿದೆ. ಇದ್ರಲ್ಲಿ ನಾನೇನು ಹೆಚ್ಚು ಹೇಳೋ ವಿಚಾರ ಇಲ್ಲ ಅಂತ ಯಶೋಮತಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

    ಶುಕ್ರವಾರ ರಾತ್ರಿಯಿಂದ 2ನೇ ಪತ್ನಿ ಯಶೋಮತಿ ನಾಪತ್ತೆಯಾಗಿದ್ದರು. ಅಲ್ಲದೆ ತನ್ನ ಫೇಸ್‍ಬುಕ್ ಅಕೌಂಟ್ ಕೂಡ ಅವರು ಬ್ಲಾಕ್ ಮಾಡಿದ್ದಾರೆ. ಅಲ್ಲದೆ ಯಶೋಮತಿ ಯಾವುದೇ ಫೋನ್ ಕರೆಗಳನ್ನ ಸ್ವೀಕರಿಸುತ್ತಿಲ್ಲ ಎಂಬುದಾಗಿ ತಿಳಿದುಬಂದಿತ್ತು.

    ಸುನಿಲ್ ಹೆಗ್ಗರವಳ್ಳಿ ಹಾಗೂ ಯಶೋಮತಿ ನಡುವೆ ಅನೈತಿಕ ಸಂಬಂಧವಿತ್ತು. ಈ ಬಗ್ಗೆ ಮನೆ ಕೆಲಸದಾಕೆ ರವಿ ಬೆಳಗೆರೆಗೆ ಮಾಹಿತಿ ನೀಡಿದ್ದರು. ಈ ಮಧ್ಯೆ ಒಂದು ಬಾರಿ ರವಿ ಬೆಳಗೆರೆ ಮಧ್ಯರಾತ್ರಿ ಮನೆಗೆ ಬಂದಾಗ ಸುನಿಲ್ ಓಡಿಹೋಗಿದ್ದರು ಎಂಬ ಮಾತುಗಳೂ ಕೂಡ ಕೇಳಿಬಂದಿದೆ. ಇದೇ ಹಿನ್ನೆಲೆಯಲ್ಲಿ ರವಿ ಬೆಳಗೆರೆ ಸುನೀಲ್ ಹತ್ಯೆಗೆ ಸುಪಾರಿ ಕೊಟ್ಟಿದ್ದರು ಎಂಬ ಆರೋಪಗಳು ಕೇಳಿಬಂದಿದ್ದವು.

    https://www.youtube.com/watch?v=OA0RbYjR09k

    https://www.youtube.com/watch?v=y8cIVgw5Yno

    https://www.youtube.com/watch?v=hEoR4Fec7Ec

  • ಬೆಳಗೆರೆ 2ನೇ ಪತ್ನಿ ಯಶೋಮತಿ ನಾಪತ್ತೆ – ಫೇಸ್‍ಬುಕ್ ಅಕೌಂಟ್ ಕ್ಲೋಸ್

    ಬೆಳಗೆರೆ 2ನೇ ಪತ್ನಿ ಯಶೋಮತಿ ನಾಪತ್ತೆ – ಫೇಸ್‍ಬುಕ್ ಅಕೌಂಟ್ ಕ್ಲೋಸ್

    ಬೆಂಗಳೂರು: ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ನೀಡಿದ ಆರೋಪದ ಮೇಲೆ ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆ ಬಂಧನವಾದ ಬೆನ್ನಲ್ಲೇ ಅವರ 2ನೇ ಪತ್ನಿ ನಾಪತ್ತೆಯಾಗಿದ್ದಾರೆ.

     

    ಬೆಂಗಳೂರು ಸಿಸಿಬಿ ಪೊಲೀಸರಿಂದ ಎರಡನೇ ಪತ್ನಿ ಯಶೋಮತಿ ವಿಚಾರಣೆ ನಡೆಯುವ ಸಾಧ್ಯತೆ ಇದೆ. ಯಾವುದೇ ಕ್ಷಣದಲ್ಲಿ ಸಿಸಿಬಿ ವಿಚಾರಣೆ ಹಾಜರಾಗುವಂತೆ ಹೇಳೋ ಸಾಧ್ಯತೆ ಇದ್ದು, ಹೆಗ್ಗರವಳ್ಳಿ ಜೊತೆ ನಂಟಿನ ಬಗ್ಗೆ ಮಾಹಿತಿ ಸಂಗ್ರಹಿಸುವ ನಿರೀಕ್ಷೆ ಇದೆ. ರವಿ ಬೆಳಗೆರೆ ಬೆದರಿಕೆ ಬಗ್ಗೆಯೂ ಪೊಲೀಸರು ವಿಚಾರಣೆ ನಡೆಸಲಿದ್ದು, ಮ್ಯಾಜಿಸ್ಟ್ರೇಟ್ ಮುಂದೆ ಐಪಿಸಿ 164 ಅನ್ವಯ ಯಶೋಮತಿಯ ಸ್ವಇಚ್ಛಾ ಹೇಳಿಕೆ ಪಡೆಯುವ ಸಾಧ್ಯತೆ ಇದೆ ಎಂದು ಪಬ್ಲಿಕ್ ಟಿವಿಗೆ ಮೂಲಗಳಿಂದ ಮಾಹಿತಿ ಸಿಕ್ಕಿದೆ.

    ಆದ್ರೆ ಶುಕ್ರವಾರ ರಾತ್ರಿಯಿಂದ 2ನೇ ಪತ್ನಿ ಯಶೋಮತಿ ನಾಪತ್ತೆಯಾಗಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರೋ ಮನೆಯಲ್ಲಿ ಸದ್ಯ ಯಶೋಮತಿ ಇಲ್ಲ. ತನ್ನ ಫೇಸ್‍ಬುಕ್ ಅಕೌಂಟ್ ಕೂಡ ಕ್ಲೋಸ್ ಮಾಡಿದ್ದಾರೆ. ಅಲ್ಲದೆ ಯಶೋಮತಿ ಯಾವುದೇ ಫೋನ್ ಕರೆಗಳನ್ನ ಸ್ವೀಕರಿಸುತ್ತಿಲ್ಲ.

    ಸುನೀಲ್ ಹೆಗ್ಗರವಳ್ಳಿ ಹಾಗೂ ಯಶೋಮತಿ ನಡುವೆ ಅನೈತಿಕ ಸಂಬಂಧವಿತ್ತು. ಈ ಬಗ್ಗೆ ಮನೆ ಕೆಲಸದಾಕೆ ರವಿ ಬೆಳಗೆರೆಗೆ ಮಾಹಿತಿ ನೀಡಿದ್ದರು. ಈ ಮಧ್ಯೆ ಒಂದು ಬಾರಿ ರವಿ ಬೆಳಗೆರೆ ಮಧ್ಯರಾತ್ರಿ ಮನೆಗೆ ಬಂದಾಗ ಸುನೀಲ್ ಓಡಿಹೋಗಿದ್ದರು ಎಂಬ ಮಾತುಗಳೂ ಕೂಡ ಕೇಳಿಬಂದಿದೆ. ಇದೇ ಹಿನ್ನೆಲೆಯಲ್ಲಿ ರವಿ ಬೆಳಗೆರೆ ಸುನೀಲ್ ಹತ್ಯೆಗೆ ಸುಪಾರಿ ಕೊಟ್ಟಿದ್ದರು ಎಂದು ತಿಳಿದುಬಂದಿದೆ.

    https://www.youtube.com/watch?v=lgEoaxQ1l44

    https://www.youtube.com/watch?v=86k-IW3-boE

    https://www.youtube.com/watch?v=tvAkOpM6ZZo

    https://www.youtube.com/watch?v=p0Orve2DpiM

  • ಗಂಡ ರಣಭೂಮಿಯಲ್ಲಿ ಇರುವಾಗ ಶತ್ರುವಿನ ತೊಡೆ ಮೇಲೆ ಕುಳಿತರೆ ಅದು ಪಾತಿವ್ರತ್ಯೆಯೇ: ಬೆಳಗೆರೆ ಪೋಸ್ಟ್ ಸುತ್ತ ಅನುಮಾನದ ಹುತ್ತ

    ಗಂಡ ರಣಭೂಮಿಯಲ್ಲಿ ಇರುವಾಗ ಶತ್ರುವಿನ ತೊಡೆ ಮೇಲೆ ಕುಳಿತರೆ ಅದು ಪಾತಿವ್ರತ್ಯೆಯೇ: ಬೆಳಗೆರೆ ಪೋಸ್ಟ್ ಸುತ್ತ ಅನುಮಾನದ ಹುತ್ತ

    ಬೆಂಗಳೂರು: ಸಹೋದ್ಯೋಗಿಯ ಕೊಲೆಗೆ ಸುಪಾರಿ ನೀಡಿದ ಆರೋಪದ ಮೇಲೆ ಬಂಧಿತರಾಗಿರುವ ಹಿರಿಯ ಪತ್ರಕರ್ತ ರವಿ ಬೆಳಗೆರೆ, ಮೂರು ತಿಂಗಳ ಹಿಂದೆ ಫೇಸ್‍ಬುಕ್‍ನಲ್ಲಿ ಹಾಕಿದ್ದ ಸ್ಟೇಟಸ್ ಇದೀಗ ಕುತೂಹಲಕ್ಕೆ ಕಾರಣವಾಗಿದೆ.

    ಹೌದು. ಪೊಲೀಸ್ ಮೂಲಗಳು ಪಬ್ಲಿಕ್ ಟಿವಿಗೆ ನೀಡಿದ ಮಾಹಿತಿ ಪ್ರಕಾರ 2017ರ ಆಗಸ್ಟ್ 26ಕ್ಕೆ ಸುನೀಲ್ ಹೆಗ್ಗರವಳ್ಳಿ ಹತ್ಯೆ ನಡೆಯಬೇಕಿತ್ತು. ಆದರೆ ಈ ಹತ್ಯೆಯನ್ನು ವಿಫಲಗೊಳಿಸಿದ್ದು ರವಿ ಬೆಳಗೆರೆ ಅವರ ಎರಡನೇ ಪತ್ನಿ ಯಶೋಮತಿ ಎನ್ನುವ ಮಾಹಿತಿ ಸಿಕ್ಕಿದೆ.

    ರವಿ ಬೆಳಗೆರೆ ಒಂದು ಎಫ್‍ಬಿ ಪೋಸ್ಟ್ ಮಾಡಿದ್ದರು. ಇದರಲ್ಲಿ “ಹೆಜ್ಜೆ ಇಡುವಾಗ ತುಂಬಾ ಎಚ್ಚರ ಇರಬೇಕು. ಗಂಡ ರಣಭೂಮಿಯಲ್ಲಿ ಇರುವಾಗ ಶತ್ರುವಿನ ತೊಡೆ ಮೇಲೆ ಕುಳಿತರೆ ಅದು ಪಾತಿವ್ರತ್ಯೆಯೇ” ಎಂದು ಬರೆದು ತಮ್ಮ ಎರಡನೇ ಪತ್ನಿ ಯಶೋಮತಿಯೊಂದಿಗೆ ಇರುವ ಫೋಟೋವನ್ನು ಹಾಕಿದ್ದರು. ಹತ್ಯೆ ಯತ್ನ ವಿಫಲವಾದ ಹಿನ್ನೆಲೆಯಲ್ಲಿ ಬೆಳಗರೆ ಈ ಪೋಸ್ಟ್ ಪ್ರಕಟ ಮಾಡಿದ್ದಾರಾ ಎನ್ನುವ ಅನುಮನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

    ರವಿ ಬೆಳಗೆರೆಯ ಎರಡನೇ ಪತ್ನಿ ಯಶೋಮತಿ ಹಾಗೂ ಸುನೀಲ್ ಹೆಗ್ಗರವಳ್ಳಿ ನಡುವೆ ಅನೈತಿಕ ಸಂಬಂಧಿವಿತ್ತು. ಈ ಬಗ್ಗೆ ಕೆಲಸದಾಕೆ ಮಾಹಿತಿ ನೀಡುತ್ತಿದ್ದರು. ಒಂದು ಬಾರಿ ಮಧ್ಯರಾತ್ರಿ ರವಿ ಬೆಳಗೆರೆ ಮನೆಗೆ ಬಂದಾಗ ಸುನೀಲ್ ಓಡಿಹೋಗಿದ್ದರು ಎಂಬ ಮಾತುಗಳೂ ಕೂಡ ಕೇಳಿಬಂದಿವೆ. ಹೀಗಾಗಿ ರವಿ ಬೆಳಗೆರೆ ಅವರ ಈ ಸ್ಟೇಟಸ್ ಹಲವು ಅನುಮಾನಗಳನ್ನ ಮೂಡಿಸಿದೆ.

    ಆಗಸ್ಟ್ ನಲ್ಲಿ ಹಾಕಿದ್ದ ಮತ್ತೊಂದು ಸ್ಟೇಟಸ್ ನಲ್ಲಿ ರವಿ ಬೆಳಗೆರೆ ತನಗೆ ಮೋಸವಾಗಿದೆ ಎಂದು ಹೇಳಿಕೊಂಡಿದ್ದರು. ಆ ಪೋಸ್ಟ್ ನಲ್ಲಿ ಹೀಗೆ ಹೇಳಿದ್ದರು: 

    ” ನಾನು ಕಿರಿ ಕಿರಿ ಮನುಷ್ಯ ಅಲ್ಲ. ಸಿಡಿಮಿಡಿ ಇಲ್ಲ. ಸಿಟ್ಟು ಮೊದಲಿತ್ತು. ಈಗ ಮರೆತೇ ಹೋಗಿದೆ. ಈಗಲೂ ಒಮ್ಮೊಮ್ಮೆ ಗುರ್ರ್ ಅಂತೀನಿ. ದ್ವೇಷ ನನ್ನ ಜಾಯಮಾನವಲ್ಲ. ಅಸಹ್ಯವಾದರೆ ದೂರ ಸರಿದುಬಿಡ್ತೇನೆ. ನನ್ನದು ಇಂಟೆನ್ಸ್ ಆದ ಪ್ರೀತಿ. ತೀವ್ರವಾಗಿ ಪ್ರೀತಿಸುತ್ತೇನೆ. ಕೆಲಬಾರಿ ಅವರಿಗೆ ಕಿರಿಕಿರಿ ಆಗುವಷ್ಟು. ಮಾತು, ಹರಟೆ, ನಗು, ಕೊಂಚ ಪೋಲಿತನ, ಇಂಟೆನ್ಸ್ ಆದ ಕಾಮ, ಅತಿಯಾದ ಭಾವುಕತೆ, ಅಮ್ಮನ ನಾಸ್ಟಾಲ್ಜಿಯಾ, ಅವಳನ್ನು ಎಲ್ಲರಲ್ಲೂ ಹುಡುಕೋದು…..ಇವೆಲ್ಲ ನನ್ನ ಪ್ಲಸ್ ಮತ್ತು ಮೈನಸ್ ಪಾಯಿಂಟ್ಸ್. ಆದರೆ ಮೋಸ ಸಹಿಸೋದು ತುಂಬಾ ಕಷ್ಟ. ಮೋಸ ನನಗೆ ಆಗಿದ್ದರೂ ನರಳೋದು ನಾನೇ. ತಪ್ಪು ಮಾಡಿದೋರನ್ನ ಕ್ಷಮಿಸಬಹುದು. ಮೋಸ ಮಾಡಿದೋರನ್ನ ಕ್ಷಮಿಸೋಕಾಗಲ್ಲ. ಯಾಕೆಂದರೆ, ಚೆನ್ನಾಗಿ ಯೋಚನೆ ಮಾಡಿ, ಪ್ಲಾನ್ ಮಾಡಿ ಉದ್ದೇಶವಿಟ್ಟುಕೊಂಡೇ ಅವರು ಮೋಸ ಮಾಡಿರುತ್ತಾರೆ. ಗೊತ್ತಿಲ್ಲದೆ ಮೋಸ ಮಾಡಿಬಿಟ್ಟೆ ಅನ್ನೋಕೆ ಆಗಲ್ಲ.

    ಗೊತ್ತಿಲ್ಲದೆ ತಪ್ಪು ಮಾಡಿದೆ ಅನ್ನಬಹುದು. ನಾನು ತುಂಬಾ ಹುಷಾರು, ನಂಗೆ ಯಾರೂ ಮೋಸ ಮಾಡೋಕಾಗಲ್ಲ, ನಾನು ಮೈ ಮರೆಯಲ್ಲ ಅಂತೆಲ್ಲ ಹೇಳಿಕೊಳ್ತಿದ್ದೆ. but, ಒಂದು ಮೋಸ ಹೇಗೆ ಆಯಿತು ಅಂದ್ರೆ, ಅವತ್ತೇ ನಾನು ಸತ್ತು ಹೋಗಿಬಿಟ್ಟೆ. ನಂಗೆ ಗೊತ್ತು, ನಾನು ಈ ಜನ್ಮದಲ್ಲಿ ಅದರಿಂದ ಚೇತರಿಸಿಕೊಳ್ಳಲಾರೆ. ಒಬ್ಬ ಗೆಳೆಯ ಬಂದು ‘ ಆದದ್ದು ಆಯಿತು. ಕ್ಷಮಿಸಿ ಮತ್ತೆ ರಾಜಿ ಆಗಿಬಿಡು’ ಅಂದ. ” ನೋಡೋ, ನನ್ನ ಆಫೀಸ್ ನ ಒಂದು ರೌಂಡ್ ಹಾಕಿ ಬಾ. ಎಲ್ಲೊ ಒಂದು ಕಡೆ ನಿಂಗೆ ಕೊಳಕು ಕಾಣಬಹುದು. ಆದರೆ ಬಾತ್ ರೂಮ್ ನಲ್ಲಿ ಒಂದು ಹನಿ ನೀರೂ ಚೆಲ್ಲಿರಲ್ಲ. ಹೇಟ್ ಇಟ್. ಅದು ತುಂಬಾ ಕ್ಲೀನ್ ಆದ ಜಾಗ. ಹಾಗಂತ ವಿಸರ್ಜನೆ ಮಾಡೋ ಜಾಗದ ಪಕ್ಕ ಕೂತು ಊಟ ಮಾಡೋಕೆ ಆಗಲ್ಲ” ಅಂದೆ . ಅವನು ಸುಮ್ಮನಾದ.

    ನೀವು ರಾಜಕುಮಾರಿ ಡಯಾನಾ ಫೋಟೋ ನೋಡಿ. ಇಷ್ಟ ಆಗ್ತಾಳೆ. ಆಕೆ ಸುಂದರಿ. ಆದರೆ ಎಂಥ ವಂಚಕಿ! ರಾಜಕುಮಾರ ಚಾಲ್ರ್ಸ್ ಅದನ್ನು ಹೇಳಿಕೊಂಡಿಲ್ಲ. ಅನುಭವಿಸಿದ ನೋವು ಸುಳ್ಳು ಅಂತೀರಾ? ನಂಗೆ ತಾಯಿ ಥೆರೇಸ ತುಂಬಾ ಇಷ್ಟ. ನೋಡಲು ಪರಮ ಕುರೂಪಿ. ಆದರೆ ವಂಚಕಿಯಲ್ಲ. ಅಲ್ಲವಾ. ಕೆಲವು ವಿಷಯಗಳಲ್ಲಿ ನಾನು ಬೆರಗಾಗುವಷ್ಟು ಪ್ರಾಮಾಣಿಕ. ಉದಾಹರಣೆಗೆ ದುಡ್ಡು. ಯಾರಿಗೂ ನಾನು ಮೋಸ ಮಾಡಿಲ್ಲ. ಕಂಡವರ ಹಣ ಮುಟ್ಟಿಲ್ಲ. ಉಳಿದಂತೆ ನಾನು ಬೇಲಿ ಹಾರಿದ್ದುಂಟು. ನನ್ನನ್ನ ಯಾರೂ ಒಂದು ಚೌಕಟ್ಟು ಹಾಕಿ ಇಡಲಾರರು. ತಪ್ಪು ಮಾಡಿದ್ದೇನೆ. ಅದು ಗೊತ್ತಾಗುವಂತೆ, ಚೆನ್ನಾಗಿ ತಿಳಿಸಿ ಮಾಡಿದ್ದೇನೆ. ಕ್ಷಮೆ ಕೇಳಿದ್ದೇನೆ. ಆದರೆ ಮೋಸ ಮಾಡಿಲ್ಲ. ಅನುಮಾನ ಇದೆಯಾ?”

     ರವಿ ಬೆಳಗೆರೆ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ 307(ಕೊಲೆ ಸಂಚು), 120 ಬಿ ಪಿತೂರಿ ಮಾಡಿದ ಆರೋಪದಡಿ ಪ್ರಕರಣ ದಾಖಲಾಗಿದೆ.