Tag: Yamuna Expressway

  • Uttar Pradesh | ಮಥುರಾದ ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ – 6 ಜನ ದುರ್ಮರಣ

    Uttar Pradesh | ಮಥುರಾದ ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ – 6 ಜನ ದುರ್ಮರಣ

    ಲಕ್ನೋ: ಲಾರಿಯೊಂದಕ್ಕೆ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಆರು ಜನ ಸಾವನ್ನಪ್ಪಿರುವ ಘಟನೆ ಮಥುರಾದ (Mathura) ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ (Yamuna Expressway) ನಡೆದಿದೆ.

    ಮೃತರನ್ನು ಹರ್ಲಾಲ್‌ಪುರ ಗ್ರಾಮದ ನಿವಾಸಿ ಧರ್ಮವೀರ್ ಸಿಂಗ್, ಅವರ ಮಕ್ಕಳಾದ ರೋಹಿತ್ ಮತ್ತು ಆರ್ಯನ್, ರೋಹಿತ್‌ನ ಸ್ನೇಹಿತ, ದಲ್ವೀರ್ ಹಾಗೂ ಅವರ ಸಹೋದರ ಪರಾಸ್ ಸಿಂಗ್ ತೋಮರ್ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಕಿಡ್ನಿ ವೈಫಲ್ಯದಿಂದ ಖ್ಯಾತ ಖಳನಟ ಫಿಶ್ ವೆಂಕಟ್‌ ನಿಧನ

    ಇಂದು (ಶನಿವಾರ) ಬೆಳಿಗ್ಗೆ ಈ ಅವಘಡ ಸಂಭವಿಸಿದೆ. ಇಕೋ ಕಾರಲ್ಲಿ ಧರ್ಮವೀರ್ ಸಿಂಗ್ ದೆಹಲಿಯಿಂದ ಆಗ್ರಾಕ್ಕೆ ತೆರಳುತ್ತಿದ್ದರು. ಈ ವೇಳೆ ಮುಂದೆ ಹೋಗುತ್ತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಆರು ಜನರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ 10 ಜನರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

    ಕಾರು ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

    ಮತ್ತೊಂದು ಪ್ರಕರಣದಲ್ಲಿ ದೆಹಲಿಯಿಂದ (Dehli) ಮಧ್ಯಪ್ರದೇಶಕ್ಕೆ (Madhya Pradesh) ಹೋಗುತ್ತಿದ್ದ ಖಾಸಗಿ ಬಸ್ ಪಲ್ಟಿಯಾಗಿ 8 ಜನ ಪ್ರಯಾಣಿಕರು ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಒಂದೇ ಗಂಟೆಯೊಳಗೆ ಎರಡು ಅಪಘಾತ ಸಂಭವಿಸಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ರೌಡಿಶೀಟರ್ ಕೊಲೆ ಕೇಸ್; ಬಂಧನ ಭೀತಿ – ಕಳೆದೆರಡು ದಿನಗಳಿಂದ ಮನೆಯಲ್ಲಿಲ್ಲ ಬೈರತಿ ಬಸವರಾಜ್

  • Uttar Pradesh| ಟ್ರಕ್‌ಗೆ ಹಿಂಬದಿಯಿಂದ ಡಬಲ್ ಡೆಕ್ಕರ್ ಬಸ್ ಡಿಕ್ಕಿ – ಐವರು ಸಾವು, 15 ಮಂದಿಗೆ ಗಾಯ

    Uttar Pradesh| ಟ್ರಕ್‌ಗೆ ಹಿಂಬದಿಯಿಂದ ಡಬಲ್ ಡೆಕ್ಕರ್ ಬಸ್ ಡಿಕ್ಕಿ – ಐವರು ಸಾವು, 15 ಮಂದಿಗೆ ಗಾಯ

    ಲಕ್ನೋ: ಟ್ರಕ್‌ಗೆ (Truck) ಹಿಂಬದಿಯಿಂದ ಡಬಲ್ ಡೆಕ್ಕರ್ ಬಸ್ (Double Decker Bus) ಡಿಕ್ಕಿ ಹೊಡೆದ ಪರಿಣಾಮ 5 ತಿಂಗಳ ಮಗು ಸೇರಿ ಐವರು ಸಾವನ್ನಪ್ಪಿದ್ದು, 15 ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಅಲಿಘರ್‌ನ (Aligarh) ಯಮುನಾ ಎಕ್ಸ್‌ಪ್ರೆಸ್‌ ವೇಯಲ್ಲಿ (Yamuna Expressway) ನಡೆದಿದೆ.

    ದೆಹಲಿಯಿಂದ ಅಜಂಗಢಕ್ಕೆ ತೆರಳುತ್ತಿದ್ದ ಬಸ್ ಹಿಂಬದಿಯಿಂದ ಟ್ರಕ್‌ಗೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಗುದ್ದಿದ ರಭಸಕ್ಕೆ ಬಸ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಮೃತದೇಹ ಹಾಗೂ ಪ್ರಯಾಣಿಕರು ಬಸ್ ಒಳಗೆ ಸಿಲುಕಿಕೊಂಡಿದ್ದಾರೆ. ಅಪಘಾತದಲ್ಲಿ 11 ತಿಂಗಳ ಹೆಣ್ಣು ಮಗು, ಐದು ವರ್ಷದ ಮಗು, ಮೂವರು ಮಹಿಳೆಯರು ಮತ್ತು ಒಂಬತ್ತು ಪುರುಷರು ಸೇರಿದಂತೆ 15 ಮಂದಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: PUBLiC TV Impact| ಸರ್ಕಾರಕ್ಕೆ ರೇಷನ್ ಕಾರ್ಡ್ ಪರಿಷ್ಕರಣೆ ವರದಿ ಸಲ್ಲಿಕೆ: ರದ್ದಿಗೆ ಮಾನದಂಡ ಏನು?

    ಸ್ಥಳೀಯರು ಬಸ್ಸಿನ ಗಾಜುಗಳನ್ನು ಒಡೆದು ಗಾಯಾಳುಗಳನ್ನು ರಕ್ಷಿಸಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಜೇವರ್‌ನ ಕೈಲಾಶ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ಕಳುಹಿಸಲಾಗಿದೆ. ಮೃತರ ಪೈಕಿ ಮೂರು ಶವಗಳ ಗುರುತು ಪತ್ತೆ ಹಚ್ಚಿದ್ದು, ಇಬ್ಬರ ಗುರುತು ಪತ್ತೆಯಾಗಿಲ್ಲ. ಇದನ್ನೂ ಓದಿ: 6 ತಿಂಗಳಿನಿಂದ ಸಿಕ್ಕಿಲ್ಲ ವೇತನ – ಹಲವು ಇಂದಿರಾ ಕ್ಯಾಂಟೀನ್‌ಗಳಿಗೆ ಬಿತ್ತು ಬೀಗ!

    ಬಸ್ ಫೈಜಾಬಾದ್ ಮೂಲದ ಟ್ರಾವೆಲ್ಸ್ ಕಂಪನಿಗೆ ಸೇರಿದೆ. ತಪ್ಪಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಮತ್ತೆ ಕೋಟ್ಯಧೀಶನಾದ ಮಲೆ ಮಾದಪ್ಪ – 2.43 ಕೋಟಿ ರೂ. ಕಾಣಿಕೆ ಹಣ ಸಂಗ್ರಹ

  • ಉತ್ತರ ಪ್ರದೇಶ| ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 12.5 ಕೆಜಿ ಚಿನ್ನ ಸೀಜ್

    ಉತ್ತರ ಪ್ರದೇಶ| ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 12.5 ಕೆಜಿ ಚಿನ್ನ ಸೀಜ್

    ಲಕ್ನೋ: ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 12.5 ಕೆಜಿ ಚಿನ್ನವನ್ನು (Gold) ಪೊಲೀಸರು ವಶವಡಿಸಿಕೊಂಡ ಘಟನೆ ಉತ್ತರಪ್ರದೇಶದ (Uttar Pradesh) ಮಥುರಾದಲ್ಲಿ ನಡೆದಿದೆ.

    ಮಥುರಾ ಪೊಲೀಸರು ಯಮುನಾ ಎಕ್ಸ್ಪ್ರೆಸ್ ವೇಯಲ್ಲಿ ತಪಾಸಣೆ ನಡೆಸುತ್ತಿದ್ದ ಸಂದರ್ಭ ಸೂಕ್ತ ದಾಖಲೆಗಳಿಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 12.5 ಕೆಜಿ ಚಿನ್ನ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: Cyclone Dana |ಒಡಿಶಾ, ಪಶ್ಚಿಮ ಬಂಗಾಳ ಕಡೆ ಹೋಗುವ 150ಕ್ಕೂ ಹೆಚ್ಚು ರೈಲುಗಳ ಸೇವೆ ರದ್ದು

    ಮಾಂಟ್ ಟೋಲ್‌ನಲ್ಲಿ ತಪಾಸಣೆ ನಡೆಸುತ್ತಿದ್ದಾಗ ಕಾರಿನಿಂದ ಸುಮಾರು 12.5 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ದೆಹಲಿಯಿಂದ ಡಿಯೋರಿಯಾ ಕಡೆಗೆ ಚಿನ್ನವನ್ನು ಸಾಗಿಸುತ್ತಿದ್ದರು. ಚಿನ್ನ ಸಾಗಣೆಯ ಸಂಬಂಧ ಯಾವುದೇ ದಾಖಲೆ ಇರಲಿಲ್ಲ. ಆದ್ದರಿಂದ ಚಿನ್ನವನ್ನು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಓರ್ವ ಉತ್ತರ ಪ್ರದೇಶದವನಾಗಿದ್ದು, ಇನ್ನೊಬ್ಬ ಬಿಹಾರದವನು ಎಂದು ಮಥುರಾ ಗ್ರಾಮಾಂತರ ಎಸ್‌ಪಿ ತ್ರಿಗುಣ್ ವಿಶೇನ್ ತಿಳಿಸಿದ್ದಾರೆ. ಇದನ್ನೂ ಓದಿ: ರಾಯಚೂರಿನ ಮಲಿಯಾಬಾದ್ ಬೆಟ್ಟದಲ್ಲಿ ಚಿರತೆ ಪ್ರತ್ಯಕ್ಷ- ಕ್ಯಾಮೆರಾದಲ್ಲಿ ಚಲನವಲನ ಸೆರೆ

  • ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ – ಐದು ಮಂದಿ ಸಜೀವ ದಹನ

    ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ – ಐದು ಮಂದಿ ಸಜೀವ ದಹನ

    ಲಕ್ನೋ: ಉತ್ತರ ಪ್ರದೇಶದ ಮಥುರಾದ ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ (Yamuna Expressway) ಕಾರ್-ಬಸ್ ನಡುವೆ ಡಿಕ್ಕಿಯಾಗಿ ಕನಿಷ್ಠ ಐವರು ಸಜೀವ ದಹನ ದಹನವಾಗಿರುವ ಘಟನೆ ನಡೆದಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

    ಮಥುರಾದ ಮಹಾವನದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ (Divider) ಡಿಕ್ಕಿ ಹೊಡೆದ ಕಾರು, ನಂತರ ಅದೇ ಮಾರ್ಗವಾಗಿ ಬರುತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಕಾರಿನಲ್ಲಿದ್ದ ಐವರು ಸುಟ್ಟು ಕರಕಲಾಗಿದ್ದಾರೆ. ಆದ್ರೆ ಬಸ್ಸಿನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಅಪಘಾತ (Accident) ಸಂಭವಿಸುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿದ್ದು, ಎರಡೂ ವಾಹನಗಳು ಅಗ್ನಿಗೆ ಆಹುತಿಯಾಗಿವೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿದೆ. ಇದನ್ನೂ ಓದಿ: ಪಾಕಿಸ್ತಾನಿಯರು ಭಾರತದ ಅತಿದೊಡ್ಡ ಆಸ್ತಿ – ಕಾಂಗ್ರೆಸ್‌ ಮಾಜಿ ಸಚಿವ

    ಅಪಘಾತಕ್ಕೀಡಾದ ಬಸ್ ಆಗ್ರಾದಿಂದ ನೋಯ್ಡಾಗೆ ತೆರಳುತ್ತಿತ್ತು. ಇದನ್ನೂ ಓದಿ: ಆಂಧ್ರ ಸಿಎಂ ಜಗನ್‌ ತಮ್ಮ ಚಿಕ್ಕಪ್ಪನನ್ನೇ ಹತ್ಯೆಗೈದಿದ್ದಾರೆ – ಎನ್.ಚಂದ್ರಬಾಬು ನಾಯ್ಡು ಪುತ್ರ ಗಂಭೀರ ಆರೋಪ

  • ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಘಟನೆ – ಮೃತದೇಹವನ್ನು ಹಲವು ಕಿ.ಮೀ ಎಳೆದೊಯ್ದ ಕಾರು

    ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಘಟನೆ – ಮೃತದೇಹವನ್ನು ಹಲವು ಕಿ.ಮೀ ಎಳೆದೊಯ್ದ ಕಾರು

    ಲಕ್ನೋ: ಕಳೆದ ತಿಂಗಳು ದೆಹಲಿಯಲ್ಲಿ (Delhi) ಯುವತಿಯೊಬ್ಬಳನ್ನು ಕಾರೊಂದು (Car) ಹಲವು ಕಿ.ಮೀ ವರೆಗೆ ಎಳೆದುಕೊಂಡು ಹೋಗಿ ಆಕೆಯ ಸಾವಿಗೆ ಕಾರಣವಾದ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸುತ್ತು. ಇದೀಗ ಅಂತಹುದೇ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ.

    ಉತ್ತರ ಪ್ರದೇಶದ ನೋಯ್ಡಾ ಕಡೆಗೆ ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ (Yamuna Expressway) ಚಲಿಸುತ್ತಿದ್ದ ಕಾರಿನ ಹಿಂಬದಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಕಂಡುಬಂದಿದೆ. ವ್ಯಕ್ತಿ ಕಾರಿನ ಹಿಂಬದಿ ಸಿಲುಕಿಕೊಂಡು, ಎಳೆದುಕೊಂಡು ಹೋಗುತ್ತಿದ್ದ ರೀತಿಯಲ್ಲಿ ಕಂಡುಬಂದಿರುವುದಾಗಿ ಉತ್ತರ ಪ್ರದೇಶದ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

    ವರದಿಗಳ ಪ್ರಕಾರ ಕಾರು ಆಗ್ರಾದಿಂದ ನೋಯ್ಡಾ ಕಡೆಗೆ ಹೋಗುತ್ತಿದ್ದಾಗ ಮಥುರಾದ ಮಂತ್‌ನಲ್ಲಿರುವ ಟೋಲ್ ಬೂತ್‌ನಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಭದ್ರತಾ ಸಿಬ್ಬಂದಿಯ ಗಮನಕ್ಕೆ ಬಂದಿದೆ. ಕಾರನ್ನು ದೆಹಲಿ ಮೂಲದ ವೀರೇಂದ್ರ ಸಿಂಗ್ ಚಲಾಯಿಸುತ್ತಿದ್ದು, ಆತನನ್ನು ಪ್ರಸ್ತುತ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

    ಕಳೆದ ರಾತ್ರಿ ಎಕ್ಸ್‌ಪ್ರೆಸ್‌ವೇಯಲ್ಲಿ ದಟ್ಟವಾದ ಮಂಜು ಇದ್ದ ಕಾರಣ ಸ್ಪಷ್ಟವಾಗಿ ಏನೂ ಕಾಣಿಸುತ್ತಿರಲಿಲ್ಲ. ಇದರಿಂದ ಅಪಘಾತಕ್ಕೆ ಒಳಗಾದ ವ್ಯಕ್ತಿ ಕಾರಿನ ಹಿಂಬದಿ ಸಿಲುಕಿಕೊಂಡಿರುವುದು ತಿಳಿದಿರಲಿಲ್ಲ ಎಂದು ವೀರೇಂದ್ರ ಸಿಂಗ್ ಹೇಳಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: 13ರ ಬಾಲಕಿಗೆ 114 ಬಾರಿ ಇರಿದು ಕೊಂದ ಸಹಪಾಠಿ ತಪ್ಪೊಪ್ಪಿಗೆ

    ಇದೀಗ ಆರೋಪಿ ವೀರೇಂದ್ರನನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಹೆಚ್ಚಿನ ಸಾಕ್ಷಿಗಳಿಗೆ ರಸ್ತೆಯ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಮೃತ ವ್ಯಕ್ತಿಯ ಗುರುತು ಪತ್ತೆಹಚ್ಚಲು ಪ್ರಯತ್ನಿಸಲಾಗುತ್ತಿದೆ. ಭೀಕರ ಘಟನೆಯಿಂದಾಗಿ ಸುತ್ತಮುತ್ತಲ ಗ್ರಾಮದ ಜನರು ಭಯಭೀತರಾಗಿದ್ದಾರೆ.

    ಈ ವರ್ಷ ಜನವರಿ 1 ರಂದು ಇದೇ ರೀತಿಯ ಭೀಕರ ಘಟನೆ ದೆಹಲಿಯಲ್ಲಿ ನಡೆದಿತ್ತು. ಯುವತಿ ಅಂಜಲಿ ಸಿಂಗ್ ಹೊಸ ವರ್ಷಾಚರಣೆ ಬಳಿಕ ಮಧ್ಯರಾತ್ರಿ ಮನೆಗೆ ತೆರಳುತ್ತಿದ್ದ ವೇಳೆ ತನ್ನ ಸ್ಕೂಟರ್‌ಗೆ ಕಾರೊಂದು ಡಿಕ್ಕಿಹೊಡೆದಿತ್ತು. ಪರಿಣಾಮ ಆಕೆ ಕಾರಿನಡಿ ಸಿಲುಕಿ ಹಲವು ಕಿ.ಮೀ. ವರೆಗೆ ಎಳೆದುಕೊಂಡು ಹೋಗಲ್ಪಟ್ಟಿದ್ದಳು. ಬಳಿಕ ಆಕೆಯ ಶವ ರಸ್ತೆ ಬದಿಯಲ್ಲಿ ಪತ್ತೆಯಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು 7 ಜನರನ್ನು ಬಂಧಿಸಿದ್ದರು. ಇದನ್ನೂ ಓದಿ: ಮನೆ ಮುಂದೆ ಮಲಗಿದವರ ಮೇಲೆ ಹುಚ್ಚು ನಾಯಿ ದಾಳಿ – 25ಕ್ಕೂ ಅಧಿಕ ಜನ ಆಸ್ಪತ್ರೆ ದಾಖಲು

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಒಂದರ ನಂತರ ಒಂದರಂತೆ ಬರೋಬ್ಬರಿ 13 ವಾಹನಗಳ ಪರಸ್ಪರ ಡಿಕ್ಕಿ

    ಒಂದರ ನಂತರ ಒಂದರಂತೆ ಬರೋಬ್ಬರಿ 13 ವಾಹನಗಳ ಪರಸ್ಪರ ಡಿಕ್ಕಿ

    ನವದೆಹಲಿ: `ಯಮುನಾ ಎಕ್ಸ್ ಪ್ರೆಸ್ ವೇ’ ರಾಷ್ಟ್ರೀಯ ಹೆದ್ದಾರಿಯಲ್ಲಿ ದಟ್ಟ ಮಂಜು ಆವರಿಸಿದ್ದರ ಪರಿಣಾಮ 13 ವಾಹನಗಳು ಒಂದರ ಹಿಂದೆ ಒಂದು ಡಿಕ್ಕಿ ಹೊಡೆದಿದೆ. ಗ್ರೇಟರ್ ನೊಯ್ಡಾ ಬಳಿಯ ದಂಕೂರ್ ಪ್ರದೇಶದಲ್ಲಿ ಈ ಸರಣಿ ಅಪಘಾತ ಸಂಭವಿಸಿದೆ.

    ವಾಹನಗಳ ಒಂದಕ್ಕೊಂದು ಡಿಕ್ಕಿಯಾಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಂದು ಬೆಳಗ್ಗೆ ಸುಮಾರು 9 ಗಂಟೆಗೆ ಚಾಲಕರಿಗೆ ದಟ್ಟ ಮಂಜು ಆವರಿಸಿದ್ದರಿಂದ ರಸ್ತೆ ಕಾಣದೇ ಮುಂದೆ ನಿಂತಿರುವ ವಾಹನಗಳಿಗೆ ಡಿಕ್ಕಿ ಆಗಿವೆ. ಈ ವೇಳೆ ಸ್ಥಳೀಯರು ವಾಹನಗಳಲ್ಲಿ ಜನರನ್ನು ರಕ್ಷಣೆ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

    ಕೇಂದ್ರಾಡಳಿತ ದೆಹಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳಕಿನ ಪ್ರಖರತೆ ಶೂನ್ಯಕ್ಕೆ ಬಂದಿದ್ದು, ಹೆದ್ದಾರಿಗಳಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಟೊಯೋಟಾ ಇನ್ನೋವಾ, ಮಹಿಂದ್ರಾ ಸ್ಕಾರ್ಪೀಯೋ, ಹುಂಡೈ ಕ್ಷೆಂಟ್, ಮಾರುತಿ ಎರ್ಟಿಗಾ ಸೇರಿದಂತೆ 13 ವಾಹನಗಳು ಅಪಘಾತಕ್ಕೀಡಾಗಿವೆ. ಅಪಘಾತಕ್ಕೊಳಗಾದ 13 ವಾಹನಗಳಲ್ಲಿ 5 ಆಗ್ರಾ ಮೂಲದಾಗಿದ್ದು, ಉಳಿದ 8 ವಾಹನಗಳು ದೆಹಲಿಯ ಮೂಲದವು ಎಂದು ಪೊಲೀಸರು ತಿಳಿಸಿದ್ದಾರೆ.

    ಘಟನಾ ಸ್ಥಳದಿಂದ 6 ವಾಹನಗಳನ್ನೂ ತಕ್ಷಣವೇ ರಾಷ್ಟ್ರೀಯ ಹೆದ್ದಾರಿಯಿಂದ ತೆರವು ಮಾಡಲಾಗಿದ್ದು, ಉಳಿದ ವಾಹನಗಳು ಜಖಂ ಆಗಿದ್ದು ರಸ್ತೆಯ ಬದಿಯಲ್ಲಿ ನಿಲ್ಲಿಸಲಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಎಲ್ಲರೂ ತಮ್ಮ ಮನೆಗಳಿಗೆ ತೆರಳಿದ್ದಾರೆ ಎಂದು ದಂಕೂರ್ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ಅಲಿ ಪುಂದಿರ್ ಹೇಳಿದ್ದಾರೆ.