Tag: Yashaswini Ravindra

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಕಮಲಿ’ ನಟಿ ಯಶಸ್ವಿನಿ

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಕಮಲಿ’ ನಟಿ ಯಶಸ್ವಿನಿ

    ‘ಕಮಲಿ’ (Kamali) ಧಾರಾವಾಹಿ ಮೂಲಕ ಮನೆ ಮಾತಾದ ನಟಿ ಯಶಸ್ವಿನಿ ರವೀಂದ್ರ (Yashaswini Ravindra) ಅವರು ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

    ಟಿವಿ ಪ್ರೇಕ್ಷಕರಿಗೆ ರಚನಾ ಆಗಿ ಗಮನ ಸೆಳೆದವರು ನಟಿ ಯಶಸ್ವಿನಿ ರವೀಂದ್ರ, ಜನಪ್ರಿಯ ‘ಕಮಲಿ’ ಧಾರಾವಾಹಿಯಲ್ಲಿ ಹೀರೋ ರಿಷಿ (Rishi) ಸಹೋದರಿ ಪಾತ್ರದಲ್ಲಿ ನಟಿಸಿದ್ದರು. ರಚನಾ ಎಂಬ ಪಾತ್ರಕ್ಕೆ ಯಶಸ್ವಿನಿ ಜೀವ ತುಂಬಿದ್ದರು.

    ಇದೀಗ ಬಹುಕಾಲದ ಗೆಳೆಯ ಚೇತನ್ ರಾಜ್ (Chethan Raj) ಜೊತೆ ನಟಿ ಯಶಸ್ವಿನಿ ರವೀಂದ್ರ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರುಹಿರಿಯರು, ಆಪ್ತರ ಸಮ್ಮುಖದಲ್ಲಿ ನಟಿ ಮದುವೆಯಾಗಿದ್ದಾರೆ. ಇದನ್ನೂ ಓದಿ:ರಾಜಕಾರಣ ಬದಿಗಿಟ್ಟು ಪುತ್ರನ ಮದುವೆಗೆ ಮುಖ್ಯಮಂತ್ರಿಯನ್ನು ಆಹ್ವಾನಿಸಿದ ಸುಮಲತಾ

    ನಟಿ ಯಶಸ್ವಿನಿ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರಾಗಿದ್ದಾರೆ. ಆಪ್ತರ ಸಮ್ಮುಖದಲ್ಲಿ ಯಶಸ್ವಿನಿ- ಚೇತನ್ ರಾಜ್ ಸಿಂಪಲ್ ಆಗಿ ಮದುವೆಯಾಗಿದ್ದಾರೆ. ನವ ಜೋಡಿಗೆ ಹೊಸ ಬಾಳಿಗೆ ಫ್ಯಾನ್ಸ್ ಶುಭಹಾರೈಸಿದ್ದಾರೆ.

  • ಕಾಲವೇ ಮೋಸಗಾರ ಟೀಸರ್ ನಲ್ಲಿ ಪ್ರೀತಿ ದ್ವೇಷಗಳ ಪಸೆ!

    ಕಾಲವೇ ಮೋಸಗಾರ ಟೀಸರ್ ನಲ್ಲಿ ಪ್ರೀತಿ ದ್ವೇಷಗಳ ಪಸೆ!

    ಬೆಂಗಳೂರು: ಶೀರ್ಷಿಕೆಯಲ್ಲಿಯೇ ಕುತೂಹಲದ ಸೆಲೆಯಿಟ್ಟುಕೊಂಡಿರೋ ಸಿನಿಮಾಗಳು ಆಗಾಗ ರೂಪುಗೊಳ್ಳುತ್ತಿರುತ್ತವೆ. ಅದಕ್ಕೆ ತಕ್ಕುದಾದ ಕಂಟೆಂಟಿನೊಂದಿಗೆ ಇಂಥಾ ಹೊಸ ಅಲೆಯ ಚಿತ್ರಗಳೆಲ್ಲ ಗೆಲ್ಲುತ್ತಿರೋದರಿಂದಾಗಿ ಆ ಬಗ್ಗೆ ವ್ಯಾಪಕ ಭರವಸೆಯೂ ಮೂಡಿಕೊಂಡಿದೆ. ಪ್ರೇಕ್ಷಕರಲ್ಲಿ ಪಡಿಮೂಡಿಕೊಂಡಿರೋ ಅಂಥಾ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸುವಂತೆ ಅಣಿಗೊಂಡಿರುವ ಚಿತ್ರ ‘ಕಾಲವೇ ಮೋಸಗಾರ’. ಈ ಹಿಂದೆ ಮೋಷನ್ ಪೋಸ್ಟರ್ ನೊಂದಿಗೆ ಚಕಿತಗೊಳಿಸಿದ್ದ ಈ ಸಿನಿಮಾದ ಟೀಸರ್ ಇದೀಗ ಲಾಂಚ್ ಆಗಿದೆ.

    ಭರತ್ ಸಾಗರ್ ಮತ್ತು ಕಿರುತೆರೆ ನಟಿ ಯಶಸ್ವಿನಿ ರವೀಂದ್ರ ನಾಯಕ ನಾಯಕಿಯರಾಗಿ ನಟಿಸಿರೋ ಈ ಚಿತ್ರವನ್ನು ಸಂಜಯ್ ವದತ್ ನಿರ್ದೇಶನ ಮಾಡಿದ್ದಾರೆ. ಹೊಸತನ ಹೊಮ್ಮಿಸುವಂಥಾ ಪೋಸ್ಟರ್ ಮತ್ತು ಮೋಷನ್ ಪೋಸ್ಟರ್‍ಗಳನ್ನು ನೋಡಿದ್ದ ಪ್ರೇಕ್ಷಕರೆಲ್ಲ ಇದು ಯಾವ ಥರದ ಕಥೆಯನ್ನೊಳಗೊಂಡಿರುವ ಚಿತ್ರವೆಂಬ ಪ್ರಶ್ನೆ ಕಾಡಿತ್ತು. ಚಿತ್ರತಂಡವೀಗ ಈ ಟೀಸರ್ ಮೂಲಕ ಅದಕ್ಕೆ ಉತ್ತರಿಸೋ ಪ್ರಯತ್ನ ಮಾಡಿದೆ. ಇದುವೇ ಈ ಸಿನಿಮಾ ಪ್ರೀತಿ, ಪ್ರೇಮ ಮತ್ತು ದ್ವೇಷದ ಕಥೆ ಹೊಂದಿದೆ ಎಂಬಂಥಾ ಸುಳಿವನ್ನೂ ರವಾನಿಸಿದೆ. ‘ಈ ಹುಡುಗೀರು ಮೆಡಿಸಿನ್ ಇದ್ದಂಗೆ, ಎಕ್ಸ್ ಪೆರಿ ಡೇಟ್ ಜೊತೇಲೇ ಬರ್ತಾರೆ’ ಎಂಬ ಡೈಲಾಗಂತೂ ಯುವ ಸಮುದಾಯವನ್ನು ಒಂದೇ ಗುಕ್ಕಿಗೆ ಸೆಳೆಯುವಂತಿದೆ.

    https://www.youtube.com/watch?v=sTSLk_VY5EA

    ಒಟ್ಟಾರೆಯಾಗಿ ಇದೊಂದು ಅಪರೂಪದ ಕಥೆಯನ್ನೊಳಗೊಂಡಿರುವ ಚಿತ್ರ ಅನ್ನೋದಂತೂ ಈ ಟೀಸರ್ ಮೂಲಕ ಸ್ಪಷ್ಟವಾಗಿದೆ. ಅಂದಹಾಗೆ ಇದು ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನೊಳಗೊಂಡಿರೋ ಚಿತ್ರ. ಭಾವ ಸ್ಪಂದನ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ಇದನ್ನು ರಜತ್ ಸಾಳಂಕೆ ನಿರ್ಮಾಣ ಮಾಡಿದ್ದಾರೆ. ದೊಡ್ಡ ತಾರಾಗಣ, ಪ್ರತಿಭಾನ್ವಿತ ತಾಂತ್ರಿಕ ವರ್ಗದೊಂದಿಗೆ ಈ ಸಿನಿಮಾ ಎಲ್ಲರನ್ನೂ ಬೆರಗಾಗಿಸುವ ಉಮೇದಿನೊಂದಿಗೆ ಚಿತ್ರಮಂದಿರಗಳತ್ತ ಮುಖ ಮಾಡಿ ನಿಂತಿದೆ. ಹೀಗೆ ಹಂತ ಹಂತವಾಗಿ ಕ್ರಿಯೇಟಿವ್ ಕೆಲಸ ಕಾರ್ಯಗಳ ಮೂಲಕವೇ ಸುದ್ದಿಯಲ್ಲಿರೋ ಈ ಸಿನಿಮಾವನ್ನು ಆದಷ್ಟು ಬೇಗನೆ ತೆರೆಗಾಣಿಸುವ ತಯಾರಿ ನಡೆಯುತ್ತಿದೆ.

  • ಮಸ್ತಾಗಿದೆ ಕಾಲವೇ ಮೋಸಗಾರ ಮೋಷನ್ ಪೋಸ್ಟರ್!

    ಮಸ್ತಾಗಿದೆ ಕಾಲವೇ ಮೋಸಗಾರ ಮೋಷನ್ ಪೋಸ್ಟರ್!

    ಬೆಂಗಳೂರು: ಈಗ ಕನ್ನಡ ಚಿತ್ರರಂಗದಲ್ಲಿ ಹೊಸಾ ಅಲೆಯ ಚಿತ್ರಗಳ ಹಂಗಾಮ ಶುರುವಾಗಿದೆ. ಶೀರ್ಷಿಕೆ ಕೇಳಿದರೇನೇ ಕುತೂಹಲ ಕೆರಳೋ ಸಿನಿಮಾಗಳೊಂದಿಗೆ ಆಗಮಿಸೋ ಹೊಸಬರ ತಂಡಗಳು ಸ್ಟಾರ್ ಚಿತ್ರಗಳಿಗೇ ಸೆಡ್ಡು ಹೊಡೆಯುವಂಥಾ ಚಿತ್ರದ ಮೂಲಕ ಕಾಲೂರಿ ನಿಂತದ್ದೂ ಇದೆ. ಇದೇ ಥರದ ಪಾಸಿಟಿವ್ ವಾತಾವರಣವನ್ನು ತನ್ನ ಸುತ್ತ ನಿರ್ಮಿಸಿಕೊಂಡಿರೋ ಚಿತ್ರ ಕಾಲವೇ ಮೋಸಗಾರ. ಇದೀಗ ಇದರ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಇದುವೇ ಸದರಿ ಸಿನಿಮಾ ಸುತ್ತಾ ಮತ್ತೊಂದು ಸುತ್ತಿನ ನಿರೀಕ್ಷೆ ಮೂಡಿಕೊಳ್ಳಲು ಕಾರಣವಾಗಿದೆ.

    ಇದು ಸಂಜಯ್ ವದತ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಚಿತ್ರ. ಭರತ್ ಸಾಗರ್ ಮತ್ತು ಕಿರುತೆರೆ ನಟಿ ಯಶಸ್ವಿನಿ ರವೀಂದ್ರ ನಾಯಕ ನಾಯಕಿಯರಾಗಿ ನಟಿಸಿದ್ದಾರೆ. ಇಲ್ಲಿ ನಾಯಕ ಭರತ್ ರಗಡ್ ಲುಕ್ಕಿನಲ್ಲಿ ಕಂಗೊಳಿಸಿದರೆ, ನಾಯಕಿ ಕೈಲಿ ರಿವಾಲ್ವರ್ ಹಿಡಿದು ನಿಂತಿರೋ ಶೈಲಿ ಕಥೆಯ ಬಗ್ಗೆ ಕ್ಯೂರಿಯಾಸಿಟಿಗೆ ಕಾರಣವಾಗಿದೆ. ಅಂದಹಾಗೆ ಭಾವಸ್ಪಂದನ ಪ್ರೊಡಕ್ಷನ್ಸ್ ಲಾಂಛನದಡಿಯಲ್ಲಿ ರಜತ್ ಸಾಳಂಕೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

    ಇದು ಸಸ್ಪೆನ್ಸ್ ಥ್ರಿಲ್ಲರರ್ ಕಥಾ ಹಂದರ ಹೊಂದಿರೋ ಚಿತ್ರ. ಆದರೆ ಇದು ಸಿದ್ಧಸೂತ್ರಗಳಿಗೆ ಬದ್ಧವಾಗಿರೋ ಸಿನಿಮಾವಲ್ಲ. ಶೀರ್ಷಿಕೆ ಮತ್ತು ಪೋಸ್ಟರುಗಳಂಥಾದ್ದೇ ವಿಶಿಷ್ಟವಾದ ಕಥೆಯನ್ನು ಈ ಸಿನಿಮಾ ಒಳಗೊಂಡಿದೆಯಂತೆ. ಇದರಲ್ಲಿ ಪ್ರತಿಭಾವಂತರ ತಾಂತ್ರಿಕ ತಂಡ, ದೊಡ್ಡ ತಾರಾಗಳಣವೂ ಇದೆ. ಕೆ ಲೋಕೇಶ್ ಛಾಯಾಗ್ರಹಣ, ರಿತ್ವಿಕ್ ಸಂಕಲನ, ರವೀಂದ್ರ, ಶಂಕರ ಮೂರ್ತಿ, ಕುರಿ ಪ್ರತಾಪ್, ವಿಜಯ್ ಚೆಂಡೂರ್, ಬ್ಯಾಂಕ್ ಜನಾರ್ಧನ್, ದರ್ಶನ್ ವರ್ಣೇಕರ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.