Tag: yashoda film

  • ಮತ್ತೆ ಮದುವೆಗೆ ರೆಡಿಯಾದ್ರಾ ನಟಿ ಸಮಂತಾ- ಹುಡುಗ ಯಾರು?

    ಮತ್ತೆ ಮದುವೆಗೆ ರೆಡಿಯಾದ್ರಾ ನಟಿ ಸಮಂತಾ- ಹುಡುಗ ಯಾರು?

    ಸೌತ್ ಬ್ಯೂಟಿ ಸಮಂತಾ (Samantha) ಅವರು ಸದ್ಯ ಬಾಲಿವುಡ್ ಸಿನಿಮಾಗಳಲ್ಲಿ (Bollywood Films) ಬ್ಯುಸಿಯಾಗಿದ್ದಾರೆ. ಡಿವೋರ್ಸ್ (Divorce) ಬಳಿಕ ಭಾರೀ ಸುದ್ದಿಯಲ್ಲಿರುವ ನಟಿ ಸಮಂತಾ ಮತ್ತೆ ಮದುವೆಯಾಗುತ್ತಿದ್ದಾರೆ (Wedding) ಎಂಬ ಹರಿದಾಡುತ್ತಿದೆ. ಎರಡನೇ ಮದುವೆಗೆ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಸಮಂತಾ- ನಾಗಚೈತನ್ಯ (Nagachaitanya) ಜೋಡಿ ಟಾಲಿವುಡ್ ಅಂಗಳದ ಬೆಸ್ಟ್ ಕಪಲ್ ಆಗಿದ್ದರು. ಅದ್ಯಾರ ದೃಷ್ಟಿ ಬಿತ್ತೋ ಏನೋ ಹಲವು ವರ್ಷಗಳ ಪ್ರೀತಿಯ ದಾಂಪತ್ಯಕ್ಕೆ ಅಂತ್ಯ ಹಾಡಿ ದೂರ ದೂರ ಆಗಿದ್ದಾರೆ. ಡಿವೋರ್ಸ್ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಇಬ್ಬರೂ ಬ್ಯುಸಿಯಾಗಿದ್ದಾರೆ. ಒಂದ್ ಕಡೆ ನಾಗಚೈತನ್ಯ ಹೆಸರು ಶೋಭಿತಾ ಜೊತೆ ತಳಕು ಹಾಕಿಕೊಂಡರೆ, ಇನ್ನೊಂದ್ ಕಡೆ ಸಮಂತಾ ಮದುವೆ ಸುದ್ದಿ ಸೌಂಡ್ ಮಾಡುತ್ತಿದೆ. ಇದನ್ನೂ ಓದಿ:ಪ್ರೀತಿಯ ಬಂಟಿ ಕಳೆದುಕೊಂಡ ‘ಅಗ್ನಿಸಾಕ್ಷಿ’ ನಟಿ ವೈಷ್ಣವಿ

    ಹೀಗೆ ಸಮಂತಾ ಮದುವೆ ಸುದ್ದಿ ಚರ್ಚೆ ಆಗಲು ಕಾರಣ ಇತ್ತೀಚಿಗೆ ನಟಿ ಹಂಚಿಕೊಂಡಿದ್ದ ಹುಡುಗನ ಪೋಸ್ಟ್. ಸಮಂತಾ ತನ್ನ ಇನ್ಸ್ಟಾಗ್ರಾಂ ಸ್ಟೋರಿಗಳಲ್ಲಿ ಒಬ್ಬ ವ್ಯಕ್ತಿಯ ವಿವರಗಳನ್ನು ಹಾಕಿದ್ದು, ನಾನು ಸೂಕ್ತವಾದ ಹೊಂದಾಣಿಕೆಯನ್ನು ಹುಡುಕುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಆ ವ್ಯಕ್ತಿಯೇ ಬಾಲಿವುಡ್ ಸೆಲೆಬ್ರಿಟಿ ಡಾ.ಜ್ಯುವೆಲ್ ಗಮಾಡಿಯಾ. ತನಗೆ ಸರಿಯಾದ ಜೋಡಿ ಬೇಕು ಎಂದಿದ್ದಾರೆ.

    ಬಾಲಿವುಡ್ ನಾಯಕಿಯರಾದ ಅನುಷ್ಕಾ ಶರ್ಮಾ, ಕತ್ರಿನಾ ಕೈಫ್, ಅಜಯ್ ದೇವಗನ್ ಸೇರಿದಂತೆ ಅನೇಕ ಬಿಟೌನ್ ಸೆಲೆಬ್ರಿಟಿಗಳಿಗೆ ಡಾ. ಜ್ಯುವೆಲ್ ಗಮಾಡಿಯಾ ಫ್ಯಾಮಿಲಿ ಡಾಕ್ಟರ್ ಆಗಿದ್ದಾರೆ. ಡಾ.ಜ್ಯುವೆಲ್ ಜೊತೆ ಸಮಂತಾ ಮದುವೆಯಾಗೋದು ನಿಜಾನಾ.? ಇದಕ್ಕೆ ನಟಿಯೇ ಉತ್ತರಿಸಬೇಕಿದೆ.

  • ಪೆದ್ದಮ್ಮ ತಲ್ಲಿ ದೇವಿಗೆ ಸೀರೆ, ಗಾಜಿನ ಬಳೆ ಅರ್ಪಣೆ ಮಾಡಿದ ಸಮಂತಾ

    ಪೆದ್ದಮ್ಮ ತಲ್ಲಿ ದೇವಿಗೆ ಸೀರೆ, ಗಾಜಿನ ಬಳೆ ಅರ್ಪಣೆ ಮಾಡಿದ ಸಮಂತಾ

    ಮಂತಾ (Samantha) ನಟನೆಯ `ಶಾಕುಂತಲಂ’ (Shakuntalam) ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಚಿತ್ರದ ಪ್ರಚಾರ ಕಾರ್ಯ ಶುರುವಾಗುವ ಮುನ್ನವ ಸ್ಯಾಮ್ ದೇವಿ ಸನ್ನಿಧಾನಕ್ಕೆ ಭೇಟಿ ನೀಡಿದ್ದಾರೆ. ಈ ಕುರಿತ ವೀಡಿಯೋವೊಂದನ್ನ  ಸಾಮಾಜಿಕ ಜಾಲತಾಣದಲ್ಲಿ ನಟಿ ಶೇರ್‌ ಮಾಡಿದ್ದಾರೆ.

    ಸಮಂತಾ ಮೈಯೋಸಿಟೀಸ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅದಕ್ಕಾಗಿ ಸೂಕ್ತ ಚಿಕಿತ್ಸೆ ಕೂಡ ಪಡೆದುಕೊಳ್ತಿದ್ದಾರೆ. ಅನಾರೋಗ್ಯದ ಸಮಸ್ಯೆ ಮತ್ತು ವೈಯಕ್ತಿಕ ಸಮಸ್ಯೆಯಿಂದ ಬಳಲುತ್ತಿರುವ ನಟಿ ಸದಾ ಪೂಜೆ, ಧ್ಯಾನ, ದೇವರ ಸನ್ನಿಧಿ ಎಂದು ದೇವರ ಮೊರೆ ಹೋಗುತ್ತಿದ್ದಾರೆ. ಇದನ್ನೂ ಓದಿ: ಹೊಸ ಫೋಟೋಶೂಟ್‌ ಹಂಚಿಕೊಂಡ ದೀಪಿಕಾ ದಾಸ್‌

    `ಯಶೋದ’ (Yashoda) ಚಿತ್ರದ ಸೂಪರ್ ಸಕ್ಸಸ್ ನಂತರ ನಟಿ ಸಮಂತಾ `ಶಾಕುಂತಲಂ’ ಚಿತ್ರದ ಮೂಲಕ ಬರುತ್ತಿದ್ದಾರೆ. ಈ ಸಿನಿಮಾ ಏಪ್ರಿಲ್ 14ಕ್ಕೆ ತೆರೆಗೆ ಅಪ್ಪಳಿಸಲು ರೆಡಿಯಾಗಿದೆ. ಈ ಬೆನ್ನಲ್ಲೇ ಚಿತ್ರತಂಡದ ಜೊತೆ ಹೈದರಾಬಾದ್‌ನ ಪ್ರಸಿದ್ಧ ದೇವಸ್ಥಾನ ಪೆದ್ದಮ್ಮ ತಲ್ಲಿ ದೇವಿಗೆ ಸೀರೆ ಜೊತೆ ಗಾಜಿನ ಬಳೆಯನ್ನ ಅರ್ಪಣೆ ಮಾಡಿ ಆಶೀರ್ವಾದ ಪಡೆದು ಬಂದಿದ್ದಾರೆ.

     

    View this post on Instagram

     

    A post shared by Samantha (@samantharuthprabhuoffl)

    ನಟಿ ಸಮಂತಾ ಬಿಳಿ ಬಣ್ಣದ ಚೂಡಿದಾರ್ ಧರಿಸಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಸಹ ನಟ ದೇವ್ ಮೋಹನ್ ಕೂಡ ಬಿಳಿ ಬಣ್ಣದ ಬಟ್ಟೆ ಧರಿಸಿದ್ದಾರೆ.

  • `ಮೈಯೋಸಿಟಿಸ್’ ಕಾಯಿಲೆಯಿಂದ ಹೊರಬರಲು ಮತ್ತೆ ವರ್ಕೌಟ್ ಶುರು ಮಾಡಿದ ಸಮಂತಾ

    `ಮೈಯೋಸಿಟಿಸ್’ ಕಾಯಿಲೆಯಿಂದ ಹೊರಬರಲು ಮತ್ತೆ ವರ್ಕೌಟ್ ಶುರು ಮಾಡಿದ ಸಮಂತಾ

    ಸೌತ್ ನಟಿ ಸಮಂತಾ (Samantha) ಇದೀಗ ಆರೋಗ್ಯದಲ್ಲಿ ಕೊಂಚ ಚೇತರಿಸಿಕೊಂಡಿದ್ದಾರೆ. ಮತ್ತೆ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಈಗ ಮತ್ತೆ ಅವರು ಜಿಮ್‌ಗೆ ಮರಳಿದ್ದಾರೆ. ಜಿಮ್‌ನಲ್ಲಿ (Gym) ಮತ್ತೆ ಸ್ಯಾಮ್ ಬೆವರಿಳಿಸುತ್ತಿದ್ದಾರೆ.

    `ಯಶೋದ’ ಸಿನಿಮಾದ ಸಕ್ಸಸ್ ನಂತರ `ಶಾಕುಂತಲಂ’ ರಿಲೀಸ್‌ಗೆ ಸಮಂತಾ ಕಾಯ್ತಿದ್ದಾರೆ. ಆರೋಗ್ಯದಲ್ಲಿ ಕೊಂಚ ಚೇತರಿಕೊಂಡಿರುವ ಬೆನ್ನಲ್ಲೇ ಸಿನಿಮಾ ಶೂಟಿಂಗ್ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ: ನಟ ಭಯಂಕರ: ಮೊದಲು ಟ್ರೈಲರ್ ನೋಡಿ, ಆನಂತರ ಸಿನಿಮಾ ನೋಡ್ಬೇಕೋ ಬೇಡ್ವೊ ಡಿಸೈಡ್ ಮಾಡಿ

    ಈ ಹಿಂದೆ ಸಮಂತಾ ಕೂಡ ಸಾಕಷ್ಟು ಸಮಯ ಜಿಮ್‌ನಲ್ಲಿ ಕಳೆದಿದ್ದರು. ಅನಾರೋಗ್ಯದ ನಿಮಿತ್ತ ಅವರು ಸಂಪೂರ್ಣವಾಗಿ ಜಿಮ್ ತೊರೆದಿದ್ದರು. ಈಗ ಅವರು ವರ್ಕೌಟ್ ಮಾಡಲು ಮರಳಿದ್ದಾರೆ. ಈ ವಿಡಿಯೋನ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮೈಯೋಸಿಟಿಸ್ (Myosities) ಕಾಯಿಲೆಯಿಂದ ಹೊರ ಬರಲು ಜಿಮ್‌ನತ್ತ ನಟಿ ಮುಖ ಮಾಡಿದ್ದಾರೆ.

     

    View this post on Instagram

     

    A post shared by Samantha (@samantharuthprabhuoffl)

    ಸಮಂತಾ ಅವರು ಫಿಟ್‌ನೆಸ್‌ಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಈ ವಿಚಿತ್ರ ಕಾಯಿಲೆ ಕಾಣಿಸಿಕೊಂಡ ನಂತರದಲ್ಲಿ ಅನಿವಾರ್ಯವಾಗಿ ದಿನಚರಿಯಲ್ಲಿ ಹಲವು ಬದಲಾವಣೆ ಮಾಡಿಕೊಳ್ಳಬೇಕಾಯಿತು. ಈಗ ಮತ್ತಷ್ಟು ಫಿಟ್ ಆಗಲು ಸಮಂತಾ ಜಿಮ್‌ನಲ್ಲಿ ಸಖತ್ ವರ್ಕೌಟ್ ಮಾಡ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಆರೋಗ್ಯದ ಬಗ್ಗೆ ಕೇಳಿದ್ದಕ್ಕೆ ನಾನಿನ್ನೂ ಸತ್ತಿಲ್ಲ ಎಂದು ಕಣ್ಣೀರಿಟ್ಟ ಸಮಂತಾ

    ಆರೋಗ್ಯದ ಬಗ್ಗೆ ಕೇಳಿದ್ದಕ್ಕೆ ನಾನಿನ್ನೂ ಸತ್ತಿಲ್ಲ ಎಂದು ಕಣ್ಣೀರಿಟ್ಟ ಸಮಂತಾ

    ಡಿವೋರ್ಸ್ ಪಡೆದು ಒಂದು ವರ್ಷವಾದರೂ ಕೂಡ ಸದಾ ಸುದ್ದಿಯಲ್ಲಿರುವ ನಟಿ ಸಮಂತಾ (Samantha), ಸದ್ಯ `ಯಶೋದಾ’ (Yashoda Film) ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ಸಂದರ್ಶನವೊಂದರಲ್ಲಿ ಸಮಂತಾಗೆ ಆರೋಗ್ಯದ ಬಗ್ಗೆ ನಿರೂಪಕಿ ಪ್ರಶ್ನೆ ಕೇಳಿದಾಗ ನಾನಿನ್ನೂ ಸತ್ತಿಲ್ಲ ಎಂದು ಸಮಂತಾ ಕಣ್ಣೀರಿಟ್ಟಿದ್ದಾರೆ.

    ನಾಗಚೈತನ್ಯರಿಂದ(Nagachaitanya) ಡಿವೋರ್ಸ್ ಪಡೆದ ಮೇಲೆ ಸಮಂತಾ ವೃತ್ತಿರಂಗದಲ್ಲಿ ಮಿಂಚುತ್ತಿದ್ದರು, ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಮೈಯೋಸಿಟಿಸ್ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಬಗ್ಗೆ ಸಮಂತಾ ಮಾತನಾಡಿದ್ದಾರೆ. ಸಂದರ್ಶನದಲ್ಲಿ ನಿರೂಪಕಿ ಕೇಳಿದ ಪ್ರಶ್ನೆಗೆ ಭಾವುಕರಾಗಿದ್ದಾರೆ.

    `ಯಶೋದಾ’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಅನಾರೋಗ್ಯದ ನಡುವೆಯೂ ಸಮಂತಾ ಭಾಗಿದ್ದಾರೆ. ಸದ್ಯಕ್ಕೆ ನಾನು ಚೆನ್ನಾಗಿದ್ದೇನೆ. ನನ್ನ ಆರೋಗ್ಯದ ಬಗ್ಗೆ ನಾನಾ ಸುದ್ದಿಗಳು ಹರಿದಾಡುತ್ತಿದೆ. ನಾನಿನ್ನೂ ಸತ್ತಿಲ್ಲ ಎಂದು ತನ್ನ ಭಾವನೆಗಳನ್ನು ನಿಯಂತ್ರಿಸಲಾಗದೇ ಕಣ್ಣೀರಿಟ್ಟಿದ್ದಾರೆ.ಇದನ್ನೂ  ಓದಿ:ನಟನೆಯತ್ತ ʻಕಾಂತಾರʼ ಹೀರೋ ರಿಷಬ್ ಪತ್ನಿ ಪ್ರಗತಿ ಶೆಟ್ಟಿ

    ಇನ್ನೂ ಸಮಂತಾ ನಟನೆಯ ಬಹುನಿರೀಕ್ಷಿತ ಸಿನಿಮಾ ಯಶೋದಾ ನವೆಂಬರ್ 11ಕ್ಕೆ ತೆರೆಗೆ ಅಪ್ಪಳಿಸುತ್ತಿದೆ. ಬಾಡಿಗೆ ತಾಯ್ತನದ ಆಧರಿಸಿದ ಕಥೆಯ ಮೂಲಕ ಯಶೋದಾ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅನಾರೋಗ್ಯದ ನಡುವೆಯೂ `ಯಶೋದಾ’ ಸಿನಿಮಾ ಪ್ರಚಾರದಲ್ಲಿ ಸಮಂತಾ

    ಅನಾರೋಗ್ಯದ ನಡುವೆಯೂ `ಯಶೋದಾ’ ಸಿನಿಮಾ ಪ್ರಚಾರದಲ್ಲಿ ಸಮಂತಾ

    ಸೌತ್ ಬ್ಯೂಟಿ ಸಮಂತಾ ಮತ್ತೆ ಸುದ್ದಿಯಲ್ಲಿದ್ದಾರೆ. ಮಯೋಸಿಟಿಸ್ ಕಾಯಿಲೆಯಿಂದ ನಟಿ ಬಳಲುತ್ತಿದ್ದಾರೆ. ಇದರ ನಡುವೆಯೂ ಕೂಡ ʻಯಶೋದಾʼ ಚಿತ್ರದ ಪ್ರಮೋಷನ್ ಕಾರ್ಯಕ್ಕೆ ಸಮಂತಾ ನೀಡುತ್ತಿದ್ದಾರೆ.

    `ಪುಷ್ಪ’ ಬ್ಯೂಟಿ ಸಮಂತಾ ನಟನೆಯ `ಯಶೋದಾ’ ಚಿತ್ರ ರಿಲೀಸ್‌ಗೆ ರೆಡಿಯಾಗಿದ್ದು, ಅನಾರೋಗ್ಯದ ನಡುವೆಯೂ ಪ್ರಚಾರ ಕಾರ್ಯಕ್ಕೆ ಸಮಂತಾ ಭಾಗವಹಿಸುತ್ತಿದ್ದಾರೆ.  ಇದೀಗ ಪ್ರಚಾರ ಕಾರ್ಯಕ್ಕೆ ಸಜ್ಜಾಗಿರುವ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ್ದಾರೆ. ಇದನ್ನೂ ಓದಿ:ಇಂಡೋನೇಷ್ಯಾದಲ್ಲೂ ಕನ್ನಡದ `ಕಾಂತಾರ’ ಹೌಸ್‌ಫುಲ್ ಪ್ರದರ್ಶನ

    ಚಿತ್ರದ ಪೋಸ್ಟರ್ ಲುಕ್, ಟೀಸರ್ ಮೂಲಕ ಸಮಂತಾ ಚಿತ್ರದ ಅಭಿಮಾನಿಗಳು ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟಿದ್ದಾರೆ. ಇದೇ ನವೆಂಬರ್ 11ಕ್ಕೆ ಯಶೋದಾ ಸಿನಿಮಾ ತೆರೆಗೆ ಅಬ್ಬರಿಸುತ್ತಿದೆ. ಹಾಗಾಗಿ ಮತ್ತೆ ಸಮಂತಾ ಕೆಲಸಕ್ಕೆ ಮರಳಿದ್ದಾರೆ. ಸಿನಿಮಾ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ.

     

    View this post on Instagram

     

    A post shared by Samantha (@samantharuthprabhuoffl)

    ʻಪುಷ್ಪʼ ಚಿತ್ರದ ಹಾಡಿನ ಸಕ್ಸಸ್ ನಂತರ ಯಶೋದಾ ಆಗಿ ತೆರೆಗೆ ಅಬ್ಬರಿಸಲಿರುವ ಸಮಂತಾ, ಚಿತ್ರಮಂದಿರದಲ್ಲಿ ಅದೆಷ್ಟರ ಮಟ್ಟಿಗೆ ಮೋಡಿ ಮಾಡುತ್ತಾರೆ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]