Tag: Yash Dhull

  • ಮಕ್ಕಳನ್ನ ಟೂರ್ನಿಗೆ ಕಳುಹಿಸಿ ಅಂತಾ ಕೇಳಿರಲಿಲ್ಲ – ಟೀಂ ಇಂಡಿಯಾ ವಿರುದ್ಧ ಪಾಕ್‌ ಕ್ರಿಕೆಟಿಗ ವ್ಯಂಗ್ಯ

    ಮಕ್ಕಳನ್ನ ಟೂರ್ನಿಗೆ ಕಳುಹಿಸಿ ಅಂತಾ ಕೇಳಿರಲಿಲ್ಲ – ಟೀಂ ಇಂಡಿಯಾ ವಿರುದ್ಧ ಪಾಕ್‌ ಕ್ರಿಕೆಟಿಗ ವ್ಯಂಗ್ಯ

    ಇಸ್ಲಾಮಾಬಾದ್‌: ಕಳೆದ ಜುಲೈನಲ್ಲಿ ಕೊಲಂಬೊದಲ್ಲಿ ನಡೆದ ಪುರುಷರ ಎಮರ್ಜಿಂಗ್‌ ಏಷ್ಯಾಕಪ್‌-2023 (Emerging Asia Cup 2023) ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನ-ಎ ತಂಡದ ವಿರುದ್ಧ ಭಾರತ-ಎ ತಂಡ ಸೋತ ನಂತರ ಪಾಕಿಸ್ತಾನ (Pakistan) ತಂಡದ ವಿರುದ್ಧ ಭಾರೀ ಟೀಕೆಗಳು ವ್ಯಕ್ತವಾಗ್ತಿದೆ.

    ಪಾಕಿಸ್ತಾನ (Pakistan A Team) ಅನೇಕ ಹಿರಿಯರನ್ನೊಳಗೊಂಡ ಹಾಗೂ ಅಂತಾರಾಷ್ಟ್ರೀಯ ಅನುಭವ ಪಡೆದ ತಂಡವನ್ನ ಕಣಕ್ಕಿಳಿಸಿತ್ತು. ಈ ಕಾರಣದಿಂದಾಗಿ ಭಾರತ ತಂಡ ಸೋಲುವಂತಾಯಿತು ಎಂಬ ಆರೋಪಗಳು ಕೇಳಿಬಂದಿವೆ. ಇದಕ್ಕೆ ಪ್ರತಿಕ್ರಿಯಿಸಿರುವ ಪಾಕ್‌ ಎ ತಂಡದ ಮಾರ್ಗದರ್ಶಕ ಹಾಗೂ ಕ್ರಿಕೆಟಿಗ ಮೊಹಮ್ಮದ್‌ ಹ್ಯಾರಿಸ್‌ (Mohammad Haris), ನಾವೇನು ಚಿಕ್ಕಮಕ್ಕಳನ್ನ ಕಳುಹಿಸಿ ಅಂತಾ ಅವರಿಗೆ ಕೇಳಿರಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಭಾರತದ ವಿರುದ್ಧ ಮೋಸದಾಟವಾಡಿತಾ ಪಾಕ್‌? ಕಂಡೂ ಕಾಣದಂತಿದ್ರಾ ಅಂಪೈರ್‌? – ಏಷ್ಯಾಕಪ್‌ ಸೋಲಿನ ಬಳಿಕ ಮತ್ತೆ ವಿವಾದ!

    ಪಾಡ್‌ಕಾಸ್ಟ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಹ್ಯಾರಿಸ್‌ (Mohammad Haris), ಪಾಕಿಸ್ತಾನ ಅನೇಕ ಹಿರಿಯರನ್ನೊಳಗೊಂಡ ತಂಡವನ್ನ ಕಳುಹಿಸಿತ್ತು ಎನ್ನುವ ಆರೋಪ ತಳ್ಳಿಹಾಕಿದರು. ನಾವೇನು ಚಿಕ್ಕ ಮಕ್ಕಳನ್ನು ಟೂರ್ನಿಗೆ ಕಳುಹಿಸಿ ಅಂತಾ ಕೇಳಿರಲಿಲ್ಲ. ನಮ್ಮ ತಂಡ ಅಂತಾರಾಷ್ಟ್ರೀಯ ಅನುಭವ ಪಡೆದಿದೆ ಅಂತಾ ಎಂದು ಹೇಳ್ತಾರೆ. ನಾನು 6 ಪಂದ್ಯಗಳನ್ನಾಡಿದ್ದೇನೆ. ಸಾಯಿಮ್‌ 5 ಪಂದ್ಯಗಳನ್ನಾಡಿದ್ದಾರೆ. ತಂಡದಲ್ಲಿದ್ದವರು ಯಾರು ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಅನುಭವ ಪಡೆದಿದ್ದಾರೆ ಹೇಳಲಿ? ಎಂದು ಪ್ರಶ್ನಿಸಿದ್ದಾರೆ. ಸದ್ಯ ಟೀಂ ಇಂಡಿಯಾ-ಎ ತಂಡದ ವಿರುದ್ಧ ಹ್ಯಾರಿಸ್‌ ಮಾತುಗಳು ಭಾರೀ ಚರ್ಚೆಯನ್ನ ಹುಟ್ಟುಹಾಕಿದೆ.

    ಕಳೆದ ತಿಂಗಳು ನಡೆದ ಎಮರ್ಜಿಂಗ್‌ ಏಷ್ಯಾಕಪ್‌ ಟೂರ್ನಿಯಲ್ಲಿ ಮೊಹಮ್ಮದ್ ಹ್ಯಾರಿಸ್ ನೇತೃತ್ವದ ಪಾಕಿಸ್ತಾನ ಎ ತಂಡವು‌ ಭಾರತದ ವಿರುದ್ಧ 128 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ 2ನೇ ಬಾರಿಗೆ ಟ್ರೋಫಿ ಗೆದ್ದುಕೊಂಡಿತು. ಪಾಕ್‌ ತಂಡಕ್ಕೆ ಮೊಹಮ್ಮದ್‌ ಹ್ಯಾರಿಸ್‌ ಮಾರ್ಗದರ್ಶಕರಾಗಿದ್ದರು. ಇದನ್ನೂ ಓದಿ: Emerging AsiaCup: ಭಾರತಕ್ಕೆ ಹೀನಾಯ ಸೋಲು, 128 ರನ್‌ ಜಯದೊಂದಿಗೆ ಚಾಂಪಿಯನ್‌ ಪಟ್ಟಕ್ಕೇರಿದ ಪಾಕಿಸ್ತಾನ

    ಪಂದ್ಯ ಮುಗಿದ ಬಳಿಕ ಪೋಸ್ಟ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ್ದ ಹ್ಯಾರಿಸ್‌, ಭಾರತ ತಂಡ ಐಪಿಎಲ್‌ನಿಂದ ಪ್ರಭಾವಿತರಾದ ಸಾಯಿ ಸುದರ್ಶನ್‌ (ಗುಜರಾತ್‌ ಟೈಟಾನ್ಸ್‌), ರಿಯಾನ್‌ ಪರಾಗ್‌ (ರಾಜಸ್ಥಾನ ರಾಯಲ್ಸ್)‌ ಸೇರಿದಂತೆ ಪ್ರಮುಖ ಯುವ ತಾರೆಗಳನ್ನ ಒಳಗೊಂಡಿತ್ತು. ಖಚಿತವಾಗಿಯೂ ಭಾರತ ತಂಡ ಗೆಲ್ಲುತ್ತದೆ ಎಂದು ಭಾವಿಸಿದ್ದೆವು ಎಂಬುದಾಗಿ ಹೇಳಿದ್ದರು.

    2013ರ ಚೊಚ್ಚಲ ಆವೃತ್ತಿಯಲ್ಲಿ ಪಾಕಿಸ್ತಾನ ಮಣಿಸಿ ಭಾರತ-ಎ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. 2018ರಲ್ಲಿ ಭಾರತ ರನ್ನರ್‌-ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಪಾಕ್‌ 2019ರಲ್ಲಿ ಪಾಕಿಸ್ತಾನ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. 2023ರಲ್ಲಿ ಮತ್ತೊಮ್ಮೆ ಚಾಂಪಿಯನ್‌ ಆಗಿ ಹೊರಹೊಮ್ಮಿತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾರತದ ವಿರುದ್ಧ ಮೋಸದಾಟವಾಡಿತಾ ಪಾಕ್‌? ಕಂಡೂ ಕಾಣದಂತಿದ್ರಾ ಅಂಪೈರ್‌? – ಏಷ್ಯಾಕಪ್‌ ಸೋಲಿನ ಬಳಿಕ ಮತ್ತೆ ವಿವಾದ!

    ಭಾರತದ ವಿರುದ್ಧ ಮೋಸದಾಟವಾಡಿತಾ ಪಾಕ್‌? ಕಂಡೂ ಕಾಣದಂತಿದ್ರಾ ಅಂಪೈರ್‌? – ಏಷ್ಯಾಕಪ್‌ ಸೋಲಿನ ಬಳಿಕ ಮತ್ತೆ ವಿವಾದ!

    ಕೊಲಂಬೊ: ಬಾಂಗ್ಲಾದೇಶ ಮಹಿಳಾ ತಂಡದ ವಿರುದ್ಧ ನಡೆದ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಎಲ್‌ಬಿಡಬ್ಲ್ಯೂ ವಿವಾದದ ಬೆನ್ನಲ್ಲೇ ಎಮರ್ಜಿಂಗ್‌ ಏಷ್ಯಾಕಪ್‌ ಟೂರ್ನಿಯಲ್ಲಿ (Emerging Asia Cup 2023) ನೋಬಾಲ್‌ ವಿವಾದದ (Noball Controversy) ಅಲೆ ಎದ್ದಿದೆ. ಭಾರತ ಎ ತಂಡದ  ಸೋಲಿನ ಬಳಿಕ ನೋಬಾಲ್‌ ವಿವಾದ ಸೃಷ್ಟಿಯಾಗಿದ್ದು, ಪಾಕ್‌ ಮೋಸದಾಟವಾಡಿತಾ? ಅಂಪೈರ್‌ಗಳು ಕಂಡೂ ಕಾಣದಂತೆ ವರ್ತಿಸಿದ್ರಾ? ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ.

    ಕೊಲಂಬೊದಲ್ಲಿ ಭಾನುವಾರ ನಡೆದ ಅಂಡರ್‌ 23 ಏಷ್ಯಾಕಪ್‌ ಟೂರ್ನಿ ಫೈನಲ್‌ ಪಂದ್ಯದಲ್ಲಿ ಭಾರತ (India A Team)-ಪಾಕ್‌ ನೀಡಿದ ಬೃಹತ್‌ ಮೊತ್ತದ ಗುರಿ ಬೆನ್ನತ್ತಿತ್ತು. ಬ್ಯಾಟಿಂಗ್‌ ಫಾರ್ಮ್‌ನಲ್ಲಿದ್ದ ಚೆನ್ನೈ ಮೂಲದ ಆಟಗಾರ ಸಾಯಿ ಸುದರ್ಶನ್‌ ಉತ್ತಮ ರನ್‌ ಕಲೆಹಾಕುವ ವಿಶ್ವಾಸದಲ್ಲಿದ್ದರು. ಆದ್ರೆ 9ನೇ ಓವರ್‌ನಲ್ಲಿ ಪಾಕ್‌ ವೇಗಿ ಅರ್ಷದ್‌ ಇಕ್ಬಾಲ್‌ ಬೌಲಿಂಗ್‌ಗೆ ಕ್ಯಾಚ್‌ ನೀಡಿ ಔಟಾದರು. ಇದನ್ನೂ ಓದಿ: Emerging AsiaCup: ಭಾರತಕ್ಕೆ ಹೀನಾಯ ಸೋಲು, 128 ರನ್‌ ಜಯದೊಂದಿಗೆ ಚಾಂಪಿಯನ್‌ ಪಟ್ಟಕ್ಕೇರಿದ ಪಾಕಿಸ್ತಾನ

    ಇಕ್ಬಾಲ್‌ 9ನೇ ಓವರ್‌ನ 3ನೇ ಬಾಲ್‌ ಎಸೆಯುವಾಗ ಅವರ ಎಡಗಾಲು ಸಂಪೂರ್ಣ ಕ್ರೀಸ್‌ನಿಂದ ಹೊರಕ್ಕೆ ಬಂದಿದೆ. ಆದ್ರೆ ಅಂಪೈರ್‌ ಇದನ್ನು ಗಮನಿಸದೇ ಔಟ್‌ ತೀರ್ಪು ನೀಡಿದ್ದಾರೆ. ಇದು ಭಾರತದ ಸೋಲಿಗೆ ಕಾರಣವಾಯಿತು ಅನ್ನೋ ಟೀಂ ಇಂಡಿಯಾ ಅಭಿಮಾನಿಗಳ ವಾದಗಿದೆ. ಪಾಕಿಸ್ತಾನ ಕೊನೆಗೂ ತನ್ನ ಬುದ್ಧಿ ತೋರಿಸಿದೆ, ಭಾರತದ ವಿರುದ್ಧ ಮೋಸದಾಟವಾಡಿ ಚಾಂಪಿಯನ್‌ ಪಟ್ಟ ಗಿಟ್ಟಿಸಿಕೊಂಡಿದೆ ಎಂದು ಟೀಂ ಇಂಡಿಯಾ ಅಭಿಮಾನಿಗಳು ಕಿಡಿ ಕಾರಿದ್ದಾರೆ. ಇದನ್ನೂ ಓದಿ: Korea Open 2023: ಕೊರಿಯಾ ಓಪನ್ಸ್‌ ಗೆದ್ದ ಭಾರತದ ಸಾತ್ವಿಕ್‌-ಚಿರಾಗ್‌ ಜೋಡಿ – ಒಂದೇ ವರ್ಷದಲ್ಲಿ 3 ಬಾರಿ ಚಾಂಪಿಯನ್ಸ್‌

    ನೋಬಾಲ್‌ ವಿವಾದಗಳು ಇದೇ ಮೊದಲೇನಲ್ಲ:
    ಕಳೆದ ವರ್ಷ ಐಪಿಎಲ್‌ ಟೂರ್ನಿಯಲ್ಲಿ ರಾಜಸ್ಥಾನ್‌ ರಾಯಲ್ಸ್‌ ಹಾಗೂ ರಿಷಭ್‌ ಪಂತ್‌ ನಾಯಕತ್ವದಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ನಡುವೆ ಇದೇ ರೀತಿ ನೋಬಾಲ್‌ ವಿವಾದ ನಡೆದಿತ್ತು. ಆ ನಂತರ ನಡೆದ ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಅಪೀಲ್‌ ಮಾಡಿದ ನಂತರ ಅಂಪೈರ್‌ ನೋಬಾಲ್‌ ನೀಡಿದ್ದು, ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು. ಈ ವರ್ಷ ನಡೆದ‌ ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲೂ ಮುಂಬೈ ಇಂಡಿಯನ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ನಡುವಿನ ಪಂದ್ಯದಲ್ಲಿ ನೋಬಾಲ್‌ ಆಗಿದ್ದರೂ ಶಫಾಲಿ ವರ್ಮಾ ಅವರದ್ದು ಔಟ್‌ ಎಂದು ತೀರ್ಪು ನೀಡಲಾಗಿತ್ತು. ಆದ್ರೆ ಈ ಬಾರಿ ಎಮರ್ಜಿಂಗ್‌ ಏಷ್ಯಾಕಪ್‌ ಟೂರ್ನಿಯಲ್ಲಿ ಪಂದ್ಯದ ವೇಳೆ ಯಾವುದೇ ತೀರ್ಪು ನೀಡದಿರುದು ಅಂಪೈರ್‌ಗಳ ವೈಫಲ್ಯತೆಯನ್ನು ಎತ್ತಿ ತೋರಿಸಿದೆ.

    ಕೊಲಂಬೊದಲ್ಲಿ ನಡೆದ ಅಂಡರ್‌ 23 ಏಷ್ಯಾಕಪ್‌ ಟೂರ್ನಿ ಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಪಾಕ್‌ ತಂಡ ಆರಂಭದಿಂದಲೇ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ನೀಡುವ ಮೂಲಕ 8 ವಿಕೆಟ್‌ ನಷ್ಟಕ್ಕೆ 50 ಓವರ್‌ಗಳಲ್ಲಿ 352 ರನ್‌ ಕಲೆಹಾಕಿತ್ತು. ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಪಾಕಿಸ್ತಾನ 40 ಓವರ್‌ಗಳಲ್ಲಿ 224 ರನ್‌ಗಳಿಗೆ ಆಲೌಟ್‌ ಆಗುವ ಮೂಲಕ ಸೋಲೊಪ್ಪಿಕೊಂಡಿತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Emerging AsiaCup: ಭಾರತಕ್ಕೆ ಹೀನಾಯ ಸೋಲು, 128 ರನ್‌ ಜಯದೊಂದಿಗೆ ಚಾಂಪಿಯನ್‌ ಪಟ್ಟಕ್ಕೇರಿದ ಪಾಕಿಸ್ತಾನ

    Emerging AsiaCup: ಭಾರತಕ್ಕೆ ಹೀನಾಯ ಸೋಲು, 128 ರನ್‌ ಜಯದೊಂದಿಗೆ ಚಾಂಪಿಯನ್‌ ಪಟ್ಟಕ್ಕೇರಿದ ಪಾಕಿಸ್ತಾನ

    ಕೊಲಂಬೊ: ಅಗ್ರ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯ ಹಾಗೂ ಕಳಪೆ ಬೌಲಿಂಗ್‌ ಪ್ರದರ್ಶನದಿಂದಾಗಿ ಎಮರ್ಜಿಂಗ್ ಏಷ್ಯಾಕಪ್-2023 ಟೂರ್ನಿ ಗೆಲ್ಲುವ ಅವಕಾಶವನ್ನ ಭಾರತ ಎ ತಂಡ ಕೈಚೆಲ್ಲಿದೆ.

    ಕೊಲಂಬೊದಲ್ಲಿ ನಡೆದ ಅಂಡರ್‌ 23 ಏಷ್ಯಾಕಪ್‌ ಟೂರ್ನಿ ಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನ ನೀಡಿದ ಬೃಹತ್‌ ಮೊತ್ತದ ಗುರಿ ಬೆನ್ನತ್ತಲಾಗದೇ ಹೀನಾಯ ಸೋಲನುಭವಿಸಿದೆ. ಭಾರತ ಎ ತಂಡ 224 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನ ಕಳೆದುಕೊಳ್ಳುವ ಮೂಲಕ ಪಾಕಿಸ್ತಾನದ ವಿರುದ್ಧ 128 ರನ್‌ಗಳ ಹೀನಾಯ ಸೋಲನುಭವಿಸಿದೆ. ಇದನ್ನೂ ಓದಿ: Korea Open 2023: ಕೊರಿಯಾ ಓಪನ್ಸ್‌ ಗೆದ್ದ ಭಾರತದ ಸಾತ್ವಿಕ್‌-ಚಿರಾಗ್‌ ಜೋಡಿ – ಒಂದೇ ವರ್ಷದಲ್ಲಿ 3 ಬಾರಿ ಚಾಂಪಿಯನ್ಸ್‌

    ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಭಾರತ ಎ ತಂಡ ಮೊದಲ ವಿಕೆಟ್‌ ಪತನಕ್ಕೆ 8.3 ಓವರ್‌ಗಳಲ್ಲಿ 64 ರನ್‌ಗಳಿಸುವ ಮೂಲಕ ಉತ್ತಮ ಆರಂಭವನ್ನೇ ನೀಡಿತ್ತು. ಆನಂತರದಲ್ಲಿ ಒಂದೊಂದೇ ವಿಕೆಟ್‌ ಪತನಗೊಂಡಿತು. ಅಗ್ರ ಕ್ರಮಾಂಕದ ಬ್ಯಾಟರ್‌ಗಳ ಪೈಕಿ ಅಭಿಷೇಕ್‌ ಶರ್ಮಾ 61 ರನ್‌ (51 ಎಸೆತ, 5 ಬೌಂಡರಿ, 1 ಸಿಕ್ಸರ್‌), ಯಶ್‌ ಧುಲ್‌ 39 ರನ್‌ (41 ಎಸೆತ, 4 ಬೌಂಡರಿ) ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್‌ಗಳು ಕ್ರೀಸ್‌ನಲ್ಲಿ ಸ್ಥಿರವಾಗಿ ನಿಲ್ಲದ ಕಾರಣ ಪಾಕಿಸ್ತಾನಕ್ಕೆ ಸುಲಭ ತುತ್ತಾದರು.

    ಕಳೆದ ಪಂದ್ಯದಲ್ಲಿ ಅಜೇಯ ಶತಕ ಸಿಡಿಸಿ ಮೆರೆದಾಡಿದ್ದ ಸಾಯಿ ಸುದರ್ಶನ್‌ ಕೇವಲ 29 ರನ್‌ಗಳಿಗೆ ಔಟಾಗಿ ಪೆವಿಲಿಯನ್‌ ಸೇರಿಕೊಂಡರು. ನಂತರದಲ್ಲಿ ನಿಶಾಂತ್ ಸಿಂಧು 10, ಧ್ರುವ್ ಜುರೆಲ್ 9, ರಿಯಾನ್ ಪರಾಗ್ 14, ಹರ್ಶಿತ್‌ ರಾಣಾ 13, ಮುನಾವ್ ಸುತಾರ್ 7, ಆರ್‌ಎಸ್ ಹಂಗಾರ್ಕರ್ 11 ಹಾಗೂ ಯುವರಾಜ್‌ಸಿನ್ಹ ದೋದಿಯಾ 5 ರನ್ ಗಳಿಸಿ ಔಟಾದರು. ಒಟ್ಟಾರೆ ಭಾರತ ಎ ತಂಡ 40 ಓವರ್‌ಗಳಲ್ಲಿ 224 ರನ್‌ಗಳಿಗೆ ಸರ್ವಪತನ ಕಂಡಿತು. 128 ರನ್‌ಗಳ ಜಯ ಸಾಧಿಸಿದ ಪಾಕಿಸ್ತಾನ ಟ್ರೋಫಿ ಗೆದ್ದು ಬೀಗಿತು.

    ಮೊದಲು ಬ್ಯಾಟಿಂಗ್‌ ಮಾಡಿದ ಪಾಕ್‌ ತಂಡ ಆರಂಭದಿಂದಲೇ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ನೀಡುವ ಮೂಲಕ 8 ವಿಕೆಟ್‌ ನಷ್ಟಕ್ಕೆ 50 ಓವರ್‌ಗಳಲ್ಲಿ 352 ರನ್‌ ಕಲೆಹಾಕಿತ್ತು. ಇದನ್ನೂ ಓದಿ: Snooker Championship 2023: ಸೌದಿ ಅರೇಬಿಯಾದಲ್ಲಿ ಚಿನ್ನ ಗೆದ್ದು ಕೋಲಾರದ ಯುವತಿ ಸಾಧನೆ!

    2013ರ ಚೊಚ್ಚಲ ಆವೃತ್ತಿಯಲ್ಲಿ ಪಾಕಿಸ್ತಾನವನ್ನೇ ಮಣಿಸಿ ಭಾರತ ಎ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. 2018ರಲ್ಲಿ ಭಾರತ ರನ್ನರ್‌-ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಪಾಕ್‌ 2019ರಲ್ಲಿ ಪಾಕಿಸ್ತಾನ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದೀಗ ಮತ್ತೆ ಪಾಕಿಸ್ತಾನ ಚಾಂಪಿಯನ್ ಆಗಿ ಹೊರಹೊಮ್ಮಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Ranji Trophy: ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿ ಮಿಂಚಿದ ಯಶ್ ಧುಲ್

    Ranji Trophy: ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿ ಮಿಂಚಿದ ಯಶ್ ಧುಲ್

    ಮುಂಬೈ: ಟೀಂ ಇಂಡಿಯಾ ಅಂಡರ್-19 ವಿಶ್ವಕಪ್ ಗೆದ್ದ ನಾಯಕ ಯಶ್ ಧುಲ್ ಡೆಲ್ಲಿ ಪರ ರಣಜಿಯಲ್ಲಿ ಪಾದಾರ್ಪಣ ಪಂದ್ಯದಲ್ಲೇ ಶತಕ ಸಿಡಿಸಿ ಮಿಂಚಿದ್ದಾರೆ.

    ವೆಸ್ಟ್ ಇಂಡೀಸ್‍ನಲ್ಲಿ ನಡೆದ ಅಂಡರ್-19 ವಿಶ್ವಕಪ್‍ನಲ್ಲಿ ಟೀಂ ಇಂಡಿಯಾದ ನಾಯಕರಾಗಿದ್ದ ಯಶ್ ಧುಲ್ ಇಂದು ಡೆಲ್ಲಿ ಪರ ರಣಜಿ ಕ್ರಿಕೆಟ್ ಆಡಲು ಮೈದಾನಕ್ಕಿಳಿದಿದ್ದಾರೆ. ಡೆಲ್ಲಿ ಮತ್ತು ತಮಿಳುನಾಡು ನಡುವಿನ ಪಂದ್ಯದಲ್ಲಿ ಆರಂಭಿಕ ಆಟಗಾರನಾಗಿ ಆಡಿದ ಯಶ್ ಧುಲ್ 113 ರನ್ (150 ಎಸೆತ, 18 ಬೌಂಡರಿ) ಸಿಡಿಸಿ ಆಡಿದ ಚೊಚ್ಚಲ ರಣಜಿ ಪಂದ್ಯದಲ್ಲೇ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ.

    ವೆಸ್ಟ್ ಇಂಡೀಸ್‍ನಲ್ಲಿ ನಡೆದ ಅಂಡರ್-19 ವಿಶ್ವಕಪ್‍ನಲ್ಲಿ ಟೀಂ ಇಂಡಿಯಾದ ಸಾರಥ್ಯ ವಹಿಸಿದ್ದ ಯಶ್ ಧುಲ್ ಟೂರ್ನಿಯುದ್ದಕ್ಕೂ ಬ್ಯಾಟಿಂಗ್ ಜೊತೆ ನಾಯಕತ್ವವನ್ನು ಉತ್ತಮವಾಗಿ ನಿಭಾಯಿಸಿದ್ದರು. ಅಂಡರ್-19 ವಿಶ್ವಕಪ್‍ನಲ್ಲಿ ಒಟ್ಟು 6 ಪಂದ್ಯದಲ್ಲಿ ಯಶ್ ಧುಲ್ 1 ಶತಕ 3 ಅರ್ಧಶತಕ ಸಹಿತ 331 ರನ್ ಸಿಡಿಸಿದ್ದಾರೆ. ಅಲ್ಲದೇ ಐಪಿಎಲ್ ಮೆಗಾ ಹರಾಜಿನಲ್ಲಿ 50 ಲಕ್ಷ ರೂ.ಗೆ ಡೆಲ್ಲಿ ಕಾಪಿಟಲ್ಸ್ ತಂಡ ಖರೀದಿಸಿದೆ.

  • U19 World Cup 2022 semifinal: ಯಶ್ ಧುಲ್ ಶತಕ – ಆಸ್ಟ್ರೇಲಿಯಾಗೆ 291 ರನ್ ಟಾರ್ಗೆಟ್

    U19 World Cup 2022 semifinal: ಯಶ್ ಧುಲ್ ಶತಕ – ಆಸ್ಟ್ರೇಲಿಯಾಗೆ 291 ರನ್ ಟಾರ್ಗೆಟ್

    ಆಂಟಿಗುವ: ಅಂಡರ್-19 ಸೆಮಿಫೈನಲ್‍ನಲ್ಲಿ ಭಾರತ ತಂಡದ ನಾಯಕ ಯಶ್ ಧುಲ್ ಸಿಡಿಸಿದ ಭರ್ಜರಿ ಶತಕದ ನೆರವಿನಿಂದ ಆಸ್ಟ್ರೇಲಿಯಾಗೆ 291 ರನ್‍ಗಳ ಬೃಹತ್ ಟಾರ್ಗೆಟ್ ನೀಡಿದೆ.

    ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ಆರಂಭಿಕ ಆಘಾತ ಅನುಭವಿಸಿತು. ಭಾರತ ತಂಡದ ಆರಂಭಿಕ ಆಟಗಾರರಾದ ಆಂಕ್ರಿಶ್ ರಘುವಂಶಿ 6 ರನ್ (30 ಎಸೆತ) ಮತ್ತು ಹರ್ನೂರ್ ಸಿಂಗ್ 16 ರನ್ (28 ಎಸೆತ, 3 ಬೌಂಡರಿ) ಸಿಡಿಸಿ ಪೆವಿಲಿಯನ್ ಸೇರಿಕೊಂಡರು. ನಂತರ ಒಂದಾದ ಶೇಕ್ ರಶೀದ್ ಮತ್ತು ಯಶ್ ಧುಲ್ ಆಸ್ಟ್ರೇಲಿಯಾ ಬೌಲರ್‌ಗಳ ಬೆವರಿಳಿಸಿದರು. ಇದನ್ನೂ ಓದಿ: ಐಪಿಎಲ್ ಹರಾಜಿನ ಅಂತಿಮ ಪಟ್ಟಿಯಲ್ಲಿ ಕಾಣಿಸಿಕೊಂಡ ಪಶ್ಚಿಮ ಬಂಗಾಳದ ಕ್ರೀಡಾ ಸಚಿವ

    ಇಬ್ಬರು ಆಟಗಾರರು ಕೂಡ ಆಸ್ಟ್ರೇಲಿಯಾ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ರಶೀದ್ 94 ರನ್ (108 ಎಸೆತ, 8 ಬೌಂಡರಿ, 1 ಸಿಕ್ಸ್) ಬಾರಿಸಿ ಶತಕ ವಂಚಿತರಾದರೆ, ಯಶ್ ಧುಲ್ ಭರ್ಜರಿ ಶತಕ ಸಿಡಿಸಿ ಸಂಭ್ರಮಿಸಿದರು.

    ಯಶ್ ಧುಲ್ 110 ರನ್ (110 ಎಸೆತ, 10 ಬೌಂಡರಿ, 1 ಸಿಕ್ಸ್) ಬಾರಿಸಿ ಔಟ್ ಆದರು. ನಂತರ ರಾಜವರ್ಧನ್ ಹಂಗರಗೇಕರ್ 13 ರನ್ (10 ಎಸೆತ, 1 ಬೌಂಡರಿ, 1 ಸಿಕ್ಸ್) ಸಿಡಿಸಿ ವಿಕೆಟ್ ಒಪ್ಪಿಸಿದರು. ನಂತರ ಕಡೆಯಲ್ಲಿ ಭರ್ಜರಿಯಾಗಿ ಬ್ಯಾಟ್‍ಬೀಸಿದ ದಿನೇಶ್ ಬಣ ಅಜೇಯ 20 ರನ್ (4 ಎಸೆತ, 2 ಬೌಂಡರಿ, 2 ಸಿಕ್ಸ್) ಮತ್ತು ನಿಶಾಂತ್ ಸಿಂಧು 12 ರನ್ (10 ಎಸೆತ, 1 ಬೌಂಡರಿ, 1 ಸಿಕ್ಸ್) ಬಾರಿಸಿ ತಂಡದ ಮೊತ್ತ 280ರ ಗಡಿದಾಟಿಸಿದರು. ಆಸ್ಟ್ರೇಲಿಯಾ ಪರ ಜಾಕ್ ನಿಬ್ಬೆಟ್ ಮತ್ತು ವಿಲಿಯಂ ಸಾಲ್ಜ್‍ಮನ್ ತಲಾ 2 ವಿಕೆಟ್ ಪಡೆದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಐಪಿಎಲ್ ಹರಾಜು – 590 ಆಟಗಾರರಿಗೆ ಫೈನಲ್‌ ಪಟ್ಟಿಯಲ್ಲಿ ಸ್ಥಾನ

    ಅಂತಿಮವಾಗಿ ಭಾರತ 50 ಓವರ್‌ಗಳ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 290 ರನ್ ಬಾರಿಸಿ, ಆಸ್ಟ್ರೇಲಿಯಾಗೆ 291 ರನ್ ಟಾರ್ಗೆಟ್ ನೀಡಿದೆ.