Tag: Yapalahalli

  • ಹಿಂದೂ ಯುವಕ, ಮುಸ್ಲಿಂ ಯುವತಿಯ ಪ್ರೇಮವಿವಾಹ – ರಕ್ಷಣೆ ಕೋರಿ ಪೊಲೀಸ್ ಮೊರೆ ಹೋದ ನವಜೋಡಿ

    ಹಿಂದೂ ಯುವಕ, ಮುಸ್ಲಿಂ ಯುವತಿಯ ಪ್ರೇಮವಿವಾಹ – ರಕ್ಷಣೆ ಕೋರಿ ಪೊಲೀಸ್ ಮೊರೆ ಹೋದ ನವಜೋಡಿ

    ಚಿಕ್ಕಬಳ್ಳಾಪುರ: ಪ್ರೀತಿಗೆ ಜಾತಿ, ಧರ್ಮದ ಗಡಿ ಇಲ್ಲ ಎಂಬಂತೆಯೇ ಇಲ್ಲೊಂದು ಜೋಡಿ ಜಾತಿ ಧರ್ಮಗಳ ಎಲ್ಲೆ ಮೀರಿ ಪ್ರೇಮ ವಿವಾಹವಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ(Chikkaballapura) ನಡೆದಿದೆ.

    ಮುಸ್ಲಿಂ(Muslim) ಯುವತಿಯು ಹಿಂದೂ(Hindu) ಯುವಕನನ್ನು ಪ್ರೀತಿಸಿ ಪ್ರೇಮವಿವಾಹವಾಗಿದ್ದು(Love Marriage), ಈ ವಿವಾಹಕ್ಕೆ ಸಹಜವಾಗಿಯೇ ಪೋಷಕರ ವಿರೋಧ ವ್ಯಕ್ತವಾಗಿದೆ. ಇದೀಗ ರಕ್ಷಣೆ ಕೋರಿ ನವಜೋಡಿಯು ಪೊಲೀಸರ ಮೊರೆ ಹೋಗಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನವ್ರಿಗೆ ಪಾಕ್‌ ಫ್ರೀ ವೀಸಾ ಕೊಡುತ್ತೆ, ಮಂಜುನಾಥ್ ನೋಡ್ಕೊಂಡು ಬರಲಿ: ಯತ್ನಾಳ್ ಕಿಡಿ

    ಯಾಪಲಹಳ್ಳಿಯ(Yapalahalli) ನಿವಾಸಿ ಹರೀಶ್ ಬಾಬು ಹಾಗೂ ಗುಡಿಬಂಡೆ ತಾಲೂಕಿನ ಸೋಮೇಶ್ವರ(Someshwara) ಗ್ರಾಮದ ಯುವತಿ ನಜ್ಮಾ ಪ್ರೀತಿಸಿ ಮದುವೆಯಾಗಿದ್ದಾರೆ. ಇಬ್ಬರದ್ದು ಬೇರೆ ಬೇರೆ ತಾಲೂಕಾದರೂ ಚಿಕ್ಕಬಳ್ಳಾಪುರ ನಗರದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುವಾಗ ಪರಿಚಯ ಆಗಿದೆ. ಪರಿಚಯ ಸ್ನೇಹಕ್ಕೆ ತಿರುಗಿ, ಸ್ನೇಹ ಪ್ರೀತಿಯಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಭಯೋತ್ಪಾದನಾ ಕೇಂದ್ರಗಳಿಗೆ ನೀರು ಗೊಬ್ಬರ ಹಾಕಿ ಪೋಷಿಸ್ತಿದೆ: ಸಿಟಿ ರವಿ

    ಇಬ್ಬರು ಪ್ರೀತಿಯ ವಿಚಾರವನ್ನು ಮನೆಯವರಿಗೆ ತಿಳಿಸಿದ್ದರು. ಇಬ್ಬರದ್ದೂ ಬೇರೆ ಬೇರೆ ಧರ್ಮವಾದ ಕಾರಣ ಮನೆಯವರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರೀತಿ ವಿಚಾರ ತಿಳಿಯುತ್ತಿದ್ದಂತೆ ಯುವತಿಯನ್ನ ಕೆಲಸಕ್ಕೆ ಕಳುಹಿಸದೇ ಮನೆಯಲ್ಲೇ ಉಳಿಸಿಕೊಂಡಿದ್ದಾರೆ. ವಿರೋಧದ ನಡುವೆಯೇ ಮನೆಯಿಂದ ಹೊರಬಂದ ನಜ್ಮಾ, ಹರೀಶ್ ಬಾಬು ಜೊತೆ ವಿವಾಹವಾಗಿದ್ದಾರೆ. ಇದನ್ನೂ ಓದಿ: ಚಿನ್ನಸ್ವಾಮಿ ಮೈದಾನದಲ್ಲಿ ಮಕ್ಕಳಂತೆ ಈಜಾಡಿದ ಡೇವಿಡ್‌!

    ಕಳೆದ 4 ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಇಬ್ಬರಿಗೂ ವ್ಯಕ್ತಿತ್ವ ಇಷ್ಟವಾಗಿ ಮದುವೆ ಆಗಲು ತೀರ್ಮಾನಿಸಿದ್ದರು. ಮದುವೆಗೆ ಮನೆಯವರು ಒಪ್ಪದ ಕಾರಣ ಇಬ್ಬರು ಪ್ರೇಮವಿವಾಹವಾಗಿದ್ದರು. ಈ ಮದುವೆಗೆ ಯುವತಿ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ.

    ವಿರೋಧದ ಬೆನ್ನಲ್ಲೇ ನವಜೋಡಿ ರಕ್ಷಣೆ ಕೋರಿ ಚಿಕ್ಕಬಳ್ಳಾಪುರ ಎಸ್ಪಿ ಕುಶಲ್ ಚೌಕ್ಸಿ ಮೊರೆ ಹೋಗಿದ್ದಾರೆ. ಅಂತರ್ ಧರ್ಮ ಪ್ರೇಮವಿವಾಹದ ಸೂಕ್ಷ್ಮತೆಯನ್ನ ಅರಿತ ಎಸ್ಪಿ ಕುಶಲ್ ಚೌಕ್ಸಿ ಇಬ್ಬರನ್ನ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಕಳುಹಿಸಿದ್ದು, ಯುವಕ ಯುವತಿಯ ತಂದೆ ತಾಯಿಯನ್ನ ಕರೆಸಿ ವಿಚಾರ ಮಾಡುವಂತೆ ತಿಳಿಸಿದ್ದರು. ಇದನ್ನೂ ಓದಿ: ಮನೆಗಳ್ಳತನ ಮಾಡುತ್ತಿದ್ದ ಕುಖ್ಯಾತ ಕಳ್ಳ ಅರೆಸ್ಟ್ – ಚಿನ್ನಾಭರಣ ಸೇರಿ 7.89 ಲಕ್ಷ ಮೌಲ್ಯದ ವಸ್ತು ಜಪ್ತಿ

    ಠಾಣೆಗೆ ಬಂದ ಯುವತಿ ಪೋಷಕರು ಹಾಗೂ ಸಂಬಂಧಿಕರು ಯುವಕನನ್ನ ಬಿಟ್ಟು ಬರುವಂತೆ ಬೇಡಿಕೊಂಡಿದ್ದರು. ಇದಕ್ಕೆ ಯುವತಿ ಒಪ್ಪಿರಲಿಲ್ಲ. ಹೀಗಾಗಿ ಎರಡು ಕಡೆಯವರನ್ನ ಕರೆಸಿ ಪೊಲೀಸರು ವಿಚಾರಣೆ ಮಾಡಿದ್ದು, ಯುವತಿ ಪೋಷಕರಿಂದ ಮುಚ್ಚಳಿಕೆ ಬರೆಸಿಕೊಂಡು ನವಜೋಡಿಗೆ ಯಾವುದೇ ತೊಂದರೆ ಮಾಡದಂತೆ ತಿಳಿ ಹೇಳಿ ಕಳುಹಿಸಿದ್ದಾರೆ.