Tag: Yashdas Gupta

  • ಕೇಕ್ ಮೇಲೆ ಗಂಡ ಎಂದು ಬರೆಸಿದ ನುಸ್ರತ್ – ಯಶ್ ಜೊತೆಗಿನ ವಿವಾಹದ ಬಗ್ಗೆ ಸುಳಿವು ಕೊಟ್ರಾ?

    ಕೇಕ್ ಮೇಲೆ ಗಂಡ ಎಂದು ಬರೆಸಿದ ನುಸ್ರತ್ – ಯಶ್ ಜೊತೆಗಿನ ವಿವಾಹದ ಬಗ್ಗೆ ಸುಳಿವು ಕೊಟ್ರಾ?

    ಕೋಲ್ಕತ್ತಾ: ಬೆಂಗಾಲಿ ನಟಿ ಹಾಗೂ ಟಿಎಂಸಿ ಸಂಸದೆ ನುಸ್ರತ್ ಜಹಾನ್, 36ನೇ ವಸಂತಕ್ಕೆ ಕಾಲಿಟ್ಟ ಯಶ್‍ದಾಸ್‍ಗುಪ್ತಾ ಅವರ ಹುಟ್ಟುಹಬ್ಬವನ್ನು ವಿಶೇಷವಾದ ಕೇಕ್ ಕತ್ತರಿಸುವ ಮೂಲಕ ಸೆಲಬ್ರೆಟ್ ಮಾಡಿದ್ದಾರೆ. ಬರ್ತ್‍ಡೇ ಸೆಲಬ್ರೆಟ್ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿಶೇಷವೆಂದರೆ ಈ ಕೇಕ್ ಮೇಲೆ ನುಸ್ರತ್ ಜಹಾನ್ ಗಂಡ ಎಂದು ಬರೆಸಿರುವ ಮೂಲಕ ನುಸ್ರತ್ ಹಾಗೂ ಯಶ್ ಮದುವೆಯಾಗಿರುವ ಬಗ್ಗೆ ಸುಳಿವು ನೀಡಿದ್ರಾ ಎಂಬ ಪ್ರಶ್ನೆ ಎದ್ದಿದೆ.

    nusrath jahan

    ಆಗಸ್ಟ್ 26ರಂದು ನುಸ್ರತ್ ಜಹಾನ್ ಗಂಡು ಮಗುವಿಗೆ ಜನ್ಮ ನೀಡಿದರು. ಅಲ್ಲದೇ ಮಗುವಿನ ಬರ್ತ್ ಸರ್ಟಿಫಿಕೇಟ್‍ನಲ್ಲಿ ಯಶ್ ದಾಸ್ ಗುಪ್ತಾ ಎಂದು ಉಲ್ಲೇಖಿಸಲಾಗಿತ್ತು. ಇದೀಗ ಯಶ್ ಬರ್ತ್‍ಡೇ ದಿನದಂದು ಇಬ್ಬರು ಒಟ್ಟಿಗೆ ಡಿನ್ನರ್ ಮಾಡುವುದರ ಮೂಲಕ ಸಖತ್ ಎಂಜಾಯ್ ಮಾಡಿದ್ದಾರೆ. ಬರ್ತ್‍ಡೇ ಕೇಕ್‍ನ ಒಂದು ಭಾಗದಲ್ಲಿ ಗಂಡ ಎಂದು ಬರೆಸಲಾಗಿದ್ದು, ಮತ್ತೊಂದು ಕಡೆ ಅಪ್ಪ ಎಂದು ಬರೆಸಲಾಗಿದೆ. ಜೊತೆಗೆ ಇಬ್ಬರು ಒಟ್ಟಿಗೆ ಸೆಲ್ಫಿಗೆ ಪೋಸ್ ನೀಡಿದ್ದಾರೆ. ಸದ್ಯ ಈ ಫೋಟೋಗಳನ್ನು ನುಸ್ರತ್ ತಮ್ಮ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಹೆರಿಗೆ ಬಳಿಕ ಕ್ಯಾಮೆರಾ ಮುಂದೆ ನುಸ್ರತ್ ಜಹಾನ್ – ಮಗುವಿನ ತಂದೆ ಬಗ್ಗೆ ಹೇಳಿದ್ದೇನು?

    nusrath jahan

    ಈ ಮುನ್ನ 2019ರ ಜೂನ್ 19ರಂದು ನುಸ್ರತ್ ಜಹಾನ್ ಮತ್ತು ನಿಖಿಲ್ ಜೈನ್ ಟರ್ಕಿಯಲ್ಲಿ ವಿವಾಹವಾಗಿದ್ದರು. ಟರ್ಕಿ ಕಾನೂನಿನ ಪ್ರಕಾರ ಇದಕ್ಕೆ ಮಾನ್ಯತೆ ಇಲ್ಲ. ಭಾರತದಲ್ಲೂ ಅಧಿಕೃತವಾಗಿ ಯಾವುದೇ ಕಾನೂನಿನ ಪ್ರಕಾರ ನಾವು ಮದುವೆ ಆಗಿಲ್ಲ ನಮ್ಮದು ಲಿವ್ ಇನ್ ರಿಲೇಷನ್ ಶಿಪ್ ಅಷ್ಟೇ ಎಂದಿದ್ದರು. ಇದನ್ನೂ ಓದಿ:  ಗಂಡು ಮಗುವಿಗೆ ಜನ್ಮ ನೀಡಿದ ಸಂಸದೆ ನುಸ್ರತ್ ಜಹಾನ್

    nusrath jahan

    ನಂತರ ನುಸ್ರತ್ ಹಾಗೂ ಯಶ್ ದಾಸ್‍ಗುಪ್ತಾ ರಿಲೇಶನ್ ಶಿಪ್‍ನಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಮಗುವಿನ ತಂದೆ ಹೆಸರನ್ನು ನುಸ್ರತ್ ಇಲ್ಲಿಯವರೆಗೂ ಬಹಿರಂಗ ಪಡಿಸಿಲ್ಲ. ಆದರೆ ಮಗುವಿನ ಜನನದ ಪ್ರಮಾಣ ಪತ್ರದಲ್ಲಿ ಮಗುವಿನ ಯಶ್ ದಾಸ್‍ಗುಪ್ತಾ ಎಂದು ಹೆಸರಿಸಲಾಗಿದೆ.