Tag: Yaduvir Krishnadatta Chamaraja Wodeyar

  • ಪಾರದರ್ಶಕ ತನಿಖೆಗೆ ಸಿಎಂ ರಾಜೀನಾಮೆ ನೀಡಲಿ: ಯದುವೀರ್ ಒಡೆಯರ್

    ಪಾರದರ್ಶಕ ತನಿಖೆಗೆ ಸಿಎಂ ರಾಜೀನಾಮೆ ನೀಡಲಿ: ಯದುವೀರ್ ಒಡೆಯರ್

    ಶಿವಮೊಗ್ಗ: ಮುಡಾ ಹಗರಣದಲ್ಲಿ (MUDA Scam) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ವಿರುದ್ಧ ಮೈಸೂರು ಲೋಕಾಯುಕ್ತದಲ್ಲಿ ಎಫ್ಐಆರ್ (FIR) ದಾಖಲಾಗಿದೆ. ಹಗರಣದ ಬಗ್ಗೆ ಪಾರದರ್ಶಕ ತನಿಖೆಯಾಗಬೇಕು ಹಾಗಾಗಿ ಸಿಎಂ ರಾಜೀನಾಮೆ ನೀಡಿ, ತನಿಖೆ ಎದುರಿಸಲಿ ಎಂದು ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್ (Yaduvir Krishnadatta Wodeyar) ಆಗ್ರಹಿಸಿದರು.

    ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ದೇಶದಲ್ಲಿ ಕಾನೊನು ಎಲ್ಲರಿಗೂ ಒಂದೇ. ಈಗಾಗಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಲಿ ಎಂದರು.ಇದನ್ನೂ ಓದಿ:

    ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆ ಅಭಿವೃದ್ಧಿ ಬಗ್ಗೆ ಮಾತನಾಡಿದ ಸಂಸದರು, ಕಾರ್ಖಾನೆಗೆ ಕೇಂದ್ರ ಸಚಿವ ಕುಮಾರ ಸ್ವಾಮಿ ಭೇಟಿ ನೀಡಿದ್ದಾರೆ. ಇದನ್ನ ನಮ್ಮ ಕುಟುಂಬ ಆರಂಭಿಸಿತ್ತು. ಅದನ್ನ ಉಳಿಸುವ ಕೆಲಸ ಆಗಲಿದೆ. ವಿಐಎಸ್ಎಲ್ (VISL) ಹೆಮ್ಮೆಯ ಸಂಸ್ಥೆಯಾಗಿದೆ. ಅದಕ್ಕೆ ನಮ್ಮ ಪ್ರೋತ್ಸಾಹವಿದೆ ಎಂದರು.

    ದೇವಸ್ಥಾನದ ವಿಷಯದಲ್ಲಿ ಸರ್ಕಾರ ಹಸ್ತಕ್ಷೇಪ ಇರಬಾರದು. ಚಾಮುಂಡೇಶ್ವರಿ ಪ್ರಾಧಿಕಾರ ರಚನೆ ಬೇಡ ಎಂದು ತಿಳಿಸಿದ್ದೇವು. ಈ ವಿಷಯ ನ್ಯಾಯಾಲಯದಲ್ಲಿದೆ ಮುಂದೇನಾಗಲಿದೆ ಕಾದು ನೋಡೋಣ ಎಂದರು.ಇದನ್ನೂ ಓದಿ:

  • ಆರು ದಶಕಗಳ ಬಳಿಕ ಬೆಳೆಯುತ್ತಿದೆ ಯದುವಂಶದ ಕುಡಿ: ಅರಮನೆಯಲ್ಲಿ ನಡೆಯಿತು ಸೀಮಂತ ಸಂಭ್ರಮ!

    ಆರು ದಶಕಗಳ ಬಳಿಕ ಬೆಳೆಯುತ್ತಿದೆ ಯದುವಂಶದ ಕುಡಿ: ಅರಮನೆಯಲ್ಲಿ ನಡೆಯಿತು ಸೀಮಂತ ಸಂಭ್ರಮ!

    ಮೈಸೂರು: ಮೈಸೂರು ರಾಜವಂಶದಲ್ಲಿ ಸುಮಾರು ಆರು ದಶಕಗಳ ಬಳಿಕ ಯದುವಂಶದ ಕುಡಿಯೊಂದು ಮಹಾರಾಣಿ ತ್ರಿಷಿಕಾ ಕುಮಾರಿ ಅವರ ಹೊಟ್ಟೆಯಲ್ಲಿ ಬೆಳೆಯುತ್ತಿದ್ದು, ಮಹಾರಾಣಿಯ ಸೀಮಂತ ಕಾರ್ಯಕ್ರಮ ಭಾನುವಾರ ನಡೆಯಿತು.

    ತ್ರಿಷಿಕಾ ಕುಮಾರಿ ಸಿಂಗ್ ಅವರ ಸೀಮಂತ ಕಾರ್ಯಕ್ರಮವು ಬೆಳಗ್ಗೆ 11.45ರ ಶುಭಲಗ್ನದಲ್ಲಿ ಜರುಗಿತು. ಈ ಕಾರ್ಯಕ್ರಮದಲ್ಲಿ ರಾಜಮಾತೆ ಪ್ರಮೋದಾ ದೇವಿ ಒಡೆಯರ್, ಯದುವೀರ್ ತಂದೆ ತಾಯಿ, ತ್ರಿಷಿಕಾ ಕುಮಾರಿ ಅವರ ತಂದೆ ತಾಯಿ ಹಾಗೂ ಎರಡು ಕುಟುಂಬಗಳ ಸಂಬಂಧಿಕರು ಭಾಗವಹಿಸಿದ್ದರು.

    ಪರಕಾಲ ಮಠದ ಶ್ರೀಗಳ ಹಾಗೂ 10 ಮಂದಿ ರಾಜ ಪುರೋಹಿತರ ಸಮ್ಮುಖದಲ್ಲಿ ನಡೆದ ಸೀಮಂತ ಕಾರ್ಯಕ್ರಮದಲ್ಲಿ ಮೊದಲಿಗೆ ವೇದ ಉನಿಷತ್ತುಗಳನ್ನು ಪಟನೆ ಮಾಡಲಾಯಿತು. ನಂತರ 9 ಮಂದಿ ಮುತೈದೆಯರು ತ್ರಿಷಿಕಾ ಕುಮಾರಿ ಅವರಿಗೆ ಮಡಿಲಕ್ಕಿ ಹಾಕಿ ಆಶೀರ್ವಾದ ಮಾಡಿದರು.

    ಸೀಮಂತ ಕಾರ್ಯಕ್ರಮ ನಡೆದ ಸ್ಥಳವೂ ಸಂಪೂರ್ಣವಾಗಿ ಹೂವಿನಿಂದ ಅಲಂಕಾರ ಮಾಡಿ 9 ಬಗೆಯ ಹಣ್ಣುಗಳು, ತಿಂಡಿ ತಿನಿಸುಗಳು, ಬಳೆ, ಹೂ, ಎಲೆ ಅಡಿಕೆ ಎಲ್ಲವನ್ನೂ ಇಡಲಾಗಿತ್ತು. ಸುಮಾರು 45 ನಿಮಿಷಕ್ಕೂ ಹೆಚ್ಚು ಕಾಲ ಈ ಸೀಮಂತ ಕಾರ್ಯ ನಡೆದ ಬಳಿಕ 15 ಬಗೆಯ ತಿನಿಸುಗಳ ಭೋಜನವನ್ನು ಸವಿದರು.

    ಕಳೆದ ವರ್ಷ ಇದೇ ವೇಳೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಸಮ್ಮುಖದಲ್ಲಿ ದತ್ತು ಪುತ್ರ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ರಾಜಸ್ಥಾನದ ರಾಜಮನೆತನದ ತ್ರಿಷಿಕಾಕುಮಾರಿ ಅವರ ವಿವಾಹ ಅರಮನೆಯಲ್ಲಿ ಅದ್ಧೂರಿಯಾಗಿ ನಡೆದಿತ್ತು.