Tag: Y Sampangi

  • ಶಾಸಕನ ಹುಟ್ಟುಹಬ್ಬಕ್ಕೆ ಬಂದಿದ್ದ ವ್ಯಕ್ತಿ ತೋಟದ ಬಳಿ ಶವವಾಗಿ ಪತ್ತೆ

    ಶಾಸಕನ ಹುಟ್ಟುಹಬ್ಬಕ್ಕೆ ಬಂದಿದ್ದ ವ್ಯಕ್ತಿ ತೋಟದ ಬಳಿ ಶವವಾಗಿ ಪತ್ತೆ

    ಕೋಲಾರ: ಮಾಜಿ ಶಾಸಕ ವೈ.ಸಂಪಂಗಿ ಅವರ ತೋಟದ ಬಳಿ ವ್ಯಕ್ತಿಯೊಬ್ಬನ ಮೃತದೇಹ ಪತ್ತೆಯಾಗಿತ್ತು. ಈ ಕುರಿತು ಪೊಲೀಸರು ತನಿಖೆ ಮಾಡುತ್ತಿದ್ದು, ಹೊಸ ಟ್ವಿಸ್ಟ್ ಸಿಕ್ಕಿದೆ.

    ವೈ.ಸಂಪಂಗಿ ಅವರ ತೋಟದ ಬಳಿ ವ್ಯಕ್ತಿಯ ಶವ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ವ್ಯಕ್ತಿಯ ಗುರುತು ಪತ್ತೆಯಾಗಿದೆ. ಜೂನ್ 2 ರಂದು ಪತ್ತೆಯಾಗಿದ್ದ ಮೃತದೇಹವನ್ನು ಮದನಾಯಕನಹಳ್ಳಿ ಗ್ರಾಮದ ತಾಯಲೂರಪ್ಪ(60) ಎಂದು ಗುರುತಿಸಲಾಗಿದೆ. ಇದನ್ನೂ ಓದಿ:  ದಯವಿಟ್ಟು… ರಾಜ್ಯದ ಜನತೆಯ ಚಡ್ಡಿ ಉದುರಿಸಬೇಡಿ: ಹೆಚ್‍ಡಿಕೆ 

    ಅಲ್ಲದೇ ವೈ.ಸಂಪಂಗಿ ಅವರು ಜೂನ್ 1 ರಂದು ತಮ್ಮ ತೋಟದ ಮನೆಯಲ್ಲಿಯೇ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದರು. ಕಾರ್ಯಕ್ರಮದ ವೀಡಿಯೋ, ಫೋಟೋಗಳಲ್ಲಿ ತಾಯಲೂರಪ್ಪ ಸಹ ಕಾಣಿಸಿಕೊಂಡಿದ್ದಾರೆ. ಈ ಮೂಲಕ ವೈ.ಸಂಪಂಗಿ ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ತಾಯಲೂರಪ್ಪ ಸಹ ಬಂದಿದ್ದರು ಎಂಬುದು ಖಾತ್ರಿಯಾಗಿದೆ. ಅಚ್ಚರಿ ವಿಷಯವೆಂದರೆ ಕಾರ್ಯಕ್ರಮ ನಡೆದ ಸ್ಥಳದಲ್ಲಿಯೇ ತಾಯಲೂರಪ್ಪ ಶವವಾಗಿ ಪತ್ತೆಯಾಗಿದ್ದಾರೆ.

    ಈ ಸಂಬಂಧ ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದ ಬೇತಮಂಗಲ ಠಾಣಾ ಪೊಲೀಸರು ತನಿಖೆ ಮಾಡುತ್ತಿದ್ದಾರೆ.

  • ಸ್ವಂತ ಖರ್ಚಿನಲ್ಲಿ 20 ಶುಶ್ರೂಷಕಿಯರ ನೇಮಿಸಿ ಆಕ್ಸಿಜನ್ ಸಿಲಿಂಡರ್ ನೀಡಿದ ವೈ.ಸಂಪಂಗಿ

    ಸ್ವಂತ ಖರ್ಚಿನಲ್ಲಿ 20 ಶುಶ್ರೂಷಕಿಯರ ನೇಮಿಸಿ ಆಕ್ಸಿಜನ್ ಸಿಲಿಂಡರ್ ನೀಡಿದ ವೈ.ಸಂಪಂಗಿ

    ಕೋಲಾರ: ಕೊರೊನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಸಾಕಷ್ಟು ಜನರು ಬೇರೆ ಬೇರೆ ರೀತಿಯಲ್ಲಿ ದಾನ ಧರ್ಮ ಮಾಡಿ ಜನರಿಗೆ ನೆರವಾಗುತ್ತಿದ್ದಾರೆ. ಈ ಮಧ್ಯೆ ಜಿಲ್ಲೆಯ ಮಾಜಿ ಶಾಸಕ ವೈ.ಸಂಪಂಗಿ ಕೆಜಿಎಫ್‍ನ ಸರ್ಕಾರಿ ಆಸ್ಪತ್ರೆಗೆ ಕೊರೊನಾ ವಾರಿಯರ್ಸ್ ಹಾಗೂ ಬೇಕಾದ ಆಕ್ಸಿಜನ್ ಸಿಲಿಂಡರ್‍ನ್ನು ಸ್ವತಂ ಖರ್ಚಿನಲ್ಲಿ ನೀಡುವ ಮೂಲಕ ನೆರವಾಗಿದ್ದಾರೆ.

    ಕೆಜಿಎಫ್ ಸಾರ್ವಜನಿಕ ಆಸ್ಪತ್ರೆಗೆ ಅವಶ್ಯಕವಾಗಿ ಬೇಕಾಗಿದ್ದ 16 ಆಕ್ಸಿಜನ್ ಸಿಲಿಂಡರ್ ಹಾಗೂ 20 ಶುಶ್ರೂಷಕಿಯರನ್ನು ನೇಮಕ ಮಾಡಿ ಕೊರೊನಾ ಸಂಕಷ್ಟಕ್ಕೆ ಮಿಡಿದಿದ್ದಾರೆ. ಸ್ವಂತ ಹಣದಿಂದ 20 ಮಂದಿ ಶುಶ್ರೂಷಕಿಯರಿಗೆ ಸಂಬಳ ನೀಡುವ ಮೂಲಕ ಆಸ್ಪತ್ರೆಗೆ ಬೇಕಾದ ಕೊರೊನಾ ವಾರಿಯರ್ಸ್ ಹಾಗೂ ಅವರಿಗೆ ಬೇಕಾದ ದಿನಸಿ ಕಿಟ್‍ಗಳನ್ನು ಇಂದು ವಿತರಣೆ ಮಾಡಲಾಯಿತು.

    ಇಂದಿನಿಂದ ಕೋವಿಡ್ ಕರ್ತವ್ಯ ನಿರ್ವಸಲಿರುವ ನುರಿತ 20 ಶುಶ್ರೂಷಕಿಯರು ಹಾಗೂ ಅವರಿಗೆ ಬೇಕಾದ ದಿನಸಿ ಕಿಟ್‍ಗಳ ಜೊತೆಗೆ 16 ಆಕ್ಸಿಜನ್ ಸಿಲೆಂಡರ್‍ ಗಳನ್ನು ಆಸ್ಪತ್ರೆಗೆ ಸಂಸದ ಮುನಿಸ್ವಾಮಿ ಅವರ ಸಮ್ಮುಖದಲ್ಲಿ ನೀಡಲಾಯಿತು. ಕಳೆದ ಹಲವು ದಿನಗಳಿಂದ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಮಸ್ಯೆ ಸೇರಿದಂತೆ ಸಾಕಷ್ಟು ಜನರಿಗೆ ಚಿಕಿತ್ಸೆ ಸಿಗದೆ ಪರದಾಡುತ್ತಿದ್ದರು ಇದರಿಂದ ಎಚ್ಚೆತ್ತ ಸಂಪಂಗಿ ಅವರು ಇಂದು ತಮ್ಮ ಕ್ಷೇತ್ರದ ವ್ಯಾಪ್ತಿಗೆ ಬರುವ ಸರ್ಕಾರಿ ಆಸ್ಪತ್ರೆಗೆ ಅವಶ್ಯಕವಾಗಿ ಬೇಕಾದ ಆಕ್ಸಿಜನ್ ಸಿಲಿಂಡರ್ ಹಾಗೂ ಕೊರೊನಾ ವಾರಿಯರ್ಸ್ ಗಳನ್ನು ನೇಮಕ ಮಾಡುವ ಮೂಲಕ ಕೊರೊನಾ ಕಷ್ಟ ಕಾಲದಲ್ಲಿ ನೆರವಾಗಿದ್ದಾರೆ.