Tag: yallapura

  • ಕಾರವಾರ | ಭೀಕರ ಅಪಘಾತ – ಒಂದೇ ಕುಟುಂಬದ ಮೂವರು ಸಾವು

    ಕಾರವಾರ | ಭೀಕರ ಅಪಘಾತ – ಒಂದೇ ಕುಟುಂಬದ ಮೂವರು ಸಾವು

    ಕಾರವಾರ: ಭೀಕರ ಅಪಘಾತದಲ್ಲಿ (Accident) ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ (Uttara Kannada) ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ ನಡೆದಿದೆ.

    ಆರ್ ವೆಂಕಟೇಶ್, ಪತ್ನಿ ಚೈತ್ರಾ ಹಾಗೂ 4 ವರ್ಷದ ಮಗು ಶ್ರೀಹಾನ್ ಮೃತ ದುರ್ದೈವಿಗಳು. ಇದನ್ನೂ ಓದಿ: ಕ್ರಿಕೆಟ್ ಆಡುವಾಗ ಅಲ್ ಅಮೀನ್ ವೈದ್ಯಕೀಯ ಕಾಲೇಜಿನಲ್ಲಿ ರ‍್ಯಾಗಿಂಗ್ ಆರೋಪ

    ಓವರಟೇಕ್ ಮಾಡುವ ಭರದಲ್ಲಿ ಎದುರಿನಿಂದ ಬರುತ್ತಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದಿದ್ದು, ಲಾರಿ ಗುದ್ದಿದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಮೂವರ ಪೈಕಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಇದನ್ನೂ ಓದಿ: ಹೊಸಕೋಟೆಯಿಂದ ಕುಂಭಮೇಳಕ್ಕೆ ಹೋಗ್ತಿದ್ದಾಗ ಅಪಘಾತ – ಮಹಿಳೆ ಸಾವು

    ಕುಟುಂಬಸ್ಥರು ಕೊಪ್ಪಳದಿಂದ ಅಂಕೋಲಾಕ್ಕೆ ಕಡೆಗೆ ಪ್ರವಾಸಕ್ಕೆ ಹೊರಟ್ಟಿದ್ದರು. ಮೃತ ವೆಂಕಟೇಶ್ ತಮ್ಮ ಶ್ರೀಕಾಂತ ರೆಡ್ಡಿ ಕಾರು ಚಲಾಯಿಸುತ್ತಿದ್ದರು. ಚಾಲಕ ಶ್ರೀಕಾಂತ್ ರೆಡ್ಡಿಯ ಎರಡು ಕಾಲಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಎರಡು ಅಂತಸ್ತಿನ ಮನೆ ಕುಸಿತ

  • ಹುಬ್ಬಳ್ಳಿ-ಅಂಕೋಲ ರೈಲ್ವೆ ಯೋಜನೆ ತಾತ್ವಿಕ ಒಪ್ಪಿಗೆ: ಉಮೇಶ್ ಕತ್ತಿ

    ಹುಬ್ಬಳ್ಳಿ-ಅಂಕೋಲ ರೈಲ್ವೆ ಯೋಜನೆ ತಾತ್ವಿಕ ಒಪ್ಪಿಗೆ: ಉಮೇಶ್ ಕತ್ತಿ

    ಕಾರವಾರ: ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗಕ್ಕೆ ಈಗಾಗಲೇ ಅರಣ್ಯ ಇಲಾಖೆಯಿಂದ ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಆದರೆ, ಕೆಲವು ಸರ್ಕಾರೇತರ ಸಂಘ ಸಂಸ್ಥೆಗಳು ಮತ್ತು ಪರಿಸರವಾದಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರಿಂದ ಹಿನ್ನಡೆಯಾಗಿತ್ತು ಎಂದು ಅರಣ್ಯ ಮತ್ತು ಪರಿಸರ, ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.

    umesh katti

    ಖಾಸಗಿ ಕಾರ್ಯಕ್ರಮದ ನಿಮಿತ್ತ ತಮ್ಮ ಕುಟುಂಬದೊಂದಿಗೆ ಯಲ್ಲಾಪುರಕ್ಕೆ ಭೇಟಿ ನೀಡಿದ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಹೈಕೋರ್ಟ್, ವನ್ಯಜೀವಿ ಮಂಡಳಿಯಿಂದ ಸಾಧಕ ಬಾಧಕದ ವರದಿ ಕೇಳಿರುವುದು ಪರಿಸರವಾದಿಗಳಿಗೆ ಹಿನ್ನಡೆಯಾಗಿದೆ. ಮಂಡಳಿಯು ಯೋಜನೆಗೆ ಪೂರಕ ವರದಿಯನ್ನು ನೀಡಲಿದೆ ಎಂಬ ವಿಶ್ವಾಸ ಸರ್ಕಾರಕ್ಕಿದೆ. ಅದಕ್ಕೆ ಬೇಕಾದ ಅಗತ್ಯ ಮಾಹಿತಿಗಳನ್ನು ನೀಡಲು ಸರ್ಕಾರ ಸಿದ್ಧವಿದೆ ಎಂದು ಹೇಳಿದರು. ಜಿಲ್ಲೆಯಲ್ಲಿ ಪರಿಸರ ಪ್ರವಾಸೋದ್ಯಮ ಸ್ಥಾಪಿಸಲು ಯಾರಾದರೂ ಉದ್ಯಮಿಗಳು ಮುಂದೆ ಬಂದರೆ ಅವರಿಗೆ ಅರಣ್ಯ ಇಲಾಖೆ ಎಲ್ಲ ಸಹಕಾರ ನೀಡಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಡಿ.4 ರಂದು ಆಂಧ್ರಪ್ರದೇಶ, ಒಡಿಶಾಗೆ ಅಪ್ಪಳಿಸಲಿರುವ ಜವಾದ್ ಚಂಡಮಾರುತ

    umesh katti

    ಅರಣ್ಯ ಹಕ್ಕು ನೀಡಲು ತೊಡಕು:
    ಅರಣ್ಯ ಹಕ್ಕು ಪಡೆಯಲು 1980ರ ಪೂರ್ವದ ದಾಖಲೆ ಪೂರೈಸಿ, ಅರಣ್ಯವಾಸಿಗಳಿಗೆ ಅರಣ್ಯ ಹಕ್ಕು ನೀಡಲು ತೊಡಕಾಗುತ್ತಿದೆ. ಕೆಲವೆಡೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗುತ್ತದೆ. ಮಾನವೀಯ ನೆಲೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಇಲಾಖೆಯಿಂದ ಸೂಚನೆ ನೀಡಬೇಕು ಎಂದು ವನವಾಸಿ ಕಲ್ಯಾಣದ ಪ್ರಮುಖರು ವಿನಂತಿಸಿಕೊಂಡರು. ಇದನ್ನೂ ಓದಿ: ಭೀಮಾತೀರದಲ್ಲಿ ಮತ್ತೆ ಹರಿದ ನೆತ್ತರು- ಪಟ್ಟಣ ಪಂಚಾಯ್ತಿ ಮಾಜಿ ಸದಸ್ಯನ ಬರ್ಬರ ಕೊಲೆ

    umesh katti

    ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಅರಣ್ಯವಾಸಿಗಳಿಗೆ ಅರಣ್ಯ ಹಕ್ಕು ನೀಡಲು 1980ರ ಪೂರ್ವದ ದಾಖಲೆಗಳನ್ನು ಪೂರೈಸಿ ಅದನ್ನು ಅರಣ್ಯ ಇಲಾಖೆ ಪರಿಶೀಲಿಸಿ ಕ್ರಮ ಕೈಗೊಳ್ಳಲಿದೆ. ಜೈಲಿಗೆ ಹೋದವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಿದ್ದರೆ ಇಲಾಖೆಯಿಂದ ಏನೂ ಮಾಡಲು ಸಾಧ್ಯವಿಲ್ಲ. ಆದರೆ, ಬೇರೆ ಯಾವುದೇ ಪ್ರಕರಣವಾದರೆ ಅದನ್ನು ಪರಿಶೀಲಿಸಬಹುದು ಎಂದರು. ಈ ಸಂದರ್ಭದಲ್ಲಿ ಎಂಎಲ್‍ಸಿ ಶಾಂತರಾಮ್ ಸಿದ್ದಿ ಹಾಗೂ ಇತರೆ ಪ್ರಮುಖರು ಹಾಜರಿದ್ದರು.

  • ಈಗಿನ ಮುಖ್ಯಮಂತ್ರಿ ನೇತೃತ್ವದಲ್ಲೇ ಮುಂದಿನ ಚುನಾವಣೆ: ಬಿ.ಎಸ್.ಯಡಿಯೂರಪ್ಪ

    ಈಗಿನ ಮುಖ್ಯಮಂತ್ರಿ ನೇತೃತ್ವದಲ್ಲೇ ಮುಂದಿನ ಚುನಾವಣೆ: ಬಿ.ಎಸ್.ಯಡಿಯೂರಪ್ಪ

    ಕಾರವಾರ: ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಶ್ರಮಿಸುತ್ತೇವೆ. ಈಗಿನ ಮುಖ್ಯಮಂತ್ರಿಗಳ ನೇತೃತ್ವದಲ್ಲೇ ಮುಂದಿನ ಚುನಾವಣೆ ನಡೆಯುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

    ಯಲ್ಲಾಪುರದಲ್ಲಿ ಗುರುವಾರ ಮಾತನಾಡಿದ ಅವರು, ನಾನು ಈಗ ಯಾವುದೇ ಸ್ಥಾನಮಾನದಲ್ಲಿ ಇಲ್ಲ. ಅಧಿಕಾರ ಇಲ್ಲದೇನೇ ರಾಜ್ಯದುದ್ದಕ್ಕೂ ಪ್ರವಾಸ ಮಾಡಿ ಪಕ್ಷದ ಬಲವರ್ಧನೆಗೆ ಪ್ರಯತ್ನಿಸುತ್ತಿದ್ದೇನೆ. ಮುಂದಿನ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲು ಏನು ಕೆಲಸ ಮಾಡಬೇಕು, ಅದನ್ನು ನಿರಂತರವಾಗಿ ಮಾಡುತ್ತೇನೆ. ಈಗಿರುವ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಮುಂದಿನ ಚುನಾವಣೆ ನಡೆಯುತ್ತದೆ. ಇದರಲ್ಲಿ ಯಾವುದೇ ತಪ್ಪಿಲ್ಲ. ನಾನೇ ಪಕ್ಷಕ್ಕೆ ರಾಜೀನಾಮೆ ನೀಡಿದ್ದೂ ಮತ್ತೆ ಚುನಾವಣೆಗೆ ನಿಲ್ಲಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಟ್ಟೆ ಬಿಚ್ಚಿ ತಿರುಗುವವರಿಗೇನ್‌ ಗೊತ್ತು ಗಾಂಧಿ ಮೌಲ್ಯ: ಕಂಗನಾ ವಿರುದ್ಧ ರಮೇಶ್‌ ಕುಮಾರ್‌ ಕಿಡಿ

    ಬಿಟ್ ಕಾಯಿನ್ ವಿಚಾರ ನಿಮಗೆಲ್ಲಾ ಗೊತ್ತಿದೆ. ಈ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಬಿಟ್ ಕಾಯಿನ್‌ನಲ್ಲಿ ಪಾಲ್ಗೊಂಡಿದ್ದರೆ ಅದು ಅಕ್ಷಮ್ಯ ಅಪರಾಧ. ಬಿಟ್ ಕಾಯಿನ್ ಬಗ್ಗೆ ಯಾರಿಗಾದರೂ ಮಾಹಿತಿಯಿದ್ದರೆ ಮಾಹಿತಿ ಒದಗಿಸಿ. ಅದ್ಯಾವುದೇ ಪಕ್ಷದವರಾಗಿರಲಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದ್ದಾರೆ.

    ವಿಜಯೇಂದ್ರ ಅವರು ಕೂಡಾ ಇವತ್ತಿನಿಂದ ಪ್ರವಾಸ ಕೈಗೊಂಡಿದ್ದಾರೆ. ಅವರಿಗೂ ಜಿಲ್ಲೆಗಳನ್ನು ನೀಡಿದ್ದು, ಆ ಜಿಲ್ಲೆಗಳಲ್ಲಿ ಸ್ನೇಹಿತರನ್ನು ಕರೆದುಕೊಂಡು ಪ್ರವಾಸ ಮಾಡುತ್ತಿದ್ದಾರೆ. ಅವರ ಪ್ರವಾಸಕ್ಕೇನು ತೊಂದರೆಯಿಲ್ಲ. ಒಳ್ಳೆ ಕೆಲಸ ಮಾಡಲು ಪ್ರಾರಂಭಿಸಿದ್ದಾರೆ. ರಾಜ್ಯದ ಉಪಾಧ್ಯಕ್ಷನಾಗಿ ಏನೇನು ಮಾಡಬೇಕು, ಅವೆಲ್ಲವನ್ನೂ ಮಾಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಶಿವಮೊಗ್ಗದಿಂದ ಅವರನ್ನು ನಿಲ್ಲಿಸುವ ಯಾವುದೇ ಯೋಚನೆ ಮಾಡಿಲ್ಲ. ಪಕ್ಷ ಏನು ತೀರ್ಮಾನ ಕೈಗೊಳ್ಳುತ್ತದೆಯೋ ಅದರಂತೆ ನಾವು ಕೆಲಸ ಮಾಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ನಿಮ್ಮ ತಟ್ಟೆಯಲ್ಲಿ ಬಿದ್ದಿರುವ ಕತ್ತೆಯನ್ನು ತೆಗೆಯಿರಿ – ಕಾಂಗ್ರೆಸ್ ವಿರುದ್ಧ ಶ್ರೀರಾಮುಲು ಕಿಡಿ

    25 ವರ್ಷವಾದರೂ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಅದರಲ್ಲಿ ಕಾಲಿಡಲು ಯಾರೂ ಮುಂದೆ ಬರಲ್ಲ. ರಾಹುಲ್ ಗಾಂಧಿಗೆ ಎಲ್ಲಿಯೂ ಜನಮನ್ನಣೆ ಸಿಗುತ್ತಿಲ್ಲ. ಅವರು ಪದೇ ಪದೇ ವಿದೇಶಕ್ಕೆ ಯಾಕೆ ಹೋಗಿ ಬರ್ತಾರೋ ನಮಗೆ ಗೊತ್ತಿಲ್ಲ. ಕಾಂಗ್ರೆಸ್ ಇನ್ನು ಮುಂದೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಕನಸ್ಸನ್ನು ಬಿಡಬೇಕು. ಈ ಹಿಂದೆ ಗೆಲ್ಲಲು ಸಾಧ್ಯವಾಗದ ಕ್ಷೇತ್ರದಿಂದಲೇ ಪ್ರವಾಸ ಪ್ರಾರಂಭವಾಗಿದೆ. ನಾವೇ ಅಭ್ಯರ್ಥಿ ಎನ್ನುವಂತೆ ಎಲ್ಲರೂ ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಪಕ್ಷ ಸೂಚಿಸುವ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಕರೆ ನೀಡಿದ್ದಾರೆ.

  • ಯಲ್ಲಾಪುರದಲ್ಲಿ ಕೆಮಿಕಲ್ ಟ್ಯಾಂಕರ್ ಸ್ಫೋಟ – ತಪ್ಪಿದ ಭಾರೀ ಅನಾಹುತ

    ಯಲ್ಲಾಪುರದಲ್ಲಿ ಕೆಮಿಕಲ್ ಟ್ಯಾಂಕರ್ ಸ್ಫೋಟ – ತಪ್ಪಿದ ಭಾರೀ ಅನಾಹುತ

    ಕಾರವಾರ: ಕೆಮಿಕಲ್ ತುಂಬಿದ ಟ್ಯಾಂಕರ್ ಪಲ್ಟಿಯಾಗಿ ಹೊತ್ತಿ ಉರಿದ ಘಟನೆ ಯಲ್ಲಾಪುರ ತಾಲೂಕಿನ ಆರೆಬೈಲ್ ಕ್ರಾಸ್‍ನ ಇಡಗುಂದಿ ಬಳಿ ನಡೆದಿದೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಅಂಕೋಲ ರಾಷ್ಟ್ರೀಯ ಹೆದ್ದಾರಿ 66ರ ಸಂಚಾರವನ್ನು ಕೆಲಕಾಲ ಬಂದ್ ಮಾಡಲಾಗಿತ್ತು, ಇದೀಗ ಸಂಚಾರ ಮುಕ್ತವಾಗಿದೆ.

    ಬೆಳಗ್ಗೆ ಸುಮಾರು 5.30ರಿಂದ 5.45ರ ನಡುವೆ ಅಂಕೋಲ ಭಾಗದ ಕಡೆ ತೆರಳುತಿದ್ದ ಟ್ಯಾಂಕರ್ ಚಾಲಕನ ನಿರ್ಲಕ್ಷದಿಂದ ಘಾಟಿಯಲ್ಲಿ ಪಲ್ಟಿಯಾಗಿ ಸ್ಫೋಟಗೊಂಡಿದೆ. ಈ ವೇಳೆ ಚಾಲಕನಿಗೆ ಅಲ್ಪ ಗಾಯವಾಗಿದ್ದು ತಕ್ಷಣದಲ್ಲಿ ಆತನನ್ನು ರಕ್ಷಣೆ ಮಾಡಲಾಗಿದೆ. ಇದನ್ನೂ ಓದಿ: ಕಲಬುರಗಿಯಲ್ಲಿ ಮತ್ತೆ ಕಂಪಿಸಿದ ಭೂಮಿ – ಸಿದ್ದರಾಮಯ್ಯಗೂ ಭೂಕಂಪನದ ಅನುಭವ

    ಸ್ಫೋಟದಿಂದ 500ಮೀಟರ್‍ಗೂ ಹೆಚ್ಚು ದೂರು ಬೆಂಕಿ ಅಲ್ಲಲ್ಲಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. 300-400 ಮೀಟರ್ ದೂರಗಳಷ್ಟು ಏನಾಗಿದೆ ಅನ್ನೋ ಮಾಹಿತಿ ದೊರೆಯದೆ ಅಧಿಕಾರಿಗಳು ಕಂಗಾಲಾಗಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಿನ ಕಮಲಾನಗರದಲ್ಲಿ ಕಟ್ಟಡ ಕುಸಿಯೋ ಭೀತಿ!

    ಯಲ್ಲಾಪುರದ ಇಡಗುಂದಿ ಬಳಿ ಪಲ್ಟಿಯಾಗಿ ಬಿದ್ದಿರುವ ಕೆಮಿಕಲ್ ಟ್ಯಾಂಕರ್‍ನಿಂದ ಹೊರಕ್ಕೆ ಬಿದ್ದು ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗುತ್ತಿದೆ.

  • ಚಲಿಸುತ್ತಿದ್ದ ಕಾರಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ- ಚಾಲಕ ಪಾರು

    ಚಲಿಸುತ್ತಿದ್ದ ಕಾರಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ- ಚಾಲಕ ಪಾರು

    ಕಾರವಾರ: ಶಾರ್ಟ್ ಸಕ್ರ್ಯೂಟ್ ಉಂಟಾದ ಪರಿಣಾಮ ಕಾರ್ ಬೆಂಕಿಗಾಹುತಿಯಾಗಿ ಸಂಪೂರ್ಣ ಭಸ್ಮವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಉಮ್ಮಚಗಿಯಲ್ಲಿ ನಡೆದಿದೆ.

    ಯಲ್ಲಾಪುರದ ಉಮ್ಮಚಗಿಯಿಂದ ಮುಂಡಗೋಡಿನ ಪಾಳಾದ ತಮ್ಮ ಊರಿಗೆ ಚಾಲಕ ಪ್ರಭು ಕಾರನ್ನು ತೆಗೆದುಕೊಂಡು ಹೋಗುತ್ತಿರುವಾಗ ಈ ಘಟನೆ ನೆಡೆದಿದೆ. ಘಟನೆಯಲ್ಲಿ ಪ್ರಭು ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.