Tag: yashas patla

  • ಅದಿತಿ ಪ್ರಭುದೇವ ಮಗಳ ಗ್ರ್ಯಾಂಡ್ ಬರ್ತ್‌ಡೇ ಸೆಲಬ್ರೇಶನ್

    ಅದಿತಿ ಪ್ರಭುದೇವ ಮಗಳ ಗ್ರ್ಯಾಂಡ್ ಬರ್ತ್‌ಡೇ ಸೆಲಬ್ರೇಶನ್

    ಟಿ ಅದಿತಿ ಪ್ರಭುದೇವ (Aditi Prabhudeva) ಅವರು ಮಗಳು ನೇಸರ ಮೊದಲ ವರ್ಷದ ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿ ಆಚರಿಸಿದ್ದಾರೆ. ಬರ್ತ್‌ಡೇ ಆಚರಣೆಯ ಸುಂದರ ಫೋಟೋ ಶೇರ್ ಮಾಡಿ ಮಗಳಿಗೆ ಪ್ರೀತಿಯಿಂದ ಶುಭಕೋರಿದ್ದಾರೆ. ಇದನ್ನೂ ಓದಿ: L2: ಎಂಪುರಾನ್‌ ನಿರ್ದೇಶಕ ಪೃಥ್ವಿರಾಜ್‌ಗೆ ಐಟಿ ನೋಟಿಸ್‌ – ಸಂಭಾವನೆ ವಿವರ ನೀಡುವಂತೆ ಸೂಚನೆ

    ಮಗಳು ನೇಸರಗೆ 1 ವರ್ಷದ ಹುಟ್ಟುಹಬ್ಬದ ಹಿನ್ನೆಲೆ ಬೆಂಗಳೂರಿನ ರೆಸಾರ್ಟ್‌ವೊಂದರಲ್ಲಿ ಅದ್ಧೂರಿಯಾಗಿ ಆಚರಿಸಿದ್ದಾರೆ. ಬಿಳಿ ಬಣ್ಣದ ಉಡುಗೆಯಲ್ಲಿ ನೇಸರ (Nesara) ಮಿಂಚಿದ್ದಾಳೆ. ಮಗಳಿಗೆ ಹಾಡು ಹೇಳುತ್ತಾ ಊಟ ಮಾಡಿಸುತ್ತಿರುವ ಫೋಟೋ ಜೊತೆಗೆ ಮಗಳೊಂದಿಗಿರುವ ನಟಿಯ ತುಂಟಾಟ ಪೋಸ್‌ ನೋಡಿ ಫ್ಯಾನ್ಸ್‌ ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ:ಹುಟ್ಟುಹಬ್ಬ ಆಚರಿಸಿಕೊಳ್ಳಲು ವಿದೇಶಕ್ಕೆ ಹಾರಿದ ನ್ಯಾಷನಲ್‌ ಕ್ರಶ್‌ – ಈ ನಟನೊಂದಿಗೆ ರಶ್ಮಿಕಾ ಸೆಲೆಬ್ರೇಷನ್‌!

    ಮೊದಲ ಹುಟ್ಟು ಹಬ್ಬದ ಶುಭಾಶಯಗಳು ಮಗಳೇ ನೇಸರ. ನೀ ನಮ್ಮ ಬದುಕು, ನಮ್ಮ ಜೀವದ ಬೆಳಕು. ಪ್ರತಿ ಕ್ಷಣ, ಪ್ರತಿ ಮಾತು, ಪ್ರತಿ ನಿರ್ಧಾರದಲ್ಲೂ ನೀನಿರುವೆ ಮಗಳೆ ಎಂದಿದ್ದಾರೆ. ಆ ಶಿವನಾಣೆ ನಿನ್ನ ಬದುಕಿನ ಪ್ರತಿ ಹೆಜ್ಜೆಯಲ್ಲು ನಿನ್ನೊಂದಿಗಿರುತ್ತೇವೆ ಎಂದು ಅದಿತಿ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

     

    View this post on Instagram

     

    A post shared by ADITI PRABHUDEVA (@aditiprabhudeva)

    ಈ ಸಮಾರಂಭಕ್ಕೆ ಸ್ಯಾಂಡಲ್‌ವುಡ್ ನಟ-ನಟಿಯರು ಕೂಡ ಆಗಮಿಸಿದ್ದಾರೆ. ಮಲೈಕಾ ವಸುಪಾಲ್, ಸುಧಾರಾಣಿ, ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ದಂಪತಿ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ.

    ‘ಧೈರ್ಯಂ’ ಚಿತ್ರದ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದ ಅದಿತಿ, ರಂಗನಾಯಕಿ, ಟ್ರಿಪಲ್ ರೈಡಿಂಗ್, ಬಜಾರ್, ತೋತಾಪುರಿ ಚಿತ್ರ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮದುವೆಯ ಬಳಿಕವೂ ಛೂ ಮಂತರ್, ಜಮಾಲಿಗುಡ್ಡ ಚಿತ್ರಗಳಲ್ಲಿ ನಟಿಸಿದ್ದಾರೆ.

    ಅಂದಹಾಗೆ, 2022ರಲ್ಲಿ ಉದ್ಯಮಿ ಯಶಸ್ ಪಾಟ್ಲಾ (Yashas Patla) ಜೊತೆ ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್‌ನಲ್ಲಿ ಅದ್ಧೂರಿಯಾಗಿ ಮದುವೆಯಾದರು. ಕಳೆದ ವರ್ಷದ ಏ.4ರಂದು ಅದಿತಿ ಹೆಣ್ಣು ಮಗುವಿಗೆ ಜನ್ಮ ನೀಡಿದರು.

  • ನನ್ನ ಬದುಕಿನ ಶಕ್ತಿ ನೀವು: ಪತಿಗೆ ಅದಿತಿ ಪ್ರಭುದೇವ ಲವ್ಲಿ ವಿಶ್

    ನನ್ನ ಬದುಕಿನ ಶಕ್ತಿ ನೀವು: ಪತಿಗೆ ಅದಿತಿ ಪ್ರಭುದೇವ ಲವ್ಲಿ ವಿಶ್

    ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವ (Aditi Prabhudeva) ಕಿರುತೆರೆಗೆ ಎಂಟ್ರಿ ಕೊಟ್ಟು ಸೆಕೆಂಡ್ ಇನ್ಸಿಂಗ್ಸ್ ಶುರು ಮಾಡಿದ್ದಾರೆ. ದಾಂಪತ್ಯ ಜೀವನ ಮತ್ತು ಸಿನಿಮಾ ಬದುಕು ಎರಡನ್ನು ನಿಭಾಯಿಸಿಕೊಂಡು ಹೋಗ್ತಿದ್ದಾರೆ. ನನ್ನ ಬದುಕಿನ ಶಕ್ತಿ ನೀವು ಎಂದು ಪತಿಗೆ ಯಶಸ್‌ಗೆ (Yashas Patla) ವಿಶೇಷವಾಗಿ ಶುಭಕೋರಿದ್ದಾರೆ.

    ಪ್ರೀತಿಯ ಯಶು, ಹುಟ್ಟುಹಬ್ಬದ ಶುಭಾಶಯಗಳು. ನೀವೊಬ್ಬ ನಿಷ್ಕಲ್ಮಶ ಮನಸ್ಸಿನ ವ್ಯಕ್ತಿತ್ವದವರು. ಮೌನಕ್ಕೂ ಅರ್ಥವಿದೆ ಎಂದು ತಿಳಿಸಿ ಕೊಟ್ಟ ಪ್ರೀತಿಯ ಗೆಳೆಯ ನೀವು. ನನ್ನ ಬದುಕಿನ ಶಕ್ತಿ ನೀವು ಎಂದು ಅದಿತಿ ಪ್ರಭುದೇವ ಪೋಸ್ಟ್ ಮಾಡಿದ್ದಾರೆ. ಆ ದೇವರು ಪ್ರಪಂಚದ ಎಲ್ಲಾ ಸುಖವನ್ನು, ನೆಮ್ಮದಿಯನ್ನು ನಿಮಗೆ ನೀಡಲಿ ಕಂದ. ಹಾಗೆಯೇ ನಾವಿಬ್ರೂ ಯಾವಾಗಲೂ ಹೀಗೆ ಒಟ್ಟಿಗೆ ಕಷ್ಟ ಸುಖದಲ್ಲಿ ಒಂದಾಗಿ, ಜೊತೆಯಾಗಿ ಬೆಳೆದು ಸಾಧನೆ, ನೆಮ್ಮೆದಿಯತ್ತ ಹೆಜ್ಜೆ ಹಾಕೋಣ ಎಂದು ನಟಿ ಪತಿಗೆ ವಿಶ್ ಮಾಡಿದ್ದಾರೆ.

     

    View this post on Instagram

     

    A post shared by ADITI PRABHUDEVA (@aditiprabhudeva)

    ನಿಮಗೆ ನೆನಪಿದೆಯಾ ಕಳೆದ ವರ್ಷ ಇದೇ ದಿವಸ ನೀವು ತಂದೆಯಾಗುವ ಸುದ್ದಿಯನ್ನು ನೀಡಿದೆ. ಈ ವರ್ಷ ನಾವು ಇಬ್ಬರಲ್ಲ ಮೂವರು. ಈ ವರ್ಷದ ನಿಮ್ಮ ಹುಟ್ಟುಹಬ್ಬಕ್ಕೆ ನಮ್ಮ ಮಗಳೇ ನಾನು ನಿಮಗೆ ನೀಡಿರುವ ಮುದ್ದಾದ ಉಡುಗೊರೆ. ಏನಂತೀರಾ?? ಎಲ್ಲದಕ್ಕೂ ಧನ್ಯವಾದಗಳು. ಹ್ಯಾಪಿ ಬರ್ತ್ಡೇ ಎಂದು ನಟಿ ಬರೆದುಕೊಂಡಿದ್ದಾರೆ.

    ಅಂದಹಾಗೆ, ಬಜಾರ್ ಸಿನಿಮಾ ನಟಿ ಅದಿತಿ 2022ರಲ್ಲಿ ಉದ್ಯಮಿ ಯಶಸ್ ಪಾಟ್ಲಾ ಜೊತೆ ಮದುವೆಯಾದರು. ಇದೀಗ ಮುದ್ದು ಮಗಳ ಆರೈಕೆಯಲ್ಲಿ ನಟಿ ಬ್ಯುಸಿಯಾಗಿದ್ದಾರೆ.

  • ಪ್ಯಾರಿಸ್‌ನ ರೊಮ್ಯಾಂಟಿಕ್‌ ಫೋಟೋ ಹಂಚಿಕೊಂಡ ಅದಿತಿ ಪ್ರಭುದೇವ

    ಪ್ಯಾರಿಸ್‌ನ ರೊಮ್ಯಾಂಟಿಕ್‌ ಫೋಟೋ ಹಂಚಿಕೊಂಡ ಅದಿತಿ ಪ್ರಭುದೇವ

    ಸ್ಯಾಂಡಲ್‌ವುಡ್ ಬ್ಯೂಟಿ ಅದಿತಿ ಪ್ರಭುದೇವ (Aditi Prabhudeva) ಅವರು ಗೃಹಿಣಿಯಾದ್ಮೇಲೆ ವೈವಾಹಿಕ ಬದುಕಿನಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ಯಶಸ್ ಪಟ್ಲಾ ಜೊತೆ ಅದಿತಿ ದಾಂಪತ್ಯ ಬದುಕಿಗೆ ಕಾಲಿಟ್ಟ ಮೇಲೆ ಮ್ಯಾರೇಜ್ ಲೈಫ್‌ನ ಎಂಜಾಯ್ ಮಾಡ್ತಿದ್ದಾರೆ. ಸದ್ಯ ಅವರು ಪತಿ ಜೊತೆ ಪ್ಯಾರಿಸ್‌ನಲ್ಲಿದ್ದಾರೆ. ಪ್ಯಾರಿಸ್ (Paris) ಪ್ರಣಯದ ಬ್ಯೂಟಿಫುಲ್ ಫೋಟೋಗಳನ್ನ ನಟಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

    ನಿರೂಪಕಿ, ಕಿರುತೆರೆ ನಟಿಯಾಗಿ ಬಣ್ಣದ ಬದುಕಿಗೆ ಅದಿತಿ ಕಾಲಿಟ್ಟರು. ಬಳಿಕ ಅಜಯ್ ರಾವ್‌ಗೆ ‘ಧೈರ್ಯಂ’ (Dhairayam) ಚಿತ್ರಕ್ಕೆ ನಾಯಕಿಯಾಗುವ ಮೂಲಕ ಸ್ಯಾಂಡಲ್‌ವುಡ್‌ಗೆ (Sandalwood) ಅದಿತಿ ಪಾದಾರ್ಪಣೆ ಮಾಡಿದ್ರು. ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ದರು. ಅವರ ಅದ್ಭುತ ನಟನೆ & ಸ್ಪಷ್ಟ ಕನ್ನಡಕ್ಕೆ ಫ್ಯಾನ್ಸ್ ಫಿದಾ ಆಗಿದ್ದರು. ಇದನ್ನೂಓದಿ:ಹುಟ್ಟುಹಬ್ಬದ ಸಂಭ್ರಮದಲ್ಲಿ ‘ಕಾಂತಾರ’ ಹೀರೋ ರಿಷಬ್ ಶೆಟ್ಟಿ

    ಧೈರ್ಯಂ, ಸಿಂಗ, ಬ್ರಹ್ಮಚಾರಿ, ಬಜಾರ್, ತೋತಾಪುರಿ, ತ್ರಿಬಲ್ ರೈಡಿಂಗ್ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಅದಿತಿ ಪ್ರಭುದೇವ ಕಳೆದ ವರ್ಷ ನವೆಂಬರ್‌ನಲ್ಲಿ ವೈವಾಹಿಕ ಬದುಕಿಗೆ ನಾಂದಿ ಹಾಡಿದರು. ಯಶಸ್ ಪಟ್ಲಾ ಅವರನ್ನ ಅದಿತಿ ಪ್ರಭುದೇವ ಮದುವೆಯಾದರು. ಅದಿತಿ- ಯಶಸ್ ಪಟ್ಲಾ ವಿವಾಹ ಮಹೋತ್ಸವ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆದಿತ್ತು.

    ಮದುವೆಯ ಬಳಿಕ ಅದಿತಿ ಪ್ರಭುದೇವ ಹಾಗೂ ಯಶಸ್ ಪಟ್ಲಾ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಅದಿತಿ ಪ್ರಭುದೇವ ಮತ್ತು ಪತಿ ಯಶಸ್ ಪಟ್ಲಾ ಸ್ವಿಟ್ಜರ್ಲ್ಯಾಂಡ್‌ಗೆ ಫ್ಲೈಟ್ ಹತ್ತಿದ್ದರು. ಇದೀಗ ಪ್ಯಾರಿಸ್‌ನಲ್ಲಿದ್ದಾರೆ ಅದಿತಿ ದಂಪತಿ. ಪ್ಯಾರಿಸ್‌ನ ವಿಶ್ವವಿಖ್ಯಾತ ಐಫೆಲ್ ಟವರ್ ಎದುರು ಅದಿತಿ ಪ್ರಭುದೇವ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಅದಿತಿ – ಯಶಸ್ ಪ್ಯಾರಿಸ್ ಪ್ರಣಯದ ಬ್ಯೂಟಿಫುಲ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

  • ಸ್ವಿಟ್ಜರ್ಲ್ಯಾಂಡ್‌ನಲ್ಲಿ ಉಯ್ಯಾಲೆ ಆಡಿದ ಅದಿತಿ ಪ್ರಭುದೇವ

    ಸ್ವಿಟ್ಜರ್ಲ್ಯಾಂಡ್‌ನಲ್ಲಿ ಉಯ್ಯಾಲೆ ಆಡಿದ ಅದಿತಿ ಪ್ರಭುದೇವ

    ಸ್ಯಾಂಡಲ್‌ವುಡ್ (Sandalwood) ನಟಿ ಅದಿತಿ ಪ್ರಭುದೇವ (Aditi Prabhudeva) ಅವರು ಸದ್ಯ ವೈವಾಹಿಕ ಬದುಕಿನಲ್ಲಿ ಬ್ಯುಸಿಯಾಗಿದ್ದಾರೆ. ಪತಿ ಯಶಸ್ (Yashas) ಜೊತೆ ಅದಿತಿ ವಿದೇಶಕ್ಕೆ ಹಾರಿದ್ದಾರೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಅಂಬರೀಶ್ ಜನ್ಮದಿನಕ್ಕೆ ಸುಮಲತಾ ಅಂಬರೀಶ್ ಭಾವುಕ ಪತ್ರ

    ಕಿರುತೆರೆ ನಟಿಯಾಗಿ ಬಣ್ಣದ ಬದುಕಿಗೆ ಪಾದಾರ್ಪಣೆ ಮಾಡಿದ ಅದಿತಿ ಪ್ರಭುದೇವ ಅವರು ಇದೀಗ ಸ್ಯಾಂಡಲ್‌ವುಡ್ ನಾಯಕಿಯಾಗಿ ಗಮನ ಸೆಳೆದಿದ್ದಾರೆ. ಬೇಡಿಕೆ ಇರುವಾಗಲೇ ಹಸೆಮಣೆ ಏರಿದ ನಟಿ ಅದಿತಿ, ಕೂರ್ಗ್ ಮೂಲದ ಉದ್ಯಮಿ ಯಶಸ್ ಜೊತೆ ದಾಂಪತ್ಯ ಬದುಕನ್ನ ಎಂಜಾಯ್ ಮಾಡ್ತಿದ್ದಾರೆ. ಸಿನಿಮಾ ಜೊತೆಗೆ ವೈವಾಹಿಕ ಬದುಕನ್ನ ಬ್ಯಾಲೆನ್ಸ್ ಮಾಡ್ತಿದ್ದಾರೆ.

    ಸದ್ಯ ಶೂಟಿಂಗ್‌ಗೆ ಬ್ರೇಕ್ ಹಾಕಿ ಸ್ವಿಟ್ಜರ್ಲ್ಯಾಂಡ್‌ನ (Switzerland) ಸುಂದರ ಪ್ರದೇಶದಲ್ಲಿ ಅದಿತಿ ದಂಪತಿ ಎಂಜಾಯ್ ಮಾಡ್ತಿದ್ದಾರೆ. ಅದಿತಿ ಜೋಡಿ ಕೈ ಕೈ ಹಿಡಿದು ಚೆಂದದ ಲೊಕೇಷನ್‌ಗೆ ಭೇಟಿ ನೀಡುತ್ತಾ ಮಸ್ತ್ ಮಜಾ ಮಾಡುತ್ತಿದ್ದಾರೆ. ಇದರಲ್ಲಿ ನಟಿ ಜೋಕಾಲಿ ಆಡುತ್ತಿರುವ ಫೋಟೋ, ಬೆಕ್ಕಿನ ಜೊತೆ ಅದಿತಿ ಮುದ್ದಾಟ ಎಲ್ಲವೂ ಗಮನ ಸೆಳೆಯುತ್ತಿದೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

     

    View this post on Instagram

     

    A post shared by ADITI PRABHUDEVA (@aditiprabhudeva)

    ಸದ್ಯ ಅದಿತಿ ನಟನೆಯ ‘ಮ್ಯಾಟ್ನಿ’ ಸಿನಿಮಾ ರೆಡಿಯಿದೆ. ಸತೀಶ್ ನೀನಾಸಂಗೆ ಜೋಡಿಯಾಗಿ ಅದಿತಿ ನಟಿಸಿದ್ದಾರೆ. ಈ ಸಿನಿಮಾದ ರಿಲೀಸ್ ಬಗ್ಗೆ ಅಧಿಕೃತ ಅಪ್‌ಡೇಟ್ ಸಿಗಲಿದೆ.

  • ಮದುವೆ ಬಳಿಕ ಅದಿತಿ ಪ್ರಭುದೇವ ಬದಲಾಗಿದ್ದಾರಾ? ಸ್ಪಷ್ಟನೆ ನೀಡಿದ ನಟಿ ತಾಯಿ

    ಮದುವೆ ಬಳಿಕ ಅದಿತಿ ಪ್ರಭುದೇವ ಬದಲಾಗಿದ್ದಾರಾ? ಸ್ಪಷ್ಟನೆ ನೀಡಿದ ನಟಿ ತಾಯಿ

    ಸ್ಯಾಂಡಲ್‌ವುಡ್ (Sandalwood) ಶ್ಯಾನೆ ಟಾಪ್ ನಟಿ ಅದಿತಿ ಪ್ರಭುದೇವ (Aditi Prabhudeva), ಯಶಸ್ (Yashas) ಜೊತೆ ದಾಂಪತ್ಯ ಜೀವನದಲ್ಲಿ ಖುಷಿಯಾಗಿದ್ದಾರೆ. ಮದುವೆಯ (Wedding) ಬಳಿಕ ನಟಿ ಬದಲಾಗಿರುವ ಬಗ್ಗೆ ಅದಿತಿ ತಾಯಿ (Aditi’s Mother) ಮಾತನಾಡಿದ್ದಾರೆ. ಈ ಬಗ್ಗೆ ಅದಿತಿ ತಾಯಿ ಸ್ಪಷ್ಟನೆ ನೀಡಿದ್ದಾರೆ.

    ಮದುವೆ ನಂತರ ಕೂಡ ಮತ್ತೆ ಸಿನಿಮಾಗಳಲ್ಲಿ (Films) ಅದಿತಿ ಪ್ರಭುದೇವ ಆಕ್ಟೀವ್ ಆಗಿದ್ದಾರೆ. ಪತಿ ಯಶಸ್ ಅವರನ್ನ ಕೂಡ ಇತ್ತೀಚಿಗೆ ತನ್ನ ಸಿನಿಮಾ ಸೆಟ್‌ಗೆ ಕರೆದುಕೊಂಡು ಹೋಗಿದ್ದರು. ವೈವಾಹಿಕ ಬದುಕು ಮತ್ತು ನಟನೆ ಎರಡನ್ನ ಬ್ಯಾಲೆನ್ಸ್ ಮಾಡ್ತಿದ್ದಾರೆ. ಪತ್ನಿ ಅದಿತಿ ಸಿನಿಮಾ ಕಾರ್ಯಕ್ಕೆ ಪತಿ ಯಶಸ್ ಕೂಡ ಬೆಂಬಲಿಸುತ್ತಿದ್ದಾರೆ. ಹೀಗಿರುವಾಗ ಮಗಳ ಬಗ್ಗೆ ಅದಿತಿ ತಾಯಿ ಅಚ್ಚರಿಯ ಹೇಳಿಕೆಯೊಂದನ್ನ ನೀಡಿದ್ದಾರೆ.

    ನಟಿ ಅದಿತಿ ಅವರು ತಮ್ಮ ಯೂಟ್ಯೂಬ್‌ನಲ್ಲಿ ತಾಯಿ ಜೊತೆ ಪುಟ್ಟ ಚಿಟ್ ಚಾಟ್ ಮಾಡಿದ್ದಾರೆ. ತುಂಬಾ ಜನ ಹೆಣ್ಣು ಮಕ್ಕಳಿಗೆ ಮದುವೆಯಾಗಿ ಗಂಡನ ಮನೆಗೆ ಹೋಗುವಾಗ ತಾಯಂದಿರು ಸಲಹೆ ಸೂಚನೆಗಳನ್ನು ಕೊಡುತ್ತಾರೆ. ಹಾಗೆ ಮಾಡಬೇಡ ಹೀಗೆ ಮಾಡು ಅಂತ ಹೇಳಿ ಕಳುಹಿಸುತ್ತಾರೆ ಆದರೆ ನನ್ನ ಅಮ್ಮ ನನಗೆ ಏನೂ ಹೇಳಿಲ್ಲ. ಮದುವೆಯಾಗಿ 2 ತಿಂಗಳು ಕಳೆದಿದೆ ಅದಿಕ್ಕೆ ಈಗ ಕೇಳುತ್ತಿರುವೆ ನೀವು ನನಗೆ ಏನಾದರೂ ಸಲಹೆ ಕೊಡಬೇಕು ಅಂತಿದ್ದರೆ ಏನು ಹೇಳುತ್ತೀರಾ ಎಂದು ಅದಿತಿ ಪ್ರಭುದೇವ ತಾಯಿಯನ್ನ ಕೇಳಿದ್ದಾರೆ. ನನ್ನ ಮಗಳಿಗೆ ನಾನು ಯಾವ ಸಲಹೆನೂ ಕೊಡುವುದಿಲ್ಲ. ಚಿತ್ರರಂಗಕ್ಕೆ ಬರುವಾಗ ಏನೂ ಸಲಹೆ ಕೊಟ್ಟಿಲ್ಲ ನೀನು ಹೇಗಿದ್ಯಾ ಹಾಗೆ ಇರಮ್ಮ ಅಂತ ಹೇಳಿದೆ. ಈಗಲೂ ನೀನು ಹೇಗೆ ಇರ್ತೀಯಾ ಹಾಗೆ ಇರು. ಸಲಹೆ ಕೊಡುವುದು ಏನೂ ಇಲ್ಲ ಎಂದು ಅದಿತಿ ತಾಯಿ ಹೇಳುತ್ತಾರೆ. ಇದನ್ನೂ ಓದಿ: ಜಾಹೀರಾತಿನ ಪೋಸ್ಟ್‌ನೊಂದಿಗೆ ಮುದ್ದು ಮಗುವಿನ ಫೋಟೋ ಹಂಚಿಕೊಂಡ ನಟಿ ಆಲಿಯಾ

    ಮದುವೆ ಮೊದಲು ನನ್ನನ್ನು ನೋಡಿದ್ದೀರಿ ಮದುವೆ ಆದ್ಮೇಲೂ ನನ್ನನ್ನು ನೋಡುತ್ತಿದ್ದೀರಿ. ತುಂಬಾ ಜನರು ನನ್ನನ್ನು ಕೇಳುತ್ತಾರೆ ಏನು ಬದಲಾವಣೆಗಳು ಇದೆ ನಿಮ್ಮ ಲೈಫಲ್ಲಿ ಅಂತ. ವೈಯಕ್ತಿಕವಾಗಿ ನನಗೆ ಯಾವ ಬದಲಾವಣೆ ಕಾಣಿಸಿಲ್ಲ. ತಾಯಿಯಾಗಿ ನಿಮ್ಮ ಪ್ರಕಾರ ನಾನು ಏನಾದರೂ ಬದಲಾಯಿಸಿಕೊಳ್ಳಬೇಕು ಅಂತಿದ್ದರೆ ನೀವು ನನಗೆ ಯಾವ ವಿಚಾರದಲ್ಲಿ ಬದಲಾಗಬೇಕು ಎಂದು ಹೇಳುತ್ತೀರಾ? ಎಂದು ತಾಯಿಗೆ ಅದಿತಿ ಮರು ಪ್ರಶ್ನೆ ಮಾಡಿದ್ದಾರೆ. ನೀನು ಏನೂ ಬದಲಾಗಿಲ್ಲ.ಮದುವೆ ಮುನ್ನ ನೀನು ಹೈಪರ್ ಆಕ್ಟಿವ್ ಆಗಿದ್ದೆ ಈಗ ಹೈಪರ್ ಕಡಿಮೆ ಮಾಡಿ ಆಕ್ಟಿವ್ ಆಗಿರುವೆ ಅಷ್ಟೆ. ಆರಾಮ ಆಗಿರು ಎಂದು ಅದಿತಿ ತಾಯಿ ಹೇಳಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಟಿ ಅದಿತಿ ಪ್ರಭುದೇವ ಮದುವೆ ಡೇಟ್ ಫಿಕ್ಸ್

    ನಟಿ ಅದಿತಿ ಪ್ರಭುದೇವ ಮದುವೆ ಡೇಟ್ ಫಿಕ್ಸ್

    ಸ್ಯಾಂಡಲ್‌ವುಡ್‌ನ ಬಹುಬೇಡಿಕೆ ನಟಿ ಅದಿತಿ ಪ್ರಭುದೇವ(Aditi Prabhudeva) ಹಸೆಮಣೆ(Wedding) ಏರಲು ಸಜ್ಜಾಗಿದ್ದಾರೆ. ಸಾಕಷ್ಟು ಸಿನಿಮಾ ನಟಿಸಿ ಸೈ ಎನಿಸಿಕೊಂಡಿರುವ ನಾಯಕಿ ಅದಿತಿ ಈಗ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದೆ. ಅದಿತಿ ಮತ್ತು ಯಶಸ್ವಿ(Yashasvi) ಜೋಡಿಯ ಮದುವೆ ಆಮಂತ್ರಣ ಪ್ರತಿಕೆ ಕೂಡ ಇದೀಗ ಲಭ್ಯವಾಗಿದೆ.

     

    View this post on Instagram

     

    A post shared by ADITI PRABHUDEVA (@aditiprabhudeva)

    ಕಿರುತೆರೆಯ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಶ್ಯಾನೆ ಟಾಪ್ ಪ್ರತಿಭೆ ಅದಿತಿ ಪ್ರಭುದೇವ ಧೈಯಂ, ಬಜಾರ್, ಸಿಂಗಂ, ರಂಗನಾಯಕಿ, ಓಲ್ಡ್ಮಾಂಕ್ ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿರುವಾಗಲೇ ನಿಶ್ಚಿತಾರ್ಥ ಸುದ್ದಿಯ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಜೊತೆಗೆ ಶಾಕ್ ನೀಡಿದ್ದರು. ಈಗ ಗುರುಹಿರಿಯರ ಸಮ್ಮುಖದಲ್ಲಿ ಹಸೆಮಣೆ ಏರಲು ರೆಡಿಯಾಗಿದ್ದಾರೆ. ಇದನ್ನೂ ಓದಿ:ಸಂಬರ್ಗಿಯನ್ನು ಮನೆಗೆ ಕಳುಹಿಸಿ- ಕನ್ನಡಪರ ಹೋರಾಟಗಾರರ ಪಟ್ಟು

    ಉದ್ಯಮಿ ಮತ್ತು ಕಾಫಿ ಪ್ಲಾಂಟರ್ ಆಗಿರುವ ಯಶಸ್ವಿ ಜೊತೆ ಇದೇ ನವೆಂಬರ್ 27ರಂದು ಮದುವೆ ಆಗುತ್ತಿದ್ದಾರೆ. ಗುರುಹಿರಿಯರ ಸಮ್ಮುಖದಲ್ಲಿ ಈ ಜೋಡಿ ಹಸೆಮಣೆ ಏರುತ್ತಿದ್ದಾರೆ. ಇದೇ ತಿಂಗಳು ವಿವಾಹವಿರುವುದರಿಂದ ನಟನೆಯಿಂದ ಬ್ರೇಕ್ ಪಡೆಯಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]