Tag: Yadagir

  • ಮತದಾನದ ಮಮತೆಯ ಕರೆಯೋಲೆ ಆಮಂತ್ರಣ ಪತ್ರಿಕೆ ಬಿಡುಗಡೆ

    ಮತದಾನದ ಮಮತೆಯ ಕರೆಯೋಲೆ ಆಮಂತ್ರಣ ಪತ್ರಿಕೆ ಬಿಡುಗಡೆ

    ಯಾದಗಿರಿ: ನಾಳೆ ಮತದಾನ (Vote), ಹೀಗಾಗಿ ಮತದಾರರಿಗೆ ಜಾಗೃತಿ ಮೂಡಿಸುವ ಕೆಲಸಗಳು ಆಗುತ್ತಿವೆ. ಈ ಹಿನ್ನೆಲೆಯಲ್ಲಿ ಯಾದಗಿರಿ (Yadgir) ಜಿಲ್ಲಾಡಳಿತ ಮತದಾನದ ಮಮತೆಯ ಕರೆಯೋಲೆ ಶೀರ್ಷಿಕೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದೆ.

    ಮತದಾರರಲ್ಲಿ ಜಾಗೃತಿ ಮೂಡಿಸಲು ಯಾದಗಿರಿ ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿ ವಿನೂತನ ಪ್ರಯೋಗಕ್ಕೆ ಮುಂದಾಗಿದೆ. ಈ ಆಮಂತ್ರಣದ ವಿಶೇಷವೆಂದರೆ ಯಾದಗಿರಿಯಲ್ಲೂ ಮತದಾರರಿಗೆ ಮತದಾನದ ಮಮತೆಯ ಕರೆಯೋಲೆ ನೀಡಲಾಯಿತು.

    ಆಮಂತ್ರಣ ಪತ್ರಿಕೆಯಲ್ಲಿ ಏನಿದೆ?: ಚುನಾವಣಾ ಆಯೋಗ (Election Commission) ನಿಶ್ಚಯಿಸಿದಂತೆ ಕರ್ನಾಟಕ ವಿಧಾನಸಭಾ ಚುನಾವಣೆ-2023ರ (Karnataka Assembly Election 2023) ಮತದಾನ ದಿನ ಸಲ್ಲುವ ಶುಭ ಮಹೂರ್ತದಲ್ಲಿ ಭಾರತ ಮಾತೆಯ ಪ್ರಬುದ್ಧ ಪ್ರಜೆಯಾದ ಮತದಾರ ಜೊತೆ ಪ್ರಜಾಪ್ರಭುತ್ವ ಈ ಮಹತ್ವದ ಶುಭ ಕಾರ್ಯದಲ್ಲಿ ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಎತ್ತಿ ಹಿಡಿದು ಜನರಿಂದ ಜನರಿಗೋಸ್ಕರ ಸಂವಿಧಾನಬದ್ಧ ಆಡಳಿತ ವ್ಯವಸ್ಥೆಯನ್ನು ಬಲಪಡಿಸಲು ವಿನಂತಿ ಎಂದು ಬರೆಯಲಾಗಿದೆ. ಇದನ್ನೂ ಓದಿ: Karnataka Election 2023; ಮತದಾರರ ಸೆಳೆಯಲು ಬೆಂಗಳೂರಲ್ಲಿ ವಿಶೇಷ ಮತಗಟ್ಟೆ

    ಅದೇ ರೀತಿ ಕೊಪ್ಪಳದ (Koppala) ಕುಷ್ಠಗಿಯಲ್ಲಿ ನೂತ ವಧು, ವರರಿಂದ ಎಲ್ಲರೂ ಕಡ್ಡಾಯ ಮತದಾನ ಮಾಡಿ ಎಂದು ಪೋಸ್ಟರ್ ಹಿಡಿದು ಜಾಗೃತಿ ಮೂಡಿಸಿದರು. ಕೋಲಾರದಲ್ಲೂ (Kolar) ಅಧಿಕಾರಿಗಳು ವೋಟಿಂಗ್ ಅವೇರ್‌ನೆಸ್ ಮೂಡಿಸಿದರು. ಇದನ್ನೂ ಓದಿ: ಕೆಜಿಗೆ 50 ರೂ.ಗಿಂತ ಕಡಿಮೆಯಿರುವ ಸೇಬು ಆಮದು ನಿಷೇಧ – ಕೇಂದ್ರ ಸರ್ಕಾರ

  • ಹೆರಿಗೆ ನೋವಲ್ಲೂ ವೋಟ್ ಮಾಡಿ ಮಗುವಿಗೆ ಜನ್ಮ ನೀಡಿದ ತಾಯಿ

    ಹೆರಿಗೆ ನೋವಲ್ಲೂ ವೋಟ್ ಮಾಡಿ ಮಗುವಿಗೆ ಜನ್ಮ ನೀಡಿದ ತಾಯಿ

    ಹುಬ್ಬಳ್ಳಿ/ಯಾದಗಿರಿ: ಕರ್ನಾಟಕ ವಿಧಾನಸಭಾ ಚುನಾವಣೆಗೆ ಮತದಾನ ನಡೆಯುವ ಸಂದರ್ಭದಲ್ಲಿ ಗರ್ಭಿಣಿಯೊಬ್ಬರು ಕುಸಿದು ಬಿದ್ದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಮತದಾನ ನಡೆಯುತ್ತಿತ್ತು. ಈ ವೇಳೆ ಸಾವಿತ್ರಿ ಕಿರೇಸೂರ ಗರ್ಭಿಣಿ ಮತದಾನ ಮಾಡಲು ಆಗಮಿಸಿದ್ದರು. ಆದರೆ ಮತ ಚಲಾಯಿಸುತ್ತಿದಂತೆ ಅಲ್ಲಿಯೇ ಕುಸಿದು ಬಿದ್ದಿದ್ದಾರೆ.

    ಮತದಾನ ಕೇಂದ್ರದಲ್ಲಿದ್ದ ಚುನಾವಣಾ ಸಿಬ್ಬಂದಿ ಸ್ಥಳದಲ್ಲಿಯೇ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ನಂತರ ಸಮೀಪದ ಕುಂದಗೋಳ ತಾಲೂಕು ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿದೆ.

    ಇನ್ನು ಯಾದಗಿರಿಯ ಜಿಲ್ಕೆ ಸುರಪುರ ತಾಲೂಕಿನ ಕೊಡೆಕಲ್ ವ್ಯಾಪ್ತಿಯ ಬೈಲುಕುಂಟೆ ಗ್ರಾಮದಲ್ಲಿ, ಗರ್ಭಿಣಿಯೊಬ್ಬರು ಹೆರಿಗೆ ನೋವಿನ ಮಧ್ಯೆಯೂ ಮತದಾನ ಮಾಡಿದ್ದಾರೆ. ನಂತರ ಗರ್ಭಿಣಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

  • ಮತ ಚಲಾಯಿಸಲು ಬೂತ್‍ ಗೆ ಆಗಮಿಸಿದ್ದ ಮಹಿಳೆಗೆ ಬಿಗ್ ಶಾಕ್!

    ಮತ ಚಲಾಯಿಸಲು ಬೂತ್‍ ಗೆ ಆಗಮಿಸಿದ್ದ ಮಹಿಳೆಗೆ ಬಿಗ್ ಶಾಕ್!

    ಯಾದಗಿರಿ: ಕರ್ನಾಟಕ ವಿಧಾನಸಭಾ ಚುನಾವಣೆದ ಮತದಾನ ಭರ್ಜರಿಯಿಂದ ಸಾಗುತ್ತಿದ್ದು, ಒಟ್ಟು 222 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಮೇ 15ಕ್ಕೆ ಮತ ಎಣಿಕೆ ನಡೆಯಲಿದೆ.

    ಯಾದಗಿರಿಯ ಕೋಳಿವಾಡ ಮತಗಟ್ಟೆ 38ರಲ್ಲಿ ಎಡವಟ್ಟು ಆಗಿದ್ದು, ಮತ ಚಲಾಯಿಸಲು ಬಂದ ಮಹಿಳೆಗೆ ನಿಮ್ಮ ವೋಟ್ ಹಾಕಲಾಗಿದೆ ಎಂದ ಚುನಾವಣಾ ಅಧಿಕಾರಿಗಳು ಹೇಳಿದ್ದಾರೆ. ಇದರಿಂದ ಮಹಿಳೆ ಗಾಬರಿಗೊಂಡಿದ್ದಾರೆ.

    ಇಂದು ಮತದಾನ ಮಾತದಾನ ಮಾಡಲು ಬಸ್ಸಮ್ಮ ಕೊಳಿವಾಡನ ಮತಗಟ್ಟೆ 38 ರ ಕೇಂದ್ರಕ್ಕೆ ಬಂದಿದ್ದಾರೆ. ಆಗ ಚುನಾವಣಾಧಿಕಾರಿಗಳು ನಿಮ್ಮ ಮತಚಲಾಯಿಸಿದೆ ಎಂದು ಹೇಳಿದ್ದಾರೆ. ಮತದಾನದಿಂದ ವಂಚಿತಳಾದ ಬಸ್ಸಮ್ಮ ಚುನಾವಣೆ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ಬಸ್ಸಮ್ಮ ಹೆಸರಿನಲ್ಲಿ ಯಾರು ಮತಚಲಾಯಿಸದ್ದಾರೆಂಬ ಅನುಮಾನ ಮೂಡಿದೆ.

    ರಾಜ್ಯ ವಿಧಾನಸಭೆಯ 224 ಕ್ಷೇತ್ರಗಳ ಪೈಕಿ ಜಯನಗರ, ರಾಜರಾಜೇಶ್ವರಿನಗರ ಹೊರತು ಪಡಿಸಿ 222 ಕ್ಷೇತ್ರಗಳಿಗೆ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. ಮೂರು ಪಕ್ಷಗಳ ಮುಖ್ಯಮಂತ್ರಿ ಅಭ್ಯರ್ಥಿಗಳಾದ ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ ಸೇರಿದಂತೆ ಎರಡೂವರೆ ಸಾವಿರ ಅಭ್ಯರ್ಥಿಗಳ ರಾಜಕೀಯ ಹಣೆಬರಹವನ್ನ ಮತದಾರರು ನಿರ್ಧರಿಸಲಿದ್ದಾರೆ.

  • ರಂಗೋಲಿ ಮೂಲಕ ಮತದಾನದ ಜಾಗೃತಿ

    ರಂಗೋಲಿ ಮೂಲಕ ಮತದಾನದ ಜಾಗೃತಿ

    ಯಾದಗಿರಿ: ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ವಿವಿಧ ರೀತಿಯಲ್ಲಿ ಮತದಾರರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಯಾದಗಿರಿ ಜಿಲ್ಲಾಡಳಿತವು ರಂಗೋಲಿ ಹಾಕಿಸುವ ಮೂಲಕ ಮತದಾನದ ಜಾಗೃತಿ ಮೂಡಿಸಿದೆ.

    ಯಾದಗಿರಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮತದಾನ ಜಾಗೃತಿಗಾಗಿ ಜಿಲ್ಲಾಡಳಿತವು ವಿವಿಧ ತರದ ರಂಗೋಲಿ ಸ್ಪರ್ಧೆ ಏರ್ಪಡಿಸಿತ್ತು. ಈ ಸ್ಪರ್ಧೆಯಲ್ಲಿ ಮಹಿಳೆಯರು ವಿವಿಧ ಚಿತ್ತಾರದ ರಂಗೋಲಿ ಬಿಡಿಸಿ ಸಂಭ್ರಮಿಸಿದ್ದಾರೆ.

    ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಬಾಲ ಕಾರ್ಮಿಕ ಇಲಾಖೆ ಸಂಯುಕ್ತ ಆಶ್ರಯದಲ್ಲಿ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಇದರಲ್ಲಿ ಅತ್ಯುತ್ತಮ ರಂಗೋಲಿ ಬಿಡಿಸಿದ ಮಹಿಳೆಯರಿಗೆ ಪ್ರಥಮ ಹಾಗೂ ದ್ವಿತೀಯ ಬಹುಮಾನ ನೀಡಲಾಯಿತು. ಈ ಮೂಲಕ ಪ್ರತಿಯೊಬ್ಬರು ಮತದಾನ ಮಾಡುವುದು ಅತ್ಯವಶ್ಯಕ. ಮತದಾನ ನಮ್ಮ ಹಕ್ಕು ಎಂಬ ಬರಹ ಕಾಣುತ್ತಿತ್ತು.

  • ಟೇಬಲ್ ಮೇಲೆ ಇದ್ದಕ್ಕಿದ್ದಂತೆ ಬ್ಲಾಸ್ಟ್ ಆಯ್ತು ಹೊಸ ಸ್ಮಾರ್ಟ್ ಫೋನ್!

    ಟೇಬಲ್ ಮೇಲೆ ಇದ್ದಕ್ಕಿದ್ದಂತೆ ಬ್ಲಾಸ್ಟ್ ಆಯ್ತು ಹೊಸ ಸ್ಮಾರ್ಟ್ ಫೋನ್!

    ಯಾದಗಿರಿ: ಹೊಸದಾಗಿ ಖರೀದಿಸಿದ ಸ್ಮಾರ್ಟ್ ಫೋನೊಂದು ಗ್ರಾಹಕರ ಮನೆಯಲ್ಲಿ ಸ್ಫೋಟಗೊಂಡಿರುವ ಘಟನೆ ಯಾದಗಿರಿಯ ಅಂಬೇಡ್ಕರ್ ನಗರದಲ್ಲಿ ನಡೆದಿದೆ.

    ಮಂಜುನಾಥ್ ಚಲುವಾದಿ ಎಂಬವರು ಒಂದು ತಿಂಗಳ ಹಿಂದೆ ಆನ್‍ಲೈನಲ್ಲಿ 10,500 ರೂ. ನೀಡಿ ಸ್ವೈಪ್ ಇಲೈಟ್ ಕಂಪೆನಿಯ ಫೋನನ್ನು ಖರೀದಿಸಿದ್ದರು.

    ಗುರುವಾರ ಮೊಬೈಲ್‍ನಲ್ಲಿ ಮಾತನಾಡಿ ಟೇಬಲ್ ಮೇಲಿಟ್ಟು ಕೆಲಸ ಮಾಡುವ ವೇಳೆ ಬೆಂಕಿ ಕಾಣಿಸಿಕೊಂಡು ಫೋನ್ ಸ್ಫೋಟಗೊಂಡಿದೆ. ಸ್ಫೋಟಗೊಂಡು ಬೆಂಕಿ ಬೆಂಕಿ ಕಂಡ ಕೂಡಲೇ ಮಂಜುನಾಥ್ ನಂದಿಸಲು ಮುಂದಾದಗ ಕೈಗೆ ಸ್ವಲ್ಪ ಗಾಯವಾಗಿದೆ. ಮೊಬೈಲ್ ಟೇಬಲ್ ಮೇಲಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ.