Tag: Yamakanamaradi

  • ಗೋವಾದಿಂದ ಆಂಧ್ರಕ್ಕೆ ಅಕ್ರಮ ಸಾಗಾಟ – 28 ಲಕ್ಷ ರೂ. ಮೌಲ್ಯದ ಮದ್ಯ ವಶ

    ಗೋವಾದಿಂದ ಆಂಧ್ರಕ್ಕೆ ಅಕ್ರಮ ಸಾಗಾಟ – 28 ಲಕ್ಷ ರೂ. ಮೌಲ್ಯದ ಮದ್ಯ ವಶ

    ಚಿಕ್ಕೋಡಿ: ಯಮಕನಮರಡಿ (Yamakanamaradi) ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಗೋವಾದಿಂದ‌ (Goa) ಆಂಧ್ರಕ್ಕೆ (Andhra Pradesh) ಅಕ್ರಮ ಸಾಗಾಟ ಮಾಡುತ್ತಿದ್ದ ಮದ್ಯವನ್ನು (Alcohol) ವಶಕ್ಕೆ ಪಡೆದಿದ್ದಾರೆ.

    16,848 ಲೀಟರ್ ಅಕ್ರಮ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹಾರ್ಡ್‌ವೇರ್ ವಸ್ತು ಸಾಗಾಟ ಮಾಡುತ್ತೇವೆ ಎಂದು ಲೈಸೆನ್ಸ್ ಪಡೆದು ಹಾರ್ಡ್‌ವೇರ್ ಬದಲಿಗೆ ಗೋವಾದ ಅಕ್ರಮ ಮದ್ಯ ಸಾಗಾಟ ಮಾಡಲಾಗುತ್ತಿತ್ತು. ಈ ಹಿನ್ನೆಲೆ ಒಟ್ಟು 28 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಕಳೆದ ಐದು ದಿನದಲ್ಲಿ ಧರೆಗುರುಳಿದ 271 ಮರ

    ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತೋಷ್ ಹಲಗೆ, ಸದಾಶಿವ ಗೇರಡೆ ಎಂಬ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈ ಕುರಿತು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಇಂದು ದೇಶ್ಯಾದ್ಯಂತ ಕಾಮೆಡ್-ಕೆ ಪರೀಕ್ಷೆ

  • ನಾನು ಜಾತಿ ಪರ ಬಂದಿದ್ದೇನೆ  ಅಂದ್ಕೋಬೇಡಿ : ಕಿಚ್ಚ ಸುದೀಪ್ ಮನವಿ

    ನಾನು ಜಾತಿ ಪರ ಬಂದಿದ್ದೇನೆ ಅಂದ್ಕೋಬೇಡಿ : ಕಿಚ್ಚ ಸುದೀಪ್ ಮನವಿ

    ಬಿಜೆಪಿ (BJP) ಪ್ರಚಾರಕ್ಕೆ ಹೋದಲ್ಲಿ ನಾನು ಬರಿ ಜಾತಿ (Caste) ಪರ ಬಂದಿದ್ದೇನೆ ಅನ್ಕೋಬೇಡಿ ಎಂದು ನಟ ಸುದೀಪ್ (Sudeep) ಮನವಿ ಮಾಡಿದ್ದಾರೆ. ಯಮಕನಮರಡಿ (Yamakanamaradi) ಕ್ಷೇತ್ರದ ವಂಟಮೂರಿ ಗ್ರಾಮದಲ್ಲಿ ರೋಡ್ ಶೋ ಬಳಿಕ ಅಭಿಮಾನಿಗಳನ್ನು ಉದ್ದೇಶಿಸಿ ಭಾಷಣ ಮಾಡಿದ ಸುದೀಪ್,  ‘ನಾನು ಎಲ್ಲಿ ಹುಟ್ಟಿದೆ. ಯಾವ ಜನಾಂಗ ಅನ್ನೋದು ಮುಖ್ಯ ಅಲ್ಲ. ಒಬ್ಬ ಮನುಷ್ಯನಾಗಿರುವುದು, ಸ್ನೇಹಿತನಾಗಿರುವುದು ಮೊದಲು ಮುಖ್ಯ. ಆವಾಗ ಮಾತ್ರ ಮನಸ್ಸುಗಳನ್ನು ಗೆಲ್ಲಲು ಸಾಧ್ಯ. ಇಲ್ಲಿ ನಾನು ನಿಮ್ಮ ಸಹೋದರ, ಸ್ನೇಹಿತನಾಗಿ ಬಂದಿದ್ದೇನೆ. ನನ್ನ ಬಾಂಧವರ ಪರ ತುಂಬಾ ಪ್ರೀತಿ ಇದೆ’ ಎಂದಿದ್ದಾರೆ.

    ಮುಂದುವರೆದು ಮಾತನಾಡಿದ ಸುದೀಪ್, ‘ಇನ್ನೂ ಯಮಕನಮರಡಿ ಅಭ್ಯರ್ಥಿ ಬಸವರಾಜ ಹುಂದ್ರಿ ಬಡ ಕುಟುಂಬದಿಂದ ಬಂದಿದ್ದಾರೆ. ಮೋದಿ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಸೇರಿ ಅವರಿಗೆ ಟಿಕೆಟ್ ಕೊಟ್ಟಿದ್ದಾರೆ. ನಿಮ್ಮ ಸಹಕಾರ ಹಾಗೂ ಸೇವೆ ಮಾಡಲು ಬಸವರಾಜ‌ ಹುಂದ್ರಿ ಅವರಿಗೆ ಅವಕಾಶ ಕೊಡಿ. ಮತ ಹಾಕಿ ಗೆಲ್ಲಿಸುವದು ಅಷ್ಟೆ ಅಲ್ಲ ಅವರ ಕಡೆಯಿಂದ ಕೆಲಸ ಮಾಡಿಸಿಕೊಳ್ಳುವುದು ಮುಖ್ಯ. ಈ ಊರಲ್ಲಿ ಸರಿಯಾಗಿ ರಸ್ತೆ ಇಲ್ಲ. ಯಮಕನಮರಡಿ ಕ್ಷೇತ್ರದಲ್ಲಿ ತುಂಬಾನೇ ಕೆಲಸ ಬಾಕಿ ಇದೆ. ಗೆದ್ದರೆ ಇಲ್ಲಿ ಕೆಲಸಗಳನ್ನು ಮಾಡಿಕೊಡಿತೀರಾ ಸರ್ ಎಂದು ಅಭ್ಯರ್ಥಿಯನ್ನೇ’ ಸುದೀಪ್ ಕೇಳಿದರು. ಇದನ್ನೂ ಓದಿ:ವಿಧಾನಸಭೆ ಚುನಾವಣೆ 2023: ಸುದೀಪ್ ರೋಡ್ ಶೋ ಮತ್ತೆ ರದ್ದು

    ಎಲ್ಲ ಕೆಲಸಗಳನ್ನು ಮಾಡುತ್ತೇನೆ ನನಗೆ ಆಶೀರ್ವಾದ ಮಾಡಿ ಎಂದ ಬಸವರಾಜ ಹುಂದ್ರಿ (Basavaraja Hundri), ಕೆಲಸ ಮಾಡಲಿಲ್ಲಾ ಅಂದ್ರೆ ನಾನೇ ಬರತೀನಿ ಸರ್, ಜನ‌ ನಮ್ಮವರಿದ್ದಾರೆ. ಬಿಟ್ಟು ಕೊಡಲು ಆಗುವುದಿಲ್ಲ ಎಂದು ಸುದೀಪ್ ಹೇಳಿದರು. 25 ವರ್ಷ ಚಿತ್ರರಂಗದಲ್ಲಿ ಇದ್ದೀನಿ ಅಂದ್ರೆ ನಿಮ್ಮಿಂದಾ. ನನ್ನ ಮೊದಲನೇ ಪ್ರೀತಿ ಕನ್ನಡ, ಕನ್ನಡಚಿತ್ರರಂಗ, ಅಭಿಮಾನಿಗಳು. ನನ್ನ ತಂದೆ ತಾಯಿ ಹೆಸರಿಟ್ಟಿದ್ದು ಬಹಳಷ್ಟು ಜನರಿಗೆ ಗೊತ್ತಿದೆಯೋ ಗೊತ್ತಿಲ್ಲಾ. ಆದರೆ ಕಿಚ್ಚ ಕಿಚ್ಚ ಎನ್ನುವ ಹೊಸ ಜನ್ಮ ಕೊಟ್ಟಿದ್ದೀರಾ ನೀವೆಲ್ಲ. ಕೊನೆವರೆಗೂ ಅದನ್ನ ಕಾಪಾಡಿಕೊಂಡು ಹೋಗುತ್ತೇನೆ ಎಂದರು.

    ಅಭಿಮಾನಿಗಳು ಸುದೀಪ್ ಗೆ ವೀರ ಮದಕರಿ ಚಿತ್ರದ ಡೈಲಾಗ್ ಹೇಳುವಂತೆ ಒತ್ತಾಯ ಮಾಡಿದರು.  ಮದಕರಿ ಚಿತ್ರದ ಡೈಲಾಗ್ ನೀವು ಕೇಳತೀರಾ. ಆದರೆ ಅದನ್ನ ಹೇಳಿದರೆ ಜಾತಿ ಬಗ್ಗೆ ಮಾತಾಡತೀನಿ ಅನ್ಕೋತಾರೆ. ಇದು ಯಾವ ನ್ಯಾಯ ಎಂದ ಸುದೀಪ್ ಬಳಿಕ  ಅಭಿಮಾನಿಗಳ ಒತ್ತಾಯದ ಮೇರೆಗೆ ಮದಕರಿ ಚಿತ್ರದ ಡೈಲಾಗ್  ಹೇಳಿದರು‌.