Tag: Yadgiri

  • ಭೀಮಾ ನದಿಯ ಆರ್ಭಟ ಜೋರು – ಯಾದಗಿರಿ ನಗರ ಸೇರಿ ಹಲವು ಗ್ರಾಮಗಳಿಗೆ ಜಲದಿಗ್ಬಂಧನ

    ಭೀಮಾ ನದಿಯ ಆರ್ಭಟ ಜೋರು – ಯಾದಗಿರಿ ನಗರ ಸೇರಿ ಹಲವು ಗ್ರಾಮಗಳಿಗೆ ಜಲದಿಗ್ಬಂಧನ

    ಯಾದಗಿರಿ: ಜಿಲ್ಲೆಯಲ್ಲಿ ಭೀಮಾನದಿ ಪ್ರವಾಹಕ್ಕೆ ಯಾದಗಿರಿ ನಗರ (Yadgiri City) ಸೇರಿದಂತೆ ನದಿ ಪಾತ್ರದ ಗ್ರಾಮಗಳ ಜನ ತತ್ತರಿಸಿಹೋಗಿದ್ದಾರೆ.

    ನದಿಯಲ್ಲಿ ನೀರಿನ (River Water) ಪ್ರಮಾಣ ಹೆಚ್ಚಾಗಿದ್ದು, ನಗರದ ವೀರಭದ್ರೇಶ್ವರ ನಗರ, ವಿಶ್ವರಾಧ್ಯನಗರ ಬಡಾವಣೆಗಳಿಗೆ ರಾತ್ರಿ ನೀರು ನುಗ್ಗಿದ್ದು ನಿವಾಸಿಗಳಿಗೆ ಜಲಕಂಟಕ ಎದುರಾಗಿದೆ. ಮನೆಯಲ್ಲಿ ಸಿಲುಕಿದ ಜನರನ್ನ SDRF ಹಾಗೂ ಅಗ್ನಿಶಾಮಕ ದಳ ರಕ್ಷಣೆ ಮಾಡಿದೆ. 20ಕ್ಕೂ ಹೆಚ್ಚು ಜನರನ್ನ ಬೋಟ್ ಮೂಲಕ ರಕ್ಷಣೆ ಮಾಡಲಾಗಿದೆ.

    ಭೀಮಾ ನದಿ ಪ್ರವಾಹಕ್ಕೆ ಯಾದಗಿರಿಯಲ್ಲಿ ರಸ್ತೆ ಸಂಪರ್ಕಗಳು ಕಡಿತವಾಗಿದ್ದು, ನಾಯ್ಕಲ್ ಗ್ರಾಮದ ರಾಜ್ಯ ಹೆದ್ದಾರಿ ಜಲಾವೃತವಾಗಿದೆ. ತುಂಬಿಹರಿಯುತ್ತಿರುವ ನದಿಯ ಸೇತುವೆ ಮೇಲೆಯೇ ವಾಹನ ಸವಾರರು ಹರಸಾಹಸ ನಡೆಸಿದ್ದಾರೆ. ಸಿಂದಗಿ-ಕೊಡಂಗಲ್ ರಾಜ್ಯ ಹೆದ್ದಾರಿ ಸಂಪರ್ಕ ಕಡಿತವಾಗಿದೆ. ಜಿಲ್ಲೆಯ ಹಲವೆಡೆ ಗ್ರಾಮಗಳು ಸಂಪೂರ್ಣ ಸಂಪರ್ಕ ಕಳೆದುಕೊಂಡಿದ್ದು ಗ್ರಾಮಸ್ಥರು ಪ್ರತಿಯೊಂದಕ್ಕೂ ಪರದಾಡುತ್ತಿದ್ದಾರೆ. ವಡಗೇರಾ ತಾಲೂಕಿನ ಬೆನಕನ ಹಳ್ಳಿ ಗ್ರಾಮಕ್ಕೆ ಸಂಪರ್ಕ ಕಡಿತವಾಗಿದ್ದು ಅಧಿಕಾರಿಗಳು ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ ಅಂತ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನದಿಗೆ ನೀರಿನ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಯಾದಗಿರಿಯ ನದಿ ತೀರದ ಗ್ರಾಮಗಳಲ್ಲಿ ಡಂಗೂರ ಸಾರಲಾಗುತ್ತಿದೆ. ನದಿ ತೀರಕ್ಕೆ ತೆರಳದಂತೆ ಜಿಲ್ಲಾಡಳಿತದಿಂದ ಮುನ್ನೆಚ್ಚರಿಕೆ ನೀಡಲಾಗುತ್ತಿದೆ. ಶಹಾಪುರ ತಾಲೂಕಿನ ಬಲಕಲ್ ಸೇರಿದಂತೆ ನದಿ ಪಾತ್ರದ ವಿವಿಧ ಗ್ರಾಮದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

  • ಯಾದಗಿರಿ | ಪತ್ನಿ ಶೀಲ ಶಂಕಿಸಿ ಜನ್ಮ ಕೊಟ್ಟ ತಂದೆಯಿಂದಲೇ ಮಕ್ಕಳ ಬರ್ಬರ ಹತ್ಯೆ!

    ಯಾದಗಿರಿ | ಪತ್ನಿ ಶೀಲ ಶಂಕಿಸಿ ಜನ್ಮ ಕೊಟ್ಟ ತಂದೆಯಿಂದಲೇ ಮಕ್ಕಳ ಬರ್ಬರ ಹತ್ಯೆ!

    ಯಾದಗಿರಿ: ಪತ್ನಿಯ (Wife) ಶೀಲ ಶಂಕಿಸಿ ಹೆತ್ತ ತಂದೆಯೇ ತನ್ನ ಮಕ್ಕಳನ್ನ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಯಾದಗಿರಿ (Yadagiri) ತಾಲೂಕಿನ ಹತ್ತಿಕುಣಿ ಗ್ರಾಮದಲ್ಲಿ ನಡೆದಿದೆ.

    ಮಲಗಿದ್ದ ಮಕ್ಕಳ ಮೇಲೆ ಕ್ರೌರ್ಯ ಮೆರೆದ ರಾಕ್ಷಸ ತಂದೆ ಶರಣಪ್ಪ. ತಾಯಿ ಬಹಿರ್ದೆಸೆಗೆ ಹೋಗಿದ್ದಾಗ ಮಕ್ಕಳನ್ನ ಕೊಲೆ ಮಾಡಿ ಎಸ್ಕೇಪ್‌ ಆಗಿದ್ದಾನೆ. ಸಾನ್ವಿ (5), ಭರತ (3) ಮೃತ ದುರ್ದೈವಿ ಮಕ್ಕಳು. ಮತ್ತೋರ್ವ ಮಗನ ಸ್ಥಿತಿ ಗಂಭಿರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ವಿಜಯಪುರ | ಡೋಣಿ ನದಿ ಸೇತುವೆ ಜಲಾವೃತ – ದಾಟಲು ಯತ್ನಿಸಿದ ಬೈಕ್ ಸವಾರ ನೀರುಪಾಲು

    ಶರಣಪ್ಪನ ಪತ್ನಿ ಕಳೆದ ಕೆಲ ದಿನಗಳಿಂದ ಗಂಡನೊಂದಿಗೆ ಹೊಂದಾಣಿಕೆಯಾಗದೇ ತವರು ಮನೆ ಸೇರಿದ್ದಳು. ಹದಿನೈದು ದಿನಗಳ ಹಿಂದಷ್ಟೇ ಪತ್ನಿಯನ್ನ ಶರಣಪ್ಪ ಕರೆತಂದಿದ್ದ. ಮಗಳು ಸಾನ್ವಿ ಜೊತೆ ಹೋಗಿ ಕರೆದುಕೊಂಡು ಬಂದಿದೆ.

    ಬೆಳಗ್ಗೆ ಹೆಂಡತಿ ಬಹಿರ್ದೆಸೆಗೆ ಹೋಗಿದ್ದಾಗ ಮಲಗಿದ್ದ ಮಕ್ಕಳನ್ನ ಕೊಡಲಿಯಿಂದ ಕೊಚ್ಚಿ ಹತ್ಯೆ ಮಾಡಿದ್ದಾನೆ. ಒಬ್ಬರು ಮಕ್ಕಳು ಸಾವನ್ನಪ್ಪಿದ್ರೆ, ಮತ್ತೋರ್ವ ಮಗನ ಸ್ಥಿತಿ ಗಂಭೀರವಾಗಿದೆ. ಸ್ಥಳಕ್ಕೆ ಯಾದಗಿರಿ ಡಿವೈಎಸ್ಪಿ ಸುರೇಶ್ ನಾಯಕ್, ಪಿಎಸ್‌ಐ ಹಣಮಂತ ಬಂಕಲಗಿ ಭೇಟಿ ಪರಿಶೀಲಿಸಿದ್ದಾರೆ. ಇದನ್ನೂ ಓದಿ: ಸೆ.26ರಿಂದ 5 ದಿನ ಕಾವೇರಿ ಆರತಿ – ಕೆಆರ್‌ಎಸ್‌ಗೆ ಭೇಟಿ ನೀಡಿ, ಸಿದ್ಧತೆ ವೀಕ್ಷಿಸಿದ ಡಿಕೆಶಿ

    ಯಾದಗಿರಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಮೂರು ಮಕ್ಕಳ ತಾಯಿ ಲೀಲಾಳ ಲವ್ವರ್‌ಗೆ ಬಿಯರ್‌ ಬಾಟಲ್‌ನಿಂದ ಹೊಡೆದ ಪತಿ ಮಂಜುನಾಥ್‌

  • ನಾರಾಯಣಪುರ ಡ್ಯಾಂನಿಂದ ತೆಲಂಗಾಣಕ್ಕೆ ನೀರು – ರೈತರು ಕಿಡಿ

    ನಾರಾಯಣಪುರ ಡ್ಯಾಂನಿಂದ ತೆಲಂಗಾಣಕ್ಕೆ ನೀರು – ರೈತರು ಕಿಡಿ

    – ಬೆಂಗಳೂರು ಪಾದಯಾತ್ರೆ ಹೋರಾಟಕ್ಕೆ ಸಜ್ಜು

    ಯಾದಗಿರಿ: ಬಸವಸಾಗರ ಜಲಾಶಯ (Basavasagar Dam) ನಾಲ್ಕು ಜಿಲ್ಲೆಯ ಜನರ ಜೀವನಾಡಿಯಾಗಿದೆ. ಅದೇ ಜಲಾಶಯ ನೀರು ಬಳಕೆ ಮಾಡಿಕೊಂಡು ನಾಲ್ಕು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯನ್ನು ಬೆಳೆಯಲಾಗುತ್ತದೆ. ಅದೇ ಜಲಾಶಯ ನೀರನ್ನು ಕುಡಿಯೋಕು ಸಹ ಬಳಕೆ ಮಾಡಿಕೊಳ್ಳಲಾಗುತ್ತದೆ. ಆದರೆ ಸರ್ಕಾರದ ಯಾವುದೇ ಆದೇಶವಿಲ್ಲದೆ ಅಧಿಕಾರಿಗಳು ಪಕ್ಕದ ತೆಲಂಗಾಣ ರಾಜ್ಯಕ್ಕೆ ನೀರು ಹರಿಬಿಟ್ಟಿದ್ದಾರೆ. ಇದಕ್ಕೆ ವಿರೋಧ ವ್ಯಕ್ತ ಪಡಿಸಿದ ಬಿಜೆಪಿ, ಅಧಿಕಾರಿಗಳ ವಿರುದ್ಧ ಕೆಂಡಕಾರಿದೆ.

    ಯಾದಗಿರಿ (Yadgiri) ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ (Narayanapura) ಬಳಿಯ ಬಸವಸಾಗರ ಜಲಾಶಯದಿಂದ ತೆಲಂಗಾಣಕ್ಕೆ (Telangana) ನೀರು ಬಿಡಲಾಗಿದೆ. ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ ಜೋರಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಬಸವಸಾಗರ ಡ್ಯಾಂನಿಂದ ತೆಲಂಗಾಣಕ್ಕೆ ಕೃಷ್ಣನದಿ ಮೂಲಕ ನೀರು ಹರಿಬಿಡಲಾಗಿದೆ. ರಾತ್ರಿ ವೇಳೆ ಸುಮಾರು 1.24 ಟಿಎಂಸಿಯಷ್ಟು ನೀರನ್ನ ಹರಿಸಲಾಗಿದೆ. ಇದನ್ನೂ ಓದಿ: ಹೈವೇಯಲ್ಲಿ ಸರಣಿ ಅಪಘಾತ – ಈಶಾಗೆ ಬಂದಿದ್ದ ವಾಹನ ಸವಾರರ ಪರದಾಟ

    ತೆಲಂಗಾಣಕ್ಕೆ ನೀರು ಬಿಟ್ಟಿದ್ದನ್ನು ರೈತರು ಖಂಡಿಸಿದ್ದಾರೆ. ಬಸವಸಾಗರ ಜಲಾಶಯ ನೀರನ್ನ ಯಾದಗಿರಿ, ವಿಜಯಪುರ, ಕಲಬುರಗಿ ಹಾಗೂ ರಾಯಚೂರು ಜಿಲ್ಲೆಯ ಲಕ್ಷಾಂತರ ರೈತರು ಅವಲಂಬಿಸಿದ್ದಾರೆ. 4 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯನ್ನು ಬೆಳೆಯುತ್ತಾರೆ. ನವೆಂಬರ್‌ನಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ರೈತರ ಎರಡನೇ ಬೆಳೆಗೆ ನೀರು ಬಿಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಡಿಸೆಂಬರ್ 10ರಿಂದ ಮಾರ್ಚ್ 23ರ ತನಕ ನೀರು ಹರಿಸುವ ನಿರ್ಧಾರ ಕೈಗೊಳ್ಳಲಾಗಿದೆ. ವಾರಬಂದಿ ಅಂದರೆ 14 ದಿನಗಳ ಕಾಲ ನೀರು ಬಿಟ್ಟು ನಿರಂತರವಾಗಿ 10 ದಿನಗಳ ಕಾಲ ನೀರು ಬಂದ್ ಮಾಡಲಾಗುತ್ತದೆ. ಇದರಿಂದ ರೈತ ಮುಖಂಡರು ಆಕ್ರೋಶ ಹಾಕಿದ್ದಾರೆ. ಇದನ್ನೂ ಓದಿ: ಇಶಾ ಫೌಂಡೇಶನ್‌ ಶಿವರಾತ್ರಿ ಕಾರ್ಯಕ್ರಮ – ಅಮಿತ್‌ ಶಾ, ಡಿಕೆ ಶಿವಕುಮಾರ್‌ ಭಾಗಿ

    ಕಳೆದ ವರ್ಷ ಡ್ಯಾಂನಲ್ಲಿ ನೀರಿನ ಕೊರತೆಯಿದ್ದ ಕಾರಣಕ್ಕೆ ಎರಡನೇ ಬೆಳೆಗೆ ನೀರು ಬಿಡಲು ಅಧಿಕಾರಿಗಳು ಹಿಂದೇಟು ಹಾಕಿದ್ದರು. ಇದೇ ಕಾರಣಕ್ಕೆ ರೈತರು ನಿರಂತರ ಹೋರಾಟ ಮಾಡಿದ್ದರು. ಕೆಲ ಸಂಘಟನೆಗಳು ಡ್ಯಾಂಗೆ ಮುತ್ತಿಗೆ ಹಾಕುವ ಪ್ರಯತ್ನ ಕೂಡ ಮಾಡಿದ್ದರು. ಇಷ್ಟಾದ ಬಳಿಕ ಸರ್ಕಾರ ರೈತರಿಗೆ ನೀರು ಒದಗಿಸುವ ಕೆಲಸ ಮಾಡಿತ್ತು. ಆದರೆ ಈಗ ಡ್ಯಾಂನಲ್ಲಿ ನೀರಿದೆ ಎನ್ನುವ ಕಾರಣಕ್ಕೆ ಸರ್ಕಾರದ ಯಾವುದೇ ಆದೇಶವಿಲ್ಲದೇ ಇದ್ದರೂ ಅಧಿಕಾರಿಗಳು ನೀರು ಬಿಟ್ಟಿದ್ದಾರೆ. ಬುಧವಾರ ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ ಕಚೇರಿಗೆ ಭೇಟಿ ನೀಡಿದ ಮಾಜಿ ಸಚಿವ ರಾಜುಗೌಡ ಅಧಿಕಾರಿಗಳ ವಿರುದ್ಧ ಕೆಂಡಕಾರಿದ್ದಾರೆ. ಇದನ್ನೂ ಓದಿ: ರಾಜಕೀಯ ಲಾಭಕ್ಕಾಗಿ ನನ್ನ ಮೇಲೆ ಇಲ್ಲಸಲ್ಲದ ಆರೋಪ: ಅಪಪ್ರಚಾರ ಮಾಡಿದವರಿಗೆ ಮುನಿರತ್ನ ತರಾಟೆ

    ರಾಜ್ಯದ ಜನರಿಗೆ ಮುಂದೆ ನೀರಿನ ಸಮಸ್ಯೆ ಆಗುತ್ತದೆ. ಇಂತಹ ಸಂದರ್ಭದಲ್ಲಿ ಪಕ್ಕದ ರಾಜ್ಯಕ್ಕೆ ನೀರು ಬಿಟ್ಟಿರೋದು ಎಷ್ಟು ಸರಿ? ನೀರಾವರಿ ಸಚಿವರು ಮೊದಲು ನಮ್ಮ ರಾಜ್ಯದ ಬಗ್ಗೆ ಯೋಚಿಸಿ. ಬಳಿಕ ಪಕ್ಕದ ರಾಜ್ಯದ ಬಗ್ಗೆ ಕಾಳಜಿವಹಿಸಲಿ ಎಂಬುದು ರೈತರ ಅಭಿಪ್ರಾಯ. ಇದನ್ನೂ ಓದಿ: ಒಂದೇ ವೇದಿಕೆಯಲ್ಲಿ ಅಮಿತ್ ಶಾ ಜೊತೆ ಡಿಕೆಶಿ – ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟ

  • ಯಾದಗಿರಿ | ನದಿಗೆ ಸ್ನಾನ ಮಾಡಲು ಹೋಗಿ ಯುವಕ ನೀರುಪಾಲು

    ಯಾದಗಿರಿ | ನದಿಗೆ ಸ್ನಾನ ಮಾಡಲು ಹೋಗಿ ಯುವಕ ನೀರುಪಾಲು

    ಯಾದಗಿರಿ: ನದಿಯಲ್ಲಿ ಸ್ನಾನ ಮಾಡುವಾಗ ಕಾಲು ಜಾರಿ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸುರಪುರ (Surapura) ತಾಲೂಕಿನ ತಿಂಥಣಿ (Tinthani) ಗ್ರಾಮದ ಬಳಿಯ ಕೃಷ್ಣಾ ನದಿಯಲ್ಲಿ ನಡೆದಿದೆ.

    ಮೃತ ಯುವಕನನ್ನು ಕೊಪ್ಪಳ (Koppal) ಜಿಲ್ಲೆಯ ಕುಕನೂರ್ ತಾಲೂಕಿನ ಮಂಗಳೂರು ಮೂಲದ ಮಂಗಳೇಶ ಬಡಿಗೇರ್ (26) ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಉತ್ತರಾಖಂಡ ಬಸ್ ಅಪಘಾತಕ್ಕೆ ಮೋದಿ ಸಂತಾಪ – ಮೃತರ ಕುಟುಂಬಕ್ಕೆ 2 ಲಕ್ಷ, ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ

    ಜಿಲ್ಲೆಯ ತಿಂಥಣಿ ಗ್ರಾಮಕ್ಕೆ ಸಂಬಂಧಿಕರ ಜವಳ ಕಾರ್ಯಕ್ರಮಕ್ಕೆ ಮಂಗಳೇಶ ಬಂದಿದ್ದ. ತಿಂಥಣಿ ಮೌನೇಶ್ವರ ದೇವಸ್ಥಾನದಲ್ಲಿ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಕೃಷ್ಣಾ ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದ. ಸ್ನಾನ ಮಾಡುವಾಗ ಕಾಲು ಜಾರಿದ್ದು, ನೀರು ಪಾಲಾಗಿದ್ದಾನೆ.

    ಸ್ಥಳಕ್ಕೆ ಅಗ್ನಿಶಾಮಕ ದಳ, ಪೋಲಿಸರು ಆಗಮಿಸಿದ್ದು, ಸ್ಥಳೀಯ ಅಂಬಿಗರ ಸಹಾಯದಿಂದ ಸತತ ಮೂರು ಗಂಟೆಗಳ ಶೋಧ ಕಾರ್ಯ ನಡೆಸಿ, ಮೃತ ದೇಹವನ್ನು ಹೊರತೆಗೆದಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸುರಪುರ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಸುರಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಮರು ಮದುವೆಯಾದ ಬಾಲಿವುಡ್ ನಟಿ ಸನ್ನಿ ಲಿಯೋನ್

  • ಕಾಂಗ್ರೆಸ್‌ನಿಂದ ಲ್ಯಾಂಡ್ ಜಿಹಾದ್ – ಬಿಜೆಪಿ ಆಕ್ರೋಶ

    ಕಾಂಗ್ರೆಸ್‌ನಿಂದ ಲ್ಯಾಂಡ್ ಜಿಹಾದ್ – ಬಿಜೆಪಿ ಆಕ್ರೋಶ

    ಯಾದಗಿರಿ: ವಕ್ಫ್ ಆಸ್ತಿ ವಿವಾದಕ್ಕೆ (Waqf Board) ಸಂಬಂಧಿಸಿದಂತೆ ರಾಜ್ಯಾದ್ಯಂತ ಬಿಜೆಪಿ (BJP) ಪ್ರತಿಭಟನೆ ನಡೆಸುತ್ತಿದ್ದು, ಯಾದಗಿರಿಯಲ್ಲಿಯೂ ಪ್ರತಿಭಟನೆಯ ಕಾವು ಜೋರಾಗಿದೆ.

    ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಬಿಜೆಪಿ ಪ್ರತಿಭಟನೆ (BJP Protest) ನಡೆಸುತ್ತಿದ್ದು, ರಾಜ್ಯ ಸರ್ಕಾರ ಲ್ಯಾಂಡ್ ಜಿಹಾದ್ ಮಾಡುತ್ತಿದೆ ಎಂದು ಕಿಡಿಕಾರಿದೆ.ಇದನ್ನೂ ಓದಿ: US Election 2024 | 7 ಕೋಟಿಗೂ ಹೆಚ್ಚು ಜನರಿಂದ ಮೊದಲೇ ಮತದಾನ – Swing ರಾಜ್ಯಗಳಲ್ಲಿ ಟ್ರಂಪ್‌ ಮುನ್ನಡೆ

    ಬಿಜೆಪಿ ಜಿಲ್ಲಾಧ್ಯಕ್ಷ ಅಮೀನರೆಡ್ಡಿ ಯಾಳಗಿ ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು, ಮಠ, ಮಂದಿರ, ರೈತರ ಆಸ್ತಿ ಕಬಳಿಕೆ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ರಾಜ್ಯ ಕಾಂಗ್ರೆಸ್ (Congress) ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ, ವಕ್ಫ್ ಆಸ್ತಿ ಕಬಳಿಕೆ ವಿರುದ್ಧ ಹೋರಾಟಗಾರರು ಆಗ್ರಹಿಸಿದ್ದು, ಕೂಡಲೇ ಸಚಿವ ಜಮೀರ್ ಅಹ್ಮದ್ ರಾಜೀನಾಮೆ ನೀಡಬೇಕು. ಸಿಎಂ ಸಿದ್ದರಾಮಯ್ಯ ವಿರುದ್ಧ ಧಿಕ್ಕಾರ ಕೂಗಿದ್ದಾರೆ.ಇದನ್ನೂ ಓದಿ: Uttarakhand | ಕಮರಿಗೆ ಉರುಳಿದ ಬಸ್‌, ಸಾವಿನ ಸಂಖ್ಯೆ 36ಕ್ಕೆ ಏರಿಕೆ, 19 ಮಂದಿಗೆ ಗಾಯ

  • ಸರ್ವರ್ ಸಮಸ್ಯೆಯಿಂದ ಅಕ್ಕಿ ಪಡೆಯಲು ಪರದಾಟ – ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ

    ಸರ್ವರ್ ಸಮಸ್ಯೆಯಿಂದ ಅಕ್ಕಿ ಪಡೆಯಲು ಪರದಾಟ – ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ

    ಯಾದಗಿರಿ: ಅನ್ನಭಾಗ್ಯ ಯೋಜನೆಯಡಿ (AnnaBhagya Scheme) ಅಕ್ಕಿ ಪಡೆಯಲು ಪಡಿತರು ಪರದಾಡುವಂತಹ ಸ್ಥಿತಿ ಎದುರಾಗಿದ್ದು, ಸರ್ವರ್ ಸಮಸ್ಯೆಯಿಂದಾಗಿ ಕಳೆದ ಒಂದು ವಾರದಿಂದ ಪರದಾಡುತ್ತಿದ್ದಾರೆ.

    ಯಾದಗಿರಿ (Yadagiri) ಜಿಲ್ಲೆಯ ಸ್ಟೇಷನ್ ರಸ್ತೆಯಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ಜನರು ಅಕ್ಕಿ ಪಡೆಯಲು ಪರದಾಡುತ್ತಿದ್ದು, ಸರ್ವರ್ ಸಮಸ್ಯೆಯಿಂದಾಗಿ ಗ್ರಾಹಕರ ಬೆರಳಚ್ಚನ್ನು ವೆಬ್‌ಸೈಟ್ ಸ್ವೀಕರಿಸುತ್ತಿಲ್ಲ.ಇದನ್ನೂ ಓದಿ: ಡಿಕೆಶಿ ನೇತೃತ್ವದಲ್ಲಿ ರಾಜಕೀಯ ಜೀವನ ಆರಂಭಿಸಿದ್ದೆ, ಮರಳಿ ಮನೆಗೆ ಬಂದಿದ್ದೇನೆ: ಸಿಪಿ ಯೋಗೇಶ್ವರ್‌

    ಗ್ರಾಮೀಣ ಪ್ರದೇಶದಲ್ಲಿ ಸರ್ವರ್ ಸಿಗದ ಹಿನ್ನೆಲೆ ಯಾದಗಿರಿ ಜಿಲ್ಲಾ ಕೇಂದ್ರಕ್ಕೆ ಜನರು ಆಗಮಿಸುತ್ತಿದ್ದಾರೆ. ಆದರೆ ಅಲ್ಲಿಯೂ ಜನರಿಗೆ ಅಕ್ಕಿ ಸಿಗುತ್ತಿಲ್ಲ. ಕೂಲಿ ಕೆಲಸ ಬಿಟ್ಟು ಪಡಿತರ ಧಾನ್ಯ ಪಡೆಯಲು ಗ್ರಾಹಕರು ಹರಸಾಹಸಪಡುತ್ತಿದ್ದಾರೆ. ಜೊತೆಗೆ ಜುಲೈ ತಿಂಗಳಿನಿAದ ಐದು ಕೆಜಿ ಅಕ್ಕಿಯ ಬದಲು ಹಣ ಪಡೆಯಬಹುದು ಎಂಬುವುದಕ್ಕೂ ಕತ್ತರಿ ಬಿದ್ದಿದೆ. ಒಂದು ಕಡೆ ಅಕ್ಕಿಯೂ ಇಲ್ಲ. ಇನ್ನೊಂಡು ಕಡೆ ಹಣವೂ ಇಲ್ಲ ಎನ್ನುವಂತಾಗಿದೆ. ಈ ಸಮಸ್ಯೆಯಿಂದಾಗಿ ಊಟಕ್ಕೆ ಅಕ್ಕಿ ಇಲ್ಲದೇ ಜನರು ಪರದಾಟ ನಡೆಸುತ್ತಿದ್ದಾರೆ.

    ಓರ್ವ ಗ್ರಾಹಕಿ ಮಾತನಾಡಿ, ಸರ್ಕಾರ ಅಕ್ಕಿಯ ಒಂದು ರೂಪಾಯಿ ಹಣವನ್ನು ಪಾವತಿ ಮಾಡಿಲ್ಲ. ಒಂದು ಕಡೆ ರೇಷನ್ ಹಣವೂ ಇಲ್ಲ ಮತ್ತೊಂದೆಡೆ ಊಟ ಮಾಡಲು ಮನೆಯಲ್ಲಿ ಅಕ್ಕಿಯೂ ಇಲ್ಲ, ನಾವು ಬಡವರು ಹೇಗೆ ಬದುಕಬೇಕು. ಸರ್ವರ್ ಇಲ್ಲವೆಂದು ಅಕ್ಕಿ ಕೊಡುತ್ತಿಲ್ಲ. ನಾವು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತಂದು ತಪ್ಪು ಮಾಡಿದ್ದೇವೆ. ಸಿದ್ದರಾಮಯ್ಯರನ್ನು ನಂಬಿ ನಾವು ಅಧಿಕಾರಕ್ಕೆ ತಂದಿದ್ದೇವೆ. ಈಗ ಅಕ್ಕಿ ಇಲ್ಲದೇ ನಾವು ಹೇಗೆ ಊಟ ಮಾಡಬೇಕು. ಬೇರೆಯವರಿಂದ ಅಕ್ಕಿ ಸಾಲ ಪಡೆದು ಊಟ ಮಾಡುವ ಪರಿಸ್ಥಿತಿ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ಒಡಿಶಾ ಸರ್ಕಾರದ ಮಹಿಳಾ ಉದ್ಯೋಗಿಗಳಿಗೆ ತಿಂಗಳಿಗೆ 1 ಮುಟ್ಟಿನ ರಜೆ ಘೋಷಣೆ

  • ಅಕ್ರಮವಾಗಿ ನಕಲಿ ರಸಗೊಬ್ಬರ, ಕ್ರಿಮಿನಾಶಕ ಸಾಗಿಸುತ್ತಿದ್ದ ವಾಹನ ಜಪ್ತಿ

    ಅಕ್ರಮವಾಗಿ ನಕಲಿ ರಸಗೊಬ್ಬರ, ಕ್ರಿಮಿನಾಶಕ ಸಾಗಿಸುತ್ತಿದ್ದ ವಾಹನ ಜಪ್ತಿ

    ಯಾದಗಿರಿ: ನಕಲಿ ರಸಗೊಬ್ಬರ, ಕ್ರಿಮಿನಾಶಕ ಸಾಗಿಸುತ್ತಿದ್ದ ವಾಹನ ಜಪ್ತಿ ಮಾಡಿದ್ದು, 2.26 ಲಕ್ಷ ರೂ. ಮೌಲ್ಯದ ನಕಲಿ ಕ್ರಿಮಿನಾಶಕವನ್ನು ಗೋಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ವಾಹನ ಚಾಲಕ ಸೈಯದ್ ಅಮೀನ್ ಸಾಬ್ ಉಕ್ಕಲಿ ಎಂಬಾತನನ್ನು ಬಂಧಿಸಿದ್ದಾರೆ.ಇದನ್ನೂ ಓದಿ: ನಿಯತ್ತಾಗಿರುವವರು ಯಾರು ಬೇಕಾದರೂ ಕಾಂಗ್ರೆಸ್‌ಗೆ ಬರಬಹುದು: ಕೊತ್ತೂರು ಮಂಜುನಾಥ್

    ವಿಜಯಪುರ (Vijayapura) ಜಿಲ್ಲೆಯ ಸಿಂದಗಿಯಿಂದ (Sindagi) ಚಾಮನಾಳ ಕಡೆಗೆ ಟಾಟಾ ಎಸಿ ವಾಹನವೊಂದು ಹೊರಟಿತ್ತು. ಖಚಿತ ಮಾಹಿತಿಯ ಮೇರೆಗೆ ಗೋಗಿ ಪೊಲೀಸರು ವಾಹನವನ್ನು ಪರಿಶೀಲಿಸಿದ್ದಾರೆ. ಈ ವೇಳೆ 2.26 ಲಕ್ಷ ರೂ. ಮೌಲ್ಯದ ವಸ್ತು ಪತ್ತೆಯಾಗಿದ್ದು, ಅದರಲ್ಲಿ 70 ಸಾವಿರ ರೂ. ಮೌಲ್ಯದ 50 ಚೀಲ ರಸಗೊಬ್ಬರ, 1.44 ಲಕ್ಷ ಮೌಲ್ಯದ 44 ಡಬ್ಬಾ ಕ್ರಿಮಿನಾಶಕ ಪತ್ತೆಯಾಗಿದೆ.

    ಗೋಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಇದನ್ನೂ ಓದಿ: ವಿಜಯಪುರದಲ್ಲಿ ಭೂಕಂಪನ: ಜೋರು ಶಬ್ದಕ್ಕೆ ಹೆದರಿ ಮನೆಯಿಂದಾಚೆ ಓಡಿ ಬಂದ ಜನ!

  • ಯಾದಗಿರಿ | ಮಳೆಯ ಅವಾಂತರಕ್ಕೆ ಶೆಡ್ ಗೋಡೆ ಕುಸಿದು ವೃದ್ಧೆ ಸಾವು

    ಯಾದಗಿರಿ | ಮಳೆಯ ಅವಾಂತರಕ್ಕೆ ಶೆಡ್ ಗೋಡೆ ಕುಸಿದು ವೃದ್ಧೆ ಸಾವು

    ಯಾದಗಿರಿ: ಮಳೆಯ ಅವಾಂತರಕ್ಕೆ ಟಿನ್ ಶೆಡ್ ಗೋಡೆ ಕುಸಿದು ವೃದ್ಧೆ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಗುರುಮಠಕಲ್ (Gurumatkal) ತಾಲೂಕಿನ ಚಿಂತನಹಳ್ಳಿ ಗ್ರಾಮದಲ್ಲಿ ನಡೆದಿದೆ.ಇದನ್ನೂ ಓದಿ: ನಟಿ ತಮನ್ನಾ ಭಾಟಿಯಾಗೆ ED ವಿಚಾರಣೆ

    ಮೃತ ವೃದ್ಧೆಯನ್ನು ಚಿಂತನಹಳ್ಳಿ ಗ್ರಾಮದ ನಿವಾಸಿ ಗುಂಜಲಮ್ಮ (68) ಎಂದು ಗುರುತಿಸಲಾಗಿದೆ.

    ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ರಾತ್ರಿ ಮಲಗಿರುವಾಗ ಸುರಿದ ಮಳೆಯ ರಭಸಕ್ಕೆ ಟಿನ್ ಶೆಡ್ ಗೋಡೆ ಕುಸಿದಿದ್ದು, ಮನೆಯಲ್ಲಿ ಮಲಗಿದ್ದ ವೃದ್ಧೆ ಸಾವನ್ನಪ್ಪಿದ್ದಾರೆ. ವೃದ್ಧೆಯ ಜೊತೆಗಿದ್ದ ಆಕೆಯ ಸಹೋದರ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಚಿಕಿತ್ಸೆ ಪಡೆಯುತ್ತಿದ್ದು, ಗುರುಮಠಕಲ್ ಪೊಲೀಸ್ ಠಾಣಾ (Gurumatkal Police Station) ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಇದನ್ನೂ ಓದಿ: ಭವಾನಿ ರೇವಣ್ಣಗೆ ಬಿಗ್‌ ರಿಲೀಫ್‌ – ಜಾಮೀನು ಅರ್ಜಿ ವಜಾ ಮಾಡಲು ನಿರಾಕರಿಸಿದ ಸುಪ್ರೀಂ

  • ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಬಾಲಕನಿಗೆ ಚಾಕಲೇಟ್ ಕೊಡಿಸಿ ಕೊಲೆ!

    ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಬಾಲಕನಿಗೆ ಚಾಕಲೇಟ್ ಕೊಡಿಸಿ ಕೊಲೆ!

    ಯಾದಗಿರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪ್ರೇಯಸಿಯ ಪುತ್ರನಿಗೆ ಚಾಕಲೇಟ್ ಕೊಡಿಸಿ ಪ್ರಿಯಕರ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಗುರುಮಠಕಲ್ (Gurumatkal) ತಾಲೂಕಿನ ಕಾಕಲವಾರ (Kakalwar) ಗ್ರಾಮದಲ್ಲಿ ನಡೆದಿದೆ.

    ಮೃತ ಬಾಲಕನನ್ನು 11 ವರ್ಷದ ನರೇಂದ್ರ ಎಂದು ಗುರುತಿಸಲಾಗಿದೆ.ಇದನ್ನೂ ಓದಿ:ಟೆಸ್ಟ್‌ ಕ್ರಿಕೆಟ್‌ನಲ್ಲಿ ಐತಿಹಾಸಿಕ ದಾಖಲೆ ಬರೆದ ಜೋ ರೂಟ್‌

    ಹಲವು ವರ್ಷಗಳಿಂದ ನರೇಂದ್ರನ ತಾಯಿ ಗೋವಿಂದಮ್ಮಳ ಜೊತೆ ಅಬ್ದುಲ್ ಎಂಬಾತ ಅಕ್ರಮ ಸಂಬಂಧ ಹೊಂದಿದ್ದ. ಆರೋಪಿ ಅಬ್ದುಲ್ ಗೋವಿಂದಮ್ಮಳನ್ನು ಓಡಿ ಹೋಗಿ ಮದುವೆಯಾಗೋಣ ಎಂದು ಕರೆದಿದ್ದ. ಆದರೆ ಗೋವಿಂದಮ್ಮ ಮಗನಿಗಾಗಿ ಓಡಿ ಹೋಗಿ ಮದುವೆಯಾಗುವುದನ್ನು ನಿರಾಕರಿಸಿದ್ದಳು. ಆಕೆಯ ಮಗನನ್ನು ಕಿರಾಣಿ ಅಂಗಡಿಗೆ ಕರೆದುಕೊಂಡು ಹೋಗಿ ಚಾಕಲೇಟ್ ಕೊಡಿಸಿದ್ದ. ಬಳಿಕ ಅಲ್ಲಿಂದ ಬಾಲಕನನ್ನು ಕರೆದೊಯ್ದು ಕತ್ತು ಹಿಸುಕಿ ಕೊಲೆ ಮಾಡಿದ್ದ. ಆಕೆಯನ್ನು ವರಿಸಿಕೊಳ್ಳಲು ಈ ಕೃತ್ಯವನ್ನು ಎಸಗಿದ್ದ.

    ಸೆ.30ರಂದು ಅಬ್ದುಲ್ ಬಾಲಕನನ್ನು ಕೊಲೆ ಮಾಡಿದ್ದು, ಅನುಮಾನಾಸ್ಪದವಾಗಿ ಕಂಡಿದೆ. ತನಿಖೆ ನಡೆಸಿದಾಗ ಕಿರಾಣಿ ಅಂಗಡಿಯಲ್ಲಿ ಚಾಕಲೇಟ್ ಕೊಡಿಸಿ ಬಾಲಕನನ್ನು ಕರೆದೊಯ್ಯುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಾಲಕನ ಸಾವು ನಡೆದ 9 ದಿನಗಳ ಬಳಿಕ ಪ್ರಕರಣ ಬೇಧಿಸಿ ಆರೋಪಿಯನ್ನು ಪೊಲೀಸರು ಜೈಲಿಗಟ್ಟಿದ್ದಾರೆ.

    ಸದ್ಯ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಸಂಜು ವೆಡ್ಸ್ ಗೀತಾ 2 : ಮಂಗ್ಲಿ ಹಾಡಿಗೆ ಸೊಂಟ ಬಳುಕಿಸಿದ ರಾಗಿಣಿ

  • ವಾರದಲ್ಲಿ ಸಿಎಂ ರಾಜೀನಾಮೆ ಕೊಡ್ತಾರೆ, ಸರ್ಕಾರ ಉರುಳುತ್ತೆ: ಛಲವಾದಿ

    ವಾರದಲ್ಲಿ ಸಿಎಂ ರಾಜೀನಾಮೆ ಕೊಡ್ತಾರೆ, ಸರ್ಕಾರ ಉರುಳುತ್ತೆ: ಛಲವಾದಿ

    ಯಾದಗಿರಿ: ಒಂದು ವಾರದಲ್ಲಿ ಸಿದ್ದರಾಮಯ್ಯ (CM Siddaramaiah) ರಾಜೀನಾಮೆ ಕೊಡ್ತಾರೆ, ಸರ್ಕಾರ ಉರುಳುತ್ತದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಸ್ಫೋಟಕ ಹೇಳಿಕೆ ನೀಡಿದ್ದಾರೆ.

    ಜಿಲ್ಲೆಯಲ್ಲಿ ಮಾಧ್ಯದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ಇನ್ನೊಂದು ವಾರ ಇರುವುದು ಕಷ್ಟ. ಒಂದು ವಾರದಲ್ಲಿ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರೆ, ಸರ್ಕಾರ ಉರುಳುತ್ತದೆ. ಜಗ್ಗುವುದಿಲ್ಲ, ಬಗ್ಗುವುದಿಲ್ಲ ಅಂತ ಹೇಳಿದ್ದರು. ಮೊನ್ನೆ ರಾತ್ರಿಯೇ ಜಗ್ಗಿದು ಆಯ್ತು. ಗ್ಗಿದು ಆಯ್ತು. ಇನ್ನೆನೂ ಉಳಿದಿದೆ. ಈ ಸರ್ಕಾರ ರಾಜ್ಯದಲ್ಲಿ ಇರಲಿಕ್ಕೆ ಸಾಧ್ಯವಿಲ್ಲ. ಯಾಕೆಂದರೆ ಇದು ಪಾಪದ ಸರ್ಕಾರ. ಜನರಿಗೆ ಸುಳ್ಳು ಹೇಳಿ, ವಂಚನೆ ಮಾಡಿ ಅಧಿಕಾರಕ್ಕೆ ಬಂದಿರುವ ಸರ್ಕಾರ ಇದು ಕಿಡಿಕಾರಿದ್ದಾರೆ.ಇದನ್ನೂ ಓದಿ: ಸಿದ್ದರಾಮಯ್ಯ ಜೀವನಾಧಾರಿತ ಸಿನಿಮಾದ ಶೂಟಿಂಗ್‌ಗೆ ತಾತ್ಕಾಲಿಕ ಬ್ರೇಕ್‌

    ಸಿದ್ದರಾಮಯ್ಯ ರಾಜೀನಾಮೆ ಕೊಟ್ಟರೇ ಸರ್ಕಾರ ಬಿದ್ದ ಹಾಗೇ ಅಲ್ಲವಾ. ಕಾಂಗ್ರೆಸ್‌ನಲ್ಲೇ (Congress) ಸಿಎಂ ಸ್ಥಾನಕ್ಕಾಗಿ ಹತ್ತು ಜನ ಬಟ್ಟೆ ಹೊಲಿಸಿಕೊಂಡು ಕೂತಿದ್ದಾರೆ. ಸಿಎಂ ಬದಲಾವಣೆ ಆದರೇ ದಲಿತರೇ ಸಿಎಂ ಆಗಬೇಕು. ಯಾಕೆಂದರೆ 77 ವರ್ಷ ಜೈಲಿನಲ್ಲಿ ಇಟ್ಟುಕೊಂಡ ಹಾಗೇ ಕಬ್ಜಾ ಮಾಡಿಕೊಂಡು ಮತ ಪಡೆದಿದ್ದೀರಿ. ದಲಿತರ ಮತ ಪಡೆದು ಅವರಿಗೆ ಅನ್ಯಾಯ ಮಾಡ್ತಿದ್ದೀರಿ. ದಲಿತರನ್ನ ಸಿಎಂ ಮಾಡಿ ಇಲ್ಲದೇ ಇದ್ದರೆ ಅವರ ಕೋಪಕ್ಕೆ ನೀವು ಗುರಿ ಆಗುತ್ತೀರಿ ಎಂದು ಹೇಳಿದರು.

    ಆರ್.ಅಶೋಕ್ ಬಿಡಿಎ ಜಮೀನು ವಾಪಸ್ ನೀಡಿರುವ ವಿಚಾರವಾಗಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ಮುಡಾ ನಿವೇಶನ ಕೇಸಿಗೂ ಆರ್.ಅಶೋಕ್ ಕೇಸ್‌ಗೂ ಸಂಬಂಧವಿಲ್ಲ. ಆರ್.ಅಶೋಕ್ (R Ashok) ವಾಪಸ್ ಕೊಟ್ಟಿರೋದರಲ್ಲಿ ಏನು ತಪ್ಪಿದೆ. ನೀವು ತೊಡೆತಟ್ಟಿ ಹೋಗಿ ನಂತರ ಸೈಟ್ ವಾಪಸ್ ಕೊಟ್ಟಿದ್ದೀರಿ. ಅವತ್ತೇ ಸಿಎಂ ಸಿದ್ದರಾಮಯ್ಯ ಅವರು ಸೈಟ್ ವಾಪಸ್ ಕೊಡಬೇಕಿತ್ತು. ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವಾಗ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸೈಟ್ ವಾಪಸ್ ಕೊಟ್ಟರೆ ಈಗ ಕ್ಷಮೆ ಇಲ್ಲ ಎಂದು ತಿಳಿಸಿದರು.ಇದನ್ನೂ ಓದಿ: ಸರ್ಕಾರ ಉರುಳಿಸುವ ದುರಾಲೋಚನೆ ಬರದಿರಲಿ: ದಸರಾ ಉದ್ಘಾಟಿಸಿ ಹಂಪ ನಾಗರಾಜಯ್ಯ