Tag: yami gautam

  • ಶಾ ಬಾನೋ ಸಿನಿಮಾಗೆ ಬಣ್ಣ ಹಚ್ಚಲಿದ್ದಾರೆ ಯಾಮಿ ಗೌತಮ್, ಇಮ್ರಾನ್ ಹಾಶ್ಮಿ

    ಶಾ ಬಾನೋ ಸಿನಿಮಾಗೆ ಬಣ್ಣ ಹಚ್ಚಲಿದ್ದಾರೆ ಯಾಮಿ ಗೌತಮ್, ಇಮ್ರಾನ್ ಹಾಶ್ಮಿ

    ಬಾಲಿವುಡ್ ನಟ ಇಮ್ರಾನ್ ಹಾಶ್ಮಿ (Emraan Hashmi) ಅವರು ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದ್ದಾರೆ. ನೈಜ ಕಥೆ ಆಧರಿಸಿದ ಶಾ ಬಾನೋ ಕುರಿತಾದ (Shah Bano) ಸಿನಿಮಾದಲ್ಲಿ ನಟಿಸಲು ಇಮ್ರಾನ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದನ್ನೂ ಓದಿ:ಮುಗ್ಧರ ಕ್ರೂರ ಹತ್ಯೆಯಿಂದ ತೀವ್ರ ದುಃಖವಾಗಿದೆ: ಪಹಲ್ಗಾಮ್‌ ಉಗ್ರರ ದಾಳಿ ಬಗ್ಗೆ ಯಶ್ ರಿಯಾಕ್ಷನ್

    ಅಹ್ಮದ್ ಖಾನ್ ಜೊತೆ ಕಾನೂನು ಹೋರಾಟ ನಡೆಸಿ ಜೀವನಾಂಶ ಪಡೆದ ಶಾ ಬಾನೋ ಕಥೆಯನ್ನು ಸಿನಿಮಾ ರೂಪದಲ್ಲಿ ತರಲು ಸಜ್ಜಾಗಿದ್ದಾರೆ. ಭಾರತದಲ್ಲಿ ಮುಸ್ಲಿಂ ಮಹಿಳೆಯರ ಹಕ್ಕುಗಳ ಹೋರಾಟದಲ್ಲಿ ಗೆದ್ದ ಶಾ ಬಾನೋ ಕಥೆಯನ್ನೇ ಸಿನಿಮಾ  ಮಾಡಲಿದ್ದಾರೆ. ಪ್ರಮುಖ ಪಾತ್ರಕ್ಕೆ ನಟಿ ಯಾಮಿ ಗೌತಮ್ (Yami Gautam) ಜೀವ ತುಂಬಲಿದ್ದಾರೆ. ಅಹ್ಮದ್ ಖಾನ್ ಪಾತ್ರದಲ್ಲಿ ನಟಿಸುವ ಇಮ್ರಾನ್ ಹಾಶ್ಮಿಗೆ ಪತ್ನಿಯಾಗಿ ಯಾಮಿ ನಟಿಸಲಿದ್ದಾರೆ. ಇದನ್ನೂ ಓದಿ:ಪಹಲ್ಗಾಮ್‌ನಲ್ಲಿ ಅಮಾಯಕರ ನೆತ್ತರು ಹರಿಸಲಾಗಿದೆ: ಉಗ್ರರ ದಾಳಿ ಬಗ್ಗೆ ಸುದೀಪ್ ಕಿಡಿ

    ಈ ಸಿನಿಮಾಗೆ ಸುಪರ್ಣ್ ಎಸ್. ವರ್ಮಾ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಈ ವರ್ಷ ಅಕ್ಟೋಬರ್‌ನಲ್ಲಿ ಸಿನಿಮಾ ರಿಲೀಸ್ ಆಗಲಿದೆ.

  • ಪತಿ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭಕೋರಿದ ಯಾಮಿ ಗೌತಮ್

    ಬಾಲಿವುಡ್ ನಟಿ ಯಾಮಿ ಗೌತಮ್ (Yami Gautam) ದಂಪತಿ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮನೆಗೆ ಹೊಸ ಅತಿಥಿ ಆಗಮನ ಆಗುತ್ತಿರುವ ಸಂಭ್ರಮದ ನಡುವೆ ಪತಿ ಆದಿತ್ಯಾ ಧರ್ (Aditya Dhar) ಹುಟ್ಟುಹಬ್ಬಕ್ಕೆ ಸ್ವೀಟ್ ಆಗಿ ಯಾಮಿ ವಿಶ್ ಮಾಡಿದ್ದಾರೆ. ವಿಶ್ವದ ಅತ್ಯುತ್ತಮ ವ್ಯಕ್ತಿಯನ್ನು ಮದುವೆಯಾಗಿದ್ದೇನೆ ಎಂದು ಪತಿಯನ್ನು ಯಾಮಿ ಹಾಡಿ ಹೊಗಳಿದ್ದಾರೆ.

    ನನ್ನ ಅವರಿಗೆ ಜನ್ಮದಿನದ ಶುಭಾಶಯಗಳು. ವಿಶ್ವದ ಅತ್ಯುತ್ತಮ ವ್ಯಕ್ತಿಯನ್ನು ಮದುವೆಯಾಗಿದ್ದೇನೆ. ನಾನು ಅದೃಷ್ಟವಂತೆ. ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ ಹುಟ್ಟುಹಬ್ಬದ ಶುಭಾಶಯಗಳು ಎಂದು ನಟಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Yami Gautam Dhar (@yamigautam)

    ಯಾಮಿ ಪತಿಗೆ ವಿಶ್ ಮಾಡಿರುವ ರೀತಿಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ. ಅಷ್ಟೇ ಅಲ್ಲ, ಶೇರ್‌ ಮಾಡಿರುವ ಫೋಟೋದಲ್ಲಿ ಯಾಮಿ ಮುಖದಲ್ಲಿ ತಾಯ್ತನ ಕಳೆ ನೋಡಿ ಅಭಿಮಾನಿಗಳು ಶುಭಹಾರೈಸಿದ್ದಾರೆ. ನಟಿಯ ಬೇಬಿ ಬಂಪ್ ಲುಕ್ ನೋಡಿ ಶುಭಕೋರಿದ್ದಾರೆ. ಇದನ್ನೂ ಓದಿ:‘ಕೆರೆಬೇಟೆ’ಯಲ್ಲಿ ಕಾಮಿಡಿ ಕಿಲಾಡಿ ರಾಕೇಶ್ ಕಚಗುಳಿ

    ಆದಿತ್ಯಾ ಧರ್ ನಿರ್ದೇಶನ, ಯಾಮಿ ಗೌತಮ್ ನಟನೆಯ ‘ಆರ್ಟಿಕಲ್ 370’ (Article 370)  ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಅಂದಹಾಗೆ, ಯಾಮಿ ಗೌತಮ್ ಈ ಹಿಂದೆ ಕನ್ನಡದ ‘ಉಲ್ಲಾಸ ಉತ್ಸಾಹ’ (Ullasa Utsava) ಸಿನಿಮಾದಲ್ಲಿ ನಟಿಸಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್‌ಗೆ (Golden Star Ganesh) ನಾಯಕಿಯಾಗಿ ನಟಿಸಿ ಗಮನ ಸೆಳೆದಿದ್ದರು.

  • ‘ಆರ್ಟಿಕಲ್ 370’ ಚಿತ್ರ ನೋಡಿ ಭಾವುಕರಾದ ರಕ್ಷಣಾ ಸಚಿವ ರಾಜನಾಥ್ ಸಿಂಗ್

    ‘ಆರ್ಟಿಕಲ್ 370’ ಚಿತ್ರ ನೋಡಿ ಭಾವುಕರಾದ ರಕ್ಷಣಾ ಸಚಿವ ರಾಜನಾಥ್ ಸಿಂಗ್

    ಕ್ಷಣಾ ಸಚಿವ ರಾಜನಾಥ್ ಸಿಂಗ್(Rajnath Singh)  ತಮ್ಮ ಕುಟುಂಬದೊಂದಿಗೆ ದೆಹಲಿಯಲ್ಲಿ ಆರ್ಟಿಕಲ್ 370 (Article 370) ಸಿನಿಮಾ ನೋಡಿದ್ದಾರೆ. ಈ ಕುರಿತಂತೆ ಅವರು ಟ್ವೀಟ್ ಮಾಡಿದ್ದಾರೆ. ಈ ಸಿನಿಮಾ ಕುರಿತಂತೆ ಅನೇಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದರು. ಕಾಶ್ಮೀರದಲ್ಲಿ ಆರ್ಟಿಕಲ್ 370 ತೆಗೆದಿದ್ದರ ಬಗ್ಗೆ ಮನಮುಟ್ಟುವಂತೆ ಸಿನಿಮಾದಲ್ಲಿ ಹೇಳಿದ್ದಾರೆ. ಇದು ನೈಜ ಘಟನೆಗಳ ಪ್ರೇರಣೆಯಿಂದ ಆಗಿರುವ ಸಿನಿಮಾ’ ಎಂದು ಬರೆದುಕೊಂಡಿದ್ದಾರೆ. ಈ ಸಿನಿಮಾ ನೋಡುವಾಗ ಭಾವುಕರಾದ ಸಂಗತಿಯನ್ನೂ ಅವರು ಬಿಚ್ಚಿಟ್ಟಿದ್ದಾರೆ.

    ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಕೂಡ ಆರ್ಟಿಕಲ್ 370 ಚಿತ್ರದ ಬಗ್ಗೆ ತಮ್ಮ ಭಾಷಣದಲ್ಲಿ ಉಲ್ಲೇಖ ಮಾಡಿದ್ದರು. ಕಾಶ್ಮೀರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋದಿ, ‘ಆರ್ಟಿಕಲ್ 370 ಸಿನಿಮಾ ಜಮ್ಮು ಕಾಶ್ಮೀರದ ವಿಶೇಷ ಅಧಿಕಾರವನ್ನು ಯಾಕೆ ತಗೆಯಲಾಯಿತು ಎನ್ನುವುದನ್ನು ಸ್ಪಷ್ಟವಾಗಿ ತಿಳಿಸುತ್ತದೆ ಎಂದು ಹೇಳಿದ್ದರು.

    ಮೋದಿಯ ಈ ಭಾಷಣವನ್ನು ಕೇಳಿರುವ ಆರ್ಟಿಕಲ್ 370 ಸಿನಿಮಾದ ನಾಯಕಿ ಯಾಮಿನಿ ಗೌತಮ್ (Yamini Gautam), ಮೋದಿ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದರು. ಈ ನೈಜ ಕಥೆಯನ್ನು ನಿಮಗೆ ಮತ್ತು ಎಲ್ಲರಿಗೂ ಒಪ್ಪುವಂತೆ ಸಿನಿಮಾ ಮಾಡಿದ್ದೇವೆ ಎನ್ನುವ ಭರವಸೆಯನ್ನು ನಾನು ಮತ್ತು ನನ್ನ ತಂಡ ನೀಡಲಿದೆ ಎಂದು ಯಾಮಿನಿ ಪ್ರತಿಕ್ರಿಯೆ ನೀಡಿದ್ದರು.

     

    ಅಂದಹಾಗೆ ಕನ್ನಡತಿ ಪ್ರಿಯಾ ಮಣಿ ಹಾಗೂ ಬಾಲಿವುಡ್ ಹೆಸರಾಂತ ನಟಿ ಯಾಮಿನಿ ಗೌತಮ್ ಕಾಂಬಿನೇಷನ್ ನ ಲ್ಲಿ ಈ ಸಿನಿಮಾ ಮೂಡಿ ಬಂದಿದೆ. ಸಿನಿಮಾದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಪಾತ್ರಗಳು ಇವೆ. ಯಾಮಿ ಗೌತಮ್ ಖಡಕ್ ಎನ್.ಐ.ಎ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.

  • ಮದುವೆ ಬಳಿಕ ಸತ್ಯ ಹೇಳಿದ ಯಾಮಿ ಗೌತಮ್

    ಮದುವೆ ಬಳಿಕ ಸತ್ಯ ಹೇಳಿದ ಯಾಮಿ ಗೌತಮ್

    ಮುಂಬೈ: ಕೆಲವು ದಿನಗಳಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಯಾಮಿ ಗೌತಮ್ ಮದುವೆಯಾದ ಬಳಿಕ ಒಂದು ಸತ್ಯವನ್ನು ಬಾಯಿ ಬಿಟ್ಟಿದ್ದಾರೆ. ಅವರಿಗೆ ಇರುವ ಒಂದು ಕಾಯಿಲೆ ಕುರಿತಾಗಿ ಹೇಳಿಕೊಂಡಿರುವುದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಾಗುತ್ತಿದೆ.

    ಇತ್ತೀಚೆಗೆ ಒಂದು ಫೋಟೋಶೂಟ್ ಮಾಡಲಾಯಿತು. ಸಾಮಾನ್ಯವಾಗಿ ನಮ್ಮ ಚರ್ಮದ ಸಮಸ್ಯೆಯನ್ನು ಮರೆಮಾಚುವ ಸಲುವಾಗಿ ಆ ಫೋಟೋಗಳನ್ನು ಪೋಸ್ಟ್​ ಪ್ರೊಡಕ್ಷನ್​ಗೆ ಕಳಿಸುತ್ತೇವೆ. ಆದರೆ ಈ ಬಾರಿ ಬೇರೆ ಆಲೋಚನೆ ಬಂತು. ನಾನೇಕೆ ಈ ಸಮಸ್ಯೆಯನ್ನು ಒಪ್ಪಿಕೊಳ್ಳಬಾರದು ಎನಿಸಿತು ಎಂದು ಯಾಮಿ ಗೌತಮ್ ಪೋಸ್ಟ್ ಮಾಡಿದ್ದಾರೆ.

    ಸತ್ಯವನ್ನು ನಿಮ್ಮೆದುರು ಒಪ್ಪಿಕೊಳ್ಳಲು ಧೈರ್ಯ ಮಾಡಿದ್ದೇನೆ. ನಾನು ಹದಿಹರೆಯದಲ್ಲಿ ಇರುವಾಗಲೇ ಈ ಸಮಸ್ಯೆ ಇರುವುದು ಗೊತ್ತಾಯಿತು. ಇನ್ನೂ ಇದು ವಾಸಿ ಆಗಿಲ್ಲ. ತುಂಬ ವರ್ಷಗಳಿಂದ ಇದನ್ನು ನಿಭಾಯಿಸುತ್ತಿದ್ದೇನೆ. ಆದರೆ ಇಂದು ನನ್ನ ನ್ಯೂನತೆಯನ್ನು ಒಪ್ಪಿಕೊಂಡು, ಭಯ ಮತ್ತು ಅಭದ್ರತೆಯನ್ನು ತೊಲಗಿಸುವ ಧೈರ್ಯ ಮಾಡಿದ್ದೇನೆ ಎಂದು ಯಾಮಿ ಗೌತಮ್ ಹೇಳಿದ್ದಾರೆ.

     

    View this post on Instagram

     

    A post shared by Yami Gautam Dhar (@yamigautam)

    ಕೆರಟೋಸಿಸ್ ಪಿಲಾರಸ್ (Keratosis-Pilaris) ಎಂಬ ಚರ್ಮದ ಸಮಸ್ಯೆ ಯಾಮಿ ಗೌತಮ್ ಅವರನ್ನು ಕಾಡುತ್ತಿದೆ. ಇದೇನೂ ಗಂಭೀರ ಸಮಸ್ಯೆ ಅಲ್ಲ. ಆದರೆ ಎಷ್ಟೇ ಪ್ರಯತ್ನಿಸಿದರೂ ಅವರಿಗೆ ಇದಕ್ಕೆ ಪರಿಹಾರ ಸಿಕ್ಕಿಲ್ಲ. ಚರ್ಮದ ಮೇಲ್ಭಾಗದಲ್ಲಿ ಚಿಕ್ಕ ಚಿಕ್ಕ ಗುಳ್ಳೆಗಳು ಆಗುತ್ತವೆ. ಈ ಗುಳ್ಳೆಗಳಿಂದ ಉರಿ, ತುರಿಕೆ, ನೋವು ಏನೂ ಇರುವುದಿಲ್ಲ. ಇದು ಕೆರಟೋಸಿಸ್ ಪಿಲಾರಸ್ ಲಕ್ಷಣ. ಹದಿಹರೆಯಲ್ಲಿ ಇದ್ದಾಗಲೇ ಯಾಮಿ ಗೌತಮ್ ಅವರಿಗೆ ಈ ಸಮಸ್ಯೆ ಕಾಣಿಸಿಕೊಂಡಿತು. ಅಂದಿನಿಂದ ಇದನ್ನು ಮುಚ್ಚಿಟ್ಟುಕೊಂಡೇ ಬಂದಿದ್ದ ಅವರು ಈಗ ಎಲ್ಲವನ್ನೂ ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ:  ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ನಟಿ ಯಾಮಿ ಗೌತಮ್

    ನಟಿಯರು ಚರ್ಮದ ಬಗ್ಗೆ ಕಾಳಜಿ ವಹಿಸುತ್ತಾರೆ. ಹಾಗಾಗಿ ಅವರು ಸ್ವಸ್ಥವಾದ ಚರ್ಮ ಹೊಂದಬೇಕಾಗಿರುವುದು ಅನಿವಾರ್ಯ. ಹಾಗಾಗಿ ಕೆರಟೋಸಿಸ್ ಪಿಲಾರಸ್ ಸಮಸ್ಯೆಯಿಂದ ಮುಕ್ತಿ ಪಡೆಯಲು ಯಾಮಿ ಗೌತಮ್ ಸಾಕಷ್ಟು ಪ್ರಯತ್ನಿಸಿದರು ಸಾಧ್ಯವಾಗಿಲ್ಲ. ಆ ಬಗ್ಗೆ ಅವರೀಗ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

    ಬಾಲಿವುಡ್ ನಟಿ ಯಾಮಿ ಗೌತಮ್ ತಮ್ಮ ಬಹುಕಾಲದ ಗೆಳೆಯ ಆದಿತ್ಯ ಧಾರ್ ಜೊತೆ ನಾಲ್ಕು ತಿಂಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಯುಆರ್‍ಐ ಸಂಸ್ಥೆಯಲ್ಲಿ ನಿರ್ದೇಶಕರಾಗಿದ್ದ, ಆದಿತ್ಯ ಧಾರ್, ಯಾಮಿ ಗೌತಮ್ ಅವರ ಜೊತೆ ಸರಳ ಹಾಗೂ ಶಾಸ್ತ್ರೋಕ್ತವಾಗಿ ಸಪ್ತಪದಿ ತುಳಿದಿದ್ದಾರೆ. ವಿವಾಹದ ಫೋಟೋವನ್ನು ಯಾಮಿ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಆದರೆ ಇದೀಗ ಅವರಿಗೆ ಇರುವ ಕಾಯಿಲೆ ಕುರಿತಾಗಿ ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ.

  • ಅಜ್ಜಿಯ ಒತ್ತಾಯದಿಂದಾಗಿ ಮದುವೆಯಾದೆ: ಯಾಮಿ ಗೌತಮ್

    ಅಜ್ಜಿಯ ಒತ್ತಾಯದಿಂದಾಗಿ ಮದುವೆಯಾದೆ: ಯಾಮಿ ಗೌತಮ್

    ಮುಂಬೈ: ನಟಿ ಯಾಮಿ ಗೌತಮ್ ಮದುವೆಯಾಗಿ ಕೆಲವು ದಿನಗಳ ನಂತರ ತಮ್ಮ ಮದುವೆಯ ಹಿಂದೆ ಇರುವ ವಿಚಾರವನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

    ಮೊದಲು ಕೇವಲ ನಿಶ್ಚಿತಾರ್ಥವನ್ನಷ್ಟೇ ಮಾಡಿಕೊಳ್ಳಬೇಕು ಎಂದು ನಿರ್ಧಾರವಾಗಿತ್ತು, ಆದರೆ, ಅಜ್ಜಿಯ ಒತ್ತಾಯದಿಂದಾಗಿ ಮದುವೆ ಆಗಬೇಕಾಗಿ ಬಂತು ಎಂದು ಯಾಮಿ ಗೌತಮ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಇದನ್ನೂ ಓದಿ:  ಹಾಟ್ ಫೋಟೋಶೂಟ್‍ನಲ್ಲಿ ಪಾರುಲ್ ಯಾದವ್ ಹವಾ

     

    View this post on Instagram

     

    A post shared by Yami Gautam Dhar (@yamigautam)

    ನಾವು ಅದರ ಬಗ್ಗೆ ಪ್ಲಾನ್ ಮಾಡಿರಲಿಲ್ಲ, ಆದರೂ ಮದುವೆ ಸುಂದರ ರೀತಿಯಲ್ಲಿ ನಡೆದು ಹೋಯಿತು. ನನಗೆ ನಿಜವಾಗಿಯೂ ಬೇಕಾಗಿದ್ದು ಇದೇ. ನಾವಿರುವುದು ಹೀಗೆಯೇ. ಇದನ್ನು ಬಹಳಷ್ಟು ಜನ ಅರ್ಥಮಾಡಿಕೊಂಡಿದ್ದಾರೆ ಎಂಬುದು ನನಗೆ ಖುಷಿ ನೀಡಿದೆ. ನಾವು ಉರಿ ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ಹತ್ತಿರವಾಗಲು ಆರಂಭಿಸಿದೆವು. ಅಲ್ಲಿಂದ ನಮ್ಮ ಸ್ನೇಹ ಶುರುವಾಯಿತು. ಅದಾಗಿ ಎರಡು ವರ್ಷಗಳಾಯಿತು, ಮತ್ತು ನಾವು ಮದುವೆ ಆಗಲು ನಿರ್ಧರಿಸಿದೆವು. ನಮ್ಮಿಬ್ಬರ ಮನೆಯವರಿಗೂ ಇದರಿಂದ ಸಂತೋಷವಾಯಿತು ಎಂದು ಅವರು ಹೇಳಿದ್ದಾರೆ.

     

    View this post on Instagram

     

    A post shared by Yami Gautam Dhar (@yamigautam)

    ಜೂನ್‍ನಲ್ಲಿ ನಟಿ ಯಾಮಿ ಗೌತಮ್ ನಿರ್ದೇಶಕ ಆದಿತ್ಯ ಧರ್ ಅವರನ್ನು ಮದುವೆಯಾದರು. ಯಾರೂ ಊಹಿಸಿಯೇ ಇರಲಿಲ್ಲ. ಯಾಮಿ ಗೌತಮ್ ಅವರ ಊರಾದ ಹಿಮಾಚಲ ಪ್ರದೇಶದ ಬಿಲಾಸ್‍ಪುರದಲ್ಲಿ ಮದುವೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡಿಕೊಂಡು ಮದುವೆಯಾಗಿರುವ ವಿಚಾರವನ್ನು ಹೇಳಿಕೊಂಡು ತಮ್ಮ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದರು. ಜೊತೆಗೆ ಮದುವೆಯ ವಿವಿಧ ಶಾಸ್ತ್ರಗಳ ಹಲವಾರು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಇದೀಗ ಅವರು ಯಾವುದೇ ಸುಳಿವು ಕೊಡದೆ ಮದುವೆಯಾಗಿರುವುದರ ಹಿಂದೆ ಇವರು ವಿಚಾರವನ್ನು ಹೇಳಿಕೊಂಡಿದ್ದಾರೆ.

  • ಅಮ್ಮನ ಸೀರೆಯುಟ್ಟು ಸಪ್ತಪದಿ ತುಳಿದ `ಉಲ್ಲಾಸ ಉತ್ಸಾಹ’ ನಟಿ

    ಅಮ್ಮನ ಸೀರೆಯುಟ್ಟು ಸಪ್ತಪದಿ ತುಳಿದ `ಉಲ್ಲಾಸ ಉತ್ಸಾಹ’ ನಟಿ

    ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ `ಉಲ್ಲಾಸ ಉತ್ಸಾಹ’ ಚಿತ್ರದ ಮೂಲಕ ಸಿನಿ ಲೋಕಕ್ಕೆ ಕಾಲಿಟ್ಟ ನಟಿ ಯಾಮಿ ಗೌತಮ್ . ಇದಾದ ಬಳಿಕ ಹಿಂದಿ, ತಮಿಳು, ತೆಲುಗು, ಮಲಯಾಳಂ, ಪಂಜಾಬಿ ಹೀಗೆ ಬಹು ಭಾಷೆಗಳಲ್ಲಿ ಯಾಮಿ ನಟಿಸಿದ್ದಾರೆ. ಇತ್ತೀಚೆಗಷ್ಟೇ `ಉರಿ’ ಸಿನಿಮಾ ನಿರ್ದೇಶಕ ಆದಿತ್ಯ ಧರ್ ಜೊತೆ ಹಿಮಾಚಲ ಪ್ರದೇಶದಲ್ಲಿ ಸರಳವಾಗಿ ವಿವಾಹವಾಗಿರುವ ಯಾಮಿ, ತಮ್ಮ ಮದುವೆಯ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Yami Gautam (@yamigautam)

    ಮದುವೆ ಬಗ್ಗೆ ಎಲ್ಲಾ ಹೆಣ್ಣುಮಕ್ಕಳಿಗೂ ಅಪಾರ ಕನಸಿರುತ್ತದೆ. ಮದುವೆ ದಿನ ಧರಿಸಬೇಕಾದ ಉಡುಪು ಯಾವ ರೀತಿ ಇರಬೇಕು ಎನ್ನುವ ಬಗ್ಗೆ ಹೆಣ್ಮಕ್ಕಳು ಎರಡು-ಮೂರು ತಿಂಗಳು ಮೊದಲೇ ತಯಾರಿ ಆರಂಭಿಸಿರುತ್ತಾರೆ. ಅದರಲ್ಲೂ ಸೆಲೆಬ್ರಿಟಿಗಳು ಅಂದ್ರೆ ಕೇಳಬೇಕಾ ? ಮೆಹಂದಿ, ಅರಶಿನ ಶಾಸ್ತ್ರ ಹೀಗೆ ಮದುವೆಯಲ್ಲಿ ನಡೆಯುವ ಎಲ್ಲಾ ಶಾಸ್ತ್ರಗಳಿಗೂ ಅದಕ್ಕೆ ಹೊಂದುವಂತೆ ತಮ್ಮ ಉಡುಗೆಗಳನ್ನು ಸಿದ್ಧಪಡಿಸಿಕೊಳ್ಳುತ್ತಾರೆ.

     

    View this post on Instagram

     

    A post shared by Yami Gautam (@yamigautam)

    ನಟಿಯರು ಸಾಮಾನ್ಯವಾಗಿ ತಮ್ಮ ಮದುವೆಗೆ ಡಿಸೈನರ್ ಉಡುಪುಗಳನ್ನು ತಯಾರಿ ಮಾಡಿಸುತ್ತಾರೆ. ಆದರೆ ಯಾಮಿ ಮಾತ್ರ ಈ ವಿಷಯದಲ್ಲಿ ಸ್ವಲ್ಪ ವಿಭಿನ್ನವಾಗಿದ್ದಾರೆ. ಹೌದು, ಯಾಮಿ ತಮ್ಮ ಮದುವೆಗೆ ಡಿಸೈನರ್ ಉಡುಪಿನ ಬದಲು ತಮ್ಮ ತಾಯಿಯ ಮದುವೆ ಸೀರೆಯನ್ನೇ ಧರಿಸಿದ್ದಾರೆ. ಆ ಸೀರೆ ಸುಮಾರು 33 ವರ್ಷ ಹಳೆಯ ಸೀರೆಯಾಗಿದ್ದು, ಯಾಮಿ ಧರಿಸಿದ್ದ ಕೆಂಪು ಬಣ್ಣದ ದುಪ್ಪಟ್ಟ ಅವರ ಅಜ್ಜಿ ಕೊಟ್ಟಿದ್ದು ಎನ್ನಲಾಗಿದೆ.

     

    View this post on Instagram

     

    A post shared by Yami Gautam (@yamigautam)

    ಇನ್ನೂ ಯಾಮಿ ತಮ್ಮ ಮದುವೆಗೆ ಸರಳವಾಗಿ ರೆಡಿಯಾಗಿದ್ದು, ಸಿಂಪಲ್ ಆಗಿ ಎರಡು ಸರ, ಬೈತಲೆ ಬೊಟ್ಟು, ಕಿವಿಯೋಲೆ ಜೊತೆಗೆ ಸೀರೆಗೆ ಹೊಂದುವಂತೆ ಕೆಂಪು ಬಣ್ಣದ ಬಳೆಗಳನ್ನು ತೊಟ್ಟಿದ್ದಾರೆ. ಕೆಂಪು ಲಿಪ್‍ಸ್ಟಿಕ್, ಕಾಡಿಗೆ ಜೊತೆಗೆ ಸ್ವಲ್ಪ ಚೀಕ್ ರೋಸ್ ಬಳಸಿ ತಾವೇ ಲೈಟಾಗಿ ಮೇಕಪ್ ಮಾಡಿಕೊಂಡಿದ್ದಾರೆ. ಮದುವೆ ವಿಚಾರ ಬಹಿರಂಗವಾದ ಬಳಿಕ ಯಾಮಿ ತಮ್ಮ ಮದುವೆಯ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಯಾಮಿ ಸರಳತೆ ಕಂಡು ಅಭಿಮಾನಿಗಳು ಅಚ್ಚರಿ ಪಟ್ಟಿದ್ದಾರೆ.

     

    View this post on Instagram

     

    A post shared by Wedding Blogger (@wedding_diaries_1)