Tag: Yakshagana Artist

  • ಎರಡು ಲಕ್ಷಕ್ಕೆ 25 ಲಕ್ಷ.. ಮೀಟರ್ ಬಡ್ಡಿ ದಂಧೆಯಲ್ಲಿ ಯಕ್ಷಗಾನ ಕಲಾವಿದನ ಮೇಲೆ ಮಾರಣಾಂತಿಕ ಹಲ್ಲೆ

    ಎರಡು ಲಕ್ಷಕ್ಕೆ 25 ಲಕ್ಷ.. ಮೀಟರ್ ಬಡ್ಡಿ ದಂಧೆಯಲ್ಲಿ ಯಕ್ಷಗಾನ ಕಲಾವಿದನ ಮೇಲೆ ಮಾರಣಾಂತಿಕ ಹಲ್ಲೆ

    – ಪುಂಡು ವೇಷ ಮತ್ತು ಬಣ್ಣದ ವೇಷದ ನಡುವೆ ಗಲಾಟೆ

    ಉಡುಪಿ: ಮೀಟರ್‌ ಬಡ್ಡಿ ದಂಧೆ ವಿಚಾರದಲ್ಲಿ ಯಕ್ಷಗಾನ ಕಲಾವಿದನ (Yakshagana Artist) ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಕರಾವಳಿ ಜಿಲ್ಲೆ ಉಡುಪಿಯಲ್ಲಿ (Udupi) ನಡೆದಿದೆ.

    ನಿತಿನ್ ಆಚಾರ್ಯ ಹಲ್ಲೆಗೊಳಗಾದ ಕಲಾವಿದ. ಮನೆಯಲ್ಲಿ ಕೂಡಿ ಹಾಕಿ ಸಚಿನ್‌ ಅಮೀನ್‌ ಎಂಬಾತ ಮನಬಂದಂತೆ ಥಳಿಸಿದ್ದಾನೆ. ಘಟನೆ ಸಂಬಂಧ ಉಡುಪಿಯ ಪಡುಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: Chikkaballapura | ಗಂಡ-ಹೆಂಡ್ತಿ ನಡುವೆ ಜಗಳ – ಮಲಗಿದ್ದಾಗ ಪತಿಯನ್ನೇ ಕೊಂದಳಾ ಪತ್ನಿ?

    ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಉಪಟಳ ಮತ್ತು ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಿದೆ. ಉಡುಪಿಯಲ್ಲಿ ಮೀಟರ್ ಬಡ್ಡಿ ದಂಧೆ ವಿಚಾರದಲ್ಲಿ ಯುವಕನಿಗೆ ಮಾರಣಾಂತಿಕ ಹಲ್ಲೆ ನಡೆದಿದೆ. ಸಸಿ ಹಿತ್ಲು ಯಕ್ಷಗಾನ ಮೇಳದ ಕಲಾವಿದನಾಗಿರುವ ನಿತಿನ್ ಆಚಾರ್ಯಗೆ ಬಾಸುಂಡೆ ಬರುವಂತೆ ಹಲ್ಲೆ ನಡೆಸಲಾಗಿದೆ.

    ಉಡುಪಿ ಉದ್ಯಾವರದ ಸಚಿನ್ ಅಮೀನ್ ಮತ್ತು ಆತನ ತಂದೆ ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದಾರೆ. ನಿತಿನ್ ಪಡೆದ ಎರಡು ಲಕ್ಷಕ್ಕೆ 25 ಲಕ್ಷ ಬಡ್ಡಿ ಕಟ್ಟಿದ್ದೇವೆ ಎಂದು ಕಣ್ಣೀರಿಟ್ಟಿದ್ದಾರೆ. ಹಲ್ಲೆ ಮಾಡಿದ ಸಚಿನ್ ಅಮೀನ್ ಪಾವಂಜೆ ಮೇಳದ ಕಲಾವಿದ. ಸೂಕ್ತ ತನಿಖೆ ಮಾಡಿ ಆರೋಪಿಗಳನ್ನು ಬಂಧಿಸಿ ಎಂದು ಉಡುಪಿ ಪೊಲೀಸ್ ವರಿಷ್ಠಾಧಿಕಾರಿಗೆ ವಿಶ್ವಕರ್ಮ ಸಂಘಟನೆಗಳು ಮನವಿ ಮಾಡಿದೆ. ಇದನ್ನೂ ಓದಿ: ಕಗ್ಗಲೀಪುರದಲ್ಲಿ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ನಿರ್ಮಾಣ?

  • ಯಕ್ಷರಂಗದ ಅಪ್ರತಿಮ ಕಲಾವಿದ ಕುಂಬ್ಳೆ ಸುಂದರ್ ರಾವ್ ಇನ್ನಿಲ್ಲ

    ಯಕ್ಷರಂಗದ ಅಪ್ರತಿಮ ಕಲಾವಿದ ಕುಂಬ್ಳೆ ಸುಂದರ್ ರಾವ್ ಇನ್ನಿಲ್ಲ

    ಮಂಗಳೂರು: ಯಕ್ಷಗಾನದ ಅಪ್ರತಿಮ ಕಲಾವಿದ (Yakshagana Artist), ಮಾಜಿ ಶಾಸಕ ಕುಂಬ್ಳೆ ಸುಂದರ್ ರಾವ್ (Kumble Sundar Rao) (90) ವಿಧಿವಶರಾಗಿದ್ದಾರೆ.

    ಕಾಯರ್ಕಾಡಿ ಕುಂಞಕಣ್ಣ ಮತ್ತು ಕಲ್ಯಾಣಿ ದಂಪತಿ ಸುಪುತ್ರರಾಗಿ 1934ರ ಮಾರ್ಚ್ 20ರಲ್ಲಿ ಕೇರಳ ರಾಜ್ಯದ ಕುಂಬ್ಳೆಯಲ್ಲಿ ಸುಂದರ್ ರಾವ್ ಜನಿಸಿದರು.

    ಯಕ್ಷಗಾನ ಮತ್ತು ತಾಳ-ಮದ್ದಳೆ (ಸಾಂಪ್ರದಾಯಿಕ ನೃತ್ಯ) ಕಲಾವಿದರಾಗಿದ್ದ ಸುಂದರ್ ರಾವ್ ಮಂಗಳೂರಿನ (Managaluru) ಆಗಿನ ಸುರತ್ಕಲ್ ಕ್ಷೇತ್ರದ ಶಾಸಕರಾಗಿಯೂ ಸೇವೆ ಸಲ್ಲಿಸಿದ್ದಾರೆ. 1994 ರಿಂದ 1999ರ ವರೆಗೆ ಬಿಜೆಪಿಯಿಂದ ಸುರತ್ಕಲ್ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದ್ದರು. ಇದನ್ನೂ ಓದಿ: ಟೊಯೊಟಾ ಕಿರ್ಲೋಸ್ಕರ್‌ ಮೋಟಾರ್‌ ಉಪಾಧ್ಯಕ್ಷ ವಿಕ್ರಮ್‌ ಕಿರ್ಲೋಸ್ಕರ್‌ ಹೃದಯಾಘಾತದಿಂದ ನಿಧನ

    ಇವರು ಸುರತ್ಕಲ್, ಧರ್ಮಸ್ಥಳ ಮತ್ತು ಇರಾ ಯಕ್ಷಗಾನ ಮೇಳಗಳಲ್ಲಿ ಕಲಾವಿದರಾಗಿ ಕಾರ್ಯ ನಿರ್ವಹಿಸಿದ್ದರು. ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ ಇವರು ಯಕ್ಷಗಾನ ಕಲಾವಿದರೊಬ್ಬರು ನೇರವಾಗಿ ಮತದಾರರಿಂದಲೇ ಆರಿಸಲ್ಪಟ್ಟ ಪ್ರಪ್ರಥಮ ಶಾಸಕರೆಂಬ ಹೆಗ್ಗಳಿಕೆಯನ್ನೂ ಪಡೆದಿದ್ದಾರೆ.

    ಅದ್ಭುತ ವಾಕ್ ಚಾತುರ್ಯದಿಂದ ಪ್ರಸಿದ್ಧರಾಗಿದ್ದ ಕುಂಬ್ಳೆ ಸುಂದರ್ ರಾವ್ ಪ್ರಾಸಬದ್ಧ ಸಂಭಾಷಣೆಯಿಂದಲೇ ಹೆಸರುವಾಸಿಯಾಗಿದ್ದರು. ರಾವ್ 50ಕ್ಕೂ ಅಧಿಕ ವರ್ಷಗಳ ಕಾಲ ಯಕ್ಷಗಾನದಲ್ಲಿ ಸೇವೆ ಸಲ್ಲಿಸಿದ್ದಾರೆ.

    ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಕುಂಬ್ಳೆ ಸುಂದರ್ ರಾವ್ ಮಂಗಳೂರಿನ ಪಂಪ್‌ವೆಲ್‌ನಲ್ಲಿರುವ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಸುಂದರ್ ರಾವ್ ನಿಧನಕ್ಕೆ ಯಕ್ಷಕಲಾರಂಗ ಸಂತಾಪ ವ್ಯಕ್ತಪಡಿಸಿದೆ. ಇದನ್ನೂ ಓದಿ: ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ಅಗ್ನಿ ಅವಘಡ – 3 ಮಕ್ಕಳು ಸೇರಿ ಕುಟುಂಬದ 6 ಮಂದಿ ಸಾವು

    Live Tv
    [brid partner=56869869 player=32851 video=960834 autoplay=true]

  • ಯಕ್ಷಗಾನ ವೇಷಧಾರಿ ಮೈಮೇಲೆ ದೈವದ ಆವಾಹನೆ

    ಯಕ್ಷಗಾನ ವೇಷಧಾರಿ ಮೈಮೇಲೆ ದೈವದ ಆವಾಹನೆ

    ಉಡುಪಿ: ಯಕ್ಷಗಾನದ ಪ್ರದರ್ಶನ ವೇಳೆ ವೇಷಧಾರಿ, ಮೈ ಮೇಲೆ ದೈವದ ಆವಾಹನೆ ಆಗಿರುವ ಘಟನೆ ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿಯಲ್ಲಿ ನಡೆದಿದೆ.

    ಹೆಬ್ರಿ ಸಮೀಪದ ಬೆಳ್ಪಾದೆ ಎಂಬಲ್ಲಿ ಮಡಮಕ್ಕಿ ಮೇಳದವರಿಂದ ಮಡಮಕ್ಕಿ ಕ್ಷೇತ್ರ ಮಹಾತ್ಮೆ ನಡೆಯುತ್ತಿತ್ತು. ಈ ವೇಳೆ ಮೇಳದ ಕಲಾವಿದ ವೀರಭದ್ರ ಸ್ವಾಮಿ ಎಂಬುವವರು ಕೋಟೆರಾಯನ ವೇಷ ಧರಿಸಿ, ರಂಗಸ್ಥಳ ಪ್ರವೇಶ ಆಗುತ್ತಿದ್ದರು. ಈ ವೇಳೆ ದೈವದ ಆವಾಹನೆಯಾಗಿದೆ. ಹತ್ತು ನಿಮಿಷ ವರೆಗೆ ಪ್ರೇಕ್ಷಕರು ಪಾತ್ರದಾರಿಯನ್ನು ಹಿಡಿದುಕೊಂಡರೂ ಆವೇಶ ನಿಲ್ಲಲಿಲ್ಲ. ಮೇಳದ ಚೌಕಿಯಿಂದ ದೇವರ ತೀರ್ಥ ತಂದು ಪ್ರೋಕ್ಷಣೆ ಮಾಡಿಸಿದಾಗ ಕಲಾವಿದ ಮೊದಲ ಸ್ಥಿತಿಗೆ ಬಂದಿದ್ದಾರೆ. ಇದನ್ನೂ ಓದಿ: ಯಡಿಯೂರಪ್ಪ ಮೊಮ್ಮಗಳು ನೇಣು ಬಿಗಿದು ಆತ್ಮಹತ್ಯೆ 

    ಈ ಘಟನೆಯಿಂದ ಯಕ್ಷಗಾನ ವೀಕ್ಷಿಸಲು ಬಂದಿದ್ದ ಪ್ರೇಕ್ಷಕರು ಕೆಲಕಾಲ ಆತಂಕಪಡುವಂತಾಗಿದೆ. ಸುಮಾರು 15 ನಿಮಿಷಗಳ ಕಾಲ ಪ್ರಸಂಗವನ್ನು ನಿಲ್ಲಿಸಲಾಯ್ತು. ತೀರ್ಥ ಪ್ರೋಕ್ಷಣೆ ಮಾಡಿದ ನಂತರ ಕಲಾವಿದರು ರಂಗಸ್ಥಳ ಹತ್ತಿದ್ದಾರೆ. ನಂತರ ಕಲಾವಿದ ಮೇಳದ ಮುಖ್ಯಸ್ಥರ ಜೊತೆ ಮಾತನಾಡುತ್ತಾ, ನನಗೆ ಕೆಲಕಾಲ ಏನಾಯ್ತು ಎಂಬುದೇ ಗೊತ್ತಾಗಲಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಮಗುವಾದ ಬಳಿಕ ಡಿಪ್ರೆಷನ್‌ಗೆ ಒಳಗಾಗಿದ್ರಾ ಬಿಎಸ್‌ವೈ ಮೊಮ್ಮಗಳು?

  • ರಸ್ತೆ ಅಪಘಾತದಲ್ಲಿ ಯಕ್ಷಗಾನ ಕಲಾವಿದ ದುರ್ಮರಣ

    ರಸ್ತೆ ಅಪಘಾತದಲ್ಲಿ ಯಕ್ಷಗಾನ ಕಲಾವಿದ ದುರ್ಮರಣ

    ಮಂಗಳೂರು: ರಸ್ತೆ ಅಪಘಾತದಲ್ಲಿ ಯಕ್ಷಗಾನ ಕಲಾವಿದರೊಬ್ಬರು ದುರ್ಮರಣಕ್ಕೀಡಾದ ಘಟನೆ ಮೂಡಬಿದಿರೆಯ ಗಂಟಾಲಕಟ್ಟೆಯಲ್ಲಿ ನಡೆದಿದೆ.

    ಮೃತರನ್ನು ವಾಮನ ದೇವಾಡಿಗ(46) ಎಂದು ಗುರುತಿಸಲಾಗಿದ್ದು, ಇವರು ವೇಣೂರು ಮೂಲದವರು. ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಬೈಕ್ ಸವಾರನಾಗಿದ್ದ ವಾಮನ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಜ.31ರ ವರೆಗೆ ಟಫ್ ರೂಲ್ಸ್ ಜಾರಿ

    ಕಳೆದ ರಾತ್ರಿ ಕುಂದಾಪುರದ ಕೊಂಕಿ ಎಂಬಲ್ಲಿ ಯಕ್ಷಗಾನ ನಡೆದಿತ್ತು. ಅದನ್ನು ಮುಗಿಸಿ ಬರುವಾಗ ದುರ್ಘಟನೆ ನಡೆದಿದೆ. ಮೃತ ವಾಮನ ದೇವಾಡಿಗ ಯಕ್ಷಗಾನದ ಸ್ತ್ರೀ ವೇಷ ಹಾಗೂ ಕಥಾ ನಾಯಕನ ಪಾತ್ರ ಮಾಡುತ್ತಿದ್ದು, ಹಿರಿಯಡ್ಕ ಮೇಳದ ಕಲಾವಿದರಾಗಿದ್ದರು. ಪ್ರಕರಣ ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಘಟನೆಯ ಬಗ್ಗೆ ತನಿಖೆ ನಡೆಸಿದ್ದಾರೆ. ಇದನ್ನೂ ಓದಿ: ದ್ಯಾವಮ್ಮನ ಜಾತ್ರೆಗಾಗಿ ಇಡೀ ಗ್ರಾಮಕ್ಕೆ ಮುಳ್ಳಿನ ಬೇಲಿ- ದಾವಣಗೆರೆಯಲ್ಲಿ ಶತಮಾನಗಳ ಸಂಪ್ರದಾಯ ಇನ್ನೂ ಜೀವಂತ

  • ಯಕ್ಷಗಾನ ಕಲಾವಿದನ ಮೇಲೆ ದೈವದ ಆವಾಹನೆ

    ಯಕ್ಷಗಾನ ಕಲಾವಿದನ ಮೇಲೆ ದೈವದ ಆವಾಹನೆ

    – ದೈವ ದೃಷ್ಟಿ ಯಕ್ಷಗಾನದ ವೇಳೆ ಅಚಾತುರ್ಯ

    ಉಡುಪಿ: ಯಕ್ಷಗಾನ ವೇಷಧಾರಿ ಮೇಲೆ ದೈವದ ಆವಾಹನೆಯಾದ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನಲ್ಲಿ ನಡೆದಿದೆ. ಹಟ್ಟಿಯಂಗಡಿ ಯಕ್ಷಗಾನ ಮೇಳದ ಕಲಾವಿದ ಧೂಮಾವತಿ ಅವರು ದೈವದ ವೇಷ ಧರಿಸಿದ್ದ ಸಂದರ್ಭದಲ್ಲಿ ದೈವದ ಆವಾಹನೆಯಾಗಿದೆ.

    ರಂಗಸ್ಥಳ ಪ್ರವೇಶಕ್ಕೂ ಮುನ್ನ ಪ್ರೇಕ್ಷಕರ ನಡುವೆಯಿಂದ ಕೆಲ ಪಾತ್ರಧಾರಿಗಳನ್ನು ಕರೆತರಲಾಗುತ್ತದೆ. ಹಾಗೆಯೇ ಪಾತ್ರಧಾರಿ ರಾಜೇಶ್ ಆಚಾರ್ಯ ದೈವದ ವೇಷ ಧರಿಸಿದ್ದರು. ಈ ಸಂದರ್ಭ ಅವರ ಮೈಮೇಲೆ ಆವೇಶ ಬಂದಿದೆ. ಪಂಜು ಹಿಡಿದು ವಿಚಿತ್ರವಾಗಿ ವರ್ತಿಸಿದ ಕಲಾವಿದ ನೆಲಕ್ಕೆ ಬಿದ್ದಿದ್ದಾರೆ.

    ಬ್ರಹ್ಮಾವರ ಅಯ್ಯಪ್ಪ ಮಂದಿರದಲ್ಲಿ ಶಬರಿಮಲೆ ಯಾತ್ರೆಗೆ ಹೊರಡುವ ಮುನ್ನ ಯಕ್ಷಗಾನ ಪ್ರದರ್ಶನ ಮತ್ತು ಅನ್ನಸಂತರ್ಪಣೆ ಇರುತ್ತದೆ. ಈ ಬಾರಿ ದೈವ ದೃಷ್ಟಿ ಎಂಬ ಯಕ್ಷಗಾನ ಪ್ರಸಂಗವನ್ನು ತಂಡ ಆಡಿಸಿದ ವೇಳೆ ಘಟನೆ ನಡೆದಿದೆ. ಅಯ್ಯಪ್ಪ ಸೇವಾ ಸಮಿತಿಯ ಗುರು ಸ್ವಾಮಿ ಕೂಡಲೇ ಆಗಮಿಸಿ ಪ್ರಸಾದ ಹಾಕಿದ ನಂತರ ಪಾತ್ರಧಾರಿ ಶಾಂತವಾಗಿದ್ದಾರೆ. ಯಕ್ಷಗಾನ ಪ್ರಸಂಗ ಮುಂದುವರಿದಿದೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಕಲಾವಿದ ರಾಜೇಶ್ ಆಚಾರ್ಯ, ಆ ಕ್ಷಣದಲ್ಲಿ ಏನಾಗುತ್ತಿದೆ ಎಂಬುದು ಗೊತ್ತಾಗಿಲ್ಲ. ಕೆಲವು ಕ್ಷಣಗಳ ನಂತರ ಸಹಜ ಸ್ಥಿತಿಗೆ ಬಂದಿದ್ದೇನೆ ಎಂದು ಹೇಳಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  • ರಂಗಸ್ಥಳದಲ್ಲೇ ಕುಸಿದು ಬಿದ್ದು ಯಕ್ಷಗಾನ ಕಲಾವಿದ ಸಾವು

    ರಂಗಸ್ಥಳದಲ್ಲೇ ಕುಸಿದು ಬಿದ್ದು ಯಕ್ಷಗಾನ ಕಲಾವಿದ ಸಾವು

    ಉಡುಪಿ: ರಂಗದಲ್ಲೇ ಕುಸಿದು‌ ಯಕ್ಷಗಾನ ಕಲಾವಿದ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರು‌ ತಾಲೂಕಿನ ಜೋಗಿಬೆಟ್ಟು ಗ್ರಾಮದಲ್ಲಿ ನಡೆದಿದೆ.

    ಬಡಗು ತಿಟ್ಟಿನ ಖ್ಯಾತ ಕಲಾವಿದ ಉತ್ತರ ಕನ್ನಡ ಮೂಲದ ಹುಡುಗೋಡು ಚಂದ್ರಹಾಸ ಮೃತ ಯಕ್ಷಗಾನ ಪಾತ್ರಧಾರಿ. ಭಾನುವಾರ ರಾತ್ರಿ ಜೋಗಿಬೆಟ್ಟು ಗ್ರಾಮದಲ್ಲಿ ಜಳವಳ್ಳಿ ಮೇಳದ ಭೀಷ್ಮವಿಜಯ ಪ್ರಸಂಗ ನಡೆಯುತ್ತಿತ್ತು.

    ಈ ಪ್ರಸಂಗದಲ್ಲಿ ಚಂದ್ರಹಾಸ ಸಾಲ್ವನ ಪಾತ್ರದಲ್ಲಿ ಅಭಿನಯಿಸುತ್ತಿದ್ದರು. ಆದ್ರೆ ರಂಗಸ್ಥಳದಲ್ಲಿ ಅಭಿನಯಿಸುತ್ತಿರುವಾಗಲೇ ಚಂದ್ರಹಾಸ ಅವರಿಗೆ ಹೃದಯಾಘಾತ ಸಂಭವಿಸಿದೆ. ಸಂಭಾಷಣೆ ಮುಗಿಸಿ ಕುಣಿತ ಆರಂಭಿಸುತ್ತಿದ್ದಂತೆ ಹಾರ್ಟ್ ಅಟ್ಯಾಕ್ ಆಗಿದೆ.

    ಎಲ್ಲರೂ ನೋಡನೋಡುತ್ತಿದ್ದಂತೆ ಚಂದ್ರಹಾಸ್ ರಂಗಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಆ ಬಳಿಕ ಅವರನ್ನು ಆಸ್ಪತ್ರೆಗೆ ಸೇರಿಸುವ ಪ್ರಯತ್ನ ನಡೆಯಿತದಾದರೂ ಪ್ರಯೋಜನವಾಗಿಲ್ಲ.

    ಚಂದ್ರಹಾಸ್ ಈ ಹಿಂದೆ ಪೆರ್ಡೂರು, ಸಾಲಿಗ್ರಾಮ ಮೇಳದಲ್ಲಿ ಕಲಾವಿದ ಆಗಿದ್ದರು. ಮೂರು ವರ್ಷದ ಹಿಂದೆ ಮೇಳವನ್ನು ಬಿಟ್ಟಿದ್ದರು. ಸದ್ಯ ಸ್ಥಳೀಯ ಪಂಚಾಯತ್ ಸದಸ್ಯ ಆಗಿದ್ದರು. ಭಾನುವಾರ ಜಳವಳ್ಳಿ ಮೇಳದಲ್ಲಿ ತಮ್ಮ ಪ್ರಸಿದ್ಧ ಸಾಲ್ವನ ಪಾತ್ರಕ್ಕೆ ಅತಿಥಿ‌ ಕಲಾವಿದರಾಗಿ ಬಂದಿದ್ದರು. ಆದ್ರೆ ವಿಧಿಯಾಟಕ್ಕೆ ರಂಗದಲ್ಲೇ ಕೊನೆಯುಸಿರು ಎಳೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv