Tag: yaga

  • ದೇಶದ ಒಳಿತಿಗೆ ಕೃಷ್ಣಮಠದಲ್ಲಿ ಧನ್ವಂತರಿ ಯಾಗ- 8 ಋತ್ವಿಜರು ಮಾತ್ರ ಭಾಗಿ

    ದೇಶದ ಒಳಿತಿಗೆ ಕೃಷ್ಣಮಠದಲ್ಲಿ ಧನ್ವಂತರಿ ಯಾಗ- 8 ಋತ್ವಿಜರು ಮಾತ್ರ ಭಾಗಿ

    ಉಡುಪಿ: ಮಹಾಮಾರಿ ಕೊರೊನಾ ವಿರುದ್ಧ ಉಡುಪಿ ಕೃಷ್ಣಮಠದಲ್ಲಿ ಧನ್ವಂತರಿ ಮಹಾಯಾಗ ನಡೆಯುತ್ತಿದೆ. ಪರ್ಯಾಯ ಅದಮಾರು ಮಠ ನೇತೃತ್ವದಲ್ಲಿ ಯಾಗ ಆರಂಭವಾಗಿದ್ದು, ಕೇವಲ ಏಳು ಮಂದಿ ಋತ್ವಿಜರು ಮಾತ್ರ ಮಹಾ ಯಾಗದಲ್ಲಿ ಪಾಲ್ಗೊಂಡರು.

    ಕರೊನಾದ ಭೀತಿ ಆರಂಭವಾದ ಸಂದರ್ಭದಲ್ಲಿ ಶ್ರೀಕೃಷ್ಣ ಮಠ ಧನ್ವಂತರಿ ಮಹಾಯಾಗ ಕೈಗೊಳ್ಳುವ ಚಿಂತನೆ ನಡೆಸಿತ್ತು. ಐದು ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆ ಮಠಕ್ಕಿತ್ತು. ಆದರೆ ದೇಶ ಲಾಕ್‍ಡೌನ್ ಆಗಿರುವುದರಿಂದ ಭಕ್ತರು ಸೇರಬಾರದು ಎಂದು ಜಿಲ್ಲಾಡಳಿತ ಕೃಷ್ಣ ಮಠಕ್ಕೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಭಕ್ತರು ಮನೆಯಲ್ಲೇ ಇರಬೇಕೆಂದು ಮಠ ಪ್ರಕಟಣೆ ಹೊರಡಿಸಿತು.

    ಶುಕ್ರವಾರ ಪ್ರಾತಃ ಕಾಲದಲ್ಲಿ ಆರಂಭವಾದ ಧನ್ವಂತರಿ ಮಹಾಯಾಗದಲ್ಲಿ ಋತ್ವಿಜರು ಮಾತ್ರ ಪಾಲ್ಗೊಂಡಿದ್ದಾರೆ. ಒಬ್ಬ ಭಕ್ತರೂ ಯಾಗದಲ್ಲಿ ಪಾಲ್ಗೊಂಡಿಲ್ಲ. ಮಠದ ಸಿಬ್ಬಂದಿ ಕೂಡ ಯಾಗದ ಚೌಕಟ್ಟಿನ ಒಳಗೆ ಪ್ರವೇಶ ಮಾಡಿಲ್ಲ.

    ಇಡೀ ವಿಶ್ವಕ್ಕೆ ಮಹಾಮಾರಿ ವೈರಸ್ ಆವರಿಸಿದೆ ಕೃಷ್ಣಮಠ ಮತ್ತು ಆದಮಾರು ಮಠಾಧೀಶರು ಧನ್ವಂತರಿ ಮಹಾಯಾಗ ಮಾಡುವ ಸಂಕಲ್ಪವನ್ನು ಮಾಡಿದ್ದಾರೆ. ಧನ್ವಂತರಿ ಎಂದರೆ ಸಂಸಾರಕ್ಕೆ ಓದಿದಂತಹ ದುಃಖವನ್ನು ಪರಿಹರಿಸುವ ದೇವರು ಎಂಬ ಅರ್ಥ ಇದೆ. ಇದೀಗ ಭಾರತ ಎಂಬ ಕುಟುಂಬಕ್ಕೆ ಮಹಾಮಾರಿ ವೈರಸ್ ಆವರಿಸಿದೆ. ಕರಣದ ವಿರುದ್ಧ ಭಾರತ ಏನು ಮಾಡುತ್ತಿದೆ ಎಂದು ಇಡೀ ವಿಶ್ವ ಕಾತುರದಿಂದ ಕಾಯುತ್ತಿದೆ. ಹಾಗಾಗಿ ಭಾರತದಲ್ಲಿ ಕೈಗೊಂಡ ನಿರ್ಧಾರಗಳಿಂದ ವೈರಸ್‍ನ ಪ್ರಭಾವ ಕಡಿಮೆ ಆಗಲಿ ಎಂದು ಪ್ರಾರ್ಥಿಸಲಾಯಿತು.

    ದೇಶದ ಜನತೆಗೆ ಮತ್ತು ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರಿಗಾಗಿ ಪೂರ್ಣಾಹುತಿ ಸಂದರ್ಭ ಪ್ರಾರ್ಥನೆ ನಡೆದಿದೆ. ಅದಮಾರು ಮಠಾಧೀಶರಾದ ವಿಶ್ವಪ್ರಿಯ ತೀರ್ಥ ಶ್ರೀಪಾದರು ಪರ್ಯಾಯ ಸ್ವಾಮೀಜಿ ಈಶಪ್ರಿಯ ತೀರ್ಥ ಸ್ವಾಮೀಜಿ ಸೋದೆ ಮಠಾಧೀಶರು ಕಾಣಿಯೂರು ಶ್ರೀಗಳು ಧನ್ವಂತರಿ ಮಹಾ ಯಾಗದಲ್ಲಿ ಪಾಲ್ಗೊಂಡರು. ಕೃಷ್ಣಮಠದ ವ್ಯವಸ್ಥಾಪಕ ಗೋವಿಂದರಾಜ್ ಶ್ರೀಕೃಷ್ಣ ಸೇವಾ ಸಮಿತಿಯ ಪ್ರದೀಪ್, ರಾಮಚಂದ್ರ ರಾವ್ ಮತ್ತಿತರರು ಉಪಸ್ಥಿತರಿದ್ದರು.

  • ಕೊಂಚಾಡಿ ಕಾಶೀ ಮಠದಲ್ಲಿ ಮಹಾ ವಿಷ್ಣು ಯಾಗ

    ಕೊಂಚಾಡಿ ಕಾಶೀ ಮಠದಲ್ಲಿ ಮಹಾ ವಿಷ್ಣು ಯಾಗ

    ಮಂಗಳೂರು: ಕೊಂಚಾಡಿ ಶ್ರೀ ಕಾಶಿ ಮಠದಲ್ಲಿ ಸೋಮವಾರ ಶ್ರೀ ಮಹಾವಿಷ್ಣು ಯಾಗ ಪ್ರಾರಂಭಗೊಂಡಿತು. ಲೋಕ ಕಲ್ಯಾಣಾರ್ಥವಾಗಿ ಕೊಂಚಾಡಿ ಶ್ರೀ ಕಾಶೀಮಠದಲ್ಲಿ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಮಹಾವಿಷ್ಣು ಯಾಗ, ಕ್ಷೇತ್ರದ ಯಜ್ಞ ಮಂಟಪದಲ್ಲಿ ದೀಪ ಪ್ರಜ್ವಲನೆಯ ಮೂಲಕ ವಿದ್ಯುಕ್ತವಾಗಿ ನಡೆಯಲಿದೆ.

    ಮಂಗಳೂರಿನ ವನಿತಾ ಅಚ್ಚುತ್ ಪೈ ಸಭಾಂಗಣದಲ್ಲಿ ಮೊಕ್ಕಾಂ ಮಾಡಿರುವ ಕಾಶಿ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರನ್ನು ಸಕಲ ಗೌರವದೊಂದಿಗೆ ಯಜ್ಞ ಮಂಟಪಕ್ಕೆ ಕರೆತರಲಾಯಿತು. ಭವ್ಯವಾಗಿ ನಿರ್ಮಿಸಲಾದ ಯಜ್ಞ ಮಂಟಪದಲ್ಲಿ ಶ್ರೀಗಳವರು ದೀಪ ಪ್ರಜ್ವಲನೆ ನಡೆಸಿದರು ಬಳಿಕ ಶ್ರೀಗಳವರ ಅಗ್ರ ಪೂಜೆ ಸಮಿತಿಯ ಪದಾಧಿಕಾರಿಗಳಿಂದ ನಡೆಯಿತು.

    ವಿವಿಧ ಕ್ಷೇತ್ರಗಳಿಂದ ಆಗಮಿಸಿದ ನಾನಾ ಗೋತ್ರೆಯ ವೈಧಿಕರಿಂದ ಯಜ್ಞ ಮಂಟಪದಲ್ಲಿ ಯಜ್ಞ ಪ್ರಾರಂಭವಾಯಿತು. ಮಧ್ಯಾಹ್ನ ಲಘು ಪೂರ್ಣಆಹುತಿ ಬಳಿಕ ಸಮಾರಾಧನೆ ನಡೆಯಿತು. ಈ ಮಹಾಯಾಗವು ಮೂರುದಿನಗಳ ಪರ್ಯಂತ ನಡೆಯಲಿದ್ದು, ಮೂರನೇ ದಿನದಂದು ಶ್ರೀಗಳವರ ದಿವ್ಯ ಉಪಸ್ಥಿತಿಯಲ್ಲಿ ಮಹಾ ಪೂರ್ಣಆಹುತಿ ನಡೆಯಲಿದೆ.

  • ಯಶ್ ದಂಪತಿಯಿಂದ ಶತ್ರು ಸಂಹಾರ ಯಾಗ

    ಯಶ್ ದಂಪತಿಯಿಂದ ಶತ್ರು ಸಂಹಾರ ಯಾಗ

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ‘ಕೆಜಿಎಫ್ 2’ ಅಡ್ಡಾ ಬಿಟ್ಟು ದೇವರ ಮೊರೆ ಹೋಗಿದ್ದು, ಪತ್ನಿ ರಾಧಿಕಾ ಮತ್ತು ಕುಟುಂಬದವರ ಜೊತೆ ಸೇರಿ ಶತ್ರು ಸಂಹಾರ ಯಾಗವನ್ನು ಮಾಡಿಸುತ್ತಿದ್ದಾರೆ.

    ಯಶ್ ಕುಟುಂಬ ಮಲ್ಲೇಶ್ವರಂನಲ್ಲಿರುವ ದುರ್ಗಾ ರಾಧಾ-ಕೃಷ್ಣ ದೇವಸ್ಥಾನದಲ್ಲಿ ಪೂಜೆ ಮಾಡಿಸುತ್ತಿದ್ದಾರೆ. ಇಂದು ಬೆಳಗ್ಗೆ ಸುಮಾರು 10.30ರಿಂದ ಪೂಜೆ ಮಾಡಿಸುತ್ತಿದ್ದಾರೆ. ಸದ್ಯಕ್ಕೆ ಯಶ್ ದಂಪತಿ ಮಾರ್ಕಂಡೇಯ ಹೋಮ ಮಾಡಿಸುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಅಪಕಂಟಕ ಮತ್ತು ಶತ್ರು ನಾಶಕ್ಕೆ ಮಾರ್ಕಂಡೇಯ ಹೋಮ ಮಾಡಿಸಲಾಗುತ್ತದೆ. ಹೋಮದಲ್ಲಿ ಯಶ್, ರಾಧಿಕಾ, ಯಶ್ ತಂದೆ ಮತ್ತು ತಾಯಿ ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಇಂದು ದೇವಸ್ಥಾನಕ್ಕೆ ಬರುವ ಭಕ್ತರಿಗೆ ದೇವಸ್ಥಾನದ ಸಿಬ್ಬಂದಿ ಪ್ರವೇಶ ತಡೆಹಿಡಿದಿದ್ದಾರೆ.

    ಮತ್ತೊಂದೆಡೆ ಯಶ್ ಮತ್ತು ರಾಧಿಕಾ ತಮ್ಮ ಪುತ್ರನಿಗೆ ಸರಳವಾಗಿ ನಾಮಕರಣ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಯಶ್ ಇದ್ದಕ್ಕಿದ್ದಂತೆ ಕೆಜಿಎಫ್ ಸಿನಿಮಾ ಶೂಟಿಂಗ್‍ನಿಂದ ಬಂದು ಮಾರ್ಕಂಡೇಯ ಹೋಮ ಮಾಡಿಸುತ್ತಿರುವುದು ಯಾಕೆ ಎಂಬ ಗೊಂದಲ ಅಭಿಮಾನಿಗಳಲ್ಲಿ ಮೂಡಿದೆ.

    ಸದ್ಯಕ್ಕೆ ಯಶ್ ಬಹುನಿರೀಕ್ಷಿತ ‘ಕೆಜಿಎಫ್ ಚಾಪ್ಟರ್-2’ ಸಿನಿಮಾದ ಶೂಟಿಂಗ್‍ನಲ್ಲಿ ಬ್ಯುಸಿಯಿದ್ದಾರೆ. ಮೈಸೂರಿನಲ್ಲಿ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಅಲ್ಲಿಂದ ಬೆಂಗಳೂರಿಗೆ ಬಂದು ಇಂದು ಶತ್ರು ಸಂಹಾರ ಯಾಗದ ಪೂಜೆಯಲ್ಲಿ ಭಾಗಿಯಾಗಿದ್ದಾರೆ.

  • 1008 ಕೆಜಿಯ ಮೆಣಸಿನಕಾಯಿ ಯಾಗ

    1008 ಕೆಜಿಯ ಮೆಣಸಿನಕಾಯಿ ಯಾಗ

    ದಾವಣಗೆರೆ: ಅಮಾವಾಸ್ಯೆಯ ಪ್ರಯುಕ್ತ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿಯಲ್ಲಿ 1008 ಕೆಜಿ ಮೆಣಸಿನಕಾಯಿಯ ಯಾಗ ಮಾಡಲಾಗಿದೆ.

    ಶನಿವಾರ ಸುಭಂಜಪ್ಪ ಎಂಬವರ ಹೊಲದಲ್ಲಿ ಖಾಸಗಿ ಕಂಪನಿಯೊಂದರ ಸಹಯೋಗದೊಂದಿಗೆ ತೀಕ್ಷ್ಣ ಪ್ರತ್ಯಂಗಿರ ದೇವಿಗಾಗಿ 1008 ಕೆಜಿ ಒಣ ಮೆಣಸಿನಕಾಯಿ ಬಳಸಿ ಯಾಗ ನಡೆಸಲಾಯಿತು. ಗುರೂಜಿ ಅಘೋರ ಟೀನ್ ಗಣಪತಿ ರ್ಯಾಟ್ ಅವರಿಂದ ಹೋಮಕ್ಕೆ ಚಾಲನೆ ನೀಡಲಾಗಿತ್ತು.

    ಅಂದುಕೊಂಡ ಬೇಡಿಕೆಗಳ ಈಡೇರಿಕೆಗಾಗಿ ಈ ಯಾಗವನ್ನು ಮಾಡುಲಾಗುತ್ತಿದು, ಅಮಾವಾಸ್ಯೆಯ ದಿನ ಯಾಗ ಮಾಡಿ ಮೆಣಸಿನಕಾಯಿಯನ್ನು ಹೋಮ ಕುಂಡದಲ್ಲಿ ಹಾಕಬೇಕು ಆಗ ಇಷ್ಟಾರ್ಥ ಸಿದ್ದಿಯಾಗುತ್ತದೆ ಎಂಬ ನಂಬಿಕೆಯನ್ನು ಜನರು ಹೊಂದಿದ್ದಾರೆ. ಲೋಕ ಕಲ್ಯಾಣಕ್ಕಾಗಿ ಪುರಾತನ ಕಾಲದಲ್ಲಿಯೂ ಈ ಹೋಮ ನಡೆಸಲಾಗುತ್ತಿತ್ತು. ಭಕ್ತರು ಭಕ್ತಿಯಿಂದ ಹೋಮಕ್ಕೆ ಪೂಜೆ ಸಲ್ಲಿಸಿ ಬುಟ್ಟಿಗಳಲ್ಲಿ ತಂದ ಮೆಣಸಿನಕಾಯಿಯನ್ನು ಅಗ್ನಿ ಕುಂಡಕ್ಕೆ ಹಾಕಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಿಂದೂ ಯಜ್ಞ-ಯಾಗಾದಿಗಳ ಬಗ್ಗೆ ಕೆ.ಎಸ್ ಭಗವಾನ್ ವ್ಯಂಗ್ಯ

    ಹಿಂದೂ ಯಜ್ಞ-ಯಾಗಾದಿಗಳ ಬಗ್ಗೆ ಕೆ.ಎಸ್ ಭಗವಾನ್ ವ್ಯಂಗ್ಯ

    ಮೈಸೂರು: ವಿಚಾರವಾದಿ ಕೆ.ಎಸ್. ಭಗವಾನ್ ಮತ್ತೆ ಹಿಂದೂ ಆಚಾರ ಪದ್ಧತಿಗಳ ವಿರುದ್ಧ ಕಿಡಿಕಾರಿದ್ದಾರೆ.

    ಇಂದು ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಗವಾನ್, ಹಿಂದೂ ಯಜ್ಞ ಯಾಗದಿಗಳ ಬಗ್ಗೆ ವ್ಯಂಗ್ಯ ವಾಡಿದರು. ಜನರೂ ಅದರಲ್ಲೂ ರಾಜಕಾರಣಿಗಳು ಕೈಗೆ ದಾರ ಕಟ್ಟಿಕೊಳ್ಳುತ್ತಾರೆ. ನಿಜವಾಗಿಯೂ ಆ ದಾರಕ್ಕೆ ಶಕ್ತಿ ಇದೆಯಾ ಎಂದು ಪ್ರಶ್ನಿಸಿದ್ರು.

    ದಾರಕ್ಕೆ ಶಕ್ತಿ ಇದೆ ಅಂತಾದ್ರೆ ಪಾಕಿಸ್ತಾನ ಹಾಗೂ ಚೈನಾದ ಬಾರ್ಡರ್‍ಗೆ ಹೋಗಿ. ಅಲ್ಲಿ ನಿಮ್ಮ ದಾರ ಪ್ರದರ್ಶನ ಮಾಡಿ. ಶತ್ರುಗಳು ಓಡಿ ಹೋಗ್ತಾರಾ? ಓಡಿ ಹೋಗುವುದಾದರೆ ಬಾರ್ಡರ್‍ನಲ್ಲೇ ಹೋಮ ಮಾಡಿ. ಅಲ್ಲಿಯೇ ಕುಳಿತು ಯಜ್ಞ ಯಾಗಾದಿಗಳನ್ನು ಮಾಡಿ ಎಂದು ವ್ಯಂಗ್ಯವಾಡಿದರು.

    ಇದೆಲ್ಲವೂ ಕೂಡ ಕೇವಲ ಮೂಢನಂಬಿಕೆ. ನಮ್ಮ ದೇಶವನ್ನು ಇಂದು ಪಂಚಾಂಗ ಆಳುತ್ತಿದೆ. ಮೊದಲು ಇದನ್ನ ತಡೆಯಯವ ಕೆಲಸ ಆಗಬೇಕಿದೆ. ದಾರ, ಹೋಮದಿಂದ ಎಲ್ಲವೂ ಸಾಧ್ಯವಾದರೆ ನಾನೇ ಮೊದಲು ಯಾಗ ಆರಂಭಿಸುತ್ತೇನೆ. ಹೋಮ ಹವನದಿಂದ ಶತ್ರುಗಳು ಓಡಿ ಹೋದರೆ ನಾನೇ ಯಾಗ ಮಾಡುತ್ತೇನೆ. ಮಿಲಿಟರಿಗೆ ಕೊಡುವ ಹಣವೆಲ್ಲ ಯಾಗಕ್ಕೆ ಖರ್ಚು ಮಾಡಲಿ. ಯೋಧರೆಲ್ಲ ವಾಪಾಸ್ ಬರಲಿ. ಯಜ್ಞದ ಮೂಲಕವೇ ಶತ್ರುಗಳನ್ನ ಸದೆ ಬಡೆಯೋಣ ಎಂದು ಹಿಂದೂ ಸಂಪ್ರದಾಯದ ಬಗ್ಗೆ ಭಗವಾನ್ ಕುಟುಕಿದರು.

  • ಮಳೆ ನಿಲ್ಲಲಿ ಎಂದು ಬೆಂಗ್ಳೂರಲ್ಲಿ ಶರಭ ಯಾಗ

    ಮಳೆ ನಿಲ್ಲಲಿ ಎಂದು ಬೆಂಗ್ಳೂರಲ್ಲಿ ಶರಭ ಯಾಗ

    ಬೆಂಗಳೂರು: ಮಳೆ ಬಂದಿಲ್ಲ ಅಂದರೆ ಜಪ ತಪ, ಯಾಗ, ಹೋಮ, ಹಾವನ, ಕತ್ತೆ-ಕಪ್ಪೆಗಳ ಮದುವೆ ಮಾಡುತ್ತಿದ್ದ ಜನರು ಈಗ ಸಾಕು ಈ ಮಳೆಯ ಅವಾಂತರ ಅಂತಾ ವರುಣನ ಆರ್ಭಟವನ್ನು ನಿಲ್ಲಿಸಲು ಶರಭ ಯಾಗವನ್ನು ಮಾಡುತ್ತಿದ್ದಾರೆ.

    ಕಳೆದ ಎರಡೂವರೆ ತಿಂಗಳಲ್ಲಿ ನಿರಂತರವಾಗಿ ಸುರಿದ ಮಳೆಗೆ ಜನರು ಅಬ್ಬಾ! ಸಾಕು ಈ ಮಳೆ ಅಂತಾ ಭಯದಿಂದ ನಿಟ್ಟುಸಿರು ಬಿಡುತ್ತಿದ್ದಾರೆ. ಆದ್ದರಿಂದ ಮಳೆಯಿಂದ ಜನರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಲಕ್ಷ್ಮೀ ಶ್ರೀನಿವಾಸ್ ಗುರೂಜಿ ಅವರು ಕಳೆದ ಮೂರು ದಿನಗಳಿಂದ ಒಂದು ಗುಹೆಯಲ್ಲಿ ಕುಳಿತು ಪ್ರಾರ್ಥನೆ ಮಾಡುತ್ತಾ ಶರಭ ಯಾಗವನ್ನು ಮಾಡುತ್ತಿದ್ದಾರೆ.

    ಶರಭ ಯಾಗವನ್ನು ಶರಭದೇವರ ಹೆಸರಿನಲ್ಲಿ ಮಾಡುತ್ತಾರೆ. ಪಂಚಭೂತಗಳ ನಿಯಂತ್ರಣವನ್ನು ಈ ಶರಭ ಯಾಗದಿಂದ ಮಾಡಬಹುದು. ಮಳೆ ಬರಿಸಲು ಪ್ರಜ್ಜನ್ನ ಯಾಗ ಮಾಡುತ್ತಾರೆ. ಈ ಶರಭ ಯಾಗದಿಂದ ಮಳೆಯನ್ನು ನಿಲ್ಲಿಸಬಹುದು ಹಾಗೂ ಮಳೆಯನ್ನು ತಡೆಯಲುಬಹುದು. ಈ ಹಿಂದೆ ರಾಜರೂ ಈ ಯಾಗವನ್ನು ಮಾಡುಸುತ್ತಿದ್ದರು. ನಾವು ಈ ಯಾಗ ಮಾಡಿ ಮಳೆ ನಿಲ್ಲಿಸಿದ ಉದಾಹರಣೆಗಳು ಇದೆ ಅಂತಾ ಲಕ್ಷ್ಮೀ ಶ್ರೀನಿವಾಸ್ ಗುರೂಜಿ ಹೇಳಿದ್ದಾರೆ.

    ಈ ವರ್ಷದ ದಾಖಲೆಯ ಮಳೆ ಅನೇಕ ತೊಂದರೆಗಳನ್ನು ಮಾಡಿದೆ. ಅತಿವೃಷ್ಠಿಯಿಂದ ಜನರ ಜೀವನ ಅಸ್ತವ್ಯಸ್ತವಾಗಿದ್ದು, ಇನ್ನೂ ಸುಧಾರಿಸಿಕೊಳ್ಳುತ್ತಿದ್ದಾರೆ. ಅಕ್ಟೋಬರ್ 18ರ ನಂತರ ಮಳೆ ಕಡಿಮೆಯಾಗುತ್ತೆ ಅಂತಾ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

  • ರಾಜ್ಯದಲ್ಲಿ ಬರ: ಶತಚಂಡಿಕಾಯಾಗದ ಮೂಲಕ ದೇವಿಯ ಮೊರೆ ಹೋದ ಉಡುಪಿ ಜನ

    ರಾಜ್ಯದಲ್ಲಿ ಬರ: ಶತಚಂಡಿಕಾಯಾಗದ ಮೂಲಕ ದೇವಿಯ ಮೊರೆ ಹೋದ ಉಡುಪಿ ಜನ

    ಉಡುಪಿ: ರಾಜ್ಯಾದ್ಯಂತ ಭೀಕರ ಬರದ ಪರಿಸ್ಥಿತಿಯಿದೆ. ಜನ-ಜಾನುವಾರುಗಳಿಗೆ ನೀರಿಲ್ಲದೆ ಪರದಾಡುತ್ತಿದ್ದಾರೆ. ಸರ್ಕಾರ ಕೊಟ್ಟ ಕಾಸು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ. ಈ ನಡುವೆ ತುಳುನಾಡಿನ ಜನ ಬರ ನೀಗಿಸಮ್ಮ ತಾಯೇ ಅಂತಾ ಶತಚಂಡಿಕಾಯಾಗದ ಮೊರೆ ಹೋಗಿದ್ದಾರೆ.

    ರಾಜ್ಯ ಹಿಂದೆಂದೂ ಕಾಣದ ಭೀಕರ ಬರಕ್ಕೆ ತುತ್ತಾಗಿದೆ. ಜನ ಹನಿ ನೀರಿಗಾಗಿ ಹತ್ತಾರು ಕಿ.ಮೀ ಅಲೆದಾಡ್ತಿದ್ದಾರೆ. ಜಾನುವಾರುಗಳು ಮೇವು, ನೀರಿಲ್ಲದೇ ಸಂಕಷ್ಟಕ್ಕೀಡಾಗಿವೆ. ಹೀಗಾಗಿ ಉಡುಪಿಯ ಮಟಪಾಡಿಯ ಉಂಗ್ರಪಳ್ಳಿಯಲ್ಲಿ ಚಂಡಿಕಾ ದುರ್ಗಾಪರಮೇಶ್ವರಿ ದೇವಿಯ ಮೊರೆ ಹೋದ ಜನ ಬರದಿಂದ ನಾಡನ್ನು ರಕ್ಷಿಸು ತಾಯಿ ಅಂತ ಯಾಗ ಮಾಡಿದ್ರು.

    ಶತ ಚಂಡಿಕಾಯಾಗದ ಮೂಲಕ ಪ್ರಾರ್ಥನೆ ಮಾಡಿದರೆ ಲೋಕಕಲ್ಯಾಣವಾಗುತ್ತಂತೆ. ಬೇಡಿಕೆ ಈಡೇರುತ್ತಂತೆ. ಅಂದು ಆಂಧ್ರಪ್ರದೇಶದಲ್ಲಿ ಚಂಡಿಕಾಯಾಗ ಮಾಡಿದಾಗ ಹಿಂದೆಂದೂ ಕಂಡರಿಯದ ಮಳೆ ಬಿದ್ದಿತ್ತಂತೆ. ಹೀಗಾಗಿ ಉಡುಪಿಯಲ್ಲಿಯೂ ನಡೆದ ಯಾಗದಲ್ಲಿ ಶಾಸ್ತ್ರೋಕ್ತವಾಗಿ ನೂರಾರು ಬ್ರಾಹ್ಮಣರು ಪಾಲ್ಗೊಂಡಿದ್ರು.

    ಲೋಕಕಲ್ಯಾಣಾರ್ಥವಾಗಿ ನಾವಿಂದು ಇಲ್ಲಿ ಬರ ನಿವಾರಣೆಗಾಗಿ ಶತಚಂಡಿಕಾ ಯಾಗವನ್ನು ಕೈಗೊಂಡಿದ್ದೇವೆ. ರಾಜ್ಯದಲ್ಲಿ ಮಳೆ-ಬೆಳೆ ಕಡಿಮೆ ಇದೆ. ಹೀಗಾಗಿ ಈ ವಿಶೇಷ ಯಾಗವನ್ನು ಇಟ್ಟುಕೊಂಡಿದ್ದೇವೆ ಅಂತಾ ದೇವಸ್ಥಾನದ ಅನುಮಂಶಿಕ ಮೊಕ್ತೇಸರ ಸುಬ್ರಹ್ಮಣ್ಯ ಉಂಗ್ರಪಳ್ಳಿ ಹೇಳಿದ್ರು.

    ಮಂತ್ರದಿಂದ ಮಾವಿನಕಾಯಿ ಉದುರುತ್ತಾ ಅಂತಾ ಪ್ರಶ್ನೆ ಮಾಡುವವರು ಇದ್ದಾರೆ. ಆದ್ರೆ ಪರಿಸ್ಥಿತಿ ವಿಕೋಪಕ್ಕೆ ತೆರಳಿದಾಗ ನಾವು ಕೆಲವೊಂದು ಕ್ರಮಗಳನ್ನು ಕೈಗೊಳ್ಳಲೇ ಬೇಕು.