Tag: Yadgiri

  • ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ

    ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ

    ಯಾದಗಿರಿ: ಸಾಲಬಾಧೆ (Debt) ತಾಳಲಾರದೆ ಮನನೊಂದು ರೈತನೋರ್ವ ನೇಣು ಬಿಗಿದು ಆತ್ಮಹತ್ಯೆಗೆ (Suicide) ಶರಣಾದ ಘಟನೆ ಯಾದಗಿರಿಯಲ್ಲಿ (Yadgiri) ನಡೆದಿದೆ.

    ಜಿಲ್ಲೆಯ ಹುಣಸಗಿ (Hunasagi) ತಾಲೂಕಿನ ಕನ್ನೆಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಅಮರಣ್ಣ ಕುಂಬಾರ (60) ಆತ್ಮಹತ್ಯೆಗೆ ಶರಣಾದ ರೈತ. ಇವರು ಬ್ಯಾಂಕ್ ಹಾಗೂ ಖಾಸಗಿ ಸೇರಿದಂತೆ 10 ಲಕ್ಷಕ್ಕೂ ಅಧಿಕ ಹಣವನ್ನು ಸಾಲಮಾಡಿದ್ದರು. ಅಲ್ಲದೇ ಬೆಳೆ ಸರಿಯಾಗಿ ಬಾರದೇ ಸಾಲ ತೀರಿಸಲು ಪರದಾಡುತ್ತಿದ್ದರು. ಹೀಗಾಗಿ ತನ್ನ 8 ಎಕರೆ ಜಮೀನನ್ನು ಖಾಸಗಿಯವರಿಗೆ ಸಾಲಕ್ಕೆ ಬರೆದುಕೊಟ್ಟಿದ್ದರು. ಇದನ್ನೂ ಓದಿ: ಹೈಟೆನ್ಷನ್ ತಂತಿ ತಾಗಿ 13ರ ಬಾಲಕಿ ಸಾವು

    ಇದರಿಂದ ಮನನೊಂದ ಅವರು, ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಆಸ್ತಿಯಲ್ಲಿ ಪಾಲು ಕೇಳಬಹುದೆಂದು ಮರಿಮೊಮ್ಮಗನನ್ನೇ ಮುಗಿಸಿದ ಅಜ್ಜ!

  • ಯಾದಗಿರಿಯಲ್ಲಿ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ಗಲಾಟೆ – 2 ದಿನಗಳ ಕಾಲ ನಿಷೇಧಾಜ್ಞೆ ಜಾರಿ

    ಯಾದಗಿರಿಯಲ್ಲಿ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ಗಲಾಟೆ – 2 ದಿನಗಳ ಕಾಲ ನಿಷೇಧಾಜ್ಞೆ ಜಾರಿ

    ಯಾದಗಿರಿ: ಯಾದಗಿರಿ (Yadgiri) ಜಿಲ್ಲೆಯಲ್ಲಿ ಮತದಾನ ಪೂರ್ಣಗೊಳ್ಳುವ ವೇಳೆ ಕಾಂಗ್ರೆಸ್ (Congress) ಮತ್ತು ಬಿಜೆಪಿ (BJP) ಕಾರ್ಯಕರ್ತರ ನಡುವೆ ಗಲಾಟೆ ನಡೆದಿದ್ದು, ಕೆಂಭಾವಿ ಮತ್ತು ಸುರಪುರ ಪಟ್ಟಣಗಳಲ್ಲಿ 2 ದಿನಗಳ ಕಾಲ ಸೆಕ್ಷನ್ 144 ಜಾರಿ ಮಾಡಲಾಗಿದೆ.

    ಜಿಲ್ಲೆಯಲ್ಲಿ ಮೇ 10ರಂದು ಬೆಳಗ್ಗೆಯಿಂದ ಸಂಜೆಯವರೆಗೆ ಶಾಂತಿಯುತವಾಗಿ ಮತದಾನ (Voting) ಪ್ರಕ್ರಿಯೆ ನಡೆದಿತ್ತು. ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುವ ವೇಳೆ ಕೆಂಭಾವಿ (Kembhavi) ಮತ್ತು ಸುರಪುರ (Surapura) ಪಟ್ಟಣಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. ಈ ಗಲಾಟೆಯಲ್ಲಿ ಮೂವರು ಕಾಂಗ್ರೆಸ್ ಕಾರ್ಯಕರ್ತರಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದನ್ನೂ ಓದಿ: ಒಂದೇ ಅವಧಿಯಲ್ಲಿ ಒಬ್ಬ 2 ಅಸೆಂಬ್ಲಿ, 2 ಎಂಪಿ ಚುನಾವಣೆ ಎದುರಿಸಿದ್ರೆ ಅದು ನಾನೊಬ್ಬನೇ: ಪುಟ್ಟರಾಜು

    ಘಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಪರಿಸ್ಥಿತಿಯನ್ನು ಅವಲೋಕಿಸಿ 2 ದಿನಗಳ ಕಾಲ ಸೆಕ್ಷನ್ 144 ಜಾರಿಗೊಳಿಸಿ ಆದೇಶಿಸಿದ್ದಾರೆ. ಮೇ 10ರ ಸಂಜೆ 6 ಗಂಟೆಯಿಂದ ಮೇ 12ರ ಬೆಳಗ್ಗೆ 6 ಗಂಟೆಯವರೆಗೆ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಈ ಎರಡು ದಿನಗಳ ಕಾಲ ಪಟ್ರೋಲಿಂಗ್ ಮತ್ತು ಗಸ್ತು ಪಡೆ ಇಲ್ಲೇ ಠಿಕಾಣಿ ಹೂಡಲಿದೆ. ಇದನ್ನೂ ಓದಿ: ಸಿದ್ದರಾಮಯ್ಯ ನನಗಿಂತ ಗಟ್ಟಿ ಅಲ್ಲವೇ ಅಲ್ಲ: ಜಿಟಿಡಿ

    ನಿಷೇಧಾಜ್ಞೆ ಜಾರಿಯಿಂದಾಗಿ ಎರಡೂ ಪಟ್ಟಣಗಳಲ್ಲಿ 5ಕ್ಕಿಂತ ಹೆಚ್ಚು ಜನ ಗುಂಪು ಸೇರುವಂತಿಲ್ಲ. ಎಲ್ಲರೂ ಶಾಂತಿ ಹಾಗೂ ಸುವ್ಯವಸ್ಥೆಯನ್ನು ಕಾಪಾಡಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಯಾದಗಿರಿ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಖಡಕ್ ಸಂದೇಶ ರವಾನಿಸಿದ್ದಾರೆ. ಇದನ್ನೂ ಓದಿ: Maharashtra political crisis: ಉದ್ಧವ್‌ ಠಾಕ್ರೆ ಸರ್ಕಾರ ಮರುಸ್ಥಾಪಿಸಲು ಸಾಧ್ಯವಿಲ್ಲ – ಶಿಂಧೆ ಬಣಕ್ಕೆ ಸುಪ್ರೀಂ ರಿಲೀಫ್‌

  • ಧಮ್ ಇದ್ದರೆ ಮೀಸಲಾತಿಯನ್ನು ಮುಟ್ಟಿ ನೋಡಿ: ಕಾಂಗ್ರೆಸ್‌ಗೆ ಬೊಮ್ಮಾಯಿ ಸವಾಲು

    ಧಮ್ ಇದ್ದರೆ ಮೀಸಲಾತಿಯನ್ನು ಮುಟ್ಟಿ ನೋಡಿ: ಕಾಂಗ್ರೆಸ್‌ಗೆ ಬೊಮ್ಮಾಯಿ ಸವಾಲು

    – ಕಾಂಗ್ರೆಸ್‌ನವರು ನೀಡುತ್ತಿರೋದು ಗ್ಯಾರಂಟಿ ಕಾರ್ಡ್ ಅಲ್ಲ, ಅದು ಗಳಗಂಟಿ

    ಯಾದಗಿರಿ: ಸ್ವಾತಂತ್ರ‍್ಯ ಬಂದ ಮೇಲೆ ದೇಶ ಒಡೆದಿರಿ. ಆಮೇಲೆ ಸಮಾಜವನ್ನು ಒಡೆಯುವ ಕೆಲಸ ಮಾಡಿದ್ದೀರಿ. ವೀರಶೈವ ಲಿಂಗಾಯತರನ್ನು ಒಡೆಯಲು ಹೋಗಿ ಮಣ್ಣು ಮುಕ್ಕಿದ್ದೀರಿ. ಈಗ ಅದೇ ತಪ್ಪನ್ನು ಮಾಡುತ್ತಿದ್ದೀರಿ. ತಾಕತ್ ಇದ್ದರೆ, ಧಮ್ ಇದ್ದರೆ ಮೀಸಲಾತಿಯನ್ನು (Reservation) ಮುಟ್ಟಿ ನೋಡಿ. ಈ ಕೇಸರಿ ಅಲೆಯನ್ನು ನಿಲ್ಲಿಸಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಕಾಂಗ್ರೆಸ್ (Congress) ನಾಯಕರಿಗೆ ಸವಾಲು ಹಾಕಿದರು.

    ಯಾದಗಿರಿ (Yadgiri) ಜಿಲ್ಲೆಯ ಶಹಪುರದಲ್ಲಿ ಬಿಜೆಪಿ (BJP) ಅಭ್ಯರ್ಥಿ ಅಮೀನರೆಡ್ಡಿ ಪಾಟೀಲ ಯಾಳಗಿ ಪರ ರೋಡ್ ಶೋ ನಡೆಸಿ ಮಾತನಾಡಿದ ಸಿಎಂ ಬೊಮ್ಮಾಯಿ, ಇಡೀ ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆ ಇದೆ. ಕಾಂಗ್ರೆಸ್‌ನ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರೂ ಬರಲಿ, ಲೋಕಲ್‌ನವರೂ ಬರಲಿ. ಕೇಸರಿ ಅಲೆಯನ್ನು ತಡೆಗಟ್ಟಲಿ ನೋಡೋಣ. ಇಷ್ಟು ವರ್ಷ ದೇಶವನ್ನು ಮೋಸ, ಸುಳ್ಳಿನಿಂದ ಕಾಂಗ್ರೆಸ್‌ನವರು ಆಳ್ವಿಕೆ ಮಾಡಿದ್ದಾರೆ. ಇನ್ನುಮುಂದೆ ನಿಮ್ಮ ಆಟ, ಸುಳ್ಳು ನಡೆಯುವುದಿಲ್ಲ ಎಂದು ಗುಡುಗಿದರು.

    ಜಾತಿ ಸಮೀಕ್ಷೆಗಾಗಿ 130 ಕೋಟಿ ರೂ. ಖರ್ಚು ಮಾಡಿದ್ದೀರಿ. ನಿಮಗೆ ತಾಕತ್ ಇಲ್ಲ. ಹೀಗಾಗಿ ಅದನ್ನು ಜಾರಿ ಮಾಡಲಿಲ್ಲ. ಆದರೆ ನಾವು ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಬಹುವರ್ಷಗಳ ಬೇಡಿಕೆಯನ್ನು ಈಡೇರಿಸಿದ್ದೇವೆ. ಸಮಾಜ ಒಡೆಯುವ ಇಚ್ಛೆ ನಮಗಿಲ್ಲ, ಅದು ಕಾಂಗ್ರೆಸ್‌ನವರ ಕೆಲಸ. ಶೇ.75 ರಷ್ಟು ಮೀಸಲಾತಿ ಕೊಡುತ್ತೇವೆ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೇಳುತ್ತಾರೆ. ಆದರೆ ಎಸ್‌ಸಿ, ಎಸ್‌ಟಿ ಮೀಸಲಾತಿ ಜಾರಿ ಮಾಡಲಿಲ್ಲ. 30 ವರ್ಷದ ಬೇಡಿಕೆಯನ್ನು ಈಡೇರಿಸಲಿಲ್ಲ. ಎಸ್‌ಸಿ, ಎಸ್‌ಟಿಯನ್ನು ಅವರ ಸರ್ಕಾರ ಇದ್ದಾಗ 5 ವರ್ಷ ಬಾವಿಯಲ್ಲಿ ಹಾಕಿದರು. ಆದರೆ ನಾವು ಎಸ್‌ಸಿ, ಎಸ್‌ಟಿ ಬೇಡಿಕೆ ಈಡೇರಿಸಿದ್ದೇವೆ. ಜೇನುಗೂಡಿಗೆ ಕೈ ಹಾಕಬೇಡಿ ಎಂದಿದ್ದರು. ನಾನು ಜೇನು ಹುಳ ಕಚ್ಚಿಸಿಕೊಂಡು ಜನರಿಗೆ ಒಳ್ಳೆದು ಮಾಡಿದ್ದೇನೆ ಎಂದು ಹೇಳಿದರು.

    ಕಾಂಗ್ರೆಸ್ ವೋಟ್ ಬ್ಯಾಂಕ್ ಛಿದ್ರವಾಗಿದೆ. ಎಲ್ಲಾ ಸಮುದಾಯದವರು ಬಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ. ಇದರಿಂದ ಕಾಂಗ್ರೆಸ್‌ನವರು ಹತಾಶೆಯಾಗಿದ್ದಾರೆ. ಲಿಂಗಾಯತರು ಭ್ರಷ್ಟರು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ನೀವು ಇದನ್ನೂ ಒಪ್ಪಿಕೊಳ್ಳುತ್ತೀರಾ ಎಂದು ಜನರನ್ನು ಪ್ರಶ್ನಿಸಿದ ಸಿಎಂ, ಕಾಂಗ್ರೆಸ್‌ನವರು ನೀಡುತ್ತಿರುವುದು ಗ್ಯಾರಂಟಿ ಕಾರ್ಡ್ ಅಲ್ಲ. ಅದು ಗಳಗಂಟಿ. ಮೇ 10ರ ನಂತರ ಅದು ಇರುವುದಿಲ್ಲ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಖರ್ಗೆ ಹೇಳಿಕೆಯಿಂದ ಬಿಜೆಪಿಗೆ 2-3% ಮತ ಹೆಚ್ಚಳವಾಗಲಿದೆ: ಸುಧಾಕರ್

    ಅಧಿಕಾರಕ್ಕಾಗಿ ಸಮಾಜವನ್ನು ಒಡೆಯುವ ಕೆಲಸವನ್ನು ಕಾಂಗ್ರೆಸ್‌ನವರು ಮಾಡುತ್ತಿದ್ದಾರೆ. ನಿಜವಾದ ಒಕ್ಕಲಿಗರು ಭಿಕ್ಷುಕರಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳುತ್ತಾರೆ. ಆದರೆ ನಾನು ಹೇಳುತ್ತೇನೆ, ಅವರು ಸಂವಿಧಾನ ಬದ್ಧ ಹಕ್ಕನ್ನು ಕೇಳುತ್ತಿದ್ದಾರೆ ಎಂದರು.

    ಸಿಎಂ ರೋಡ್ ಶೋನಲ್ಲಿ ನಟಿ ಶೃತಿ, ರಾಯಚೂರು ಸಂಸದ ರಾಜಾ ಅಮರೇಶ್ ನಾಯಕ್, ಶಾಸಕ ರಾಜೂಗೌಡ, ಬಿಜೆಪಿ ಅಭ್ಯರ್ಥಿ ಅಮೀನರೆಡ್ಡಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಶರಣಭೂಪಾಲರೆಡ್ಡಿ, ಡಾ. ಚಂದ್ರಶೇಖರ ಸುಬೇದಾರ್ ಇದ್ದರು. ರೋಡ್ ಶೋನಲ್ಲಿ 10 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗಿಯಾಗಿದ್ದರು. ಇದನ್ನೂ ಓದಿ: ಪುತ್ತಿಲ ಕಾಂಗ್ರೆಸ್, ಭಯೋತ್ಪಾದನೆ, ಲವ್ ಜಿಹಾದ್ ವಿರುದ್ಧ ಮಾತನಾಡಿಲ್ಲ: ಕಲ್ಲಡ್ಕ ಪ್ರಭಾಕರ ಭಟ್‌

  • ಯಾದಗಿರಿಯಲ್ಲಿ ಅಮಿತ್ ಶಾ ರೋಡ್ ಶೋ – ಬಿಜೆಪಿ ಅಭ್ಯರ್ಥಿ ವೆಂಕಟರೆಡ್ಡಿ ಮುದ್ನಾಳ್ ಪರ ಮತಯಾಚನೆ

    ಯಾದಗಿರಿಯಲ್ಲಿ ಅಮಿತ್ ಶಾ ರೋಡ್ ಶೋ – ಬಿಜೆಪಿ ಅಭ್ಯರ್ಥಿ ವೆಂಕಟರೆಡ್ಡಿ ಮುದ್ನಾಳ್ ಪರ ಮತಯಾಚನೆ

    ಯಾದಗಿರಿ: ರಾಜ್ಯದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದಂತೆ, ಚುನಾವಣಾ (Election) ಕಾವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಮತದಾನಕ್ಕೆ ದಿನಗಣನೆ ಆರಂಭವಾಗಿದ್ದು, ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರ ಆರಂಭಿಸಿವೆ.

    ಗಿರಿನಾಡು ಯಾದಗಿರಿ (Yadgiri) ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಮೂರೂ ಪಕ್ಷಗಳ ಅಭ್ಯರ್ಥಿಗಳು ಗೆಲುವಿನ ರಣೋತ್ಸಾಹದಲ್ಲಿದ್ದಾರೆ. ಆದರೆ ಈ ಬಾರಿ ಮತ್ತೊಮ್ಮೆ ಸರ್ಕಾರ ರಚಿಸುವ ಭರವಸೆಯಲ್ಲಿರುವ ಬಿಜೆಪಿ (BJP) ನಾಯಕರು ರೂಟ್ ಮ್ಯಾಪ್ ಮೂಲಕ ಪ್ರಚಾರ ಆರಂಭಿಸಿದ್ದಾರೆ. ಕಳೆದ ಎರಡು ದಿನಗಳಿಂದ ರಾಜ್ಯದಲ್ಲಿ ಪ್ರಚಾರ ನಡೆಸುತ್ತಿರುವ ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಇಂದು (ಮಂಗಳವಾರ) ಯಾದಗಿರಿ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ, ಬಿಜೆಪಿ ಅಭ್ಯರ್ಥಿ ವೆಂಕಟರೆಡ್ಡಿ ಮುದ್ನಾಳ್ (Venkatreddy Mudnal) ಪರ ಭರ್ಜರಿ ರೋಡ್ ಶೋ (Road Show) ನಡೆಸಿ, ಮತಯಾಚನೆ ಮಾಡಲಿದ್ದಾರೆ. ಇದನ್ನೂ ಓದಿ: ಕೊಚ್ಚಿಯಲ್ಲಿ ಭಾರತದ ಮೊದಲ ವಾಟರ್ ಮೆಟ್ರೋ ಸೇವೆ – ಇಂದು ಪ್ರಧಾನಿ ಮೋದಿ ಚಾಲನೆ

    ಸಂಜೆ 4:20ಕ್ಕೆ ಯಾದಗಿರಿ ನಗರಕ್ಕೆ ಆಗಮಿಸಲಿರುವ ಅಮಿತ್ ಶಾ, ಯಾದಗಿರಿ ನಗರದ ಸರ್ಕಾರಿ ಡಿಗ್ರಿ ಕಾಲೇಜು ಬಳಿಯಿಂದ ಶಾಸ್ತ್ರೀ ಸರ್ಕಲ್‌ವರೆಗೂ ರೋಡ್ ಶೋ ನಡೆಸಲಿದ್ದಾರೆ. 4:20ರಿಂದ 5:30ರವರೆಗೂ ರೋಡ್ ಶೋ ನಡೆಯಲಿದೆ. ರೋಡ್ ಶೋನಲ್ಲಿ 20 ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗುವ ನಿರೀಕ್ಷೆಯಿದೆ. ರೋಡ್ ಶೋ ಹಿನ್ನಲೆ ಪೊಲೀಸರಿಂದ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಜಿಲ್ಲಾ ಸಶಸ್ತ್ರ ಪಡೆ, ಪ್ಯಾರಾ ಮಿಲಿಟರಿ ಫೋರ್ಸ್ ಜೊತೆಗೆ ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ. ಅಲ್ಲದೇ ಐವರು ಡಿವೈಎಸ್ಪಿ ಸೇರಿದಂತೆ 50ಕ್ಕೂ ಅಧಿಕ ಪೊಲೀಸ್ ಅಧಿಕಾರಿಗಳ ನಿಯೋಜನೆ ಮಾಡಲಾಗಿದೆ. ಡ್ರೋನ್ ಕಣ್ಗಾವಲಿನಲ್ಲಿ ರೋಡ್ ಶೋ ನಡೆಯಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಬಂದೋಬಸ್ತ್ ಮಾಡಲಾಗಿದೆ. ರೋಡ್ ಶೋ ನಡೆಯಲಿರುವ ರಸ್ತೆಯ ಎರಡೂ ಬದಿ ಬ್ಯಾರಿಕೇಡ್ ನಿರ್ಮಾಣ ಮಾಡಲಾಗಿದೆ. ಇದನ್ನೂ ಓದಿ: ವ್ಯಕ್ತಿ ಮುಖ್ಯವಲ್ಲ – ಶೆಟ್ಟರ್, ಸವದಿ ವಿರುದ್ಧ ಅಮಿತ್ ಶಾ ವಾಗ್ದಾಳಿ

    ಅಮಿತ್ ಶಾ ಆಗಮನದಿಂದ ಜಿಲ್ಲೆಯಲ್ಲಿದ್ದ ಬಿಜೆಪಿ ಬಂಡಾಯ ಶಮನಕ್ಕೆ ಟಾನಿಕ್ ನೀಡಿದಂತಾಗಿದೆ. ಯಾಕೆಂದರೆ ಹಾಲಿ ಶಾಸಕ ವೆಂಕಟರೆಡ್ಡಿ ಮುದ್ನಾಳ್‌ಗೆ ಟಿಕೆಟ್ ನೀಡದಂತೆ ಆರು ಜನ ಆಕಾಂಕ್ಷಿಗಳು ದೆಹಲಿ (Delhi) ಅಂಗಳ ತಲುಪಿದ್ದರು. ವಿರೋಧದ ನಡುವೆಯೂ ಹೈಕಮಾಂಡ್ ಹಾಲಿ ಶಾಸಕರಿಗೆ ಟಿಕೆಟ್ ನೀಡಿತ್ತು. ಆದರೆ ಇದೀಗ ಅಮಿತ್ ಶಾ ಆಗಮನದಿಂದ ಬಂಡಾಯ ಶಮನ ಆಗೋದು ಗ್ಯಾರಂಟಿ ಎನ್ನಲಾಗುತ್ತಿದೆ. ಇದನ್ನೂ ಓದಿ: ಕಣದಲ್ಲಿರುವ ಬಂಡಾಯ ವೀರರು ಯಾರು? ಹಿಂದೆ ಸರಿದವರು ಯಾರು?

  • ಬಿಜೆಪಿ ಶಾಸಕನ ಗೆಲುವಿಗೆ ವಿಚಿತ್ರ ಹರಕೆ – 16 ಕಿಮೀ ದೀರ್ಘದಂಡ ನಮಸ್ಕಾರ ಹಾಕಿದ ಫ್ಯಾನ್ಸ್

    ಬಿಜೆಪಿ ಶಾಸಕನ ಗೆಲುವಿಗೆ ವಿಚಿತ್ರ ಹರಕೆ – 16 ಕಿಮೀ ದೀರ್ಘದಂಡ ನಮಸ್ಕಾರ ಹಾಕಿದ ಫ್ಯಾನ್ಸ್

    ಯಾದಗಿರಿ: ಬಿಜೆಪಿ (BJP) ಶಾಸಕ ರಾಜುಗೌಡ (Raju Gowda) ಚುನಾವಣೆಯಲ್ಲಿ (Election) ಗೆಲ್ಲಬೇಕು ಎಂದು ಅಭಿಮಾನಿಗಳಿಬ್ಬರು ವಿಚಿತ್ರ ಹರಕೆ ಒಪ್ಪಿಸಿದ ಘಟನೆ ಯಾದಗಿರಿಯಲ್ಲಿ (Yadgiri) ನಡೆದಿದೆ.

    ಸುಡುವ ಬಿಸಿಲನ್ನು ಲೆಕ್ಕಿಸದೆ ಅಭಿಮಾನಿಗಳಿಬ್ಬರು ತಮ್ಮ ನೆಚ್ಚಿನ ನಾಯಕನ ಗೆಲುವಿಗಾಗಿ 16 ಕಿಮೀ ದೀರ್ಘದಂಡ ನಮಸ್ಕಾರ ಹಾಕಿದ್ದಾರೆ. ಸುರಪುರ (Surapur) ಮತಕ್ಷೇತ್ರದ ಶಾಸಕ ರಾಜುಗೌಡ ಮತ್ತೊಮ್ಮೆ ಗೆದ್ದು ಬರಲಿ ಎಂದು ಕರ್ನಾಳ ಗ್ರಾಮದ ಮಲ್ಲನಗೌಡ ಹಾಗೂ ಭೀಮಣ್ಣ ಎಂಬ ಇಬ್ಬರು ಅಭಿಮಾನಿಗಳು ಗ್ರಾಮದಿಂದ ಸುರಪುರ ನಗರದ ವೇಣುಗೋಪಾಲಸ್ವಾಮಿ ದೇವಸ್ಥಾನದವರೆಗೆ ದೀರ್ಘದಂಡ ನಮಸ್ಕಾರ ಹಾಕಿಕೊಂಡು ಬಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಮುಳುಗುತ್ತಿರುವ ಹಡಗು: ಬಿಎಸ್‌ವೈ ಕಿಡಿ

    ನಂತರ ಅಭಿಮಾನಿಗಳು ದೇವಾಲಯದಲ್ಲಿ ತಮ್ಮ ನಾಯಕನ ಗೆಲುವಿಗಾಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಅಭಿಮಾನಿಗಳು ಶಾಸಕ ರಾಜುಗೌಡ ಅವರ ಪೋಟೋ ಹಿಡಿದು ಅಭಿಮಾನ ಮೆರೆದಿದ್ದಾರೆ.

    ಹರಕೆ ಹೊತ್ತಿದ್ದ ಅಭಿಮಾನಿ ಮಲ್ಲನಗೌಡ ಸುದ್ದಿಗಾರೊಂದಿಗೆ ಮಾತನಾಡಿ, ಸುರಪುರ ಮತಕ್ಷೇತ್ರದ ಅಭಿವೃದ್ಧಿಗಾಗಿ ಶಾಸಕ ರಾಜುಗೌಡ ಮತ್ತೊಮ್ಮೆ ಜನರಿಂದ ಆರಿಸಿ ಬರಬೇಕೆಂದು ಸಂಕಲ್ಪ ಮಾಡಿದ್ದೇವೆ. ಅವರು ಗೆದ್ದು ಬಂದ ನಂತರ ಮತ್ತೊಮ್ಮೆ ದೀರ್ಘದಂಡ ನಮಸ್ಕಾರ ಹಾಕುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಬಿಜೆಪಿಯವರು ಚುನಾವಣಾ ಪ್ರಚಾರಕ್ಕೆ ಅಮೆರಿಕಾ, ರಷ್ಯಾ ಪ್ರೆಸಿಡೆಂಟ್‍ನ್ನು ಕರ್ಕೊಂಡು ಬರಲಿ: ಹೆಚ್‍ಡಿ ರೇವಣ್ಣ ಟಾಂಗ್

  • ಪತ್ನಿಯನ್ನು ಸ್ಕ್ಯಾನ್ ಮಾಡಲು 15 ನಿಮಿಷ ತೆಗೆದುಕೊಂಡಿದ್ದಕ್ಕೆ ಸಂಶಯಪಟ್ಟು ಹತ್ಯೆಗೆ ಸುಪಾರಿ ಕೊಟ್ಟ ಪತಿ

    ಪತ್ನಿಯನ್ನು ಸ್ಕ್ಯಾನ್ ಮಾಡಲು 15 ನಿಮಿಷ ತೆಗೆದುಕೊಂಡಿದ್ದಕ್ಕೆ ಸಂಶಯಪಟ್ಟು ಹತ್ಯೆಗೆ ಸುಪಾರಿ ಕೊಟ್ಟ ಪತಿ

    ಯಾದಗಿರಿ: ಹೆಂಡತಿಯನ್ನು (Wife) ಆರೋಗ್ಯ ತಪಾಸಣೆಗಾಗಿ ಸ್ಕ್ಯಾನಿಂಗ್ ಸೆಂಟರ್‌ಗೆ (Scanning Center) ಕರೆದುಕೊಂಡು ಹೋಗಿದ್ದಾಗ ಅಲ್ಲಿನ ಸಿಬ್ಬಂದಿ ಮೇಲೆ ಸಂಶಯಪಟ್ಟ ಪತಿ (Husband) ಆತನ ಹತ್ಯೆಗೆ ಸುಪಾರಿ ನೀಡಿದ್ದ. ಆದರೆ ಹತ್ಯೆಗೂ ಮುನ್ನವೇ ಸುಪಾರಿ ಪಡೆದಿದ್ದಾತನೊಂದಿಗೆ ಪತಿಯೂ ಸಹ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

    ಯಾದಗಿರಿ (Yadgiri) ನಗರ ಪೊಲೀಸ್ ಠಾಣೆಯ ಪೊಲೀಸರು ಎಚ್ಚೆತ್ತುಕೊಂಡು ಕೊಲೆಗೆ ಹೊಂಚು ಹಾಕಿ ಕುಳಿತಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಇದರಿಂದ ಯಾದಗಿರಿ ನಗರ ಪೊಲೀಸ್ ಠಾಣೆ ಪಿಎಸ್‌ಐ ದೇವೇಂದ್ರ ರೆಡ್ಡಿ ಹಾಗೂ ನೇತೃತ್ವದ ತಂಡ ಓರ್ವನ ಪ್ರಾಣ ಕಾಪಾಡಿದಂತಾಗಿದೆ.

    ಯಾದಗಿರಿ ತಾಲೂಕಿನ ಮುದ್ನಾಳ್ ತಾಂಡಾ ಗ್ರಾಮದ ನಾನ್ಯಾ ನಾಯಕ್ ಕಳೆದ 8 ತಿಂಗಳ ಹಿಂದೆ ತನ್ನ ಹೆಂಡತಿಯನ್ನು ತಪಾಸಣೆಗಾಗಿ ಯಾದಗಿರಿ ನಗರದ ಶಿವಸಾಯಿ ಸ್ಕ್ಯಾನ್ ಸೆಂಟರ್‌ಗೆ ಕರೆದುಕೊಂಡು ಹೋಗಿದ್ದ. ಸ್ಕ್ಯಾನ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಸುರೇಶ್, ನಾನ್ಯಾ ನಾಯಕನ ಹೆಂಡತಿಯನ್ನು 15 ನಿಮಿಷಗಳ ಕಾಲ ತಪಾಸಣೆ ಮಾಡಿದ್ದಾನೆ. ಇದರಿಂದ ನಾಯಕ್ ತನ್ನ ಹೆಂಡತಿ ಇಷ್ಟು ಸಮಯ ಒಳಗಡೆ ಇರುವುದಕ್ಕೆ ಸುರೇಶ್‌ನ ಮೇಲೆ ಸಂಶಯ ಪಟ್ಟಿದ್ದಾನೆ. ಇದೇ ಕಾರಣಕ್ಕೆ ಸುರೇಶ್‌ನನ್ನು ಕೊಲ್ಲಲು ಕಳೆದ 8 ತಿಂಗಳಿಂದ ಪರಿತಪಿಸುತ್ತಿದ್ದ.

    ನಾನ್ಯಾ ನಾಯಕ್ ಬೆಂಗಳೂರಿನಲ್ಲಿದ್ದ ತನ್ನ ಪರಿಚಯಸ್ಥನಿಗೆ ಸ್ಕ್ಯಾನ್ ಸೆಂಟರ್‌ನಲ್ಲಿ ಕೆಲಸ ಮಾಡುವ ಸುರೇಶ್‌ನ ಹತ್ಯೆಗೆ 50 ಸಾವಿರ ರೂ. ಹಣ ಹಾಗೂ ಬಂಗಾರದ ಉಂಗುರ ನೀಡಿದ್ದ. ಅದರಂತೆ ಸುಪಾರಿ ಪಡೆದಿದ್ದಾತ ಪುಣೆಯಲ್ಲಿ ಕಂಟ್ರಿ ಪಿಸ್ತೂಲ್, ಚಾಕು, ಪಂಚ್ ಖರೀದಿಸಿ ಸುರೇಶ್‌ನನ್ನು ಹತ್ಯೆ ಮಾಡಲು ಏಪ್ರಿಲ್ 20ರಂದು ಯಾದಗಿರಿ ನಗರದ ಲಾಡ್ಜ್ ಒಂದರಲ್ಲಿ ಹೊಂಚು ಹಾಕಿ ಕುಳಿತಿದ್ದ. ಇದನ್ನೂ ಓದಿ: ‘ಅಗ್ನಿಸಾಕ್ಷಿ’ ಸೀರಿಯಲ್‌ ನಟ ಸಂಪತ್‌ ಜಯರಾಮ್‌ ಆತ್ಮಹತ್ಯೆ

    ಚುನಾವಣೆ ಹಿನ್ನೆಲೆ ಪೊಲೀಸರು ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದ ವೇಳೆ ಯಾದಗಿರಿ ಗ್ರಾಮೀಣ ಠಾಣೆ ಪಿಎಸ್‌ಐ ದೇವೇಂದ್ರ ರೆಡ್ಡಿ ಹಾಗೂ ಸಿಬ್ಬಂದಿ ಸಂಶಯಾಸ್ಪದವಾಗಿ ಓಡಾಡುತ್ತಿದ್ದ ಬೆಂಗಳೂರಿನ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆತ ತೊದಲುತ್ತಿದ್ದುದನ್ನು ಗಮನಿಸಿದ ಪಿಎಸ್‌ಐ ಆತ ಉಳಿದುಕೊಂಡಿದ್ದ ಲಾಡ್ಜ್‌ಗೆ ತೆರಳಿ ತಪಾಸಣೆ ನಡೆಸಿದ್ದಾರೆ.

    ಈ ವೇಳೆ ಆತನ ರೂಮ್‌ನಲ್ಲಿ ಕಂಟ್ರಿ ಪಿಸ್ತೂಲ್, 3 ಜೀವಂತ ಗುಂಡುಗಳು, ಬಟನ್ ಚಾಕು, ಪಂಚ್ ಪತ್ತೆಯಾಗಿವೆ. ಇದನ್ನು ವಶಪಡಿಸಿಕೊಂಡು ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಹತ್ಯೆಗೆ ಸುಪಾರಿ ನೀಡಿರುವ ವಿಷಯ ಬೆಳಕಿಗೆ ಬಂದಿದೆ. ನಂತರ ಸುಪಾರಿ ನೀಡಿದ ನಾನ್ಯಾ ನಾಯಕ್‌ನನ್ನು ಹಾಗೂ ಹತ್ಯೆಗೆ ಸುಪಾರಿ ಪಡೆದವನನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಇದನ್ನೂ ಓದಿ: 2 ಲಾರಿಗಳ ಮುಖಾಮುಖಿ ಡಿಕ್ಕಿ – ಓರ್ವ ಸಾವು, ಮೂವರಿಗೆ ಗಂಭೀರ ಗಾಯ

    ಯಾದಗಿರಿ ವಿಭಾಗದ ಡಿವೈಎಸ್‌ಪಿ ಬಸವೇಶ್ವರ, ನಗರ ಠಾಣೆ ಸಿಪಿಐ ಸುನೀಲ್ ಮೂಲಿಮನಿ, ಪಿಎಸ್‌ಐ ದೇವಿಂದ್ರ ರೆಡ್ಡಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ತಂಡದಕ್ಕೆ ಯಾದಗಿರಿ ಎಸ್‌ಪಿ ಡಾ. ಸಿಬಿ ವೇದಮೂರ್ತಿ ಮೆಚ್ಚುಗೆ ವ್ಯಕ್ತಪಡಿಸಿ ಬಹುಮಾನ ಘೋಷಿಸಿದ್ದಾರೆ.

  • ಬೇರೆ ಹುಡ್ಗರ ಜೊತೆ ರೀಲ್ಸ್ ಮಾಡುತ್ತಿದ್ದಕ್ಕೆ ಸುಂದರಿಯನ್ನು ಕೊಂದು ಸುಟ್ಟು ಹಾಕಿದ ಪಾಗಲ್ ಪ್ರೇಮಿ

    ಬೇರೆ ಹುಡ್ಗರ ಜೊತೆ ರೀಲ್ಸ್ ಮಾಡುತ್ತಿದ್ದಕ್ಕೆ ಸುಂದರಿಯನ್ನು ಕೊಂದು ಸುಟ್ಟು ಹಾಕಿದ ಪಾಗಲ್ ಪ್ರೇಮಿ

    – ಆತ್ಮಹತ್ಯೆಯ ನಾಟಕವಾಡಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಹೊರಟಿದ್ದ ಆರೋಪಿ ಜೈಲುಪಾಲು

    ಯಾದಗಿರಿ: ಪಾಗಲ್ ಪ್ರೇಮಿಯೊಬ್ಬ ತಾನು ಪ್ರೀತಿ ಮಾಡುತ್ತಿದ್ದ ಯುವತಿಯನ್ನೇ (Woman) ಕೊಲೆಗೈದು, ಮೃತದೇಹವನ್ನು ಸುಟ್ಟು ಹಾಕಿರುವ ಘಟನೆ ಯಾದಗಿರಿ (Yadgiri) ತಾಲೂಕಿನ ಅರಕೇರಾದ ಪಂಚಶೀಲ ನಗರದ ಜಮೀನಿನಲ್ಲಿ ನಡೆದಿದ್ದು, ಪ್ರಕರಣದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು (Police) ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಮೃತ ಯುವತಿಯನ್ನು ಉತ್ತರ ಪ್ರದೇಶ (Uttara Pradesh) ಮೂಲದ ಅಂತಿಮಾ ವರ್ಮಾ (25) ಎಂದು ಗುರುತಿಸಲಾಗಿದೆ. ಯಾದಗಿರಿಯ ಮಾರುತಿ ರಾಠೋಡ್, ಅಂತಿಮಾ ವರ್ಮಾಳನ್ನು ಕೊಲೆಗೈದ ಕಿರಾತಕ. ಆರೋಪಿ ಮಾರುತಿ ರಾಠೋಡ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಮುಂಬೈನಲ್ಲಿ ಸಹೋದರನೊಂದಿಗೆ ಅಂತಿಮಾ ವಾಸಿಸುತ್ತಿದ್ದಳು. ಈಕೆ ಸಾಮಾಜಿಕ ಜಾಲತಾಣದಲ್ಲಿ ಫುಲ್ ಆ್ಯಕ್ಟೀವ್ ಆಗಿದ್ದಳು. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯತೆ ಪಡೆಯುವ ಹುಚ್ಚಿದ್ದ ಅಂತಿಮಾ ರೀಲ್ಸ್ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿದ್ದಳು.

    ಮುಂಬೈನಲ್ಲೇ ವಾಸವಿದ್ದ ಅಂತಿಮಾ ಮನೆ ಪಕ್ಕದಲ್ಲಿ ವಾಸವಾಗಿದ್ದ ಯಾದಗಿರಿ ತಾಲೂಕಿನ ಅರಕೇರಾದ ಪಂಚಶೀಲ ನಗರದ ಮೂಲದ ಮಾರುತಿ ರಾಠೋಡ್ ಜೊತೆ ಪ್ರೀತಿ ಮೂಡಿತ್ತು. ಮುಂಬೈನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಾರುತಿ ಹಾಗೂ ಅಂತಿಮಾ ಇಬ್ಬರೂ 2 ವರ್ಷಗಳಿಂದ ಪ್ರೀತಿಸುತ್ತಿದ್ದರು. ಅಷ್ಟೇ ಅಲ್ಲದೇ ಎಲ್ಲೆಂದರಲ್ಲಿ ಸುತ್ತಾಡುತ್ತಾ, ಖುಷಿಯಿಂದ ಜೀವನ ಕಳೆಯುತ್ತಿದ್ದರು.

    ಆದರೆ ಇಬ್ಬರ ಪ್ರೀತಿಯ ನಡುವೆ ರೀಲ್ಸ್ ವಿಚಾರವೇ ಬಿರುಗಾಳಿ ಎಬ್ಬಿಸಿದೆ. ಅಂತಿಮಾ ಬೇರೆ ಬೇರೆ ಸ್ನೇಹಿತರ ಜೊತೆ ರೀಲ್ಸ್​ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್​ ಮಾಡುವ ಚಾಳಿ ಹೊಂದಿದ್ದಳಂತೆ. ಆದರೆ ಬೇರೆ ಯುವಕರೊಂದಿಗೆ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕುವುದು ಪ್ರೇಮಿ ಮಾರುತಿಗೆ ಇಷ್ಟ ಆಗುತ್ತಿರಲಿಲ್ಲ ಎನ್ನಲಾಗಿದೆ. ಇದೇ ಕಾರಣಕ್ಕೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಇದರ ನಡುವೆ ತಾನು ಪ್ರೀತಿ ಮಾಡುತ್ತಿರುವ ಅಂತಿಮಾ ಎಲ್ಲಿ ತನಗೆ ಕೈಕೊಡುತ್ತಾಳೆಂದು ಶಂಕಿಸಿದ ಮಾರುತಿ, ಆಕೆಯನ್ನು ಏ. 2ರಂದು ತನ್ನೂರು ಯಾದಗಿರಿಗೆ ಕರೆದುಕೊಂಡು ಬಂದಿದ್ದಾನೆ.

    ಊರಿಗೆ ಬರುತ್ತಿದ್ದಂತೆ ಬೇರೆ ಹುಡುಗರ ಜೊತೆ ವೀಡಿಯೋ ಮಾಡುವ ವಿಚಾರ ಕುರಿತಂತೆ ಜಗಳ ಮಾಡಿದ್ದಾನೆ. ಅಲ್ಲದೇ ಎಲ್ಲಿ ಕೈ ಕೊಟ್ಟು ಬಿಡ್ತಾಳೆ ಏನೋ ಎನ್ನುವ ಆತಂಕದಿಂದ ಕೂಡಲೇ ಇಬ್ಬರು ಮದುವೆ ಆಗೋಣಾ ಅಂತ ಒತ್ತಾಯ ಮಾಡಿದ್ದನಂತೆ. ಆದರೆ ಸದ್ಯಕ್ಕೆ ಮದುವೆ ಬೇಡ ಅಂತಾ ಹೇಳಿದ ಅಂತಿಮಾಳನ್ನು ಯಾದಗಿರಿ ತಾಲೂಕಿನ ಅರಕೇರಾ ಕೆ ಗ್ರಾಮದ ಹೊರವಲಯದ ಜಮೀನಿನಲ್ಲಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ತನ್ನದೇ ಜಮೀನಿನಲ್ಲಿ ಪೆಟ್ರೋಲ್ ಹಾಕಿ ಮೃತದೇಹ ಸುಟ್ಟು ಹಾಕಿದ್ದಾನೆ. ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ನಾಮಪತ್ರ ಸ್ವೀಕೃತ

    ಏ.​ 2ರಂದು ನಡೆದಿದ್ದ ಈ ಘಟನೆಗೆ ಇಡೀ ಯಾದಗಿರಿ ಜಿಲ್ಲೆ ಬೆಚ್ಚಿ ಬಿದ್ದಿತ್ತು. ಅಪರಿಚಿತ ಯುವತಿಯ ಶವ ಸಿಕ್ಕ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡಿದ್ದ ಗುರುಮಠಕಲ್ ಪೊಲೀಸರು ತನಿಖೆ ನಡೆಸಿ, ಆರೋಪಿ ಮಾರುತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಲು ಯತ್ನಿಸಿದ ಆರೋಪಿ, ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವಂತೆ ಒಂದು ವೀಡಿಯೋ ಮಾಡಿ ಎಸ್ಕೇಪ್​ ಆಗಿದ್ದ. ವೀಡಿಯೋ ಜಾಡು ಹಿಡಿದು ಹೊರಟ ಪೊಲೀಸರು ಆರೋಪಿಯನ್ನು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ. ಘಟನೆ ಸಂಬಂಧ ಗುರುಮಠಕಲ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕೊಡಗಿನಲ್ಲಿ ನಿವೃತ್ತ ಎಸ್ಪಿ ಪುತ್ರನಿಂದ ವರ್ತಕನ ಮೇಲೆ ಫೈರಿಂಗ್

  • ಕಲಬೆರಕೆ ಹಾಲು ಸರಬರಾಜು ಶಂಕೆ – ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳಿಂದ ದಾಳಿ

    ಕಲಬೆರಕೆ ಹಾಲು ಸರಬರಾಜು ಶಂಕೆ – ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳಿಂದ ದಾಳಿ

    ಯಾದಗಿರಿ: ಕಲಬೆರಕೆ (Adulteration) ಹಾಲು ಸರಬರಾಜು ಶಂಕೆ ವ್ಯಕ್ತಪಡಿಸಿ ಹಾಲು ಮಾರಾಟ ಮಳಿಗೆ ಹಾಗೂ ಹಾಲು ಸರಬರಾಜು ವಾಹನಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ (Department of Food Safety) ಅಧಿಕಾರಿಗಳು ದಾಳಿ (Ride) ನಡೆಸಿರುವ ಘಟನೆ ಯಾದಗಿರಿಯಲ್ಲಿ (Yadgiri) ನಡೆದಿದೆ.

    ರಂಜಾನ್ (Ramzan) ಹಬ್ಬ ಹಿನ್ನೆಲೆ ಕಲಬೆರಕೆ ಹಾಲು (Milk) ಸರಬರಾಜು ಮಾಡುತ್ತಿದ್ದಾರೆ ಎಂಬ ಶಂಕೆಯಿಂದ ಶನಿವಾರ ಬೆಳ್ಳಂಬೆಳಗ್ಗೆ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ನಗರದ ವಿವಿಧೆಡೆ ದಾಳಿ ಮಾಡಿದ್ದಾರೆ. ಯಾದಗಿರಿ ನಗರದ ರೈಲ್ವೆ ನಿಲ್ದಾಣದ ರಸ್ತೆ, ಚಿತ್ತಾಪುರ ರಸ್ತೆ ಸೇರಿದಂತೆ ಅನೇಕ ಕಡೆ ದಾಳಿ ನಡೆಸಿದ್ದಾರೆ. ಆಹಾರ ಸುರಕ್ಷತಾ ಅಧಿಕಾರಿ ಆಂಜನೇಯ ಎಂಬವರ ನೇತೃತ್ವದಲ್ಲಿ ದಾಳಿ ನಡೆಸಿದ್ದು, ವಿವಿಧ ಬ್ರ್ಯಾಂಡ್‌ನ ಹಾಲಿನ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಇದನ್ನೂ ಓದಿ: ಚುನಾವಣೆ ಮುಗಿಯುವವರೆಗೂ ಲಿಂಗಾಯತ ದಾಳ ಬಳಸಿ: ಶಾ ತಾಕೀತು 

    ಸಂಗ್ರಹಿಸಿದ ಹಾಲನ್ನು ಪರಿಶೀಲನೆಗಾಗಿ ಪ್ರಯೋಗಾಲಯಕ್ಕೆ (Laboratory) ಕಳುಹಿಸಲಿದ್ದು, ಕಲಬೆರಕೆ ಎಂದು ವರದಿ ಬಂದ ಬಳಿಕ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯ ನಾಯಕರಿಗೆ ಕ್ಲಾಸ್‌ – ಬಂಡಾಯ ಶಮನಕ್ಕೆ ಶಾ ಮದ್ದು

  • 10 ಸಾವಿರ ಮನೆಗಳಲ್ಲಿ ಭಿಕ್ಷೆ ಬೇಡಿ ನಾಮಪತ್ರ ಸಲ್ಲಿಕೆ – ನಾಣ್ಯ ಎಣಿಸಿ ಸುಸ್ತಾದ ಅಧಿಕಾರಿಗಳು

    10 ಸಾವಿರ ಮನೆಗಳಲ್ಲಿ ಭಿಕ್ಷೆ ಬೇಡಿ ನಾಮಪತ್ರ ಸಲ್ಲಿಕೆ – ನಾಣ್ಯ ಎಣಿಸಿ ಸುಸ್ತಾದ ಅಧಿಕಾರಿಗಳು

    ಯಾದಗಿರಿ: ಯಾದಗಿರಿ (Yadgiri) ಜಿಲ್ಲೆಯಲ್ಲಿ ಸ್ವತಂತ್ರ ಅಭ್ಯರ್ಥಿಯೊಬ್ಬರು  ತಮ್ಮ ಠೇವಣಿ (Deposite) ಹಣ 10,000 ರೂ.ಗಳನ್ನು ಸಂಪೂರ್ಣವಾಗಿ ಒಂದು ರೂಪಾಯಿ ನಾಣ್ಯಗಳಲ್ಲಿ ಪಾವತಿಸಿದ್ದು, ಹತ್ತು ಸಾವಿರ ನಾಣ್ಯಗಳನ್ನು ಎಣಿಸುವಲ್ಲಿ ಅಧಿಕಾರಿಗಳು ಸುಸ್ತಾಗಿದ್ದಾರೆ.

    ಒಂದೊಂದು ರೂ. ನಾಣ್ಯಗಳನ್ನು ನೀಡಿ ಹತ್ತು ಸಾವಿರ ಠೇವಣಿ ಭರಿಸಿರುವ ಪಕ್ಷೇತರ ಅಭ್ಯರ್ಥಿ (Independent Candidate) ಹೆಸರು ಯಂಕಪ್ಪ. ಇವರು ಕಳೆದ ಒಂದು ವರ್ಷದಿಂದ ಯಾದಗಿರಿ ವಿಧಾನಸಭಾ ಕ್ಷೇತ್ರದ 10 ಸಾವಿರ ಮನೆಗಳಲ್ಲಿ ಭಿಕ್ಷೆ (Beg) ಬೇಡಿ, ಪ್ರತೀ ಮನೆಯಲ್ಲಿ ಒಂದು ರೂ.ಗಳಂತೆ ಹತ್ತು ಸಾವಿರ ಸಂಗ್ರಹಿಸಿದ್ದಾರೆ. ಒಂದು ವರ್ಷ ಮನೆಬಿಟ್ಟು ಠೇವಣಿ ಸಂಗ್ರಹಿಸಿರುವ ಇವರು, ಯಾವುದೇ ಗ್ರಾಮದಲ್ಲಿ ವಾಸ್ತವ್ಯ ಹೂಡಬೇಕಿದ್ದರೂ ಅಲ್ಲಿನ ದೇವಸ್ಥಾನಗಳಲ್ಲೇ ಇರುತ್ತಿದ್ದರು. ಅದೇ ಊರಿನ ಮನೆಗಳಲ್ಲಿ ಭಿಕ್ಷೆ ಬೇಡಿ ಊಟವನ್ನೂ ಮಾಡುತ್ತಿದ್ದರು. ಇದನ್ನೂ ಓದಿ: ಮತ್ತೊಂದು ವಿಕೆಟ್ ಪತನ – ಆಯನೂರು ಮಂಜುನಾಥ್ ಬಿಜೆಪಿಗೆ ಗುಡ್ ಬೈ 

    ಯಂಕಪ್ಪ ತಮ್ಮ ಕೊರಳಿಗೆ ಹಾಕಿಕೊಂಡಿದ್ದ ಪೋಸ್ಟರ್‌ನಲ್ಲಿ 12ನೇ ಶತಮಾನದ ಸಮಾಜ ಸುಧಾರಕರಾದ ಜ್ಞಾನಜ್ಯೋತಿ ಬಸವೇಶ್ವರ, ಸಂತ ಕವಿ ಕನಕದಾಸ, ಸ್ವಾಮಿ ವಿವೇಕಾನಂದ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಚಿತ್ರಗಳು ಮತ್ತು ಸಂವಿಧಾನದ ಪೀಠಿಕೆ ಹಾಕಿಕೊಂಡು ಊರೂರು ಸುತ್ತಾಡಿ ಹಣ ಸಂಗ್ರಹಿಸಿದ್ದಾರೆ. ಇದು ಜನರನ್ನು ಆಕರ್ಷಿಸಿದೆ. ಈ ಚಿತ್ರಗಳ ಕೆಳಗೆ ಕನ್ನಡದಲ್ಲಿ ಕೇವಲ ಒಂದು ರೂಪಾಯಿ ಅಲ್ಲ, ನಿಮ್ಮ ಒಂದು ಮತ, ನೀವು ಒಂದು ದಿನ ನನಗೆ ಮತ ನೀಡಿ, ನಾನು ನಿಮಗೆ ಬಡತನದಿಂದ ಮುಕ್ತಿ ನೀಡುತ್ತೇನೆ ಎಂಬ ಘೋಷವಾಕ್ಯದೊಂದಿಗೆ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ಇದನ್ನೂ ಓದಿ: ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷನ ಬರ್ಬರ ಹತ್ಯೆ 

    ಕಲಬುರಗಿ (Kalaburagi) ಜಿಲ್ಲೆಯ ಗುಲ್ಬರ್ಗ (Gulbarga) ವಿಶ್ವವಿದ್ಯಾನಿಲಯದಿಂದ ಕಲಾ ಪದವೀಧರರಾಗಿರುವ ಇವರು, 60 ಸಾವಿರ ರೂ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. ಅವರ ತಂದೆ ದೇವಿಂದ್ರಪ್ಪ ಒಂದು ಎಕರೆ 16 ಗುಂಟೆ ಜಮೀನು ಹೊಂದಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿ ಪರ ಕಿಚ್ಚ ಸುದೀಪ್ ಕ್ಯಾಂಪೇನ್ – ಶಿಗ್ಗಾಂವಿ ಕ್ಷೇತ್ರದಲ್ಲಿ ಇಂದು ಮಿಂಚಿನ ಸಂಚಾರ 

    ಒಟ್ಟಿನಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಗೆ (Election) ನಾಮಪತ್ರ (Nomination Papers) ಸಲ್ಲಿಸುವ ವೇಳೆ ಹಲವು ಕುತೂಹಲಕಾರಿ ವಿಷಯಗಳು ಹೊರಬರುತ್ತಿವೆ. ಕೆಲವೆಡೆ ಅಭ್ಯರ್ಥಿಗಳ ಆಸ್ತಿ ಘೋಷಣೆ ಕೇಳಿ ಜನಸಾಮಾನ್ಯರು ತಲೆ ಕೆಡಿಸಿಕೊಂಡರೆ ಮತ್ತೆ ಕೆಲವು ಅಭ್ಯರ್ಥಿಗಳು ಚುನಾವಣಾ ಠೇವಣಿ ಹಣ ಕಟ್ಟುವ ಸಮಯದಲ್ಲಿ ವಿಭಿನ್ನ ಪ್ರಯೋಗಗಳ ಮೂಲಕ ಜನರ ಮನಸ್ಸನ್ನು ಗೆದ್ದಿದ್ದಾರೆ. ಇದನ್ನೂ ಓದಿ: ಕೈ ಅಭ್ಯರ್ಥಿಯ ಬಿ ಫಾರಂಗೆ ತಡೆ – ಪದ್ಮನಾಭನಗರದಲ್ಲಿ ಅಶೋಕ್‌ ವಿರುದ್ಧ ಡಿಕೆ ಸುರೇಶ್‌ ಕಣಕ್ಕೆ?

  • ಕಾಂಗ್ರೆಸ್ ಅಭ್ಯರ್ಥಿ ಚಿಂಚನಸೂರ್ ಆರೋಗ್ಯ ವಿಚಾರಿಸಿದ ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳು

    ಕಾಂಗ್ರೆಸ್ ಅಭ್ಯರ್ಥಿ ಚಿಂಚನಸೂರ್ ಆರೋಗ್ಯ ವಿಚಾರಿಸಿದ ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳು

    ಯಾದಗಿರಿ: ರಸ್ತೆ ಅಪಘಾತದಲ್ಲಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಬುರಾವ್ ಚಿಂಚನಸೂರ್ (Baburao Chinchansur) ಅವರನ್ನು ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ (BJP) ಹಾಗೂ ಜೆಡಿಎಸ್ (JDS) ಅಭ್ಯರ್ಥಿಗಳು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

    ಗುರುಮಠಕಲ್ (Gurumitkal) ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ (Congress) ಅಭ್ಯರ್ಥಿಯಾಗಿರುವ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಪ್ರಚಾರ ಕಾರ್ಯ ಮುಗಿಸಿ, ಕಲಬುರಗಿಗೆ (Kalaburagi) ವಾಪಸ್ ಹೋಗುತ್ತಿದ್ದಾಗ ಶುಕ್ರವಾರ ತಡರಾತ್ರಿ ಕಾರು ಅಪಘಾತವಾಗಿತ್ತು. ಪರಿಣಾಮ ಚಿಂಚನಸೂರ್ ಅವರಿಗೆ ತೀವ್ರ ಗಾಯಗಳಾಗಿತ್ತು. ಅವರ ತಲೆ ಹಾಗೂ ಕಾಲಿನ ಭಾಗಕ್ಕೆ ಪೆಟ್ಟಾಗಿ, ರಕ್ತಸ್ರಾವವಾಗಿತ್ತು.

    ಈ ಹಿನ್ನೆಲೆ ಕಳೆದ 2 ದಿನಗಳಿಂದ ಚಿಂಚನಸೂರ್ ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾನುವಾರ ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಎದುರಾಳಿ ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಇದನ್ನೂ ಓದಿ: ಸೋಲಿಲ್ಲದ ಸರದಾರ ಡಿಕೆಶಿಗೆ ಸಾಮ್ರಾಟ್ ಸವಾಲ್..!

    ಗುರುಮಠಕಲ್ ಬಿಜೆಪಿ ಅಭ್ಯರ್ಥಿ ಲಲಿತಾ ಅನಪೂರ, ಬಿಜೆಪಿ ಅಭ್ಯರ್ಥಿ ಶರಣಗೌಡ ಕಂದಕೂರು, ಕಾಡಾ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಗಿರೀಶ್ ಮಟ್ಟಣ್ಣನವರ ಆಸ್ಪತ್ರೆಗೆ ಹೋಗಿ ಚಿಂಚನಸೂರ್ ಹಾಗೂ ಅವರ ಪತ್ನಿ ಅಮರೇಶ್ವರಿ ಚಿಂಚನಸೂರ್ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಕಣ್ಣೀರು