Tag: Yash 19

  • ‘ಯಶ್ 19’ ಸಿನಿಮಾದ ಫೋಟೋ ಲೀಕ್? ರಾಕಿ ಭಾಯ್ ನಯಾ ಲುಕ್

    ‘ಯಶ್ 19’ ಸಿನಿಮಾದ ಫೋಟೋ ಲೀಕ್? ರಾಕಿ ಭಾಯ್ ನಯಾ ಲುಕ್

    ನ್ಯಾಷನಲ್ ಸ್ಟಾರ್ ಯಶ್ ‘ಕೆಜಿಎಫ್ 2’ (KGF 2) ಸಿನಿಮಾದ ಸೂಪರ್ ಸಕ್ಸಸ್ ನಂತರ ಅವರ ಮುಂದಿನ ಸಿನಿಮಾಗಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಯಶ್ ಮುಂದಿನ ನಡೆ ಬಗ್ಗೆ ಏನೂ ತಿಳಿಯದೇ ಯಶ್ 19ಗಾಗಿ ಕಾದು ಕಾದು ಸುಸ್ತಾಗಿದ್ದಾರೆ. ಈ ನಡುವೆ ‘ಯಶ್ 19’ (Yash 19) ಸಿನಿಮಾ ಸೆಟ್‌ನದ್ದು, ಎನ್ನಲಾದ ಫೋಟೋ ಒಂದು ವೈರಲ್ ಆಗಿದೆ. ಈ ಫೋಟೋನ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡ್ತಿದ್ದಾರೆ. ಇದನ್ನೂ ಓದಿ:RRR ಸಿನಿಮಾದ ಐರಿಶ್ ನಟ ರೇ ಸ್ಟೀವನ್ಸನ್ ನಿಧನ

    ರಾಕಿ ಭಾಯ್ ಯಶ್ (Yash) ಮುಂದಿನ ಚಿತ್ರಕ್ಕೆ ಯಾರು ಡೈರೆಕ್ಟರ್ ಮಾಡುತ್ತಾರೆ ಎಂಬುದು ಇನ್ನೂ ರಿವೀಲ್ ಆಗಿಲ್ಲ. ಇತ್ತೀಚೆಗೆ ಶ್ರೀಲಂಕಾದಲ್ಲಿ ಶೂಟಿಂಗ್ ಸ್ಪಾಟ್ ಹುಡುಕೋಕೆ ಯಶ್ ಇತ್ತೀಚಿಗೆ ತೆರಳಿದ್ದರು ಎನ್ನುವುದು ಬಿಟ್ಟರೆ ಮತ್ತಾವುದೇ ಅಪ್‌ಡೇಟ್ ಸಿಕ್ಕಿಲ್ಲ. ಹೀಗಿರುವಾಗಲೇ ಸೋಷಿಯಲ್ ಮೀಡಿಯಾದಲ್ಲಿ ಹೊಸ ಫೋಟೋ ಒಂದು ವೈರಲ್ ಆಗಿದೆ. ಆದರೆ ಯಶ್ ತಮ್ಮ 19ನೇ ಸಿನಿಮಾ ಬಗ್ಗೆ ಸಾಕಷ್ಟು ಗುಟ್ಟು ಕಾಯ್ದುಕೊಂಡಿದ್ದಾರೆ. ಸಿನಿಮಾ ಬಗ್ಗೆ ಒಂದೇ ಒಂದು ವಿಚಾರ ಕೂಡ ಲೀಕ್ ಆಗದಂತೆ ನೋಡಿಕೊಳ್ತಿದ್ದಾರೆ. ಹೀಗಿರುವಾಗ ಸಿನಿಮಾ ಶೂಟಿಂಗ್ ಸ್ಥಳದ ಫೋಟೋ ಲೀಕ್ ಆಗೋಕೆ ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿದೆ.

    ವೈರಲ್ ಆದ ಫೋಟೋದಲ್ಲಿ ಯಶ್ ಕೂದಲು ಈಗ ಮತ್ತಷ್ಟು ಉದ್ದಕ್ಕೆ ಬೆಳೆದಿದೆ. ಇನ್ನು ಫೋಟೋದ ಶೇಡ್ ನೋಡಿದರೆ ಅದು ‘ಕೆಜಿಎಫ್’ ಸರಣಿಯನ್ನು ನೆನಪಿಸುತ್ತದೆ. ಇದು ಎಡಿಟೆಡ್ ಫೋಟೋ ಎಂದು ಕೂಡ ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಕೆಜಿಎಫ್‌ 2 ಸಕ್ಸಸ್‌ ಬಳಿಕ ಯಶ್‌ ಮತ್ತೆ ಭರ್ಜರಿ ಗಳಿಸಲು ಯೋಚಿಸಿ ಭಾರೀ ತಯಾರಿಯೊಂದಿಗೆ ಹೆಜ್ಜೆ ಇಡ್ತಿದ್ದಾರೆ.

    ಯಶ್ 19 ಸಿನಿಮಾ ಅಪ್‌ಡೇಟ್‌ಗಾಗಿ ಕಾದು ಸಾಕಾಗಿ ಫ್ಯಾನ್ಸ್ ಹೀಗೆ ಮಾಡಿದ್ದಾರಾ.? ಈ ಫೋಟೋನ ಅಭಿಮಾನಿಗಳಲ್ಲೇ ಯಾರೋ ವೈರಲ್ ಮಾಡಿರಬೇಕು ಎನ್ನುವ ಅನುಮಾನ ಮೂಡಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ಯಶ್ ಅವರೇ ಸ್ಪಷ್ಟನೆ ನೀಡಲಿ ಎಂದು ಕಾದಿದ್ದಾರೆ. ಯಶ್ ಪ್ರತಿಕ್ರಿಯೆ ನೀಡುವವರೆಗೂ ಕಾದುನೋಡಬೇಕಿದೆ.

  • ಯಶ್ 19 ಅಲ್ಲ, ಯಶ್ 37 : ಜೋಕ್ ಮಾಡಿ ಹೊರಟೇ ಬಿಟ್ಟ ಯಶ್

    ಯಶ್ 19 ಅಲ್ಲ, ಯಶ್ 37 : ಜೋಕ್ ಮಾಡಿ ಹೊರಟೇ ಬಿಟ್ಟ ಯಶ್

    ರಾಕಿಂಗ್ ಸ್ಟಾರ್ ಯಶ್ (Yash) ಮಾಧ್ಯಮಗಳ ಕಣ್ಣಿಗೆ ಬೀಳುವುದು ಅಪರೂಪವಾಗಿಬಿಟ್ಟಿದೆ. ಕೆಜಿಎಫ್ 2 (KGF 2) ಚಿತ್ರದ ಯಶಸ್ಸಿನ ನಂತರ ಅವರು ಮಾಧ್ಯಮಗಳ ಕಣ್ಣಿಗೆ ಬೀಳುವುದು ಕಡಿಮೆಯಾಗಿದೆ. ಏನಾದರೂ ಹೇಳುವುದಿದ್ದರೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ತಣ್ಣಗಾಗಿ ಬಿಡ್ತಾರೆ. ಹಾಗಾಗಿ ಯಶ್ ಅವರ ಮುಂದಿನ ಸಿನಿಮಾ (New Movie) ಅಂದರೆ, 19ನೇ ಸಿನಿಮಾದ ಬಗ್ಗೆ ಈವರೆಗೂ ಯಾವುದೇ ಅಪ್ ಡೇಟ್ ಸಿಕ್ಕಿಲ್ಲ.

    ನಿನ್ನೆಯಷ್ಟೇ ಯಶ್ ಮತದಾನ ಮಾಡಲು ಹೊಸಕೆರೆಹಳ್ಳಿಗೆ ಬಂದಿದ್ದರು. ಯಶ್ ಬರುವುದನ್ನೇ ಕಾಯುತ್ತಿದ್ದ ಮಾಧ್ಯಮಗಳು ಇವತ್ತಾದರೂ ತಮ್ಮ ಮುಂದಿನ ಸಿನಿಮಾ ಬಗ್ಗೆ ಏನಾದರೂ ಮಾತನಾಡುತ್ತಾರೆ ಎನ್ನುವ ನಂಬಿಕೆ ಮಾಧ್ಯಮ ಮಿತ್ರರದ್ದಾಗಿತ್ತು. ಅಲ್ಲಿಯೂ ನುಣಿಚಿಕೊಂಡು ಬಿಟ್ಟರು ಯಶ್. ಅದು ಜಾಣ್ಮೆಯಿಂದ ಉತ್ತರ ನೀಡಿ, ಅಲ್ಲಿಂದ ಹೊರಟೇ ಬಿಟ್ಟರು. ಇದನ್ನೂ ಓದಿ:ಮರಾಠಿ ಚಿತ್ರರಂಗಕ್ಕೆ ಕಾಲಿಟ್ಟ ‌’ಕಾಂತಾರ’ ಸಂಗೀತ ನಿರ್ದೇಶಕ ಅಜನೀಶ್‌ ಲೋಕನಾಥ್

    ಯಶ್ ಮತದಾನ ಮಾಡಿ ಬೂತ್ ನಿಂದ ಆಚೆ ಬರುತ್ತಿದ್ದಂತೆಯೇ ಮತದಾನದ ಬಗ್ಗೆ ಪ್ರಶ್ನೆಗಳನ್ನು ಮಾಡಲಾಯಿತು. ಆನಂತರ ಯಶ್ 19 ಸಿನಿಮಾ ಬಗ್ಗೆ ಏನು ಹೇಳ್ತೀರಿ ಅಂದರು ಮಾಧ್ಯಮದವರು. ನಗುತ್ತಲೇ ಕ್ಯಾಮೆರಾದತ್ತ ನೋಡಿದ ಯಶ್, ‘ಯಶ್ 19 (Yash 19) ಅಲ್ಲ, ಯಶ್ ವಯಸ್ಸು 37’ ಎಂದು ಅಲ್ಲಿಂದ ಹೊರಟೇ ಬಿಟ್ಟರು. ಅಲ್ಲಿಗೆ ಯಶ್ ಮುಂದಿನ ಸಿನಿಮಾ ಬಗ್ಗೆ ಮತ್ತೆ ಯಾವುದೇ ಅಪ್ ಡೇಟ್ ಸಿಗಲಿಲ್ಲ.

    ಯಶ್ ಮುಂದಿನ ಸಿನಿಮಾ ಬಗ್ಗೆ ಸಾಕಷ್ಟು ಗೌಪ್ಯತೆಯನ್ನು ಕಾಪಾಡುತ್ತಿದ್ದಾರೆ. ಆದರೂ, ಒಂದಷ್ಟು ವಿಷಯಗಳು ಸೋರಿಕೆ ಆಗಿವೆ. ಅವರು ಮುಂದಿನ ಸಿನಿಮಾವನ್ನು ಶ್ರೀಲಂಕಾದಲ್ಲಿ ಚಿತ್ರೀಕರಣ ಮಾಡಲಿದ್ದಾರಂತೆ. ಮಲಯಾಳಂ ನಿರ್ದೇಶಕಿಯೇ ಅವರ ಮುಂದಿನ ಚಿತ್ರದ ನಿರ್ದೇಶಕಿ ಎಂದು ಹೇಳಲಾಗುತ್ತಿದೆ. ಇವೆಲ್ಲದಕ್ಕೂ ಅವರೇ ಉತ್ತರ ನೀಡಬೇಕು.

  • ಯಶ್‌ ಜೊತೆ ದಿಲ್‌ ರಾಜು ಹೊಸ ಸಿನಿಮಾ- ಅಪ್‌ಡೇಟ್‌ ಹಂಚಿಕೊಂಡ ನಿರ್ಮಾಪಕ

    ಯಶ್‌ ಜೊತೆ ದಿಲ್‌ ರಾಜು ಹೊಸ ಸಿನಿಮಾ- ಅಪ್‌ಡೇಟ್‌ ಹಂಚಿಕೊಂಡ ನಿರ್ಮಾಪಕ

    ನಿರ್ಮಾಪಕ ದಿಲ್ ರಾಜು (Dil Raju) ಅವರು ‘ವಾರಿಸು’ (Varisu) ಸಿನಿಮಾದ ಸಕ್ಸಸ್ ಖುಷಿಯಲ್ಲಿದ್ದಾರೆ. ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಚಿತ್ರವನ್ನ ನಿರ್ಮಾಣ ಮಾಡ್ತಿದ್ದಾರೆ. ಈ ನಡುವೆ ಯಶ್ (Actor Yash) ಜೊತೆ ಸಿನಿಮಾ ಮಾಡೋದಾಗಿ ಬಿಗ್ ಅಪ್‌ಡೇಟ್ ನೀಡಿದ್ದಾರೆ.

    ಸೌತ್ ಸಿನಿರಂಗದ ನಿರ್ಮಾಪಕ ದಿಲ್ ರಾಜು ಸಾಕಷ್ಟು ಸಿನಿಮಾಗಳಿಗೆ ನಿರ್ಮಾಣ ಮಾಡುವ ಮೂಲಕ ಯಶಸ್ಸು ಗಳಿಸಿದ್ದಾರೆ. ವಿಜಯ್- ರಶ್ಮಿಕಾ ನಟನೆಯ ‘ವಾರಿಸು’ ಸಿನಿಮಾ ನಿರ್ಮಾಣ ಮಾಡಿ ಭರ್ಜರಿ ಲಾಭ ಗಿಟ್ಟಿಸಿಕೊಂಡಿದ್ದಾರೆ. 300 ಕೋಟಿ ರೂಪಾಯಿಗೂ ಅಧಿಕ ಗಲ್ಲಾಪೆಟ್ಟಿಗೆಯಲ್ಲಿ ಸಿನಿಮಾ ಕಲೆಕ್ಷನ್ ಮಾಡಿದೆ.

    ‘ಕೆಜಿಎಫ್ 2’ (KGF 2) ಸಿನಿಮಾ ಸಕ್ಸಸ್ ನಂತರ ಯಶ್ (Yash) ತಮ್ಮ ಮುಂದಿನ ಸಿನಿಮಾಗೆ ತೆರೆಮರೆಯಲ್ಲಿ ತಯಾರಿ ಮಾಡ್ತಿದ್ದಾರೆ. ಮುಂದಿನ ನಡೆ ಬಗ್ಗೆ ಎಲ್ಲೂ ಬಿಟ್ಟು ಕೊಡದೇ ಸೈಲೆಂಟ್ ಆಗಿ ವರ್ಕೌಟ್ ಮಾಡ್ತಿದ್ದಾರೆ. ದಿಲ್ ರಾಜ್, ಯಶ್ ಜೊತೆ ಸಿನಿಮಾ ಮಾಡುವ ಬಗ್ಗೆ ಹಿಂಟ್ ಕೊಟ್ಟಿರೋದು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ. ಇದನ್ನೂ ಓದಿ: ಪ್ರಭಾಸ್‌ ನಟನೆಯ ‘ಸಲಾರ್‌ʼ ರಿಲೀಸ್‌ ಡೇಟ್‌ ಫಿಕ್ಸ್‌

    ಇತ್ತೀಚೆಗೆ ಟ್ವಿಟರ್‌ನಲ್ಲಿ ಆಸ್ಕ್ ಮಿ ಎನಿಥಿಂಗ್ ಸೆಷನ್ ನಡೆಸಲಾಯಿತು. ಈ ವೇಳೆ ಯಶ್ ಅಭಿಮಾನಿಯೊಬ್ಬರು ದಿಲ್ ರಾಜುಗೆ ಪ್ರಶ್ನೆ ಕೇಳಿದರು. ಯಶ್ ಜೊತೆ ಸಿನಿಮಾ ನಿರೀಕ್ಷಿಸಬಹುದೇ ಎಂದು ಕೇಳಲಾಯಿತು. ಇದಕ್ಕೆ ದಿಲ್ ರಾಜು ಪರವಾಗಿ ಉತ್ತರಿಸಿರುವ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್, ಹೌದು ಎನ್ನುವ ಉತ್ತರ ನೀಡಿದೆ.

    ಈ ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ. ಯಶ್ ಮುಂದಿನ ಸಿನಿಮಾಗೆ ದಿಲ್ ರಾಜು ನಿರ್ಮಾಣ ಮಾಡುತ್ತಾರಾ? ಅಥವಾ ಅಭಿಮಾನಿ ಪ್ರಶ್ನೆಗೆ ಸಹಜವಾಗಿ ದಿಲ್ ರಾಜು ಟೀಂ ಉತ್ತರಿಸಿದ್ರಾ ಎಂದು ಅಧಿಕೃತ ಮಾಹಿತಿ ಹೊರಬೀಳುವವರೆಗೂ ಕಾದುನೋಡಬೇಕಿದೆ.

  • ಯಶ್ ಜೊತೆ ಸಿನಿಮಾ ಮಾಡುತ್ತೇವೆ, ಕಾಯಬೇಕು ಎಂದ ಹೊಂಬಾಳೆ ಫಿಲ್ಮ್ಸ್

    ಯಶ್ ಜೊತೆ ಸಿನಿಮಾ ಮಾಡುತ್ತೇವೆ, ಕಾಯಬೇಕು ಎಂದ ಹೊಂಬಾಳೆ ಫಿಲ್ಮ್ಸ್

    ಮುಂದಿನ ದಿನಗಳಲ್ಲಿ ಯಶ್ ಜೊತೆ ಸಿನಿಮಾ ಮಾಡುವುದು ಪಕ್ಕಾ. ಆದರೆ, ಅದಕ್ಕಾಗಿ ಕಾಯಬೇಕು ಎಂದು ಹೊಂಬಾಳೆ ಫಿಲ್ಮ್ಸ್ ಹೇಳಿಕೊಂಡಿದೆ. ಕೆಜಿಎಫ್ 2 ಮುಗಿದ ತಕ್ಷಣವೇ ಕೆಜಿಎಫ್ 3 ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ ಕೈಗೆತ್ತಿಕೊಳ್ಳಲಿದೆ ಎಂದು ನಂಬಲಾಗಿತ್ತು. ಈ ಕುರಿತು ಹಲವು ಚರ್ಚೆಗಳೂ ನಡೆದವು. ಆದರೆ, ಸದ್ಯಕ್ಕೆ ಅದಕ್ಕೆ ಫುಲ್ ಸ್ಟಾಪ್ ಇಡಲಾಗಿದೆ. ಯಶ್ ಬೇರೊಂದು ಸಿನಿಮಾ ಮಾಡುತ್ತಿರುವುದರಿಂದ ಯಶ್ ಜೊತೆಗಿನ ಚಿತ್ರಕ್ಕಾಗಿ ಕಾಯುವುದು ಅನಿವಾರ್ಯವಾಗಿದೆ. ಈ ಕಾಯುವಿಕೆ ಇನ್ನೆಷ್ಟು ವರ್ಷ ಎನ್ನುವುದು ಸದ್ಯಕ್ಕಿರುವ ಕುತೂಹಲವೂ ಆಗಿದೆ.

    ಶ್ ಅವರ ಹೊಸ ಸಿನಿಮಾದ ಬಗ್ಗೆ ಆರೇಳು ತಿಂಗಳಿಂದ ಹೊಸ ಹೊಸ ಸುದ್ದಿಗಳು ಬರುತ್ತಲೇ ಇವೆ. ಬಂದ ವೇಗದಲ್ಲೇ ಅವರು ಹುಸಿಯಾಗುತ್ತಿವೆ. ಆದರೆ, ಇತ್ತೀಚೆಗಷ್ಟೇ ಅವರ ಹೊಸ ಸಿನಿಮಾದ ಅಚ್ಚರಿಯ ಸಂಗತಿಯೊಂದು ಹೊರ ಬಿದ್ದಿತ್ತು. ಅವರ ಮುಂದಿನ ಸಿನಿಮಾ ಬಜೆಟ್ ಬರೋಬ್ಬರಿ 400 ಕೋಟಿ ಎಂದು ಹೇಳಲಾಗಿತ್ತು. ಈ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡುತ್ತಿರುವ ಸಂಸ್ಥೆ ಕೆವಿಎನ್ ಎಂದು ಹೇಳಲಾಗಿತ್ತು. ಅದೀಗ ನಿಜ ಎನ್ನುವಂತೆ ಸಾಕ್ಷಿಯೊಂದು ಸಿಕ್ಕಿದೆ.

    ಯಶ್ ಅವರು 19ನೇ ಸಿನಿಮಾವನ್ನು ದಕ್ಷಿಣದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ಮಾಡಲಿದೆ ಎನ್ನುವ ವರ್ತಮಾನ ಗಾಂಧಿನಗರದಲ್ಲಿ ಬಲವಾಗಿಯೇ ಕೇಳಿ ಬರುತ್ತಿತ್ತು. ಅದು ನಿಜ ಎನ್ನುವಂತೆ ಕೆವಿಎನ್ ಪ್ರೊಡಕ್ಷನ್ ನ ವೆಂಕಟ್ ಕೋಣಂಕಿ ನಾರಾಯಣ್ ಅವರು ಯಶ್ ಜೊತೆ ಕಾಣಿಸಿಕೊಂಡಿದ್ದಾರೆ. ಹುಟ್ಟು ಹಬ್ಬದ ಪಾರ್ಟಿಯಲ್ಲಿ ವೆಂಕಟ್ ಕೂಡ ಭಾಗಿಯಾಗಿ ಶುಭ ಹಾರೈಸಿದ್ದಾರೆ. ಹಾಗಾಗಿ ಇವರೇ ಮುಂದಿನ ಸಿನಿಮಾದ ನಿರ್ಮಾಪಕರು ಎನ್ನುವುದು ನಿಕ್ಕಿಯಾದಂತಾಗಿದೆ. ಇದನ್ನೂ ಓದಿ: ಸಾನ್ಯ ಎಲಿಮಿನೇಟ್‌ ಆದಮೇಲೆ ಅವಳ ಬೆಲೆ ರೂಪೇಶ್‌ ಶೆಟ್ಟಿಗೆ ಗೊತ್ತಾಯ್ತು: ದೀಪಿಕಾ ದಾಸ್

    ಈ ಹಿಂದೆ ಯಶ್, ಗೋವಾದ ಮುಖ್ಯಮಂತ್ರಿಗಳನ್ನು ಭೇಟಿಯಾದಾಗ ಇದೇ ವೆಂಕಟ್ ಕೂಡ ಜೊತೆಗಿದ್ದರು. ಅವತ್ತೇ ಒಂದು ಸುಳಿವನ್ನೂ ಅವರು ಬಿಟ್ಟುಕೊಟ್ಟಿದ್ದರು. ಪದೇ ಪದೇ ಯಶ್ ಜೊತೆ ವೆಂಕಟ್ ಕಾಣಿಸಿಕೊಳ್ಳುತ್ತಿರುವುದು ಸುದ್ದಿಗೆ ಪುಷ್ಠಿ ನೀಡಿದಂತಾಗಿದೆ. ಸ್ವತಃ ಯಶ್ ಅವರೇ ಹೇಳಿದಂತೆ ಮುಂದಿನ ದಿನಗಳಲ್ಲಿ ದೊಡ್ಡ ಸುದ್ದಿಯನ್ನೇ ಅವರ ಅಭಿಮಾನಿಗಳಿಗೆ ಅವರು ಕೊಡಲಿದ್ದಾರೆ. ಆ ದೊಡ್ಡ ಸುದ್ದಿಯಲ್ಲಿ ವೆಂಕಟ್ ಅವರ ಹೆಸರೂ ಇರಲಿದೆ ಎನ್ನುವುದು ಸದ್ಯಕ್ಕಿರುವ ಕುತೂಹಲ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಯಶ್ ಹೊಸ ಸಿನಿಮಾ: 400 ಕೋಟಿ ನಿರ್ಮಾಪಕರ ಜೊತೆ ರಾಕಿಂಗ್ ಸ್ಟಾರ್

    ಯಶ್ ಹೊಸ ಸಿನಿಮಾ: 400 ಕೋಟಿ ನಿರ್ಮಾಪಕರ ಜೊತೆ ರಾಕಿಂಗ್ ಸ್ಟಾರ್

    ರಾಕಿಂಗ್ ಸ್ಟಾರ್ (Rocking Star) ಯಶ್ ಇಂದು ತಮ್ಮ ಹುಟ್ಟು ಹಬ್ಬ (Birthday)ವನ್ನು ಕೆಲವೇ ಕೆಲವು ಆಪ್ತರ ಜೊತೆ ದುಬೈನಲ್ಲಿ ಆಚರಿಸಿಕೊಂಡಿದ್ದಾರೆ. ಪತ್ನಿ ರಾಧಿಕಾ ಪಂಡಿತ್ ಕುಟುಂಬದ ಜೊತೆ ಎರಡು ದಿನಗಳ ಹಿಂದೆಯಷ್ಟೇ ದುಬೈಗೆ ಹಾರಿರುವ ಯಶ್ (Yash), ಅಲ್ಲಿಯೇ ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಈ ಸಂದರ್ಭದಲ್ಲಿ ಅವರ ಹೊಸ ಸಿನಿಮಾದ ಬಗ್ಗೆ ಅಪ್ ಡೇಟ್ ಸಿಗಲಿದೆ ಎಂದು ಅಭಿಮಾನಿಗಳು ಕಾದಿದ್ದರು. ಆದರೆ, ಸ್ವಲ್ಪ ದಿನ ಕಾಯಿರಿ ದೊಡ್ಡ ಸುದ್ದಿಯನ್ನೇ ಕೊಡುತ್ತೇನೆ ಎಂದು ಹೇಳಿ ಪತ್ರ ಬರೆದಿದ್ದರು.

    ಯಶ್ ಅವರ ಹೊಸ ಸಿನಿಮಾದ ಬಗ್ಗೆ ಆರೇಳು ತಿಂಗಳಿಂದ ಹೊಸ ಹೊಸ ಸುದ್ದಿಗಳು ಬರುತ್ತಲೇ ಇವೆ. ಬಂದ ವೇಗದಲ್ಲೇ ಅವರು ಹುಸಿಯಾಗುತ್ತಿವೆ. ಆದರೆ, ಇತ್ತೀಚೆಗಷ್ಟೇ ಅವರ ಹೊಸ ಸಿನಿಮಾದ ಅಚ್ಚರಿಯ ಸಂಗತಿಯೊಂದು ಹೊರ ಬಿದ್ದಿತ್ತು. ಅವರ ಮುಂದಿನ ಸಿನಿಮಾ ಬಜೆಟ್ ಬರೋಬ್ಬರಿ 400 ಕೋಟಿ ಎಂದು ಹೇಳಲಾಗಿತ್ತು. ಈ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡುತ್ತಿರುವ ಸಂಸ್ಥೆ ಕೆವಿಎನ್ ಎಂದು ಹೇಳಲಾಗಿತ್ತು. ಅದೀಗ ನಿಜ ಎನ್ನುವಂತೆ ಸಾಕ್ಷಿಯೊಂದು ಸಿಕ್ಕಿದೆ. ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಎಂಟ್ರಿಯಿಂದ ವಿಜಯ್- ಸಂಗೀತಾ ದಾಂಪತ್ಯದಲ್ಲಿ ಕಲಹ?

    ಯಶ್ ಅವರು 19ನೇ ಸಿನಿಮಾವನ್ನು ದಕ್ಷಿಣದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ಮಾಡಲಿದೆ ಎನ್ನುವ ವರ್ತಮಾನ ಗಾಂಧಿನಗರದಲ್ಲಿ ಬಲವಾಗಿಯೇ ಕೇಳಿ ಬರುತ್ತಿತ್ತು. ಅದು ನಿಜ ಎನ್ನುವಂತೆ ಕೆವಿಎನ್ ಪ್ರೊಡಕ್ಷನ್ ನ ವೆಂಕಟ್ ಕೋಣಂಕಿ ನಾರಾಯಣ್ (Venkat Konanki Narayan) ಅವರು ಯಶ್ ಜೊತೆ ಕಾಣಿಸಿಕೊಂಡಿದ್ದಾರೆ. ಹುಟ್ಟು ಹಬ್ಬದ ಪಾರ್ಟಿಯಲ್ಲಿ ವೆಂಕಟ್ ಕೂಡ ಭಾಗಿಯಾಗಿ ಶುಭ ಹಾರೈಸಿದ್ದಾರೆ. ಹಾಗಾಗಿ ಇವರೇ ಮುಂದಿನ ಸಿನಿಮಾದ ನಿರ್ಮಾಪಕರು ಎನ್ನುವುದು ನಿಕ್ಕಿಯಾದಂತಾಗಿದೆ.

    ಈ ಹಿಂದೆ ಯಶ್, ಗೋವಾದ ಮುಖ್ಯಮಂತ್ರಿಗಳನ್ನು ಭೇಟಿಯಾದಾಗ ಇದೇ ವೆಂಕಟ್ ಕೂಡ ಜೊತೆಗಿದ್ದರು. ಅವತ್ತೇ ಒಂದು ಸುಳಿವನ್ನೂ ಅವರು ಬಿಟ್ಟುಕೊಟ್ಟಿದ್ದರು. ಪದೇ ಪದೇ ಯಶ್ ಜೊತೆ ವೆಂಕಟ್ ಕಾಣಿಸಿಕೊಳ್ಳುತ್ತಿರುವುದು ಸುದ್ದಿಗೆ ಪುಷ್ಠಿ ನೀಡಿದಂತಾಗಿದೆ. ಸ್ವತಃ ಯಶ್ ಅವರೇ ಹೇಳಿದಂತೆ ಮುಂದಿನ ದಿನಗಳಲ್ಲಿ ದೊಡ್ಡ ಸುದ್ದಿಯನ್ನೇ ಅವರ ಅಭಿಮಾನಿಗಳಿಗೆ ಅವರು ಕೊಡಲಿದ್ದಾರೆ. ಆ ದೊಡ್ಡ ಸುದ್ದಿಯಲ್ಲಿ ವೆಂಕಟ್ ಅವರ ಹೆಸರೂ ಇರಲಿದೆ ಎನ್ನುವುದು ಸದ್ಯಕ್ಕಿರುವ ಕುತೂಹಲ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k