Tag: Yadgiri

  • ರಾಜ್ಯದಲ್ಲಿ ಬಲವಂತದ ಮತಾಂತರ ಹಾವಳಿ – ವಿವಾಹಿತನನ್ನು ಮತಾಂತರಗೊಳಿಸಿದ ಮುಸ್ಲಿಂ ನಾರಿ

    ರಾಜ್ಯದಲ್ಲಿ ಬಲವಂತದ ಮತಾಂತರ ಹಾವಳಿ – ವಿವಾಹಿತನನ್ನು ಮತಾಂತರಗೊಳಿಸಿದ ಮುಸ್ಲಿಂ ನಾರಿ

    – ಮುಸ್ಲಿಂ ಲೇಡಿ ಲವ್ ಜಿಹಾದ್‍ಗೆ ಹಿಂದೂ ಪುರುಷ..?
    – ಶರಣಪ್ಪ ಈಗ ಸುಮೇರ್ ಉಜೆನ್

    ಯಾದಗಿರಿ: ರಾಜ್ಯದಲ್ಲಿ ಬಲವಂತ ಮತಾಂತರ ಕಾಯ್ದೆ ಜಾರಿಯಲ್ಲಿದೆ. ಯಾವುದೇ ಒಬ್ಬ ವ್ಯಕ್ತಿಯನ್ನ ಬಲವಂತವಾಗಿ ಮತಾಂತರ ಮಾಡುವಂತಿಲ್ಲ. ಆದರೆ ಇಲ್ಲಿ ಮದುವೆಯಾಗಿದ್ದ ವ್ಯಕ್ತಿನ್ನು ಮಹಿಳೆಯೊಬ್ಬಳು ತನ್ನ ಮೋಹದ ಬಲೆಗೆ ಬೀಳಿಸಿಕೊಂಡು ಆತನನ್ನು ಬಲವಂತವಾಗಿ ಮತಾಂತರಗೊಳಿಸಿದ್ದಾಳೆ.

    ಮೂಲತಃ ಯಾದಗಿರಿ (Yadagiri) ಜಿಲ್ಲೆಯ ಮಹಿಳೆ ಅಂಬಿಕಾ, ಕಲಬುರಗಿ (Kalburgi) ಮೂಲಕ ಶರಣಪ್ಪನ ಜೊತೆ ಕಳೆದ 4 ವರ್ಷಗಳ ಹಿಂದೆ ಮದುವೆಯಾಗಿದ್ದರು. ಶರಣಪ್ಪ ಕಲಬುರಗಿಯಲ್ಲಿ ಖಾಸಗಿ ಡಯಾಗ್ನೆಸಿಟ್‍ನಲ್ಲಿ ಕೆಲಸ ಮಾಡಿಕೊಂಡಿದ್ದ. ಇಬ್ಬರ ಸಂಸಾರ ಚೆನ್ನಾಗಿಯೇ ಇತ್ತು. ಆದರೆ ಶರಣಪ್ಪನಿಗೆ ತಾನು ಕೆಲಸ ಮಾಡುತ್ತಿದ್ದ ಡಯಾಗ್ನೆಸಿಟ್‍ನಲ್ಲಿ ಸುಮೈರಾ ಆಫ್ರಿನ್ ಎಂಬ ಮುಸ್ಲಿಂ ಮಹಿಳೆ ಪರಿಚಯವಾಗಿದೆ. ಇಬ್ಬರ ಪರಿಚಯ ಸ್ನೇಹವಾಗಿ ಪರಿವರ್ತನೆಯಾಗಿತ್ತು, ಹೀಗಿರುವಾಗ ಇಬ್ಬರ ನಡುವಿನ ಸಲುಗೆ ತುಂಬಾ ಹೆಚ್ಚಾಯಿತು. ನಂತರ ಈ ಸಲುಗೆಯಿಂದ ಅಫ್ರೀನಾ ಶರಣಪ್ಪನನ್ನು ಒತ್ತಾಯವಾಗಿ ಮದುವೆಯಾಗಿದಳು.

    ಸುಮೈರಾ ಅಫ್ರೀನ್ ಮೊದಲೇ ವಿವಾಹವಾಗಿದ್ದಳು. ಆಕೆಗೆ ಈಗಾಗಲೇ ಮೂವರು ಮಕ್ಕಳಿದ್ದಾರೆ. ಒಂದೇ ಕಡೆ ಕೆಲಸ ಮಾಡುತ್ತಿದ್ದ ಶರಣಪ್ಪ ಹಾಗೂ ಅಫ್ರೀನ್ ನಡುವೆ ಏನಾದರೂ ಪ್ರೀತಿ, ಪ್ರೇಮ ಶುರುವಾಗಿತ್ತಾ? ಶರಣಪ್ಪ ಸಲುಗೆ ಬೆಳೆಸಿಕೊಂಡಿದ್ದ ಅಫ್ರೀನ್ ಮದುವೆ ಹೆಸರಿನಲ್ಲಿ ಕಿರುಕುಳ ನೀಡಿ ಆತನನ್ನು ಮದುವೆಯಾಗಿ ಬಲವಂತವಾಗಿ ಮತಾಂತರ ಮಾಡಿಸಿದ್ರಾ ಎಂಬ ಅನುಮಾನಗಳು ಶುರುವಾಗಿದೆ. ಇದನ್ನೂ ಓದಿ: ಶಿಕ್ಷಕರ ನೇಮಕಾತಿ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲೂ ಅಕ್ರಮ?

    ಅಫ್ರೀನ್‍ಳನ್ನು ಮದುವೆಯಾದ ಬಳಿಕ ಶರಣಪ್ಪ ಮಾನಸಿಕವಾಗಿ ಕುಗ್ಗಿ ಹೋಗಿದ್ದ. ಮದುವೆ ಬಳಿಕ ಶರಣಪ್ಪ ಸುಮೈರ್ ಉಜೆನ್ ಹೆಸರಿನಲ್ಲಿ ನ್ಯಾಯಾಲಯದಲ್ಲಿ ಅಫಿಡವಿಟ್‌ ಮಾಡಿಸಿಕೊಂಡಿದ್ದಾನೆ. ಅಷ್ಟೇ ಅಲ್ಲದೇ ಅಫ್ರೀನ್ ನಮ್ಮ ವಿರುದ್ಧವೇ ಹೆಬಿಯಸ್ ಕಾರ್ಪಸ್ ಪ್ರಕರಣ ದಾಖಲಿಸಿದ್ದು, ನಮಗೆ ಜೀವ ಬೇದರಿಕೆ ಹಾಕಿದ್ದಾಳೆ ಎಂದು ನೊಂದ ಮಹಿಳೆ ಅಂಬಿಕಾ ಆರೋಪಿಸಿದ್ದಾರೆ. ಇದನ್ನೂ ಓದಿ: ಮಂಗಳೂರಿನ ಆಟೋದಲ್ಲಿ ಕುಕ್ಕರ್ ಸ್ಫೋಟ – ನಟ್‌, ಬೋಲ್ಟ್‌, ಬ್ಯಾಟರಿ ಪತ್ತೆ

    ಮದುವೆಗೂ ಮುನ್ನವೇ ಶರಣಪ್ಪ ಇಸ್ಲಾಂ ಧರ್ಮ ಸ್ವೀಕರಿಸಿದ್ದನಾ ಎನ್ನುವುದಕ್ಕೆ ಉರ್ದುಭಾಷೆ ಕಲಿಯುವ ಪುಸ್ತಕ ದೊರೆತಿದ್ದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಇದೊಂದು ಬಲವಂತದ ಮತಾಂತರವಾಗಿದ್ದು, ಅಫ್ರೀನ್‍ಳನ್ನು ಪೊಲೀಸರು ಕೂಡಲೇ ಬಂಧಿಸಿ ಆಕೆಯ ಹಿಂದೆ ಇರುವ ಜಾಲವನ್ನು ಪತ್ತೆ ಮಾಡಿ ಬಲವಂತದ ಮತಾಂತರವನ್ನು ತಡೆಯಬೇಕು ಎಂದ ಶ್ರೀರಾಮ ಸೇನೆ ಅಧ್ಯಕ್ಷ ವಿಜಯಕುಮಾರ್ ಪಾಟೀಲ್ ಒತ್ತಾಯಿಸಿದ್ದಾರೆ.

    ಸರ್ಕಾರ ಬಲವಂತದ ಮತಾಂತರ ನಿಷೇಧಕ್ಕೆ ಎಷ್ಟೆಲ್ಲಾ ಕ್ರಮ ಕೈಗೊಂಡರೂ ಜೀವ ಬೆದರಿಕೆಗೆ ಅಲ್ಲಲ್ಲಿ ಇನ್ನು ಬಲವಂತದ ಮತಾಂತರ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಮತ್ತೊಂದು ಕಡೆ ಲವ್ ಜಿಹಾದ್ ಹೆಸರಿನಲ್ಲೂ ಮತಾಂತರ ನಡೆಯುತ್ತಿವೆ. ಇನ್ನಾದರೂ ಸರ್ಕಾರ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಬಲವಂತದ ಮತಾಂತರ ಮಾಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಬುದ್ದಿ ಹೇಳಲು ಬಂದವರಿಗೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಭೂಪ

    ಬುದ್ದಿ ಹೇಳಲು ಬಂದವರಿಗೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಭೂಪ

    ಯಾದಗಿರಿ: ತನ್ನ ಸಂಸಾರ ಸರಿಪಡಿಸಿಕೊಳ್ಳುವಂತೆ ಬುದ್ದಿ ಹೇಳಲು ಬಂದ ನಾಲ್ವರಿಗೆ ವ್ಯಕ್ತಿಯೊಬ್ಬ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ನಾರಾಯಣಪುರದಲ್ಲಿ ನಡೆದಿದೆ.

    ಘಟನೆಯಲ್ಲಿ ನಾಗಪ್ಪ ಎಂಬವರು ಮೃತಪಟ್ಟಿದ್ದು, ಉಳಿದ ಮೂವರ ಸ್ಥಿತಿ ಗಂಭೀರವಾಗಿದೆ. ಇದನ್ನೂ ಓದಿ: 16 ವರ್ಷಗಳಿಂದ ಅಳಿಯನನ್ನೇ ಪ್ರೀತಿಸ್ತಿದ್ದ ಅತ್ತೆ- ಒಟ್ಟಿಗೆ ಇರಲು ಸಾಧ್ಯವಾಗದೇ ಇಬ್ಬರೂ ಆತ್ಮಹತ್ಯೆ

    crime

    ಏನಿದು ಗಂಡ-ಹೆಂಡತಿ ಜಗಳ? – ಹುಣಸಗಿ ತಾಲೂಕಿನ ನಾರಾಯಣಪುರದ ನಿವಾಸಿ ಶರಣಪ್ಪ ಹಾಗೂ ಪತ್ನಿ ಹುಲಿಗೆಮ್ಮ ಇಬ್ಬರು ಹಲವು ಪ್ರತಿದಿನ ಜಗಳವಾಡುತ್ತಿದ್ದರು. ಹುಲಿಗೆಮ್ಮ ತವರು ಮನೆಯವರೊಂದಿಗೆ ತನ್ನ ಸಂಕಟ ಹೇಳಿಕೊಳ್ಳುತ್ತಿದ್ದಳು.

    ದಿನವೂ ಗಂಡನೊಂದಿಗೆ ಜಗಳವಾಡುತ್ತಿದ್ದರಿಂದ ಬೇಸತ್ತು ಹುಲಿಗಮ್ಮ 14 ತಿಂಗಳಿನಿಂದ ಬೇರೆಡೆ ಮನೆ ಮಾಡಿಕೊಂಡು ವಾಸವಾಗಿದ್ದರು. ಲಿಂಗಸೂರಿನ ಕೆಎಸ್‌ಆರ್‌ಟಿಸಿಯಲ್ಲಿ ಮೆಕ್ಯಾನಿಕಲ್ ಕೆಲಸ ಮಾಡಿಕೊಂಡಿದ್ದರು. ವಿಚ್ಛೇದನ ಕೇಳಿದರೂ ಶರಣಪ್ಪ ನಿರಾಕರಿಸಿದ್ದನು. ಸಮಸ್ಯೆಯನ್ನು ಬಗೆಹರಿಸಲೇಬೇಕೆಂದು ಹೆಂಡತಿ ತವರು ಮನೆಯವರಾದ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ಇಬ್ಬರು ಹಾಗೂ ಸರೂರಿನ ಸಿದ್ರಾಮಪ್ಪ, ಮುತ್ತಪ್ಪ ಅವರು ಶರಣಪ್ಪನಿಗೆ ಬುದ್ದಿ ಹೇಳಲು ಬಂದಿದ್ದರು. ಇದನ್ನೂ ಓದಿ: ಕನ್ನಯ್ಯಲಾಲ್ ಹತ್ಯೆ ಘೋರ, ಖಂಡನೀಯ: ಬಿ.ಕೆ.ಹರಿಪ್ರಸಾದ್

    ಮನೆಗೆ ಬಂದು ಬುದ್ದಿ ಮಾತು ಹೇಳಲು ಮುಂದಾದ ಕೂಡಲೇ ಬಾಗಿಲು ಹಾಕಿಕೊಂಡ ಶರಣಪ್ಪ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಘಟನೆಯಲ್ಲಿ ನಾಗಪ್ಪ ಮೃತಪಟ್ಟಿದ್ದು, ಗಂಭೀರ ಗಾಯಗೊಂಡ ಮೂವರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಯಾದಗಿರಿ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಮಾಹಿತಿ ನೀಡಿದ್ದಾರೆ.

    ಆರೋಪಿ ವಿರುದ್ಧ ಎಫ್‌ಐಆರ್ ದಾಖಲಿಸಿ, ತನಿಖೆ ಕೈಗೊಳ್ಳಲಾಗಿದೆ ಎಂದು ವೇದಮೂರ್ತಿ ತಿಳಿಸಿದ್ದಾರೆ.

    Live Tv

  • ಕೋರ್ಟ್ ತೀರ್ಪು ಬೆನ್ನಲ್ಲೇ ಪರೀಕ್ಷೆ ಬಿಟ್ಟು ಹೊರ ನಡೆದ ವಿದ್ಯಾರ್ಥಿನಿಯರು

    ಕೋರ್ಟ್ ತೀರ್ಪು ಬೆನ್ನಲ್ಲೇ ಪರೀಕ್ಷೆ ಬಿಟ್ಟು ಹೊರ ನಡೆದ ವಿದ್ಯಾರ್ಥಿನಿಯರು

    ಯಾದಗಿರಿ: ಹಿಜಬ್ ಸಂಬಂಧ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದ ಬೆನ್ನಲ್ಲೆ ಯಾದಗಿರಿಯ ಸುರಪುರ ತಾಲೂಕಿನ ಕೆಂಬಾವಿ ಪಟ್ಟಣದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಪರೀಕ್ಷೆ ಬಿಟ್ಟು ಮನೆಗೆ ತೆರಳಿದ್ದಾರೆ.

    ಹಿಜಬ್ ತೆಗೆಯದೆ ಬೆಳಗ್ಗೆಯಿಂದ ಕೋರ್ಟ್ ಆದೇಶಕ್ಕೆ ಕಾದು ಕುಳಿತಿದ್ದ ವಿದ್ಯಾರ್ಥಿನಿಯರು ತೀರ್ಪು ಪ್ರಕಟವಾಗುತ್ತಿದ್ದಂತೆಯೇ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರು ಪೂರ್ವಭಾವಿ ಪರಿಕ್ಷೆ ಬಿಟ್ಟು ಹೊರಕ್ಕೆ ನಡೆದಿದ್ದಾರೆ. ಹಿಜಬ್ ಬಿಟ್ಟು ಕ್ಲಾಸ್‍ಗೆ ಬರಲ್ಲ ಎಂದು ಪರೀಕ್ಷೆ ಬಿಟ್ಟು 08 ವಿದ್ಯಾರ್ಥಿಗಳು ಮನೆಗೆ ಹೋಗಿದ್ದಾರೆ.

    ಬಳಿಕ ನಗರದ ಜ್ಯೂನಿಯರ್ ಪಿಯು ಕಾಲೇಜು ವಿದ್ಯಾರ್ಥಿನಿ ಅಸ್ರಾ ಮಾಧ್ಯಮದವರೊಂದಿಗೆ ಮಾತನಾಡಿ, ಹೈಕೋರ್ಟ್ ಆದೇಶ ಬಂದರೂ ನಾವು ಹಿಜಬ್ ಧರಿಸುತ್ತೆವೆ, ನಮಗೆ ಶಿಕ್ಷಣ ಹಾಗೂ ಹಿಜಬ್ ಕೂಡ ಮುಖ್ಯವಾಗಿದೆ. ನಾವು ಹಿಜಬ್ ತೆಗೆಯಲ್ಲ. ಹಿಜಬ್ ಧರಿಸಿ ಪೂರಕ ಪರೀಕ್ಷೆ ಬರೆಯುತ್ತೆವೆ. ಹಿಜಬ್ ತೆಗೆದು ಪರೀಕ್ಷೆ ಬರೆಬೇಕೆಂದರೆ ನಾವು ಪರೀಕ್ಷೆ ಬರೆಯಲ್ಲ, ಹಿಜಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕೆಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಖೇಲ್ ಖತಂ, ನಾಟಕ್ ಬಂದ್, ಶಾಲೆಗೆ ಹಿಂತಿರುಗಿ: ಮಾಳವಿಕಾ ಅವಿನಾಶ್

    ಕೆಂಬಾವಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಶಕುಂತಲಾ ಮಾತನಾಡಿ, ನಾವು ಕೋರ್ಟ್ ಆದೇಶ ಪಾಲಿಸಿ ಅಂತ ಹೇಳಿದ್ದೇವೆ. ನಾವು ಬಹಳಷ್ಟು ಮನವೋಲಿಸಿದರೂ ವಿದ್ಯಾರ್ಥಿನಿಯರು ನಮ್ಮ ಮಾತು ಕೇಳಲಿಲ್ಲ. ಹಿಜಬ್ ಹಾಕೊಂಡೇ ಬರುವುದಾಗಿ ಪಟ್ಟು ಹಿಡಿದಿದ್ದಾರೆ. ಅದಕ್ಕೆ ಅವರು ಕ್ಲಾಸ್ ಬಿಟ್ಟು ಹೋಗಿದ್ದಾರೆ ಎಂದರು. ಇದನ್ನೂ ಓದಿ: ಹಿಜಬ್ ಇಸ್ಲಾಂ ಆಚರಣೆಯಲ್ಲ ಅನ್ನೋ ಕೋರ್ಟ್ ತೀರ್ಪಿಗೆ ಪ್ರತಿಕ್ರಿಯಿಸಲ್ಲ: ಯು.ಟಿ.ಖಾದರ್

    ಅಲ್ಲದೆ ಪರೀಕ್ಷೆಗೆ ಬಂದಾಗ ಹಿಜಬ್ ತೆಗೆದು ಕುಳಿತುಕೊಳ್ಳಿ ಎಂದಾಗ ವಿದ್ಯಾರ್ಥಿನಿಯರು ತೆಗೆಯಲ್ಲ ಅಂದಿದ್ದಾರೆ. ಕೋರ್ಟ್ ಆದೇಶ ಬರುವವರೆಗೂ ಕಾಯ್ತೀವಿ ಅಂತ ಅಂದಿದ್ದರು. ಕೋರ್ಟ್ ಆದೇಶ ಬಂದಾಗ ಕ್ಲಾಸ್ ಬಿಟ್ಟು ಹೋಗುತ್ತೇವೆ ಅಂತ ಬಿಟ್ಟು ಹೋಗಿದ್ದಾರೆ. ನಾವು ಬುರ್ಖಾ, ಹಿಜಬ್ ಬಿಟ್ಟು ತರತಿಗೆ ಬರಲ್ಲ ಅಂತ ಹೇಳಿದ್ದಾರೆ. ಒಟ್ಟು 35 ಜನ ವಿದ್ಯಾರ್ಥಿನಿಯರು ಕ್ಲಾಸ್ ಬಹಿಷ್ಕರಿಸಿದ್ದಾರೆ. ಕೆಲವು ಜನ ವಿದ್ಯಾರ್ಥಿನಿಯರು ತರಗತಿಗೆ ಹಾಜರಾಗಿದ್ದಾರೆ. ನಾವು ಮತ್ತು ಪೋಲಿಸ್ ಇಲಾಖೆಯವರು ಮನವೋಲಿಸಿದ್ದೇವೆ. ಆದರೆ ಅವರು ದಿಕ್ಕರಿಸಿ ಹೊರ ನಡೆದಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಐತಿಹಾಸಿಕ ತೀರ್ಪು..?: ಹಿಜಬ್ ಇಸ್ಲಾಂ ಅಗತ್ಯವಾದ ಆಚರಣೆ ಅಲ್ಲ ಎಂದು ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಅಷ್ಟೇ ಅಲ್ಲದೇ ಸರ್ಕಾರದ ಸಮವಸ್ತ್ರ ಆದೇಶವನ್ನು ಎತ್ತಿ ಹಿಡಿದಿದೆ. ಎಲ್ಲರೂ ಕೋರ್ಟ್ ಆದೇಶವನ್ನು ಪಾಲಿಸಬೇಕು ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾ. ಕೃಷ್ಣ ಎಸ್ ದೀಕ್ಷಿತ್ ಹಾಗೂ ಜೈಬುನ್ನೀಸಾ ಎಂ ಖಾಜಿ ನೇತೃತ್ವದ ಪೀಠ ಮನವಿ ಮಾಡಿದೆ. ಅಷ್ಟೇ ಅಲ್ಲದೇ ಸರ್ಕಾರದ ಆದೇಶವನ್ನು ಪ್ರಶ್ನಿಸಿ ತರಗತಿಗಳಲ್ಲಿ ಹಿಜಬ್ ಧರಿಸಲು ಅನುಮತಿ ಕೋರಿ ಸಲ್ಲಿಸಲಾಗಿದ್ದ ಎಲ್ಲ ಅರ್ಜಿಯನ್ನು ಪೀಠ ವಜಾ ಮಾಡಿದೆ.

  • ಯೋಗ ಸಂದೇಶದ ಮೂಲಕ ಹೊಸ ವರ್ಷ ಬರಮಾಡಿಕೊಂಡ ವಿದ್ಯಾರ್ಥಿಗಳು

    ಯೋಗ ಸಂದೇಶದ ಮೂಲಕ ಹೊಸ ವರ್ಷ ಬರಮಾಡಿಕೊಂಡ ವಿದ್ಯಾರ್ಥಿಗಳು

    ಯಾದಗಿರಿ: ಹೊಸ ವರ್ಷದ ಮೊದಲ ದಿನ ಹಿನ್ನೆಲೆ, ಯೋಗ ಮಾಡುವುದರ ಮೂಲಕ ಹೊಸ ವರ್ಷವನ್ನು ವಿದ್ಯಾರ್ಥಿಗಳು ಸ್ವಾಗತಿಸಿದ್ದಾರೆ.

    ಶಹಾಪೂರ ತಾಲೂಕಿನ ಚಟ್ನಳ್ಳಿಯ ಬ್ರಿಲಿಯಂಟ್ ಶಾಲೆಯ ಮಕ್ಕಳು ಯೋಗದ ಅರಿವು ಮೂಡಿಸುವ ಮೂಲಕ ವಿಶಿಷ್ಟವಾಗಿ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ. ಶಾಲಾ ಮೈದಾನದಲ್ಲಿ ವಿಭಿನ್ನವಾಗಿ ನಿಂತುಕೊಂಡು 2022 ಸಂಖ್ಯೆಯನ್ನು ಸೃಷ್ಟಿಸಿದ್ದಾರೆ. ಮಕ್ಕಳಿಗೆ ಶಿಕ್ಷಕರು ಸಹ ಸಾಥ್ ನೀಡಿದ್ದಾರೆ. ಇದನ್ನೂ ಓದಿ: ಹೊಸ ವರ್ಷವನ್ನು ಅದ್ದೂರಿಯಾಗಿ ಆಚರಿಸಿದ ದಕ್ಷಿಣ ಭಾರತದ ಸಿನಿ ತಾರೆಯರು

    ಆರೋಗ್ಯಕರ ಯೋಗ ಮಾಡುವುದರ ಮೂಲಕ ಪ್ರತಿಯೊಬ್ಬರೂ ಉತ್ತಮ ಆರೋಗ್ಯ ಜೀವನ ಹೊಂದಬೇಕು ಅಂತ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹೊಸ ವರ್ಷದ ಶುಭಾಶಯದ ಜೊತೆಗೆ ಸಂದೇಶ ಕೋರಿದರು. ಇದನ್ನೂ ಓದಿ: ಶಾಸಕ ರಾಜೂಗೌಡರಿಗೆ ಪಿತೃವಿಯೋಗ

  • ಶಾಸಕ ರಾಜೂಗೌಡರಿಗೆ ಪಿತೃವಿಯೋಗ

    ಶಾಸಕ ರಾಜೂಗೌಡರಿಗೆ ಪಿತೃವಿಯೋಗ

    ಯಾದಗಿರಿ: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಶಾಸಕ ರಾಜೂಗೌಡ ತಂದೆ ಶಂಭನ ಗೌಡ(75) ನಿಧನರಾಗಿದ್ದಾರೆ.

    ಕಳೆದ 7-8 ತಿಂಗಳುಗಳಿಂದ ಶಂಭನಗೌಡರು ಪಾರ್ಶ್ವವಾಯುನಿಂದ ಬಳಲಲುತ್ತಿದ್ದರು. ಇಂದು ಸುರಪುರದ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಮೃತ ಶಂಭನಗೌಡರು ಪುತ್ರ ರಾಜೂಗೌಡ, ಹಣಮಂತ್ರಾಯಗೌಡ ಮತ್ತು ಮಗಳು ಮೈತ್ರಾದೇವಿಯನ್ನು ಅಗಲಿದ್ದಾರೆ. ಇದನ್ನೂ ಓದಿ: ಹೊಸ ವರ್ಷವನ್ನು ಅದ್ದೂರಿಯಾಗಿ ಆಚರಿಸಿದ ದಕ್ಷಿಣ ಭಾರತದ ಸಿನಿ ತಾರೆಯರು

    ಅಬಕಾರಿ ಇಲಾಖೆಯಲ್ಲಿ 35 ವರ್ಷ ಸೇವೆಸಲ್ಲಿಸಿ, ಶಂಭನ ಗೌಡ ಸ್ವಯಂ ನಿವೃತ್ತಿ ಹೊಂದಿದ್ದರು. ಅಂತ್ಯಕ್ರಿಯೆ ನಾಳೆ ಸ್ವಗ್ರಾಮ ಕೊಡೇಕಲ್‍ನಲ್ಲಿ ನಡೆಯಲಿದೆ ಎಂದು ಶಾಸಕ ರಾಜೂಗೌಡ ಕುಟುಂಬಸ್ಥರು ತಿಳಿಸಿದ್ದಾರೆ.

  • ಓಮಿಕ್ರಾನ್ ಬಾರದಂತೆ ಬೇವಿನ ಮರಕ್ಕೆ ಭರ್ಜರಿ ಪೂಜೆ

    ಓಮಿಕ್ರಾನ್ ಬಾರದಂತೆ ಬೇವಿನ ಮರಕ್ಕೆ ಭರ್ಜರಿ ಪೂಜೆ

    -ಗಾಳಿ ಸುದ್ದಿ ನಂಬಿ ಗ್ರಾಮೀಣ ಭಾಗದಲ್ಲಿ ಮೌಢ್ಯತೆ ಆಚರಣೆ

    ಯಾದಗಿರಿ: ದೇಶದಲ್ಲಿ ಕೊರೊನಾ ಮೂರನೇ ಅಲೆ ಮತ್ತು ಓಮಿಕ್ರಾನ್ ವೈರಸ್ ಆತಂಕದ ಹೆಚ್ಚಾಗಿದೆ. ಓಮಿಕ್ರಾನ್ ತಡೆಗಟ್ಟಲು ಇಡೀ ವೈದ್ಯಕೀಯ ಲೋಕವೆ ತಲೆ ಕೆಡಿಸಿಕೊಂಡಿದೆ. ಆದರೆ ಯಾದಗಿರಿಯಲ್ಲಿ ಮಾತ್ರ ಓಮಿಕ್ರಾನ್ ಬಾರದಂತೆ ಬೇವಿನ ಮರಕ್ಕೆ ಭರ್ಜರಿ ಪೂಜೆ ಮಾಡಲಾಗಿದೆ.

    ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಓಮಿಕ್ರಾನ್ ಮಾರಮ್ಮ ಬಾರದಂತೆ ಇಂದು, ಬೇವಿನ ಮರಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಲಾಗಿದೆ. ಕೋವಿಡ್ ಮೂರನೇ ಅಲೆ ಬಾರದಂತೆ ಬೇವಿನ ಮರಕ್ಕೆ ಪೂಜೆ ಮಾಡಲು ಗ್ರಾಮೀಣ ಜನ ಮುಂದಾಗಿದ್ದಾರೆ. ಬೇವಿನ ಮರಕ್ಕೆ ಪೂಜೆ ಮಾಡಿ ಹೊಳಿಗೆ ಎಡೆಯಿಡಲಾಯಿತ್ತು. ಇದನ್ನೂ ಓದಿ  ಕೊರೊನಾ ಆತಂಕ- ಯಾದಗಿರಿಯಲ್ಲಿ ಸಿದ್ಧವಾಯ್ತಿ ಹೈಟೆಕ್ ಐಸಿಯು ವಾರ್ಡ್

    ಓಮಿಕ್ರಾನ್ ಮಕ್ಕಳಿಗೆ ಬರಬೇಕಿತ್ತು, ಆದರೆ ಬೇವಿನ ಮರಕ್ಕೆ ಬಂದಿದೆ. ಬೇವಿನ ಮರ ಓಮಿಕ್ರಾನ್ ರೋಗವನ್ನು ತಾನು ತೆಗೆದುಕೊಂಡು, ಮನುಷ್ಯ ಕುಲವನ್ನು ಉಳಿಸಿದೆ ಅಂತ ಯಾರೋ ಸ್ವಾಮೀಜಿ ಹೇಳಿದ್ದಾರೆಂಬ ಗಾಳಿ ಸುದ್ದಿ ಹಬ್ಬಿದೆ. ಈ ಗಾಳಿ ಸುದ್ದಿ ನಂಬಿ ಜನರು ಈ ರೀತಿಯ ಮೌಢ್ಯತೆ ಆಚರಣೆಯಲ್ಲಿ ತೊಡಗಿದ್ದಾರೆ. ಇದನ್ನೂ ಓದಿ: ವಿಚ್ಛೇದನದ ಬಳಿಕ ಕುಗ್ಗಿಹೋಗಿ, ಸಾಯುವ ಹಂತ ತಲುಪುತ್ತೇನೆ ಎಂದುಕೊಂಡಿದ್ದೆ: ಸಮಂತಾ

  • ಕೊರೊನಾ ಆತಂಕ- ಯಾದಗಿರಿಯಲ್ಲಿ ಸಿದ್ಧವಾಯ್ತು ಹೈಟೆಕ್ ಐಸಿಯು ವಾರ್ಡ್

    ಕೊರೊನಾ ಆತಂಕ- ಯಾದಗಿರಿಯಲ್ಲಿ ಸಿದ್ಧವಾಯ್ತು ಹೈಟೆಕ್ ಐಸಿಯು ವಾರ್ಡ್

    ಯಾದಗಿರಿ: ಕೊರೊನಾ ಮೂರನೇ ಅಲೆ ಆತಂಕ ಹಿನ್ನಲೆಯಲ್ಲಿ, ಯಾದಗಿರಿ ಜಿಲ್ಲಾಡಳಿತ ಫುಲ್ ಅಲರ್ಟ್ ಆಗಿದೆ. ಯಾವುದೇ ಕ್ಷಣದಲ್ಲಿ ತುರ್ತುಸ್ಥಿತಿ ಉಂಟಾದ್ರೆ ಅದನ್ನು ಎದುರಿಸುವ ನಿಟ್ಟಿನಲ್ಲಿ, ಫುಲ್ ಹೈಟೆಕ್ ಐಸಿಯು ವಾರ್ಡ್‍ಗಳನ್ನು ಸಿದ್ಧಮಾಡಿಕೊಂಡಿದೆ.

    ಯಾದಗಿರಿ ನೂತನ ಜಿಲ್ಲಾಸ್ಪತ್ರೆಯಲ್ಲಿ ಸುಮಾರು 50ಕ್ಕೂ ಅಧಿಕ ಆಕ್ಸಿಜನ್ ಬೇಡ್ ಮತ್ತು ವೈದ್ಯಕೀಯ ಚಿಕಿತ್ಸೆಗೆ ಹೈಟೆಕ್ ಯಂತ್ರಗಳನ್ನು ಸಿದ್ಧಪಡಿಸಲಾಗಿದೆ. ಮೂರು ವಿಶೇಷ ಕೊಠಡಿಯಲ್ಲಿ ಬೆಡ್‍ಗಳ ಸಿದ್ಧತೆಯಾಗಿದೆ. ಇದನ್ನೂ ಓದಿ: ತಾಯಿಯೊಂದಿಗೆ ಸೇರಿ ಅಕ್ಕನನ್ನು ಕೊಂದ ತಮ್ಮ- ಕತ್ತರಿಸಿದ ತಲೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ವಿಕೃತಿ

    ವಾರ್ಡ್ ನೋಡಿಕೊಳ್ಳಲು ವಿಶೇಷ ವೈದ್ಯರು ನೇಮಕ ಸಹ ಮಾಡಿಕೊಳ್ಳಲಾಗಿದೆ. ಕಳೆದ ಬಾರಿ ಮಾಡಿಕೊಂಡ ಎಡವಟ್ಟಿಂದ ಪಾಠ ಕಲಿತಿರುವ ಅಧಿಕಾರಿಗಳು ಕಠಿಣ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಇದನ್ನೂ ಓದಿ: ವಿಚ್ಛೇದನದ ಬಳಿಕ ಕುಗ್ಗಿಹೋಗಿ, ಸಾಯುವ ಹಂತ ತಲುಪುತ್ತೇನೆ ಎಂದುಕೊಂಡಿದ್ದೆ: ಸಮಂತಾ

  • ನಾನು ಸೋತ್ರು ಪರವಾಗಿಲ್ಲ, ನಮ್ಮ MLC ಅಭ್ಯರ್ಥಿಯನ್ನು ಗೆಲ್ಲಿಸಿ ಸೇಡು ತೀರಿಸಿಕೊಳ್ಳಬೇಕು: ಮಲ್ಲಿಕಾರ್ಜುನ ಖರ್ಗೆ

    ನಾನು ಸೋತ್ರು ಪರವಾಗಿಲ್ಲ, ನಮ್ಮ MLC ಅಭ್ಯರ್ಥಿಯನ್ನು ಗೆಲ್ಲಿಸಿ ಸೇಡು ತೀರಿಸಿಕೊಳ್ಳಬೇಕು: ಮಲ್ಲಿಕಾರ್ಜುನ ಖರ್ಗೆ

    -ನನ್ನನ್ನು ಯಾದಗಿರಿ, ಗುರುಮಿಠಕಲ್ ಜನ ಕೈಬಿಟ್ರು RSS ಜೊತೆ ಸೇರಿ ಕುತಂತ್ರ ಮಾಡಿ ನನ್ನನ್ನು ಸೋಲಿಸಿದ್ರು

    ಯಾದಗಿರಿ: ನಮ್ಮನ್ನು ಯಾದಗಿರಿ ಮತ್ತು ಗುರುಮಿಠಕಲ್ ಜನ ಕೈಬಿಟ್ಟರು, RSS ಜೊತೆ ಸೇರಿ ಕುತಂತ್ರ ಮಾಡಿ ನನ್ನನ್ನು ಸೋಲಿಸಿದರು. ನಾನು ಸೋತ್ರು ಪರವಾಗಿಲ್ಲ ನಮ್ಮ MLC ಅಭ್ಯರ್ಥಿಯನ್ನು ಗೆಲ್ಲಿಸಿ ಸೇಡು ತೀರಿಸಿಕೊಳ್ಳಬೇಕು ಅಂತ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದಾರೆ.

    ವಿಧಾನ ಪರಿಷತ್ ಚುನಾವಣೆ ಸಮಾವೇಶವನ್ನುದ್ದೇಶಿ ಈ ಬಗ್ಗೆ ಯಾದಗಿರಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರಿಗೆ ಹೇಳಲು ಏನು ಇಲ್ಲ, ನಾವು ಮಾಡಿದ ಕೆಲಸವನ್ನು ಮುಂದುವರೆಸಿಕೊಂಡು ಹೋಗುವ ಶಕ್ತಿಯೂ ಇಲ್ಲ. ಹಲವಾರು ಅಭಿವೃದ್ಧಿ ಕೆಲಸಗಳು ನಿಂತು ಹೋಗಿವೆ. ಕೆಲವೇ ಭಾಗಕ್ಕೆ ಹಣ ಕೊಡುತ್ತಿದ್ದಾರೆ. ಹಾಗಾದರೆ ಈ ರಾಜ್ಯದ ಅಭಿವೃದ್ಧಿ ಹೇಗೆ ಸಾಧ್ಯ? ಮನುಷ್ಯ ಆರೋಗ್ಯವಾಗಿರಬೇಕಾದರೆ ಮನುಷ್ಯನ ದೇಹದ ಎಲ್ಲಾ ಅಂಗಗಳು ಎಲ್ಲಾ ಸರಿ ಇರಬೇಕು. ಎಲ್ಲಾ ಕಡೆ ಸಮನಾದ ಅನುದಾನ ಕೊಡಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ:  ರಾಜ್‌ ಕುಟುಂಬದಿಂದ ಗಂಧದಗುಡಿ‌ಯ 3ನೇ ಪ್ರಯೋಗ

    ಕೇಂದ್ರ ಸಚಿವನ ಮಗ ರೈತರ ಮೇಲೆ ಜೀಪ್ ನಿಂದ ಗುದ್ದಿ ಸಾಯಿಸಿದ ಇದನ್ನು ಯಾರಾದರೂ ಕೇಳಿದ್ರಾ?. ರೈತರ ಹತ್ತಿರ ಹೋಗಿ ಮಾತನಾಡಿಲ್ಲ, ಕಾನೂನು ಬಹಳ ಒಳ್ಳೆಯದಿದೆ, ಅವರನ್ನ ಮನವೋಲಿಸಲಾಗಲಿಲ್ಲ, ಉತ್ತರಪ್ರದೇಶ, ಪಂಜಾಬ್, ಉತ್ತರಾಖಂಡ್ ಎಲೆಕ್ಷನ್‍ನಿಂದ ಕೃಷಿ ಕಾಯ್ದೆ ವಾಪಸ್ ತೆಗೆದುಕೊಂಡಿದ್ದಾರೆ. 700 ಮಂದಿ ರೈತರು ಹೋರಾಟದಲ್ಲಿ ಪ್ರಾಣ ಕಳೆದುಕೊಂಡರು ಅವರ ಮಕ್ಕಳನ್ನು ಯಾರು ನೋಡಿಕೊಳ್ಳುತ್ತಾರೆ? ಅವರ ವಿಧ್ಯಾಭ್ಯಾಸಕ್ಕೆ ಯಾರು ಹೊಣೆ ಎಂದು ಆಢಳಿತ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ:  ಅಪ್ಪು ಕನಸು ನನಸು- ಗಂಧದ ಗುಡಿ ಸಾಕ್ಷ್ಯಚಿತ್ರದ ಟೈಟಲ್ ಟೀಸರ್ ಔಟ್

  • ಕಳಪೆ ಆಹಾರ ವಿತರಣೆ ಸಮಸ್ಯೆ ಡಿಸಿಗೆ ಹೇಳಲು 10 ಕಿ.ಮೀ ನಡೆದ ವಿದ್ಯಾರ್ಥಿನಿಯರು

    ಕಳಪೆ ಆಹಾರ ವಿತರಣೆ ಸಮಸ್ಯೆ ಡಿಸಿಗೆ ಹೇಳಲು 10 ಕಿ.ಮೀ ನಡೆದ ವಿದ್ಯಾರ್ಥಿನಿಯರು

    ಯಾದಗಿರಿ: ವಸತಿ ಶಾಲೆಯಲ್ಲಿ ನೀಡುತ್ತಿರುವ ಕಳಪೆ ಆಹಾರ ವಿತರಣೆ ಸಮಸ್ಯೆಯನ್ನು ವಿದ್ಯಾರ್ಥಿನಿಯರು ಡಿಸಿಗೆ ಹೇಳಲು 10 ಕಿ.ಮೀ ನಡೆದು ಜಿಲ್ಲಾಧಿಕಾರಿ ಆಫೀಸ್‍ಗೆ ಬಂದಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.

    ಯಾದಗಿರಿ ತಾಲೂಕಿನ ಮುಂಡರಗಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ, ಕಳಪೆ ಆಹಾರ ನೀಡುತ್ತಿರುವ ಹಿನ್ನೆಲೆ ವಿದ್ಯಾರ್ಥಿಗಳು ಇಂದು ಬೆಳಿಗ್ಗೆ ಊಟ ಮಾಡದೆ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ 7 ವಿದ್ಯಾರ್ಥಿನಿಯರು ಅಸ್ವಸ್ಥಗೊಂಡು ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: 5-6 ದಿನ ಪುನೀತ್ ಸಮಾಧಿ ಬಳಿ ಯಾರನ್ನೂ ಬಿಡಲ್ಲ: ಅರಗ ಜ್ಞಾನೇಂದ್ರ

    ಒಂದು ಕಡೆ ವಿದ್ಯಾರ್ಥಿನಿಯರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರೆ, ಮತ್ತೊಂದೆಡೆ ವಿದ್ಯಾರ್ಥಿನಿಯರು ವಸತಿ ಶಾಲೆಯಿಂದ ಯಾದಗಿರಿ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ವಾರ್ಡನ್ ಹಾಗೂ ಪ್ರಾಂಶುಪಾಲರನ್ನು ಬದಲಾವಣೆ ಮಾಡಬೇಕೆಂದು ಒತ್ತಾಯ ಮಾಡಿದರು. ಸುಮಾರು 10ಕಿ.ಮೀ ವರಗೆ ನಡೆದುಕೊಂಡು ಬಂದು ಪ್ರತಿಭಟನೆ ನಡೆಸಿದರು. ಇದನ್ನೂ ಓದಿ:  ಕಾಂಗ್ರೆಸ್‍ನವರು ಮತದಾರರಿಗೆ ನೇರವಾಗಿ ಹಣ ಹಂಚಿದ್ದಾರೆ: ಈಶ್ವರಪ್ಪ

    ವಸತಿ ಶಾಲೆಯಲ್ಲಿ ಗುಣಮಟ್ಟದ ಆಹಾರ, ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಈ ಕೂಡಲೇ ಸಮಸ್ಯೆ ಬಗೆ ಹರಿಸಬೇಕೆಂದು ಪ್ರತಿಭಟನೆ ನಿರತ ವಿದ್ಯಾರ್ಥಿನಿಯರು ಆಗ್ರಹಿಸಿದ್ದಾರೆ. ಈ ವೇಳೆ ಅಪರ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ ಅವರು ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ ಕೂಡಲೇ ಸಮಸ್ಯೆ ಬಗೆಹರಿಸಲಾಗುತ್ತದೆಂದು ಭರವಸೆಯನ್ನು ನೀಡಿದ್ದಾರೆ. ಇದನ್ನೂ ಓದಿ:  ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯವನ್ನ ಸಹಜ ಎನ್ನುವ ರೀತಿ ಬಿಂಬಿಸುವ ಕೆಲಸ ನಡೆಯುತ್ತಿದೆ: ಸಿ.ಟಿ.ರವಿ

  • ಕ್ಲಾಸ್ ರೂಮ್‍ನಲ್ಲಿ ಒಬ್ಬನೇ ಒಬ್ಬ ವಿದ್ಯಾರ್ಥಿ- ಶಾಲೆಗೆ ಚಕ್ಕರ್ ಕೂಲಿಗೆ ಹಾಜರ್

    ಕ್ಲಾಸ್ ರೂಮ್‍ನಲ್ಲಿ ಒಬ್ಬನೇ ಒಬ್ಬ ವಿದ್ಯಾರ್ಥಿ- ಶಾಲೆಗೆ ಚಕ್ಕರ್ ಕೂಲಿಗೆ ಹಾಜರ್

    ಯಾದಗಿರಿ: ಶಾಲೆಗೆ ಬರದೇ ಮಕ್ಕಳು ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಶಾಲೆ ಓಪನ್ ಆದ್ರೂ ಶಾಲೆ ಕಡೆ ಮುಖ ಮಾಡದ ವಿದ್ಯಾರ್ಥಿಗಳು, ಶಾಲೆಗೆ ಗೈರು ಕೂಲಿಗೆ ಹೋಗುತ್ತಿದ್ದಾರೆ. ಆರ್ಥಿಕ ಸಂಕಷ್ಟದಿಂದ ಯಾದಗಿರಿ ಜಿಲ್ಲೆಯ ವಿದ್ಯಾರ್ಥಿಗಳು ಬಾಲಕಾರ್ಮಿಕರಾಗುತ್ತಿದ್ದಾರೆ.

    ಇಡೀ ಕ್ಲಾಸ್ ರೂಮ್‍ನಲ್ಲಿ ಒಬ್ಬನೇ ಒಬ್ಬ ವಿದ್ಯಾರ್ಥಿ ಆರನೇ ತರಗತಿಯಲ್ಲಿ ಒಬ್ಬ ವಿದ್ಯಾರ್ಥಿ, ಏಳನೇ ತರಗತಿಯಲ್ಲಿ ನಾಲ್ಕು ಮಕ್ಕಳು ಇದ್ದರು. ಉಳಿದ ಮಕ್ಕಳು ಕೂಲಿ ಕೆಲಸಕ್ಕೆ ಹೋಗುತ್ತಿದ್ದರು,ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಸಂಬರ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪರಿಸ್ಥಿತಿಯನ್ನು,ಹೇಳೊರಿಲ್ಲ ಕೇಳೋರಿಲ್ಲ ಎಂಬುವಂತಾಗಿದೆ. ಅಮಿತ್ ಶಾಗೆ ವಿಶ್ ಮಾಡಿ ಟ್ರೋಲ್‍ಗೊಳಗಾದ ನಟಿ ಸಾರಾ ಅಲಿಖಾನ್

    ಈ ಶಾಲೆಯಲ್ಲಿ ಸುಮಾರು 250 ಮಕ್ಕಳ ದಾಖಲಾತಿದ್ದು, 6 ನೇ ತರಗತಿಯಲ್ಲಿ ಒಬ್ಬ ವಿದ್ಯಾರ್ಥಿ ಶಾಲೆಗೆ ಬಂದ್ರೆ ಇನ್ನೂಳಿದ 49 ವಿದ್ಯಾರ್ಥಿಗಳು ಕೆಲಸಕ್ಕೆ ಹೋಗುತ್ತಿದ್ದಾರೆ. 7ನೇ ತರಗತಿಯಲ್ಲಿ 60 ಮಕ್ಕಳಿದ್ದು, ಇದರಲ್ಲಿ 4 ಜನ ವಿದ್ಯಾರ್ಥಿಗಳು ಶಾಲೆಗೆ ಬರ್ತಿದ್ದಾರೆ. ಹಲವಾರು ದಿನಗಳಿಂದ ಇದೆ ಪರಿಸ್ಥಿತಿ ನಡಿತೀದ್ರೂ ಶಿಕ್ಷಕರು ಫುಲ್ ಸೈಲಂಟ್ ಆಗಿದ್ದಾರೆ.

    ಮಕ್ಕಳು ಕೂಲಿಗೆ ಹೋದ್ರು ಶಿಕ್ಷಣ ಇಲಾಖೆ ಮಾತ್ರ ಕಣ್ಮುಚ್ಚಿದೆ. ಮಕ್ಕಳ ಕೂಲಿ ಕೆಲಸವೇ ನೆಪಾವಗಿಟ್ಟುಕೊಂಡ ಟೀಚರ್ಸ್, ಕಾಟಾಚಾರಕ್ಕೆ ಶಾಲೆಗೆ ಬಂದು, ಹರಟೆ ಹೊಡೆದು ಮತ್ತೆ ಸಂಜೆ ಮನೆಯ ವಾಪಸ್ ಆಗತ್ತಾರೆ.

    ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್‌ನಲ್ಲಿ ಇದು ಬಯಲಾಗಿದೆ. ಉರಿ ಬಿಸಿಲು, ಜಡಿ ಮಳೆಯನ್ನದೇ ದಿನವಿಡೀ ಮಕ್ಕಳು ಹತ್ತಿ ಹೊಲದಲ್ಲಿ ದುಡಿಯುತ್ತಿದ್ದಾರೆ. ಸ್ವತಃ ಪೋಷಕರೇ ಮಕ್ಕಳನ್ನು ಕೂಲಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ಯಾದಗಿರಿ ಜಿಲ್ಲೆಯಾದ್ಯಂತ ಬಾಲ ಕಾರ್ಮಿಕರು ಹೆಚ್ಚುತ್ತಿದ್ದು, 150 ರೂ. ಕೂಲಿಗಾಗಿ ಈಡೀ ದಿನ ಶಾಲಾ ಮಕ್ಕಳು ದುಡಿವಂತಾಗಿದೆ.ಯಾದಗಿರಿ ಜಿಲ್ಲೆಯ ಗುರಮಿಠಕಲ್ ತಾಲೂಕಿನ ಸಂಬರ, ವಂಕಸಂಬರ ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಈ ಪರಿಸ್ಥಿತಿ ನಿರ್ಮಾಣವಾಗಿದೆ.

    ಇನ್ನೂ ಪೋಷಕರ ಒತ್ತಾಯಿಂದ ಕೂಲಿಗೆ ತೆರಳುತ್ತಿರುವ ವಿದ್ಯಾರ್ಥಿಗಳು ಶಾಲೆಯನ್ನು ನೆನದು ಕಣ್ಣೀರು ಹಾಕುತ್ತಿದ್ದಾರೆ. ಸರ್ ಶಾಲೆಗೆ ಹೋಗು ಅನ್ನಸತ್ತಿದೆ ಆದರೆ ಬಡತನ ಅದಕ್ಕೆ ಕೂಲಿಗೆ ಬಂದೆ. ನಮ್ಮ ಸರ್, ಗೆಳೆಯರು ನೆನಪಾಗುತ್ತಾರೆ, ಕೂಲಿ ಮಾಡೋಕೆ ಕಷ್ಟ ಆಗುತ್ತಿದೆ ಎಂದು ಪಬ್ಲಿಕ್ ಟಿವಿ ಕ್ಯಾಮರಾ ಎದುರು ಮುಗ್ಧ ವಿದ್ಯಾರ್ಥಿಗಳ ಅಳಲು ತೋಡಿಕೊಂಡಿದ್ದಾರೆ.