Tag: Yashas

  • ಕೊನೆಗೂ ಮಗಳ ಮುಖ ರಿವೀಲ್ ಮಾಡಿದ ಅದಿತಿ ಪ್ರಭುದೇವ

    ಕೊನೆಗೂ ಮಗಳ ಮುಖ ರಿವೀಲ್ ಮಾಡಿದ ಅದಿತಿ ಪ್ರಭುದೇವ

    ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವ (Aditi Prabhudeva) ಅವರು ಮಗಳಿಗೆ ಜನ್ಮ ನೀಡಿದ 6 ತಿಂಗಳ ನಂತರ ಮಗಳ ಮುಖ ರಿವೀಲ್ ಮಾಡಿದ್ದಾರೆ. ಮುದ್ದು ಮಗಳ ಫೋಟೋ ಹಂಚಿಕೊಂಡು ವಿಶೇಷವಾಗಿ ನಟಿ ಹಾರೈಸಿದ್ದಾರೆ. ಇದನ್ನೂ ಓದಿ:ಗುಂಡೇಟಿನಿಂದ ಆಸ್ಪತ್ರೆ ಸೇರಿದ್ದ ನಟ ಗೋವಿಂದ ಡಿಸ್ಚಾರ್ಜ್

    ಅದಿತಿ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿ 6 ತಿಂಗಳಾಗಿದೆ. ಇದೇ ಏ.4ರಂದು ಹೆಣ್ಣು ಮಗುವನ್ನು ನಟಿ ಬರಮಾಡಿಕೊಂಡಿದ್ದರು. ಈಗ ಮಗಳಿಗೆ (Daughter) ‘ನೇಸರ’ (Nesara) ಎಂದು ಮುದ್ದಾದ ಹೆಸರನಿಟ್ಟಿದ್ದಾರೆ. ನೇಸರ ಅಂದರೆ ಪ್ರಕೃತಿ ಎಂಬರ್ಥವಾಗಿದೆ.

     

    View this post on Instagram

     

    A post shared by ADITI PRABHUDEVA (@aditiprabhudeva)

    ನಮ್ಮ ಬಾಳ ನೇಸರ. ಮುದ್ದು ಮಗಳೇ, ಇಂದಿಗೆ ನೀನು ನನ್ನ ಮಡಿಲನ್ನು ತುಂಬಿ ಆರು ತಿಂಗಳಾಯಿತು. ನೀನು ಬಂದಮೇಲೆ ನಮ್ಮ ಬದುಕೆ ಬದಲಾಯಿತು, ನಮ್ಮ ಜೀವನ ಸುಂದರವಾಯಿತು, ಸಂಪೂರ್ಣವಾಯಿತು ಹುಟ್ಟು ಹಬ್ಬದ ಶುಭಾಶಯಗಳು ಮಗಳೇ ನೇಸರ ಎಂದು ನಟಿ ಹಾರೈಸಿದ್ದಾರೆ. ಕೆಂಪು ಬಣ್ಣದ ಡ್ರೆಸ್ ಧರಿಸಿರುವ ಮಗಳ ಜೊತೆಗಿನ ಫೋಟೋ ಶೇರ್ ಮಾಡಿದ್ದಾರೆ.

    ಅಂದಹಾಗೆ, ಬೆಂಗಳೂರಿನಲ್ಲಿ ಉದ್ಯಮಿ ಯಶಸ್ (Yashas) ಜೊತೆ 2022ರಲ್ಲಿ ಅದಿತಿ ಪ್ರಭುದೇವ ಮದುವೆಯಾದರು. ಗುರುಹಿರಿಯರು ನಿಶ್ಚಿಯಿಸಿದ ಹುಡುಗನನ್ನೇ ಮೆಚ್ಚಿ ನಟಿ ಮದುವೆಯಾದರು.

  • ನಾನು ಮದುವೆಯಾಗುವ ಹುಡುಗ ಅದಿತಿ ಪ್ರಭುದೇವ ಗಂಡನ ಥರ ಇರಬೇಕು- ಸೋನು

    ನಾನು ಮದುವೆಯಾಗುವ ಹುಡುಗ ಅದಿತಿ ಪ್ರಭುದೇವ ಗಂಡನ ಥರ ಇರಬೇಕು- ಸೋನು

    ‘ಬಿಗ್ ಬಾಸ್’ (Bigg Boss Kannada) ಖ್ಯಾತಿಯ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಸೋಶಿಯಲ್ ಮೀಡಿಯಾದಲ್ಲಿ ಸದಾ ಒಂದಲ್ಲಾ ಒಂದು ವಿಚಾರವಾಗಿ ಸೆನ್ಸೇಷನ್ ಕ್ರಿಯೆಟ್ ಮಾಡ್ತಿರುತ್ತಾರೆ. ಇದೀಗ ಮದುವೆ ಯಾವಾಗ? ಮದುವೆಯಾಗುವ (Wedding) ಹುಡುಗ ಹೇಗಿರಬೇಕು ಎಂದು ಕೇಳಿದ್ರೆ, ಕನ್ನಡದ ಶ್ಯಾನೆ ಟಾಪ್ ನಟಿ ಅದಿತಿ ಅವರ ಪತಿ ಯಶಸ್ ಕಡೆ ಬೆಟ್ಟು ತೋರಿಸಿದ್ದಾರೆ.

    ಸಂದರ್ಶನದಲ್ಲಿ ಮದುವೆ ಬಗ್ಗೆ ಸೋನು ಮಾತನಾಡಿ, ಮೊದಲಿಗೆ ಮದುವೆ ಅನ್ನೋದು ನನ್ನ ತಲೆಯಲ್ಲಿ ಇಲ್ಲ. ಆದರೆ ನಮ್ಮ ಕನ್ನಡದ ನಟಿ ಅದಿತಿ ಪ್ರಭುದೇವ (Aditi Prabhudeva) ಅಂದರೆ ತುಂಬಾ ಇಷ್ಟ. ಹುಡುಗಿಯರಿಗೆ ಹುಡುಗಿಯರೇ ಕ್ರಶ್ ಆದರೆ ಯಾರು ಅಂತಾ ಕೇಳಿದ್ರೆ? ನಾನು ಅದಿತಿ ಮೇಡಂ ಎನ್ನುತ್ತೇನೆ. ಅವರು ಮಾತನಾಡುವ ರೀತಿ, ತೊಡುವ ಬಟ್ಟೆ ನನಗಿಷ್ಟ ಎಂದು ಸೋನು ಮಾತನಾಡಿದ್ದಾರೆ.

    ಮದುವೆಯಾಗುವ ಹುಡುಗ ಅದಿತಿ ಪ್ರಭುದೇವ ಅವರ ಗಂಡನ ಥರ ಇರಬೇಕು. ಅದಿತಿ- ಯಶಸ್ ಬಾಂಧವ್ಯ ನೋಡಿದ್ರೆ ಖುಷಿಯಾಗುತ್ತದೆ. ಇಬ್ಬರ ಫೋಟೋ, ವಿಡಿಯೋ ನೋಡಿದಾಗ ನನಗೂ ಅದಿತಿ ಗಂಡನ ಥರ ಹುಡುಗ ಬೇಕು ಅನಿಸುತ್ತದೆ ಎಂದು ಮದುವೆಯಾಗುವ ಹುಡುಗನ ಬಗೆಗಿನ ಕನಸನ್ನು ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ:ಪ್ಯಾಲೆಸ್ತೀನ್ ಪರ ಬ್ಯಾಟಿಂಗ್ ಮಾಡಿದಕ್ಕೆ ಮಿಯಾಗೆ ಕೆಲಸ ಹೋಯ್ತು

    ಟೀಕೆ, ಟ್ರೋಲ್‌ಗಳ (Troll) ವಿಚಾರಕ್ಕೆ ಬಂದರೆ ನನಗೆ ರಶ್ಮಿಕಾ ಮಂದಣ್ಣ (Rashmika Mandanna) ನನಗೆ ಸ್ಪೂರ್ತಿ ಎಂದು ಸೋನು ಮಾತನಾಡಿದ್ದಾರೆ. ‘ಕಿರಿಕ್ ಪಾರ್ಟಿ’ (Kirik Party) ನಟಿ ರಶ್ಮಿಕಾ ಮಂದಣ್ಣ ಎಂದರೆ ತನಗಿಷ್ಟ ಎಂದು ಸಂದರ್ಶನದಲ್ಲಿ ಸೋನು ನೆಚ್ಚಿನ ಬಗ್ಗೆ ಹೇಳಿದ್ದಾರೆ. ಅವರಿಂದ ಕಲಿತಿರೋದು ತುಂಬಾನೇ ಇದೆ. ಯಾರೆಲ್ಲಾ ಅವರನ್ನ ಹೇಟ್ ಮಾಡುತ್ತಾರೆ ಅದು ನನಗೆ ಬೇಕಿಲ್ಲ. ರಶ್ಮಿಕಾ ನನ್ನ ಸ್ಪೂರ್ತಿ ಹೇಗೆಲ್ಲಾ ನೆಗೆಟಿವಿಯನ್ನ ದೂರ ಇಡಬೇಕು ಎಂದು ಅವರಿಂದ ಕಲಿತಿದ್ದೇನೆ.

    ನೀನು ಸಿಕ್ಕಾಪಟ್ಟೆ ಟ್ರೋಲ್ ಆಗ್ತಿದ್ಯಾ ಅಂದರೆ ಮಾತು ಬೇಡ. ನಮ್ಮ ಸಾಧನೆಯಿಂದ ಉತ್ತರ ಕೊಡಬೇಕು. ನೀವೊಂದು ಸಿನಿಮಾ ಮಾಡುತ್ತಿದ್ದೀರಾ ಅಂದರೆ ಅಲ್ಲೇ ಟ್ರೋಲಿಗರಿಗೆ ಉತ್ತರ ಸಿಗುತ್ತದೆ. ಸೇಮ್ ನನಗೆ ರಶ್ಮಿಕಾ ಥರನೇ ಬೆಳೆಯಬೇಕು ಎಂದು ಆಸೆ ಇದೆ. ಅಮಿತಾಬ್ ಬಚ್ಚನ್ ಜೊತೆ ಎಲ್ಲ ಅವರು ಆಕ್ಟ್ ಮಾಡಿದ್ದಾರೆ. ಅದೆಲ್ಲಾ ಈಸಿ ಅಲ್ಲ. ಇನ್ನೂ ಹೇಳಬೇಕು ಅಂದರೆ ರಶ್ಮಿಕಾ ಅವರ ಬಿಂಬ ನಾನು ಎಂದು ಸೋನು ಮಾತನಾಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೋಟ್ಯಧಿಪತಿಯನ್ನ ಮದುವೆ ಆಗಿದ್ದೀರಾ ಅನ್ನೋರಿಗೆ ಅದಿತಿ ಪ್ರಭುದೇವ ಖಡಕ್ ಉತ್ತರ

    ಕೋಟ್ಯಧಿಪತಿಯನ್ನ ಮದುವೆ ಆಗಿದ್ದೀರಾ ಅನ್ನೋರಿಗೆ ಅದಿತಿ ಪ್ರಭುದೇವ ಖಡಕ್ ಉತ್ತರ

    ಸ್ಯಾಂಡಲ್‌ವುಡ್ (Sandalwood) ನಟಿ ಅದಿತಿ ಪ್ರಭುದೇವ (Aditi Prabhudeva) ವೈವಾಹಿಕ ಬದುಕಿನ ಜೊತೆ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಮದುವೆ ನಂತರ ಬ್ಯಾಕ್ ಟು ಬ್ಯಾಕ್ ಸಿನಿಮಾ ರಿಲೀಸ್‌ಗೆ ರೆಡಿಯಿದೆ. ಹೀಗಿರುವಾಗ ಸಿನಿಮಾ ಕಾರ್ಯಕ್ರಮವೊಂದರಲ್ಲಿ ತಮ್ಮ ವೈಯಕ್ತಿಕ ವಿಚಾರಗಳನ್ನ ಪ್ರಶ್ನೆ ಮಾಡುವವರಿಗೆ ಖಡಕ್ ಉತ್ತರ ನೀಡಿದ್ದಾರೆ.

    ಶ್ಯಾನೆ ಟಾಪ್ ನಟಿ ಅದಿತಿ ಇತ್ತೀಚಿಗೆ ಯಶಸ್ (Yashas) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆ ಬಳಿಕ ‘Once Upon A Time In Jamaligudda’ ಸಿನಿಮಾ ಮೂಲಕ ಮೋಡಿದ್ದರು. ಇನ್ನೂ ಅದಿತಿ ನಟನೆಯ ಸಾಕಷ್ಟು ಸಿನಿಮಾಗಳು ರಿಲೀಸ್‌ಗೆ ರೆಡಿಯಿದೆ. ಕೋಟ್ಯಧಿಪತಿ ಯುವಕನ ಕೈಹಿಡಿದಿದ್ದೀರಾ ಅನ್ನೋರಿಗೆ ನಟಿ ತಿರುಗೇಟು ನೀಡಿದ್ದಾರೆ.

     

    View this post on Instagram

     

    A post shared by ADITI PRABHUDEVA (@aditiprabhudeva)

    ನನ್ನ ಯೂಟ್ಯೂಬ್‌ನಲ್ಲಿ ಕೆಲವರು ಕಾಮೆಂಟ್ ಮಾಡಿದ್ದರು ನೀವು ರೈತನ ಮದುವೆ ಆಗುತ್ತೀನಿ ಎಂದು ಕೋಟ್ಯಧಿಪತಿಯನ್ನ ಮದುವೆ ಆಗಿದ್ದೀರಾ ಅನ್ನೋರಿದ್ದಾರೆ. ಅವರಿಗೆ ನನ್ನ ಉತ್ತರ ಏನೆಂದರೆ ಇದೆಲ್ಲಾ ನಿಮಗೆ ಯಾರು ಹೇಳಿದ್ದರು ನೀವು ಬಂದು ನೋಡಿದ್ದೀರಾ. ಏನೇ ಇದ್ದರೂ ಅದು ಅವರ ಬದುಕು. ನಮ್ಮ ಅಪ್ಪ ಇಷ್ಟು ಮಾಡಿದ್ದಾರೆ ಅದನ್ನು ಹೊಡ್ಕೊಂಡು ಚೆನ್ನಾಗಿ ತಿಂದು ಬಿಡುತ್ತೀನಿ ನನ್ನ ಗಂಡ ಮಾಡಿದ್ದಾನೆ ಅದನ್ನು ಹೊಡ್ಕೊಂಡು ತಿಂದು ಬಿಡುತ್ತೀನಿ ಅನ್ನೋ ವ್ಯಕ್ತಿ ನಾನಲ್ಲ. ಇದನ್ನೂ ಓದಿ: ರಾಖಿ ಸಾವಂತ್ ಪತಿ, ಮೈಸೂರು ಹುಡುಗ ಆದಿಲ್ ಪೊಲೀಸ್ ವಶಕ್ಕೆ

    ನನಗೆ ನನ್ನ ಅಸ್ತಿತ್ವ ತುಂಬಾ ಮುಖ್ಯವಾಗುತ್ತದೆ ಯಾರ ಮೇಲೆ ಕೂಡ ಡಿಪೆಂಡ್ ಆಗಬಾರದು ಯಾರಿಗೂ ಭಾರ ಆಗಬಾರದು ಎಷ್ಟು ಆಗುತ್ತೆ ಅಷ್ಟು ದುಡಿಯಬೇಕು. ಒಳ್ಳೆಯ ಬ್ಯಾನರ್ ಸಿನಿಮಾ ಸಿಗಬೇಕು ಒಳ್ಳೆಯ ಕಥೆ ಇರಬೇಕು ನನ್ನ ಪಾತ್ರಕ್ಕೆ ಎಷ್ಟು ಪ್ರಾಮುಖ್ಯತೆ ಇರುತ್ತದೆ ಇದೆಲ್ಲಾ ನೋಡಿಕೊಂಡು ಕಥೆ ಒಪ್ಪಿಕೊಳ್ಳುವೆ. ಕನ್ನಡ ಚಿತ್ರರಂಗಕ್ಕೆ ಸಾಯುವವರೆಗೂ ಋಣಿಯಾಗಿರುವೆ. ಅಯ್ಯೋ ಲೈಫ್ ಹಾಗೆ ಹೀಗೆ ಅನ್ನೋ ಆತಂಕ ಇಲ್ಲ ಮೈಂಡ್ ಫ್ರೀ ಆಗಿದೆ ಎಂದು ಅದಿತಿ ರಿಯಾಕ್ಟ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅದಿತಿ ಪ್ರಭುದೇವ ವಿವಾಹಕ್ಕೆ ಸಿದ್ಧಗೊಂಡ ಅರಮನೆ ಮೈದಾನ

    ಅದಿತಿ ಪ್ರಭುದೇವ ವಿವಾಹಕ್ಕೆ ಸಿದ್ಧಗೊಂಡ ಅರಮನೆ ಮೈದಾನ

    ಟಿ ಅದಿತಿ ಪ್ರಭುದೇವ್ ನಾಳೆ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇಂದು ಅವರ ಆರತಕ್ಷತೆ ನಡೆಯಲಿದ್ದು, ನಾಳೆ ಹಸೆಮಣೆ ಏರುತ್ತಿದ್ದಾರೆ. ಇದೊಂದು ಅರೇಂಜ್ಡ್ ಮ್ಯಾರೇಜ್ ಆಗಿದ್ದು, ಮನೆಯವರೇ ತೋರಿಸಿದಿ ಯಶಸ್ವಿ ಜೊತೆ ನಾಳೆ ವಿವಾಹ ಬಂಧನಕ್ಕೆ ಒಳಗಾಗಲಿದ್ದಾರೆ. ಇಂದು ಅರಮನೆ ಮೈದಾನದಲ್ಲಿ ನಡೆಯಲಿರುವ ಅದ್ದೂರಿ ಆರತಕ್ಷತೆಯಲ್ಲಿ ಸ್ಯಾಂಡಲ್ ವುಡ್ ಹಾಗೂ ರಾಜಕೀಯ ಗಣ್ಯರು ಆಗಮಿಸಲಿದ್ದಾರೆ.

    ಇವರು ಕನ್ನಡ ಸಿನಿಮಾ ರಂಗದ ಬಹುಬೇಡಿಕೆಯ ನಟಿಯಾಗಿದ್ದು, ಒಂದೇ ಒಂದು ವಿವಾದವಿಲ್ಲದೇ ಸ್ಟಾರ್ ನಟಿಯಾಗಿ ಬೆಳೆದಿರುವ ಅದಿತಿ ಪ್ರಭುದೇವ ಅವರ ಅರಿಶಿನ ಶಾಸ್ತ್ರ ನಿನ್ನೆ ನಡೆದದ್ದು ಆ ಫೋಟೋಗಳನ್ನು ಅದಿತಿ ಪ್ರಭುದೇವ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಉದ್ಯಮಿ ಯಶಸ್ ಅವರ ಜೊತೆ ಹೊಸ ಜೀವನಕ್ಕೆ ಅದಿತಿ ಕಾಲಿಡುತ್ತಿದ್ದು, ಈಗಾಗಲೇ ತಮ್ಮ ಭಾವಿ ಪತಿಯನ್ನು ಅಭಿಮಾನಿಗಳಿಗೆ ಹಲವಾರು ಬಾರಿ ಪರಿಚಯಿಸಿದ್ದಾರೆ. ಒಂದು ದಿನ ತಮ್ಮ ಯಶಸ್ವಿ ಜೊತೆ ಕಾಡಿನಲ್ಲಿ ಕಳೆದ ಅನುಭವವನ್ನೂ ಅವರು ಹಂಚಿಕೊಂಡಿದ್ದರು. ಇದನ್ನೂ ಓದಿ: `ಗಾಲ್ವಾನ್ ಹಾಯ್’ ಎಂದ ನಟಿಗೆ ಚಳಿ ಬಿಡಿಸಿದ ಸಚಿವ – ಕಾನೂನು ಕ್ರಮಕ್ಕೆ ಚಿಂತನೆ

    ತಾವು ಸಿನಿಮಾ ರಂಗದಲ್ಲಿ ಸಕ್ರೀಯರಾಗಿದ್ದರೂ, ಅದಿತಿ ಮಾತ್ರ ಹುಡುಗನನ್ನು ಆಯ್ಕೆ ಮಾಡಿಕೊಂಡಿದ್ದು ಉದ್ಯಮ ಕ್ಷೇತ್ರದವರನ್ನು ಯಶಸ್ ಉದ್ಯಮಿಯಾಗಿದ್ದು, ಕಾಫಿ ಪ್ಲಾಂಟರ್ ಕೂಡ ಆಗಿದ್ದಾರೆ. ಇಂತಹ ಹುಡುಗನನ್ನು ಪಡೆಯುವುದಕ್ಕಾಗಿಯೇ ನಾನು ಇಷ್ಟು ದಿನ ಕಾದಿದ್ದೆ ಎಂದೂ ಅವರು ಹುಡುಗನ ಬಗ್ಗೆ ಬರೆದುಕೊಂಡಿದ್ದರು.

    ಈಗಾಗಲೇ ತಮ್ಮ ಮದುವೆಯ ಆಹ್ವಾನ ಪತ್ರಿಕೆಯನ್ನು ಚಿತ್ರೋದ್ಯಮದ ಅನೇಕರಿಗೆ ನೀಡಿದ್ದು, ನಾಳೆ ಸಾಕಷ್ಟು ಕಲಾವಿದರು ಮತ್ತು ತಂತ್ರಜ್ಞರು ಅದಿತಿ ಪ್ರಭುದೇವ್ ಅವರ ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ತಿಂಗಳು ಅದಿತಿ ಅವರ ಎರಡು ಚಿತ್ರಗಳು ರಿಲೀಸ್ ಆಗಿದ್ದು, ಇವರ ಪಾತ್ರಕ್ಕೆ ಮೆಚ್ಚುಗೆಯ ಮಾತೂ ಕೇಳಿ ಬಂದಿದೆ.

    ಮದುವೆಯ ನಂತರ ಅದಿತಿ ಸಿನಿಮಾ ರಂಗದಲ್ಲೇ ಮುಂದುವರೆಯುತ್ತಾರಾ ಅಥವಾ ಸಿನಿಮಾ ರಂಗದಿಂದ ದೂರವಾಗುತ್ತಾರಾ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದ್ದು, ಮುಂದಿನ ದಿನಗಳಲ್ಲಿ ಅದಿತಿ ಅವರೇ ಇದಕ್ಕೆ ಉತ್ತರವನ್ನೂ ನೀಡಲಿದ್ದಾರೆ. ಬಹುಶಃ ಸಿನಿಮಾ ರಂಗವನ್ನು ತೊರೆಯುವುದಿಲ್ಲ ಎಂದು ಹೇಳಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ನಾಳೆ ನಟಿ ಅದಿತಿ ಪ್ರಭುದೇವ್ ಮದುವೆ : ಇಂದು ಅರಿಶಿನ ಶಾಸ್ತ್ರ

    ನಾಳೆ ನಟಿ ಅದಿತಿ ಪ್ರಭುದೇವ್ ಮದುವೆ : ಇಂದು ಅರಿಶಿನ ಶಾಸ್ತ್ರ

    ನ್ನಡ ಸಿನಿಮಾ ರಂಗದ ಬಹುಬೇಡಿಕೆಯ ನಟಿ, ಒಂದೇ ಒಂದು ವಿವಾದವಿಲ್ಲದೇ ಸ್ಟಾರ್ ನಟಿಯಾಗಿ ಬೆಳೆದಿರುವ ಅದಿತಿ ಪ್ರಭುದೇವ ಅವರ ವಿವಾಹ ನಾಳೆ ಬೆಂಗಳೂರಿನ  ಅರಮನೆ ಮೈದಾನದಲ್ಲಿ ನಡೆಯಲಿದೆ. ಇಂದು ಅರಿಶಿನ ಶಾಸ್ತ್ರ ನಡೆಯುತ್ತಿದ್ದು, ಆ ಫೋಟೋಗಳನ್ನು ಅದಿತಿ ಪ್ರಭುದೇವ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    ಉದ್ಯಮಿ ಯಶಸ್ ಅವರ ಜೊತೆ ಹೊಸ ಜೀವನಕ್ಕೆ ಅದಿತಿ ಕಾಲಿಡುತ್ತಿದ್ದು, ಈಗಾಗಲೇ ತಮ್ಮ ಭಾವಿ ಪತಿಯನ್ನು ಅಭಿಮಾನಿಗಳಿಗೆ ಹಲವಾರು ಬಾರಿ ಪರಿಚಯಿಸಿದ್ದಾರೆ. ಒಂದು ದಿನ ತಮ್ಮ ಯಶಸ್ವಿ ಜೊತೆ ಕಾಡಿನಲ್ಲಿ ಕಳೆದ ಅನುಭವವನ್ನೂ ಅವರು ಹಂಚಿಕೊಂಡಿದ್ದರು. ಇದನ್ನೂ ಓದಿ: ಮದುವೆ ಬಗ್ಗೆ ವೈಷ್ಣವಿ ತುಂಬಾ ಕನಸು ಕಂಡಿದ್ದಳು: ತಂದೆ ರವಿಕುಮಾರ್

    ತಾವು ಸಿನಿಮಾ ರಂಗದಲ್ಲಿ ಸಕ್ರೀಯರಾಗಿದ್ದರೂ, ಅದಿತಿ ಮಾತ್ರ ಹುಡುಗನನ್ನು ಆಯ್ಕೆ ಮಾಡಿಕೊಂಡಿದ್ದು ಉದ್ಯಮ ಕ್ಷೇತ್ರದವರನ್ನು ಯಶಸ್ ಉದ್ಯಮಿಯಾಗಿದ್ದು, ಕಾಫಿ ಪ್ಲಾಂಟರ್ ಕೂಡ ಆಗಿದ್ದಾರೆ. ಇಂತಹ ಹುಡುಗನನ್ನು ಪಡೆಯುವುದಕ್ಕಾಗಿಯೇ ನಾನು ಇಷ್ಟು ದಿನ ಕಾದಿದ್ದೆ ಎಂದೂ ಅವರು ಹುಡುಗನ ಬಗ್ಗೆ ಬರೆದುಕೊಂಡಿದ್ದರು.

    ಈಗಾಗಲೇ ತಮ್ಮ ಮದುವೆಯ ಆಹ್ವಾನ ಪತ್ರಿಕೆಯನ್ನು ಚಿತ್ರೋದ್ಯಮದ ಅನೇಕರಿಗೆ ನೀಡಿದ್ದು, ನಾಳೆ ಸಾಕಷ್ಟು ಕಲಾವಿದರು ಮತ್ತು ತಂತ್ರಜ್ಞರು ಅದಿತಿ ಪ್ರಭುದೇವ್ ಅವರ ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ತಿಂಗಳು ಅದಿತಿ ಅವರ ಎರಡು ಚಿತ್ರಗಳು ರಿಲೀಸ್ ಆಗಿದ್ದು, ಇವರ ಪಾತ್ರಕ್ಕೆ ಮೆಚ್ಚುಗೆಯ ಮಾತೂ ಕೇಳಿ ಬಂದಿದೆ.

    ಮದುವೆಯ ನಂತರ ಅದಿತಿ ಸಿನಿಮಾ ರಂಗದಲ್ಲೇ ಮುಂದುವರೆಯುತ್ತಾರಾ ಅಥವಾ ಸಿನಿಮಾ ರಂಗದಿಂದ ದೂರವಾಗುತ್ತಾರಾ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದ್ದು, ಮುಂದಿನ ದಿನಗಳಲ್ಲಿ ಅದಿತಿ ಅವರೇ ಇದಕ್ಕೆ ಉತ್ತರವನ್ನೂ ನೀಡಲಿದ್ದಾರೆ. ಬಹುಶಃ ಸಿನಿಮಾ ರಂಗವನ್ನು ತೊರೆಯುವುದಿಲ್ಲ ಎಂದು ಹೇಳಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಅದಿತಿ ಪ್ರಭುದೇವ ಮದುವೆ ಆಗಲಿರುವ ಹುಡುಗ ಯಾರು ಗೊತ್ತಾ?

    ಅದಿತಿ ಪ್ರಭುದೇವ ಮದುವೆ ಆಗಲಿರುವ ಹುಡುಗ ಯಾರು ಗೊತ್ತಾ?

    ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವ, ಕೆಲ ದಿನಗಳ ಹಿಂದೆ ನಿಶ್ಚಿತಾರ್ಥವಾಗಿರುವ ವಿಚಾರವನ್ನು ರಿವೀಲ್ ಮಾಡಿದ್ದರು. ಅವರನ್ನು ಮದುವೆಯಾಗುತ್ತಿರುವ ಹುಡುಗ ಯಾರು ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ. ಈಗ ಅದಿತಿ ಪ್ರಭುದೇವ ಮದುವೆಯಾಗುತ್ತಿರುವ ಹುಡುಗ ಯಾರು ಎನ್ನುವ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಸಿಕ್ಕಿದೆ.

    ಅದಿತಿ ಪ್ರಭುದೇವ ಅವರ ಭಾವಿ ಪತಿ ಹೆಸರು ಯಶಸ್, ಇವರು ಕಾಫಿ ಎಸ್ಟೇಟ್‌ನ ಮಾಲೀಕ ಹಾಗೂ ಬ್ಯುಸಿನೆಸ್‌ಮ್ಯಾನ್ ಆಗಿದ್ದಾರೆ. ಇದೇ ಡಿ.26ರಂದು ಅದಿತಿ ಪ್ರಭುದೇವ ಯಶಸ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ತಮ್ಮ ಹುಡುಗನ ಕುರಿತಾಗಿ ಖಾಸಗಿ ವಾಹಿನಿ ಸಂದರ್ಶನದಲ್ಲಿ ಅದಿತಿ ಅವರು ಮಾತನಾಡುತ್ತಾ ಹಲವು ಇಂಟರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

    ನಾನು ನಿಶ್ಚಿತಾರ್ಥ ಮಾಡಿಕೊಂಡಿದ್ದು ಎಲ್ಲರಿಗೂ ಆಶ್ಚರ್ಯವಾಗಿದೆ. ಆದರೆ ನಿಶ್ಚಿತಾರ್ಥ ಸಡನ್ ನಿರ್ಧಾರವಾಗಿದೆ. ನನ್ನ ಪೋಷಕರು ನನ್ನನ್ನು ಮದುವೆಯಾಗು ಎಂದು ಒತ್ತಾಯ ಮಾಡುತ್ತಿದ್ದರು. ವರನಿಗಾಗಿ ಹುಡುಕಾಟ ಮಾಡಲು ಪ್ರಾರಂಭಿಸಿದ್ದರು. ಅವರು ತೋರಿಸಿರುವ ಹುಡುಗ ಯಶಸ್ ನನಗೂ ಇಷ್ಟವಾದರು. ನಂತರ ಹಾಸನದಲ್ಲಿ ನಿಶ್ಚಿತಾರ್ಥ ಮಾಡಿಕೊಂಡೆವು ಎಂದು ಸಂತೋಷದಿಂದ ಹೇಳಿಕೊಂಡಿದ್ದಾರೆ.

    ನಮ್ಮಿಬ್ಬರದ್ದೂ ಅರೆಂಜ್ಡ್ ಮದುವೆ. ನನಗೆ ಪ್ರಾಣಿ, ಪಕ್ಷಿ, ಪ್ರಕೃತಿಯೆಂದರೆ ತುಂಬಾ ಇಷ್ಟ. ಕೂರ್ಗಲ್ಲಿ ವಾಸಿಸುತ್ತಿರುವ ಯಶಸ್ ಕೂಡ ಇದೇ ಮನೋಭಾವವನ್ನು ಹೊಂದಿರುವವರಾಗಿದ್ದಾರೆ. ನನ್ನ ವೃತ್ತಿ ಜೀವನಕ್ಕೆ ಯಶಸ್ ಹಾಗೂ ಅವರ ಕುಟುಂಬದವರು ಬೆಂಬಲ ನೀಡಿದ್ದಾರೆ. ಗಾಸಿಪ್‌ಗಳನ್ನು ಹುಟ್ಟುಹಾಕಲು ನನಗೆ ಇಷ್ಟವಿಲ್ಲ. ಇದರಿಂದಾಗಿ ನಿಶ್ಚಿತಾರ್ಥವನ್ನು ಅಧಿಕೃತ ಘೋಷಣೆ ಮಾಡಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ:  ಮೊದಲ ಮಗುವಿನ ನಿರೀಕ್ಷೆಯಲ್ಲಿ ಸಂಜನಾ ಗಲ್ರಾನಿ

    ಯಶಸ್ ಅವರು ಅದಿತಿ ಅಭಿನಯದ ಪರ್ಫೆಕ್ಟ್ ಗರ್ಲ್ ಅಲ್ಬಂ ಸಾಂಗ್‌ ನಲ್ಲಿ ಅವರನ್ನು ಮೊದಲು ನೋಡಿದ್ದರು. ಇವರನ್ನು ನೋಡಿ ಇಷ್ಟಪಟ್ಟಿರುವ ವಿಚಾರವನ್ನು ಮನೆಯವರಿಗೆ ತಿಳಿಸಿದ್ದರು. ನಂತರ ಯಶಸ್ ಪೋಷಕರು ಅದಿತಿ ಮನೆಯಲ್ಲೂ ಹುಡುಗನನ್ನು ಹುಡುಕುತ್ತಿರುವ ವಿಷಯ ತಿಳಿದು ಇಬ್ಬರ ಮನೆಯವರು ಮದುವೆ ಪ್ರಸ್ತಾಪ ಮಾಡಿದ್ದರು. ನಂತರ ನಿಶ್ಚಿತಾರ್ಥ ಮಾಡಿಕೊಂಡೆವು ಎಂದು ತಿಳಿಸಿದ್ದಾರೆ. ಸಾಲು ಸಾಲು ಹಿಟ್ ಸಿನೆಮಾ ನೀಡುತ್ತಿರುವ ಅದಿತಿ ಪ್ರಭುದೇವ ಸದ್ಯ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ: ಪುನೀತ್ ಭಾವಚಿತ್ರದ ಎದುರೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ