Tag: Yadgiri

  • ಕುಮಾರಸ್ವಾಮಿಗೆ ಗೊಂಬೆ ಆಡಿಸೋದು ಚನ್ನಾಗಿ ಗೊತ್ತು: ಶ್ರೀರಾಮುಲು

    ಕುಮಾರಸ್ವಾಮಿಗೆ ಗೊಂಬೆ ಆಡಿಸೋದು ಚನ್ನಾಗಿ ಗೊತ್ತು: ಶ್ರೀರಾಮುಲು

    ಯಾದಗಿರಿ: ದೇವಗೌಡರು ದೇಶದ ರಕ್ಷಣೆಗಾಗಿ ಆರ್‍ಎಸ್‍ಎಸ್ ಬೇಕು ಅಂತಾರೆ. ಆದರೆ ಅವರ ಮಗ ಕುಮಾರಸ್ವಾಮೀ ಅವರು, ಐಎಎಸ್ ಅಧಿಕಾರಿಗಳು ಗೊಂಬೆಗಳ ತರಹ ಆಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಗೊಂಬೆ ಆಡಿಸುವ ಕೆಲಸ ಕುಮಾರಸ್ವಾಮಿ ಅವರಿಗೆ ಚನ್ನಾಗಿ ಗೊತ್ತಿದೆ  ಅನ್ಸುತ್ತೆ ಎಂದು ಸಚಿವ ಶ್ರೀರಾಮುಲು ಹೇಳಿಕೆ ನೀಡಿದ್ದಾರೆ.

    RSS ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಯಾದಗಿರಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರಿಗೆ ಗೊಂಬೆ ಆಟದ ಬಗ್ಗೆ ಸಾಕಷ್ಟು ಮಾಹಿತಿಯಿದೆ. ಅದಕ್ಕೆ ಅವರು ಆ ರೀತಿಯ ಹೇಳಿಕೆಗಳನ್ನ ಕೊಡುತ್ತಿದ್ದಾರೆ ಎಂದು ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ:  ಸಿದ್ದರಾಮಯ್ಯ, ಕುಮಾರಸ್ವಾಮಿ ವೋಟಿಗಾಗಿ ಜೊಲ್ಲು ಸುರಿಸ್ತಿದ್ದಾರೆ: ಆರಗ ಜ್ಞಾನೇಂದ್ರ

    ಸಿಂದಗಿ ಮತ್ತು ಹಾನಗಲ್ ಬೈ ಎಲೆಕ್ಷನ್ ವಿಚಾರವಾಗಿ ಮಾತನಾಡಿ, ಇಂದಿನಿಂದ ನಮ್ಮ ಪಕ್ಷದಿಂದ ಪ್ರಚಾರ ಆರಂಭವಾಗಿದೆ. ಎರಡೂ ಕ್ಷೇತ್ರದಲ್ಲಿ ಗೆಲುವು ನಮ್ಮದೇ. ನಮ್ಗೆ ಪೂರ್ಣ ವಿಶ್ವಾಸವಿದೆ ಎರಡು ಕ್ಷೇತ್ರದಲ್ಲಿ ನಾವು ಗೆಲವು ಸಾಧಿಸುತ್ತೆವೆ ಎಂದಿದ್ದಾರೆ.

    ಮೊನ್ನೆ ನಡೆದ ಮಹಾ ನಗರ ಪಾಲಿಕೆ ಚುನಾವಣೆ ಫಲಿತಾಂಶದಂತೆ ಇಲ್ಲೂ ಕೂಡ ಗೆಲ್ಲುತ್ತೆವೆ. ಮುಂದಿನ ಸಾರ್ವತ್ರಿಕ ಚುನಾವಣೆಗೆ ಈ ಚುನಾವಣೆ ದಿಕ್ಸೂಚಿ ಆಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.

  • 20 ವರ್ಷ ಸೇನೆಯಲ್ಲಿ ಸೇವೆ- ನಿವೃತ್ತಿಯಾಗಿ ಹುಟ್ಟೂರಿಗೆ ಆಗಮಿಸಿದ ಸೈನಿಕ

    20 ವರ್ಷ ಸೇನೆಯಲ್ಲಿ ಸೇವೆ- ನಿವೃತ್ತಿಯಾಗಿ ಹುಟ್ಟೂರಿಗೆ ಆಗಮಿಸಿದ ಸೈನಿಕ

    -ಗ್ರಾಮಸ್ಥರಿಂದ ಅದ್ದೂರಿ ಸ್ವಾಗತ

    ಯಾದಗಿರಿ: 20 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ಸೈನಿಕನಿಗೆ ಹುಟ್ಟೂರಾದ ಯಾದಗಿರಿಯಲ್ಲಿ ಅದ್ದೂರಿಯಾಗಿ ಮೆರವಣಿಗೆ ಮಾಡಿ ಸನ್ಮಾನಿಸಿ ಗೌರವಿಸಲಾಯಿತು.

    ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ರಾಜನಕೊಳ್ಳುರು ಗ್ರಾಮದ ನಿವಾಸಿಯಾದ ವಿರೇಶ್ ಗುಳಬಾಳ ಅವರು 20 ವರ್ಷಗಳ ಕಾಲ ಜಮ್ಮುಕಾಶ್ಮೀರ,ರಾಜಸ್ತಾನ ಹಾಗೂ ವಿವಿಧೆಡೆ ಗಡಿಭಾಗದಲ್ಲಿ ಜೀವದ ಹಂಗು ತೊರೆದು ಶತ್ರುಗಳ ವಿರುದ್ಧ ಹೋರಾಟ ನಡೆಸಿ ದೇಶ ಸೇವೆ ಮಾಡಿದ್ದಾರೆ. ಇದನ್ನೂ ಓದಿ:  ಹೈದರಾಬಾದ್ ವಿರುದ್ಧ ಕೋಲ್ಕತ್ತಾಗೆ 6 ವಿಕೆಟ್ ಜಯ – ಪ್ಲೇ ಆಫ್ ಕನಸು ಜೀವಂತ

    ಸದ್ಯ ಅವರು ಸೇನೆಯಿಂದ ನಿವೃತ್ತಿಹೊಂದಿದ್ದು, ಈ ಹಿನ್ನೆಲೆ ರಾಜನಕೊಳ್ಳುರು ಗ್ರಾಮಸ್ಥರು ಮತ್ತು ಗೆಳೆಯರ ಬಳಗದಿಂದ ಹುಣಸಗಿ ಪಟ್ಟಣದಿಂದ ರಾಜನಕೊಳ್ಳುರು ಗ್ರಾಮದವರಗೆ ಸುಮಾರು 7 ಕಿಮೀ ಭವ್ಯ ಮೆರವಣಿಗೆ ಮಾಡಲಾಯಿತು. ನಂತರ ರಾಜನಕೊಳ್ಳುರು ಗ್ರಾಮದಲ್ಲಿ ವಿರೇಶ್ ಅವರಿಗೆ ಹಾಗೂ ಅವರ ಪೋಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

  • ಕಂದಾಯ ಅಧಿಕಾರಿಗಳ ನಿರ್ಲಕ್ಷ್ಯ  – 16 ದಿನಗಳಿಂದ ಗುರುಮಠಕಲ್ ಬಸ್ ನಿಲ್ದಾಣದಲ್ಲೇ ಕುಟುಂಬ ವಾಸ

    ಕಂದಾಯ ಅಧಿಕಾರಿಗಳ ನಿರ್ಲಕ್ಷ್ಯ – 16 ದಿನಗಳಿಂದ ಗುರುಮಠಕಲ್ ಬಸ್ ನಿಲ್ದಾಣದಲ್ಲೇ ಕುಟುಂಬ ವಾಸ

    ಯಾದಗಿರಿ: ಜಮೀನು ವರ್ಗಾವಣೆಯ ಮೂಲ ನಕಲು ಪ್ರತಿಯನ್ನು ನೀಡಲು ಕಂದಾಯ ಅಧಿಕಾರಿಗಳು ನಿರ್ಲಕ್ಷ್ಯ ತೋರಿರುವ ಹಿನ್ನೆಲೆ ಊರಿಗೆ ತೆರಳದೆ ಬಸ್ ನಿಲ್ದಾಣದಲ್ಲಿ ಕುಟುಂಬವೊಂದು ವಾಸ ಮಾಡುತ್ತಿದೆ.

    ಜಿಲ್ಲೆಯ ಗುರುಮಠಕಲ್ ಬಸ್ ನಿಲ್ದಾಣದಲ್ಲಿ ಪ್ರಮಿಳಾ ವೆಂಕಟರೆಡ್ಡಿ ದಂಪತಿ ಕಳೆದ 16 ದಿನಗಳಿಂದ ವಾಸಮಾಡುತ್ತಿದ್ದಾರೆ. ಇವರು ಮೂಲತಃ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಬೆಡಪಳ್ಳಿ ಗ್ರಾಮದವರು. ಹೈದರಾಬಾದ್‍ನಲ್ಲಿ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿರುವ ಪ್ರಮಿಳಾಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಪ್ರಮಿಳಾ ತವರು ಊರು ಗುರುಮಠಕಲ್ ತಾಲೂಕಿನ ಹಿಮಲಾಪುರ ಗ್ರಾಮ, ಪಿತ್ರಾರ್ಜಿತ ಆಸ್ತಿ ಪಡೆಯಲು ಜಮೀನಿನ ದಾಖಲೆಗಾಗಿ ಹೈದರಾಬಾದ್‍ನಿಂದ ಸೆ.6 ರಂದು ಗುರುಮಠಕಲ್‍ಗೆ ಬಂದಿದ್ದಾರೆ. ಇದನ್ನೂ ಓದಿ: ನಿಷ್ಪಕ್ಷಪಾತವಾದ ವರದಿ ಕೊಡಿ – ಆಧಿಕಾರಿಗಳಿಗೆ ಆಣೆ ಮಾಡಿಸಿದ ಗ್ರಾಮಸ್ಥರು

    ತಹಶೀಲ್ದಾರ್ ಕಚೇರಿಗೆ ತೆರಳಿ ಜಮೀನಿನ ಮೂಲ ನಕಲು ಪ್ರತಿ ಪಡೆಯಲು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಅರ್ಜಿ ಸಲ್ಲಿಸಿ 16 ದಿನಗಳಾದರೂ ಮೂಲ ನಕಲು ಪ್ರತಿ ನೀಡದೆ ಕಂದಾಯ ಇಲಾಖೆಯ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ಗುರುಮಿಠಕಲ್ ಪಟ್ಟಣದಲ್ಲಿ ಪ್ರಮಿಳಾವರಿಗೆ ಯಾವುದೇ ಸಂಬಂಧಿಕರಿಲ್ಲ, ಹೋಟೆಲ್ ನಲ್ಲಿ ರೂಮ್ ಮಾಡುವಷ್ಟು ಶಕ್ತರಲ್ಲದ ಕಾರಣ ಬಸ್ ನಿಲ್ದಾಣದಲ್ಲಿ ರಾತ್ರಿ ಕಳೆದು ಬೆಳಗ್ಗೆ ತಹಶೀಲ್ದಾರ್ ಕಚೇರಿ ಬಾಗಿಲು ಕಾಯುತ್ತಿದ್ದಾರೆ.  ಇದನ್ನೂ ಓದಿ: ಮಕ್ಕಳನ್ನು ವೈದ್ಯರಲ್ಲಿ ತೋರಿಸಲು ಪೋಷಕರ ನೂಕುನುಗ್ಗಲು

  • ಲಸಿಕೆ ಪ್ರಮಾಣ ಹೆಚ್ಚಳ – ಯಾದಗಿರಿ ಜಿಲ್ಲಾಡಳಿತದ ಪ್ಲ್ಯಾನ್ ಯಶಸ್ವಿಯಾಗಿದ್ದು ಹೇಗೆ?

    ಲಸಿಕೆ ಪ್ರಮಾಣ ಹೆಚ್ಚಳ – ಯಾದಗಿರಿ ಜಿಲ್ಲಾಡಳಿತದ ಪ್ಲ್ಯಾನ್ ಯಶಸ್ವಿಯಾಗಿದ್ದು ಹೇಗೆ?

    ಯಾದಗಿರಿ: ಒಂದು ತಿಂಗಳ ಹಿಂದೆ ಯಾದಗಿರಿಯಲ್ಲಿ ಶೇ.38 ರಷ್ಟಿದ್ದ ವ್ಯಾಕ್ಸಿನೇಷನ್, ಇಂದು ಶೇ.85 ರಷ್ಟಾಗಿದ್ದು, ಜನರಲ್ಲಿನ ಮೂಢನಂಬಿಕೆ ಹೋಗಲಾಡಿಸುವಲ್ಲಿ ಜಿಲ್ಲಾಡಳಿತ ಯಶಸ್ಸು ಕಂಡಿದೆ.

    ಲಸಿಕೆ ನೀಡಲು ಮನೆಗೆ ತೆರಳಿದ ಅಧಿಕಾರಿಗಳ ಮೇಲೆ ದರ್ಪ, ಲಸಿಕೆ ಬಗ್ಗೆ ಮೂಢನಂಬಿಕೆ ಹೀಗೆ ತಮ್ಮ ಅಜ್ಞಾನದಿಂದ ಲಸಿಕೆ ಬಗ್ಗೆ ಯಾದಗಿರಿ ಜನ ಒಂದು ರೀತಿಯ ಅಭಿಪ್ರಾಯಕ್ಕೆ ಒಳಗಾಗಿದ್ದರು, ಇದನ್ನು ಚಾಲೆಂಜ್ ಆಗಿ ತೆಗೆದುಕೊಂಡ ಯಾದಗಿರಿ ಜಿಲ್ಲಾಡಳಿತ ಒಂದು ತಿಂಗಳಲ್ಲಿ ವ್ಯಾಕ್ಸಿನ್ ಚಿತ್ರಣವನ್ನೇ ಬದಲಾಯಿಸಿದೆ. ಇದನ್ನೂ ಓದಿ: ಬಿಜೆಪಿಗರನ್ನು ಕಾಂಗ್ರೆಸ್ ಸಂಪರ್ಕಿಸುತ್ತಿರುವುದು ನಿಜ: ಯಡಿಯೂರಪ್ಪ

    ಒಂದು ತಿಂಗಳ ಹಿಂದೆ ಯಾದಗಿರಿ ವ್ಯಾಕ್ಸಿನೇಷನ್ ಶೇ.38ರಷ್ಟಿತ್ತು. ಆದರೆ ಇಂದು ಶೇ.85ರಷ್ಟು ವ್ಯಾಕ್ಸಿನೇಷನ್ ಮಾಡುವ ಮೂಲಕ ಜಿಲ್ಲಾಡಳಿತ ಸಾಧನೆ ಮಾಡಿದೆ. ಲಸಿಕೆ ಬಗ್ಗೆ ಜನರಲ್ಲಿರುವ ಮೂಢನಂಬಿಕೆಯಿಂದಾಗಿ ಜಿಲ್ಲಾಡಳಿತ ಹೈರಾಣಾಗಿತ್ತು. ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಮತ್ತು ಡಿಎಚ್‍ಓ ಇಂದುಮತಿ ಪಾಟೀಲ್ ಮಾಡಿದ ಮಾಸ್ಟರ್ ಪ್ಲ್ಯಾನ್ ವರ್ಕೌಟ್ ಆಗಿದೆ.

    ಏನು ಪ್ಲ್ಯಾನ್ ಮಾಡಿತ್ತು?: ವಾರದಲ್ಲಿ ಒಂದು ದಿನ ಬೃಹತ್ ಲಸಿಕಾ ಶಿಬಿರವನ್ನು ಹಮ್ಮಿಕೊಂಡು ಮನೆ ಮನೆಗೆ ಹೋಗಿ ಲಸಿಕೆ ಹಾಕುವುದು. ಲಸಿಕಾ ಎಕ್ಸ್‌ಪ್ರೆಸ್ ಕಾರು, ಬೀದಿ ನಾಟಕಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವುದು. ಹೀಗೆ ಜಿಲ್ಲಾ ಮಟ್ಟದ ಉನ್ನತ ಅಧಿಕಾರಿಗಳ ವಿಶೇಷ ಪ್ಲಾನ್ ಯಾದಗಿರಿಯಲ್ಲಿ ಸಕ್ಸಸ್ ಆಗಿದೆ.  ಇದನ್ನೂ ಓದಿ: ಹಿಂದಿ ಹೇರಿಕೆ- ಭೂತ ದಹಿಸಿ ವಾಟಳ್ ಪ್ರತಿಭಟನೆ

    ಇದರಿಂದಾಗಿ ಜಿಲ್ಲೆಯಲ್ಲಿ ಶೇ.85 ರಷ್ಟು ಜನರಿಗೆ ಮೊದಲನೇ ಡೋಸ್ ಸಂಪೂರ್ಣಗೊಂಡಿದೆ. ಜಿಲ್ಲಾಡಳಿತದ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇನ್ನು ಕೆಲವೇ ದಿನಗಳಲ್ಲಿ ಶೇ.100 ರಷ್ಟು ವ್ಯಾಕ್ಸಿನೇಷನ್ ಮಾಡುವ ವಿಶ್ವಾಸವನ್ನು ಜಿಲ್ಲಾಡಳಿತ ವ್ಯಕ್ತಪಡಿಸಿದೆ.

  • ಭೀಮಾ ನದಿ ಪ್ರವಾಹ ಆತಂಕ – ನದಿ ತೀರಕ್ಕೆ ತೆರಳದಂತೆ ಡಿಸಿ ರಾಗಪ್ರಿಯಾ ಸೂಚನೆ

    ಭೀಮಾ ನದಿ ಪ್ರವಾಹ ಆತಂಕ – ನದಿ ತೀರಕ್ಕೆ ತೆರಳದಂತೆ ಡಿಸಿ ರಾಗಪ್ರಿಯಾ ಸೂಚನೆ

    ಯಾದಗಿರಿ: ಮುಂದಿನ ವಾರದಿಂದ ಅಕ್ಟೋಬರ್ ಎರಡನೇ ವಾರದ ವರೆಗೆ ಭೀಮಾ ನದಿಯ ನೀರಿನ ಪ್ರಮಾಣ ಜಾಸ್ತಿಯಾಗುವ ಸಂಭವಿದ್ದು, ಮತ್ತೆ ಭೀಮಾ ನದಿ ಪ್ರವಾಹ ಆತಂಕ ಶುರುವಾಗಿದೆ. ನದಿ ತೀರಕ್ಕೆ ಸಾರ್ವಜನಿಕರು ತೆರಳದಂತೆ ಮತ್ತು ಮೀನುಗಾರಿಕೆ ಮಾಡದಂತೆ ಯಾದಗಿರಿ ಡಿಸಿ ರಾಗಪ್ರಿಯಾ ಸೂಚನೆ ನೀಡಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿಯ ಮುಖಾಂತರ ಜಿಲ್ಲೆಯ ಜನತೆ ಡಿಸಿ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಭೀಮಾ ನದಿಗೆ ಸದ್ಯ ಒಂದು ಲಕ್ಷ ಕ್ಯೂಸೆಕ್ ನೀರು ಹರಿಸಲಾಗುತ್ತಿದೆ, 3 ರಿಂದ 4 ಲಕ್ಷ ನೀರು ಬಂದರೆ ತೊಂದರೆಯಾಗುತ್ತದೆ. ಈಗಾಗಲೇ ಸಂಬಂಧಪಟ್ಟ ತಹಶೀಲ್ದಾರರ ಸಭೆ ನಡೆಸಲಾಗಿದೆ. ನದಿ ತೀರದ ಗ್ರಾಮಗಳಲ್ಲಿ ಅಲರ್ಟ್ ಘೋಷಣೆ ಮಾಡಲಾಗಿದೆ. ಭೀಮಾ ನದಿ ತೀರದ ಜನರು ಜಿಲ್ಲಾಡಳಿತಕ್ಕೆ ಸಹಕಾರ ನೀಡಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಕೊಚ್ಚಿಹೋದ ಸೇತುವೆಗೆ ಡಿಸಿ, ಎಸ್ಪಿ ಭೇಟಿ, ಶೀಘ್ರ ದುರಸ್ತಿಗೆ ಆದೇಶ

    ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಭಾರಿ ಮಳೆಯಾಗಿದೆ, ನಾಯ್ಕಲ್ ಸೇರಿದಂತೆ ಹಲವಾರು ಗ್ರಾಮದ ಮನೆಗಳಿಗೆ ಹಾನಿಯಾಗಿದೆ, ಯಡ್ಡಳ್ಳಿ ಸೇತುವೆ ಕೊಚ್ಚಿ ಹೋಗಿದೆ, ಈ ಬಗ್ಗೆ ಶೀಘ್ರ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ, ಕಾಳಜೀ ಕೇಂದ್ರಗಳನ್ನು ಓಪನ್ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಹಿಂದೂ ದೇವಸ್ಥಾನ ಟಾರ್ಗೆಟ್ ಮಾಡಿ ಧ್ವಂಸ ಮಾಡಲಾಗುತ್ತಿದೆ: ಪ್ರತಾಪ್ ಸಿಂಹ

  • ಅನ್ನದಾತನ ಅನ್ನಕ್ಕೆ ಕನ್ನ ಹಾಕಿದ ಕಿಡಿಗೇಡಿಗಳು-ಪಂಪ್‍ಸೆಟ್ ಕೇಬಲ್ ಕಟ್

    ಅನ್ನದಾತನ ಅನ್ನಕ್ಕೆ ಕನ್ನ ಹಾಕಿದ ಕಿಡಿಗೇಡಿಗಳು-ಪಂಪ್‍ಸೆಟ್ ಕೇಬಲ್ ಕಟ್

    ಯಾದಗಿರಿ: ಹೊರವಲಯದಲ್ಲಿರುವ ಭೀಮಾನದಿ ತೀರದ ರೈತರಿಗೆ ಈಗ ಕೇಬಲ್ ಕಂಟಕ ಶುರುವಾಗಿದೆ. ರೈತರು ಭೀಮಾನದಿ ತೀರದಿಂದ ತಮ್ಮ ಜಮೀನುಗಳಿಗೆ ನೀರು ಹರಿಸಲು, ಸಾವಿರಾರು ರೂಪಾಯಿ ಖರ್ಚು ಮಾಡಿ ಪಂಪ್‍ಸೆಟ್‍ಗಳನ್ನು ಅಳವಡಿಸಿಕೊಂಡಿದ್ದಾರೆ.  

    ಈ ಪಂಪ್‍ಸೆಟ್‍ಗಳಿಗೆ ವಿದ್ಯುತ್ ನೀಡುವ ಸಲುವಾಗಿ ನೂರಾರು ಮೀಟರ್ ದೂರದಿಂದ ಬೆಲೆ ಬಾಳುವ ಕೇಬಲ್‍ಗಳನ್ನು ಹಾಕಿ ಕನೆಕ್ಷನ್ ನೀಡಿದ್ದಾರೆ. ಇದನ್ನೆ ನಂಬಿಕೊಂಡು ಭತ್ತ ನಾಟಿಮಾಡಿದ್ದಾರೆ. ಈಗ ಭತ್ತಕ್ಕೆ ನೀರಿನ ಅವಶ್ಯಕತೆ ಬಹಳಷ್ಟಿದೆ. ಇಂತಹ ಹೊತ್ತಿನಲ್ಲಿ ಅಪರಿಚಿತ ಕೇಡಿಗಳು ಪಂಪ್‍ಸೆಟ್‍ಗಳ ಕೇಬಲ್ ಕಟ್ ಮಾಡಿ ಪರಾರಿ ಆಗುತ್ತಿದ್ದಾರೆ. ಇದರಿಂದಾಗಿ ಸಕಾಲಕ್ಕೆ ಬೆಳೆಗೆ ನೀರು ಸೀಗದೆ ನೂರಾರು ಎಕರೆ ಬೆಳೆ ಒಣಗುತ್ತಿದೆ. ಇದನ್ನೂ ಓದಿ: ಅವರು ನಿರ್ಧರಿಸಿದ್ದ ಗುರಿಯನ್ನು ತಲುಪಿದ್ದಾರೆ- ಸುಹಾಸ್ ಸಾಧನೆಗೆ ಪತ್ನಿಯ ಮೆಚ್ಚುಗೆ

    ವಾರಕ್ಕೆ ಎರಡು,ಮೂರು ಭಾರಿ ಇದೇ ತರಹ ಮಾಡುತ್ತಿರುವ ಕೀಡಿಗೇಡಿಗಳು ರೈತರಿಗೆ ವಿಪರೀತ ಕಾಟ ನೀಡುತ್ತಿದ್ದಾರೆ. ಕಟ್ ಮಾಡಿದ ಕೇಬಲ್ ಜೋಡಿಸಿ ರೈತರು ಮನೆಗೆ ತೆರಳುತ್ತಿದ್ದಂತೆ, ರಾತ್ರಿ ಪದೇ ಪದೇ ಕೇಬಲ್ ಕಟ್ ಆಗುತ್ತಿವೆ. ಇಲ್ಲಿಯವರೆಗೆ ಏನಿಲ್ಲವೆಂದರೂ ಸುಮಾರು ಐದಾರು ಬಾರಿ ಈ ರೀತಿ ಕೇಬಲ್ ಕಟ್ ಆಗುತ್ತಿವೆ. ಒಂದು ಸಲದ ಕೇಬಲ್ ಜೋಡಣೆಗೆ 15 ರಿಂದ 20 ಸಾವಿರ ಖರ್ಚು ಬರುತ್ತದೆ. ಬೆಳೆದ ಬೆಳೆಯ ಲಾಭವೆಲ್ಲಾ ಈ ಕೇಬಲ್ ಮರುಜೋಡಣೆಗೆ ಹಾಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವಿಚಾರ ಪೊಲೀಸ್ ಇಲಾಖೆಯ ಗಮನಕ್ಕೆ ತಂದರೂ ಸಹ ಪ್ರಯೋಜನವಾಗಿಲ್ಲ. ಇದರಿಂದಾಗಿ ಅಸಹಾಯಕ ಸ್ಥಿತಿಯಲ್ಲಿದ್ದಾರೆ ರೈತರು.

  • ಕೇಂದ್ರ ಸಚಿವ ಖೂಬಾಗೆ ಗನ್ ಸ್ವಾಗತ

    ಕೇಂದ್ರ ಸಚಿವ ಖೂಬಾಗೆ ಗನ್ ಸ್ವಾಗತ

    ಯಾದಗಿರಿ: ಜನಾರ್ಶೀವಾದ ಕಾರ್ಯಕ್ರಮಕ್ಕೆ ಯಾದಗಿರಿಗೆ ಆಗಮಿಸಿದ ಕೇಂದ್ರ ಸಚಿವ ಖೂಬಾ ಅವರ ಸ್ವಾಗತಕ್ಕೆ ಜನ ನಾಡಬಂದೂಕು ಸಿಡಿಸಿ ಭರ್ಜರಿಯಾಗಿ ಸ್ವಾಗತ ಮಾಡಿದ್ದು ಚರ್ಚೆಗೆ ಗ್ರಾಸವಾಗಿದೆ.

    ಯರಗೋಳ ಗ್ರಾಮದಲ್ಲಿ ಜನ ಕೇಂದ್ರ ಸಚಿವ ಭಗವಂತ ಖೂಬಾ ಆಗಮನ ಮಾಡುತ್ತಿದ್ದಂತೆ ನಾಡಬಂದೂಕು ಕೈಯಲ್ಲಿ ಹಿಡಿದುಕೊಂಡು ಪುಷ್ಪವನ್ನು ಅರ್ಪಿಸಿ ಭರ್ಜರಿ ಸ್ವಾಗತ ಮಾಡಿದ್ದಾರೆ. ಯಾದಗಿರಿ ತಾಲೂಕಿನ ಯರಗೋಳ ಗ್ರಾಮಕ್ಕೆ ಖೂಬಾ ಆಗಮಿಸಿದ್ದರು. ಇದನ್ನೂ ಓದಿ:  ಡಾ.ಜಿ ಪರಮೇಶ್ವರ್ ಮುಂದಿನ ಮುಖ್ಯಮಂತ್ರಿಯಾಗಬೇಕು: ಜೆಡಿಎಸ್ ಶಾಸಕ

    ಜನಾರ್ಶೀವಾದ ಕಾರ್ಯಕ್ರಮದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿ ಜನ ಜಾತ್ರೆ ಸೇರಿತ್ತು. ಜನಾರ್ಶೀವಾದ ಕಾರ್ಯಕ್ರಮಕ್ಕೆ ಭಾಗವಹಿಸಲು ಆಗಮಿಸಿದ ಭಗವಂತ ಖೂಬಾ ಅವರನ್ನು ಮಾಜಿ ಸಚಿವ ಬಾಬೂರಾವ್ ಚಿಂಚನಸೂರು, ಶಾಸಕರಾದ ರಾಜೂಗೌಡ, ವೆಂಕಟರೆಡ್ಡಿ ಮುದ್ನಾಳ ಸ್ವಾಗತಮಾಡಿಕೊಂಡಿದ್ದಾರೆ.

  • ವಿದ್ಯುತ್ ತಂತಿ ತಗುಲಿ ಜೋಡೆತ್ತು ಸಾವು

    ವಿದ್ಯುತ್ ತಂತಿ ತಗುಲಿ ಜೋಡೆತ್ತು ಸಾವು

    ಯಾದಗಿರಿ: ಜೆಸ್ಕಾಂ ನಿರ್ಲಕ್ಷ್ಯದಿಂದಾಗಿ ವಿದ್ಯುತ್ ತಂತಿ ತಗುಲಿ ಜೋಡೆತ್ತು ಸಾವನ್ನಪ್ಪಿರುವ ಘಟನೆ ಶೇಟ್ಟಿಗೇರಿ ಗ್ರಾಮದಲ್ಲಿ ನಡೆದಿದೆ.

    ತಾಲ್ಲೂಕಿನ ಶೇಟ್ಟಿಗೇರಿ ಗ್ರಾಮದಲ್ಲಿ ಭೀಮರಾಯ ಜಿನಿಕೇರಿ ರೈತ ಹೊಲದಲ್ಲಿ ಉಳುಮೆ ಮಾಡಿ ಸಂಜೆ ಎತ್ತುಗಳನ್ನು ಬಿಳು ಪ್ರದೇಶದಲ್ಲಿ ಮೇಯಲು ಬಿಟ್ಟಿದ್ದರು. ಈ ವೇಳೆ 11ಕೆ,ವಿ ವಿದ್ಯುತ್ ಕಂಬ ತಂತಿ ಹರಿದು ಬಿದ್ದ ಪರಿಣಾಮ ಜೋಡೆತ್ತುಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಇದನ್ನೂ ಓದಿ: 45 ಕೆಜಿ ತೂಕವಿದ್ದ 2ವರ್ಷದ ಬಾಲಕಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

    ಸುಮಾರು ಎರಡು ತಿಂಗಳ ಹಿಂದೆ ಭೀಮರಾಯ ಒಂದು ಲಕ್ಷದ ಹತ್ತು ಸಾವಿರ ರೂಪಾಯಿ ಸಾಲ ಮಾಡಿ ಎರಡು ಎತ್ತಗಳನ್ನು ಖರೀದಿ ಮಾಡಿದ್ದರು. ರೈತ ಮೊದಲೇ ಕೊರೊನಾದಿಂದ ತತ್ತರಿಸಿ ಕೈಸಾಲ ಮಾಡಿ ಎತ್ತು ಖರೀದಿಸಿ ಕೃಷಿ ಮಾಡಲು ಮುಂದಾಗಿದ್ದರು. ಈಗ ಜೆಸ್ಕಾಂ ಅಧಿಕಾರ ನಿರ್ಲಕ್ಷ್ಯದಿಂದ ರೈತನಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಮನೆಯ ಹಿರಿಮಕ್ಕಳಂತಿದ್ದ ಎತ್ತುಗಳನ್ನು ಕಳೆದುಕೊಂಡ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿದೆ. ಯಾದಗಿರಿ ಗ್ರಾಮೀಣ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

  • ಲಸಿಕೆ ಪಡೆಯಲು ಜನರ ಹಿಂದೇಟು-ಅಧಿಕಾರಿಗಳಿಗೆ ಮಹಿಳೆಯರಿಂದ ಅವಾಜ್

    ಲಸಿಕೆ ಪಡೆಯಲು ಜನರ ಹಿಂದೇಟು-ಅಧಿಕಾರಿಗಳಿಗೆ ಮಹಿಳೆಯರಿಂದ ಅವಾಜ್

    ಯಾದಗಿರಿ: ಕೊರೊನಾ ಲಸಿಕೆ ಜಾಗೃತಿಯನ್ನೂ ಮೂಡಿಸಲು ಬಂದಿರುವ ಅಧಿಕಾರಿಗಳಿಗೆ ಗ್ರಾಮದ ಮಹಿಳೆಯರಯ ತರಾಟೆಗೆ ತೆಗೆದುಕೊಂಡಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.

    ಯಾದಗಿರಿ ತಾಲೂಕಿನ ಕಂಚಗಾರಹಳ್ಳಿಯಲ್ಲಿ ಗ್ರಾಮಸ್ಥರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದರು. ಹೀಗಾಗಿ ಸಹಾಯಕ ಆಯುಕ್ತ ಪ್ರಕಾಶ್ ಹನಗಂಡಿ, ತಹಶಿಲ್ದಾರರ ಚನ್ನಮಲ್ಲಪ್ಪ ಮತ್ತು ಅವರ ತಂಡ ಜಾಗೃತಿ ಮೂಡಿಸಲು ಹಳ್ಳಿಗೆ ತೆರಳಿದ್ದರು. ಕೊರೊನಾ ಲಸಿಕೆ ಪಡೆಯಬೇಕೆಂದು ಬುದ್ದಿ ಮಾತು ಹೇಳಿದ್ದಾರೆ. ಆದರೆ ಗ್ರಾಮದ ಮಹಿಳೆಯರು ಮಾತ್ರ ಅಧಿಕಾರಿಗಳಿಗೆ ಅವಾಜ್ ಹಾಕಲು ಮುಂದಾಗಿದ್ದಾರೆ. ಇದನ್ನೂ ಓದಿ: 18 ವರ್ಷ ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನ್ ನೀಡುವ ಮೊದಲು ಶಾಲೆ ಆರಂಭ ಬೇಡ: ಪ್ರತಾಪ್ ಸಿಂಹ

    ಮತ್ತೊಂದು ಕಡೆ ಅಧಿಕಾರಿಗಳು ಮನೆಮುಂದೆ ಬಂದ ತಕ್ಷಣ ಬೀಗ ಹಾಕಿ ಗ್ರಾಮಸ್ಥರು ಬೇರೆಕಡೆಗೆ ಪರಾರಿಯಾಗುತ್ತಿದ್ದಾರೆ. ನಾವು ಲಸಿಕೆ ಹಾಕಿಸಿಕೊಳ್ಳಲ್ಲ, ಸತ್ತರೇ ಇಲ್ಲೇ ಸಾಯುತ್ತೆವೆ ಆದರೆ ಲಸಿಕೆ ಹಾಕಿಸಿಕೊಳ್ಳಲ್ಲ ಎನ್ನುತ್ತಿದ್ದಾರೆ. ಕರೆಂಟ್, ರೇಷನ್ ಕಾರ್ಡ್ ಕಟ್ ಮಾಡಿದರೂ ಪರವಾಗಿಲ್ಲ, ನಾವು ಸರ್ಕಾರ ನಂಬಿ ಬದುಕುತ್ತಿಲ್ಲ, ನಾವು ಸ್ವಂತ ದುಡಿದು ಬದುಕುತ್ತೆವೆ ಎಂದು ಅಧಿಕಾರಿಗಳ ಮುಂದೆ ಗ್ರಾಮೀಣ ಮಹಿಳೆಯರು ರಂಪಾಟ ನಡೆಸಿದ್ದಾರೆ.

  • ನಾಳೆ ಅನ್‍ಲಾಕ್-ಹೋಟೆಲ್, ರೆಸ್ಟೋರೆಂಟ್, ಜಿಮ್ ಓಪನ್

    ನಾಳೆ ಅನ್‍ಲಾಕ್-ಹೋಟೆಲ್, ರೆಸ್ಟೋರೆಂಟ್, ಜಿಮ್ ಓಪನ್

    ಯಾದಗಿರಿ: ನಾಳೆಯಿಂದ ಹೋಟೆಲ್, ರೆಸ್ಟೋರೆಂಟ್‍ಗಳಿಗೆ ಶೇ50 ರಷ್ಟು ಅವಕಾಶ ನೀಡಿರುವ ಹಿನ್ನೆಲೆ ಯಾದಗಿರಿ ಹೋಟೆಲ್, ರೆಸ್ಟೋರೆಂಟ್‍ಗಳಲ್ಲಿ ನಾಳೆ ತೆರೆಯಲು ಭರ್ಜರಿ ತಯಾರಿ ನಡೆದಿದೆ.

    ನಗರದ ಪ್ರಮುಖ ರೆಸ್ಟೋರೆಂಟ್ ಗಳಲ್ಲಿ ಸ್ವಚ್ಚತೆ ಕಾರ್ಯ ಆರಂಭವಾಗಿದ್ದು, ಕೋವಿಡ್ ಮಾರ್ಗಸೂಚಿಗಳ ಪ್ರಕಾರ, ಸ್ಯಾನಿಟೈಸಿಂಗ್, ಜಾಗೃತಿ ಮೂಡಿಸುವ ಬೋರ್ಡ್‍ಗಳನ್ನು ಅಳವಡಿಸಲಾಗುತ್ತಿದೆ. ಸಾಮಾಜಿಕ ಅಂತರ ಪಾಲನೆ ಮಾಡುವ ನಿಟ್ಟಿನಲ್ಲಿ ಒಂದು ಟೇಬಲ್‍ಗೆ ಇಬ್ಬರಿಗೆ ಮಾತ್ರ ಅವಕಾಶ ನೀಡಲಾಗಿದೆ. ಇದನ್ನೂ ಓದಿ: ಕಾಶ್ಮೀರದ ನಾಯಕರ ಜೊತೆ ಮೋದಿ ಸಭೆಗೆ ಪಾಕ್ ಕಿರಿಕ್

    ಜಿಮ್  ಓಪನ್‍ಗೆ ಅವಕಾಶ ನೀಡಿರುವ ಹಿನ್ನೆಲೆ ಜಿಮ್ ಕೇಂದ್ರಗಳಲ್ಲಿ ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ನಾಳೆಯಿಂದ ಜಿಮ್ ಓಪನ್ ಹಿನ್ನೆಲೆ, ಯಾದಗಿರಿ ಜಿಮ್ಗಳಲ್ಲಿ ತಯಾರಿ ನಡೆಯುತ್ತಿದೆ. ವ್ಯಾಯಾಮ ಶಾಲೆಗಳಲ್ಲಿ ಶೇ50 ರಷ್ಟು ಅವಕಾಶ ನೀಡಿದ ಹಿನ್ನೆಲೆ, ಸಿಫ್ಟ್ ಮಾದರಿಯಲ್ಲಿ ಜಿಮ್ ನಡೆಸಲು ಮಾಲೀಕರು ತಯಾರಿ ನಡೆಸಿದ್ದಾರೆ. ಸದ್ಯ ಜಿಮ್ ಗಳಲ್ಲಿ ಕ್ಲಿನಿಂಗ್, ಸ್ಯಾನಿಟೈಸಿಂಗ್ ಸೇರಿದಂತೆ ಕೋವಿಡ್ ಮಾರ್ಗಸೂಚಿಗಳ ಅನುಗುಣವಾಗಿ ಸಿದ್ಧತೆ ನಡೆದಿದೆ .

    ಆದರೆ ಸಂಜೆ 5 ಗಂಟೆಯ ನಂತರ ನೈಟ್ ಕಫ್ರ್ಯೂ ಜಾರಿ ಹಿನ್ನಲೆ, ಸಂಜೆ ಟೈಮ್‍ನಲ್ಲಿ ಜಿಮ್ ಬರುವವರಿಗೆ ತೊಂದರೆಯಾಗುತ್ತದೆ. ಹೀಗಾಗಿ ಜಿಮ್‍ಗಳಿಗೆ ಈ ನಿಯಮ ಸಡಲಿಕೆ ಮಾಡಬೇಕು ಅಂತ ಜೀಮ್ ಮಾಲೀಕರು ಒತ್ತಾಯ ಮಾಡಿದ್ದಾರೆ.