Tag: yadgir

  • ಪ್ರಯಾಣಿಕರಿಗೆ ಟಿಕೆಟ್ ಕೊಡದೇ ಮೊಬೈಲ್‌ನಲ್ಲಿ ಹರಟೆ ಹೊಡೆಯುತ್ತಿದ್ದ ರೈಲ್ವೆ ಸಿಬ್ಬಂದಿ ಅಮಾನತು

    ಪ್ರಯಾಣಿಕರಿಗೆ ಟಿಕೆಟ್ ಕೊಡದೇ ಮೊಬೈಲ್‌ನಲ್ಲಿ ಹರಟೆ ಹೊಡೆಯುತ್ತಿದ್ದ ರೈಲ್ವೆ ಸಿಬ್ಬಂದಿ ಅಮಾನತು

    ಯಾದಗಿರಿ: ಪ್ರಯಾಣಿಕರಿಗೆ ಟಿಕೆಟ್ (Railway Ticket) ನೀಡದೇ ಮೊಬೈಲ್‌ನಲ್ಲಿ ಹರಟೆ ಹೊಡೆಯುತ್ತಿದ್ದ ರೈಲ್ವೆ ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಿರುವ (Suspension) ಘಟನೆ ಯಾದಗಿರಿಯಲ್ಲಿ (Yadgir) ನಡೆದಿದೆ.

    ಗುಂತಕಲ್ ರೈಲ್ವೆ ವಿಭಾಗದ ಅಧಿಕಾರಿ ಸಿ.ಮಹೇಶ್‌ನನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ. ಮಹೇಶ್ ಯಾದಗಿರಿ ರೈಲ್ವೆ ನಿಲ್ದಾಣದ ಟಿಕೆಟ್ ಕೌಂಟರ್‌ನಲ್ಲಿ (Ticket Counter) ಕಾರ್ಯನಿರ್ವಹಿಸುತ್ತಿದ್ದ. ಟಿಕೆಟ್‌ಗಾಗಿ ನೂರಾರು ಪ್ರಯಾಣಿಕರು ಸರತಿ ಸಾಲಿನಲ್ಲಿ ನಿಂತಿದ್ದರು. ಟಿಕೆಟ್ ಕೌಂಟರ್ ಸಿಬ್ಬಂದಿ ಮಹೇಶ್ ಬಹಳ ಹೊತ್ತು ಮೊಬೈಲ್‌ನಲ್ಲಿ ಮಾತನಾಡುತ್ತಾ ಕುಳಿತಿದ್ದ. ಈ ವೇಳೆ ಪ್ರಯಾಣಿಕನೊಬ್ಬ ವೀಡಿಯೋ ಮಾಡಿ ಸ್ಟೇಷನ್ ಮಾಸ್ಟರ್‌ಗೆ ಕಳುಹಿಸಿದ್ದಾರೆ. ಇದನ್ನೂ ಓದಿ: ವಿಶ್ವದ ಅತ್ಯಂತ ದುಬಾರಿ ಕಣ್ಗಾವಲು ಉಪಗ್ರಹ ಇಂದು ನಭಕ್ಕೆ; ಭಾರತ-ಅಮೆರಿಕ ಮಹತ್ವದ ಹೆಜ್ಜೆ

    ಇದನ್ನು ಗಮನಿಸಿ ಗುಂತಕಲ್ ರೈಲ್ವೆ ವಿಭಾಗದ ಅಧಿಕಾರಿಗೆ ಕಳುಹಿಸಿದ್ದಾರೆ. ಸ್ಟೇಷನ್ ವ್ಯವಸ್ಥಾಪಕ ಭಾಗಿರಥ ಮೀನಾ ತಕ್ಷಣವೇ ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿದ್ದಾರೆ. ಇದನ್ನೂ ಓದಿ: Hassan | ಹೋಟೆಲ್‌ನಲ್ಲಿ ಊಟ ಮಾಡಿ ಕೈತೊಳೆಯುವಾಗ ಪ್ರಾಣಬಿಟ್ಟ ಯುವಕ

  • ಬಾವಿಗೆ ಬಿದ್ದು ಇಬ್ಬರು ಯುವತಿಯರು ದುರ್ಮರಣ

    ಬಾವಿಗೆ ಬಿದ್ದು ಇಬ್ಬರು ಯುವತಿಯರು ದುರ್ಮರಣ

    ಯಾದಗಿರಿ: ಕಾಲು ಜಾರಿ ಬಾವಿಗೆ ಬಿದ್ದು ಇಬ್ಬರು ಯುವತಿಯರು ಸಾವನ್ನಪ್ಪಿದ ಘಟನೆ ಯಾದಗಿರಿಯ (Yadgir) ಮೊಟ್ನಳ್ಳಿ ಗ್ರಾಮದ ಹೊರ ಭಾಗದಲ್ಲಿ ನಡೆದಿದೆ.

    ಮೃತರನ್ನು ವೈಶಾಲಿ (17), ನವೀತಾ (16) ಎಂದು ಗುರುತಿಸಲಾಗಿದೆ. ಇಬ್ಬರು ಬಟ್ಟೆ ತೊಳೆಯಲು ಹೋಗಿದ್ದರು. ಈ ವೇಳೆ ಈ ಅವಘಡ ಸಂಭವಿಸಿದೆ. ಸ್ಥಳೀಯರು ಶವವನ್ನು ಬಾವಿಯಿಂದ ಹೊರಗೆ ತೆಗೆದಿದ್ದಾರೆ.

    ಗುರುಮಠಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಬೊಲೆರೋ, ಬಸ್ ನಡುವೆ ಭೀಕರ ಅಪಘಾತ – ನಾಲ್ವರು ದುರ್ಮರಣ

    ಬೊಲೆರೋ, ಬಸ್ ನಡುವೆ ಭೀಕರ ಅಪಘಾತ – ನಾಲ್ವರು ದುರ್ಮರಣ

    ಯಾದಗಿರಿ: ಬೊಲೆರೋ ಹಾಗೂ ಸಾರಿಗೆ ಬಸ್ (Bus) ನಡುವೆ ನಡೆದ ಭೀಕರ ಅಪಘಾತದಲ್ಲಿ (Accident) ಒಂದೇ ಕುಟುಂಬದ ನಾಲ್ವರು ಸಾವಿಗೀಡಾದ ಘಟನೆ ಶಹಾಪುರ (Shahapur) ತಾಲೂಕಿನ ಮದ್ದರಕಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

    ಮೃತರನ್ನು ಯಾದಗಿರಿಯ ವರ್ಕನಹಳ್ಳಿ ಗ್ರಾಮದ ಬೊಲೆರೋ ಚಾಲಕ ಶರಣಪ್ಪ (30), ಸುನೀತಾ (19), ಸೋಮವ್ವ (50) ಮತ್ತು ತಂಗಮ್ಮ (55) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದು, ಒಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ. ಇದನ್ನೂ ಓದಿ: ದಾವಣಗೆರೆ| ಪತ್ನಿ ಸಾವಿನ ನೋವು; ಇಬ್ಬರು ಪುಟ್ಟ ಮಕ್ಕಳನ್ನು ಕೊಂದು ವ್ಯಕ್ತಿ ಆತ್ಮಹತ್ಯೆ

    ಬೊಲೆರೋ ವಾಹನದಲ್ಲಿ ಕುಟುಂಬಸ್ಥರು ಕಲಬುರಗಿಯ ಘತ್ತರಗಿ ಭಾಗ್ಯವಂತಿ ದೇವರ ಕಾರ್ಯಕ್ಕೆ ಹೋಗುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ. ಬೊಲೆರೋ ವಾಹನದಲ್ಲಿ ಇನ್ನೂ ಹಲವರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಘಟನಾ ಸ್ಥಳಕ್ಕೆ ಎಸ್ಪಿ ಪೃಥ್ವಿಕ್ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭೀಮರಾಯನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ. ಇದನ್ನೂ ಓದಿ: ಹೈಟೆಕ್‌ ವಿಮಾನ, ಬುಕಾರೆಸ್ಟ್‌ನಿಂದ 11 ಗಂಟೆ ಪ್ರಯಾಣ – ಉಗ್ರ ರಾಣಾನನ್ನ ಅಮೆರಿಕದಿಂದ ಭಾರತಕ್ಕೆ ಕರೆತಂದಿದ್ದು ಹೇಗೆ?

  • ಭಾರೀ ಗಾಳಿ ಮಳೆಯಿಂದ ಶಾರ್ಟ್ ಸರ್ಕ್ಯೂಟ್ – ನೂರಾರು ಮನೆಗಳ ಟಿವಿ, ಫ್ರಿಡ್ಜ್‌ಗಳಿಗೆ ಹಾನಿ

    ಭಾರೀ ಗಾಳಿ ಮಳೆಯಿಂದ ಶಾರ್ಟ್ ಸರ್ಕ್ಯೂಟ್ – ನೂರಾರು ಮನೆಗಳ ಟಿವಿ, ಫ್ರಿಡ್ಜ್‌ಗಳಿಗೆ ಹಾನಿ

    ಯಾದಗಿರಿ: ಬಿರುಗಾಳಿ ಸಹಿತ ಮಳೆಗೆ (Rain) ಶಾರ್ಟ್ ಸರ್ಕ್ಯೂಟ್ (Short Circuit) ಸಂಭವಿಸಿ ವಿದ್ಯುತ್ ಕಂಬದ ವೈರ್ ಹಾಗೂ ನೂರಾರು ಮನೆಗಳ ಟಿವಿ, ಫ್ರಿಡ್ಜ್‌ಗಳಿಗೆ ಹಾನಿಯಾದ ಘಟನೆ ಸುರಪುರ ತಾಲೂಕಿನ ಜಾಲಿಬೆಂಚಿ ಗ್ರಾಮದಲ್ಲಿ ನಡೆದಿದೆ.

    ಭಾರೀ ಗಾಳಿಗೆ ವಿದ್ಯುತ್ ಕಂಬಗಳಲ್ಲಿನ ತಂತಿಗಳು ಒಂದಕ್ಕೊಂದು ತಾಗಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ. ಇದರಿಂದ ವಿದ್ಯುತ್ ಕಂಬ ಹಾಗೂ ಗ್ರಾಮದ ಮನೆಗಳಲ್ಲಿನ ಟಿವಿ, ಫ್ರಿಡ್ಜ್, ಫ್ಯಾನ್‍ಗಳು ಸೇರಿದಂತೆ ವಿದ್ಯುತ್ ಉಪಕರಣಗಳು ಹಾನಿಗೊಳಗಾಗಿವೆ. ಘಟನೆಯಲ್ಲಿ ಓರ್ವನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇದನ್ನೂ ಓದಿ: ಸಿಂಗಾಪುರ ಶಾಲೆಯಲ್ಲಿ ಬೆಂಕಿ ಅವಘಡ – ಪವನ್ ಕಲ್ಯಾಣ್ ಕಿರಿಯ ಪುತ್ರನಿಗೆ ಗಂಭೀರ ಗಾಯ

    ಕೂಡಲೇ ಜೆಸ್ಕಾಂಗೆ ಮಾಹಿತಿ ನೀಡಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದ್ದು, ಭಾರೀ ಅನಾಹುತ ತಪ್ಪಿದಂತಾಗಿದೆ. ಸ್ಥಳಕ್ಕೆ ಜೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಸುರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ನೈಟ್‌ಕ್ಲಬ್‌ನ ಛಾವಣಿ ಕುಸಿದು 79 ಮಂದಿ ದುರ್ಮರಣ

  • ಡಿಕೆಶಿಗೆ ಸಿಎಂ ಯೋಗ – ನೊಣವಿನಕೆರೆ ಅಜ್ಜಯ್ಯ ಸ್ವಾಮೀಜಿ ಸ್ಫೋಟಕ ಭವಿಷ್ಯ

    ಡಿಕೆಶಿಗೆ ಸಿಎಂ ಯೋಗ – ನೊಣವಿನಕೆರೆ ಅಜ್ಜಯ್ಯ ಸ್ವಾಮೀಜಿ ಸ್ಫೋಟಕ ಭವಿಷ್ಯ

    ಯಾದಗಿರಿ: ಡಿ.ಕೆ ಶಿವಕುಮಾರ್ (D.K Shivakumar) ಅವರಿಗೆ ಸಿಎಂ ಆಗುವ ಯೋಗವಿದೆ ಎಂದು ನೊಣವಿನಕೆರೆ ಅಜ್ಜಯ್ಯ ಸ್ವಾಮೀಜಿ (Nonavinakere Ajjayya) ಭವಿಷ್ಯ ನುಡಿದಿದ್ದಾರೆ.

    ಅಬ್ಬೆತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಶ್ರೀಮಠದ ಆಶೀರ್ವಾದದಿಂದ ಡಿಕೆಶಿ ಸಿಎಂ ಆಗ್ತಾರೆ. ರೈತರ, ವರ್ತಕರ ಹಾಗೂ ಮಠದ ಭಕ್ತರ ಆಸೆ ಅವರು ಸಿಎಂ ಆಗಲಿ ಎಂಬುದೇ ಆಗಿದೆ. ಎಲ್ಲಾ ಜನರ ಸಂಕಲ್ಪದಿಂದ ಒಂದು ದಿನ ಸಿಎಂ ಆಗ್ತಾರೆ. ಯಾವ ದಿನ ಸಿಎಂ ಆಗ್ತಾರೆ ಎಂದು ಹೇಳೋಕೆ ಆಗಲ್ಲ ಎಂದಿದ್ದಾರೆ.

    ಅಬ್ಬೆತುಮಕೂರು ವಿಶ್ವಾರಾಧ್ಯರ ಗದ್ದುಗೆಗೂ ಬಂದಿದ್ದೇನೆ. ಅವರ ಆಶೀರ್ವಾದವೂ ಡಿಕೆಶಿಗೆ ಸಿಗಲಿ. ಶ್ರೀ ಶೈಲ ಜಗದ್ಗುರುಗಳು ಬಂದಿದ್ದಾರೆ. ಆ ಪರಮಾತ್ಮನ ಆಶೀರ್ವಾದವೂ ಅವರಿಗೆ ಸಿಗಲಿ ಎಂದು ಸ್ವಾಮೀಜಿ ಪ್ರಾರ್ಥಿಸಿದ್ದಾರೆ.

    ಶಿವಕುಮಾರ್ ಗಂಗಾ ಸ್ನಾನ ಮಾಡಿದ್ದಾರೆ. ಅವರ ಜೊತೆ ನಾವು ಪಾಲ್ಗೊಂಡಿದ್ದೆವು. ಆ ದೇವರ ಆಶೀರ್ವಾದ ಅವರಿಗೆ ಸಿಗಲಿ, ರಾಜ ಪ್ರತ್ಯಕ್ಷ್ಯ ದೇವರಾಗಲಿ ಎಂದು ಹಾರೈಸಿದ್ದಾರೆ.

  • ಸರ್ಕಾರದ ಯೋಜನೆಗಳ ಹಣಕ್ಕೆ ಬ್ಯಾಂಕ್ ಕತ್ತರಿ – ಮಹಿಳೆಯರ ಆಕ್ರೋಶ

    ಸರ್ಕಾರದ ಯೋಜನೆಗಳ ಹಣಕ್ಕೆ ಬ್ಯಾಂಕ್ ಕತ್ತರಿ – ಮಹಿಳೆಯರ ಆಕ್ರೋಶ

    ಯಾದಗಿರಿ: ಸರ್ಕಾರದ ಯೋಜನೆಗಳಿಂದ ಜನರ ಖಾತೆಗೆ ಬೀಳುತ್ತಿರುವ ಹಣವನ್ನು ಬ್ಯಾಂಕ್‍ನಿಂದ ಸಾಲಕ್ಕೆ ಜಮೆ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪ ಖಾನಾಪುರದ ಎಸ್‍ಬಿಐ ಬ್ಯಾಂಕ್ (SBI Bank) ವಿರುದ್ಧ ಕೇಳಿ ಬಂದಿದೆ.

    ಗೃಹಲಕ್ಷ್ಮಿ (Gruha Lakshmi), ಅನ್ನಭಾಗ್ಯ, ಪಿಂಚಣಿ, ಪಿಎಂ ಕಿಸಾನ್ ಹಣ ಸೇರಿದಂತೆ ಬೆಳೆ ಪರಿಹಾರದ ಹಣವನ್ನು ಸರ್ಕಾರ ಪಾವತಿ ಮಾಡಿದರೂ ಬ್ಯಾಂಕ್‍ನಲ್ಲಿ ತಡೆಹಿಡಿಯಲಾಗುತ್ತಿದೆ. ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಸರ್ಕಾರದ ಆದೇಶ ಇದ್ದರೂ ಸಹ ಆದೇಶ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಜನ ಆರೋಪಿಸಿದ್ದಾರೆ. ಇದನ್ನೂ ಓದಿ: ನಾಗಮಂಗಲ ಗಲಭೆಗೆ ತಲೆದಂಡ – ಟೌನ್‌ ಇನ್ಸ್‌ಪೆಕ್ಟರ್‌ ಅಮಾನತು

    ಹಣ ಕೇಳಲು ಹೋದರೆ ಸಾಲ ತೀರಿಸಿ ಹಣವನ್ನು ತೆಗೆದುಕೊಳ್ಳಿ ಎಂದು ಬ್ಯಾಂಕ್ ಸಿಬ್ಬಂದಿ ಹಾಗೂ ಮ್ಯಾನೇಜರ್ ಧಮ್ಕಿ ಹಾಕುತ್ತಿದ್ದಾರೆ. ಮಗಳ ಚಿಕಿತ್ಸೆಗೆ ಹಣ ಬೇಕು ಎಂದರೂ ಕೊಡುತ್ತಿಲ್ಲ. ನೂರಾರು ಮಹಿಳೆಯರಿಗೆ ಈ ರೀತಿ ಸಮಸ್ಯೆಯಾಗಿದೆ ಎಂದು ಜನ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.

    ಒಬ್ಬೊಬ್ಬ ಮಹಿಳೆಯರ ಖಾತೆಗೆ 30 ರಿಂದ 50 ಸಾವಿರ ರೂ. ಸರ್ಕಾರದಿಂದ ಜಮೆಯಾಗಿದೆ. ಆದರೂ ಹಣ ಸಿಗುತ್ತಿಲ್ಲ. ಸರ್ಕಾರ ನಮಗೆ ಹಣ ಪಡೆಯಲು ಅನುಕೂಲ ಮಾಡಿಕೊಡಬೇಕು ಎಂದು ಜನ ಆಗ್ರಹಿಸಿದ್ದಾರೆ. ಇದನ್ನೂ ಓದಿ: ನಾಗಮಂಗಲ ಗಲಭೆ| ಕೇಸ್‌ನಲ್ಲಿ ಹಿಂದೂಗಳು ಟಾರ್ಗೆಟ್ – ಬಿಜೆಪಿ ಆಕ್ರೋಶ

  • ಮೃತ ಪಿಎಸ್ಐ ಮನೆಗೆ ಗೃಹ ಸಚಿವರ ಭೇಟಿ – ಪತ್ನಿಗೆ ಉದ್ಯೋಗ, 50 ಲಕ್ಷ ಪರಿಹಾರ ಘೋಷಣೆ

    ಮೃತ ಪಿಎಸ್ಐ ಮನೆಗೆ ಗೃಹ ಸಚಿವರ ಭೇಟಿ – ಪತ್ನಿಗೆ ಉದ್ಯೋಗ, 50 ಲಕ್ಷ ಪರಿಹಾರ ಘೋಷಣೆ

    – ವರ್ಗಾವಣೆ ಆದೇಶ ಮಾಡಿದ ಅಧಿಕಾರಿ ಸಮರ್ಥಿಸಿದ ಸಚಿವ

    ಯಾದಗಿರಿ: ಪಿಎಸ್ಐ ಪರಶುರಾಮ್ (PSI Parashuram) ಸಾವು ಪ್ರಕರಣ ರಾಜಕೀಯ ತಿರುವು ಪಡೆಯುತ್ತಿದ್ದಂತೆ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು, ಸ್ವತಃ ಗೃಹ ಸಚಿವ ಜಿ.ಪರಮೇಶ್ವರ್‌, ಮೃತರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದೇ ವೇಳೆ, ಪತ್ನಿ ಶ್ವೇತಾ ಅವರಿಗೆ ಉದ್ಯೋಗ ನೀಡುವ ಜೊತೆಗೆ, ಕುಟುಂಬಕ್ಕೆ 50 ಲಕ್ಷ ರೂ. ವಿಶೇಷ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದರು.

    ಪರಶುರಾಮ್ ಹುಟ್ಟೂರು ಕೊಪ್ಪಳದ (Koppal) ಕಾರಟಗಿ ತಾಲೂಕಿನ ಸೋಮನಾಳ ಗ್ರಾಮಕ್ಕೆ ಆಗಮಿಸಿದ ಗೃಹ ಸಚಿವರು, ಮೃತರ ತಂದೆ-ತಾಯಿ ಹಾಗೂ ಪತ್ನಿ ಶ್ವೇತಾ ಅವರ ಜೊತೆಗೆ ಸುಮಾರು 1 ಗಂಟೆ ಕಾಲ ಚರ್ಚಿಸಿದರು. ತಂದೆ ಜನಕಮುನಿ, ತಾಯಿ ಗಂಗಮ್ಮ ಮಗನ ಸಾವಿನ ನೋವು ತೋಡಿಕೊಂಡರು. ನಮ್ಮ ಮಗನ ಸಾವಿಗೆ ನ್ಯಾಯಾ ಸಿಗಬೇಕು ಎಂದು ಒತ್ತಾಯಿಸಿದರು. ಸಹೋದರ ಹನುಮಂತಪ್ಪ ಮತ್ತು ಪತ್ನಿ ಶ್ವೇತಾ ಅವರೊಂದಿಗೆ ಪ್ರತ್ಯೇಕವಾಗಿ ‌ಚರ್ಚಿಸಿದ ಗೃಹ ಸಚಿವರು, ಪರಶುರಾಮ್ ಸಾವಿಗೆ ನ್ಯಾಯ ದೊರಕಿಸಿಕೊಡುವ ಜೊತೆಗೆ ಸೂಕ್ತ ಪರಿಹಾರ ‌ನೀಡುವುದಾಗಿ ತಿಳಿಸಿದರು. ಮಾನವೀಯತೆ ಆಧಾರದ ಮೇಲೆ‌ ನೀಡುವ ಉದ್ಯೋಗವನ್ನು ಪೊಲೀಸ್ ಇಲಾಖೆ ಬದಲಿಗೆ ರಾಯಚೂರು ಕೃಷಿ ವಿಶ್ವವಿದ್ಯಾಲಯ ಅಥವಾ ಜೆಸ್ಕಾಂನಲ್ಲಿ ವಿದ್ಯಾರ್ಹತೆಗೆ ತಕ್ಕಂತೆ ನೀಡಬೇಕು ಎಂದು ಪತ್ನಿ ಮತ್ತು ಆಕೆ ಪಾಲಕರು ಮನವಿ ಮಾಡಿದರು.‌ ಇದನ್ನೂ ಓದಿ: PSI ಪರಶುರಾಮ್‌ ಸಾವು ಪ್ರಕರಣ: ಸರ್ಕಾರ ತನಿಖೆಗೆ ವಹಿಸಿದ ಮರುದಿನವೇ ಯಾದಗಿರಿಗೆ ಸಿಐಡಿ ತಂಡ ಎಂಟ್ರಿ

    ನಂತರ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ್‌ (G.Parameshwar), ಪಿಎಸ್ಐ ಪರಶುರಾಮ್ ಸಾವಿನ ನಂತರ ಈಗಾಗಲೇ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ವಿಧಿವಿಜ್ಞಾನ ಸಂಸ್ಥೆಯ ವರದಿಯ ನಿರೀಕ್ಷೆಯಲ್ಲಿದ್ದೇವೆ. ಈ ಸಾವು ಗೃಹ ಸಚಿವನಾಗಿ ನನಗೆ ನೋವು ತರಿಸಿದೆ. ಇಡೀ ಕುಟುಂಬದ ಜವಾಬ್ದಾರಿ ಮೃತ ಪರಶುರಾಮ್ ಮೇಲೆ ಇತ್ತು. ಅವರ ಅಗಲುವಿಕೆ ಇಡೀ ಕುಟುಂಬವನ್ನು ಸಂಕಷ್ಟಕ್ಕೆ ದೂಡಿದೆ. ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಈಗಾಗಲೇ ಸಿಒಡಿ ತನಿಖೆಗೆ ಒಪ್ಪಿಸಲಾಗಿದೆ. ತನಿಖಾ ವರದಿ ಆಧರಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕೃಷಿ ವಿವಿ ಅಥವಾ ಜೆಸ್ಕಾಂನಲ್ಲಿ ಕೆಲಸ ನೀಡುವಂತೆ ಪತ್ನಿ ಶ್ವೇತಾ ಮನವಿ ಮಾಡಿದ್ದಾರೆ. ಈ ಬಗ್ಗೆ ಸಿಎಂ ಜೊತೆಗೆ ಚರ್ಚೆ ಮಾಡಿ,‌ ಅವರ ಬೇಡಿಕೆ ಈಡೇರಿಸಲು ಪ್ರಯತ್ನ ಮಾಡುತ್ತೇನೆ. ಕುಟುಂಬಕ್ಕೆ 50 ಲಕ್ಷ ರೂ. ನೀಡುವುದಾಗಿ ಘೋಷಣೆ ಮಾಡುತ್ತಿದ್ದೇನೆ. ಸಿಎಂ ಜೊತೆಗೆ ಚರ್ಚೆ ಮಾಡಿ, ಕೂಡಲೇ ಬಿಡುಗಡೆ ಮಾಡಿಸುತ್ತೇನೆ ಎಂದು ತಿಳಿಸಿದರು.

    ತನಿಖಾ ವರದಿ ಬರಲಿ: ಯಾದಗಿರಿ ಶಾಸಕ ಮತ್ತು ಅವರ ಮಗ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಪರಶುರಾಮ್ ಕುಟುಂಬ ಆರೋಪ ಮಾಡಿದೆ. ಈ ಹಿನ್ನೆಲೆ ಕೂಡಲೇ ಸಿಒಡಿಗೆ ತನಿಖೆಗೆ ಆದೇಶ ಮಾಡಿದ್ದೇನೆ. ಹಣ ಪಡೆದು ವರ್ಗಾವಣೆ ಮಾಡುವುದು ನಮ್ಮ ಸರ್ಕಾರದಲ್ಲಿ ಇಲ್ಲ. ಕನಿಷ್ಠ 2 ವರ್ಷ ವರ್ಗಾವಣೆ ಮಾಡಬಾರದು ಎಂದು ನಿಯಮ ಮಾಡಿದ್ದೇವೆ. ಆದಾಗ್ಯೂ ಪರಶುರಾಮನನ್ನು ಏಕೆ ವರ್ಗಾವಣೆ ‌ಮಾಡಲಾಗಿದೆ ಎಂಬುದು ಸಿಒಡಿ ತನಿಖೆಯಲ್ಲೇ ಗೊತ್ತಾಗಬೇಕಿದೆ. ಅಲ್ಲಿಯವರೆಗೂ ನಾವು ಕಾದು ನೋಡುತ್ತೇವೆ ಎಂದರು. ಇದನ್ನೂ ಓದಿ: ಪಿಎಸ್‌ಐ ಸಾವು ಪ್ರಕರಣ; ಸಿಐಡಿ ತನಿಖೆಗೆ ವಹಿಸಿ ಸರ್ಕಾರ ಆದೇಶ

  • ಪಿಎಸ್‌ಐ ಸಾವು ಪ್ರಕರಣ; ಸಿಐಡಿ ತನಿಖೆಗೆ ವಹಿಸಿ ಸರ್ಕಾರ ಆದೇಶ

    ಪಿಎಸ್‌ಐ ಸಾವು ಪ್ರಕರಣ; ಸಿಐಡಿ ತನಿಖೆಗೆ ವಹಿಸಿ ಸರ್ಕಾರ ಆದೇಶ

    ಬೆಂಗಳೂರು: ಯಾದಗಿರಿ ನಗರ ಠಾಣೆ ಪಿಎಸ್‌ಐ ಪರಶುರಾಮ್‌ (PSI Parashuram) ಸಾವು ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

    ಪ್ರಕರಣದ ಹೆಚ್ಚಿನ ತನಿಖೆ ಸಲುವಾಗಿ ಸಿಐಡಿಗೆ ವರ್ಗಾವಣೆ ಮಾಡಲಾಗಿದೆ. ಕೂಲಂಕಷ ತನಿಖೆ ನಡೆಸುವಂತೆ ಸಿಐಡಿ ಡಿಜಿಪಿಗೆ ಗೃಹ ಇಲಾಖೆ ಪತ್ರ ಬರೆದಿದೆ. ಇದನ್ನೂ ಓದಿ: ಶಾಸಕರು ಹಣ ಕೇಳಿದ್ದಕ್ಕೆ ಒತ್ತಡದಿಂದ ಪಿಎಸ್‌ಐ ಸಾವು: ಇದು ಲೂಟಿ ಸರ್ಕಾರ ಎಂದ ಅಶೋಕ್‌

    ಪಿಎಸ್‌ಐ ಪರಶುರಾಮ್‌ ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದರು. ಪಿಎಸ್‌ಐ ಸಾವು ಪ್ರಕರಣಕ್ಕೆ ಈಗ ಟ್ವಿಸ್ಟ್‌ ಸಿಕ್ಕಿದೆ. ನಗರ ಪೊಲೀಸ್‌ ಠಾಣೆಯಲ್ಲೇ ಮುಂದುವರಿಸಲು 30 ಲಕ್ಷ ರೂ. ಹಣಕ್ಕಾಗಿ ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು, ಅವರ ಪುತ್ರ ಪಂಪನಗೌಡ ಬೇಡಿಕೆ ಇಟ್ಟಿದ್ದರು ಎಂದು ಮೃತ ಪರಶುರಾಮ್‌ ಪತ್ನಿ ಶ್ವೇತಾ ಆರೋಪಿಸಿದ್ದಾರೆ.

    ನನ್ನ ಪತಿ ಕಳೆದ 7 ತಿಂಗಳಿಂದ ನಗರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈಗ ಮತ್ತೆ ಸೆನ್‌ ಠಾಣೆಗೆ ವರ್ಗಾವಣೆ ಮಾಡಿದ್ದರು. ನಗರ ಠಾಣೆಯಲ್ಲೇ ಮುಂದುವರಿಯಲು 30 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಇದರಿಂದ ನನ್ನ ಪತಿ ಮನನೊಂದಿದ್ದರು ಎಂದು ದೂರಿದ್ದಾರೆ. ಇದನ್ನೂ ಓದಿ: ಯಾದಗಿರಿ ಶಾಸಕರಿಂದ ಪೋಸ್ಟಿಂಗ್‌ಗೆ 30 ಲಕ್ಷ ರೂ ಬೇಡಿಕೆ? – ಪಿಎಸ್‌ಐ ಸಾವಿನ ಸುತ್ತ ಅನುಮಾನದ ಹುತ್ತ

    ಪಿಎಸ್‌ಐ ಸಾವು ವಿಚಾರವಾಗಿ ದಲಿತಪರ ಸಂಘಟನೆಗಳು ಪ್ರತಿಭಟನೆಗಳು ನಡೆಸುತ್ತಿವೆ. ಪರಶುರಾಮ್‌ ಸಾವಿಗೆ ಕಾರಣರಾದವರನ್ನು ಬಂಧಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

  • ಕೃಷ್ಣಾ ನದಿ ಪ್ರವಾಹದಿಂದ ದ್ವೀಪದಂತಾದ ಗ್ರಾಮ – ಮೂವರು ಗರ್ಭಿಣಿಯರ ಸ್ಥಳಾಂತರ

    ಕೃಷ್ಣಾ ನದಿ ಪ್ರವಾಹದಿಂದ ದ್ವೀಪದಂತಾದ ಗ್ರಾಮ – ಮೂವರು ಗರ್ಭಿಣಿಯರ ಸ್ಥಳಾಂತರ

    – 9 ವರ್ಷಗಳ ಹಿಂದೆ ಹೆರಿಗೆಗಾಗಿ ಈಜಿ ದಡ ಸೇರಿದ್ದ ಮಹಿಳೆ

    ಯಾದಗಿರಿ: ಜಿಲ್ಲೆಯ (Yadgir) ಸುರಪುರ ತಾಲೂಕಿನ ನೀಲಕಂಠರಾಯನ ಗಡ್ಡಿ ಗ್ರಾಮ ಕೃಷ್ಣಾ ನದಿಯ (Krishna River) ಪ್ರವಾಹದಿಂದ (Flood) ದ್ವೀಪವಾಗಿ ಮಾರ್ಪಟ್ಟಿದೆ. ತಹಶಿಲ್ದಾರ್ ವಿಜಯ್‌ಕುಮಾರ್ ಗ್ರಾಮಕ್ಕೆ ಭೇಟಿ ನೀಡಿ, ಸುರಕ್ಷತಾ ದೃಷ್ಟಿಯಿಂದ ಗ್ರಾಮದಲ್ಲಿದ್ದ ಮೂವರು ಗರ್ಭಿಣಿಯರನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಿದ್ದಾರೆ.

    9 ವರ್ಷಗಳ ಹಿಂದೆ ಗ್ರಾಮದ ಯಲ್ಲವ್ವ ಎಂಬ ಮಹಿಳೆ ಸುರಕ್ಷಿತ ಹೆರಿಗೆಗಾಗಿ ಕೃಷ್ಣಾ ನದಿ ಪ್ರವಾಹದಲ್ಲಿ ಈಜಿ ದಡ ಸೇರಿದ್ದಳು. ಮತ್ತೆ ಇಂತಹ ಘಟನೆ ಮರುಕಳಿಸದಂತೆ ಈಗಾಗಲೇ ಮುಂಜಾಗ್ರತೆವಹಿಸಿ ಜಿಲ್ಲಾಡಳಿತ ಗರ್ಭಿಣಿಯರನ್ನು ಸ್ಥಳಾಂತರ ಮಾಡಿದೆ. ಇದನ್ನೂ ಓದಿ: ಅಶ್ಲೀಲ ವೀಡಿಯೋ ವೀಕ್ಷಿಸಿ ಸಹೋದರಿಯ ಅತ್ಯಾಚಾರಗೈದು ಹತ್ಯೆ – ಪ್ರಕರಣ ಮುಚ್ಚಿಡಲು ತಾಯಿ, ಹಿರಿಯ ಸಹೋದರಿಯರ ಸಾಥ್

    ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ 3 ಲಕ್ಷ ಕ್ಯುಸೆಕ್ ನೀರನ್ನು ಬಿಡಲಾಗಿದ್ದು, ಗ್ರಾಮದಲ್ಲಿ ನದಿಗೆ ನಿರ್ಮಿಸಿದ ಸೇತುವೆ ಮುಳುಗಡೆಯ ಹಂತದಲ್ಲಿದೆ. ನೀರಿನ ಮಟ್ಟ 2 ಅಡಿ ಏರಿಕೆಯಾದರೆ ಜಲಾವೃತಗೊಳ್ಳಲಿದೆ. ಇದರಿಂದಾಗಿ ಜಿಲ್ಲಾಡಳಿತ ಮೂಂಜಾಗ್ರತೆ ಕೈಗೊಂಡು ಗರ್ಭಿಣಿಯರನ್ನ ಸ್ಥಳಾಂತರ ಮಾಡಿದೆ.

    ವೈದ್ಯರಿಂದ ಗರ್ಭಿಣಿಯರ ಆರೋಗ್ಯ ತಪಾಸಣೆ ಮಾಡಿಸಲಾಗಿದ್ದು, ನಂತರ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಗುರುರಾಘವೇಂದ್ರ ಸ್ವಾಮಿಗಳ ಏಕಶಿಲಾ ಬೃಂದಾವನ ಜಲಾವೃತ

  • ಪ್ರೀತಿ ನಿರಾಕರಿಸಿದವನ ಮೇಲೆ ಕೊಲೆ ಆರೋಪದ ಸಂಚು – ಮಗುವನ್ನು ಬಾವಿಗೆ ಎಸೆದ ಅಪ್ರಾಪ್ತೆ

    ಪ್ರೀತಿ ನಿರಾಕರಿಸಿದವನ ಮೇಲೆ ಕೊಲೆ ಆರೋಪದ ಸಂಚು – ಮಗುವನ್ನು ಬಾವಿಗೆ ಎಸೆದ ಅಪ್ರಾಪ್ತೆ

    ಯಾದಗಿರಿ: ನಗರದ (Yadgir) ಅಂಬೇಡ್ಕರ್ ಬಡಾವಣೆಯಲ್ಲಿ ನಡೆದಿದ್ದ ಹಸುಗೂಸಿನ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಗುವಿನ ಚಿಕ್ಕಪ್ಪ ಪ್ರೀತಿ ನಿರಾಕರಸಿದ್ದಕ್ಕೆ ಆತನ ಮೇಲೆ ಕೊಲೆ ಆರೋಪ ಬರುವಂತೆ ಸಂಚು ರೂಪಿಸಿ ಅಪ್ರಾಪ್ತೆಯೊಬ್ಬಳು ಮಗುವನ್ನು ಬಾವಿಗೆ ಎಸೆದು ಹತ್ಯೆ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

    ಜು.6 ರಂದು ನಾಗೇಶ್ ಹಾಗೂ ಚಿಟ್ಟೆಮ್ಮ ಎಂಬವರ 2 ತಿಂಗಳ ಹಸುಗೂಸನ್ನು ಬಾವಿಗೆ ಎಸೆದು ಕೊಲೆ ಮಾಡಲಾಗಿತ್ತು. ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಮಗುವನ್ನು ತೆಗೆದುಕೊಂಡು ಹೋಗಿ ಬಾಲಕಿಯೊಬ್ಬಳು ಕೊಲೆ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಮಗುವನ್ನು ಹತ್ಯೆ ಮಾಡಿ ಬಳಿಕ ಕಣ್ಣೀರು ಹಾಕಿ ನಾಟಕ ಮಾಡಿದ್ದಳು. ಅಲ್ಲದೇ ಮಗು ನಾಪತ್ತೆಯಾದಾಗ ಹುಡುಕುವ ವೇಳೆ ಬಾವಿ ಕಡೆ ಇರಬಹುದು, ಒಬ್ಬರು ಮಗುವನ್ನು ತೆಗೆದುಕೊಂಡು ಹೋದ್ರು ಎಂದು ಪೋಷಕರಿಗೆ ಬಾಲಕಿ ಹೇಳಿದ್ದಳು. ಇದನ್ನೂ ಓದಿ: ತೀವ್ರ ಹೃದಯಾಘಾತದಿಂದ ವಿರಕ್ತ ಮಠದ ಶ್ರೀಗಳು ವಿಧಿವಶ

    ಕೊಲೆಯಾದ ಮಗುವಿನ ಚಿಕ್ಕಪ್ಪ ಯಲ್ಲಪ್ಪನನ್ನು ಅಪ್ರಾಪ್ತೆ ಪ್ರೀತಿಸುತ್ತಿದ್ದಳು. ಅಲ್ಲದೇ 5 ಬಾರಿ ಆತನಿಗೆ ಪ್ರಪೋಸ್ ಮಾಡಿದ್ದಳು. ಆದರೆ ಯಲ್ಲಪ್ಪ, ಸಂಬಂಧದಲ್ಲಿ ಬಾಲಕಿ ತಂಗಿಯಾಗುತ್ತಾಳೆ ಎಂದು ನಿರಾಕರಿಸಿದ್ದ. ಇದರಿಂದ ಸಿಟ್ಟಿಗೆದ್ದ ಬಾಲಕಿ, ಮಗುವನ್ನು ಹತ್ಯೆಗೈದು ಯಲ್ಲಪ್ಪನ ಮೇಲೆ ಆರೋಪ ಬರುವಂತೆ ಸಂಚು ರೂಪಿಸಿ, ಕೊಲೆ ಮಾಡಿದ್ದಾಳೆ ಎಂದು ತಿಳಿದು ಬಂದಿದೆ.

    ಅಲ್ಲದೇ ಕಳೆದ ವರ್ಷ ರಕ್ಷಾಬಂಧನದಲ್ಲಿ ಯಲ್ಲಪ್ಪನಿಗೆ ಬಾಲಕಿ ರಾಖಿ ಸಹ ಕಟ್ಟಿದ್ದಳು ಎಂದು ತಿಳಿದು ಬಂದಿದೆ. ಆದರೂ ಬಾಲಕಿ ಯಲ್ಲಪ್ಪನನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದಳು. ಇದೀಗ ಬಾಲಕಿಯ ಹುಚ್ಚು ಪ್ರೀತಿಗೆ ಪುಟ್ಟ ಮಗುವಿನ ಜೀವ ಬಲಿಯಾಗಿದೆ. ಈ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: 15 ದಿನದ ಮಗಳನ್ನ ಜೀವಂತ ಸಮಾಧಿ ಮಾಡಿದ ತಂದೆ!