Tag: Y.S.V Datta

  • ಪಕ್ಷೇತರರಾಗಿ ನಿಲ್ಲಲು ಸಲಹೆ ನೀಡಿದ ಅಭಿಮಾನಿಗಳಲ್ಲಿ ಕಾಲಾವಕಾಶ ಕೇಳಿದ ದತ್ತಣ್ಣ

    ಪಕ್ಷೇತರರಾಗಿ ನಿಲ್ಲಲು ಸಲಹೆ ನೀಡಿದ ಅಭಿಮಾನಿಗಳಲ್ಲಿ ಕಾಲಾವಕಾಶ ಕೇಳಿದ ದತ್ತಣ್ಣ

    ಚಿಕ್ಕಮಗಳೂರು: ಪಕ್ಷೇತರರಾಗಿ ನಿಲ್ಲಲು ಸಲಹೆ ನೀಡಿದ ಅಭಿಮಾನಿಗಳಲ್ಲಿ ವೈ.ಎಸ್.ವಿ.ದತ್ತ (Y S V Datta) ಅವರು ಕಾಲಾವಕಾಶ ಕೇಳಿದ್ದಾರೆ.

    ಕಾಂಗ್ರೆಸ್ ಟಿಕೆಟ್ (Congress Ticket) ಕೈತಪ್ಪಿದ್ದಕ್ಕೆ ಬೇಸರಗೊಂಡ ದತ್ತ, ಇಂದು ನನ್ನ-ನಿಮ್ಮ ಆತ್ಮಗೌರವ, ಸ್ವಾಭಿಮಾನಕ್ಕೆ ಅಪಮಾನವಾಗಿದೆ ಎಂದ ಅವರು, ಆತ್ಮಗೌರವ ಹಾಗೂ ಸ್ವಾಭಿಮಾನಕ್ಕಾಗಿ ಕಡೂರಿನಲ್ಲಿ ಭಾನುವಾರ ಬೆಳಗ್ಗೆ 11 ಗಂಟೆಗೆ ಅಭಿಮಾನಿಗಳ ಸಭೆ ಕರೆದಿದ್ದಾರೆ.

    ನನ್ನ ಬಳಿ ಹಣ-ಜಾತಿ ಇಲ್ಲದಿದ್ದರೂ ದತ್ತಣ್ಣ ಎಂದು ಕರೆದಿದ್ದೀರಿ. ಆತ್ಮೀಯತೆಯಿಂದ ತಬ್ಬಿಕೊಂಡು ಬೆಳೆಸಿದ್ದೀರಿ. ಪ್ರಸ್ತುತ ರಾಜಕೀಯ ಸ್ಥಿತಿಯಲ್ಲಿ ಒಬ್ಬರ ಜೊತೆ ಒಬ್ಬರಿರಬೇಕು. ನನ್ನ ಜೊತೆ ನೀವು, ನಿಮ್ಮ ಜೊತೆ ನಾನಿರಬೇಕು ಎಂದು ಮತದಾರರ ಆಶೀರ್ವಾದಕ್ಕಾಗಿ ಸಭೆ ಕರೆದಿರುವ ಬಗ್ಗೆ ತಿಳಿಸಿದರು. ಇದನ್ನೂ ಓದಿ: Congress List: ಕಾಂಗ್ರೆಸ್‌ನಿಂದ ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್ – ಯಾರಿಗೆ ಎಲ್ಲಿ ಟಿಕೆಟ್?

    ದತ್ತ ಕಡೂರಿನ ಕಾಂಗ್ರೆಸ್ ಟಿಕೆಟ್ (Kadoor Congress Ticket) ಆಕಾಂಕ್ಷಿಯಾಗಿದ್ದರು. ಕಡೂರಿನ ಕಾಂಗ್ರೆಸ್ ಟಿಕೆಟ್ ದತ್ತ ಅವರಿಗೆ ಎಂದು ಹೇಳಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಹೈಕಮಾಂಡ್ ಕೆ.ಎಸ್. ಆನಂದ್ ಹೆಸರು ಘೋಷಿಸಿದೆ. ಹೀಗಾಗಿ ದತ್ತ ಅವರಿಗೆ ಟಿಕೆಟ್ ಕೈ ತಪ್ಪುತ್ತಿದ್ದಂತೆ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.

    ಗುರುವಾರ ತಡರಾತ್ರಿವರೆಗೆ ದತ್ತ ಮನೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಪಕ್ಷೇತರವಾಗಿ ನಿಲ್ಲುವಂತೆ ದತ್ತಗೆ ಅಭಿಮಾನಿಗಳು ಸಲಹೆ ನೀಡಿದರು. ಈ ವೇಳೆ ಅಭಿಮಾನಿಗಳಿಗೆ ಎರಡು ದಿನ ಅವಕಾಶ ಕೇಳಿದರು. ಈ ಹಿನ್ನೆಲೆಯಲ್ಲಿ ಭಾನುವಾರದ ಸಭೆ ಬಳಿಕ ದತ್ತ ಅವರ ಮುಂದಿನ ತೀರ್ಮಾನ ಪ್ರಕಟಗೊಳಿಸುವ ಸಾಧ್ಯತೆ ಇದೆ.

  • ದೇವೇಗೌಡರ ಬೆನ್ನಿಗೆ ಚೂರಿ ಹಾಕಿದ ವೈ.ಎಸ್.ವಿ. ದತ್ತಾ – ಜೆಡಿಎಸ್ ಕಿಡಿ

    ದೇವೇಗೌಡರ ಬೆನ್ನಿಗೆ ಚೂರಿ ಹಾಕಿದ ವೈ.ಎಸ್.ವಿ. ದತ್ತಾ – ಜೆಡಿಎಸ್ ಕಿಡಿ

    ಬೆಂಗಳೂರು : ಜೆಡಿಎಸ್ (JDS) ತೊರೆಯಲು ಮುಂದಾಗಿರುವ ವೈ.ಎಸ್.ವಿ. ದತ್ತಾ (YSV Datta) ವಿರುದ್ಧ ಜೆಡಿಎಸ್ ಕಿಡಿಕಾರಿದೆ. ಸರಣಿ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿರುವ ಜೆಡಿಎಸ್, ದೇವೇಗೌಡರ ಬೆನ್ನಿಗೆ ದತ್ತಾ ಚೂರಿ‌ ಹಾಕಿದ್ದಾರೆ ಎಂದು ಕಿಡಿಕಾರಿದೆ.

    ರಾಜ್ಯದ ಅಗ್ರಮಾನ್ಯ ನಾಯಕರು, ಮಾಜಿ ಪ್ರಧಾನಮಂತ್ರಿ ಆಗಿರುವ ಹೆಚ್.ಡಿ.ದೇವೇಗೌಡರ (HD Deve Gowda) ಮಾನಸಪುತ್ರ ಎಂದೇ ಖ್ಯಾತಿ ಆಗಿರುವ ವೈ.ಎಸ್.ವಿ ದತ್ತಾ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಕೈ ಹಿಡಿಯಲು ಅವರು ದಿನವನ್ನೂ ನಿಗದಿ ಮಾಡಿಕೊಂಡಿದ್ದಾರೆ ಎನ್ನುವುದು ಸದ್ಯದ ಸುದ್ದಿ.

    ಬಹುತೇಕ ಕಡೆ ದೇವೇಗೌಡರ ಮಾನಸಪುತ್ರ ಜೆಡಿಎಸ್ ತೊರೆದು ಹೋಗುತ್ತಿದ್ದಾರೆ ಎಂದು ಪ್ರಚಾರ ಮಾಡಲಾಗುತ್ತಿದೆ. ಮಾನಸಪುತ್ರ ಎನ್ನುವ ಪದವೇ ಹೆಚ್ಚು ಸದ್ದು ಮಾಡುತ್ತಿದೆ. ದತ್ತಾ ಅವರು ಗೌಡರಿಗೆ ಮಾನಸಪುತ್ರ ಪುತ್ರರಾಗಿದ್ದರೋ ಇಲ್ಲವೋ ಗೊತ್ತಿಲ್ಲ, ಆದರೆ, ದೇವೇಗೌಡರು ಮಾತ್ರ ನಿಜಕ್ಕೂ ದತ್ತಾ ಅವರನ್ನು ಹೆತ್ತ ತಂದೆಗಿಂತ ಹೆಚ್ಚು ಸಲುಹಿದ್ದರು, ಪೊರೆದಿದ್ದರು.

    ಅಂತಹ ದತ್ತಾ, ಮಾನಸಪುತ್ರನೆಂದು ಖ್ಯಾತಿಯ ಜತೆಗೆ ಸಕಲವನ್ನೂ ಸಂಪಾದನೆ ಮಾಡಿಕೊಂಡ ಮೇಲೆ ಸಲುಹಿದ, ಕಷ್ಟ ಬಂದಾಗ ಕಾಪಾಡಿದ, ಕಠಿಣ ಸಂದರ್ಭಗಳಲ್ಲಿ ಕಣ್ರೆಪ್ಪೆಯಂತೆ ಪೊರೆದ, ಅನೇಕ ಸಲ ಜನ್ಮಕೊಟ್ಟ ತಂದೆಗಿಂತ ಗಟ್ಟಿಯಾಗಿ ಜತೆಗೆ ನಿಂತು ಮುಳುಗೇ ಹೋಗುತ್ತಿದ್ದ ಬದುಕನ್ನು ಬದುಕಿಸಿಕೊಟ್ಟ ಮಾನಸ ತಂದೆ‌ಯನ್ನು ಮರೆತು, ತೊರೆಯುತ್ತಿದ್ದರೆ? ಎಂದು ಜೆಡಿಎಸ್ ಪ್ರಶ್ನೆ ಮಾಡಿದೆ.

    ಮಾನಸಪುತ್ರನನ್ನು ಇನ್ನೊಬ್ಬ ಪುತ್ರನೆಂದೇ ನಂಬಿದ್ದರು ದೇವೇಗೌಡರು. ನಂಬಿ ಪಕ್ಕದಲ್ಲಿ ಇಟ್ಟುಕೊಂಡರು. ಕೇಳಿದ್ದೆಲ್ಲಾ ಕೊಟ್ಟರು, ಕೇಳದಿದ್ದರೂ ಕೊಟ್ಟರು. ಪ್ರೀತಿ, ವಿಶ್ವಾಸ, ವಾತ್ಸಲ್ಯ ಎಲ್ಲವನ್ನೂ ಧಾರೆ ಎರೆದರು. ಆದರೆ, ಇವತ್ತು ಮಾನಸಪುತ್ರ ಎಲ್ಲವನ್ನೂ ಮರೆತು ಕೃತಜ್ಞತಾಹೀನರಾಗಿ ಅದೇ ಗೌಡರಿಗೆ ಬೆನ್ನಿಗೆ ಚೂರಿ ಹಾಕಿದ ಕಾಂಗ್ರೆಸ್ ಸೇರುತ್ತಿದ್ದಾರೆ. ಇದನ್ನೂ ಓದಿ: ಮೋದಿಯನ್ನು ಮೆಚ್ಚಿಸಲು ರಸ್ತೆಗಳಿಗೆ ತೇಪೆ ಹಾಕುವ ಕಾರ್ಯಕ್ಕೆ ಮುಂದಾದ ಹು-ಧಾ ಪಾಲಿಕೆ

    ಮಾನಸಪುತ್ರನಿಗೆ ನಂಬಿಕೆ ಎಂದರೆ ವ್ಯಾಪಾರ, ಪ್ರೀತಿ ಎಂದರೆ ಲಾಭದ ದಾರಿ, ವಿಶ್ವಾಸ ಎಂದರೆ ರಾಜಕೀಯ ಹಕೀಕತ್ತಿನ ರಾಜಮಾರ್ಗ. ಅಂಥ ಮಾನಸಪುತ್ರನ ಬಗ್ಗೆ ಗೌಡರು ಕೊರಗುವುದಿಲ್ಲ. ಏಕೆಂದರೆ ಪಕ್ಷದ ಎಲ್ಲಾ ನಾಯಕರು ಕಟ್ಟ ಕಡೆಯ ಕಾರ್ಯಕರ್ತನೂ ಮಾಜಿ ಪ್ರಧಾನಿಗಳ ಮಾನಸಪುತ್ರರೇ. ಢೋಂಗಿ ಮಾನಸಪುತ್ರರನ್ನು ಮರೆ ಲೇಸು. ಅಲ್ಲವೇ? ಎಂದು‌ ಟ್ವೀಟ್ ಮಾಡಿದ ಜೆಡಿಎಸ್ ಕಿಡಿಕಾರಿದೆ. ಇದನ್ನೂ ಓದಿ:  ನಾಟಕ ಮಾಡುವ ವೇಳೆ ಕುಸಿದು ಬಿದ್ದು ಪ್ರಾಣಬಿಟ್ಟ ಮಂಡ್ಯ ಕಲಾವಿದ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಟ್ಯೂಷನ್ ದತ್ತ ಮೇಷ್ಟ್ರೇ ನಿಮಗೊಂದು ಸಲಾಂ: ಸಚಿವ ಸುರೇಶ್ ಕುಮಾರ್

    ಟ್ಯೂಷನ್ ದತ್ತ ಮೇಷ್ಟ್ರೇ ನಿಮಗೊಂದು ಸಲಾಂ: ಸಚಿವ ಸುರೇಶ್ ಕುಮಾರ್

    – ನಿಮ್ಮೊಳಗಿರೋ ಶಿಕ್ಷಕ ಸದಾ ಹಸಿರಾಗಿರಲಿ ಮೇಷ್ಟ್ರೇ

    ಚಿಕ್ಕಮಗಳೂರು: ಫೇಸ್‍ಬುಕ್ ಲೈವ್ ಮೂಲಕ ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಪಾಠ ಮಾಡುತ್ತಿರೋ ಜಿಲ್ಲೆಯ ಕಡೂರಿನ ಮಾಜಿ ಶಾಸಕ ವೈ.ಎಸ್.ವಿ.ದತ್ತರ ಸೇವೆಗೆ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಫಿದಾ ಆಗಿದ್ದಾರೆ. ದತ್ತ ಅವರಿಗೆ ಪತ್ರ ಬರೆಯುವ ಮೂಲಕ ಅವರ ಸೇವೆಗೆ ಧನ್ಯವಾದ ತಿಳಿಸಿದ್ದಾರೆ.

    ವೃತ್ತಿ ಹಾಗೂ ಮಕ್ಕಳ ಮೇಲಿರುವ ನಿಮ್ಮ ಪ್ರೀತಿಗೆ ನನ್ನದೊಂದು ಸಲಾಂ ಎಂದು ಪತ್ರದಲ್ಲಿ ಬರೆದಿದ್ದಾರೆ. ದತ್ತ ಮೇಷ್ಟ್ರು ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಪ್ರತಿ ದಿನ ಸಂಜೆ 7.30 ರಿಂದ 8.30ರವರೆಗೆ ಫೇಸ್‍ಬುಕ್ ಲೈವ್‍ನಲ್ಲಿ ಪಾಠ ಮಾಡುತ್ತಿದ್ದಾರೆ. ಒಂದು ವಾರ ಭೌತಶಾಸ್ತ್ರ ಹಾಗೂ ಮತ್ತೊಂದು ವಾರ ಗಣಿತ ಪಾಠ ಮಾಡುತ್ತಿದ್ದಾರೆ. ಕೊರೊನಾ ಭಯದಿಂದ ಮುಂದಕ್ಕೆ ಹೋಗಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಜೂನ್ ಮೊದಲು ಅಥವಾ ಎರಡನೇ ವಾರದಲ್ಲಿ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದತ್ತ ಮೆಷ್ಟ್ರು ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಪುನರ್ ಮನನ ಮಾಡುವ ಉದ್ದೇಶದಿಂದ ಫೇಸ್‍ಬುಕ್ ಲೈವ್‍ನಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ.

    ಫೇಸ್‍ಬುಕ್‍ನಲ್ಲಿ ದತ್ತ ಮೇಷ್ಟ್ರ ಪಾಠ ನೋಡಿದ ಎಲ್ಲರೂ ನಾನು ನಿಮ್ಮ ಸ್ಟೂಡೆಂಟ್ ಆಗಬೇಕಿತ್ತು ಸರ್ ಎಂದು ಕಾಮೆಂಟ್ ಮಾಡಿದವರು ಇದ್ದಾರೆ. ಮಾಜಿ ಶಾಸಕ ವೈ.ಎಸ್.ವಿ ದತ್ತಾಗೆ ಶಿಕ್ಷಕ ವೃತ್ತಿ ಹೊಸತೇನಲ್ಲ. ಅವರು ಮೂಲತಃ ಶಿಕ್ಷಕರು. ಶಾಸಕರಾಗುವ ಮುನ್ನ ಬೆಂಗಳೂರಿನಲ್ಲಿ ಟ್ಯೂಷನ್ ಮಾಡುತ್ತಿದ್ದರು. ಬೆಂಗಳೂರಿನಲ್ಲಿ ಅವರು ಟ್ಯೂಷನ್ ದತ್ತಮೇಷ್ಟ್ರು ಎಂದೇ ಖ್ಯಾತಿ ಪಡೆದಿದ್ದಾರೆ. ಅವರಿಂದ ಕಲಿತವರು ಬೆಂಗಳೂರಿನ ದಶದಿಕ್ಕುಗಳಲ್ಲೂ ಇದ್ದಾರೆ.

    ಈಗ ಕೊರೊನಾನ ಆತಂಕದಿಂದ ದೇಶವೇ ಲಾಕ್‍ಡೌನ್ ಆಗಿರುವುದರಿಂದ ಮತ್ತೊಮ್ಮೆ ಫೇಸ್‍ಬುಕ್ ಮೂಲಕ ಮಕ್ಕಳಿಗೆ ಪಾಠ ಮಾಡುವ ಮೂಲಕ ಮಕ್ಕಳೊಂದಿಗೆ ಮಕ್ಕಳಾಗಿದ್ದಾರೆ. ರಾಜಕೀಯ ಮರೆತು ದತ್ತ ಮೇಷ್ಟ್ರಿಗೆ ಪತ್ರ ಬರೆದಿರುವ ಸುರೇಶ್ ಕುಮಾರ್, ಬೆಂಗಳೂರಿನ ರಸ್ತೆಯಲ್ಲಿ ಸಿಕ್ಕಾಗ ಇಬ್ಬರು ಮಾತನಾಡಿದ ಕುಶಲೋಪರಿಯನ್ನ ಪತ್ರದ ಮೂಲಕ ಮತ್ತೊಮ್ಮೆ ನೆನೆದಿದ್ದಾರೆ. ಪತ್ರದ ತುಂಬಾ ದತ್ತರವರನ್ನ ಹಾಡಿ ಹೊಗಳಿರೋ ಸುರೇಶ್ ಕುಮಾರ್ ನಿಮ್ಮೊಳಗಿರುವ ನೈಜ ಶಿಕ್ಷಕ ಸದಾ ಹಸಿರಾಗಿರಲಿ, ನಿಮ್ಮ ನಿಸ್ವಾರ್ಥ ಸೇವೆಗೆ, ಟ್ಯೂಷನ್ ಮೇಷ್ಟ್ರಿಗೆ ನನ್ನದೊಂದು ಸಲಾಂ ಎಂದಿದ್ದಾರೆ.

  • ರೈತರು ಹೇಳಿದ್ದೇ ದರ – ಈರುಳ್ಳಿ, ಟೊಮಾಟೊ, ಕಲ್ಲಂಗಡಿ ಖರೀದಿಸಿದ ವೈ.ಎಸ್.ವಿ.ದತ್ತ

    ರೈತರು ಹೇಳಿದ್ದೇ ದರ – ಈರುಳ್ಳಿ, ಟೊಮಾಟೊ, ಕಲ್ಲಂಗಡಿ ಖರೀದಿಸಿದ ವೈ.ಎಸ್.ವಿ.ದತ್ತ

    – ಮೇಷ್ಟ್ರು ಸರಳತೆಗೆ ರೈತರು ಪಿಧಾ

    ಚಿಕ್ಕಮಗಳೂರು: ಬದುಕಿಗಾಗಿ ಬೆಳೆ ಬೆಳೆದು ಲಾಕ್‍ಡೌನ್‍ನಿಂದ ಕೊಳ್ಳುವವರಿಲ್ಲದೆ ಕಂಗಾಲಾಗಿದ್ದ ರೈತರ ಹೊಲಗಳಿಗೆ ಹೋಗಿ ಜಿಲ್ಲೆಯ ಕಡೂರಿನ ಮಾಜಿ ಶಾಸಕ ವೈ.ಎಸ್.ವಿ.ದತ್ತ ಸಾಂಕೇತಿಕವಾಗಿ ರೈತರು ಹೇಳಿದ ಬೆಲೆಗೆ ಈರುಳ್ಳಿ, ಟೊಮಾಟೊ ಹಾಗೂ ಕಲ್ಲಂಗಡಿ ಖರೀದಿಸಿದ್ದಾರೆ.

    ಒಂದೆರಡು ಎಕ್ರೆಯಲ್ಲಿ ರೈತರು ಬದುಕಿಗಾಗಿ ನಾನಾ ಬೆಳೆ ಬೆಳೆದಿರುತ್ತಾರೆ. ಬೆಲೆ ಇದ್ದಾಗ ಬೆಳೆ ಇರಲ್ಲ. ಬೆಳೆ ಇದ್ದಾಗ ಬೆಲೆ ಇರಲ್ಲ. ರಾಜ್ಯದ ರೈತರದ್ದು ಶೋಚನಿಯ ಪರಿಸ್ಥಿತಿ. ರೈತರ ಬಹುಪಾಲು ಜೀವನ ಮಧ್ಯವರ್ತಿಗಳ ಜೇಬು ಸೇರುತ್ತೆ. ಅದರಲ್ಲೂ ಲಾಕ್‍ಡೌನ್ ವೇಳೆಯಲ್ಲಂತೂ ರೈತರ ಸ್ಥಿತಿ ಹೇಳತೀರದ್ದಾಗಿದೆ. ಎಲ್ಲದಕ್ಕೂ ಸರ್ಕಾರದ ಕೈ ಕಾಯದೆ, ಜನಪ್ರತಿನಿಧಿಗಳ ನಮ್ಮ ಸಾಮಾಜಿಕ ಜವಾಬ್ದಾರಿಯೂ ಇದೆ. ಎಲ್ಲದಕ್ಕೂ ಸರ್ಕಾರವನ್ನೇ ಕಾಯೋದು ಸೂಕ್ತವಲ್ಲ. ಹಾಗಾಗಿ, ನಮ್ಮ ಅಳಿಲೂ ಸೇವೆಯೂ ಇರಲೆಂದು ರೈತರ ಹೊಲಗಳಿಗೆ ಹೋದ ಮಾಜಿ ಶಾಸಕ ವೈ.ಎಸ್.ವಿ.ದತ್ತ ರೈತರಿಂದ 15 ಟನ್ ಕಲ್ಲಂಗಡಿ, 15 ಟನ್ ಟೊಮಾಟೊ ಹಾಗೂ 10 ಟನ್ ಈರುಳ್ಳಿ ಖರೀದಿಸಿದ್ದಾರೆ.

    ಸುಮಾರು ಒಂದೂವರೆ ಲಕ್ಷ ಮೌಲ್ಯದ ಈರುಳ್ಳಿ, ಟೊಮಾಟೊ ಹಾಗೂ ಕಲ್ಲಂಗಡಿ ಖರೀದಿಸಿದ್ದು, ನಾಳೆಯಿಂದ ಕಡೂರು ಹಾಗೂ ಬೀರೂರಿನಿ ಬಡವರಿಗೆ ಈ ಬೆಳೆಯನ್ನ ಹಂಚಲು ಮುಂದಾಗಿದ್ದಾರೆ. ರೈತರ ಹೊಲಗಳಿಗೆ ಭೇಟಿ ನೀಡಿದ್ದ ವೈ.ಎಸ್.ವಿ.ದತ್ತ, ರೈತರಿಂದ ನೇರವಾಗಿ ಖರೀದಿಸಿದ್ದಾರೆ. ಅದೂ ರೈತರು ಹೇಳಿದ ದರಕ್ಕೆ. ಒಂದು ರೂಪಾಯಿ ಹಿಂದೆ-ಮುಂದೆ ಚೌಕಾಸಿ ಮಾಡದೆ ಅವರು ಹೇಳಿದ ದರಕ್ಕೆ ಖರೀದಿಸಿದ್ದಾರೆ. ಒಂದು ಲಕ್ಷ ಖರ್ಚು ಮಾಡಿ ಮೂರು ಎಕರೆಯಲ್ಲಿ ಕಲ್ಲಂಗಡಿ ಬೆಳೆದಿದ್ದ ರೈತ, ಕೊಳ್ಳುವವರಿಲ್ಲದೆ ಹೊಲದಲ್ಲೇ ಬಿಟ್ಟು ಕಂಗಾಲಾಗಿದ್ದ. ಇಂದು ವೈ.ಎಸ್.ವಿ.ದತ್ತ ಹೊಲಕ್ಕೆ ಹೋಗಿ ಕೆ.ಜಿ.ಗೆ ಏಳು ರೂಪಾಯಿಯಂತೆ 15 ಟನ್ ಕಲ್ಲಂಗಡಿ ಖರೀದಿಸಿರೊದು ರೈತನ ಆರ್ಥಿಕ ನಷ್ಟವನ್ನು ಒಂದಷ್ಟು ಕಡಿಮೆ ಮಾಡಿದೆ.

    ಸರಳ ರಾಜಕಾರಣಿ ದತ್ತ: ಮಾಜಿ ಶಾಸಕ ವೈ.ಎಸ್.ವಿ.ದತ್ತ ಅಧಿಕಾರದಲ್ಲಿರಲಿ ಇಲ್ಲದಿರಲಿ. ಸರಳ ಶಾಸಕ ಎಂದೇ ಖ್ಯಾತಿ. ಎಲ್ಲೆಂದರಲ್ಲಿ ಕುಳಿತುಕೊಳ್ಳುವುದು, ಊಟ-ತಿಂಡಿ ಮಾಡೋದು ಅವರ ಸರಳತನಕ್ಕೆ ಹಿಡಿದ ಕೈಗನ್ನಡಿ. ದತ್ತ ಮೇಷ್ಟ್ರ ಇಂತಹ ಸರಳತನಕ್ಕೆ ಹಲವು ಉದಾಹರಣೆಗಳಿವೆ. ಇಂದೂ ಕೂಡ ತಾಲೂಕಿನ ಎರಡು ಹಳ್ಳಿಗಳಿಗೆ ಭೇಟಿ ನೀಡಿ ರೈತರ ಬೆಳೆ ಖರೀದಿಸಿ ರೈತರೊಂದಿಗೆ ಮಾತನಾಡಿದ ಅವರ ಕಷ್ಟ-ಸುಖ ಆಲಿಸಿದ ದತ್ತ, ಗೌಡನಕಟ್ಟೆಹಳ್ಳಿಯಲ್ಲಿ ಜನರೇ ತಯಾರಿಸಿದ್ದ ಚಿತ್ರಾನ್ನ ಹಾಗೂ ಬಜ್ಜಿಯನ್ನ ಅದೇ ಜನರ ಮಧ್ಯೆ ಗೋಡಾನ್‍ನಲ್ಲಿ ಕೂತು ಊಟ ಮಾಡಿದರು. ದತ್ತ ಅವರ ಈ ನಡೆ ಹೊಸತೇನಲ್ಲದಿದ್ದರೂ, ಈ ಸರಳತನಕ್ಕೆ ಹಳ್ಳಿಯ ಜನ ಕೂಡ ಫಿದಾ ಆಗಿದ್ದಾರೆ.

  • ಲಾಕ್‍ಡೌನ್ ಎಫೆಕ್ಟ್ – ಮೇಷ್ಟ್ರಾದ ಮಾಜಿ ಶಾಸಕ ವೈ.ಎಸ್.ವಿ. ದತ್ತ

    ಲಾಕ್‍ಡೌನ್ ಎಫೆಕ್ಟ್ – ಮೇಷ್ಟ್ರಾದ ಮಾಜಿ ಶಾಸಕ ವೈ.ಎಸ್.ವಿ. ದತ್ತ

    – ನನಗೆ ಶಿಕ್ಷಕ ಎಂದು ಹೇಳಿಕೊಳ್ಳಲು ಹೆಮ್ಮೆ

    ಚಿಕ್ಕಮಗಳೂರು: ಜಿಲ್ಲೆಯ ಕಡೂರಿನ ಮಾಜಿ ಶಾಸಕ ವೈ.ಎಸ್.ವಿ. ದತ್ತ ಲಾಕ್‍ಡೌನ್ ಹಿನ್ನೆಲೆ ಮೇಷ್ಟ್ರಾಗಿ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಎಸ್.ಎಸ್.ಎಲ್.ಸಿ. ಮಕ್ಕಳಿಗೆ ಫೇಸ್ ಬುಕ್ ಲೈವ್‍ನಲ್ಲಿ ಪ್ರತಿ ದಿನ ಸಂಜೆ 7.30 ರಿಂದ 8.30ರವೆಗೆ ಪಾಠ ಮಾಡುತ್ತಿದ್ದಾರೆ.

    ಒಂದು ವಾರ ಗಣಿತ, ಮತ್ತೊಂದು ವಾರ ಭೌತಶಾಸ್ತ್ರ ಪಾಠ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ದಿನಗಣನೆ ಆರಂಭವಾಗಿದೆ. ಜೂನ್ ಮೊದಲ ವಾರದಲ್ಲಿ ಪರೀಕ್ಷೆ ನಡೆಯಬಹುದು ಎಂದು ಹೇಳಲಾಗುತ್ತಿದೆ. ಪರೀಕ್ಷೆ ನಡೆಸಲು ಸರ್ಕಾರ ಕೂಡ ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದೆ. ಹಾಗಾಗಿ ಶೀಘ್ರದಲ್ಲೇ ಎಸ್.ಎಸ್.ಎಲ್.ಸಿ. ಮಕ್ಕಳಿಗೆ ಪರೀಕ್ಷೆ ನಡೆಯುವ ಹಿನ್ನೆಲೆ, ದತ್ತ ಮೇಷ್ಟ್ರು ಫೇಸ್‍ಬುಕ್ ನಲ್ಲಿ ಈಗಾಗ್ಲೇ ಮಕ್ಕಳಿಗೆ ಗಣಿತ ಪಾಠವನ್ನು ಆರಂಭಿಸಿದ್ದಾರೆ.

    https://www.facebook.com/ysvDattaofficial/videos/1161467544194546/

    ಎರಡು ವಾರಗಳ ಕಾಲ ಮಕ್ಕಳಿಗೆ ಫೇಸ್‍ಬುಕ್ ಲೈವ್‍ನಲ್ಲಿ ಪಾಠ ಮಾಡಲಿದ್ದಾರೆ. ವೈ.ಎಸ್.ವಿ ದತ್ತ ಫೇಸ್‍ಬುಕ್ ಖಾತೆಯಿಂದ ದಿನ ಸಂಜೆ 7.30 ರಿಂದ 8.30ರವರಗೆ ಒಂದು ಗಂಟೆ ಮಕ್ಕಳಿಗೆ ಪಾಠ ಮಾಡಲಿದ್ದಾರೆ. ಜೆಡಿಎಸ್ ಮುಖಂಡ ಹಾಗೂ ಮಾಜಿ ಶಾಸಕ ವೈ.ಎಸ್.ವಿ. ದತ್ತ ಮೂಲತಃ ಶಿಕ್ಷಕರು. ನಂತರ ಶಿಕ್ಷಕ ವೃತ್ತಿಯಿಂದ ರಾಜಕಾರಣಕ್ಕೆ ಬಂದಿದ್ದರು. ಈ ಹಿಂದೆ ಅವರು ಶಾಸಕರಾಗಿದ್ದಾಗಲೂ ಕೂಡ ಶಿಕ್ಷಕರ ದಿನಾಚರಣೆಯಂದು ಮಕ್ಕಳಿಗೆ ಪಾಠ ಮಾಡಿದ್ದರು.

    ಈಗ ಕೊರೊನಾ ಆತಂಕದಿಂದ ದೇಶವೇ ಲಾಕ್‍ಡೌನ್ ಆದ ಮೇಲೆ 10ನೇ ತರಗತಿಯ ಪರೀಕ್ಷೆ ಕೂಡ ಮುಂದೂಡಲಾಗಿತ್ತು. ಈಗ ಜೂನ್ ತಿಂಗಳಿನಲ್ಲಿ ಪರೀಕ್ಷೆ ನಡೆಯುವ ಸಾಧ್ಯತೆ ಇರುವ ಕಾರಣ ಮಕ್ಕಳಿಗೆ ಪುನರ್ ಮನನ ತರಗತಿ ಅಗತ್ಯವೆಂದು ವರ್ಷಗಳ ಬಳಿಕ ಕೈಯಲ್ಲಿ ಮತ್ತೆ ಚಾಕ್‍ಪೀಸ್ ಹಿಡಿದು ಬದಲಾದ ಜಗದಲ್ಲಿ ಫೇಸ್‍ಬುಕ್ ಮೂಲಕ ಮತ್ತೆ ಶಿಕ್ಷಕ ವೃತ್ತಿಗೆ ಕಾಲಿಟ್ಟಿದ್ದಾರೆ.

  • ಜೆಡಿಎಸ್ ಆಲದ ಮರವಲ್ಲ, ಗರಿಕೆ ಹುಲ್ಲು: ವೈ.ಎಸ್.ವಿ ದತ್ತಾ

    ಜೆಡಿಎಸ್ ಆಲದ ಮರವಲ್ಲ, ಗರಿಕೆ ಹುಲ್ಲು: ವೈ.ಎಸ್.ವಿ ದತ್ತಾ

    ಬೆಂಗಳೂರು: ಜೆಡಿಎಸ್ ಪಕ್ಷ ಆಲದ ಮರವಲ್ಲ, ಗರಿಕೆ ಹುಲ್ಲು. ಗರಿಕೆ ಹುಲ್ಲನ್ನು ಬುಡ ಸಮೇತ ಕಿತ್ತು ಹಾಕಲು ಸಾಧ್ಯವಿಲ್ಲ ಎಂದು ಜೆಪಿ ಭವನದ ಜೆಡಿಎಸ್ ಕಚೇರಿಯಲ್ಲಿ ಮಾಜಿ ಶಾಸಕ ವೈ.ಎಸ್.ವಿ ದತ್ತಾ ಹೇಳಿದ್ದಾರೆ.

    ಲೋಕಸಭೆ ಚುನಾವಣೆ ಹಿನ್ನೆಲೆ ಇಂದು ಜೆಪಿ ಭವನದ ಜೆಡಿಎಸ್ ಕಚೇರಿಯಲ್ಲಿ ಪಕ್ಷದ ಸದ್ಯಸ್ಯರ ಸಭೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಮಾಜಿ ಶಾಸಕ ವೈ.ಎಸ್.ವಿ ದತ್ತಾ, ಜೆಡಿಎಸ್ ಪಕ್ಷ ಆಲದ ಮರವಲ್ಲ ಗರಿಕೆ ಹುಲ್ಲು. ನಮ್ಮ ಪಕ್ಷ ಗಟ್ಟಿಯಾಗಿದೆ. ಗರಿಕೆ ಹುಲ್ಲನ್ನು ಯಾರು ಬುಡದಿಂದ ಕೀಳಲು ಸಾಧ್ಯವಿಲ್ಲ, ಹಾಗೆಯೇ ಜೆಡಿಎಸ್ ಪಕ್ಷವನ್ನು ಉರಿಳಿಸಲು ಸಾಧ್ಯವಾಗಲ್ಲ ಎಂದರು. ಮೈತ್ರಿ ಸರ್ಕಾರ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿದೆ. ಮುಂದಿನ ಲೋಕಸಭೆ ಚುನಾವಣೆಗೆ ಎಲ್ಲರೂ ಸಜ್ಜಾಗಬೇಕು. ಮುಂದಿನ ದಿನಗಳಲ್ಲಿ ಸ್ವ ಸಾಮಥ್ರ್ಯದಿಂದ ಪಕ್ಷ ಅಧಿಕಾರಕ್ಕೆ ಬರುವಂತೆ ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ಹೇಳಿದರು.

    ಜನತಾದಳ ಪಕ್ಷಕ್ಕೆ 40 ವರ್ಷಗಳ ಇತಿಹಾಸ ಇದೆ ಅಂತ ಇನ್ನು ಮುಂದೆ ಕಾರ್ಯಕರ್ತರು ಹೇಳಿಕೊಳ್ಳಬೇಕು. ದೇಶಕ್ಕೆ ಪ್ರಧಾನಿ, ರಾಜ್ಯಕ್ಕೆ ಮುಖ್ಯಮಂತ್ರಿ ಕೊಟ್ಟ ಪಕ್ಷ ಅಂತ ಹೆಮ್ಮೆಯಿಂದ ಹೇಳಿಕೊಳ್ಳಬೇಕು. ನಮ್ಮ ಪಕ್ಷಕ್ಕೆ ಬೇರೆ ಪಕ್ಷಗಳಿಗಿಂತ ಹೆಚ್ಚು ವಿಶೇಷತೆಯಿದೆ. ಕಾಂಗ್ರೆಸೇತರ ಪಕ್ಷ ಸ್ಥಾಪನೆಗೆ ಹುಟ್ಟಿದ್ದು ಜೆಡಿಎಸ್. ಜೈಲಿನಲ್ಲಿ ಹುಟ್ಟಿದ ಪಕ್ಷ, ಕೃಷ್ಣನಂತೆ ಹುಟ್ಟಿದ ಪಕ್ಷ ಇದು ಎಂದ ಪಕ್ಷದ ಇತಿಹಾಸವನ್ನು ನೆನಪು ಮಾಡಿಕೊಂಡರು.

    ನಮಗೆ ಸಮ್ಮಿಶ್ರ ಸರ್ಕಾರದ ಅನುಭವ ಹೊಸತಲ್ಲ. ಧರ್ಮಸಿಂಗ್, ಯಡಿಯೂರಪ್ಪ ಜೊತೆ ಸೇರಿ ಸಮ್ಮಿಶ್ರ ಸರ್ಕಾರ ಮಾಡಿದ ಅನುಭವ ಇದೆ. ಯಡಿಯೂರಪ್ಪ ಜೊತೆ ಮಾಡಿದ ಸಮ್ಮಿಶ್ರ ಸರ್ಕಾರ ಅತ್ಯಂತ ಕೆಟ್ಟ ಅನುಭವ ನೀಡಿದೆ. ಕೋಮುವಾದಿ, ಸಂವಿಧಾನ ವಿರೋಧಿ, ಸರ್ವಾಧಿಕಾರಿ ಹೊಂದಿದ ಸರ್ಕಾರವನ್ನ ಕೆಡವಲು ಈಗ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ರಾಷ್ಟ್ರೀಯ ತುರ್ತು, ರಾಷ್ಟ್ರೀಯ ಅನಿವಾರ್ಯದ ದೃಷ್ಟಿಯಿಂದ ಇಂದು ಜಾತ್ಯಾತೀತ ಪಕ್ಷಗಳು ಒಟ್ಟಾಗಿ ಸೇರಲು ಹೊಂದಾಣಿಕೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

    ಕೇವಲ 30-40 ಶಾಸಕರಿಗೆ ಇದು ಸೀಮಿತ ಆಗಬಾರದು. ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ಕೊಡುತ್ತಾ ಪಕ್ಷ ಕಟ್ಟುವ ಕೆಲಸ ಮಾಡಬೇಕು. ಪಕ್ಷದ ಕಾರ್ಯಕರ್ತರಿಗೆ ಪಕ್ಷದ ವರಿಷ್ಠರು ಸ್ಥಾನಮಾನ ನೀಡಬೇಕು. ಈ ನಿಟ್ಟಿನಲ್ಲಿ ವರಿಷ್ಠರು ಚಿಂತನೆ ಮಾಡಿ ಅಧಿಕಾರ ಹಂಚಿಕೆ ಮಾಡಿದರೆ ಒಳ್ಳೆಯದು. ಕಾರ್ಯಕರ್ತರು ಗೊಂದಲಕ್ಕೆ ಈಡಾಗದೆ ಪಕ್ಷದ ಅಭಿವೃದ್ಧಿಗೆ ಕೆಲಸ ಮಾಡಬೇಕು. ಫ್ಲೆಕ್ಸ್ ಹುಚ್ಚಿನಿಂದ ಕಾರ್ಯಕರ್ತರು ಹೊರಗೆ ಬರಬೇಕು. ಹಿಂದಿನ ನಾಯಕರು ಹೋರಾಟದಿಂದ ಹುಟ್ಟುತ್ತಿದ್ದರು, ಈಗಿನ ನಾಯಕರು ಫ್ಲೆಕ್ಸ್ ನಲ್ಲಿ ಹುಟ್ಟುವ ಸ್ಥಿತಿ ನಿರ್ಮಾಣವಾಗಿದೆ. ಇದನ್ನ ಕಾರ್ಯಕರ್ತರು ಬಿಟ್ಟು ಪಕ್ಷದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ವೈ.ಎಸ್.ವಿ ದತ್ತಾ ಕರೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv