Tag: yadgir vaccine massage

  • ಲಸಿಕೆ ಹಾಕಿಸದಿದ್ರೂ ಬರುತ್ತೆ ಎರಡು ಡೋಸ್ ವ್ಯಾಕ್ಸಿನೇಷನ್ ಸಕ್ಸಸ್ ಮೆಸೇಜ್!

    ಲಸಿಕೆ ಹಾಕಿಸದಿದ್ರೂ ಬರುತ್ತೆ ಎರಡು ಡೋಸ್ ವ್ಯಾಕ್ಸಿನೇಷನ್ ಸಕ್ಸಸ್ ಮೆಸೇಜ್!

    ಯಾದಗಿರಿ: ಸದ್ಯ ಕೇಂದ್ರ ಸರ್ಕಾರ ದೇಶದಲ್ಲಿ ನೂರು ಕೋಟಿ ಜನರಿಗೆ ಕೋವಿಡ್ ಲಸಿಕೆ ಕೊಟ್ಟ ಸಂಭ್ರಮದಲ್ಲಿದೆ. ಆದರೆ ಈ ನೂರು ಕೋಟಿ ಲೆಕ್ಕ ಎಷ್ಟು ಸರಿ ಎನ್ನುವ ವಿವಾದ ಕೂಡ ಎದ್ದಿದೆ. ಇದಕ್ಕೆ ಪುಷ್ಠಿ ನೀಡುವಂತೆ ಯಾದಗಿರಿಯಲ್ಲಿ ಕೋವಿಡ್ ಲಸಿಕೆಯ ಎರಡನೇ ಡೋಸ್ ಹಾಕಿಸಿಕೊಳ್ಳದಿದ್ದರೂ ನಿಮ್ಮ ಎರಡು ಡೋಸ್ ವ್ಯಾಕ್ಸಿನೇಷನ್ ಸಕ್ಸಸ್ ಎಂಬ ಸಂದೇಶ ಬರುತ್ತಿರುವುದು ಅಚ್ಚರಿ ಮೂಡಿಸಿದೆ.

    ಕೋವಿಡ್ ಲಸಿಕೆ ಕಂಪ್ಲೀಟ್ ಆಗದೇ ಇದ್ದರೂ ಸರ್ಟಿಫಿಕೇಟ್ ಬರುತ್ತಿದೆ. ಇದು ಜಿಲ್ಲೆಯಲ್ಲಿ ಜನರ ಅನುಮಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: 15 ದಿನ ಟೈಂ ಕೊಡಿ, ಬಿಟ್ ಕಾಯಿನ್ ಹಗರಣದ ಪೂರ್ಣ ಮಾಹಿತಿ ನಾನೇ ಕೊಡ್ತೀನಿ: ಎಚ್‍ಡಿಕೆ

    ಬಂದ ಸರ್ಟಿಫಿಕೇಟ್ ಮಾಹಿತಿಗೂ ಜಿಲ್ಲಾಸ್ಪತ್ರೆಯಲ್ಲಿನ ರಿಜಿಸ್ಟರ್ ಬುಕ್‍ನಲ್ಲಿರುವ ಮಾಹಿತಿಗೂ ತಾಳೆ ಆಗದೇ ಇರುವುದು ಅನುಮಾನದ ಬೆಂಕಿಗೆ ತುಪ್ಪ ಸೇರಿದಂತಾಗಿದೆ. ಜಿಲ್ಲೆಯಲ್ಲಿ ಸುಮಾರು ಜನರಿಗೆ ಇದೆ ರೀತಿಯಲ್ಲಿ ಮೆಸೇಜ್ ಬಂದಿವೆ. ಇದನ್ನೂ ಓದಿ: ಕೋವಿಡ್ ಲಸಿಕೆಯ 2ನೇ ಡೋಸ್ ಪಡೆಯಲು ಜನರ ಹಿಂದೇಟು- ವ್ಯಾಕ್ಸಿನ್ ವಿತರಣೆಗೆ ಹೊಸ ಯೋಜನೆ

    ಈ ಬಗ್ಗೆ ಆರೋಗ್ಯ ಇಲಾಖೆಯನ್ನು ಕೇಳಿದರೆ ನಮಗೆ ಗೊತ್ತಿಲ್ಲ ಎಂದು ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ನಿಗದಿತ ದಿನ ಎರಡನೇ ಡೋಸ್ ಲಸಿಕೆ ಪಡೆಯಬೇಕಾಗಿರುವವರಿಗೆ ಆ ದಿನ ಎರಡನೇ ಡೋಸ್ ವ್ಯಾಕ್ಸಿನ್ ಇದೆ ಆಸ್ಪತ್ರೆಗೆ ಬನ್ನಿ ಎಂದು ಮೆಸೇಜ್ ಬರುತ್ತದೆ. ಅವರು ಹೋಗದೇ ಇದ್ದರೂ ಸಂಜೆ ವೇಳೆಗೆ ನಿಮ್ಮ ಎರಡು ಡೋಸ್ ಲಸಿಕೆ ಪೂರ್ಣಗೊಂಡಿದೆ ಎಂದು ಸಂದೇಶ ಬರುತ್ತದೆಂದು ಸ್ಥಳೀಯರು ದೂರಿದ್ದಾರೆ.