Tag: Yash 19

  • Toxic: ಯಶ್ ಸಿನಿಮಾ ಎಲ್ಲಿಗೆ ಬಂತು? ಇಲ್ಲಿದೆ ಬಿಗ್ ಅಪ್‌ಡೇಟ್

    Toxic: ಯಶ್ ಸಿನಿಮಾ ಎಲ್ಲಿಗೆ ಬಂತು? ಇಲ್ಲಿದೆ ಬಿಗ್ ಅಪ್‌ಡೇಟ್

    ಶ್ (Yash) ಮುಂದಿನ ಸಿನಿಮಾ ಅನೌನ್ಸ್ ಮಾಡಿದ ದಿನದಿಂದ ಈ ಪ್ರಾಜೆಕ್ಟ್ ಬಗ್ಗೆ ದಿನಕೊಂದು ಸುದ್ದಿ ಚಾಲ್ತಿಗೆ ಬರ್ತಿದೆ. ಕರೀನಾ ಕಪೂರ್ ಹೆಸರು ಕೆಲವು ದಿನ ಸದ್ದು ಮಾಡ್ತು ಈಗ ಶಾರುಖ್ ಖಾನ್ (Sharukh Khan) ಕಾಣಿಸಿಕೊಳ್ತಿದ್ದಾರೆ. ಅಸಲಿಗೆ ‘ಟಾಕ್ಸಿಕ್’ನಲ್ಲಿ (Toxic Film) ಈ ಕಲಾವಿದರು ಕೆಲಸ ಮಾಡ್ತಾರಾ? ಮಾತುಕತೆ ನಡೆದಿದ್ಯಾ? ಯಾರು ಯಾರು ಈ ಸಿನಿಮಾದಲ್ಲಿ ಇರುತ್ತಾರೆ? ಯಾವಾಗ ಮುಹೂರ್ತ ಆಗಲಿದೆ? ಈ ಬಗ್ಗೆ ಇಲ್ಲಿದೆ ಮಾಹಿತಿ.

    ಕೆಜಿಎಫ್ (KGF) ಬಳಿಕ ರಾಕಿಂಗ್ ಸ್ಟಾರ್ ಯೋಜನೆಗಳಲ್ಲಿ ಬಹಳಷ್ಟು ಬದಲಾವಣೆಗಳು ಕಂಡು ಬರುತ್ತಿವೆ. ಮುಂದಿನ ಸಿನಿಮಾ ಬಗ್ಗೆ ಯಶ್ ಮಾಡ್ತಿರುವ ಪ್ಲ್ಯಾನಿಂಗ್ ಬಹಳಷ್ಟು ಜನರ ನಿದ್ದೆ ಕೆಡಿಸಿದೆ. ಯಶ್ ಸಿನಿಮಾ ಅನೌನ್ಸ್ ಮಾಡಿದ ಕ್ಷಣದಿಂದ ‘ಟಾಕ್ಸಿಕ್’ ಬಗ್ಗೆ ದಿನಕ್ಕೊಂದು ಅಪ್‌ಡೇಟ್ ಬರುತ್ತಿದೆ. ಆದರೆ ಅದರ ಬಗ್ಗೆ ಯಶ್ ಎಲ್ಲೂ ಮಾತನಾಡ್ತಿಲ್ಲ. ಬದಲಾಗಿ ತಮ್ಮ ಸಿನಿಮಾದ ಕೆಲಸ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರೆ. ಗದಗದಲ್ಲಿ ನಡೆದ ಕರೆಂಟ್‌ ದುರಂತದಿಂದ ಅಭಿಮಾನಿಗಳ ಅಗಲಿಕೆಯಿಂದ ನೊಂದಿದ್ದ ಯಶ್ ಈಗ ಮತ್ತೆ ಕೆಲಸದಲ್ಲಿ ಮಗ್ನರಾಗಿದ್ದಾರೆ.

    ಕಳೆದ ಕೆಲವು ದಿನಗಳ ಹಿಂದೆ ಬಾಲಿವುಡ್ ನಟಿ ಕರೀನಾ ಕಪೂರ್ (Kareena Kapoor) ಮತ್ತು ಶಾರುಖ್ ಖಾನ್ (Sharukh Khan) ‘ಟಾಕ್ಸಿಕ್’ ಸಿನಿಮಾದಲ್ಲಿ ನಟಿಸ್ತಾರೆ ಅಂತ ಮಾತು ಶುರುವಾಗಿತ್ತು. ಯಶ್ ಆಗಲಿ ತಂಡದವರಾಗಲಿ ಈ ಬಗ್ಗೆ ಮಾತನಾಡಲಿಲ್ಲ. ಉತ್ತರ ಕೊಡುವ ಬದಲು ಕೆಲಸ ಮುಂದುವರಿಸಿದ್ದರು. ಇದನ್ನೂ ಓದಿ:ಎಂಗೇಜ್‌ಮೆಂಟ್ ಸಂಭ್ರಮದಲ್ಲಿ ನಿರ್ದೇಶಕ ಅಭಿಷೇಕ್ ಶೆಟ್ಟಿ

    ಈ ಬಗ್ಗೆ ಯಶ್ ಆಪ್ತವಲಯದಿಂದ ಬರುತ್ತಿರುವ ಅಪ್‌ಡೇಟ್ ಒಂದೇ ಎಲ್ಲವೂ ಟೈಮ್ ಬಂದಾಗ ರಿವೀಲ್ ಆಗಲಿದೆ. ಸಿನಿಮಾದಲ್ಲಿ ಬಹಳಷ್ಟು ಪಾತ್ರಗಳಿರುತ್ತದೆ. ಎಲ್ಲವೂ ಅಂದು ಕೊಂಡಂತೆ ಆದ್ಮೇಲೆ ತಂಡ ಅಫೀಷಿಯಲ್ ಆಗಿ ಅನೌನ್ಸ್ ಮಾಡುತ್ತಾರೆ. ಅಲ್ಲಿಯವರೆಗೆ ಯಾವುದನ್ನೂ ನಂಬಬೇಡಿ ಅನ್ನೋದು ಯಶ್ ಆಪ್ತವಲಯದಿಂದ ಬರುತ್ತಿರುವ ಸಂದೇಶ. ಅಲ್ಲಿಗೆ ಶಾರುಖ್ ಖಾನ್, ಕರೀನಾ ಕಪೂರ್ ಹೆಸರುಗಳಿಗೆ ಬ್ರೇಕ್ ಹಾಕಬೇಕಿದೆ ಅಷ್ಟೇ.

    ಹುಟ್ಟುಹಬ್ಬದಂದು ಅರ್ಧಕ್ಕೆ ಕೆಲಸ ನಿಲ್ಲಿಸಿ ಅಭಿಮಾನಿಗಳ ಮನೆ ಬಾಗಿಲಿಗೆ ಹೋಗಿದ್ದರು ಯಶ್. ಅರ್ಧಕ್ಕೆ ನಿಲ್ಲಿಸಿದ ಆ ಕೆಲಸವನ್ನ ಪೂರ್ತಿ ಮಾಡಿದ್ದಾರೆ. ಶೂಟಿಂಗ್ ಶುರು ಮಾಡಲು ಬೇಕಾದ ಅಂತಿಮ ಹಂತದ ಸಿದ್ಧತೆ ಮಾಡಿಕೊಳ್ತಿದ್ದಾರೆ. ಫೆಬ್ರವರಿ ಅಂತ್ಯದಲ್ಲಿ ಅಥವಾ ಮಾರ್ಚ್ ಮೊದಲ ವಾರದಲ್ಲಿ ‘ಟಾಕ್ಸಿಕ್’ (Toxic) ಮುಹೂರ್ತ ನಡೆಯಲಿದೆ. ಆಮೇಲೆ ಲಂಡನ್, ಶ್ರೀಲಂಕಾ, ಮಲೇಷಿಯಾದಲ್ಲಿ ಶೂಟಿಂಗ್ ನಡೆಯಲಿದೆ.

  • ವಿದ್ಯುತ್‌ ಸ್ಪರ್ಶ ಘಟನೆ- ಮೃತಪಟ್ಟ ಮೂವರು ಅಭಿಮಾನಿಗಳ ಮನೆಗೆ ಭೇಟಿ ನೀಡಿ ಯಶ್‌ ಸಾಂತ್ವನ

    ವಿದ್ಯುತ್‌ ಸ್ಪರ್ಶ ಘಟನೆ- ಮೃತಪಟ್ಟ ಮೂವರು ಅಭಿಮಾನಿಗಳ ಮನೆಗೆ ಭೇಟಿ ನೀಡಿ ಯಶ್‌ ಸಾಂತ್ವನ

    ಟ ಯಶ್ (Yash) ಹುಟ್ಟುಹಬ್ಬದ ಸಲುವಾಗಿ ಕಟೌಟ್ ನಿಲ್ಲಿಸುವುದಕ್ಕೆ ಹೋಗಿ ವಿದ್ಯುತ್ ಸ್ಪರ್ಶದಿಂದ ನಿಧನರಾಗಿರುವ ಮೂವರು ಅಭಿಮಾನಿಗಳ ಕುಟುಂಬಸ್ಥರನ್ನು ಭೇಟಿ ಮಾಡಲು ರಾಕಿಂಗ್‌ ಸ್ಟಾರ್ ಗದಗದ ಸೊರಣಗಿ ಬಂದಿದ್ದಾರೆ. ಭದ್ರತೆಗಾಗಿ ಎಸ್ ಪಿ ವಾಹನದಲ್ಲಿ ಯಶ್ ಆಗಮಿಸಿದ್ದು, ಮೃತ‌ಪಟ್ಟ ಅಭಿಮಾನಿಗಳ ಕುಟುಂಬಕ್ಕೆ ಸಾಂತ್ವನ ನೀಡಿದ್ದಾರೆ.

    ಮೃತ ಮುರಳಿ ತಂದೆ ಕೈ ಹಿಡಿದು ಯಶ್‌ ಧೈರ್ಯ ತುಂಬಿದ್ದಾರೆ. 3 ಜನ ಮೃತರ ಮನೆಗೆ ಯಶ್‌ ಭೇಟಿ ನೀಡಿದ್ದಾರೆ. ಮೊದಲು ಮೃತ ಮುರಳಿ ಮನೆಗೆ ತೆರಳಿ, ಅವರ ತಂದೆಗೆ ಧೈರ್ಯ ಹೇಳಿ, ಮೃತ ನವೀನ್‌ ಗಾಜಿ ಮತ್ತು ಹನುಮಂತ ಹರಿಜನ್‌ ಮನೆಗೆ ಭೇಟಿ ಯಶ್‌ ಸಾಂತ್ವನ ಹೇಳಿದ್ದಾರೆ. ಇದನ್ನೂ ಓದಿ:ರವಿ ಬಸ್ರೂರ್ ಪುತ್ರನ ಚಿತ್ರಕ್ಕೆ ಇಂಜಿನಿಯರ್ ಶಶಿಕಿರಣ್ ಡೈರೆಕ್ಟರ್

    ಮೃತರ ಕುಟುಂಬಕ್ಕೆ ಸಾಂತ್ವನ ಹೇಳಲು ಹುಬ್ಬಳ್ಳಿಗೆ ಯಶ್ ಬಂದಿಳಿದಿದ್ದಾರೆ. ಅಭಿಮಾನಿಗಳ ಕುಟುಂಬಕ್ಕೆ ಸಾಂತ್ವನ ಹೇಳಲು ಯಶ್ ಆಗಮಿಸಿದ್ದಾರೆ. ಯಶ್ ಹುಟ್ಟುಹಬ್ಬಕ್ಕೆ ಬೃಹತ್ ಗಾತ್ರದ ಕಟೌಟ್ ಕಟ್ಟಲು ಹೋಗಿ ವಿದ್ಯುತ್ ಸ್ಪರ್ಶದಿಂದ 3 ಜನ ಸಾವನ್ನಪ್ಪಿದ ಘಟನೆ ಲಕ್ಷ್ಮೇಶ್ವರ ಸೂರಣಗಿ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ:ವಿದ್ಯುತ್ ಸ್ಪರ್ಶಿಸಿ ಯಶ್ ಅಭಿಮಾನಿಗಳ ದುರ್ಮರಣ – ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ

    ಮೃತರನ್ನು ಹನುಮಂತ ಹರಿಜನ್ (24), ಮುರಳಿ ನಡುವಿನಮನಿ (20) ಹಾಗೂ ನವೀನ್ ಗಾಜಿ (20) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಮಂಜುನಾಥ್, ಪ್ರಕಾಶ್ ಹಾಗೂ ಹನುಮಂತ ಎಂಬವರಿಗೆ ಗಂಭೀರ ಗಾಯಾಳಾಗಿವೆ. ಮಧ್ಯರಾತ್ರಿ 1 ಗಂಟೆ ವೇಳೆ ಕಟೌಟ್ ಕಟ್ಟುವ ವೇಳೆ ಈ ದುರ್ಘಟನೆ ನಡೆದಿದೆ. ಗಾಯಾಳುಗಳನ್ನು ಲಕ್ಷ್ಮೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

    ಮಧ್ಯರಾತ್ರಿ ವೇಳೆ, ಹತ್ತಾರು ಜನ ಯುವಕರು ಸೇರಿಕೊಂಡು ತಮ್ಮ ನೆಚ್ಚಿನ ನಟನ ಕಟೌಟ್ ಕಟ್ಟಲು ಮುಂದಾಗಿದ್ದಾರೆ. ರಾತ್ರಿ ಸಮಯ ಆಗಿದ್ದರಿಂದ ವಿದ್ಯುತ್ ತಂತಿ ಯುವಕರ ಗಮನಕ್ಕೆ ಬಂದಿಲ್ಲ. ಇದರಿಂದ ಈ ದುರ್ಘಟನೆ ಸಂಭವಿಸಿದೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ಸೂತಕದ ಛಾಯೆ ಮನೆ ಮಾಡಿದೆ.ಈ ಸಂಬಂಧ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • Yash: ‘ಟಾಕ್ಸಿಕ್’ಗೆ ಶೃತಿ ಹಾಸನ್, ಜೆರೆಮಿಸ್ಟಾಕ್ ಸಾಥ್

    Yash: ‘ಟಾಕ್ಸಿಕ್’ಗೆ ಶೃತಿ ಹಾಸನ್, ಜೆರೆಮಿಸ್ಟಾಕ್ ಸಾಥ್

    ಒಂದು ನಿಮಿಷ ಹದಿನೆಂಟು ಸೆಕೆಂಡ್‌ನ ‘ಟಾಕ್ಸಿಕ್’ (Toxic Film) ವಿಡಿಯೋ ಸೈಕ್ ಮಾಡ್ತಿದೆ. ಪ್ರತಿ ಬಾರಿ ಈ ಟೈಟಲ್ ಟೀಸರ್‌ನ ನೋಡಿದಾಗ ಹೊಸದೊಂದು ಅನುಭವ ಕೊಡ್ತಿದೆ. ಅಷ್ಟೋಂದು ವಿಷಗಳನ್ನ ಈ ಪುಟ್ಟ ವಿಡಿಯೋದಲ್ಲಿ ಅಡಗಿಸಲಾಗಿದೆ. ಈ ಟೀಸರ್‌ನಲ್ಲಿ ರ‍್ಯಾಪ್ ಮಾಡಿರೋದು ಯಾರು? ಮ್ಯೂಸಿಕ್ ಕೊಟ್ಟವರು ಯಾರು? ಡಿಸೈನರ್ ಯಾರು ಅನ್ನೋ ಹಲವಾರು ಪ್ರಶ್ನೆಗಳು ಅಭಿಮಾನಿಗಳು ಕೇಳ್ತಿದ್ದಾರೆ.

    ಕಾಯಿಸಿ-ಸತಾಯಿಸಿ ಯಶ್ ಅದ್ಬುತವಾದ ಕಂಟೆಂಟ್‌ನ ಜನರ ಮುಂದಿಟ್ಟಿದ್ದಾರೆ. ಡಿಸೆಂಬರ್ 8ರಂದು ರಿಲೀಸ್ ಆದ ‘ಟಾಕ್ಸಿಕ್’ ಟೈಟಲ್ ಟೀಸರ್ ಗಂಟೆಗಳಲ್ಲಿ ಲಕ್ಷ ಲಕ್ಷ ವ್ಯೂವ್ಸ್ ಪಡೆದು ಕೊಳ್ತು. ನಿರ್ದೆಶಕಿ ಗೀತೂ ಮೋಹನ್‌ದಾಸ್ ಪ್ರತಿ ಫ್ರೆಮ್‌ನೂ ಮುತ್ತು ಪೋಣಿಸಿದ ಹಾಗೇ ಪೋಣಿಸಿದ್ದಾರೆ. ಪ್ರತಿ ಸೆಕೆಂಡ್‌ನಲ್ಲೂ ಒಂದಿಷ್ಟು ವಿಚಾರಳನ್ನ ಅಡಗಿಸಿ ಜನರ ಮಡಿಲಿಗೆ ಅರ್ಪಿಸಿದ್ದಾರೆ. ಸದ್ಯ ‘ಟಾಕ್ಸಿಕ್’ ಮ್ಯೂಸಿಕ್ ವಿಚಾರ ಪಾಸಿಟಿವ್ ನೋಟ್‌ನಲ್ಲಿ ಸದ್ದು ಮಾಡ್ತಿದೆ. ಇದನ್ನೂ ಓದಿ:ಜರೀನ್ ಖಾನ್ ಗೆ ಜಾಮೀನು: ನಿಟ್ಟುಸಿರಿಟ್ಟ ನಟಿ

    ಚರಣ್‌ರಾಜ್ ಮ್ಯೂಸಿಕ್ ಸ್ಟುಡಿಯೋದಲ್ಲಿ ಯಶ್ (Yash) ಹೊಸ ಸಿನಿಮಾ ಕೆಲಸ ಮಾಡಿಸ್ತಿದ್ದಾರೆ ಅನ್ನೋ ವಿಚಾರ ಕೇಳಿದ್ವಿ. ಈಗ ಲಂಡನ್ ಮೂಲದ ಜೆರೆಮಿಸ್ಟಾಕ್ ಹೆಸರು ಚಾಲ್ತಿಯಲ್ಲಿದೆ. ದೇಶ-ವಿದೇಶದಲ್ಲಿ ಮೆರವಣಿಗೆ ಹೊರಡಲಿರುವ ಟಾಕ್ಸಿಕ್‌ಗೆ ಇಬ್ಬರೂ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಲಿದ್ದಾರೆ ಅನ್ನೋ ಟಾಕ್ ಕೂಡ ಇದೇ. ಟೀಸರ್‌ನಲ್ಲಿ ರ‍್ಯಾಪ್‌ಗೆ ಶೃತಿ ಹಾಸನ್ (Shruti Haasan) ಕಂಠ ಕುಣಿಸಿದ್ದಾರೆ ಅನ್ನೋ ಟಾಕ್ ಕೂಡ ಇದೇ. ನಮ್ಮ ಮಣ್ಣಿನ ಬೇರು ಹೊಸ ಚಿಗುರು ಅನ್ನೋ ಕಾನ್ಸೆಪ್ಟ್‌ಗೆ ‘ಟಾಕ್ಸಿಕ್’ ಟೀಮ್ ಕೈ ಹಾಕಿದೆ ಅನಿಸ್ತಿದೆ.

    ಒಟ್ನಲ್ಲಿ ಕೆಜಿಎಫ್ 1, ಕೆಜಿಎಫ್ 2 (KGF 2) ಸಿನಿಮಾದ ಸಕ್ಸಸ್ ನಂತರ ಯಶ್ 19ನೇ ಸಿನಿಮಾ ‘ಟಾಕ್ಸಿಕ್’ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಿಸಿದೆ.

  • Yash 19: ಯಶ್ ಕಡೆಯಿಂದ ಸಿಕ್ತು ಮುಂದಿನ ಚಿತ್ರಕ್ಕೆ ಗ್ರೀನ್ ಸಿಗ್ನಲ್

    Yash 19: ಯಶ್ ಕಡೆಯಿಂದ ಸಿಕ್ತು ಮುಂದಿನ ಚಿತ್ರಕ್ಕೆ ಗ್ರೀನ್ ಸಿಗ್ನಲ್

    ನ್ನಡದ ಸೂಪರ್ ಸ್ಟಾರ್ ಯಶ್ (Yash) ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗೆದ್ದು ಬೀಗಿದ್ದು ಆಗಿದೆ. ಇನ್ನೂ ಏನೇ ಇದ್ರೂ ಮುಂದಿನ ಚಿತ್ರದ ಬಗ್ಗೆ ಅನೌನ್ಸ್ ಮಾಡೊದೊಂದೇ ಬಾಕಿ. ಹೀಗಿರುವಾಗ ಅಭಿಮಾನಿಗಳ ನಿರೀಕ್ಷೆಯಂತೆ ಯಶ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಯಶ್ ಕಡೆಯಿಂದ ಮುಂದಿನ ಸಿನಿಮಾಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.

    ಕೆಜಿಎಫ್, ಕೆಜಿಎಫ್ 2 (KGF 2) ಸಕ್ಸಸ್ ಬಳಿಕ ಯಶ್ ಸೈಲೆಂಟ್ ಆಗಿ ಮುಂದಿನ ಸಿನಿಮಾಗೆ ಭರ್ಜರಿ ತಯಾರಿ ಮಾಡಿಕೊಳ್ತಾ ಇದ್ದರು. ಈಗ ಬಿಗ್ ಅಪ್‌ಡೇಟ್ ಸಿಕ್ಕಿದೆ. ‘ಲೋಡಿಂಗ್’ ಎಂಬ ಬರಹದ ಫೋಟೋವನ್ನ ಇನ್ಸ್ಟಾಗ್ರಾಂ ಮುಖಪುಟ ಬದಲಿಸಿದ್ದಾರೆ ಯಶ್. ಸಂಡೆ ಸಂಜೆ ಯಶ್ ಸಖತ್ ನ್ಯೂಸ್ ಕೊಟ್ಟಿದ್ದಾರೆ.

    ರಾಕಿಭಾಯ್ ಆಗಿ ಘರ್ಜಿಸಿದ ಮೇಲೆ ಯಶ್ 19 (Yash 19) ಯಾವಾಗ ಎಂದು ಎಲ್ಲರೂ ಕೇಳುತ್ತಿದ್ದರು. ಲೋಡಿಂಗ್ ಎಂಬ ಬರಹದ ಮೂಲಕ ಮುಂದಿನ ಚಿತ್ರದ ಬಗ್ಗೆ ಸುಳಿವು ನೀಡಿದ್ದಾರೆ. ಈ ಮೂಲಕ ‘ಯಶ್ 19’ ಸಿನಿಮಾಗೆ ಕೌಂಟ್ ಡೌನ್ ಶುರುವಾಗಿದೆ. ಇದನ್ನೂ ಓದಿ:ಬಾಲಿವುಡ್‌ನಲ್ಲಿ ಸ್ಥಾನ ಭದ್ರ ಮಾಡಿಕೊಂಡ ರಶ್ಮಿಕಾ ಮಂದಣ್ಣ

    ನಟ ಯಶ್ ಅವರು ಮಲಯಾಳಂ ಡೈರೆಕ್ಟರ್ ಗೀತು ಮೋಹನ್ ದಾಸ್ ಜೊತೆ ಕೈಜೋಡಿಸಿದ್ದಾರೆ ಎಂಬ ಸುದ್ದಿಯಿದೆ. ‘ಯಶ್ 19’ ಪ್ರಾಜೆಕ್ಟ್ ಜೊತೆಗೆ ಕೆಜಿಎಫ್ 3 ಕೂಡ ಯಶ್ ಕೈಯಲ್ಲಿದೆ.

  • Yash 19: ಮುಂದಿನ ಚಿತ್ರದ ಬಗ್ಗೆ ಯಶ್ ಪ್ರತಿಕ್ರಿಯೆ

    Yash 19: ಮುಂದಿನ ಚಿತ್ರದ ಬಗ್ಗೆ ಯಶ್ ಪ್ರತಿಕ್ರಿಯೆ

    ನ್ಯಾಷನಲ್ ಸ್ಟಾರ್ ಯಶ್ (Yash) ಅವರು ಯಶ್ 19 ಸಿನಿಮಾ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಅವರ ಮುಂದಿನ ಚಿತ್ರದ ಅಪ್‌ಡೇಟ್‌ಗಾಗಿ ಪ್ರೇಕ್ಷಕರು ಕಳೆದ ಒಂದೂವರೆ ವರ್ಷದಿಂದ ಕಾಯುತ್ತಿದ್ದಾರೆ. ಹೀಗಿರುವಾಗ ತಮ್ಮ ಮುಂದಿನ ಚಿತ್ರದ ಬಗ್ಗೆ ಯಶ್ ಪ್ರತಿಕ್ರಿಯೆ ನೀಡಿದ್ದಾರೆ.

    ಯಶ್ ಸಮಾರಂಭವೊಂದರಲ್ಲಿ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ, ನನಗೆ ನಿಮ್ಮ ಕಾತರ ಅರ್ಥವಾಗುತ್ತದೆ. ನನ್ನನ್ನು ದೊಡ್ಡದಾಗಿ ಬೆನ್ನುತಟ್ಟಿದ್ದೀರ. ಆದರೆ ನಾನು ಸುಮ್ಮನೆ ಕೂತಿಲ್ಲ. ನಾನು ರಿಲ್ಯಾಕ್ಸ್ ಆಗುತ್ತಿಲ್ಲ. ಬದಲಿಗೆ ದೊಡ್ಡ ಮಟ್ಟದ ಕೆಲಸಕ್ಕೆ ಸಿದ್ಧತೆ ಮಾಡಿಕೊಳ್ಳುತ್ತೇನೆ. ಸಾಧಾರಣವಾದ ಕೆಲಸ ಮಾಡಲು ನನಗೆ ಇಷ್ಟವಿಲ್ಲ, ಎಲ್ಲರೂ ಹೆಮ್ಮೆ ಪಡುವಂತಹ ಕೆಲಸವನ್ನೇ ಮಾಡುತ್ತೇನೆ ಎಂದು ಯಶ್ ಮಾತನಾಡಿದ್ದಾರೆ.

    ಖಂಡಿತಾ ಸಿನಿಮಾ ಬಗ್ಗೆ ಅಪ್‌ಡೇಟ್ ಕೊಡುತ್ತೀನಿ. ಎಲ್ಲ ಊಟ ರೆಡಿಯಾದ ಮೇಲೆ ಬಡಿಸಿದರೇನೆ ಚೆಂದ. ಅರ್ಧಂಬರ್ಧ ಅಡುಗೆ ಮಾಡಿ ಊಟಕ್ಕೆ ಕರೆಯುವುದು ಸರಿ ಹೋಗುವುದಿಲ್ಲ. ನೀವೆಲ್ಲರೂ ಹೆಮ್ಮೆ ಪಡುವಂತಹ ಕೆಲಸ ಮಾಡುತ್ತೀನಿ ಎಂದು ಯಶ್ ಖುಷಿಯಿಂದ ಮಾತನಾಡಿದ್ದಾರೆ. ಇದನ್ನೂ ಓದಿ:ಮಾನ್ವಿತಾ ನಟನೆಯ ‘ಒನ್ ಅಂಡ್ ಆಫ್’ ಚಿತ್ರದ ಫಸ್ಟ್‌ ಲುಕ್‌ ಔಟ್‌

    ಕೆಜಿಎಫ್, ಕೆಜಿಎಫ್ 2 (KGF2) ಸಕ್ಸಸ್ ನಂತರ ಯಶ್ 19 ಚಿತ್ರ ಕೂಡ ಯಶಸ್ಸು ಕಾಣಲೇಬೇಕು ಅಂತ ರಾಕಿಭಾಯ್ ಪಣ ತೊಟ್ಟಿದ್ದಾರೆ. ಗೆಲುವಿನ ರುಚಿ ನೋಡಿರೋ ಯಶ್ ತಮ್ಮ ಮುಂದಿನ ಚಿತ್ರಕ್ಕೆ ಸಕಲ ಸಿದ್ಧತೆ ಮಾಡಿಕೊಂಡೇ ಮತ್ತೆ ಅಖಾಡಕ್ಕೆ ಇಳಿಯಲಿದ್ದಾರೆ. ಅಲ್ಲಿಯವರೆಗೂ ಕಾಯಬೇಕಿದೆ.

  • ಅದ್ದೂರಿಯಾಗಿ ನಡೆಯಿತು ಯಶ್ ಪುತ್ರನ ಬರ್ತ್‌ಡೇ

    ಅದ್ದೂರಿಯಾಗಿ ನಡೆಯಿತು ಯಶ್ ಪುತ್ರನ ಬರ್ತ್‌ಡೇ

    ನ್ಯಾಷನಲ್ ಸ್ಟಾರ್ ಯಶ್-ರಾಧಿಕಾ ಪಂಡಿತ್ (Radhika Pandit) ದಂಪತಿಯ ಪುತ್ರ ಯಥರ್ವ್ 4ನೇ ವರ್ಷದ ಹುಟ್ಟುಹಬ್ಬದ (ಅ.30) ಸಂಭ್ರಮವನ್ನು ಗ್ರ್ಯಾಂಡ್‌ ಆಗಿ ಆಚರಿಸಿದ್ದಾರೆ. ಬರ್ತ್‌ಡೇ ಸೆಲೆಬ್ರೇಶನ್ ಫೋಟೋವನ್ನು ನಟಿ ರಾಧಿಕಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ಪುತ್ರಿ ಐರಾ ಮತ್ತು ಯಥರ್ವ್ ಹುಟ್ಟುಹಬ್ಬವನ್ನು ಪ್ರತಿ ವರ್ಷವೂ ಗ್ರ್ಯಾಂಡ್‌ ಸೆಲೆಬ್ರೇಟ್ ಮಾಡುತ್ತಾರೆ. ಎಂದಿನಂತೆ ಈ ವರ್ಷವೂ ಕೂಡ ಯಶ್ ಪುತ್ರನ ಬರ್ತ್‌ಡೇ ಅದ್ದೂರಿಯಾಗಿ ನಡೆದಿದೆ. ಮಗನ ಬರ್ತ್‌ಡೇಯಂದು ಮಕ್ಕಳ ಜೊತೆ ಯಶ್, ರಾಧಿಕಾ ಕೂಡ ಮಸ್ತ್ ಆಗಿ ಡ್ಯಾನ್ಸ್ ಸ್ಟೇಪ್ಸ್ ಹಾಕಿದ್ದಾರೆ.

     

    View this post on Instagram

     

    A post shared by Radhika Pandit (@iamradhikapandit)

    ಖಾಸಗಿ ಹೋಟೆಲ್‌ವೊಂದರಲ್ಲಿ ಅದ್ದೂರಿ ಹುಟ್ಟುಹಬ್ಬದ ಆಚರಣೆ ಮಾಡಿದ್ದಾರೆ. ಬಾಲ ಹನುಮಾನ್ ಥೀಮ್‌ನಲ್ಲಿ ಸೆಲೆಬ್ರೇಶನ್ ನಡೆದಿದೆ. ಈ ಕಲರ್‌ಫುಲ್ ಸಮಾರಂಭದಲ್ಲಿ ಕುಟುಂಬಸ್ಥರು, ಆಪ್ತರಷ್ಟೇ ಭಾಗಿಯಾಗಿದ್ದರು. ಇದನ್ನೂ ಓದಿ:ನನ್ನ ರಕ್ತಹೀರಿಕೊಂಡು ಬಿಟ್ಟಿದ್ದಾರೆ- ಸಂಗೀತಾಗೆ ರೇಗಿಸಿದ ಕಾರ್ತಿಕ್‌

    ಇನ್ನೂ ‘ಯಶ್ 19’ (Yash 19) ಚಿತ್ರದ ಬಗ್ಗೆ ಇದುವರೆಗೂ ಯಾವುದೇ ಅಪ್‌ಡೇಟ್ ಸಿಕ್ಕಿಲ್ಲ. ಒಂದೂವರೆ ವರ್ಷ ಕಳೆದರೂ ಯಶ್ (Actor Yash) ತಮ್ಮ ಮುಂದಿನ ಸಿನಿಮಾ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಆದರೆ ಅದರ ತಯಾರಿಯಲ್ಲಿ ರಾಕಿ ಭಾಯ್ ಬ್ಯುಸಿಯಾಗಿದ್ದಾರೆ.

  • Deepavali: ನಿಮ್ಮ ಬಾಳಿನಲ್ಲಿ ಕತ್ತಲೆ ಕಳೆದು ಬೆಳಕು ಮೂಡಲಿ- ರಾಧಿಕಾ ಪಂಡಿತ್

    Deepavali: ನಿಮ್ಮ ಬಾಳಿನಲ್ಲಿ ಕತ್ತಲೆ ಕಳೆದು ಬೆಳಕು ಮೂಡಲಿ- ರಾಧಿಕಾ ಪಂಡಿತ್

    ದೀಪಾವಳಿ ಹಬ್ಬದ (Deepavali Festival) ಸಂಭ್ರಮ ಎಲ್ಲೆಲ್ಲೂ ಮನೆ ಮಾಡಿದೆ. ದೀಪ ಬೆಳಗುವ ಮೂಲಕ ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೂ ದೀಪಾವಳಿ ಹಬ್ಬದ ಆಚರಣೆ ಮಾಡಲಾಗುತ್ತಿದೆ. ಹೀಗಿರುವಾಗ ನಿಮ್ಮ ಬಾಳಿನಲ್ಲಿ ಕತ್ತಲೆ ಕಳೆದು ಬೆಳಕು ಮೂಡಲಿ ಎಂದು ವಿಶೇಷವಾಗಿ ರಾಧಿಕಾ ಪಂಡಿತ್ (Radhika Pandit) ವಿಶ್ ಮಾಡಿದ್ದಾರೆ. ಇದನ್ನೂ ಓದಿ:ದೀಪಾವಳಿಗೆ ಬಂತು ‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರದ ಪೋಸ್ಟರ್

    ರಾಧಿಕಾ ಯಶ್ (Radhika Yash) ಮನೆಯಲ್ಲೂ ಹಬ್ಬದ ಸಂಭ್ರಮ ಮನೆ ಮಾಡಿದೆ. ಕುಟುಂಬ ಮತ್ತು ಸ್ನೇಹಿತರ ಜೊತೆಗೂಡಿ ರಾಧಿಕಾ ಪಂಡಿತ್ ದೀಪಾವಳಿ ಹಬ್ಬವನ್ನ ಸಂಭ್ರಮದಿಂದ ಆಚರಿಸಿದ್ದಾರೆ. ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು, ನಿಮ್ಮ ಬಾಳಿನಲ್ಲಿ ಕತ್ತಲೇ ಕಳೆದು ಬೆಳಕು ಮೂಡಲಿ ಎಂದು ಪ್ರೀತಿಯಿಂದ ಅಭಿಮಾನಿಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ನಟಿ ಶುಭಕೋರಿದ್ದಾರೆ.

    ಇನ್ನೂ ಚಂದವನದ ಸಿಂಡ್ರೆಲ್ಲಾ ರಾಧಿಕಾ, ಮತ್ತೆ ನಟನೆಗೆ ಮರಳಲಿ ಎಂದು ಕನ್ನಡಿಗರು ಎದುರು ನೋಡ್ತಿದ್ದಾರೆ. ಯಶ್ 19 (Yash 19) ಬಗ್ಗೆ ಅದೆಷ್ಟು ಫ್ಯಾನ್ಸ್‌ಗೆ ಕುತೂಹಲ ಇದ್ಯೋ, ಹಾಗೆಯೇ ರಾಧಿಕಾ ಮುಂದಿನ ಸಿನಿಮಾ (Films) ಬಗ್ಗೆ ಅಪ್‌ಡೇಟ್ ಸಿಗಲಿ ಎಂದು ಫ್ಯಾನ್ಸ್ ಕಾಯ್ತಿದ್ದಾರೆ. ರಾಧಿಕಾ ದೀಪಾವಳಿ ವಿಶ್ಸ್‌ಗೆ ಫ್ಯಾನ್ಸ್, ಚಿತ್ರದ ಬಗ್ಗೆ ಮಾಹಿತಿ ನೀಡಿ ಎಂದೆಲ್ಲಾ ಕಾಮೆಂಟ್ಸ್ ಮಾಡಿದ್ದಾರೆ.

    ಸೂಕ್ತ ಕಥೆ ಮತ್ತು ಒಳ್ಳೆಯ ಪಾತ್ರ ಇಷ್ಟವಾಗಿದ್ದಲ್ಲಿ ಖಂಡಿತಾ ನಟಿಸುತ್ತೇನೆ ಎಂದು ರಾಧಿಕಾ (Radhika Pandit) ಕೂಡ ತಿಳಿಸಿದ್ದರು.

  • Yash 19: ದೀಪಾವಳಿಯಂದು ಯಶ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್

    Yash 19: ದೀಪಾವಳಿಯಂದು ಯಶ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್

    8000 ಕಿಲೋಮೀಟರ್ ಯಶ್ (Yash) ಪ್ರಯಾಣ ಯಾರಿಗಾಗಿ? ಯಾಕಾಗಿ? 40 ರಿಂದ 50 ದಿನಗಳ ವೃತ ಆ ಊರಲ್ಲಿ ಯಾರ ಜೊತೆಯಲ್ಲಿ? ಶ್ರೀಲಂಕಾದಲ್ಲಿ ಅದೇನು ಕೆಲಸ ರಾಕಿಂಗ್ ಸ್ಟಾರ್‌ಗೆ? ಹಗಲು-ರಾತ್ರಿ ಯಶ್ ಹಾಕಿಕೊಂಡಿರುವ ಗುರಿ ಮುಂದು. ಕಳೆದ ಕೆಲ ದಿನಗಳಲ್ಲಿ ರಾಕಿಂಗ್ ಸ್ಟಾರ್ ಎಲ್ಲೆಲ್ಲಿಗೆ ಹೋಗಿ ಬಂದ್ರು? ಯಾರನ್ನ ಭೇಟಿ ಮಾಡಿದ್ರು? ರಾಮಾಚಾರಿಯ ಈ ಶರವೇಗದ ಓಟದ ಹಿಂದಿರುವ ಅಸಲಿ ಕತೆ ಏನು? ಇಲ್ಲಿದೆ ಮಾಹಿತಿ.

    ಕೆಜಿಎಫ್ (KGF) ಹಿಟ್ ಆಯ್ತು, ಮತ್ಯಾಕೆ ಸಿನಿಮಾ ಅನೌನ್ಸ್ ಮಾಡ್ತಿಲ್ಲ ಜನ ಕೇಳ್ತಿದ್ದಾರೆ. ನಿರ್ಮಾಪಕರು ಸೂಟ್ ಕೇಸ್ ಹಿಡಿದು ವೆಸ್ಟ್ಎಂಡ್ ಯಶ್ ಆಫೀಸ್‌ಗೆ ಸುತ್ತಿ ಸುತ್ತಿ ಸುಸ್ತಾಗಿದ್ದಾರೆ. ಯಾವ ಪ್ರಶ್ನೆಗಳನ್ನೂ ಯಶ್ ತಮ್ಮ ಕೋಟೆಯೋಳಗೆ ಬಿಟ್ಟು ಕೊಂಡಿಲ್ಲ ಯಾರ ಸೂಟ್‌ಕೇಸ್‌ನಿಂದಲೂ ರಾಕಿಂಗ್ ಸ್ಟಾರ್ ಒಂದು ಕಿಲುಬು ಕಾಸು ಎತ್ತಿಕೊಂಡಿಲ್ಲ. ಕಾರಣ ಮೊದಲು ಕತೆ ರೆಡಿಯಾಗಬೇಕು. ಒಳ್ಳೆಯ ಕತೆಗೆ ಮಾತ್ರ ಗೆಲ್ಲೋ ಯೋಗ್ಯತೆ ಇರೋದು ಅನ್ನೊ ಸತ್ಯದ ಬೆನ್ನು ಬಿದ್ದಿದ್ದಾರೆ. ಈಗ ಎಲ್ಲವೂ ಫೈನಲ್ ಆಗಿದೆ. ಹೊಸ ಹೆಜ್ಜೆಗೆ ಯಶ್ ಮುನ್ನುಡಿ ಬರೆದಾಗಿದೆ. ಇದನ್ನೂ ಓದಿ:ಬೆಂಗಳೂರು ಕಂಬಳಕ್ಕೆ ಬರಲಿದ್ದಾರೆ ಅನುಷ್ಕಾ ಶೆಟ್ಟಿ, ಐಶ್ವರ್ಯಾ ರೈ

    ಯಶ್ 19 (Yash 19) ಸಿನಿಮಾದ ಫಸ್ಟ್ ಲುಕ್ ರೆಡಿಯಾಗಿ 2-3 ತಿಂಗಳಾಗಿದೆ. ಟೈಟಲ್ ಟೀಸರ್ ರೆಡಿಯಾಗಿ ಬಹಳ ದಿನಗಳಾಗಿವೆ. ಯಶ್ ಅದನ್ನ ಮತ್ತೆ ಮತ್ತೆ ಕಣ್ಣರಳಿಸಿ ನೋಡ್ತಿದ್ದಾರೆ. ಕಾರಣ ಒಂದು ಸಣ್ಣ ತಪ್ಪು ಕೂಡ ತಂಡದ ಕಡೆಯಿಂದ ಆಗಬಾರದು ಅಂತ. ಈಗ ಆಕಾಶ ತಿಳಿಯಾಗಿದೆ ಮುಂದೊಂದು ಮಹಾಮಳೆಗೆ ಬಾನು ಸಜ್ಜಾಗಿದೆ. ಯಶ್ ಸುಮಾರು 25 ದಿನ ಲಂಡನ್‌ನಲ್ಲಿ ಬೀಡು ಬಿಟ್ಟಿದ್ರು. ವಿದೇಶದಲ್ಲಿರುವ ಹಲವು ಟೆಕ್ನಿಷಿಯನ್ಸ್ ಭೇಟಿ ಮಾಡಿದ್ರು. ಮುಂದಿನ ಸಿನಿಮಾಗೆ ಬೇಕಾಗಿರುವ ಪೂರ್ವ ಭಾವಿ ತಯಾರಿ ಮಾಡಿಕೊಂಡ್ರು. 25 ದಿನದ ಜರ್ನಿಯಲ್ಲಿ ಒಂದು ಫೋಟೋ ಶೇರ್ ಮಾಡಲಿಲ್ಲ. ಒಬ್ಬರ ಹೆಸರು ರಿವಿಲ್ ಮಾಡಲಿಲ್ಲ. ಕಾರಣ ನಾವು ಮಾತಾಡೋದಲ್ಲ ನಮ್ಮ ಸಿನಿಮಾ ಮಾತಾಡ್ಬೇಕು ಅನ್ನೊ ಯಶ್ ನಿಲುವು. ಅಲ್ಲಿಂದ ರಾಕಿಭಾಯ್ ಪಯಣ ಸೀದಾ ಶ್ರೀಲಂಕಾಗೆ.

    ಲಂಡನ್‌ನಲ್ಲಿ ಕೆಲಸ ಮುಗಿಸಿ ಮನೆಗೆ ಬಂದು ಮಡದಿ, ಮಕ್ಕಳ ಮುಖ ನೋಡಿ ಮತ್ತೆ ಸೂಟ್‌ಕೇಸ್ ಜೊತೆ ಶ್ರೀಲಂಕಾಗೆ ಫ್ಲೈಟ್ ಹತ್ತಿದ್ರು. ಸುಮಾರು 15 ದಿನ ಶ್ರೀಲಂಕಾದಲ್ಲಿ ತಮ್ಮ ಮುಂದಿನ ಸಿನಿಮಾಗೆ ಬೇಕಾದ ಲೊಕೇಷನ್ ಫೈನಲ್ ಮಾಡಿಕೊಂಡಿ ಬಂದಿದ್ದಾರೆ. ಇದ್ರ ಜೊತೆ ಮಲೇಷಿಯಾದಲ್ಲಿ ಸ್ವಲ್ಪ ದಿನ ಸುತ್ತಾಡಿದ್ರು. ಅದು ಒಂದು ಶಾಪ್ ಓಪನಿಂಗ್ ವಿಚಾರ ಅಷ್ಟೇ ಅಂತಾರೆ ಯಶ್ ಆಪ್ತರು. ಆದ್ರೆ ಅಲ್ಲೂ ಒಂದಿಷ್ಟು ಸಿನಿಮಾ ಕೆಲಸಗಳನ್ನ ಮಾಡಿದ್ದಾರೆ ಅಂತಿದೆ ನಮ್ಮ ಮೂಲಗಳು.

    ಸದ್ಯ ಗೋವಾದಲ್ಲಿ ಬೀಡು ಬಿಟ್ಟಿದ್ದಾರೆ ಯಶ್. ಸಿನಿಮಾ ಕೆಲಸ ಶುರು ಮಾಡುವ ಮೊದಲು ಒಂದು ಸಣ್ಣ ರಿಲ್ಯಾಕ್ಸ್ ಮಾಡ್ತಿದ್ದಾರೆ. ಮಂಗಳವಾರ ಅಥವಾ ಬುಧವಾರ ಬೆಂಗಳೂರಿಗೆ ವಾಪಸ್ ಬರ್ತಾರೆ. ದೀಪಾವಳಿಗೆ ಸಿನಿಮಾ ಅನೌನ್ಸ್ ಮಾಡ್ತಾರೆ ಫ್ಯಾನ್ಸ್ ಪಟಾಕಿ ಹಚ್ಚುವ ಸುದ್ದಿ ಕೊಡ್ತಾರೆ. ಈ ಬಾರಿಯ ಯಶ್ ಹೋರಾಟ ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಅಂತಿದೆ ಯಶ್ ಬಳಗ.

  • ಅಭಿಮಾನಿಗಳಿಗೆ ಗುಡ್ ನ್ಯೂಸ್ : ಯಶ್ ಹೊಸ ಸಿನಿಮಾ ಅಕ್ಟೋಬರ್ 19ಕ್ಕೆ

    ಅಭಿಮಾನಿಗಳಿಗೆ ಗುಡ್ ನ್ಯೂಸ್ : ಯಶ್ ಹೊಸ ಸಿನಿಮಾ ಅಕ್ಟೋಬರ್ 19ಕ್ಕೆ

    ರಾಕಿಂಗ್ ಸ್ಟಾರ್ ಯಶ್ ನಟನೆಯ ಹೊಸ ಸಿನಿಮಾದ ಅಪ್ ಡೇಟ್ ಬಗ್ಗೆ ಅಭಿಮಾನಿಗಳು ಹಲವು ತಿಂಗಳಿಂದ ಕಾಯುತ್ತಲೇ ಇದ್ದಾರೆ. ಈಗಾಗಲೇ ಹಲವು ವಿಷಯಗಳು ಗಾಂಧಿನಗರದಲ್ಲಿ ಹರಿದಾಡುತ್ತಿದ್ದರೂ, ಅವು ಯಾವವೂ ಅಧಿಕೃತ ಮಾಹಿತಿಯಲ್ಲ. ಇದೀಗ ಮತ್ತೊಂದು ಸುದ್ದಿ ಹರಿದಾಡುತ್ತಿದ್ದು, ಅಕ್ಟೋಬರ್ (October) 19ಕ್ಕೆ ಯಶ್ ನಟನೆಯ ಹೊಸ ಸಿನಿಮಾ ಘೋಷಣೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅದಕ್ಕಾಗಿ ಸರ್ವ ಸಿದ್ಧತೆಯನ್ನು ಟೀಮ್ ಮಾಡಿಕೊಂಡಿದೆ.

    ಅಧಿಕೃತ ಮಾಹಿತಿಯನ್ನು ಯಶ್ ಹಂಚಿಕೊಳ್ಳದೇ ಇದ್ದರೂ ಚಿತ್ರದ ನಿರ್ದೇಶಕರು, ನಿರ್ಮಾಣ ಸಂಸ್ಥೆ, ನಾಯಕಿಯ ಹೆಸರು ಎಲ್ಲವೂ ಒಂದೊಂದೆ ಆಚೆ ಬಂದಿವೆ. ಅವೆಲ್ಲವೂ ಎಷ್ಟು ನಿಜವೋ, ಸುಳ್ಳೋ ಗೊತ್ತಿಲ್ಲ. ಆದರೂ, ದಿನಕ್ಕೊಂದು ಮಾಹಿತಿಯಂತೂ ಸಿಗುತ್ತಿದೆ. ಅದನ್ನು ಓದಿಕೊಂಡು, ಕೇಳಿಕೊಂಡು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

    ಮೊನ್ನೆಯಷ್ಟೇ ಸಿನಿಮಾದ ನಾಯಕಿಯ ಹೆಸರು ಬಹಿರಂಗವಾಗಿತ್ತು. ಇದೀಗ ಸಿನಿಮಾದ ಶೂಟಿಂಗ್ ವಿವರಗಳು ಸಿಗುತ್ತಿವೆ. ಈಗಾಗಲೇ ಕಥೆ ಲಾಕ್ ಆಗಿದ್ದು, ಅಕ್ಟೋಬರ್ ನಲ್ಲಿ ಅಧಿಕೃತ ಘೋಷಣೆ ಮಾಡಿ, ಡಿಸೆಂಬರ್ 23ರಿಂದ ಚಿತ್ರೀಕರಣಕ್ಕೆ ಹೋಗಲು ಚಿತ್ರತಂಡ ರೆಡಿಯಾಗಿದೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ ಟ್ವಿಟರ್ ನಲ್ಲಿ ಈ ವಿಷಯ ಟ್ರೆಂಡಿಂಗ್ ನಲ್ಲಿಯೂ ಇತ್ತು.

    ಈ ಚಿತ್ರಕ್ಕೆ ನಾಯಕಿಯಾಗಿ ಮಲಯಾಳಂ ನಟಿ ಸಂಯುಕ್ತಾ ಮೆನನ್ (Samyukta Menon)  ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ. ಚಿತ್ರತಂಡದಿಂದ ಯಾವುದೇ ಮಾಹಿತಿ ಹೊರ ಬರದಿದ್ದರೂ, ಸಂಯುಕ್ತಾ ಹೆಸರು ಮಾತ್ರ ಜೋರಾಗಿ ಕೇಳಿ ಬರುತ್ತಿದೆ.

     

    ಯಶ್ 19 (Yash 19) ಸಿನಿಮಾಗಾಗಿ ರಾಕಿಭಾಯ್ ತೆರೆಮರೆಯಲ್ಲಿ ತಯಾರಿ ಮಾಡ್ತಿದ್ದಾರೆ. ಮುಂದಿನ ಸಿನಿಮಾ ಬಗ್ಗೆ ಅಧಿಕೃತವಾಗಿ ಅನೌನ್ಸ್ ಆಗುವವರೆಗೂ ತಮ್ಮ ಪ್ರಾಜೆಕ್ಟ್ ಬಗ್ಗೆ ಎಲ್ಲಿಯೂ ಲೀಕ್ ಆಗದಂತೆ ನಟ ನೋಡಿಕೊಳ್ತಿದ್ದಾರೆ. ಕೆಲವೇ ದಿನಗಳಲ್ಲಿ ಯಶ್ ಮುಂದಿನ ಸಿನಿಮಾ ಬಗ್ಗೆ ಉತ್ತರ ಸಿಗಲಿದೆ ಎನ್ನಲಾಗುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಗಳ ಜೊತೆಗಿನ ಮುದ್ದಾದ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್

    ಮಗಳ ಜೊತೆಗಿನ ಮುದ್ದಾದ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್

    ಸ್ಯಾಂಡಲ್‌ವುಡ್ ನಟಿ ರಾಧಿಕಾ ಪಂಡಿತ್ (Radhika Pandit) ಅವರು ಮಗಳ ಜೊತೆಗಿನ ಮುದ್ದಾದ ಫೋಟೋವೊಂದನ್ನ ಶೇರ್ ಮಾಡಿದ್ದಾರೆ. ನಮ್ಮ ಪುಟ್ಟ ರಾಜಕುಮಾರಿ ಎಂದು ನಟಿ ರಾಧಿಕಾ ಪೋಸ್ಟ್ ಮಾಡಿದ್ದಾರೆ. ಮಗಳ ಕಾಲಿಗೆ ಬೂಟ್‌ ಹಾಕ್ತಿರೋ ಚೆಂದದ ಫೋಟೋ ಶೇರ್‌ ಮಾಡಿದ್ದಾರೆ.

     

    View this post on Instagram

     

    A post shared by Radhika Pandit (@iamradhikapandit)

    ಸೆ.24 ಹೆಣ್ಣು ಮಗಳ (Daughters Day 2023) ದಿನಾಚರಣೆಯಾಗಿದ್ದು, ಈ ಸಂದರ್ಭದಲ್ಲಿ ಮಗಳ ಜೊತೆಗಿನ ಕ್ಯೂಟ್ ಫೋಟೋಗಳನ್ನ ಶೇರ್ ಮಾಡಿದ್ದಾರೆ. ಜೊತೆಗೆ ಯಶ್- ರಾಧಿಕಾ ಇಬ್ಬರು ಐರಾಗೆ ಮುತ್ತು ಕೊಡುತ್ತಿರುವ ಫೋಟೋ ಎಲ್ಲರ ಗಮನ ಸೆಳೆದಿದೆ. ನಟಿಯ ಪೋಸ್ಟ್ ವೈರಲ್ ಆಗ್ತಿದ್ದಂತೆ ಯಶ್ 19 (Yash 19) ಸಿನಿಮಾ ಯಾವಾಗ ಎಂದು ಅಭಿಮಾನಿಗಳು ಕಾಮೆಂಟ್‌ ಮಾಡಿದ್ದಾರೆ. ಇದನ್ನೂ ಓದಿ:ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ ದುನಿಯಾ ವಿಜಯ್ ಪುತ್ರಿಯರು

    ಇತ್ತೀಚಿಗೆ ಯಶ್ (Yash) ಕುಟುಂಬ ಗೋವಾದಲ್ಲಿ ಬೀಡು ಬಿಟ್ಟಿತ್ತು. ಕೆಲದಿನಗಳ ಕಾಲ ಕುಟುಂಬದ ಜೊತೆ ಒಂದೊಳ್ಳೆಯ ಸಮಯ ಕಳೆದಿದ್ದರು. ವೆಕೇಷನ್‌ನಲ್ಲಿ ಬ್ಯುಸಿಯಾಗಿದ್ದ ನಟ ಮತ್ತೆ ಸಿನಿಮಾ ಕೆಲಸಗಳತ್ತ ಗಮನ ನೀಡುತ್ತಿದ್ದಾರೆ.

    ಯಶ್ 19 (Yash 19) ಸಿನಿಮಾ ಅಕ್ಟೋಬರ್‌ನಲ್ಲಿ ಅಧಿಕೃತವಾಗಿ ಅನೌನ್ಸ್ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಕೆಜಿಎಫ್ 2 ಬಳಿಕ ಇಡೀ ದೇಶವೇ ಯಶ್ ಮುಂದಿನ ಸಿನಿಮಾಗಾಗಿ ಕಾಯ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]