Tag: yama

  • ಜನರಿಗೆ ಜಾಗೃತಿ ಮೂಡಿಸಲು ರೋಡಿಗಿಳಿದ ಯಮ, ಕಿಂಕರರು

    ಜನರಿಗೆ ಜಾಗೃತಿ ಮೂಡಿಸಲು ರೋಡಿಗಿಳಿದ ಯಮ, ಕಿಂಕರರು

    ಹಾವೇರಿ: ಯಮ, ಕಿಂಕರರು ಹಾಗೂ ಕೊರೊನಾ ವೈರಸ್ ವೇಷ ಹಾಕಿಕೊಂಡು ಸ್ಥಳೀಯರು ಕೊರೊನಾ ವೈರಸ್ ಕುರಿತು ಜನರಿಗೆ ಜಾಗೃತಿ ಮೂಡಿಸುತ್ತಿರುವ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ಪಟ್ಟಣದಲ್ಲಿ ನಡೆದಿದೆ.

    ಪಟ್ಟಣದ ಹೊಸಪೇಟೆ ಓಣಿಯ ನಾಲ್ವರಲ್ಲಿ ಓರ್ವ ಯಮನ ವೇಷ, ಇಬ್ಬರು ಕಿಂಕರರ ವೇಷ ಹಾಗೂ ಮತ್ತೊಬ್ಬ ಕೊರೊನಾ ವೈರಸ್ ನ ವೇಷ ಹಾಕಿಕೊಂಡು ಪಟ್ಟಣದಲ್ಲಿ ಜನರಿಗೆ ಕೊರೊನಾ ವೈರಸ್ ಮತ್ತು ಲಾಕ್‍ಡೌನ್ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

    ಯಮ ಕೊರೊನಾ ವೈರಸ್ ವೇಷಧಾರಿಯ ಕೊರಳಿಗೆ ಹಗ್ಗ ಹಾಕಿಕೊಂಡು ಹಿಡ್ಕೊಂಡು ಓಡಾಡುತ್ತಿದ್ದರೆ, ಇಬ್ಬರು ಕಿಂಕರರು ರಸ್ತೆ ತುಂಬ ಓಡಾಡುತ್ತಾ ಮನೆಬಿಟ್ಟು ಹೊರಗಡೆ ಓಡಾಡೋರಿಗೆ ಎಚ್ಚರಿಕೆ ನೀಡಿತ್ತಿದ್ದಾರೆ. ಯಮ, ಕಿಂಕರರು ಹಾಗೂ ಕೊರೊನಾ ವೈರಸ್ ವೇಷಧಾರಿಗಳಿಗೆ ಬ್ಯಾಡಗಿ ಠಾಣೆ ಪೊಲೀಸರು ಸಹ ಸಾಥ್ ನೀಡುತ್ತಿದ್ದಾರೆ. ವೇಷಧಾರಿಗಳ ಮೂಲಕ ಮನೆಬಿಟ್ಟು ಹೊರಬರದೆ, ಮನೆಯಲ್ಲೇ ಇದ್ದು ಕೊರೊನಾ ಸೋಂಕು ಹರಡದಂತೆ ತಡೆಯಲು ಸಹಕರಿಸಿ ಎಂದು ಜನರಿಗೆ ಮನವಿ ಮಾಡಲಾಗುತ್ತಿದೆ.

  • ಬೆಂಗಳೂರಲ್ಲಿ ಯಮಧರ್ಮ – ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೆ ಬೀಳುತ್ತೆ ಕುಣಿಕೆ

    ಬೆಂಗಳೂರಲ್ಲಿ ಯಮಧರ್ಮ – ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೆ ಬೀಳುತ್ತೆ ಕುಣಿಕೆ

    ಬೆಂಗಳೂರು: ಸಂಚಾರ ನಿಯಮದ ಕುರಿತು ಜಾಗೃತಿ ಮೂಡಿಸಲು ಪೊಲೀಸರು ವಿವಿಧ ಉಪಾಯಗಳನ್ನು ಅನುಸರಿಸುತ್ತಿದ್ದು, ಇದರ ಭಾಗವಾಗಿ ಯಮ ಧರ್ಮರಾಜನನ್ನು ರಸ್ತೆಗೆ ಇಳಿಸಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಮಿಸ್ಟರ್ ಯಮಧರ್ಮರಾಜ ಪ್ರತ್ಯಕ್ಷನಾಗಿ ಟ್ರಾಫಿಕ್ ನೋಡಿಕೊಳ್ಳುತ್ತಿದ್ದು, ಸಂಚಾರ ನಿಯಮ ಉಲ್ಲಂಘಿಸಿದವರಿಗೆ ಕುಣಿಕೆ ಹಾಕಿದ್ದಾನೆ.

    ಯಮಧರ್ಮರಾಜನ ವೇಶಭೂಷಣ ತೊಟ್ಟ ವ್ಯಕ್ತಿ ಮೂಲಕ ಹೆಲ್ಮೆಟ್ ಹಾಕದೇ ವಾಹನ ಚಾಲನೆ ಮಾಡುವವರು, ದಾಖಲೆಗಳು ಇಲ್ಲದೇ ವಾಹನ ಚಾಲನೆ ಮಾಡುವವರನ್ನು ಹಿಡಿದು ಕುಣಿಕೆ ಹಾಕಿ ಎಚ್ಚರಿಕೆ ಕೊಟ್ಟು, ಜಾಗೃತಿ ಮೂಡಿಸಿದ್ದಾರೆ.

    ಮೆಜೆಸ್ಟಿಕ್ ಬಳಿ ಉಪ್ಪಾರಪೇಟೆ ಸಂಚಾರಿ ಪೊಲೀಸ್ ಠಾಣೆ ಸರ್ಕಲ್ ಇನ್ಸ್‍ಪೆಕ್ಟರ್ ಮಾರುತಿಯವರು ಸಂಚಾರ ನಿಯಮದ ಕುರಿತು ವಿಭಿನ್ನವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಹೆಲ್ಮೆಟ್ ಹಾಕದೇ ದ್ವಿಚಕ್ರ ವಾಹನದಲ್ಲಿ ಸಂಚರಿಸಬೇಡಿ, ನಿಮ್ಮ ತಲೆಯನ್ನು ಯಮಧರ್ಮನಿಗೆ ಬೀಡಬೇಡಿ ಎಂದು ಹೇಳುವ ಮೂಲಕ ಸಂಚಾರ ನಿಯಮಗಳ ಕುರಿತು ಅರಿವು ಮೂಡಿಸಿದರು.

  • ದಾವಣಗೆರೆ ಪಾಲಿಕೆ ಸದಸ್ಯನಿಗೆ ವಾರ್ನ್ ಮಾಡಿದ ಯಮ!

    ದಾವಣಗೆರೆ ಪಾಲಿಕೆ ಸದಸ್ಯನಿಗೆ ವಾರ್ನ್ ಮಾಡಿದ ಯಮ!

    ದಾವಣಗೆರೆ: ರಸ್ತೆಯಲ್ಲಿ ಬೈಕ್ ಚಲಿಸುತ್ತಿದ್ದಾಗ ಸಂಚಾರಿ ನಿಯಮಗಳನ್ನು ಪಾಲನೆ ಮಾಡದೇ ಬೈಕ್ ಚಲಾಯಿಸುತ್ತಿದ್ದ ಪಾಲಿಕೆ ಸದಸ್ಯನೊಬ್ಬರಿಗೆ ಯಮ ಕಿಂಕರರೇ ಆಗಮಿಸಿ ಸಂಚಾರಿ ನಿಯಮಗಳ ಬಗ್ಗೆ ತಿಳಿ ಹೇಳಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.

    ನಗರದ ಜಯದೇವ ಸರ್ಕಲ್‍ನಲ್ಲಿ ಸಂಚಾರಿ ಪೊಲೀಸರು ರಾಷ್ಟ್ರೀಯ ರಸ್ತೆ ಸುರಕ್ಷತಾ ದಿನಾಚರಣೆಯ ಹಿನ್ನೆಲೆಯಲ್ಲಿ ಸಿಬ್ಬಂದಿಗೆ ಯಮ ಕಿಂಕರರ ವೇಷಭೂಷಣಗಳನ್ನು ಹಾಕಿಸಿ, ರಸ್ತೆ ಸಂಚಾರ ನಿಯಮಗಳನ್ನು ವಿನೂತನವಾಗಿ ಜನರಿಗೆ ಹಾಗೂ ಸವಾರರಿಗೆ ತಿಳಿ ಹೇಳುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಯಮಕಿಂಕರರು ಸಂಚಾರಿ ನಿಯಮ ಉಲ್ಲಂಘನೆ ಮಾಡುವವರಿಗೆ ಪಾಶ ಹಾಕಿ ಸಂಚಾರಿ ನಿಯಮಗಳ ಬಗ್ಗೆ ತಿಳಿ ಹೇಳುತ್ತಿದ್ದರು.

    ಅದೇ ರಸ್ತೆಯಲ್ಲಿ ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸುತ್ತಿದ್ದ ದಾವಣಗೆರೆ ಮಹಾನಗರ ಪಾಲಿಕೆ ಸದಸ್ಯ ಎ ನಾಗರಾಜ್ ರನ್ನು ಹಿಡಿದ ಯಮ ಕಿಂಕರರು, ಸಂಚಾರಿ ನಿಯಮಗಳ ಬಗ್ಗೆ ತಿಳಿ ಹೇಳಿದರು.

    ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸಿದರೆ ನನ್ನ ಲೋಕಕ್ಕೆ ಕರೆದೊಯ್ಯುತ್ತೇನೆ ಎಂದು ವಾಹನ ಸವಾರರಿಗೆ ಹೆದರಿಸಿದರು. ಇದಕ್ಕೆ ಇನ್ನೊಮ್ಮೆ ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸುವುದಿಲ್ಲ ಎಂದು ಹೇಳಿ ಪಾಲಿಕೆ ಸದಸ್ಯ ಅಲ್ಲಿಂದ ಹೊರಟು ಹೋದರು. ಹೀಗೆ ಇನ್ನೂ ಕೆಲಕಾಲ ಹಾಸ್ಯದ ವಾತವರಣ ಸೃಷ್ಟಿಯಾಗಿತ್ತು.

  • ಕಿಂಕರರ ಜೊತೆ ರಸ್ತೆಗಿಳಿದ ಯಮಧರ್ಮ- ಸಂಚಾರ ನಿಯಮದ ಅರಿವು ಮೂಡಿಸಿದ ಪೊಲೀಸರು

    ಕಿಂಕರರ ಜೊತೆ ರಸ್ತೆಗಿಳಿದ ಯಮಧರ್ಮ- ಸಂಚಾರ ನಿಯಮದ ಅರಿವು ಮೂಡಿಸಿದ ಪೊಲೀಸರು

    ದಾವಣಗೆರೆ: ಜಿಲ್ಲೆಯ ಪ್ರಮುಖ ರಸ್ತೆಗಳಿಗೆ ಇಂದು ಯಮಧರ್ಮ ಮತ್ತು ಯಮಕಿಂಕರರು ಆಗಮಿಸಿ ವಾಹನ ಸವಾರರಿಗೆ ಸಾವಿನ ಎಚ್ಚರಿಕೆ ಮೂಡಿಸಿದ್ದಾರೆ. ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ನಿಮ್ಮ ಜೀವದ ಜೊತೆ ಚಲ್ಲಾಟವಾಡುವುದನ್ನು ನಿಲ್ಲಿಸಿ ಎಂಬ ಸಂದೇಶ ಸಾರಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ವಾಹನ ಸಂಚಾರರು ನಿಯಮಗಳನ್ನು ಉಲ್ಲಂಘಿಸಿ, ಸಂಚಾರಿ ನಿಯಮಗಳನ್ನು ಪಾಲಿಸದೆ, ದ್ವಿಚಕ್ರ ಸವಾರರು ಹೆಲ್ಮೆಟ್ ಧರಿಸದೆ, ಆಟೋ ಚಾಲಕರು ಅತಿ ಹೆಚ್ಚಿನ ಪ್ರಯಾಣಿಕರನ್ನು ತುಂಬಿಕೊಂಡು ಸಂಚರಿಸುತ್ತಿದ್ದಾರೆ. ಕಾರು ಚಾಲಕರು ಸೀಟ್ ಬೆಲ್ಟ್ ಧರಿಸುತ್ತಿಲ್ಲ, ಬಸ್ ಚಾಲಕರು ಅಜಾಗರೂಕತೆಯಿಂದ ಬಸ್ ಚಲಾಯಿಸುತ್ತಿರುವುದನ್ನು ಗಮನಿಸಿದ ಸಂಚಾರಿ ಪೋಲಿಸರು ಇಂದು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ತಾವೇ ಯಮಧರ್ಮ ಹಾಗೂ ಕಿಂಕರರ ವೇಷಧರಿಸಿ ರಸ್ತೆಗಿಳಿದಿದ್ದರು. ಸಂಚಾರ ನಿಯಮಗಳನ್ನು ಪಾಲಿಸುವಂತೆ ವಾಹನ ಸವಾರರಿಗೆ ಅರಿವು ಮೂಡಿಸುವ ಸಲುವಾಗಿ ಪೊಲೀಸ್ ಸಿಬ್ಬಂದಿ ಯಮ, ಯಮಕಿಂಕರ ವೇಷ ಧರಿಸಿ ಜಾಗೃತಿ ಮೂಡಿಸಿದರು.

    ನಗರದ ಜಯದೇವ ವೃತ್ತದಲ್ಲಿಂದು ದಕ್ಷಿಣ ಸಂಚಾರ ಪೊಲೀಸ್ ಠಾಣೆಯಿಂದ ಆಯೋಜಿಸಲಾಗಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದ ಪ್ರಯುಕ್ತ ವಾಹನ ಚಾಲಕರಿಗೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವಾಹನ ಸವಾರರಿಗೆ ಗುಲಾಬಿ ಹೂವು ನೀಡಿ ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಸೂಚಿಸಿದರು.

    ನೀವು ಹೆಲ್ಮೆಟ್ ಧರಿಸಿಲ್ಲ. ವಾಹನದ ಚಾಲನೆ ವೇಳೆ ಮೊಬೈಲ್ ನಲ್ಲಿ ಮಾತನಾಡುತ್ತೀರಾ? ಸರ್ಕಾರ ಹೆಚ್ಚು ದಂಡ ವಿಧಿಸಿದರೂ ಅಜಾಗರೂಕತೆಯ ವಾಹನ ಚಾಲನೆ ಮಾಡುತ್ತಿರಾ? ನಿಮ್ಮ ಸಾವು ಸಂಭವಿಸುತ್ತದೆ. ನಿಮ್ಮನ್ನು ನಮ್ಮ ಯಮಲೋಕಕ್ಕೆ ಕರೆದುಕೊಂಡು ಹೋಗಿ ಘೋರ ಶಿಕ್ಷೆ ನೀಡುತ್ತೇವೆ. ಭೂ ಲೋಕದಲ್ಲಿ ಪೊಲಿಸರು ಸಾಕಷ್ಟು ಜಾಗೃತಿ ಮೂಡಿಸಿದರು ನೀವು ಪಾಲನೆ ಮಾಡುತ್ತಿಲ್ಲಾ. ಯಮಕಿಂಕರರೇ ಈ ವ್ಯಕ್ತಿಗಳ ಜಾತಕ ಬಹಿರಂಗಪಡಿಸಿ ಎಂದು ಹೀಗೆ ಜಯದೇವವೃತ್ತದಲ್ಲಿ ಯಮನ ವೇಷಧರಿಸಿದ್ದ ಪೋಲಿಸರಾದ ರಾಮಾಂಜನೇಯ ನಾಟಕ ಪ್ರದಶಿಸುವ ಮೂಲಕ ವಾಹನ ಸವಾರರಲ್ಲಿ ಜಾಗೃತಿ ಮೂಡಿಸಿದರು. ಯಮನಂತೆಯೇ ಡೈಲಾಗ್ ಹೇಳಿ ರಂಜಿಸುವ ಮೂಲಕ ರಸ್ತೆ ಸಂಚಾರದ ಅರಿವು ಮೂಡಿಸಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು. ಯಮಕಿಂಕರರು ಯಮಪಾಶ ಹಾಗೂ ಮೂಲಕ ಸಂಚಾರಿ ನಿಯಮ ಪಾಲಿಸದ ವಾಹನ ಸವಾರರಿಗೆ ಸಾವಿನ ಎಚ್ಚರಿಕೆ ಮೂಡಿಸಿದರು. ನಂತರ ಗುಲಾಬಿ ಹೂಗಳನ್ನು ನೀಡುವ ಮೂಲಕ ಕಟ್ಟುನಿಟ್ಟಾದ ಸಂಚಾರ ಪಾಲಿಸಬೇಕೆಂದು ಪೊಲೀಸ್ ಸಿಬ್ಬಂದಿ ತಿಳಿಸಿದರು.

    ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದರೆ ಯಮನನ್ನು ಆಹ್ವಾನಿಸಿದಂತೆ. ನಿಯಮ ಮೀರಿ ವಾಹನ ಚಲಾಯಿಸಿ ಮನೆ ತಲುಪಿದ್ದಾರೆ ಎಂದರೆ ಅವರಿಗೆ ಅವಕಾಶ ಸಿಕ್ಕಂತೆ. ಅದನ್ನು ಅರಿತು ಪುನಃ ಸಂಚಾರಿ ನಿಯಮ ಉಲ್ಲಂಘನೆಯಾಗದಂತೆ ಎಚ್ಚರ ವಹಿಸಬೇಕು ಎಂದರು.

    ಯಮವೇಷ ಧರಿಸಿದ್ದ ಪೊಲೀಸ್ ಸಿಬ್ಬಂದಿ ರಾಮಾಂಜನೇಯ ಮಾತನಾಡಿ, ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಎಸ್‍ಪಿ ಅವರ ಮಾರ್ಗದರ್ಶನದಲ್ಲಿ ಪಿಎಸ್‍ಐ ಮಂಜುನಾಥ್ ಲಿಂಗಾರೆಡ್ಡಿ ಮತ್ತು ಜಯಶೀಲ ಅವರ ನೇತೃತ್ವದಲ್ಲಿ ಪೊಲೀಸ್ ಕರ್ತವ್ಯದ ಜೊತೆಗೆ ಜನರಿಗೆ ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ನಿಯಮ ಉಲ್ಲಂಘಿಸಿದಾಗ ಕೇವಲ ದಂಡ ಹಾಕಿದರೆ ಜನರಲ್ಲಿ ಬದಲಾವಣೆ ಕಾಣಲು ಸಾಧ್ಯವಾಗುವುದಿಲ್ಲ. ಹಾಗಾಗಿ ಈ ರೀತಿ ವಿಶೇಷವಾಗಿ ಜಾಗೃತಿ ಮೂಡಿಸಲಾಗುತ್ತಿದ್ದು, ಜನರು ಕೂಡ ಇದಕ್ಕೆ ಸ್ಪಂದನೆ ನೀಡುತ್ತಿದ್ದಾರೆ ಎಂದರು.

    ಯಮವೇಷಧಾರಿಯಾಗಿ ಪೊಲೀಸ್ ಸಿಬ್ಬಂದಿ ರಾಮಾಂಜನೇಯ, ಯಮಕಿಂಕರನಾಗಿ ಹರೀಶ್ ನಾಯ್ಕ್, ಚಂದ್ರಗುಪ್ತನಾಗಿ ಮಂಜುನಾಥ್ ಪಾತ್ರ ನಿರ್ವಹಿಸಿದರು. ಈ ವೇಳೆ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದಂತಹ ಚಾಲಕರ ಬಳಿ ಹೋಗಿ ನಿಯಮ ಉಲ್ಲಂಘನೆ ಅಪರಾಧ ಮತ್ತು ಜೀವಕ್ಕೆ ಅಪಾಯ ಎಂಬ ಸಂದೇಶದ ಜೊತೆಗೆ ಮುಂದೆ ಸಂಚಾರಿ ನಿಯಮಗಳನ್ನು ಪಾಲಿಸಿ ಜೀವ ರಕ್ಷಿಸಿಕೊಳ್ಳಬೇಕೆಂದು ಜಾಗೃತಿ ಮೂಡಿಸಿದರು.

    ಯಮ ಮತ್ತು ಯಮಕಿಂಕರರ ವೇಷದ ಸಿಬ್ಬಂದಿ ಆಟೋ ಚಾಲಕನ ಬಳಿ ಹೋಗಿ ನಿಯಮ ಮೀರಿ ಹೆಚ್ಚು ಪ್ರಯಾಣಿಕರನ್ನು ಕೂರಿಸಿದ್ದಕ್ಕಾಗಿ ಹಾಗೂ ದಾಖಲೆಗಳು ಸರಿಯಾಗಿರದ ಕಾರಣದಿಂದಾಗಿ ಆಟೋ ಚಾಲಕನಿಗೆ ಯಮಪಾಶವನ್ನು ಹಾಕಿ ಯಮಲೋಕಕ್ಕೆ ಕರೆದೊಯ್ಯುವುದಾಗಿ ಎಚ್ಚರಿಕೆ ನೀಡಿದರು. ಅದೇ ರೀತಿ ಖಾಸಗಿ ನಗರ ಸಾರಿಗೆ ಬಸ್‍ನೊಳಗೆ ಹೋದ ಯಮ ಮತ್ತು ಯಮಕಿಂಕರರ ವೇಷದ ಪೊಲೀಸ್ ಸಿಬ್ಬಂದಿ ಪ್ರಯಾಣಿಕರ ಜೀವ ನಿನ್ನ ಮೇಲಿದ್ದು, ಸಂಚಾರಿ ನಿಯಮ ಪಾಲಿಸುವ ಮೂಲಕ ಅವರನ್ನು ಸುರಕ್ಷಿತವಾಗಿ ತಲುಪಿಸುವ ಕೆಲಸ ಮಾಡುವಂತೆ ಬಸ್ ಚಾಲಕನಿಗೆ ಅರಿವು ಮೂಡಿಸಿದರು.

  • ಹೆಲ್ಮೆಟ್ ಹಾಕದೆ ಇರೋ ಬೈಕ್ ಸವಾರರಿಗೆ `ಯಮ’ನಿಂದ ಎಚ್ಚರಿಕೆ

    ಹೆಲ್ಮೆಟ್ ಹಾಕದೆ ಇರೋ ಬೈಕ್ ಸವಾರರಿಗೆ `ಯಮ’ನಿಂದ ಎಚ್ಚರಿಕೆ

    ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘನೆ ನಿಯಂತ್ರಣಕ್ಕೆ ಟ್ರಾಫಿಕ್ ಪೊಲೀಸರು ವಿನೂತನ ಪ್ರಯತ್ನವೊಂದನ್ನು ಮಾಡಿದ್ದಾರೆ.

    ಹೆಲ್ಮೆಟ್ ಹಾಕದೆ ಬೈಕ್ ಚಾಲನೆ ಮಾಡೊರಿಗೆ ಯಮನಿಂದ ವಾರ್ನಿಂಗ್ ಎಂಬ ವಿಶೇಷ ಅಭಿಯಾನವನ್ನು ಬೆಂಗಳೂರು ಹಲಸೂರು ಗೇಟ್ ಸಂಚಾರಿ ಪೊಲೀಸರು ಕೈಗೊಂಡಿದ್ದಾರೆ.

    ಪ್ರಾಣ ಉಳೀಬೇಕು ಅಂದ್ರೆ ಹೆಲ್ಮೆಟ್ ಹಾಕ್ಬೇಕು. ಹೆಲ್ಮೆಟ್ ಹಾಕಿಲ್ಲ ಅಂದ್ರೆ ಯಮನೇ ಬೆನ್ನ ಹಿಂದೆ ಕೂತಿರ್ತಾನೆ. ಆ ಮರಣ ದೇವ ರೋಡ್‍ನಲ್ಲಿ ಹೋಗೋರನ್ನು ತಡೆದು ಅವರ ಬೈಕ್, ಸ್ಕೂಟರ್ ಹತ್ತುತ್ತಾನೆ ಅಂತ ಹೆಲ್ಮೆಟ್ ಹಾಕದೆ ಇರೋ ಬೈಕ್ ಸವಾರರಿಗೆ ಎಚ್ಚರಿಕೆ ಕೊಡುತ್ತಿದ್ದಾರೆ.