Tag: Yalandur

  • ಚಾಮರಾಜನಗರದಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಕೊರೊನಾ

    ಚಾಮರಾಜನಗರದಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಕೊರೊನಾ

    ಚಾಮರಾಜನಗರ: ಜಿಲ್ಲೆಯ ಯಳಂದೂರು ತಾಲೂಕಿನ ಮೆಳ್ಳಹಳ್ಳಿ ಸಮೀಪದಲ್ಲಿರುವ ಖಾಸಗಿ ಶಾಲೆಯೊಂದರ ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ದೃಢವಾಗಿದ್ದು ಅತಂಕ ಮನೆಮಾಡಿದೆ.

    ಕಳೆದ ಮೂರು ದಿನಗಳ ಹಿಂದೆ ಶಾಲೆಯ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ ನಡೆಸಲಾಗಿತ್ತು. ಶಾಲೆಯ ಎಲ್ಲಾ ವಿದ್ಯಾರ್ಥಿಗಳ ಗಂಟಲು ದ್ರವ ಸಂಗ್ರಹ ಮಾಡಿದ್ದರು. ವರದಿಯಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಕೋವಿಡ್ 19 ದೃಢವಾಗಿದ್ದು ಇನ್ನುಳಿದ ಮಕ್ಕಳಲ್ಲಿ ಅತಂಕ ಶುರುವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನಾಳೆಯವರೆಗೆ ಶಾಲೆಗೆ ರಜೆ ಘೋಷಣೆ ಮಾಡಲಾಗಿದೆ. ಇದನ್ನೂ ಓದಿ: ದಾರಿ ಮಧ್ಯೆ ಹೋಟೆಲ್‍ನಲ್ಲಿ ಸಾರ್ವಜನಿಕರಂತೆ ಟೀ ಕುಡಿದ ಸಿಎಂ

    ಶಾಲೆಯಲ್ಲಿ 6 ರಿಂದ 10ನೇ ತರಗತಿವರೆಗೆ ಪಾಳಿ ಪದ್ಧತಿಯಲ್ಲಿ ಪಾಠಗಳು ನಡೆಯುತ್ತಿದೆ. ಶಾಲೆಯಲ್ಲಿ ಒಟ್ಟು 398 ವಿದ್ಯಾರ್ಥಿಗಳು ವ್ಯಾಸಂಗ ಮಾಡ್ತಿದ್ದಾರೆ. ಶಾಲೆಯ ಆವರಣ ಮತ್ತು ಕೊಠಡಿಗಳಿಗೆ ಸ್ಯಾನಿಟೈಸ್ ಮಾಡಿ ಬೀಗ ಹಾಕಲಾಗಿದೆ.  ಇದನ್ನೂ ಓದಿ: ಗಾಂಧಿ ಜಯಂತಿಯಂದು 31ನೇ ಜಿಲ್ಲೆ ವಿಜಯನಗರಕ್ಕೆ ಅಧಿಕೃತ ಚಾಲನೆ

    ಮಕ್ಕಳ ಪೋಷಕರು, ಶಾಲಾ ಸಿಬ್ಬಂದಿ, ಸೇರಿದಂತೆ ಶಾಲೆಯಲ್ಲಿ ಇದೀಗ ಆತಂಕ ವಾತಾವರಣವಿದೆ. ಮುಂಜಾಗ್ರತಾ ಕ್ರಮವಾಗಿ ರಡು ದಿನ ರಜೆಯನ್ನು ಘೋಷಣೆ ಮಾಡಲಾಗಿದೆ.

     

  • 10 ಅಡಿ ಉದ್ದದ, 25 ಕೆ.ಜಿ. ತೂಕದ ಹೆಬ್ಬಾವನ್ನು ಹೀಗೆ ಹಿಡಿದ್ರು- ವಿಡಿಯೋ ನೋಡಿ

    10 ಅಡಿ ಉದ್ದದ, 25 ಕೆ.ಜಿ. ತೂಕದ ಹೆಬ್ಬಾವನ್ನು ಹೀಗೆ ಹಿಡಿದ್ರು- ವಿಡಿಯೋ ನೋಡಿ

    ಚಾಮರಾಜನಗರ: ಜಿಲ್ಲೆಯ ಯಳಂದೂರು ತಾಲೂಕಿನ ದಾಸನಹುಂಟಿ ಗ್ರಾಮದ ಬಳಿಯ ರವಿ ಬಾಬು ಎಂಬವರಿಗೆ ಸೇರಿದ ದಾಳಿಂಬೆ ತೋಟದಲ್ಲಿ ಮರಕ್ಕೆ ಸುತ್ತಿಕೊಂಡಿರುವ ಹೆಬ್ಬಾವನ್ನು ರಕ್ಷಿಸಿದ್ದಾರೆ.

    ಇಂದು ಬೆಳಗ್ಗೆ ರವಿ ಅವರ ಸಾಯಿ ಫಾರಂನಲ್ಲಿ ದಾಳಿಂಬೆ ಮರಕ್ಕೆ ಸುಮಾರು 10 ಅಡಿ ಉದ್ದದ, 25 ಕೆ.ಜಿ. ತೂಕದ ಹೆಬ್ಬಾವೊಂದು ಸುರಳಿ ಸುತ್ತಿಕೊಂಡಿತ್ತು. ಭಾರೀ ಗಾತ್ರದ ಹೆಬ್ಬಾವನ್ನು ಗಮನಿಸಿದ ಗ್ರಾಮಸ್ಥರು ಸ್ನೇಕ್ ಮಹೇಶ್ ಎಂಬವರಿಗೆ ವಿಷಯ ತಿಳಿಸಿದ್ದಾರೆ.

    ವಿಷಯ ತಿಳಿದು ಸ್ಥಳಕ್ಕೆ ಬಂದ ಸ್ನೇಕ್ ಮಹೇಶ್ ಸ್ಥಳೀಯರ ಸಹಾಯದಿಂದ ಹೆಬ್ಬಾವನ್ನು ರಕ್ಷಣೆ ಮಾಡಿ, ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.