Tag: Yadgir Police

  • ಪ್ರೀತಿ ನಿರಾಕರಿಸಿದವನ ಮೇಲೆ ಕೊಲೆ ಆರೋಪದ ಸಂಚು – ಮಗುವನ್ನು ಬಾವಿಗೆ ಎಸೆದ ಅಪ್ರಾಪ್ತೆ

    ಪ್ರೀತಿ ನಿರಾಕರಿಸಿದವನ ಮೇಲೆ ಕೊಲೆ ಆರೋಪದ ಸಂಚು – ಮಗುವನ್ನು ಬಾವಿಗೆ ಎಸೆದ ಅಪ್ರಾಪ್ತೆ

    ಯಾದಗಿರಿ: ನಗರದ (Yadgir) ಅಂಬೇಡ್ಕರ್ ಬಡಾವಣೆಯಲ್ಲಿ ನಡೆದಿದ್ದ ಹಸುಗೂಸಿನ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಗುವಿನ ಚಿಕ್ಕಪ್ಪ ಪ್ರೀತಿ ನಿರಾಕರಸಿದ್ದಕ್ಕೆ ಆತನ ಮೇಲೆ ಕೊಲೆ ಆರೋಪ ಬರುವಂತೆ ಸಂಚು ರೂಪಿಸಿ ಅಪ್ರಾಪ್ತೆಯೊಬ್ಬಳು ಮಗುವನ್ನು ಬಾವಿಗೆ ಎಸೆದು ಹತ್ಯೆ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

    ಜು.6 ರಂದು ನಾಗೇಶ್ ಹಾಗೂ ಚಿಟ್ಟೆಮ್ಮ ಎಂಬವರ 2 ತಿಂಗಳ ಹಸುಗೂಸನ್ನು ಬಾವಿಗೆ ಎಸೆದು ಕೊಲೆ ಮಾಡಲಾಗಿತ್ತು. ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಮಗುವನ್ನು ತೆಗೆದುಕೊಂಡು ಹೋಗಿ ಬಾಲಕಿಯೊಬ್ಬಳು ಕೊಲೆ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಮಗುವನ್ನು ಹತ್ಯೆ ಮಾಡಿ ಬಳಿಕ ಕಣ್ಣೀರು ಹಾಕಿ ನಾಟಕ ಮಾಡಿದ್ದಳು. ಅಲ್ಲದೇ ಮಗು ನಾಪತ್ತೆಯಾದಾಗ ಹುಡುಕುವ ವೇಳೆ ಬಾವಿ ಕಡೆ ಇರಬಹುದು, ಒಬ್ಬರು ಮಗುವನ್ನು ತೆಗೆದುಕೊಂಡು ಹೋದ್ರು ಎಂದು ಪೋಷಕರಿಗೆ ಬಾಲಕಿ ಹೇಳಿದ್ದಳು. ಇದನ್ನೂ ಓದಿ: ತೀವ್ರ ಹೃದಯಾಘಾತದಿಂದ ವಿರಕ್ತ ಮಠದ ಶ್ರೀಗಳು ವಿಧಿವಶ

    ಕೊಲೆಯಾದ ಮಗುವಿನ ಚಿಕ್ಕಪ್ಪ ಯಲ್ಲಪ್ಪನನ್ನು ಅಪ್ರಾಪ್ತೆ ಪ್ರೀತಿಸುತ್ತಿದ್ದಳು. ಅಲ್ಲದೇ 5 ಬಾರಿ ಆತನಿಗೆ ಪ್ರಪೋಸ್ ಮಾಡಿದ್ದಳು. ಆದರೆ ಯಲ್ಲಪ್ಪ, ಸಂಬಂಧದಲ್ಲಿ ಬಾಲಕಿ ತಂಗಿಯಾಗುತ್ತಾಳೆ ಎಂದು ನಿರಾಕರಿಸಿದ್ದ. ಇದರಿಂದ ಸಿಟ್ಟಿಗೆದ್ದ ಬಾಲಕಿ, ಮಗುವನ್ನು ಹತ್ಯೆಗೈದು ಯಲ್ಲಪ್ಪನ ಮೇಲೆ ಆರೋಪ ಬರುವಂತೆ ಸಂಚು ರೂಪಿಸಿ, ಕೊಲೆ ಮಾಡಿದ್ದಾಳೆ ಎಂದು ತಿಳಿದು ಬಂದಿದೆ.

    ಅಲ್ಲದೇ ಕಳೆದ ವರ್ಷ ರಕ್ಷಾಬಂಧನದಲ್ಲಿ ಯಲ್ಲಪ್ಪನಿಗೆ ಬಾಲಕಿ ರಾಖಿ ಸಹ ಕಟ್ಟಿದ್ದಳು ಎಂದು ತಿಳಿದು ಬಂದಿದೆ. ಆದರೂ ಬಾಲಕಿ ಯಲ್ಲಪ್ಪನನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದಳು. ಇದೀಗ ಬಾಲಕಿಯ ಹುಚ್ಚು ಪ್ರೀತಿಗೆ ಪುಟ್ಟ ಮಗುವಿನ ಜೀವ ಬಲಿಯಾಗಿದೆ. ಈ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: 15 ದಿನದ ಮಗಳನ್ನ ಜೀವಂತ ಸಮಾಧಿ ಮಾಡಿದ ತಂದೆ!

  • ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಟ್ವಿಸ್ಟ್ – ಲವ್ ಜಿಹಾದ್‌ಗೆ ಮುಂದಾಗಿದ್ದ, ಮತಾಂತರಕ್ಕೆ ಯತ್ನಿಸಿದ್ದನಂತೆ ಯುವಕ

    ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಟ್ವಿಸ್ಟ್ – ಲವ್ ಜಿಹಾದ್‌ಗೆ ಮುಂದಾಗಿದ್ದ, ಮತಾಂತರಕ್ಕೆ ಯತ್ನಿಸಿದ್ದನಂತೆ ಯುವಕ

    – ಹಲ್ಲೆಗೊಳಗಾದ ಯುವಕ ಸೇರಿ 16 ಜನರ ವಿರುದ್ಧ ಪೋಕ್ಸೋ ಕೇಸ್‌

    ಯಾದಗಿರಿ: ಹಿಂದೂ ಬಾಲಕಿಯನ್ನ ಪ್ರೀತಿಸುತ್ತಿದ್ದ ಎಂಬ ಕಾರಣಕ್ಕೆ ಅನ್ಯಕೋಮಿನ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಈಗ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಹಲ್ಲೆಗೊಳಗಾಗಿದ್ದ ಯುವಕ ವಾಹಿದ್ ಲವ್ ಜಿಹಾದ್ (Love Jihad) ಮುಂದಾಗಿದ್ದ, ಬಾಲಕಿಯನ್ನ ಮತಾಂತರಿಸಲು ಮುಂದಾಗಿದ್ದ ಅನ್ನೋ ಆರೋಪ ಕೇಳಿಬಂದಿದೆ.

    ಹೌದು. ವಾಹಿದ್ ಅಪ್ರಾಪ್ತೆಯನ್ನ ಪುಸಲಾಯಿಸಿ, ಮತಾಂತರಕ್ಕೆ ಯತ್ನಿಸಿದ್ದು, ಬಾಲಕಿಯೊಂದಿಗೆ ಬಲವಂತದಿಂದ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ನಂತರ ನಮ್ಮ ಸಮುದಾಯದ ಹಿರಿಯರೆಲ್ಲ ನಮ್ಮ ಧರ್ಮಕ್ಕೆ ಕರೆದುಕೊಳ್ಳುತ್ತಾರೆ, ಅಲ್ಲಿ ನಿನಗೆ ಬೇಕಾದಂತೆ ಇರಬಹುದು ಎಂದು ನಂಬಿಸಿದ್ದಾನೆ. ಅಲ್ಲದೇ ಆಕೆಯೊಂದಿಗೆ ಸಲುಗೆಯಿಂದ ಇದ್ದ ಕ್ಷಣಗಳನ್ನ ಫೋಟೋ, ವೀಡಿಯೋ ಮಾಡಿಕೊಂಡು ಬ್ಲ್ಯಾಕ್‌ಮೇಲ್‌ ಮಾಡೋದಕ್ಕೆ ಶುರು ಮಾಡಿದ್ದಾನೆ ಎಂದು ಬಾಲಕಿ ಆರೋಪಿಸಿದ್ದಾಳೆ. ಇದನ್ನೂ ಓದಿ: INDIA ಗೆದ್ದರೆ ಮೇಕೆದಾಟು ಯೋಜನೆಗೆ ತಡೆ: ಪ್ರಣಾಳಿಕೆಯಲ್ಲಿ ಡಿಎಂಕೆ ಘೋಷಣೆ

    ತಾನು ಹೇಳಿದಂತೆ ಕೇಳದೇ ಇದ್ದರೆ, ವೀಡಿಯೋ ಮತ್ತು ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದ ಆತಂಕಗೊಂಡ ಬಾಲಕಿ ಮನೆಯಲ್ಲಿ ವಿಷಯ ತಿಳಿಸಿದ್ದಾಳೆ. ಬಳಿಕ ಪೋಷಕರು ಬಜರಂಗದಳದ ಮುಖಂಡರಿಗೆ ತಿಳಿಸಿದ್ದಾಳೆ. ನಂತರ ಬಜರಂಗದಳದ ಮುಖಂಡರು ಯುವಕನನ್ನ ಕರೆಸಿ, ಚೆನ್ನಾಗಿ ಥಳಿಸಿ ವೀಡಿಯೋ, ಫೋಟೋಗಳನ್ನ ಡಿಲೀಟ್ ಮಾಡಿಸಿದ್ದಾರೆ. ಮತ್ತೊಮ್ಮೆ ಬಾಲಕಿ ತಂಟೆಗೆ ಬಾರದಂತೆ ಬುದ್ದಿ ಹೇಳಿದ್ದಾರೆ. ಆದ್ರೆ ಯುವಕ ಪೊಲೀಸ್ ಠಾಣೆಯಲ್ಲಿ ಪ್ರೀತಿಸುತ್ತಿದ್ದ ಕಾರಣಕ್ಕೆ ಹಲ್ಲೆ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದ.

    ಈ ಸಂಬಂಧ ಯಾದಗಿರಿ ನಗರ ಠಾಣೆಯಲ್ಲಿ 143, 147, 148, 307, 323, 341, 342, 363, 504 ಹಾಗೂ 506 ಕಲಂ ಅಡಿಯಲ್ಲಿ ಒಂಬತ್ತು‌ ಜನರ ವಿರುದ್ಧ ದೂರು ದಾಖಲಾಗಿತ್ತು. ಕೇಸ್‌ ದಾಖಲಾಗುತ್ತಿದ್ದಂತೆ ಆರೋಪಿಗಳು ತಲೆ ಮರೆಸಿಕೊಂಡಿದ್ದರು. ಇದರಿಂದ ಆಕ್ರೋಶಗೊಂಡ ಪೋಷಕರು ಬಾಲಕಿಯೊಂದಿಗೆ ಬಲವಂತದಿಂದ ಲೈಂಗಿಕವಾಗಿ ವರ್ತಿಸಿ, ಮತಾಂತರಕ್ಕೆ ಯತ್ನಿಸಿದ್ದ ಆರೋಪದ ಮೇಲೆ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಐಪಿಎಲ್‌ ಹಬ್ಬದಲ್ಲಿ ಏನೆಲ್ಲಾ ವಿಶೇಷ – ಚೊಚ್ಚಲ ಟ್ರೋಫಿ ಗೆಲ್ಲುವ ವಿಶ್ವಾಸದಲ್ಲಿ  ಆರ್‌ಸಿಬಿ ಕಲಿಗಳು

    ಪ್ರಕರಣಕ್ಕೆ ಸಂಬಂಧಿಸಿದಂತೆ ವಾಹೀದ್ ಸೇರಿದಂತೆ 16 ಜನರ ಮೇಲೆ ಯಾದಗಿರಿ ನಗರ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿದೆ. ಈ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

  • ಯಾದಗಿರಿಯಲ್ಲಿ ಪಡಿತರ ಅಕ್ಕಿಗೆ ಕನ್ನ – 69,000 ರೂ. ಮೌಲ್ಯದ ಅಕ್ಕಿ ವಶ

    ಯಾದಗಿರಿಯಲ್ಲಿ ಪಡಿತರ ಅಕ್ಕಿಗೆ ಕನ್ನ – 69,000 ರೂ. ಮೌಲ್ಯದ ಅಕ್ಕಿ ವಶ

    ಯಾದಗಿರಿ: 2 ಕೋಟಿ ರೂ. ಮೌಲ್ಯದ 6,077 ಕ್ವಿಂಟಲ್ ಪಡಿತರ ಅಕ್ಕಿ ಕಳ್ಳತನ ಪ್ರಕರಣದ ತನಿಖೆ ನಡೆಯುತ್ತಿರುವ ಹೊತ್ತಿನಲ್ಲೇ ಮತ್ತೊಂದು ಪ್ರಕರಣ ಯಾದಗಿರಿಯಲ್ಲಿ (Yadgir) ಬೆಳಕಿಗೆ ಬಂದಿದೆ.

    ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ವಿತರಿಸುವ ಪಡಿತರ ಅಕ್ಕಿಗೆ (Ration Rice) ಕನ್ನ ಹಾಕಿರುವ ಘಟನೆ ರಾಯಚೂರಿನ ಸುರಪುರದಲ್ಲಿ ನಡೆದಿದೆ. ಇದನ್ನೂ ಓದಿ: ಚುನಾವಣೆ ಟಿಕೆಟ್ ಕೊಡಿಸೋದಾಗಿ ಹಣ ಪಡೆದು ವಂಚಿಸಿದ ಡ್ರೋನ್ ‍ಪ್ರತಾಪ್: ದೂರು ದಾಖಲು

    ಟಾಟಾ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಾಟ ಮಾಡಲಾಗುತ್ತಿತ್ತು. ಯಾದಗಿರಿ ಜಿಲ್ಲೆಯ ಸುರಪುರದಿಂದ ರಾಯಚೂರು ಜಿಲ್ಲೆಯ ಲಿಂಗಸೂರಿಗೆ ಸಾಗಾಟಮಾಡಲಾಗುತ್ತಿತ್ತು. ಈ ಸಂಬಂಧ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸುರಪುರ ಠಾಣೆ ಪೊಲೀಸರು 69,000 ರೂ. ಮೌಲ್ಯದ ಪಡಿತರ ಅಕ್ಕಿಯನ್ನ ವಶಪಡಿಸಿಕೊಂಡಿದ್ದಾರೆ.

    50 ಕೆಜಿಯ 45 ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿದ್ದ ಪಡಿತರ ಅಕ್ಕಿ ಪತ್ತೆಯಾಗಿದ್ದು, ಗೂಡ್ಸ್ ವಾಹನದಲ್ಲಿ ಪತ್ತೆಯಾಗಿದೆ. ಪೊಲೀಸರು ತಡೆಹಿಡಿಯುತ್ತಿದ್ದಂತೆ ಚಾಲಕ ಅಲ್ಲೇ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಇದನ್ನೂ ಓದಿ: ಪಂಜಾಬ್‌ ರಾಜ್ಯಪಾಲ ಸ್ಥಾನಕ್ಕೆ ಬನ್ವಾರಿಲಾಲ್ ಪುರೋಹಿತ್ ರಾಜೀನಾಮೆ

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರಾರಿಯಾದ ಚಾಲಕನನ್ನ ಬಂಧಿಸಲು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಪೂನಂ ಅರೆಸ್ಟ್ ಮಾಡಿ: ‘ಬಾಯ್ಕಾಟ್‌ ಪಾಂಡೆ’ ಟ್ರೆಂಡ್ ಶುರು

  • ಸಚಿವ ಶರಣಬಸಪ್ಪ ದರ್ಶನಾಪೂರ ಕ್ಷೇತ್ರದಲ್ಲೇ 6,000 ಕ್ವಿಂಟಲ್‌ ಪಡಿತರ ಅಕ್ಕಿಗೆ ಕನ್ನ!

    ಸಚಿವ ಶರಣಬಸಪ್ಪ ದರ್ಶನಾಪೂರ ಕ್ಷೇತ್ರದಲ್ಲೇ 6,000 ಕ್ವಿಂಟಲ್‌ ಪಡಿತರ ಅಕ್ಕಿಗೆ ಕನ್ನ!

    – ಬರೋಬ್ಬರಿ 2.66 ಕೋಟಿ ಮೌಲ್ಯದ ಪಡಿತರ ಅಕ್ಕಿ ಕಳವು

    ಯಾದಗಿರಿ: ಯಾದಗಿರಿಯಲ್ಲಿ (Yadgir) ಅನ್ನ ಭಾಗ್ಯ ಅಕ್ಕಿಗೆ ಕನ್ನ ಹಾಕಿರೋ ಘಟನೆ ನಡೆದಿದೆ. ಬೇಲಿಯೇ ಎದ್ದು ಹೊಲ ಮೇಯ್ದಂತಾಗಿರೋ ಈ ಪ್ರಕರಣದಲ್ಲಿ ಪಡಿತರ ಅಕ್ಕಿ ಸಂಗ್ರಹಿಸಿಟ್ಟಿದ್ದ ಗೋದಾಮಿನಿಂದಲೇ ಕಳ್ಳತನವಾಗಿದೆ. ಯಾದಗಿರಿ ಜಿಲ್ಲಾಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ (Sharanabasappa Darshanapur) ಅವರ ಕ್ಷೇತ್ರದ ಸರ್ಕಾರಿ ಗೋದಾಮಿನಲ್ಲಿ ಅಕ್ಕಿ ನಾಪತ್ತೆಯಾಗಿರುವ ಘಟನೆ ನಡೆದಿದೆ.

    ಜಿಲ್ಲೆಯ ಶಹಾಪುರ ನಗರದ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಗೋದಾಮಿನಲ್ಲಿ ಪಡಿತರ ಅಕ್ಕಿ‌ (Ration Rice) ಪರಿಶೀಲನೆ ವೇಳೆ ವ್ಯತ್ಯಾಸ ಕಂಡುಬಂದ ನಂತರ ಪ್ರಕರಣ ಬೆಳಕಿಗೆ ಬಂದಿದೆ.

    ನ್ಯಾಯಬೆಲೆ ಅಂಗಡಿಗೆ ಸಾಗಾಟ ಮಾಡಬೇಕಾದ ಅಕ್ಕಿಯನ್ನ ಅಧಿಕಾರಿಗಳೇ ಸಾಗಾಟ ಮಾಡಿದ್ರಾ ಎಂಬ ಅನುಮಾನ ಕಾಡುತ್ತಿದೆ. ಕಳೆದ ಜೂನ್‌ 2 ರಿಂದ ನವೆಂಬರ್‌ 23ರ ಅವಧಿಯಲ್ಲಿ ಪಡಿತರ ಗೋಲ್ಮಾಲ್ ನಡೆದಿದೆ. ತಂತ್ರಾಂಶದಲ್ಲಿ ತೋರಿಸಿದ ದಾಸ್ತಾನಿಗೂ ಭೌತಿಕ ದಾಸ್ತಾನಿಗೂ ಅಜಗಜಾಂತರ ವ್ಯತ್ಯಾಸ ಕಂಡು ಬಂದಿದೆ. 6,077 ಕ್ವಿಂಟಲ್‌ನಷ್ಟು ಪಡಿತರ ಅಕ್ಕಿಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಆಹಾರ ಇಲಾಖೆಯ (Food and Civil Supplies Department) ಉಪನಿರ್ದೇಶಕ ಭೀಮರಾಯ ಅವರು ಗೋದಾಮು ಪರಿಶೀಲನೆ ಮಾಡಿದಾಗ 2.66 ಕೋಟಿ ಮೌಲ್ಯದ ಅಕ್ಕಿ ಕಳವಾಗಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಸೋಶಿಯಲ್‌ ಮೀಡಿಯಾದಲ್ಲಿ ಯುವತಿಯರ ಫೋಟೋ ಬಳಸಿಕೊಂಡು ಲಕ್ಷ ಲಕ್ಷ ದೋಚಿದ ಖದೀಮ

    ಗೋದಾಮಿನ ಈಗಿನ ಮುಖ್ಯ ಕಾರ್ಯನಿರ್ವಾಹಕ ಶಿವಪ್ಪ ಹಾಗೂ ಈ ಹಿಂದಿನ ಸಿಇಒ ಶಿವರಾಜ ಅವರು ಸ್ವಂತ ಲಾಭಕ್ಕೆ ಬಳಸಿ ಸಾಗಾಟ ಮಾಡಿದ್ರಾ ಎಂಬ ಅನುಮಾನವಿದೆ. ಈ ಬಗ್ಗೆ ಶಹಾಪುರ ಠಾಣೆಯಲ್ಲಿ ಶಿವಪ್ಪ ಹಾಗೂ ಶಿವರಾಜ ಸಂಘದ ಆಡಳಿತ ಮಂಡಳಿ ವಿರುದ್ಧ ದೂರು ದಾಖಲಾಗಿದೆ.

    ಕಳೆದ ಜೂನ್ ತಿಂಗಳಲ್ಲಿ ಅಕ್ಕಿ ಸಹಿತ ಲಾರಿ ಕಳ್ಳತನ ಘಟನೆ ನಡೆದಿತ್ತು. ಈ ಘಟನೆ ನಂತರ ಆಹಾರ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಎಚ್ಚೆತ್ತುಕೊಂಡು ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದರೇ ಇಂತಹ ಘಟನೆ ಮರುಕಳಿಸ್ತಿರಲಿಲ್ಲ. ಅದೇ ರೀತಿ ಗೋದಾಮಿನ ಸುತ್ತಲೂ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಿಲ್ಲ. ತಡೆಗೋಡೆ ಕೂಡ ನಿರ್ಮಾಣವಾಗಿಲ್ಲ. ಪಡಿತರ ಸಾಗಾಟ ಮಾಡುವ ಲಾರಿಗಳಿಗೆ ಜಿಪಿಎಸ್ ಅಳವಡಿಕೆ ಮಾಡಿಲ್ಲ. ಇದು ಕಳ್ಳತನಕ್ಕೆ ದಾರಿ ಮಾಡಿ ಕೊಟ್ಟಂತಾಗಿದೆ. 6 ತಿಂಗಳ ಅವಧಿಯಲ್ಲಿ 2.66 ಕೋಟಿ ಮೌಲ್ಯದ 6 ಸಾವಿರ ಕ್ವಿಂಟಲ್ ಪಡಿತರ ಅಕ್ಕಿ ಕಳ್ಳತನ ಆಗಿರೋದು ಗೊತ್ತಾದ ಬಳಿಕ ಕೇಸ್‌ ದಾಖಲಾಗಿದೆ.

    ಕೇಸ್ ದಾಖಲಾದ ಮೇಲೆ ಅಧಿಕಾರಿಗಳ ಮೊಬೈಲ್ ‌ಸ್ವಿಚ್ ಆಫ್‌ ಆಗಿದೆ. ಆಹಾರ ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಭೀಮರಾಯ ಅವರ ಮೊಬೈಲ್‌ ಕೂಡ ಆಫ್‌ ಆಗಿದ್ದು, ಮಾಹಿತಿ ನೀಡಲು ಹಿಂದೇಟು ಹಾಕ್ತಿದ್ದಾರೆ. ಇದನ್ನೂ ಓದಿ: ನಕಲಿ ಟಿಕೆಟ್ ತೋರಿಸಿ ಏರ್‌ಪೋರ್ಟ್ ಒಳಗೆ ನುಗ್ಗಿದ ಮಹಿಳೆ- ಎಫ್‍ಐಆರ್ ದಾಖಲು

    ಸದ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರೋ ಶಹಾಪುರ ಪೊಲೀಸರು ಎಸ್ಕೇಪ್ ಆಗಿರೋ ಆರೋಪಿಗಳ ಬೆನ್ನು ಬಿದ್ದಿದ್ದಾರೆ. ಆರೋಪಿಗಳಿಬ್ಬರೂ ಪ್ರಕರಣ ದಾಖಲಾಗುತ್ತಿದ್ದಂತೆ ನಾಪತ್ತೆ ಆಗಿರೋದ್ರಿಂದ ಆರೋಪಿಗಳ ಮೊಬೈಲ್ ನಂಬರ್ ಲೊಕೇಷನ್ ಆಧಾರದಲ್ಲಿ ಹುಡುಕಾಟಕ್ಕೆ ಮುಂದಾಗಿದ್ದಾರೆ. ಇದರ ನಡುವೆ ಆರೋಪಿಗಳಿಗೆ ದೊಡ್ಡವರ ಶ್ರೀ ರಕ್ಷೆ ಇದೆ. ಅದರಿಂದಲೇ ಪಡಿತರ ಅಕ್ಕಿ ಕಳ್ಳತನ ಆಗ್ತಿದೆ ಅಂತ ಜನ ಆರೋಪಿಸುತ್ತಿದ್ದಾರೆ. ಹೀಗಾಗಿ ಪೊಲೀಸರು ಕೂಡಲೇ ಬಡವರ ಅನ್ನಕ್ಕೆ ಕನ್ನ ಹಾಕಿರೋ ಆರೋಪಿಗಳನ್ನ ಹೆಡೆಮುರಿ ಕಟ್ಟಿ, ಕಠಿಣ ಕ್ರಮ ಕೈಗೊಳ್ಳಬೇಕಿದೆ ಎಂದು ಜನ ಒತ್ತಾಯಿಸಿದ್ದಾರೆ.

  • ISIS ಉಗ್ರನೊಂದಿಗೆ ನಿರಂತರ ಸಂಪರ್ಕ ಹೊಂದಿದ್ದ ಯುವಕನಿಗೆ ಆರ್ಥಿಕ ಸಂಕಷ್ಟ

    ISIS ಉಗ್ರನೊಂದಿಗೆ ನಿರಂತರ ಸಂಪರ್ಕ ಹೊಂದಿದ್ದ ಯುವಕನಿಗೆ ಆರ್ಥಿಕ ಸಂಕಷ್ಟ

    ಯಾದಗಿರಿ: ಉಗ್ರನೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಯಾದಗಿರಿ (Yadgir) ಜಿಲ್ಲೆಯ ಶಹಾಪುರದ ವ್ಯಕ್ತಿಯೊಬ್ಬನನ್ನ ಜಾರ್ಖಂಡ್‌ನ ಎನ್‌ಐಎ (Jharkhand NIA Team) ತಂಡ ವಿಚಾರಣೆ ನಡೆಸಿತ್ತು. ರಾಂಚಿಯ ಇನ್ಸ್ಪೆಕ್ಟರ್ ಸಚ್ಚಿದಾನಂದ ಶರ್ಮಾ ನೇತೃತ್ವದ ನಾಲ್ವರು ಅಧಿಕಾರಿಗಳ ತಂಡ ಶಹಾಪುರಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿತ್ತು. ಅಧಿಕಾರಿಗಳು ವಿಚಾರಣೆ ನಡೆಸಿ ತೆರಳಿದ ಬಳಿಕ ಆತ ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದು ತಿಳಿದುಬಂದಿದೆ.

    ಉಗ್ರನೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 20 ರಂದು ರಾಂಚಿಯ NIA ಕಚೇರಿಗೆ ವಿಚಾರಣೆಗೆ ಬರುವಂತೆ ಅಧಿಕಾರಿಗಳು ಯುವಕನಿಗೆ ನೋಟಿಸ್ ಕಳುಹಿಸಿದ್ದರು. ಆದ್ರೆ ಹಣಕಾಸಿನ ಸಮಸ್ಯೆಯಿಂದ ಯುವಕ ವಿಚಾರಣೆಗೆ ಹಾಜರಾಗಿರಲಿಲ್ಲ. ಇದನ್ನೂ ಓದಿ: 2 ತಿಂಗಳ ಹಿಂದೆಯೇ ಚೈತ್ರಾ ಕುಂದಾಪುರ ವಿಚಾರ ನನ್ನ ಗಮನಕ್ಕೆ ಬಂದಿತ್ತು: ಶರಣ್ ಪಂಪ್‍ವೆಲ್

    ನಮ್ಮ ಕುಟುಂಬ ಆರ್ಥಿಕವಾಗಿ ತುಂಬಾ ಕಷ್ಟದಲ್ಲಿದೆ, ರಾಂಚಿಗೆ ಪ್ರಯಾಣ ಮಾಡಲು ನಮ್ಮ ಬಳಿ ಹಣ ಇಲ್ಲ. ಕುಟುಂಬದ ಸದಸ್ಯರು ಹಾಗೂ ಆತ್ಮೀಯರಿಗೆ ಹಣ ನೀಡುವಂತೆ ಮನವಿ ಮಾಡಿದರೂ ಯಾರೂ ಸಹಾಯ ಮಾಡುತ್ತಿಲ್ಲ ಎಂದು ಯುವಕನ ತಂದೆ ತಿಳಿಸಿದ್ದಾರೆ.

    ನಮ್ಮ ಸಮಸ್ಯೆ ಕುರಿತು ಅಧಿಕಾರಿಗಳಿಗೆ ಇ-ಮೇಲ್ ಮಾಡಲಾಗಿತ್ತು. ಬುಧವಾರ ಬೆಳಿಗ್ಗೆ ಸಹ ಅಧಿಕಾರಿಗಳಿಗೆ ಕರೆ ಮಾಡಿದ್ದೆವು. ಆದರೆ ಅವರು ಕರೆ ಸ್ವೀಕರಿಸಿಲ್ಲ. ನಮ್ಮ ಗ್ಯಾರೇಜ್ ಬಳಿಗೆ ಸ್ಥಳೀಯ ಪೊಲೀಸರು ಬೆಳಿಗ್ಗೆ ಬಂದು ಮಗ ಇರುವ ಬಗ್ಗೆ ಖಚಿತಪಡಿಸಿಕೊಂಡು ಹೋಗಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಕಾವೇರಿ ಹೋರಾಟಕ್ಕೆ ಯಾವಾಗಲೂ ನಾನು ಸಿದ್ಧ : ನಟ ನಿಖಿಲ್ ಕುಮಾರ್

    ರಾಂಚಿಯಲ್ಲಿ ಬಂಧಿತ ಐಸಿಸ್ ಉಗ್ರ ಫೈಯಾಜ್ ಜೊತೆಗೆ ಸಂಪರ್ಕ ಹೊಂದಿದ ಶಂಕೆಯ ಹಿನ್ನೆಲೆಯಲ್ಲಿ ನಗರದ ಹಳೆಪೇಟೆಯಲ್ಲಿರುವ ಯುವಕನ ಮನೆ ಮೇಲೆ ಇತ್ತೀಚೆಗೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದರು. ಸೆ.20ರಂದು ರಾಂಚಿಯ ಎನ್‌ಐಎ ಕಚೇರಿಗೆ ಬರುವಂತೆ ಎನ್‌ಐಎ ಶಾಖೆಯ ಇನ್‌ಸ್ಪೆಕ್ಟರ್ ಸಚ್ಚಿದಾನಂದ ನೋಟಿಸ್ ನೀಡಿ ವಾಪಸ್ ತೆರಳಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]