Tag: Yadgiri

  • ದಾಹ ತಣಿಸಿಕೊಳ್ಳಲು ಹೋಗಿ ನೀರೆಂದು ವಿಷ ಕುಡಿದು ಬಾಲಕಿ ಸಾವು

    ದಾಹ ತಣಿಸಿಕೊಳ್ಳಲು ಹೋಗಿ ನೀರೆಂದು ವಿಷ ಕುಡಿದು ಬಾಲಕಿ ಸಾವು

    ಯಾದಗಿರಿ: ನೀರಿನ ದಾಹ ತಣಿಸಿಕೊಳ್ಳಲು ನೀರೆಂದು ವಿಷ ಸೇವಿಸಿ ಬಾಲಕಿ ಸಾವನಪ್ಪಿರುವ ಘಟನೆಯು ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ತಂಗಡಗಿ ಗ್ರಾಮದಲ್ಲಿ ನಡೆದಿದೆ.

    16 ವರ್ಷದ ಗೂಡುಮಾ ಮೃತ ದುರ್ದೈವಿ. ನೀರಿನ ದಾಹ ತಣಿಸಿಕೊಳ್ಳಲು ಗೂಡುಮಾ ನೀರಿನ ಬಾಟಲಿಯಿಂದ ಸಹಜವಾಗಿ ಕುಡಿದಿದ್ದಾಳೆ. ಆದರೆ ಪೋಷಕರು ಮನೆಯಲ್ಲಿ ನೀರಿನ ಬಾಟಲಿಯಲ್ಲಿ ಕ್ರಿಮಿನಾಶಕ ಇಟ್ಟಿರುವ ಅರಿವಿಲ್ಲದೆ ನೀರೆಂದು ವಿಷ ಸೇವಿಸಿ ಸಾವನಪ್ಪಿದ್ದಾಳೆ.

    ಪೋಷಕರು ಮಾಡಿದ ಎಡವಟ್ಟಿನಿಂದ ಮಗಳು ಸಾವಿನಪ್ಪಿದ್ದಾಳೆ. ಘಟನೆ ಕುರಿತು ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಮಿತ್ ಶಾ ಪುತ್ರನ ಆಸ್ತಿ 60 ಸಾವಿರದಿಂದ 50  ಕೋಟಿ ಹೇಗಾಯ್ತು: ಮೋದಿಗೆ ರಾಹುಲ್ ಪ್ರಶ್ನೆ

    ಅಮಿತ್ ಶಾ ಪುತ್ರನ ಆಸ್ತಿ 60 ಸಾವಿರದಿಂದ 50 ಕೋಟಿ ಹೇಗಾಯ್ತು: ಮೋದಿಗೆ ರಾಹುಲ್ ಪ್ರಶ್ನೆ

    ಯಾದಗಿರಿ: ಅಮಿತ್ ಶಾ ಪುತ್ರನ ಜಯ ಶಾ ಆಸ್ತಿ 60 ಸಾವಿರದಿಂದ 50  ಕೋಟಿಗೆ ಹೇಗೆ ಏರಿಕೆ ಆಯ್ತು  ಎನ್ನುವುದರ ಬಗ್ಗೆ ಪ್ರಧಾನಿ ಮೋದಿ ಉತ್ತರ ನೀಡಲಿ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಆಗ್ರಹಿಸಿದ್ದಾರೆ.

    ಉತ್ತರ ಕರ್ನಾಟಕ ಯಾತ್ರೆಯಲ್ಲಿರುವ ರಾಹುಲ್ ಗಾಂಧಿ ಶಹಪುರದಲ್ಲಿ ಏಕಾಏಕಿ ನಿಂತು ಮಾಧ್ಯಮಗಳೊಂದಿಗೆ ಮಾತನಾಡಿದರು. ರಾಫೇಲ್ ಒಪ್ಪಂದದ ಗುತ್ತಿಗೆ ಹೆಚ್‍ಎಎಲ್ ಗೆ ಸಿಗಬೇಕಿತ್ತು. ಆದರೆ ಮೋದಿ ತಮ್ಮ ಬೆಂಬಲಿಗ ಉದ್ಯಮಿಗೆ ನೀಡುವ ಉದ್ದೇಶದಿಂದ ದೇಶದ ಪ್ರತಿಷ್ಠಿತ ಸಂಸ್ಥೆಗೆ ಸಿಗಬೇಕಿದ್ದ ಗುತ್ತಿಗೆಯನ್ನು ತಪ್ಪಿಸಿದ್ದಾರೆ ಎಂದು ಆರೋಪಿಸಿದರು.

    ಕರ್ನಾಟಕಕ್ಕೆ ರಾಫೇಲ್ ಕಂಪನಿ ಬರಬೇಕಿತ್ತು. ಆದರೆ ಅವರು ಬೇರೆಯವರಿಗೆ ಗುತ್ತಿಗೆ ನೀಡಿದ್ದಾರೆ. ಪ್ರಧಾನ ಮಂತ್ರಿಗಳು ಕರ್ನಾಟಕದ ಉದ್ಯೋಗ ಕಿತ್ತು ಕೊಂಡಿದ್ದಾರೆ ಎಂದು ಆರೋಪಿಸಿದರು.

    ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‍ವೈ ಎಲೆಕ್ಷನ್ ಹಿಂದೂ ಟ್ವೀಟ್ ಕುರಿತು ಪ್ರತಿಕ್ರಿಯಿಸಿದ ಅವರು, ನನಗೆ ಯಾವ ದೇವಾಲಯ, ಧಾರ್ಮಿಕ ಕೇಂದ್ರ ಇಷ್ಟ ಅಲ್ಲಿಗೆ ನಾನು ಹೋಗುತ್ತೇನೆ. ದೇವಾಲಯಕ್ಕೂ ಹೋಗುತ್ತೇನೆ ಮಸೀದಿಗೂ ಹೋಗುತ್ತೇನೆ. ಹೀಗಾಗಿ ದೇವಸ್ಥಾನಗಳಿಗೆ ನಾನು ಭೇಟಿ ನೀಡಿದ್ದೇನೆ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು. ಯಡಿಯೂರಪ್ಪ ಜೈಲಿಗೆ ಹೋಗಿ ಬಂದವರು. ಅವರ ಸರ್ಕಾರದ ಅವಧಿಯಲ್ಲಿ ಕ್ಯಾಬಿನೆಟ್ ಮಂತ್ರಿಗಳು ಕೂಡ ಜೈಲಿಗೆ ಹೋಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಆರ್ ಎಸ್ ಎಸ್ ಮುಖ್ಯಸ್ಥ  ಮೋಹನ್ ಭಾಗವತ್ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಹುಲ್, ರಾಷ್ಟ್ರ ರಕ್ಷಣೆಗೆ ತಮ್ಮ ಪ್ರಾಣದ ಹಂಗು ತೊರೆದು ಹೋರಾಡುವ ಸೈನಿಕರ ಬಗ್ಗೆ ಹೀಗೆ ಮಾತನಾಡುವುದು ಸರಿಯಲ್ಲ. ಮೋಹನ ಭಾಗವತ್ ದೇಶದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: WIRE ವಿರುದ್ಧ 100 ಕೋಟಿ ಮಾನನಷ್ಟ ಕೇಸ್ ಹೂಡಿದ ಅಮಿತ್ ಶಾ ಪುತ್ರ

     

  • ನಾಲ್ವರು ಮಂತ್ರಿಗಳಿಂದ `ಕೈ’ ಹೈಕಮಾಂಡ್ ಗೆ ಹಣ – ಎಚ್‍ಡಿಕೆ ಹೊಸ ಬಾಂಬ್

    ನಾಲ್ವರು ಮಂತ್ರಿಗಳಿಂದ `ಕೈ’ ಹೈಕಮಾಂಡ್ ಗೆ ಹಣ – ಎಚ್‍ಡಿಕೆ ಹೊಸ ಬಾಂಬ್

    ಯಾದಗಿರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಂತ್ರಿ ಮಂಡಲದಲ್ಲಿರುವ ನಾಲ್ವರು ಮಂತ್ರಿಗಳು ಹೈಕಮಾಂಡ್ ಗೆ ಹಣ ನೀಡುತ್ತಿದ್ದು, ಈ ಕುರಿತು ದಾಖಲೆ ಸಮೇತ ಅವರ ಹೆಸರುಗಳನ್ನು ಮುಂದಿನ ದಿನಗಳಲ್ಲಿ ಬಹಿರಂಗ ಮಾಡುವುದಾಗಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

    ಜಿಲ್ಲೆಯ ಶಹಾಪುರದ ಜೆಡಿಎಸ್ ಕಚೇರಿ ಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ವರು ಮಂತ್ರಿಗಳು ಸಿಎಂಗೆ ಆಪ್ತರಾಗಿದ್ದಾರೆ. ನವದೆಹಲಿಗೆ ತೆರಳಲು ಇವರಿಗೆ ವಿಶೇಷ ವಿಮಾನವೇ ಏಕೆ ಬೇಕು? ಅದರಲ್ಲಿಯೇ ಹಣ ಸಾಗಿಸಲಾಗುತ್ತಿದೆ ಎಂದು ಆರೋಪಿಸಿದರು.

    ಹೈಕಮಾಂಡ್ ಗೆ ಕಪ್ಪ ಹಣ ಸಲ್ಲಿಕೆ ಆಗುತ್ತದೆ. ಇದನ್ನು ಕೆಲ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಗಣಿ ಹಗರಣದ ಬಗ್ಗೆ ಸಿಎಂ ಇಲ್ಲಿಯವರೆಗೆ ತುಟಿ ಬಿಚ್ಚಿಲ್ಲ ಏಕೆ?. ಎಂಎಂಸಿಎಲ್ ನಲ್ಲಿ ನಡೆದ ಐದು ಸಾವಿರ ಕೋಟಿ ರೂ. ಗಣಿ ಹಗರಣವನ್ನು ಗಣಿ ಸಚಿವರು ಲೆಕ್ಕ ಮಾಡುವುದರಲ್ಲಿ ತಪ್ಪಾಗಿದೆ ಎಂದಿರುವುದು ಬಾಲಿಷತನ ಹೇಳಿಕೆ ಎಂದರು.

    ಸಿಎಂ ಸಿದ್ದರಾಮಯ್ಯ ಅವರು ನಾಲ್ಕು ವರ್ಷ ಅಧಿಕಾರದಲ್ಲಿ ಸುಮ್ಮನೇ ಕುಳಿತು ಇದೀಗ ಜನರ ಮುಂದೆ ಸಾಧನಾ ಸಮಾವೇಶ ಹೆಸರಿನಲ್ಲಿ ನಾಟಕ ಮಾಡುತ್ತಿದ್ದಾರೆ. ಸಾವಿರಾರು ಕೋಟಿ ರೂ. ಯೋಜನೆಗಳನ್ನು ಘೋಷಣೆ ಮಾಡುತ್ತಿದ್ದಾರೆ. ಆದರೆ ಈ ಯೋಜನೆಗಳಿಗೆ ಹಣಕಾಸಿನ ಇಲಾಖೆ ಬಗ್ಗೆ ಒಪ್ಪಿಗೆ ಪಡೆದಿಲ್ಲ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಘೋಷಣೆ ಮಾಡಿರುವ ಯೋಜನೆಗಳಲ್ಲಿ ಕೆಲವು ಅನಾವಶ್ಯಕ ಇದ್ದರೆ ರದ್ದುಗೊಳಿಸಲಾಗುವುದು. ಹಣ ಲೂಟಿ ಮಾಡಲು ಕೆಲವೊಂದು ಯೋಜನೆಗಳಲ್ಲಿ ಘೋಷಣೆ ಮಾಡಲಾಗಿದೆ. ಇದನ್ನು ರದ್ದು ಮಾಡಿ ಆ ಹಣವನ್ನು ಸಮರ್ಪಕವಾಗಿ ವಿನಿಯೋಗಿಸಲು ಪ್ರತ್ಯೇಕವಾಗಿ ವಿಭಾಗ ಮಾಡುತ್ತೇವೆ ಎಂದರು.

    ಇದೇ ವೆಳೆ ಗೋವಿಂದರಾಜು ಮನೆ ಮೇಲೆ ಐಟಿ ದಾಳಿ ಮಾಡಿದ ವೇಳೆ ಸಿಕ್ಕ ಡೈರಿ ಸೋರಿಕೆ ಮಾಡಿ ಬಿಜೆಪಿ ನಾಯಕರು ಲಾಭ ಮಾಡಿಕೊಂಡರು. ಆ ತನಿಖೆ ಎಲ್ಲಿಗೆ ಬಂತು ಎಂಬುದು ಇದುವರೆಗೂ ಮಾಹಿತಿ ಇಲ್ಲ. ಲೇಖಾನುದಾನ ಬಜೆಟ್ ಮಂಡನೆ ಮಾಡಲು ಸಿಎಂ ಅವರು ಎಲ್ಲ ಸಂಘ ಸಂಸ್ಥೆಗಳನ್ನು ಕರೆದು ಅಭಿಪ್ರಾಯ ಪಡೆಯುತ್ತಾರೆ. ಈ ಮುಂಚೆ ಮಂಡಿಸಿದಾಗ ಯಾವುದೇ ಸಭೆ ಕರೆದಿಲ್ಲ. ಜನರನ್ನು ಮೆಚ್ಚಿಸಲು ನಾಟಕೀಯ ವಾತಾವರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

  • ಗಮನಿಸಿ, ಕೃಷ್ಣಾ ನದಿ ಪಾತ್ರಕ್ಕೆ ತೆರಳಬೇಡಿ: ಬಸವಸಾಗರ ಜಲಾಶಯ ಭರ್ತಿ

    ಗಮನಿಸಿ, ಕೃಷ್ಣಾ ನದಿ ಪಾತ್ರಕ್ಕೆ ತೆರಳಬೇಡಿ: ಬಸವಸಾಗರ ಜಲಾಶಯ ಭರ್ತಿ

    ಯಾದಗಿರಿ: ರಾಜ್ಯದಲ್ಲಿ ಹಾಗೂ ಮಹಾರಾಷ್ಟ್ರದಲ್ಲಿನ ಕಳೆದ ಒಂದು ವಾರದಿಂದ ಮಳೆಯಾಗುತ್ತಿರುವುದರಿಂದ ಬಸವಸಾಗರ ಜಲಾಶಯವು ಭರ್ತಿಯಾಗಿದ್ದು, ಕೃಷ್ಣಾ ನದಿಗೆ ಭಾರಿ ಪ್ರಮಾಣದಲ್ಲಿ ನೀರನ್ನು ಹರಿಸಲಾಗಿದೆ.

    ಬಸವಸಾಗರ ಜಲಾಶಯದಲ್ಲಿ ಒಳ ಹರಿರುವ ಪ್ರಮಾಣ ಹೆಚ್ಚಾದಂತೆ ಹೊರ ಹರಿವಿನ ಪ್ರಮಾಣವು ಕೂಡ ಹೆಚ್ಚಾಗುತ್ತಿದೆ. 33.33 ಟಿಎಂಸಿಯಲ್ಲಿ ಸಂಗ್ರಹ ಸಾಮರ್ಥ್ಯವಿರುವ ಬಸವಸಾಗರ ಜಲಾಶಯದಲ್ಲಿ ಈಗಾಗಲೇ 33.267 ಟಿಎಂಸಿ ನೀರು ಸಂಗ್ರಹವಾಗಿದೆ.

    ಆಲಮಟ್ಟಿ ಜಲಾಶಯದಿಂದ ಬಸವಸಾಗರಕ್ಕೆ 51 ಸಾವಿರ ಕ್ಯೂಸೆಕ್ ನೀರು ಒಳಹರಿವು ಬರುತ್ತಿದ್ದು, ಜಲಾಶಯದಿಂದ 52 ಸಾವಿರ ಕ್ಯೂಸೆಕ್ ನೀರನ್ನು ಆರು ಗೇಟ್ ಮೂಲಕ ಕೃಷ್ಣಾ ನದಿಗೆ ನೀರು ಬಿಡಲಾಗಿದೆ.

    ರಾಜ್ಯ ಹಾಗೂ ಮಹಾರಾಷ್ಟ್ರದಲ್ಲಿ ಮಳೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಸಂದರ್ಭದಲ್ಲಿ ಜಲಾಶಯದಿಂದ ಮತ್ತಷ್ಟು ನೀರನ್ನು ಕೃಷ್ಣಾ ನದಿಗೆ ಬಿಡಲಾಗುತ್ತದೆ. ಹೀಗಾಗಿ ನದಿ ಪಾತ್ರಕ್ಕೆ ಜನರು ತೆರಳದಂತೆ ಕೃಷ್ಣ ಭಾಗ್ಯ ಜಲ ನಿಗಮದ ಅಧಿಕಾರಿಗಳ ಸೂಚನೆ ನೀಡಿದ್ದಾರೆ.

    ಕ್ಯೂಸೆಕ್ ಟಿಎಂಸಿ ಎಂದರೆ ಎಷ್ಟು?
    ಕ್ಯೂಸೆಕ್ ಎಂಬುದು cubic foot per second ಹೃಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.

    https://www.youtube.com/watch?v=1W5eHD6tGKo